ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › rashmi_pai ರವರ ಬ್ಲಾಗ್

ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

March 7, 2008 - 5:04pm — rashmi_pai

ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ನಮ್ಮ ಕಣ್ಣ ಮುಂದಿರುವ ಜ್ವಲಂತ ಸಾಕ್ಷಿಯ ನಡುವೆ ಮಹಿಳೆಯರ ವೇತನ ಸಮಾನತೆಯ ಘೋಷಣೆಯೊಂದಿಗಿನ ನೂರನೇ ವರ್ಷಾಚರಣೆ ವಿಪರ್ಯಾಸವಲ್ಲವೇ?

ಇತ್ತೀಚೆಗೆ ಅಮೆರಿಕವು ಪ್ರಕಟಿಸಿದ "2007 ಜಾಗತಿಕ ನಗರಾಭಿವೃದ್ಧಿ ಪರಿಷ್ಕರಣಾ ವರದಿ"ಯಲ್ಲಿ ಭಾರತದ ಅತೀ ಹೆಚ್ಚು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವೀಗಾಗಲೇ ಓದಿದ್ದೇವೆ. ಪ್ರಸ್ತುತ ವರದಿ ಪ್ರಕಾರ ಭಾರತದ ಜನಸಂಖ್ಯೆಯ 70 ಪ್ರತಿಶತ ಮಂದಿಯೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ ಇನ್ನುಳಿದ 30% ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಅಂದರೆ ಇಲ್ಲಿನ ಬಹುತೇಕ ಮಂದಿಯೂ ಕೃಷಿಯನ್ನು ಅವಲಂಬಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕಾದುದು ಅತೀ ಅಗತ್ಯ ಎಂದಾಯಿತು. ಇದರ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೊಂದಬಹುದೆಂದು ತಜ್ಞರ ಅಭಿಪ್ರಾಯ. ಅದೇನೇ ಇರಲಿ ಗ್ರಾಮೀಣ ಜನರ ಅಥವಾ ಮಧ್ಯಮ ವರ್ಗದ ಜನರ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸಿದರೆ ಅವರ ಉದ್ಯೋಗ ಮತ್ತು ಅವರಿಗೆ ದೊರೆಯುವಂತಹ ವೇತನದ ಬಗ್ಗೆಯೂ ನಾವು ಮನನ ಮಾಡಬೇಕಾಗಿದೆ.

ಕಾರ್ಪೋರೇಟ್‌ಗಳ ಜೀವನ ಶೈಲಿಯಿಂದ ಒಂದು ಕ್ಷಣ ಹೊರಗೆ ಬಂದು ಮಧ್ಯಮ ವರ್ಗದ ಅಥವಾ ಗ್ರಾಮೀಣ ಜನರ ಬದುಕಿನ ಪುಟವನ್ನು ತಿರುವಿ ನೋಡಿದರೆ ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದಿರುವ ಜನರೆಂದು ಬಣ್ಣಿಸಲ್ಪಡುವ ಗ್ರಾಮೀಣ ಜನರಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜನರು ಹಗಲು ರಾತ್ರಿಗಳೆಂದು ದುಡಿಯುತ್ತಿರುತ್ತಾರೆ. ಆದರೆ ತಾವು ಮಾಡುವ ಕೆಲಸಕ್ಕೆ ದೊರೆಯುವ ವೇತನದಲ್ಲಿ ಸಮಾನತೆ ಇದೆಯೇ? ಉದಾಹರಣೆಗೆ ಗ್ರಾಮ ಪ್ರದೇಶದಲ್ಲಿ ತೋಟದ ಕೆಲಸ ಮಾಡುವ ಹೆಂಗಸರನ್ನು ಮತ್ತು ಗಂಡಸರ ವಿಷಯವನ್ನೇ ತೆಗೆದುಕೊಳ್ಳಿ. ಇಬ್ಬರೂ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ಗಂಡಸರಿಗೆ ಅಧಿಕ ವೇತನ, ಹೆಣ್ಣು ಎಷ್ಟೇ ಕೆಲಸ ಮಾಡಿದರು ಹೆಣ್ಣೆಂಬ ನೆಪಕ್ಕೆ ಅವಳಿಗೆ ಕಡಿಮೆ ಸಂಬಳವೇಕೆ? ಹೆಣ್ಣು ಮತ್ತು ಗಂಡು ಇವರ ಕೆಲಸಗಳನ್ನು ಹೋಲಿಸಿದರೆ ಗಂಡು ಮಾಡುವಂತಹ ಕೆಲಸ ತುಸು ಕಠಿಣವಾಗಿದ್ದಿರಬಹುದು, ಹೆಣ್ಣಿಗೆ ಅಷ್ಟು ದೈಹಿಕ ಸಾಮರ್ಥ್ಯವಿಲ್ಲದೇ ಇರಬಹುದು ಆದರೆ ಗ್ರಾಮಗಳಲ್ಲಿ ಗಂಡು ಹೆಣ್ಣಿನ ವೇತನಗಳಿಗೇಕೆ ಸಮಾನತೆ ಕಂಡು ಬಂದಿಲ್ಲ?

