ಐಟಿ ಜನರು ಸ್ವಾರ್ಥಿಗಳು ಮತ್ತು ಸ್ವಂತದ್ದನ್ನು ಮಾತ್ರವೆ ಯೋಚಿಸುವವರು

[ಹಿಂದಿನ ಬ್ಲಾಗ್ ಲೇಖನ "ನನ್ನ ಐಟಿ ಸಹಬಾಂಧವರಿಗೊಂದು ಪತ್ರ..." ದಲ್ಲಿ ಉಲ್ಲೇಖಿಸಿರುವ ಲೇಖನದ ಕನ್ನಡ ರೂಪ.]

ಬೆಂಗಳೂರಿನ ಐಟಿ ಕ್ಷೇತ್ರದ ಸೋದರ ಸೋದರಿಯರೆ,

ನಿಮ್ಮಂತೆಯೆ ನಾನೂ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ನಾನು ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ.

ಬೆಂಬಲ? ಯಾಕೆ?

"ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ..."

ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಬರಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಯಾವ ಅಭ್ಯರ್ಥಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿರುವನೊ ಅವನು ಮಾತ್ರ ಗೆಲ್ಲಲಿದ್ದಾನೆ. ಮತದಾರರಿಗೆ ಉಡುಗೊರೆಗಳನ್ನು ಕೊಟ್ಟರೆ ಮಾತ್ರ, ಕೀಳು ಮಟ್ಟದ ಜಾತಿ ಮತ್ತು ಕೋಮು ಭಾವನೆಗಳನ್ನು ಉದ್ಧೀಪಿಸಿದರೆ ಮಾತ್ರ, ಅಂತಿಮವಾಗಿ ನಮ್ಮನ್ನೆಲ್ಲ ಒಡೆದರೆ ಮಾತ್ರ ಅವನು ಗೆಲ್ಲಲಿದ್ದಾನೆ. ಅವನು ಚುನಾಯಿತನಾಗಲು ಇನ್ಯಾವುದೆ ಒಳ್ಳೆಯ ಸಕಾರಣಗಳು ಪರಿಗಣಿತವಾಗುವುದಿಲ್ಲ. ನಮ್ಮ ಜನರೇಷನ್ನಿನ ಮತ್ತು ನಮ್ಮ ಈ ಸಮಕಾಲೀನ ಸಂದರ್ಭದ ಸವಾಲುಗಳನ್ನು ಅರಿಯದ ಜನರೆ ಹೀಗೆ ಚುನಾಯಿತರಾಗಲಿದ್ದಾರೆ.

ಇವರು ಖರ್ಚು ಮಾಡಲಿರುವ ಪ್ರತಿಯೊಂದು ರೂಪಾಯಿಯೂ ಅನೈತಿಕವಾಗಿ ಸಂಪಾದಿಸಿದ, ಕಳ್ಳಮಾರ್ಗಗಳಿಂದ ಮಾಡಿದ, ಯಾವುದೆ ಲೆಕ್ಕಪತ್ರಗಳಿಲ್ಲದ, ಕಪ್ಪುಹಣ. ದುಡ್ಡಿರುವ ಜನ ಈ ಚುನಾವಣೆಯನ್ನು ಕೊಳ್ಳಲಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷವೂ ನೆಲದ ಕಾನೂನನ್ನು ಮತ್ತು ಜನಮತವನ್ನು ಉಲ್ಲಂಘಿಸಲಿವೆ ಮತ್ತು ಲೇವಡಿ ಮಾಡಲಿದೆ.

ಭಾರತ ದೇಶದ ಚುನಾವಣಾ ಆಯೋಗವು ವಿಧಾನಸಭೆಯ ಚುನಾವಣೆಗೆ ಒಬ್ಬ ಅಭ್ಯರ್ಥಿ ೧೫ ಲಕ್ಷ ರೂಪಾಯಿಗಳಗಿಂತ ಹೆಚ್ಚಿಗೆ ಖರ್ಚು ಮಾಡಬಾರದೆಂಬ ಕಾನೂನಿನ ಮಿತಿಯನ್ನು ವಿಧಿಸಿದೆ. ಅದರೆ, ಬಹುಪಾಲು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಹತ್ತರಷ್ಟನ್ನು ಖರ್ಚು ಮಾಡಲಿದ್ದಾರೆ. ಮತ್ತು ಬೆಂಗಳೂರಿನಲ್ಲಂತೂ ಕೆಲವು ಅಭ್ಯರ್ಥಿಗಳು ಆ ಕಾನೂನು ಮಿತಿಯ ನೂರು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದಾರೆ. ಅನೈತಿಕವಾಗಿ ಮಾಡಿದ, ಲೆಕ್ಕಾಜಮಾ ಇಲ್ಲದ, ಕಪ್ಪುಹಣವನ್ನೆ  ಮುಂದೆ ಓದಿ »

Ornamental seperator

ನನ್ನ ಐಟಿ ಸಹಬಾಂಧವರಿಗೊಂದು ಪತ್ರ...

