ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

ಮುಂಬೈನಲ್ಲಾದ ಹೇಯ ಕೃತ್ಯಕ್ಕೆ ಈಗಾಗಲೆ ಅನೇಕರು ತಮ್ಮ ಆಕ್ರೋಶ ಮತ್ತು ದುಃಖಗಳನ್ನು ಇಲ್ಲಿ ವ್ಯಕ್ತ ಪಡಿಸಿದ್ದಾರೆ. ಈ ಸಮಯದಲ್ಲಿ ನಮ್ಮ ದೇಶದ ಜನರಲ್ಲಿ ನನ್ನ ಒಂದು ಪ್ರಾಮಾಣಿಕ ಮನವಿ. ದಯವಿಟ್ಟು ಈ ಅಂಶಗಳನ್ನು ಗಮನಿಸಬೇಕು ಎಂದು ಕೋರುತ್ತೇನೆ.

೧) ಆತಂಕವಾದಿಗಳು ಭಾರತದ ಮೇಲೆ ಧಾಳಿ ಮಾಡಿದ್ದಾರೆ! ಜಾತಿ ಮತದ ಭೇದವಿಲ್ಲದೆ ಎಲ್ಲ ಭಾರತೀಯರೂ ಈಗ ಒಂದುಗೂಡಿ ಈ ವೈರಿಯನ್ನು ಎದುರಿಸಬೇಕು

೨) ಹಿಂದು ಮುಸ್ಲಿಮ್ ಮತಗಳ ಘರ್ಷಣೆಯನ್ನು ತೀವ್ರಗೊಳಿಸಬೇಡಿ. ಆ ರೀತಿ ಯಾರಾದರೂ ಮಾಡಿದರೆ ಅದನ್ನು ಪ್ರತಿಭಟಿಸಿ. ಈ ಕೃತ್ಯವನ್ನು ಎಸಗಿದವರ ಮೇಲಿನ ರೋಶವನ್ನು ನಿರ್ದೋಷಿಗಳು ಮತ್ತು ಅಮಾಯಕರ ಮೇಲೆ ತೋರಿಸಬೇಡಿ. ಭಾರ್ತೀಯರು ಹಾಗೆ ಮಾಡಿ ತಮ್ಮ ತಮ್ಮಲ್ಲೆ ಕಚ್ಚಾಡಿ ನಾಶವಾಗಲಿ ಎಂದೇ ಈ ಪಾಪಿಗಳು ಈ ಕೆಲಸವನ್ನು ಮಾಡಿರುವುದು.

೩) ಭಾರತದ ನಾಯಕರು ಮತ್ತು ಆಡಳಿತ ವರ್ಗದವರು ಇಂತಹ ಶತೃಗಳನ್ನು ನಿರ್ನಾಮಗೊಳಿಸಲು ಪಣತೊಟ್ಟಿಲ್ಲ ಎನ್ನುವುದು ನಿಜ. ಆದರೆ ಈ ಘಟನಾವಳಿಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಲು ಅವಕಾಶ ಕೊಡಬೇಡಿ.

೪) ೧೫೦ ಮಿಲ್ಲಿಯನ್ ಮುಸ್ಲಿಮರು ನಮ್ಮಂತೆ ಭಾರತದ ಪ್ರಜೆಗಳೆ. ಅವರಲ್ಲಿ ಹೆಚ್ಚಿನ ಜನ ನಮ್ಮ ನಿಮ್ಮಂತೆ ನೆಮ್ಮದಿಯ ಜೀವನ ನಡೆಸುವ ಸಾಮಾನ್ಯ ಬಯಕೆ ಇರುವಂತಹವರೆ. ನಿಮ್ಮ ಸಹಕೆಲಸಗಾರರು, ನಿಮ್ಮ ಸಹಪಾಟಿಗಳು, ನಿಮ್ಮ ಅಕ್ಕಪಕ್ಕದವರು ಬೇರೆ ಮತದವರಾಗಿದ್ದರೆ ಅವರೊಡನೆ ಹೆಚ್ಚಿನ ಸಂಪರ್ಕ ಬೆಳೆಸಿಕೊಳ್ಳಿ. ಈ ರೀತಿ ಮಾಡಿದರೆ ಅಪನಂಬಿಕೆಗಳು, ಭಯ ಮತ್ತು ದ್ವೇಷ ಕಡಿಮೆಯಾಗುತ್ತದೆ ಎಂದು ನನ್ನ ನಂಬಿಕೆ.