ನನಗೆ ತಿಳಿದಂತೆ ತೋಟದಲ್ಲಿ(ಗ್ರಾಮಗಳಲ್ಲಿ) ಕೆಲಸ ಮಾಡುವ ಪುರುಷರಿಗೆ ದಿನಕ್ಕೆ 120ರೂ. ಸಂಬಳ ನೀಡುತ್ತಿದ್ದರೆ, ಹೆಂಗಸರಿಗೆ 80 ರೂ. ನೀಡಲಾಗುತ್ತದೆ. ಇವರಿಬ್ಬರ ಕೆಲಸಗಳನ್ನು ತಾರತಮ್ಯ ಮಾಡಿದರೆ ಗಂಡಸರು ಮಾಡುವ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ಹೆಂಗಸರು ಮಾಡುತ್ತಿದ್ದು, ಅದೂ ಮಾತ್ರವಲ್ಲ ಹೆಂಗೆಳೆಯರು ಮಾಡುವ ಕೆಲಸಗಳು ಹೆಚ್ಚು ನಿಖರ ಮತ್ತು ಅಚ್ಚುಕಟ್ಟಾಗಿರುತ್ತದೆ. ಎಷ್ಟೇ ಚುರುಕಿನಿಂದ ಕೆಲಸ ಮಾಡಿದರೂ ಮಹಿಳೆಗೆ ಸಿಗುವ ವೇತನ ಯಾವಾಗಲೂ ಕಡಿಮೆಯೇ. ಗಂಡಸರಿಗೆ ಕುಟಂಬದವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ತನ್ನ ಮಡದಿ ಮಕ್ಕಳ ಜೀವನ ಸಾಗಿಸಲು ಅವರಿಗೆ ಹೆಚ್ಚಿನ ಸಂಬಳವನ್ನು ನೀಡಲಾಗುತ್ತಿದೆ ಎಂದು ವಾದಿಸಿದರೂ ಗಂಡನನ್ನು ಕಳೆದುಕೊಂಡು ಬೇರೆ ಯಾರನ್ನೂ ಅವಲಂಬಿಸದೆ, ತನ್ನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ ಉತ್ತಮವಾಗಿ ಜೀವನ ನಿರ್ವಹಿಸುವ ಒಂಟಿ ಮಹಿಳೆಯರು ನಮ್ಮಲ್ಲಿಲ್ಲವೇ ? ಕೃಷಿ ಕುಂಠಿತಗೊಂಡಾಗ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ವಿಧವೆಯರು ತನ್ನ ಗಂಡನ ಕಾಯಕವನ್ನೇ ಮುಂದುವರಿಸಿದರೂ ಪುರುಷ ಸಮಾನವಾದ ವೇತನವನ್ನು ನೀಡಲಾಗುತ್ತಿದೆಯೇ ? ಭಾರತದಲ್ಲಿ 30 ಮಿಲಿಯನ್ ವಿಧವೆಯರು