ಸ್ನೇಹಿತರೆ,

ಕೆಲವು ನಿರ್ವಹಿಸಲೇಬೇಕಿದ್ದ ಕೌಟುಂಬಿಕ ಜವಾಬ್ದಾರಿ ಮತ್ತು ಅನಾರೋಗ್ಯಗಳಿಂದಾಗಿ ಮೂರು ವಾರದಿಂದ ಅಂಕಣ ಬರೆಯಲಿಲ್ಲ. ಆದರೆ ಇದೇ ಸಮಯದಲ್ಲಿ ಮನಸು ಮಾತ್ರ ತೀವ್ರವಾದ ಕ್ರಿಯಾಶೀಲತೆಗೆ ತುಡಿಯುತ್ತಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಭ್ರಷ್ಟ ಆಮಿಷಗಳನ್ನು ಒಡ್ಡಲಿರುವ ಬರಲಿರುವ ಕರ್ನಾಟಕದ ಚುನಾವಣೆ ಮತ್ತು ಈ ಬಾರಿ ಬಹುಸಂಖ್ಯೆಯಲ್ಲಿ ಆಯ್ಕೆಯಾಗಲಿರುವ ಜನಪ್ರತಿನಿಧಿಗಳ ಅರ್ಹತೆ ಮತ್ತು ಯೋಗ್ಯತೆಯ ಬಗ್ಗೆ ಆಲೋಚಿಸುತ್ತಿದ್ದೆ; ಚರ್ಚಿಸುತ್ತಿದ್ದೆ. ನಮ್ಮ ಕಾಲದ ಸವಾಲುಗಳ ಮತ್ತು ಸಮಸ್ಯೆಗಳ ಅರಿವೆಯೇ ಇಲ್ಲದ, ಸಾರ್ವಜನಿಕ ಜೀವನಕ್ಕೆ ಬೇಕಾದ ಕನಿಷ್ಠ ಅರ್ಹತೆಗಳೂ ಇಲ್ಲದ, ಕನಿಷ್ಠ ಶಿಕ್ಷಣವೂ ಇಲ್ಲದ, ಕೇವಲ ದುಡ್ಡು-ಜಾತಿ-ಮತವೆ ಗರಿಷ್ಠ ಯೋಗ್ಯತೆಯಾಗಿ ಹೊಂದಿರುವ ಜನರು ಈ ಬಾರಿ ಬಹುಸಂಖ್ಯೆಯಲ್ಲಿ ನಮ್ಮ ಪ್ರತಿನಿಧಿಗಳಾಗಲಿದ್ದಾರೆ. ಬೆಂಗಳೂರಿನಲ್ಲಂತೂ ಚುನಾವಣಾ ವೆಚ್ಚದ ಮಿತಿಯಾದ ಹದಿನೈದು ಲಕ್ಷದ ಮಿತಿಯ ನೂರಕ್ಕೂ ಹೆಚ್ಚಿನ ಪಟ್ಟು ಹಣವನ್ನು ಗಣಿಗಾರಿಕೆಯ ಮತ್ತು ರಿಯಲ್ ಎಸ್ಟೇಟಿನ ಕಪ್ಪುಹಣ ಹೊಂದಿರುವವರು ಹರಿಸಲಿದ್ದಾರೆ. ಇದು ಸೃಷ್ಟಿಸಲಿರುವ ಭವಿಷ್ಯ ಹೀನಾಯವಾದದ್ದಾಗಿರುತ್ತದೆ. ನ್ಯಾಯ-ನೀತಿ-ಮೌಲ್ಯ-ಅರ್ಹತೆಗಳ ಮೇಲೆ ನಡೆಯದ ಈ ಚುನಾವಣೆ ನಮಗೆ ಮಾತ್ರವಲ್ಲ ನಮ್ಮ ಮಕ್ಕಳಿಗೂ ನಿಕೃಷ್ಟರನ್ನು ನಾಯಕರನ್ನಾಗಿ ದಯಪಾಲಿಸಲಿದೆ.