ಇಲ್ಲಿ ಅಮೇರಿಕದಲ್ಲಿ ನನಗೆ ಅನೇಕ ಪಾಕಿಸ್ತಾನಿಯರು ಪರಿಚಯವಾಗಿದ್ದಾರೆ. ಅವರೊಡನೆ ಕೆಲಸ ಮಾಡಿದ್ದೇನೆ. ನಾನು ಅರಿತುಕೊಂಡಿದ್ದೇನೆಂದರೆ ಅವರೆಲ್ಲರ ರೀತಿನೀತಿಗಳು ಭಾರತೀಯರಿಗಿಂತ ಬಿನ್ನವಾಗೇನೂ ಇರಲ್ಲಿಲ್ಲ. ನಾನು ಬೆಂಗಳೂರಿನಲ್ಲಿದ್ದಾಗ ನನ್ನ ಸ್ನೇಹಿತರೊಂದಿಗೆ (ಅವರಲ್ಲಿ ಕೆಲವರು ಮುಸ್ಲಿಮರೂ ಇದ್ದರು) ಹೇಗೆ ವ್ಯವಹರಿಸುತ್ತಿದೆನೊ ಅದೇ ರೀತಿ ಇವವರೊಡನೆಯೂ ವ್ಯವಹರಿಸುತ್ತೇನೆ. ಕಾಶ್ಮೀರದ ವಿಚಾರದಲ್ಲಿ ವಾದ ಮಾಡುತ್ತಿದ್ದರೂ ನಮ್ಮ ನಮ್ಮ ನಿಲುವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ಅದನ್ನು ನಮ್ಮ ನಡುವಿನ ಕಂದರದಂತೆ ಕಾಣುವುದಿಲ್ಲ.

ಇನ್ನು ನಮ್ಮ ದೇಶದ ಮುಸ್ಲಿಮರು ಹೇಗೆ ತಾನೆ ಬೇರೆ.?

ನಾವು ಭಾರತೀಯರು ನಮ್ಮ ನಮ್ಮ ವ್ಯತ್ಯಾಸಗಳನ್ನು ಎತ್ತಿತೋರಿಸುತ್ತ ಜಾತಿ ಮತದ ಆಧಾರದ ಮೇಲೆ ನಮ್ಮ ನಡುವೆಯೇ ಬೇಲಿ ಹಾಕಿಕೊಳ್ಳುವುದು ನಮ್ಮ ವಿನಾಶವನ್ನು ನಾವೇ ತಂದುಕೊಂಡಂತೆಯೆ!. ನಾನು ನಂಬಿಕೊಂಡಿರುವ ಒಂದು ಒಳ್ಳೆಯ ಮಾತೇನೆಂದರೆ "ಪ್ರತಿಯೊಬ್ಬರೂ ತಮ್ಮ ಪರಿಸರದ ಚೌಕಟ್ಟಿನಲ್ಲಿ ತಮ್ಮ ನಂಬಿಕೆಗಳನ್ನು ರೂಪಿಸಿಕೊಳ್ಳುತ್ತಾರೆ. ಆ ಚೌಕಟ್ಟಿನಲ್ಲಿ ಅವರ ನಂಬಿಕೆಯೆ ಸತ್ಯವಾಗಿರುತ್ತದೆ. ಅದನ್ನು ಒಪ್ಪದವರು ಒಮ್ಮೆ ಅವರ ದೃಷ್ಟಿಯಿಂದ ನೋಡಿದಾಗ ಅವರನ್ನು ಅರ್ಥಮಾಡಿಕೊಳ್ಳಬಹುದು. ಇದರಿಂದ ಸೌಹಾರ್ದತೆ ಬೆಳೇಯುತ್ತದೆ. "

ನನ್ನ ನಂಬಿಕೆಗಳನ್ನು ಹಂಚಿಕೊಂಡಿದ್ದೇನೆ. ನಿಮ್ಮ ಅಭಿಪ್ರಾಯ ಬೇರೆ ಇದ್ದರೆ ನಿಮ್ಮ ಮೂಗಿನ ನೇರಕ್ಕೆ ನೋಡಲು ಸಿದ್ಧವಾಗಿಯೇ ಇದ್ದೇನೆ -:))

ಮಧು ಕೃಷ್ಣಮೂರ್ತಿ.
My English Blog at http://rasikararajya...

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rakesh Shetty's picture

ರಾಕೇಶ್ ಶೆಟ್ಟಿ

ಮಧು
ಒಳ್ಳೆಯ ಮಾತುಗಳನ್ನೇ ಆಡಿದ್ದಿರಿ, ನಾನು ಹೇಳಿದ್ದನ್ನು ನೀವು ಇನ್ನೊಂದು ರೀತಿಯಲ್ಲಿ ಹೇಳಿದ್ದಿರಿ.
ತುಂಬಾ ತುಂಬಾ ಧನ್ಯವಾದಗಳು :)

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rasikara Rajya's picture

ರಾಕೇಶ್,
ನಿಮ್ಮ ಅನೇಕ ಸಂದೇಶಗಳನ್ನು ಓದಿ ಮೆಚ್ಚಿಕೊಂಡಿದ್ದೇನೆ. ಅದರಿಂದ ಪ್ರೇರಿತನಾಗಿ ಇನ್ನೊಂದು ಪೋಸ್ಟ್ ಮಾಡಿದ್ದೇನೆ. ದಯವಿಟ್ಟು ನೋಡಿ.