ಗಂಡಿನ ಆಸರೆಯಿಲ್ಲದೆ ಬದುಕು ಸಾಗಿಸುತ್ತಿಲ್ಲವೇ ? ಕೃಷಿಕಾರ್ಯಗಳಲ್ಲಿ ಅತೀ ಹೆಚ್ಚು ತಾಳ್ಮೆಯನ್ನುಪಯೋಗಿಸಿ ಕೆಲಸ ಮಾಡುವವರು ಮಹಿಳೆಯರಲ್ಲವೇ ? ಕಳೆ ಕೀಳುವುದು, ಜೊಳ್ಳು ತೆಗೆಯುವುದು ಮೊದಲಾದ ಚಿಕ್ಕ ಕೆಲಸಗಳನ್ನು ಮಹಿಳೆಗೆ ವಹಿಸಿಕೊಡಲಾಗಿದ್ದರೂ ಅದನ್ನು ಅತೀ ತಾಳ್ಮೆಯಿಂದ ಚೊಕ್ಕಟವಾಗಿ ಕೆಲಸ ಮಾಡಲು ಸಾಧ್ಯವಿರುವುದು ಮಹಿಳೆಯರಿಗೆ ಮಾತ್ರ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಕೈಗಾರಿಕಾ ಕ್ಷೇತ್ರದತ್ತ ಗಮನ ಹರಿಸಿದರೆ ಬಹುತೇಕ ಮಂದೆ ಕೈಗಾರಿಕಾ ಉದ್ಯಮಿಗಳು ಮಹಿಳೆಯರೇ ಆಗಿರುವುದನ್ನು ಕಾಣಬಹುದು. ಅದು ಗುಡಿ ಕೈಗಾರಿಕೆ ಇರಲಿ, ಕಾರ್ಖಾನೆಯಾಗಿರಲಿ ಅಲ್ಲಿ ಮಹಿಳೆಯರದ್ದೇ ಹೆಚ್ಚು ಪಾಲು. ನೇಯ್ಗೆಯಾಗಲಿ, ಕಸೂತಿ ಕೆಲಸವಿರಲಿ ಅಥವಾ ಮನೆ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಾಕೆಯೇ ಆಗಿರಲಿ, ಅತೀ ತಾಳ್ಮೆಯಿಂದ ಮಾಡಬೇಕಾದಂತಹ ಏನೇ ಕೆಲಸವಿರಲಿ ಮಹಿಳೆಯರೇ ಅಂತಹ ಕಾರ್ಯಗಳಿಗೆ ನಿಯೋಜಿಸಲ್ಪಡುತ್ತಾರೆ. ಅವರು ಮಾಡುವ ಕಾರ್ಯದಲ್ಲಿ ಅಷ್ಟೇ ಪ್ರಾಮಾಣಿಕತೆ, ವಸ್ತು ನಿಷ್ಠೆಗಳು ಮೈಗೂಡಿಸಿಕೊಂಡಿರುವುದರಿಂದಲೇ ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಆದರೂ ವೇತನದಲ್ಲಿ ಸಮಾನತೆ ಎಂಬುದು ಇಂದಿಗೂ ಬಗೆಹರಿಯಲಾರದ ಪ್ರಶ್ನೆಯಾಗಿದೆ.

