22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮನಸ್ಸನ್ನು ಕಾಡಿದ ಆ ನಗು..

December 6, 2009 - 9:23pm
rashmi_pai

ನಿನ್ನನ್ನು ನೋಡಿದಾಗ...ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ.... ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮೈಲ್ ಕೊಟ್ಟಾಗ ನನಗೇನೋ ಪುಳಕ. ಆಫೀಸಿನಲ್ಲಿ ನೀನು ಏನೋ ನೆಪ ಮಾಡಿಕೊಂಡು ನನ್ನ ಕ್ಯಾಬಿನ್ ಪಕ್ಕ ಬರುವಾಗ ಇವ ಇಂದು ನನ್ನಲ್ಲಿ ಮಾತಾಡಿಯೇ ಮಾತಾಡುತ್ತಾನೆ ಎಂದು ನಾನು ಅಂದುಕೊಳ್ಳುತ್ತೇನೆ. ಆದ್ರೆ ನೀನು...ಅದೇ ಮುಗುಳ್ನಗು ಕೊಟ್ಟು ಮತ್ತೆ ಮತ್ತೆ ನನ್ನನ್ನು ಚಡಪಡಿಸುವಂತೆ ಮಾಡ್ತಿಯಾ... ನಿಜ ಹೇಳಲಾ? ನಿನ್ನ ಆ ನಗುವಿನಲ್ಲಿ ಅದೇನು ಜಾದೂ ಇದೆಯಂತ ನಂಗೊತ್ತಿಲ್ಲ ಕಣೋ. ನಿನ್ನ ನಗುವಿನ ಮುಂದೆ ನಾನಂತೂ ಕ್ಲೀನ್ ಬೌಲ್ಡ್ ...

ಹೇ..ಹುಡುಗ...ನಿನ್ನ ಹೆಸರು ಏನೂಂತ ನಂಗೆ ಗೊತ್ತಿಲ್ಲ. ನಿನ್ನ ಊರು ಯಾವುದು, ಭಾಷೆ ಯಾವುದು ಎಂಬುದು ಸಹ ನನಗೆ ತಿಳಿದಿಲ್ಲ. ಆದರೆ ನಿನ್ನ ಆ ಕ್ಯೂಟ್ ಸ್ಮೈಲ್ ಇದೆಯಲ್ಲಾ ಅದು ವರ್ಣನೆಗೆ ಅತೀತವಾದದ್ದು. ನನ್ನ ಮೊದಲ ಲವ್ ಬ್ರೇಕ್ ಅಪ್ ಆದಾಗ ಇನ್ನು ಮುಂದೆ ಲವ್ ಮಾಡುವುದಿಲ್ಲ ಅಂತಾನೇ ನಿರ್ಧಾರ ತೆಗೆದುಕೊಂಡವಳು ನಾನು. ಜೀವನದಲ್ಲಿ ಇನ್ಯಾವ ಹುಡುಗನನ್ನು ನನಗೆ ಪ್ರೀತಿಸಲು ಸಾಧ್ಯವಿಲ್ಲ ಅಂತಾ ಅಂದ್ಕೊಡ್ಡಿದ್ದೆ. ಆದರೆ ನೀನು... ನಿನ್ನ ನಗೆಯಲ್ಲಿಯೇ ನನ್ನನ್ನು ಮಂತ್ರಮುಗ್ದಳನ್ನಾಗಿಸಿದೆ. ನಿನ್ನ ಮನಸ್ಸಲ್ಲಿ ನನ್ನ ಬಗ್ಗೆ ಯಾವ ಭಾವನೆಯಿದೆಯೋ ಎಂದು ನನಗೆ ತಿಳಿದಿಲ್ಲ. ಆದರೆ ನೀನು ನನ್ನನ್ನು ಇಷ್ಟ ಪಡುತ್ತಿ ಅಂತಾ ನಂಗೊತ್ತು. ಯಾಕೆಂದರೆ ನೀನು ಚುಪ್ ಚುಪ್ಕೇ ನನ್ನನ್ನು ನೋಡ್ತಾ ಇರ್ತೀಯಾ. ನನ್ನ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಾ ಇರುತ್ತಿಯಾ. ಆಮೇಲೆ ನಾನೆಲ್ಲಾದರೂ ನಿನ್ನತ್ತ ನೋಡಿದ್ರೆ, ಏನೂ ಗೊತ್ತಿಲ್ಲ ಅನ್ನುವಂತೆ ಬೇರೆಲ್ಲೋ ದೃಷ್ಟಿ ನೆಟ್ಟಿರುತ್ತಿಯಾ...ನೀನು ತುಂಬಾ ನಾಚಿಕೆ ಸ್ವಭಾವದವನು ಅಂತಾ ನಂಗೊತ್ತು. ಆದ್ರೆ ಒಂದೇ ಒಂದು ಬಾರಿ ನನ್ನಲ್ಲಿ ಮಾತನಾಡಿಸಲಾರೆಯಾ ಪ್ಲೀಸ್?