ಮಧು
http://rasikararajya...

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rakesh Shetty's picture

ಮಧು

ನೀವು ಬರೆದಿರುವ ಒಂದೊಂದು ಅಂಶವು ಅಕ್ಷರ ಸಹ ಸತ್ಯ, ಅದನ್ನು ಸಂಪೂರ್ಣ ಕನ್ನಡಕ್ಕೆ ಅನುವಾದಿಸಿ ಇಲ್ಲಿಯೂ ಹಾಕಿ. ಬಹಳ ಒಳ್ಳೆಯ ಲೇಖನ.
ಆದರೆ ನೋವಿನ ಸಂಗತಿ ಎಂದರೆ ನಮ್ಮ ಜನಕ್ಕೆ ಈ ಸತ್ಯಗಳು ತಿಳಿಯುತಿಲ್ಲ. ಎಷ್ಟೋ ಜನ ವಿದ್ಯವಂತರೆ ರಾಜಕಾರಣಿಗಳ ತಾಳಕ್ಕೆ ಕುಣಿಯುತಿದ್ದಾರೆ ಅಲ್ಲವೇ?

ರಾಕೇಶ್ ಶೆಟ್ಟಿ

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

mowna's picture

ಮಧು ಕೃಷ್ಣಮೂರ್ತಿ ಅವರೆ,

ನಿಮ್ಮ ಲೇಖನ ಸಂಧರ್ಭಿಕವಾಗಿದೆ. "ಹಂತಕನ ಧೂತರಿಗೆ ಕಿಂಚಿತ್ತು ದಯಯಿಲ್ಲ" . ಇಂತಹವರು ಮಾನವೀಯತೆಯ ಮರೆತ ದುರುಳರು. ಆದರೆ ನಮ್ಮ ಭಾರತೀಯರು ಎಂತಹ ಸಮಯದಲ್ಲೂ ಸಂಯಮ ಕಳೆದುಕೊಂಡಿಲ್ಲ, ಧೈರ್ಯದಿಂದಲ್ಲೇ ಇಂತಹವರಿಗೆ ಬುದ್ಢಿ ಕಲಿಸುತ್ತ ಬಂದಿದ್ದಾರೆ. ಆದರು ಇವರು ತಮ್ಮ ಕೃತ್ಯಗಳನ್ನು ಮುಂದುವರೆಸಿದ್ದರೆ. ನಾವೆಲ್ಲ ಒಂದಾಗೆ ಇದನ್ನು ಖಂಡಿತ ಎದರಿಸುತ್ತೇವೆ. ಇದಕ್ಕೆ ಸಂಶಯವಿಲ್ಲ. ಜಾತಿಮತಗಳನ್ನು ಮೀರಿ ನಿಲ್ಲಬೇಕು. ಭಾರತೀಯರ ಒಗ್ಗಟ್ಟಿನ ರುಚಿ ಇಂತಹವರಿಗೆ ತೋರಿಸುತ್ತಲೇ ಇರಬೇಕು.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rasikara Rajya's picture

ಮೌನ ಅವರೆ,
ಧನ್ಯವಾದಗಳು. ಸಮಾನ ಮನಸ್ಕ್ರರ ಪ್ರತಿಕ್ರೆಯೆ ಬಹಳ ಉತ್ತೇಜನಕಾರಿ.

ಮಧು
http://rasikararajya...

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

venkatb83's picture

ಭಯೋತ್ಪಾನೆ ಎನ್ನುವುದು ಧರ್ಮಕ್ಕೆ ಅಂಟಿಕೊಂಡ ವ್ಯಾದಿಯಲ್ಲ, ಅದನ್ನು ಕೆಲವೇ ಅರೆ ಹುಚ್ಹರು ಸೃಸ್ಟಿಸಿರುವುದು.

ಅಮಾಯಕರ ಹತ್ಯೆ ಮಾಡಿ ಅವರು ಏನನ್ನೂ ಸಾಧಿಸುವುದಿಲ್ಲ .

ಇದನ್ನು ಎಲ್ಲರೂ ಖಂಡಿಸಬೇಕು .......

ನಾವೆಲ್ಲ ಒಂದಾಗೋಣ ಭಯೋತ್ಪಾದನೆ ನಿರ್ಮೂಲನ ಮಾಡೋಣ.
ನಮ್ಮ ರಕ್ಷಣೆ ನಮ್ಮ ಕೈಲ್ಲದೆ .

venkatb83@yahoo.co.in

ವೆಂಕಟೇಶ ರಾಯಚೂರು

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rasikara Rajya's picture

ವೆಂಕಟೇಶ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಸಂದೇಶದಲ್ಲಿ ಕಂಡುಬರುವ ಸಂಯಮ ಸಮಾಧಾನ ನೀಡುತ್ತದೆ
ಮಧು
http://rasikararajya...

