25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಜೋಡಿ - ಪದಗಳು ! ಪದಬಂಧ !

November 30, 2009 - 10:10am
rasikathe

ಎಲ್ಲಾ ಭಾಷೆಗಳಲ್ಲೂ ಜೋಡಿ ಪದಗಳ ಬಳಕೆ ನೋಡಿದ್ದೇವೆ, ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಮಾನ್ಯವಾಗಿ ಆಡುವಭಾಷೆಯಲ್ಲಿ ಹೆಚ್ಚಿನ ಜೋಡಿ ಪದಗಳನ್ನು ಕಾಣಬಹುದು. ಉದಾ: ಆಸೆ-ಆಕಾಂಕ್ಷೆ, ರೋಗ-ರುಜಿನ....ಇವುಗಳ ಅರ್ಥ ಒಂದೇ ಆಗಿರಬಹುದು, ಅಥವಾ ಒಂದಕ್ಕೊಂದು ಹೋಲಬಹುದು. ಕೆಲವೊಮ್ಮೆ ಪದಗಳ ಅರ್ಥಕ್ಕೆ ಹೆಚ್ಚು ಮಹತ್ವ ಕೊಡಲು ಜೋಡಿ ಪದಗಳ ಬಳಕೆ ಕಾಣಬಹುದು. ಕೆಳಗಿನ ಪದಬಂಧದಲ್ಲಿ -೨೦- ಜೋಡಿಪದಗಳು ಅಡಗಿವೆ, ಹುಡುಕಲು ಪ್ರಯತ್ನಿಸಿ. ಮೇಲೆ ಹೇಳಿರುವ ಎರಡು ಜೋಡಿ ಪದಗಳೂ ಇದರಲ್ಲಿ ಸೇರಿದೆ. ಕೆಲವು ಪದಗಳು ತಪ್ಪಿದ್ದರೆ, ಸರಿಪಡಿಸಿದರೆ ಅಭ್ಯಂತರವಿಲ್ಲ. ಮೇಲಿಂದ ಕೆಳಗೆ, ಎಡದಿಂದ ಬಲಕ್ಕೆ, ಡಯಾಗೊನಲ್ ಆಗಿ, ಹೇಗಾದರೂ ಪದಗಳು ಹುದುಗಿಕೊಂಡಿವೆ.

ಕ--ಮ--ವ--ಮೀ--ಪ--ರ--ಚ--ಗೆ---ಲೊ--ಡ್ಡು--ಲೊ--ಸ--ಕು

ತ--ಯ--ರ--ನ---ವ--ಕ--ಡ್ಡೆ--ಸೊ--ಪ್ಪು--ಸ--ದೆ---ಬ---ಜ

ಜ--ನಿ--ವ--ಮೇ--ಪ--ಗೆ--ಹ--ಬ್ಬ---ಹ---ರಿ--ದಿ---ನ---ಚ

ನ--ತಿ--ಮ--ಷ---ಣ--ವ--ಗ-ನ---ವ---ನ--ವೀ--ನ---ರ

ಚ--ನೀ-ವ--ಸು---ಚೂ-ರ--ರ್ವ-ಯ--ಲಂ--ಬ--ಕ--ಮ---ಪ

ಪ--ತಿ--ಕ--ಮ---ರು--ನ--ಗ---ವಿ--ಆ---ಗು--ವ--ಜ---ಲ

ಒ--ರೀ-ಚ--ಕ---ಪಾ--ಮ--ತ್ತು--ನ--ಸೆ---ಮ--ಲ--ತ---ರ

ಶ--ಪ್ಪ-ರೋ-ಗ--ರು--ಜಿ---ನ--ಯ--ಆ---ಪ---ವ--ಗಾ--ಟ್ಟು

ರಂ-ಕ--ಓ---ಬೇ-ಮ--ವ---ನ--ಹಿ---ಕಾಂ--ಜ---ಸೀ--ಗ--ಮು

ತ--ಪ--ರು--ರ---ಲ--ಶ---ತ--ಮ---ಕ್ಷೆ---ತ---ಮು--ಲ--ವಿ

ಟ--ನಾ-ರ---ಶ---ಣ--ಮಿ--ಚ--ಪ---ನೆ---ಡಿ---ಕ---ಮ--ಜ

ಮ--ಬ--ಟ--ಚ್ಚೆ---ತ--ಶ--ಪ--ಗ---ಗ----ಜ---ವ---ರ---ಸ

ಬ--ನ---ಚ--ಟ---ಪ--ಶ--ಡಿ--ಅಂ--ಮ---ಕ---ಸ---ನ---ವ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.2 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ambika on

ಸೊಪ್ಪುಸದೆ
ಹಬ್ಬಹರಿದಿನ
ನವನವೀನ
ರೋಗರುಜಿನ
ಚೂರುಪಾರು
ಸದ್ಯಕ್ಕೆ ಐದು ಸಿಕ್ಕಿವೆ. ಮತ್ತೆ ಸಿಗುವುದೇ ? ಹುಡುಕುತ್ತಿದ್ದೇನೆ.

ಅಂಬಿಕಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ಪರವಾಗಿಲ್ಲ ಅಂಬಿಕಾ,
ನಾನಿನ್ನು ಹಾಕಿ ೨-ನಿಮಷನೂ ಆಗಿಲ್ಲ, ನೀವು ಆಗಲೇ ೪-ಪದ ಹುಡುಕಿದ್ದೀರ, ಗುಡ್ ಲಕ್ ಮುಂದಿನದಕ್ಕೆ.
~ಮೀನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ambika on

ಮೀನಮೇಷ
ನೀತಿನಿಯಮ
ಲೊಡ್ಡುಲೊಸಕು

ಒಟ್ಟು ಎಂಟು ಹುಡುಕಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ambika on

ಆಸೆ ಆಕಾಂಕ್ಷೆ (ಅಕಾಕ್ಷೆ ಎಂದಿದೆ)

ಎಂಟಕ್ಕೆ ಒಂದು ಸೇರಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ಹೌದು ಅಂಬಿಕಾ, ಟೈಪೊ ಎರರ್ ಆಗಿದೆ, ೯ ಪದಗಳನ್ನು ಹುಡುಕಿದ್ದೀರಿ, ಆಲ್ಮೋಸ್ಟ್ ೫೦%.

~ಮೀನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ನಿಮ್ಮ ಪ್ರಯತ್ನಕ್ಕೆ ಧನ್ಯವಾದ, ಆಕಾಂಕ್ಷೆ ಸರಿಮಾಡಿದ್ದೇನೆ.

~ಮೀನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hejjenu on

೧) ಚೂರುಪಾರು
೨) ರೀತಿನೀತಿ
೩) ಸೀತ ನೆಗಡಿ
೪) ನಾರುಬೇರು
೫) ಸೊಪ್ಪುಸದೆ
೬) ಹಬ್ಬಹರಿದಿನ
೭) ನವನವೀನ
೮) ರೋಗರುಜಿನ
೯) ಮೀನಮೇಷ
೧೦)ನೀತಿನಿಯಮ
೧೧) ಲೊಡ್ಡುಲೊಸಕು
೧೨) ಹಿತಮಿತ
೧೩) ನಯವಿನಯ
೧೪) ಲಂಗು ಲಗಾಮು
೧೫) ಒಪ್ಪು ಓರಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on

ತಪ್ಪುನೆಪ್ಪು
ಮರಗಿಡ
ತೊಱೆಕೆಱೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on

ತಪ್ಪುನೆಪ್ಪು
ಮರಗಿಡ
ತೊಱೆಕೆಱೆ
ದೇವರುದಿಂಡರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ಕನ್ನಡದ ಕಂದರೆ,

ನೀವು ಬರೆದಿರುವುದು ಜೋಡಿ-ಪದಗಳು, ಆದರೆ, ಇದನ್ನು ನಾನು ಮೇಲೆ ಸೇರಿಸಿಲ್ಲ ಅರ್ಥಾತ್ ಸಾಲಾಗಿ ಪದಗಳಿಗೆ ಅಕ್ಷರಗಳನ್ನು ಬಂಧಿಸಿಲ್ಲ. ಇನ್ನಷ್ಟು ಜೋಡಿ-ಪದ ತಿಳಿಸಿದ್ದಕ್ಕೆ ಧನ್ಯವಾದಗಳು !
ಇನ್ನಷ್ಟು ......