ಗ್ರಾಮಗಳಿಂದ ನಗರಗಳತ್ತ ಮುಖ ಮಾಡಿದರೆ ಐಟಿ ಬಿಟಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಂತೂ ಗಣನೀಯ ವರ್ಧನೆ ಕಂಡು ಬರುತ್ತಿರುವುದು ಕಾಣಬಹುದು. ರಾತ್ರಿ ಹಗಲು ದುಡಿಯುವುದರಲ್ಲೂ ಮಹಿಳೆ ಸೈ ಎಂದೆನಿಸಿಕೊಂಡಿದ್ದಾಳೆ. ಐಟಿ-ಬಿಟಿ ಕ್ಷೇತ್ರಗಳಲ್ಲಿ, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ, ಕಾಲ್ ಸೆಂಟರ್‌ಗಳಲ್ಲಿ ಅತೀ ತಾಳ್ಮೆಯಿಂದ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ, ಕಂಪೆನಿಗಳಲ್ಲಿ ಹೆಚ್ ಆರ್( ಮಾನವ ಸಂಪನ್ಮೂಲ ಕಾರ್ಯನಿರ್ವಾಹಣಾಧಿಕಾರಿ) ಈ ಎಲ್ಲಾ ಹುದ್ದೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಮಹಿಳೆಯರು ತಮ್ಮ ಜಾಣತನವನ್ನು ಮೆರೆದಿದ್ದಾರೆ. ಯಾವುದೇ ನೌಕರಿ ಆಗಿದ್ದರೂ ತಮಗೆ ದೊರೆಯುವ ಕನಿಷ್ಠ ಸಂಬಳದಿಂದ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿಯೂ ಮಹಿಳೆ ಪುರುಷ ವರ್ಗಕ್ಕಿಂತ ಒಂದು ಹೆಜ್ಜೆ ಮುಂದಿದ್ದಾಳೆ ಎಂದು ಹೇಳಬಹುದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತಿಸಿದರೆ ಜಗತ್ತಿನ ಆಹಾರೋತ್ಪಾದನೆಯಲ್ಲಿ ಬಹುಪಾಲು ಮಹಿಳೆಯೆರೇ ಶ್ರಮ ವಹಿಸುತ್ತಾರೆ. ಆಫ್ರಿಕಾ ಮತ್ತು ಕೆರೆಬಿಯನ್ ರಾಷ್ಟ್ರಗಳಲ್ಲಿ 80% ಆಹಾರೋತ್ಪಾದನೆಯಲ್ಲಿ ಮಹಿಳೆಯರು ದುಡಿದರೆ, ಏಷ್ಯಾದಲ್ಲಿ 50% ಮಹಿಳೆಯರು ದುಡಿಯುತ್ತಾರೆ. ಲ್ಯಾಟಿನ್ ಅಮೆರಿಕದಲ್ಲಿ ಬಹುತೇಕ ಮಹಿಳೆಯರು ಕೃಷಿ, ಜೇನುಸಾಕಣೆ, ಪಶು ಪಾಲನೆ ಮೊದಲಾದ ಕಾರ್ಯಗಳಲ್ಲಿ ದುಡಿದು ದೇಶದ ಅಭಿವೃದ್ದಿಗೆ ಬೆನ್ನೆಲುಬಾಗಿದ್ದಾರೆ. ಯುನಿಸೆಫ್ ಸಂಘಟನೆಯು 2007ರಲ್ಲಿ ಪ್ರಕಟಿಸಿದ ವರದಿಯಲ್ಲಿ ವಿಶ್ವದ ಮಕ್ಕಳ ಸ್ಥಿತಿಗತಿಯು ಮಹಿಳೆಯರ ಸ್ಥಿತಿಗತಿಗಳಿಗೆ ಅನುರೂಪವಾಗಿದ್ದು, ಮಹಿಳೆಯ ಆರ್ಥಿಕ ಸ್ವಾವಲಂಬನೆಯು ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಯುನಿಸೆಫ್ ಸಂಘಟನೆಯ ಮಾಹಿತಿ ಪ್ರಕಾರ ವಿಶ್ವದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆಂಬುದನ್ನು ಉಲ್ಲೇಖಿಸಿದ್ದು ಪ್ರಸ್ತುತ ಕೆಳಗೆ ನೀಡಿದಂತಹ ಅಂಕಿ ಅಂಶವು ಇದಕ್ಕೆ ಪೂರಕವಾಗಿದೆ.