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

gurubaliga's picture

ತಲೆ ಬರಹ ಕೊಂಚ ಬದಲಾಯಿಸಿ.

ಈ ಬಾರಿ ಅವರುಗಳನ್ನು ಹೇಡಿಗಳು ಅನ್ನೋದು ಸರಿಯಲ್ಲ.
ಬಾಂಬು ಇಟ್ಟು ಎಲ್ಲೋ ಹೋಗಿ ಅಡಗಿ ಕುಳಿತು ನೋಡೋದು ಹೇಡಿತನ. ಎದುರು ನಿಂತು ಫಿದಾಯೀನ್ ಆಗೋದು ಹೇಡಿತನವಲ್ಲ. ಹುಚ್ಚು.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rasikara Rajya's picture

ಗುರು,

ನಿಮ್ಮ ಸಲಹೆ ಪ್ರಸಕ್ತವಾಗಿದೆ. ಆದರೂ ನಿರಾಯುಧರ ಮೇಲೆ ನಡೆದ ಹಿಂಸೆ ಹೇಡಿತನ ಎಂದು ಕರೆಯುವುದು ಸೂಕ್ತವಲ್ಲವೆ?

ಮಧು
http://rasikararajya...

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

gurubaliga's picture

ಇಲ್ಲ ಇದು ನಿರಾಯುಧರ ಮೇಲೆ ನಡೆದದ್ದು ಎನ್ನಲಾಗುವುದಿಲ್ಲ. ಇದೆಲ್ಲದರ ಉಪಸಂಹಾರ ಹೇಗೆ ಆಗುತ್ತದೆ ಎನ್ನುವುದರ ಸ್ಪಷ್ಟ ಅರಿವು ಅವರುಗಳಿಗೆ ಇರುತ್ತದೆ.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

mahesha's picture

ಅವರಾಕ್ರಮಣಣುಶಕ್ತಿಯಿಂದ ಬಲಾಢ್ಯವಾದಿಂಡಿಯಾ ರಾಷ್ಟ್ರದ ಮೇಲೆ. ಇಂಡಿಯದೆಲ್ಲ ಪ್ರಜೆಗಳ ಅಣು ಆಯುಧಧರ ಸೈನಿಕರೇ ತಾನೆ.!

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

mahesha's picture

ಹಾಗಾದರೆ ಜಗತ್ತಲ್ಲಿ ನಡೆಯುವೆಲ್ಲಾ ಕಾಳಗಗಳಲ್ಲಿ ಹೋರಾಡುವವರು ಹುಚ್ಚರೇ!

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

ಗಣೇಶ's picture

ಮಧು,

ದೇಶಕ್ಕೆ ತೊಂದರೆ ಬಂದಿರುವಾಗ, ದೇಶಪ್ರೇಮಿ ಸೈನಿಕರು ಪ್ರಾಣದ ಹಂಗು ತೊರೆದು ಅದನ್ನು ಎದುರಿಸುತ್ತಿರುವಾಗ, ನಮ್ಮೊಳಗಿನ ಭಿನ್ನಮತವೆಲ್ಲಾ ಮರೆತು ಒಂದಾಗಿದ್ದೇವೆ ಎಂದು ತೋರಿಸಬೇಕು.
ಈ ಸಮಯದಲ್ಲಿ ರಾಜಕಾರಣಿಗಳಾಗಲಿ, ಬುದ್ದಿಜೀವಿಗಳಾಗಲಿ ಬಾಯಿಮುಚ್ಚಿಕೊಂಡಿದ್ದರೆ ಅದೇ ದೊಡ್ಡ 'ದೇಶ ಸೇವೆ'.

ಚನ್ನಾಗಿ ಬರೆದಿದ್ದೀರಿ.

-ಗಣೇಶ.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

ಅರವಿಂದ್'s picture

ರಸಿಕರೇ ನಮ್ಮೆಲ್ಲರ ಆಸೆಯೂ ಅದೇ ಆದರೆ.........................

ಭಾರತ ಮಾತ, ಭಾರತ ಮಾತ
ದೇಶ ಎಂಗೆ ಒಡಕಾಯ್ತು,
ಭಾರತ ಮಾತ, ಭಾರತ ಮಾತ
ಪಾಕಿಸ್ತಾನ ಎಂಗೆ ಬೇರೆ ಆಯ್ತು,

ಭಾರತ ಮಾತ, ಭಾರತ ಮಾತ
ಸ್ವಾತಂತ್ರಕ್ ಮುಂಚೆ ಒಂದೇ ಮತ,
ಭಾರತ ಮಾತ, ಭಾರತ ಮಾತ
ಅದೇಂಗ್ ನಾವೀತ ಹಿಂದೂ ಮತ, ಅವ್ರು ಮುಸ್ಲಿಂ ಅಂತ

ಭಾರತ ಮಾತ, ಭಾರತ ಮಾತ
ನಮ್ದು ಅವ್ರುದು ಒಂದೇ ರಕುತ,
ಭಾರತ ಮಾತ, ಭಾರತ ಮಾತ
ನೀನೆ ಹೇಳು ಉತ್ತರ,
ಎಂಗ್ ಸೆಣಸೋದು ಅವ್ರರತ್ರ

ಅರವಿಂದ್
http://aravindnimmav...
http://abhimanihudug...