ಮನೆಗೆ ಹೋದರೆ ನಿನ್ನ ಆ ಮುಗುಳ್ನಗು ನನ್ನ ನೆನಪಲ್ಲಿ ಸುಳಿಯುತ್ತಿರುತ್ತದೆ. ನೀನು ಪ್ರತಿ ಬಾರಿ ನನ್ನನ್ನು ನೋಡಿದಾಗ ನೀಡುವ ಆ ಸ್ಮೈಲ್ ನೆನೆದುಕೊಂಡೇ ನಾನು ಸುಮ್ ಸುಮ್ನೆ ನಗ್ತೇನೆ. ನಿನ್ನದೇ ಯೋಚನೆ ಮನದಲ್ಲಿ...ಯಾಕೆ ಈ ತಳಮಳ?

ಏನೇ ಬರೆಯಲು ಕುಳಿತರೂ ನೀನೆ ನೆನಪಾಗ್ತಾ ಇದ್ದೀಯಾ. ಅದಕ್ಕೆ ಆ ಮೊದಲ ಪ್ರೇಮದಲ್ಲಿ ಸೋತು ಕಂಗಾಲಾಗಿದ್ದ ನಾನು ಇದೀಗ ಮತ್ತೆ ಪ್ರೇಮದಲ್ಲಿ ಬೀಳುತ್ತಿದ್ದೇನಾ ಅಂತಾ ಒಂದು ಸಂಶಯ ನನ್ನ ಮನದ ಮೂಲೆಯಲ್ಲಿ. ಏನಿದ್ದರೂ ನಿನ್ನನ್ನು ನೋಡಿದ ನಂತರ ಪ್ರೇಮದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ನಾನು ಸಜ್ಜಾಗಿದ್ದೇನೆ. ನಿನಗೆ ನಾನು ಇಷ್ಟವಾಗಿದ್ದರೆ ಹೇಳು....ಐ ಆ್ಯಮ್ ವೈಟಿಂಗ್...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (10 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Harish Athreya on

ಆತ್ಮೀಯ
ಪ್ರೇಮದಲ್ಲಿ ಸೆಕೆ೦ಡ್ ಇನ್ನಿ೦ಗ್ಸೇ? ಚೆನ್ನಾಗಿದೆ ಮೊದಲ ಪ್ರೇಮದಿ೦ದ ಹೊರ ಬ೦ದುಬಿಟ್ಟಿದ್ದೀರಾ ಗುಡ್ . ಇನ್ನಿ೦ಗ್ಸಿನ ಗೆಲುವು ನಿಮಗಿರಲಿ ಅವ ನಿಮಗೆ ಸಿಗಲಿ.ಯಾವೂರವ ? ಅ೦ತ ಅವನನ್ನ ಕೇಳ್ರಿ . ಸ್ಮೈಲಿಗೆ ಬಿದ್ದುಹೋದ್ರಿ ಅ೦ದ್ರೆ ಅವನದಿನ್ನೆ೦ಥ ನಗುರೀ?
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಪ್ರೇಮದಲ್ಲಿ ಸೆಕೆಂಡ್ ಇನ್ನಿ೦ಗ್ಸ ಖಂಡಿತಾ ಇರುತ್ತೆ, ನಾನೂ ಅದಕ್ಕಾಗಿ ಚಾತಕ ಪಕ್ಷಿಯ೦ತೆ ಕಾಯುತ್ತಿದ್ದೇನೆ! ಆದರೆ ಗೆಲುವು ಯಾರದ್ದೋ ಗೊತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಗೆಲುವು ಖಂಡಿತ ಪ್ರೇಮಳದ್ದು!!!