ರಾಷ್ಟ್ರಗಳು ಮತ್ತು ಅಲ್ಲಿನ ಸ್ತ್ರೀ- ಪುರುಷ ವಾರ್ಷಿಕ ವೇತನದ ಅಂಕಿ ಅಂಶ(ಅಮೆರಿಕನ್ ಡಾಲರ್‌ಗಳಲ್ಲಿ)

ಕೈಗಾರಿಕಾ ಪ್ರಾಧಾನ್ಯವಿರುವ ರಾಷ್ಟ್ರಗಳು - ಸ್ತ್ರೀ - 21%, ಪುರುಷ - 37%

ಲ್ಯಾಟಿನ್ ಅಮೆರಿಕ ಮತ್ತು ಕರೇಬಿಯನ್ - ಸ್ತ್ರೀ - 4.6%, ಪುರುಷ - 8%

ಐರೋಪ್ಯ ಮತ್ತು ಕಾಮನ್‌ವೆಲ್ತ್ ಸ್ವತಂತ್ರ ರಾಷ್ಟ್ರಗಳು - ಸ್ತ್ರೀ - 4%, ಪುರುಷ - 10%

ಪೂರ್ವ ಏಷ್ಯಾ ಮತ್ತು ಪೆಸಿಫಿಕ್ - ಸ್ತ್ರೀ - 4%, ಪುರುಷ - 6.5%

ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ - ಸ್ತ್ರೀ - 2%, ಪುರುಷ - 7%

ದಕ್ಷಿಣ ಏಷ್ಯಾ - ಸ್ತ್ರೀ - 1%, ಪುರುಷ - 2.5%

ಆಫ್ರಿಕಾ - ಸ್ತ್ರೀ - 1%, ಪುರುಷ - 2%

ಇದು ಮಾತ್ರವಲ್ಲದೆ ಇತ್ತೀಚೆಗೆ ವೇತನ ಸಮಾನತೆಯ ಬಗ್ಗೆ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ಒಕ್ಕೂಟಗಳು ಪ್ರಕಟಿಸಿದ ವರದಿಯಲ್ಲಿ ವಿಶ್ವದಲ್ಲಿ ಮಹಿಳಾ ಉದ್ಯೋಗಿಗಳು ಪುರುಷ ಉದ್ಯೋಗಿಗಳಿಗಿಂತ 16 ಪ್ರತಿಶತ ಕಡಿಮೆ ವೇತನವನ್ನು ಗಳಿಸುತ್ತಿದ್ದಾರೆ ಎಂಬ ಅಂಶವನ್ನು ಎತ್ತಿ ಹಿಡಿದಿದೆ. ಪ್ರಸ್ತುತ ವರದಿಯಲ್ಲಿ ಜಗತ್ತಿನ 63 ದೇಶಗಳಲ್ಲಿನ ವೇತನದ ಅಂತರವನ್ನು ಲೆಕ್ಕ ಹಾಕಲಾಗಿದ್ದು, ಇದರಲ್ಲಿ ಸ್ತ್ರೀಯರ ವೇತನ ಮತ್ತು ಪುರುಷರ ವೇತನದಲ್ಲಿ 15.6 ಪ್ರತಿಶತ ಅಂತರ ಕಂಡು ಬಂದಿದೆ. ಯುರೋಪ್ ,ಒಸೇನಿಯಾ, ಲ್ಯಾಟಿನ್ ಅಮೆರಿಕ, ಏಷ್ಯಾ ಮತ್ತು ಆಫ್ರಿಕಾದಲ್ಲಿ ಅತ್ಯಧಿಕ ವೇತನಗಳಲ್ಲಿ ಅತ್ಯಧಿಕ ಅಂತರವಿರುವುದು ಕಂಡು ಬಂದಿದೆ. ಆದರೆ ಬಹರೈನ್‌ನ ಮಧ್ಯ ಪೂರ್ವ ದೇಶಗಳಲ್ಲಿ ಮಾತ್ರ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ಮಹಿಳೆಯರ ಸಂಖ್ಯೆ ಅತೀ ಕಡಿಮೆಯಾಗಿದ್ದು, ಆದುದರಿಂದಲೇ ಮಹಿಳೆಯರ ವೇತನವು ಪುರುಷರ ವೇತನಕ್ಕಿಂತ 40 ಪ್ರತಿಶತ ಅಧಿಕವಾಗಿದೆ. ಪ್ರಸ್ತುತ ವರದಿಯಲ್ಲಿ ಇಂತಹ ಅಂತರಗಳು ಹೆಚ್ಚಾಗಿ ಸ್ತ್ರೀ ಪ್ರಾಬಲ್ಯವಿರುವ ಕ್ಷೇತ್ರಗಳಾದ ವಿದ್ಯಾಭ್ಯಾಸ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಂಡು ಬರುತ್ತದೆ ಎಂದು ಉಲ್ಲೇಖಿಸಿದ್ದು , ಸಾರ್ವಜನಿಕ ಕಾರ್ಯನಿರ್ವಹಣೆ, ಸಾಮಾಜಿಕ ಮತ್ತು ಸೇವಾಕ್ಷೇತ್ರಗಳಲ್ಲಿ ಹೆಚ್ಚಿನ ಅಂತರಗಳು ಕಂಡು ಬರುವುದಿಲ್ಲ ಎಂದು ಹೇಳಲಾಗಿದೆ. ಜಗತ್ತಿನ ಎಲ್ಲೆಡೆಗಳಲ್ಲೂ ಮಹಿಳೆಯರ ವೇತನದ ಸರಿ ಸಮಾನತೆಯ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆದು ಬರುತ್ತಿದ್ದರೂ ಇಂದಿನ ವರೆಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಮಹಿಳೆಯರು ಮುಂದೆ ಬರಬೇಕಾಗಿದೆ. ಪುರುಷ ಸ್ತ್ರೀ ವೇತನದ ನಡುವೆ ಇರುವ ಈ ಅಂತರಕ್ಕೆ ಪ್ರಧಾನ ಕಾರಣ ಏನೆಂಬುದರ ಬಗ್ಗೆ ಫ್ರೊಫೆಸರ್ ಲಿಂಡಾ ಸಿ.ಬಾಬ್‌ಕೋಕ್ ಅವರು ತಮ್ಮ ಪುಸ್ತಕವಾದ "ವುಮನ್ ಡೋಂಟ್ ಆಸ್ಕ್:ನೆಗೋಶಿಯೇಷನ್ ಏಂಡ್ ದ ಜೆಂಡರ್ ಡಿವೈಡ್ "ನಲ್ಲಿ "ಮಹಿಳೆಯರು ಹೆಚ್ಚಾಗಿ ತಮಗೆ ದೊರೆತ ಉದ್ಯೋಗದಲ್ಲಿ ತೃಪ್ತಿಕಾಣುವವರು ಅದರಂತೆಯೇ ಅವರು ತಮ್ಮ ವೇತನದ ಬಗ್ಗೆ ಸಂಧಾನ ಮಾತುಕತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ.ಇದರಿಂದಾಗಿಯೇ ಸಂಸ್ಥೆಗಳು ನೀಡಿದ ವೇತನದಲ್ಲಿಯೇ ತೃಪ್ತಿಕಂಡುಕೊಳ್ಳುತ್ತಾರೆ "ಎಂದು ಬರೆದಿದ್ದಾರೆ. ಇಲ್ಲಿ ಉಲ್ಲೇಖಿಸಿದಂತಹ ಲಿಂಡಾ ಅವರ ಮಾತು ಅಕ್ಷರಶ ಸತ್ಯ! ಅದಕ್ಕಾಗಿ ಮಹಿಳೆಯರು ತಮ್ಮ ಸಮಾನತೆಗೆ ಹೋರಾಟ ನಡೆಸುವಾಗ ಆರ್ಥಿಕ ಸಮಾನತೆಯ ಬಗ್ಗೆಯೂ ಮಾತೆತ್ತಬೇಕು. ಆಗ ಮಾತ್ರ ಸುದೃಢವಾದ ಆರ್ಥಿಕ ತಳಹದಿಯಲ್ಲಿ ಮಹಿಳೆಯು ಎದ್ದು ನಿಲ್ಲಲು ಸಾಧ್ಯ.