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

mahesha's picture

ಹಲವು ನುಡಿಗಳನ್ನಾಡುವ ಯಾವುದೇ ದೇಶದ ಜನರು ಎಂದೂ ಒಂದೇ ನುಡಿಯನ್ನಾಡುವ ದೇಶದ ಜನರಷ್ಟು ಒಕ್ಕಟ್ಟಿನಲ್ಲಿರಲು ಸಾಧ್ಯವೇ ಯಿಲ್ಲ.

ಇರಬೇಕೆಂದು ಯಾರು ಯಾರು ಕರೆನೀಡಿ ಬೇಡಿಕೊಂಡರೂ ಅದು ಸಂಭವವಿಲ್ಲ.... ( ಇದು ಮನುಷ್ಯನ ಸಹಜ ವ್ಯವಸ್ಥೆ )

ಭಾರತ, ಇಂಡಿಯಯೆಂಬ ದೇಶವು ಸ್ವಾಭಾವಿಕ ಸಹಜವಾಗಾದುದಲ್ಲ. ಸಾಮಾನ್ಯ ದೇಶ ರಾಷ್ಟ್ರವೆಂಬ ಕಲ್ಪನೆಯೊಂದು ಜನಾಂಗ, ನುಡಿಯ ಜತೆ ಸೇರಿರುತ್ತದೆ.( ಸ್ವೀಡನ್, ಯುಗಾಸ್ಲೋವಿಯ, ರಷ್ಯ ದೇಶಗಳೊಡೆದುದನ್ನು ನೋಡಿರಿ ).

ಹಲಜನಾಂಗೀಯ ದೇಶಗ ಭವಿಷ್ಯವು ಹೀಗೆಯೇ.!

ಮಾದರಿಯಾಗೊಂದು ಸನ್ನಿವೇಶ ಹೇಳುವೆನು... ಇಂಗ್ಲೇಂಡಲ್ಲಿರುವ ಕೆಲಪ್ರೆಂಚರ ಮೇಲತ್ಯಾಚಾರವಾಯಿತೆಂದು ಕೆಲಪ್ರೆಂಚರು ಇಂಗ್ಲೇಂಡಿನ ಮೇಲೆ ಸೇಡಿಟ್ಟುಕೊಳ್ಳುವುದು. ಹಾಗೇ ಯೆಲ್ಲೆಡೆ.

ಮುಂಬಯ್ಯಲ್ಲಿ ನಡೆದುದಕ್ಕೆ ನೋವಿದ್ದೇಯಿದೆ.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rakesh Shetty's picture

ರಾಕೇಶ್ ಶೆಟ್ಟಿ

@"ಹಲಜನಾಂಗೀಯ ದೇಶಗ ಭವಿಷ್ಯವು ಹೀಗೆಯೇ.!"
ಇದನ್ನು ಹೀಗೆ ಬದಲಿಸಿ "ಹಲಪಕ್ಷಗಳ , ಅವಿವೇಕಿ ರಾಜಕಾರಣಿಗಳು ತುಂಬಿರುವ ದೇಶದ ಭವಿಷ್ಯವು ಹೀಗೆಯೇ!"

@"ಹಲವು ನುಡಿಗಳನ್ನಾಡುವ ಯಾವುದೇ ದೇಶದ ಜನರು ಎಂದೂ ಒಂದೇ ನುಡಿಯನ್ನಾಡುವ ದೇಶದ ಜನರಷ್ಟು ಒಕ್ಕಟ್ಟಿನಲ್ಲಿರಲು ಸಾಧ್ಯವೇ ಯಿಲ್ಲ."

ಈ ಮಾತನ್ನು ಒಪ್ಪುವುದು ಸಾದ್ಯವಿಲ್ಲ ಬಿಡಿ , ನಮ್ಮ ಆಂತರಿಕ ವಿಷಯಗಳೆನೆ ಇರಬಹುದು ಆದರೆ ದೇಶದ ವಿಷಯ ಬಂದಾಗ ಎಲ್ಲರು ಇಲ್ಲಿ ಒಂದಾಗುತ್ತಾರೆ (ಕಪಟ ರಾಜಕಾರಣಿಗಳನ್ನು , ಬುದ್ದಿ ಜೀವಿಗಳನ್ನು ಬಿಟ್ಟು )

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

mahesha's picture

ನಿಮ್ಮಂತೆ ಹಲವರೊಪ್ಪದಿದ್ದರೂ ಅದು ದಿಟವೇ. ನನ್ನ ಹೋಲಿಕೆಯನ್ನು ಗಮನಿಸಿರಿ.