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಓಹೋ, ಸಿಕ್ಕಿ ಬಿದ್ರಲ್ಲಾ ಸುರೇಶ, ಈ "ಪ್ರೇಮ" ನಿಮ್ಮ ಸಖಿ ತಾನೇ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rashmi_pai on

ಹರೀಶ್ ಅವರೇ..
ಅದು ಅಂತಾ ನಗು...ಅದೇ ಲೇಖನಕ್ಕೆ ಪ್ರೇರಣೆ....
ಸದ್ಯ ಯಾವ ಊರಿನವ ಅಂತಾ ಗೊತ್ತಿಲ್ಲ.. ಈ ಬಗ್ಗೆ ತನಿಖೆ ನಡೆಯುತ್ತಾ ಇದೆ..
" ನಿನ್ನ ನಗೂ ನೋಡಿದಾಗ...ಹಗಲಲ್ಲೂ ಸಹ ತಿಳಿ ಬೆಳದಿಂಗಳು. ಅಂತಾರಲ್ಲಾ..ಅದು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by malleshgowda on

ಹುಡುಗರ ಮುಗುಳು ನಗೆಗೂ ಬೆಲೆ ಇದೆ ಅ೦ದ ಆಗಾಯ್ತು. ಹುಡುಗಿಯರ ಸ್ಮೈಲ್ ಬಗ್ಗೆ ಬರೆಯುವುದೇ ಜಾಸ್ತಿ. ಪರವಾಗಿಲ್ಲ ಚೆನ್ನಾಗಿದೆ ಕಲ್ಪನೆ ? ನಗೆ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rashmi_pai on

@malleshgowda,
ನಗುವಿನಲ್ಲಿ ಲಿಂಗ ತಾರತಮ್ಯವೇಕೆ? ಎಲ್ಲರ ನಗುವೂ ಚಂದ ಅಲ್ವಾ?
ಸೌಂದರ್ಯ ನೋಡುವವರ ಕಣ್ಣಲ್ಲಿದೆ ಅಂತಾರಲ್ಲಾ ಹಾಗೇನೇ..
ಪ್ರತಿಕ್ರಿಯೆಗೆ ಧನ್ಯವಾದಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

>>ಯಾಕೆಂದರೆ ನೀನು ಚುಪ್ ಚುಪ್ಕೇ ನನ್ನನ್ನು ನೋಡ್ತಾ ಇರ್ತೀಯಾ. ನನ್ನ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಾ ಇರುತ್ತಿಯಾ. ಆಮೇಲೆ ನಾನೆಲ್ಲಾದರೂ ನಿನ್ನತ್ತ ನೋಡಿದ್ರೆ, ಏನೂ ಗೊತ್ತಿಲ್ಲ ಅನ್ನುವಂತೆ ಬೇರೆಲ್ಲೋ ದೃಷ್ಟಿ ನೆಟ್ಟಿರುತ್ತಿಯಾ...>>

ರಶ್ಮೀ,

ನಿಮ್ಮ ಕಥಾನಾಯಕಿ, ಒಮ್ಮೆ ಪ್ರೇಮದಲ್ಲಿ ಸೋಲುಂಡಿದ್ದರೂ ಇಲ್ಲಿ ಮಗದೊಮ್ಮೆ, ಆ ಕಥಾನಾಯಕನ ನಗೆಯ ಗಾಳಕೆ ಸಿಲುಕಿ ಜಾರುತ್ತಿದ್ದಾಳೆ ಅಂತ ಅನಿಸ್ತಿದೆ ನನಗೆ.

ಈಕೆ ಆತನನ್ನು ನೋಡುವ ಮೊದಲು ಆತ ಈಕೆಯನ್ನು ಕದ್ದು ಕದ್ದು ನೋಡಿದ್ದು ಈಕೆಗೆ ಹೇಗೆ ಗೊತ್ತಾಯ್ತು?

ಮೊದಲ ಹೆಜ್ಜೆಯನ್ನು ಈಕೆಯೇ ಇಟ್ಟು ಪತ್ರ ಮುಖೇನ ತನ್ನ ಮನದ ಭಾವನೆಗಳನ್ನು ಹೊರಗೆಡಹಿ ಈಕೆ ತಪ್ಪು ಮಾಡುತ್ತಿದ್ದಾಳೆ.

"ಹಂದಿಯಿಂದ ಹಾಯಿಸಿಕೊಂಡವನು ಮಡಕೆಯನ್ನು ಕಂಡರೂ ಭಯ ಬೀಳ್ತಾನೆ" ಎಂಬರ್ಥ ಬರುವ ಗಾದೆ ಮಾತು ನಮ್ಮೂರ ಕಡೆ ತುಳುವಿನಲ್ಲಿದೆ. ಆದರೆ ನಿಮ್ಮ ನಾಯಕಿಗೆ, ಅದ್ಯಾವುದರ ಭಯವೇ ಇಲ್ಲ. ತಾನೇ ಮೊದಲ ಹೆಜ್ಜೆ ಇಟ್ಟು ಆಹ್ವಾನ ನೀಡುತ್ತಿದ್ದಾಳೆ.

ಹಗಲಿರುಳೂ ಈಕೆ ಮಾಡಿದರೆ ಇದೇ ರೀತಿ ಆತನ ಧ್ಯಾನ
ಮುಂದಾಗಬಹುದು ನೋಡಿ ಈಕೆಯ ಜೀವನದಲಿ ಅಧ್ವಾನ !!!

-ಆತ್ರಾಡಿ ಸುರೇಶ ಹೆಗ್ಡೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rashmi_pai on

ಮೊದಲ ಪ್ರೀತಿಯಲ್ಲಿ ನಾವ್ಯಾಕೆ ಸೋಲುತ್ತೇವೆ ಅಂದರೆ ನಾವು ಕೆಲವೊಂದು ಕ್ವಾಲಿಟಿಗಳು ನಮ್ಮಲ್ಲಿ ಇರುವುದಿಲ್ಲ ಆದರಿಂದಲೇ ಫಸ್ಟ್ ಲವ್ ಫ್ಲಾಪ್ ಆಗುತ್ತೆ ಅಂತಾ ಎಸ್ಸೆಮ್ಮೆಸ್ಸೊಂದು ಬಂದಿತ್ತು. ಇದು ಸೆಕೆಂಡ್ ಇನ್ಸಿಂಗ್ಸ್. ಎಲ್ಲಾ ತಿಳಿದು ಕೊಂಡು ಜಾರಿ ಬೀಳಲು ನಾಯಕಿ ತಯಾರಾಗಿದ್ದಾಳೆ.

<<ಮೊದಲ ಹೆಜ್ಜೆಯನ್ನು ಈಕೆಯೇ ಇಟ್ಟು ಪತ್ರ ಮುಖೇನ ತನ್ನ ಮನದ ಭಾವನೆಗಳನ್ನು ಹೊರಗೆಡಹಿ ಈಕೆ ತಪ್ಪು ಮಾಡುತ್ತಿದ್ದಾಳೆ.>>
ತಪ್ಪೇನಿದೆ ಇದರಲ್ಲಿ. ಪ್ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಬೇಕು ಅಲ್ಲವೇ?

<<"ಹಂದಿಯಿಂದ ಹಾಯಿಸಿಕೊಂಡವನು ಮಡಕೆಯನ್ನು ಕಂಡರೂ ಭಯ ಬೀಳ್ತಾನೆ" ಎಂಬರ್ಥ ಬರುವ ಗಾದೆ ಮಾತು ನಮ್ಮೂರ ಕಡೆ ತುಳುವಿನಲ್ಲಿದೆ. ಆದರೆ ನಿಮ್ಮ ನಾಯಕಿಗೆ, ಅದ್ಯಾವುದರ ಭಯವೇ ಇಲ್ಲ.<<
ಭಯ ಯಾಕೆ?ಪ್ರೀತಿ ಮಾಡಬಾರದು..ಮಾಡಿದರೆ ಜಗಕೆ ಹೆದರಬಾರದು ಅಂತಾ ಹಾಡು ನೆನಪಾಗ್ತಾಯಿದೆ.
ಆದ್ರೆ ಅಣ್ಣನಿಗೆ ಹೆದರಲೇ ಬೇಕು :)

ಪ್ರತಿಕ್ರಿಯೆ ನೀಡಿದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijendra on

ಆಯ್ತು. ಇವತ್ತು ಹೇಗಾದ್ರೂ ಕಷ್ಟ ಪಟ್ಟು ಮಾತಾಡ್ಲಿಕ್ಕೆ ಟ್ರೈ ಮಾಡ್ತೇನೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on

yawn..ನಿದ್ದೆ ಬರ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rashmi_pai on

ಏನಾಯ್ತು? ಫೀಲಿಂಗ್ಸ್ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rashmi_pai on