By: ರಶ್ಮಿ.ಪೈ
07/03/08

  • ಆರ್ಥಿಕ ಅಸಮಾನತೆ
  • ಆರ್ಥಿಕ ಮತ್ತು ಲಿಂಗ ಸಮಾನತೆ
  • ಮಹಿಳಾ ದಿನಾಚರಣೆ
  • ಮಹಿಳೆ
~.~
  • rashmi_pai ರವರ ಬ್ಲಾಗ್
  • Login or register to post comments
  • 361 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 8, 2008 - 10:16am — varunbhatbm

ಉ: ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

varunbhatbm's picture

ಇಲ್ಲಿ ಸೈಟ್ ನಲ್ಲಿ ಮಹಿಳೆಯರ ಬಗ್ಗೆ ಇರುವ ಲೇಖನಗಳಲ್ಲಿ ಹೆಚ್ಚಿನದನ್ನು ಪುರುಷರೇ ಬರೆದಿದ್ದಾರೆ. ಇದನ್ನು ನೋಡಿದರೆ ಗೊತ್ತಾಗುತ್ತೆ, ಪುರುಷರಿಗೆ ಸಮಾನತೆಯಿಂದ ಏನೂ ತೊಂದರೆ ಇಲ್ಲ ಅಂತ. ಅದು ಎಂದಿಗೂ ಸ್ವಾಗತಾರ್ಹ.
ಇಂದು ಒಬ್ಬ ಮಹಿಳೆ ಬರೆದಿರೋ, ಮಹಿಳಾ ಸಮಾನತೆ ಲೇಖನ ನೋಡಿ ಖುಷಿ ಆಯ್ತು. ಇದನ್ನೂ ಯಾರೋ ಒಬ್ಬ ಪುರುಷನೇ ಬರೆದಿರಬೇಕು ಅಂದುಕೊಂಡು ಓಪನ್ ಮಾಡಿದೆ. ಮಹಿಳಾ ದಿನಾಚರಣೆಯ ಶುಭಾಷಯಗಳು.
ವೇತನದಲ್ಲಿ ಇಷ್ಟು ದೊಡ್ಡ ವ್ಯತ್ಯಾಸ ಇದೆ ಅಂತ ನನಗೆ ತಿಳಿದೇ ಇರಲಿಲ್ಲ. ನನಗೆ ಅನ್ನಿಸಿದ ಹಾಗೆ ಇದನ್ನು ಸರಿಪಡಿಸುವುದಕ್ಕೆ ಸ್ವಲ್ಪ ಸಮಯ ಬೇಕು. ಇದರಲ್ಲಿ ಯಾರ ತಪ್ಪೂ ಇಲ್ಲ ಕಾರಣ, ಪುರಾತನ ಕಾಲದಿಂದಲೂ ಮಹಿಳೆಯರ ಕಾರ್ಯಕ್ಷೇತ್ರಗಳನ್ನು ಪುರುಷನೇ ನಿಗದಿಪಡಿಸಿದ್ದಾನೆ. ಈಗ ಮಹಿಳೆಯರು ಎಲ್ಲ ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತೋಷದ ವಿಷಯ. ಸಮಾಜ ಇದನ್ನು ಅರಿತು, ಬದಲಾವಣಯ ಹಾದಿಯಲ್ಲಿದೆ.
ಕಳೆದ ವರ್ಷವೇ ಟೆನ್ನಿಸ್ ಟೂರ್ನಿಮೆಂಟ್ನಲ್ಲಿ ಮಹಿಳೆಯರಿಗೆ ಹಾಗು ಪುರುಷರಿಗೆ ಸಮಾನ ಬಹುಮಾನ ನೀಡುವ ಒಳ್ಳೆಯ ಸಂಪ್ರದಾಯ ಶುರು ಮಾಡಿದರು. ನಿಧಾನವಾಗಿ ಎಲ್ಲ ಕಡೆ ಈ ಸಂಪ್ರದಾಯವನ್ನು ಅನುಸರಿಸುವುದರಲ್ಲಿ ಆಶ್ಚರ್ಯವೇ ಇಲ್ಲ. ಪ್ರಜ್ಞಾವಂತ ಪುರುಷರು ಇದಕ್ಕೆ ಅಡ್ಡಿ ಬರುವುದಿಲ್ಲ.