ಇನ್ನೂ ಪಕ್ಷದವರು, ರಾಜಕಾರಣಿ, ಬುದ್ಧಿಜೀವಿಗಳು ಇವೆರೆಲ್ಲರೂ ನಮ್ಮಲ್ಲಿರುವ ನಾವುಗಳೇ ತಾನೆ...

ಹಳಿಯಲು ನಾವಲ್ಲ ಅವರು ಬೇರೆಯೆಂಬುವಂತಿದೆ ನಿಮ್ಮ ಮಾತು.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rakesh Shetty's picture

ರಾಕೇಶ್ ಶೆಟ್ಟಿ

ಇಲ್ಲ ಮಾಯ್ಸ ದೇಶದ ರಕ್ಷಣೆ ವಿಷಯ ಬಂದಾಗ , ಭಾಷೆ ನಡುವೆ ಬರುವುದಿಲ್ಲ.
ಉದಾ: ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಡಿ ಭಾರತವೇ ಒಂದಾಗಿತ್ತು ಅಲ್ವಾ??
ಕೇವಲ ಶ್ರೀಲಂಕಾಕ್ಕೆ ಶಾಂತಿ ಪಡೆ ಕಳಿಸುವಾಗ, ತಮಿಳರಿಗೆ ಇಷ್ಟವಾಗಿರಲಿಲ್ಲ ಅನ್ನಿಸುತ್ತೆ. ಬಹುಷಃ ಅವರನ್ನು ಬಿಟ್ಟರೆ ಉಳಿದೆಲ್ಲರಿಗೂ ಭಾಷಭಿಮಾನವಿದೆ. ದುರಭಿಮಾನವಿಲ್ಲ ಬಿಡಿ. ಏನಂತಿರಾ?

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

mahesha's picture

:) ಹೋಲಿಕೆ ಗಮನಿಸಿರಿ.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

Rakesh Shetty's picture

ರಾಕೇಶ್ ಶೆಟ್ಟಿ

ಮಾಯ್ಸ ಅರ್ಥ ಮಾಡ್ಕೊಳ್ಳಿ , ನೀವು ಹೇಳ್ತಿರೋ ಹಾಗೆ ನಾವು ನಮ್ಮ ಜನ ಇಲ್ಲಾ ಅಂತಾನೆ ನನ್ನ ಭಾವನೇ, ಅವರು ಶ್ರೀಲಂಕಾದ ವಿಷಯದಲ್ಲಿ ಹಾಗೆ ಮಾಡ್ತಾರೆ ಅಷ್ಟೆ. ಬೇರೆ ಸಮಯದಲ್ಲಿ ಅವರು ಭಾರತೀಯರೆ ಆಗಿರುತ್ತಾರೆ ಅಂತ ನಂಬಿದ್ದೀನಿ. ಅವರನ್ನು ಬಿಟ್ಟರೆ ಇಡಿ ಭಾರತದಲ್ಲಿ ಭಾಷೆ ಭಾಷೆ ಅಂತ ದುರಭಿಮಾನ ಉಳ್ಳವರು ಯಾರು ಇಲ್ಲ ಬಿಡಿ

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

mahesha's picture

ನಾನರ್ಥ ಮಾಡಿಕೊಂಡೆನು ನೀವು ಹೇಳುವುದನ್ನು.. ನಿಮ್ಮದು ಆಶಯವಷ್ಟೇ.

ಆದರೆ

ಸ್ವಾಭಾವಿಕ ಸಹಜ ರಾಷ್ಟ್ರ ಚಿಂತನೆ ಬರುವುದೇ ಒಂದು ಜನಾಂಗದ ಗುರುತಿಗಾಗಿ, ಒಂದು ಜನಾಂಗದ ನೇಟಿವಿಟಿಗಾಗಿ. ಸಾಮಾನ್ಯವಾಗಿ ಜನಾಂಗವನ್ನವರ ನುಡಿಯಿಂದ ಗುರುತಿಸಬಹುದು.

ಜಗತ್ತಿನ ಮುಂದವರಿದ ಬಹುತೇಕ ರಾಷ್ಟ್ರಗಳಲ್ಲೂ ರಾಷ್ಟ್ರೀಯತೆಯೆಂಬುದು ಜನಾಂಗೀಯತೆ ಮತ್ತು ಭಾಷಾಧಾರಿತ. ಅಮೆರಿಕವೊಂದೇ ಹಾಗೆ ನೋಡಿದ ಹಲಜನಾಂಗಗಳಿದ್ದೂ ಮುಂದುವರಿದ ದೇಶ. ಆದರೆ ಅಲ್ಲೂ ಪೆಡರಲ್ ವ್ಯವಸ್ಥೆಯಿದ್ದೂ ಪ್ರತಿಯೊಂದು ರಾಜ್ಯಕ್ಕೂ ತಕ್ಕಮಟ್ಟಿನ ಸ್ವಾಡಳಿತವಿದೆ.

ಜಗತ್ತಿನಲ್ಲಿ ವಿಫಲವಾದ ದೇಶಗಳ್ಲಿ ಬಹುತೇಕವೂ ಹಲಜನಾಂಗವನ್ನು(Multiethnic) ಹೊಂದಿವೆ/ಹೊಂದಿದ್ದವು. ಉದಾಹರಣೆ ಇರಾಕ್, ಯುಗಾಸ್ಲೋವಿಯ, ಹಳೆಪಾಕಿಸ್ತಾನ( ಬಾಂಗ್ಲಾದೇಶದ ವಿಭಜತೆ ಪೂರ್ವ ), ಸ್ವೀಡನ್ನು(ಸ್ಕಾಡಿನೇವಿಯ), USSR ಹೀಗೆ.

ಆದರೆ ಒಂದೇ ಪ್ರಧಾನ ಜನಾಂಗವಿರುವ ಇಂಗ್ಲೆಂಡು, ಪ್ರಾಂಸು, ಜರ್ಮನಿ, ಜಪಾನು,ರಷ್ಯ,ಸ್ವೀಡನ್(ಈಗಿನ), ಪಿನ್ಲೆಂಡು, ನೋರ್ವೆ, ಸ್ಪೇನು(ಇಲ್ಲೂ ಪ್ರತ್ಯೇಕತೆಯ ಕೂಗಿದೆ) ಇವೆಲ್ಲ ಮುಂದುವರಿದ ದೇಶಗಳೇ.

ಗ್ರೇಟ್ ಬ್ರಿಟನ್ನಲ್ಲೂ ಇಂಗ್ಲೆಂಡು, ಸ್ಕಾಟ್ಲೆಂಡು,ವೇಲ್ಸ ಮುಂತಾದ ದೇಶಗಳು ಜನಾಂಗಾಧಾರಿತವಾಗೇ ಯಾಗಿರುವುವು.

ನಮ್ಮ ದೇಶದೀ ಯಳ್ಳಕ ವ್ಯವಸ್ಥೆಗೆ ನಮ್ಮ ದೇಶದಲ್ಲಿರುವ ಹಲಜನಾಂಗಗಳ ನಡುವಣವಿಲ್ಲದ ಹೊಂದಾಣಿಕೆ, ಸಾಮರಸ್ಯವೇ ಕಾರಣ. ಹೊಂದಾಣಿಕೆಯಿಲ್ಲದಿರುವುದುಕ್ಕೆ ನುಡಿ/ಭಾಷೇ ಮತ್ತು ನಡೆಗಳು ಬೇರೆ ಬೇರೆಯಾಗಿರುವುದೇ ಪ್ರಧಾನ ಕಾರಣಗಳು. ನಮ್ಮಲ್ಲಿ ಪರಸ್ಪರರೊಡಂಬಡಿಕೆಗೆ ಸಂವಹನೆಗೆ ತೊಡಕೀ ಹಲನುಡಿಗಳು ಮತ್ತು ಹಲಜನಾಂಗಗಳು.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

mahesha's picture

ಸ್ವಾಭಾವಿಕ ರಾಷ್ಟ್ರೀಯತೆಯ ಚಿಂತನೆಗೆ ನಮ್ಮ ಕವಿರಾಜಮಾರ್ಗವೇ ದೊಡ್ಡುದಾರಣೆ.(ಶೆಲ್ಡನ್ ಪೋಲಾಕರ ಕರಾಮಾ ಬಗ್ಗಿನ ಟಿಪ್ಪಣಿ ನೋಡಿ. ದೇಶೀಯ/ರಾಷ್ಟ್ರೀಯ ಚಿಂತನೆ ಮಾಡಿದ ಮೊದಲ ಜನಾಂಗದ ಕನ್ನಡಿಗರು)

ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ

ಈ ಕವಿರಾಜಮಾರ್ಗದ ಉದ್ಧೃತದಲ್ಲಿ ಗಮನಿಸಬೇಕಾದ ಪದಗಳು ’ಭಾವಿಸಿದ, ವಸುಧಾವಲಯ,ಜನಪದ’

ಭಾವಿಸಿದ = ಕನ್ನಡವೆಂಬ ಭಾವನೆ,ರಾಷ್ಟ್ರೀಯತೆ, ದೇಶೀಯತೆ,ಜನಾಂಗ ಚಿಂತನೆ, ಇಲ್ಲಿ ಒಂದು ಸಮೂಹವನ್ನು ಗುರುತಿಸುವ ಮತ್ತು ಒಕ್ಕಟ್ಟಿದ್ದು ಕನ್ನಡವೆಂಬ ಭಾವನೆ.
ವಸುಧಾವಲಯ = ವಸುಧೆ(ಭೂಮಿ), ವಲಯ(region,ಬಳೆ,boundary)
ಜನಪದ = ಜನಾಂಗ, ಬುಡಕಟ್ಟು

ಕಾವೇರಿಯಿಂದ ಗೋದಾವರಿ ವರೆಗೂ ಕನ್ನಡವೆಂಬ ಬುಡಕಟ್ಟಿನ (ಭೂ)ವಲಯವೆಂದ ಭಾವಿಸಿದ್ದರು.

ಇದು ಸ್ವಾಭಾವಿಕ (ಸಹಜ) ರಾಷ್ಟ್ರೀಯತೆ ಚಿಂತನೆ ethnic nationalismಗೆ ಉದಾಹರಣೆ.

ನಾನು ಈ angle ಅಲ್ಲಿ ಮಾತಾಡುತ್ತಿರುವುದು.

ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ

kalpana's picture

ಈ ನಡುವೆ ಉಗ್ರರ ಮತದ ಬಗ್ಗೆ ಯೋಚಿಸದೆ ಇರುವುದು ಬಹಳ ಕಷ್ಟದ ಕೆಲಸವಾಗುತ್ತಿದೆ. ಅವರು ಅಮಾಯಕರನ್ನು ಹಿಂಸಿಸಿ ಕೊಲ್ಲಬೇಕಾದರೆ ಅವರ ಮನಸ್ಸಿನಲ್ಲಿರುವ ಯಾವುದೋ ಒಂದು ಪ್ರೇರಕ ಶಕ್ತಿ ಹೀಗೆ ಮಾಡು, ಇದು ಸರಿ ಎಂದು ಸೂಚನೆ ನೀಡಿತಲ್ಲವೆ? ಅದು ಏನು?

ಹಿಂದು, ಬೌದ್ಧ, ಕ್ರೈಸ್ತರಲ್ಲಿ ಪ್ರತಿಕಾರ, ಸೇಡು, ಇತ್ಯಾದಿ ಭಾವನೆಗಳನ್ನು ಮಟ್ಟಹಾಕುವ, ಹಾಗೂ ಕ್ಷಮೆಯಂತಹ ಉತ್ತಮ ಗುಣಗಳನ್ನು ಬೆಂಬಲಿಸುವ ಬೋಧನೆಗಳಿವೆ. ಮುಸ್ಲಿಮರಲ್ಲಿ ಇದು ಇದೆಯೆ?

ನನಗೂ ಮುಸ್ಲಿಂ ಸ್ನೇಹಿತರಿದ್ದಾರೆ. ಆದರೆ ಅವರೆಲ್ಲ ನಮ್ಮ ನಿಮ್ಮಂತೆ ಹೊಟ್ಟೆ ತುಂಬಿದವರು, ವಿದ್ಯಾವಂತರು. ನೀವು ಈ ಜಿಹಾದಿಗಳ ಹೇಳಿಕೆಗಳನ್ನು ಕೇಳಿ. ಅವರಿಗೂ ಈ ನಮ್ಮ ಮುಸ್ಲಿಂ ಸ್ನೇಹಿತರಿಗೂ ಸಂಬಂಧವೇ ಕಾಣಿಸುವುದಿಲ್ಲ. ಜಿಹಾದಿಗಳ ಪ್ರಕಾರ ಇವರೆಲ್ಲ ಅಸಲಿ ಮುಸ್ಲಿಮರೆ ಅಲ್ಲ!

ಬುಶ್ ಹಿಂದೆ ಪಾಕಿಸ್ತಾನಕ್ಕೆ ಧಮಕಿ ಕೊಟ್ಟಿದ್ದ ನೆನಪು. "ನೀವು ಒಪ್ಪಲಿ, ಬಿಡಲಿ, ನಾವು ನಿಮ್ಮ ದೇಶದಲ್ಲಿ ಅಡಗಿರುವ ಉಗ್ರರನ್ನು ಹುಡುಕಿ ತೆಗೆಯುತ್ತೇವೆ". ಈಗ ಭಾರತ ಹೀಗೆ ಮಾಡಬೇಕಾಗುತ್ತೆ ಅಷ್ಟೆ. ನೀವು ಈ ಉಗ್ರರು ಪಾಕಿಸ್ತಾನದವರಲ್ಲವೇನೋ ಎಂದು ಸಂಶಯಿಸಿದ್ದೀರಿ. ಆದರೆ, ಅವರು ಪಡೆದಿರುವ ಕಮ್ಯಾಂಡೋ ಶಿಕ್ಷಣ ಅಲ್ಲಿಯದೆ ಎನ್ನುವುದರಲ್ಲಿ ಸಂಶಯವಿಲ್ಲ. ಉಗ್ರರು ಕೊಲ್ಲುವುದಕ್ಕೆ ಮುಂಚೆ ನೀಡಿದ ಹಿಂಸೆಯ ಬಗ್ಗೆ ಇಲ್ಲಿ ಓದಿ - http://www.rediff.co...

~ಕಲ್ಪನ