@vijendra
ಟ್ರೈಮಾಡಿ...
ಆಲ್ ದ ಬೆಸ್ಟ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on

ಪ್ರೇಮದಲ್ಲಿ ಬೀಳುವುದು ಹೇಗಿರುತ್ರೀ? ಸೆಕೆಂಡ್ ಇನ್ನಿಂಗ್ಸ್ ಮುಂಚೆ ಫಸ್ಟ್ ಇನ್ನಿಂಗ್ಸಿನ ಅನುಭವ ಇರಬೇಕಲ್ಲವಾ?
ನಾನು ನೆನಪಿರುವಂತೆ ಬಿದ್ದಿರುವುದು ಕನ್ಸ್‌ಟ್ರಕ್ಷನ್‌ನಲ್ಲಿದ್ದ ನಮ್ಮನೆಯ ಮಹಡಿಯಿಂದ. ಪಾದಗಳು ನೆಲಕ್ಕೆ ಅಪ್ಪಳಿಸಿದಾಗ ದೇಹದಾದ್ಯಂತ ಹರಿದಾಡಿದ ‘ಆಹಾ’ ಎನ್ನುವ ಭಾವ ನೆನೆದರೆ ಈಗಲೂ ಬೆನ್ನಹುರಿ ನೆಟ್ಟಗಾಗುತ್ತೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rashmi_pai on

<<ಪ್ರೇಮದಲ್ಲಿ ಬೀಳುವುದು ಹೇಗಿರುತ್ರೀ?<<ಅದೆಲ್ಲಾ ಸೀಕ್ರೆಟ್...
<<ಸೆಕೆಂಡ್ ಇನ್ನಿಂಗ್ಸ್ ಮುಂಚೆ ಫಸ್ಟ್ ಇನ್ನಿಂಗ್ಸಿನ ಅನುಭವ ಇರಬೇಕಲ್ಲವಾ?<<ಖಂಡಿತಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Ananatha on

ಅದು ಹಳೇ ಕಾಲದ ಪ್ರೇಮಾನ..? ಎರಡು ಇನ್ನಿ೦ಗ್ಸ್ ಚಾನ್ಸ್ ಸಿಗೋಕೆ..

ಈಗೆಲ್ಲಾ..೨೦ ಓವರ್ಸ್ ಅಷ್ಟೆ...ಹಿಟೌಟ್ ಅಥ್ವಾ ಗೆಟೌಟ್..

ಅನ೦ತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by namrata b raut on

Love is just love..... No specicification of innings feelings have no feelings of any other thing .... ask her to persue...........

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rashmi_pai on

ನಮ್ರತಾ,
ಸರಿಯಾಗಿಯೇ ಹೇಳಿದ್ದೀರಿ...ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Channakeshava.C on

ರಶ್ಮಿ ಅವರೇ,
ನಿಮ್ಮ ಪ್ರಿಯಕರನ ಮುಗುಳ್ನಗೆ ನೀವು ಚನ್ನಾಗಿ ವರ್ಣಿಸಿದ್ದೀರಿ.
ದಯವಿಟ್ಟು ನಾ ಬರೆದ ನನ್ನ ಗೆಳತಿಯ ಮನದಲ್ಲಿನ ಮಾತನ್ನು ಓದಿ ಅಭಿಪ್ರಾಯ ತಿಳಿಸಿ

ನನ್ನ್ಹುಡುಗಿ ನಕ್ಕಾಗ ಅರಳಿದ ಮಲ್ಲಿಗೆ
ದುಂಬಿಯ ಕಿವಿಯಲ್ಲಿ ಹೇಳಿತು ಮೆಲ್ಲಗೆ
ಪ್ರೀತಿಯ ಬಲೆಯಲ್ಲಿ ಬಿದ್ದ ಹುಡುಗಿಗೆ
ಕಾಡುತಿದೆ ಮನದಲ್ಲಿ ಆ ಹುಡುಗನ ಮುಗುಳ್ನಗೆ.

ಪ್ರೀತಿಯ
ಕೇಶವ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rashmi_pai on

ಚೆನ್ನಕೇಶವ ಅವರೇ,
ನಿಮ್ಮ ಕವನ ಚೆನ್ನಾಗಿದೆ. ಮುಂದುವರಿಸಿ. ಶುಭ ಹಾರೈಕೆಗಳು ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.