March 31, 2011 - 4:23pm
ಸೋತ ಸೂರ್ಯ
ಪಡುವಣದ ಸಮುದ್ರದ
ಎದೆಯಲ್ಲಿ
ಪಿಸುಗುಡಲು
ಹವಣಿಸುತ್ತ ಇರುವಾಗ
ಅಗೋ ತಿಂಗಳ
ಆಗಮನ
***************
ಅವಳ ಕಣ್ಣ ಆಳ
ತಿಳಿಯದೆ ಈಜು
ಬಾರದ ಅವನು
ತನ್ನನ್ನೇ ಬಲಿಕೊಡುತ್ತಾನೆ.
***************
ಅವಳೆಂದರೆ ಅವನಿಗೆ
ಸತ್ತು ಹೋಗುವಷ್ಟು ಇಷ್ಟ
ಅದಕ್ಕೆ ಅವಳ ಎದುರು
ಮಾತಾಡುವುದು ಕಷ್ಟ.
*********************
ಮನದಿ ತುಂಬಿರೋ
ಕಾವಳವನ್ನು
ಕಸ ಗುಡಿಸೋ ಅವನು
ಎಲೆ ಅಡಿಕೆ ಹಾಕಿಕೊಂಡು
ಉಗಿಯುತ್ತಾನೆ.
****************
ರಾತ್ರಿ ಕೊಂದ
ಕನಸುಗಳು
ಮುಂಜಾವಿನಲಿ
ಮಂಜಾಗಿ
ಜಗದ
ತುಂಬಾ
ಸವಾರಿ
ಹೊರಡುತ್ತವೆ
**************
ಅವನ ಕಣ್ಣ
ಪಾಪೆಯಲ್ಲಿ
ಸತ್ತು ಬಿದ್ದ
ನೆನಪುಗಳು
ಕಂದು
ಓನುಗಳಾಗಿವೆ
*************
ಪ್ರತಿ ಸಾರಿಯೂ
ಜಗವು ಭಾವನೆಗೆ
ಕಿವುಡಾದಾಗ
ಕವಿತೆ ಎದೆಯೊಳಗೆ
ಗರ್ಭ ಧರಿಸುತ್ತದೆ.
******************
ಜಗದ ಕಣ್ಣಿಗೆ
ಮೌನಿಯಾದ ಅವಳು
ಆತ್ಮದ ಕನ್ನಡಿಯ
ಮುಂದೆ ಸುಮ್ಮನೆ
ಅಳುತ್ತಾಳೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮತ್ತೊಮ್ಮೆ ಹನಿಗಳೊಂದಿಗೆ
ಎಲ್ಲವೂ ಚೆನ್ನಾಗಿದೆ. ಮೊದಲನೆಯದು ಸಕತ್
ಉ: ಮತ್ತೊಮ್ಮೆ ಹನಿಗಳೊಂದಿಗೆ
ಧನ್ಯವಾದ ಚೇತನ್. ವಿಶ್ವಾಸದೊಂದಿಗೆ ರವಿ
ಉ: ಮತ್ತೊಮ್ಮೆ ಹನಿಗಳೊಂದಿಗೆ
ರವಿಯವರೇ ಎಲ್ಲವೂ ಚೆನ್ನಾಗಿದೆ <ಪ್ರತಿ ಸಾರಿಯೂ ಜಗವು ಭಾವನೆಗೆ ಕಿವುಡಾದಾಗ ಕವಿತೆ ಎದೆಯೊಳಗೆ ಗರ್ಭ ಧರಿಸುತ್ತದೆ. > ತುಂಬಾ ಹಿಡಿಸಿತು.
ಉ: ಮತ್ತೊಮ್ಮೆ ಹನಿಗಳೊಂದಿಗೆ
ವೆಂಕಟೇಶ್ ರಿಗೆ ವಂದನೆಗಳು.
ಉ: ಮತ್ತೊಮ್ಮೆ ಹನಿಗಳೊಂದಿಗೆ
ಮತ್ತೊ೦ದು ಸೊಗಸಾದ ಹನಿಗಳ ಗುಚ್ಛ!!
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಮತ್ತೊಮ್ಮೆ ಹನಿಗಳೊಂದಿಗೆ
ರಾಘು ಸಾರ್ ಇವೆಲ್ಲ ನಿಮ್ಮೆಲ್ಲರ ಪ್ರೋತ್ಸಾಹದ ಪರಿಣಾಮ.
ಉ: ಮತ್ತೊಮ್ಮೆ ಹನಿಗಳೊಂದಿಗೆ
ನೋವಿನಲ್ಲೂ ತೃಪ್ತಿಯನ್ನು ಕ೦ಡ ಮನಸ್ಸಿನ ಮಾತುಗಳೇ ಈ ಹನಿಗಳು?
ಮನದ ಕದ ತಟ್ಟಲು ಯಶಸ್ವಿಯಾಗಿವೆ ಹನಿಗಳು...
ಅಭಿನ೦ದನೆಗಳು.
ಉ: ಮತ್ತೊಮ್ಮೆ ಹನಿಗಳೊಂದಿಗೆ
ಹೌದು ಪ್ರಸನ್ನ ನೋವಿನಲ್ಲೇ ಅರಳಿದವು ಈ ಪುಟ್ಟ ಹನಿಗಳು. ನಿಮ್ಮ ಮನ ತಟ್ಟಿದ್ದಕ್ಕೆ ಸಾರ್ಥಕ ಭಾವ. ನಿಮ್ಮವ ರವಿ
ಉ: ಮತ್ತೊಮ್ಮೆ ಹನಿಗಳೊಂದಿಗೆ
ಸೂಪರ್.. ತುಂಬಾ ಚೆನ್ನಾಗಿವೆ.
ಉ: ಮತ್ತೊಮ್ಮೆ ಹನಿಗಳೊಂದಿಗೆ
ರವಿ,
ಅದ್ಭುತವಾಗಿದೆ ಮೊದಲ ಹನಿ...
ತುಂಬಾ ಚೆನ್ನಾಗಿವೆ.
ಭಾವ ತುಂಬಿದ ಎದೆಯ ಕ್ಷಿತಿಜದಲಿ ಸೂರ್ಯ ಸಂಜೆ ಮಾಡುವುದು ಹೀಗೆಯೇ ಅನ್ನಿಸುತ್ತೆ.......
ಅನುಪಮಾ
ಉ: ಮತ್ತೊಮ್ಮೆ ಹನಿಗಳೊಂದಿಗೆ
ಅನುಪಮ ನಿಮ್ಮ ಪ್ರೋತ್ಸಾಹಕ್ಕೆ ಶರಣು.