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 9, 2008 - 11:02am — rashmi_pai

ಉ: ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

rashmi_pai's picture

ವರುಣ ಅವರೇ...ಧನ್ಯವಾದಗಳು. ಸಂಪದದಲ್ಲಿ ಪ್ರಕಟವಾದ ನನ್ನ ಮೊದಲ ಲೇಖನವಿದು. ನಿಮ್ಮ ಪ್ರತಿಕ್ರಿಯೆಗೆ ಅನಂತಾನಂತ ಧನ್ಯವಾದಗಳೊಂದಿಗೆ ಇನ್ನು ಮುಂದೆಯೂ ನಿಮ್ಮ ಪ್ರೋತ್ಸಾಹವನ್ನು ಬಯಸುತ್ತೇನೆ.

ಇತೀ,
ರಶ್ಮಿ. ಪೈ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಹಿತ್ಯಲೋಕದಲ್ಲಿ ಸ್ತ್ರೀವಾದ
  • ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?
  • ಚಿತೆಗೆ ಒಂದು "ಪಫ್"
  • ಸ್ತ್ರೀದೌರ್ಜನ್ಯ ಕಾಯಿದೆ: ಪುರುಷಮಣಿಗಳ ಸ್ವಾಗತ!
  • ಸ್ರೀವಾದ ಮತ್ತು ಸಮಾಜ
Syndicate content

ಲೇಖಕರು

rashmi_pai's picture

ಪೂರ್ಣ ಹೆಸರು
Rashmi Pai

ಪರಿಚಯ

ನನ್ನ ಊರು ಗಡಿನಾಡಾದ ಕಾಸರಗೋಡು. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ. ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ ಹೊಂದಿರುವುದರೊಂದಿಗೆ ಕತೆ, ಕವಿತೆ, ಭಾಷಣ ಮೊದಲಾದವುಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನನ್ನ ನೆಚ್ಚಿನ ಗೆಳೆಯನಾದ ಪ್ರಕೃತಿಯೊಂದಿಗೆ ಒಡನಾಟ ನಡೆಸುವುದು ಹಾಗೂ ಸ್ವಪ್ನಲೋಕದಲ್ಲಿ ವಿಹರಿಸುವುದೆಂದರೆ ನನಗಿಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
  • ಕ್ರುಶ್ಣಾನೀ ಬ್ಯಾಗನೆ ಬಾರೋ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 2:22pm
  • createam
    ಉ: ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
    October 7, 2008 - 2:21pm
  • mahesha
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:16pm
  • savithasr
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:15pm
  • anivaasi
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:08pm
  • mahesha
    ಉ: ಕಡೇಹುಟ್ಟು
    October 7, 2008 - 1:51pm
  • mahesha
    ಉ: ಕಡೇಹುಟ್ಟು
    October 7, 2008 - 1:48pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:45pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:39pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:35pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 169 ಅತಿಥಿಗಳು ಆನ್ಲೈನ್ ಇರುವರು.


ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ!
ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!

- ಅಲ್ಲಮಪ್ರಭು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator