ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನವ ಸಂವತ್ಸರ ಭೂಮಿಗೆ ಬಂದು......................

ಚೈತ್ರ--ನವ ವಸಂತ--ಯುಗಾದಿ--ಚೆರಿ ಹೂವುಗಳು ಮರದಲ್ಲಿ!!!!!

ಬೇಂದ್ರೆಯವರ ಸುಪ್ರಸಿದ್ಧ "ಯುಗ ಯುಗಾದಿ ಕಳೆದರೂ........" ಕವನದ ಜೊತೆಗೆ, ಕುವೆಂಪು ಅವರ ಈ ಕವನವೂ ತುಂಬಾ ಸುಂದರವಾದ (ನನ್ನ ಮೆಚ್ಚಿನ) ಕವಿತೆಯಾಗಿದೆ. ಅದನ್ನು ಹಂಚಿಕೊಳ್ಳುತ್ತಿದ್ದೇನೆ ಸಂಪದಿಗರಲ್ಲಿ.......... ಎಲ್ಲರಿಗೂ ವಿರೋಧಿ ನಾಮ ಸಂವತ್ಸರದ ಯುಗಾದಿಯ ಶುಭಾಶಯಗಳು!!!!!

ಸುರಲೋಕದ ಸುರನದಿಯಲಿ ಮಿಂದು
ಸುರಲೋಕದ ಸಂಪದವನು ತಂದು
ನವ ಸಂವತ್ಸರ ಭೂಮಿಗೆ ಬಂದು
ಕರೆಯುತ್ತಿದೆ ನಮ್ಮನು ಇಂದು...ಪ....

ಮಾವಿನ ಬೇವಿನ ತೋರಣ ಕಟ್ಟು
ಬೇವು ಬೆಲ್ಲಗಳನೊಟ್ಟಿಗೆ ಕುಟ್ಟು
ಜೀವನವೆಲ್ಲ ಬೇವು-ಬೆಲ್ಲ
ಎರಡೂ ಸವಿಯನಿತ್ತವಿಯಲ್ಲ........೧

ಹೊಸಮರದಲಿ ಹೂವ್ ತುಂಬಿದೆ ನೋಡು
ಆಲಿಸು, ಆಲಿಸು ಆಲಿಸು ಆಲಿಸು
ಜೇನಿನ ಹಬ್ಬದ ಹಾಡು, ಹಾಡೂ, ಹಾಡೂ
ಜೀವನವೆಂಬುದು ಹೂವಿನ ಬೀಡು
ಕವಿಯದೆ ಹೆಜ್ಜೆ ನಿನಗೂಡು..........೨

ಕವಿಯೊಲ್ಮೆಯಕೋ ಧನ್ಯ ಯುಗಾದಿ
ಮರಳಲಿ ಇಂತಹ ನೂರು ಯುಗಾದಿ
ಇದೆಕೋ ಹೊಸವರುಷದ ಸವಿ ಮುತ್ತು
ಅದಕೊಂದಾಲಿಂಗನ ತುತ್ತು.........೩

ಈ ಹಾಡನ್ನು ಕೆಳಗಿನ ಕೊಂಡಿಯನ್ನು ಉಪಯೋಗಿಸಿ ಕೇಳಬಹುದು.
http://www.kannadaau...

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನವ ಸಂವತ್ಸರ ಭೂಮಿಗೆ ಬಂದು......................

anil.ramesh's picture

ಡಾಕ್ಟ್ರೇ,
ಯುಗಾದಿ ಹಬ್ಬಕ್ಕೆ ಒಂದು ಒಳ್ಳೆಯ ಹಾಡನ್ನು ಕೇಳಿಸಿದ್ದೀರ. :)

ಕುವೆಂಪು ಅವರ ಸಾಹಿತ್ಯ, ಅದಕ್ಕೆ ತಕ್ಕಂತೆ ಬಿ.ವಿ ಶ್ರೀನಿವಾಸ ಅವರ ಸಂಗೀತ ಸಂಯೋಜನೆ.
ಕಸ್ತೂರಿ ಶಂಕರ್ ಮತ್ತು ಮೈಸೂರು ಅನಂತಸ್ವಾಮಿ ಅವರ ಗಾಯನ ಕೇಳಲು ತುಂಬಾ ಇಂಪಾಗಿದೆ.

ಕವನವನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದ.

ಹಾಡನ್ನು ಕೇಳಿಸಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.

-ಅನಿಲ್.

ಉ: ನವ ಸಂವತ್ಸರ ಭೂಮಿಗೆ ಬಂದು......................

rasikathe's picture

ನನ್ನಿ ಅನಿಲ್
ಹಾಡು ಇಷ್ಟ ಆಗಿದ್ದು ಕೇಳಿ ಸಂತೋಷವಾಯಿತು.
~ಮೀನಾ