ಅಂಕೆ-ಆಜ್ಞೆ
ಅಲ್ಪ- ಸ್ವಲ್ಪ
ಅಲ್ಲಿ-ಇಲ್ಲಿ
ತಪ್ಪು-ಒಪ್ಪು (ಅಂತನೂ ಹೇಳ್ತಾರೆ ಅಲ್ವಾ?)
ಧನ್ಯವಾದ,
~ಮೀನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ಹೆಜ್ಜೇನು ಅವರೆ,

ನಿಮ್ಮ ಹೆಸರು?????
೧೫-ಪದಗಳನ್ನು ಪತ್ತೆ ಹಚ್ಚಿದ್ದೀರ, ನಿಮಗೆ ೭೫% ಮಾರ್ಕ್ಸ್!
~ಮೀನಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ಧನ್ಯವಾದ, ನಿಮ್ಮ ಪ್ರಯತ್ನಕ್ಕೆ, ಇನ್ನೂ ೫-ಪದಗಳನ್ನು ವಿನುತ ಅವರು ಬರೆದಿದ್ದಾರೆ, ನೋಡಿ.
~ಮೀನಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinutha.mv on

1)ಮೀನ ಮೇಷ
2)ಲೊಟ್ಟೆಲೊಸಕು - ತಿದ್ದುಪಡಿ
3)ಸೊಪ್ಪುಸದೆ
4)ಹಬ್ಬಹರಿದಿನ
5)ನವನವೀನ
6)ರೋಗರುಜಿನ
7)ಅಂಗಡಿ ಮುಗ್ಗಟ್ಟು - ತಿದ್ದುಪಡಿ
8)ಆಸೆ ಆಕಾಂಕ್ಷೆ - ತಿದ್ದುಪಡಿ
9)ಗೆಡ್ಡೆಗೆಣಸು
10)ಚೂರುಪಾರು
11)ನಯವಿನಯ
12)ರಂಪರಚ್ಚೆ
13)ರೀತಿನೀತಿ
14)ಒಪ್ಪ ಓರಣ - ತಿದ್ದುಪಡಿ
15)ಲಂಗುಲಗಾಮು
16)ಸೀತನೆಗಡಿ
17)ಹಿತಮಿತ
18)ನಾರುಬೇರು
19)ಮರಮೇಣ
20)ರೀತಿನೀತಿ
21)ಗರ್ವಗತ್ತು - ತಿದ್ದುಪಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ವಿನುತ ಅವರೆ,

ನೀವು ೧೦೦% ೨೦ ಪ್ಲಸ್ ಪದಗಳನ್ನು ಹೆಕ್ಕಿದ್ದೀರ, ಅಭಿನಂದನೆಗಳು ! ನಿಮಗೂ ಹಾಗೂ (ಅಂಬಿಕಾ, ಹೆಜ್ಜೇನು, ಕನ್ನಡ ಕಂದಾ ಎಲ್ಲರಿಗೂ) !
ತಿದ್ದುಪಡಿ ಮಾಡಿದ್ದಕ್ಕೆ ತ್ಯಾಂಕ್ಸ್, ಕೆಲವು ಟೈಪೋ ಗಳಾಗಿತ್ತು , ಈಗ ಸರಿಪಡಿಸಿದ್ದೇನೆ. ( ಒಪ್ಪು-ಓರಣ , ಎರಡು ತರಹ ಬಳೆಸುತ್ತಾರೆ, ಹಾಗೇ ಲೊಡ್ಡು-ಲೊಸಕು ನು ಅಷ್ಟೇ)
ನಿಮಗೆ ಈ ಪದಬಂಧ ಇಷ್ಟ ಆಯ್ತಾ?

~ಮೀನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ambika on

ಮೀನಾ, ನಿಮ್ಮ ಪದಬಂಧ ನನಗೆ ತುಂಬಾ ಇಷ್ಟವಾಯಿತು. ನನಗೆ ಪದಬಂಧ ಬಿಡಿಸುವುದು ತುಂಬಾ ಇಷ್ಟದ ಕೆಲಸ. ಕೆಲಸದ ಒತ್ತಡದಲ್ಲಿ ಅಷ್ಟು ಗಮನ ಕೊಡಲಾಗಲಿಲ್ಲ. ನೀವು ಸಾಕಷ್ಟು ಕೃಷಿ ಮಾಡಿ ಪದಬಂಧವನ್ನು ಇಲ್ಲಿ ಹಾಕಿದ್ದೀರಿ. ನಿಮ್ಮ ಪ್ರಯತ್ನಕ್ಕೆ ಅನುಗುಣವಾಗಿ ಸಾಕಷ್ಟು ನಿಮಗೆ ಸಂತೋಷವೆನಿಸುವಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಇದು ನನ್ನ ಅನಿಸಿಕೆ. ನಿಮ್ಮ ಎಲ್ಲ ಲೇಖನಗಳು ಇಷ್ಟವಾಗುತ್ತವೆ. ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು
ಅಂಬಿಕಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.