ಇದಕ್ಕೆ ನಮ್ಮ ಉತ್ತರವೇನು?  ಮುಂದೆ ಓದಿ »

Ornamental seperator

IT ಗೆ ಬಂತು ಆಪತ್ತು ! ?

ಹಿಂದೊಮ್ಮೆ (ಅಂದರೆ ಕೇವಲ ಏಳು ವರ್ಷಗಳ ಹಿಂದೆ!) ಬೆಂಗಳೂರಿನ ಐಟಿ ಹುಡುಗರ ಎದೆ ಒಮ್ಮೆ ಭಯದಿಂದ ಕಂಪಿಸಿತ್ತು. ಈಗ ಮತ್ತೆ ಆ ಕಂಪನ ಆರಂಭವಾಗಿದೆ. ಅಷ್ಟೇನೂ ಜೀವನಾನುಭವ ಇಲ್ಲದ (ಮುಖ್ಯವಾಗಿ ವಯಸ್ಸಿನ ಕಾರಣದಿಂದಾಗಿ), ಕೇವಲ ಒಳ್ಳೆಯ ದಿನಗಳನ್ನೆ ನೋಡುತ್ತ ಬಂದವರಿಗೆ ಈಗಿನ ಸದ್ಯದ ಸ್ಥಿತಿಯಲ್ಲಿ ಪ್ರಳಯದ ಭಾವನೆಗಳು ಸಹಜ. ಆದರೆ, ಈ ಶತಮಾನ ವಯಸ್ಸಿನ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಲೇಯಾಫ್, ಹೈರಿಂಗ್ freeze, ನಿರುದ್ಯೋಗ, ಮತ್ತೆ ರಾಕೆಟ್ ವೇಗದಲ್ಲಿ ಮುನ್ನುಗ್ಗುವಿಕೆ, ಇವೆಲ್ಲ ಇದ್ದದ್ದೆ. ಈ ಪ್ರಳಯವಲ್ಲದ, ಆದರೆ ನಿರಾಶಾದಾಯಕ ದಿನಗಳಲ್ಲಿ ನಮ್ಮ ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಬರಲಿರುವ ದಿನಗಳನ್ನು ನಿರ್ದೇಶಿಸುತ್ತದೆ.

2002 ರಲ್ಲಿ ಕೇವಲ 2400 ಜನ ಉದ್ಯೋಗಿಗಳನ್ನು ಹೊಂದಿದ್ದ ನಷ್ಟದಲ್ಲಿದ್ದ ಉದ್ದಿಮೆ NGEF ಅನ್ನು ಮುಚ್ಚುವಷ್ಟರಲ್ಲಿ ಕರ್ನಾಟಕ ಸರ್ಕಾರಕ್ಕೆ ಸಾಕಾಗಿ ಹೋಗಿತ್ತು. ಆದರೆ ಈಗ 2,80,000 ಉದ್ಯೊಗಿಗಳನ್ನು ಹೊಂದಿರುವ ಭಾರತದ ಮೂರು ಅತಿದೊಡ್ಡ ಐಟಿ ಕಂಪನಿಗಳು ತಮ್ಮಲ್ಲಿ ಬೆಂಚ್ ಮೇಲೆ ಇರುವವರನ್ನು ಉಳಿತಾಯದ ಕಾರಣ ಕೊಟ್ಟು ಲೇಯಾಫ್ ಮಾಡಿದರೆ ಸಾಕು NGEF ನ ಒಟ್ಟು ಉದ್ಯೋಗಿಗಳ ಇಪ್ಪತ್ತರಷ್ಟು ಜನ ಮನೆಗೆ ಹೋಗಬೇಕಾಗುತ್ತದೆ. ಇನ್ನು ಎಲ್ಲರೂ ಅದೆ ಮಾಡಿದರೆ ಲಕ್ಷಾಂತರ ಜನ ಆಗಿಬಿಡುತ್ತಾರೆ. NGEF ಉದ್ಯೋಗಿಗಳ ಪರವಾಗಿ ಪ್ರತಿಭಟನೆಗಳಾದವು. ಅಸೆಂಬ್ಲಿಯಲ್ಲಿ ವಿರೋಧ, ಗದ್ದಲಗಳೆಲ್ಲ ದಾಖಲಾದವು. ಆದರೆ ಐಟಿ ಹುಡುಗರ ಪರವಾಗಿ ಅಂತಹುದೇನೂ ಆಗುವುದಿಲ್ಲ. ಯಾಕೆ ಎನ್ನುವುದಕ್ಕೆ ಅನೇಕ ಕಾರಣಗಳಿವೆ.

ನನ್ನ ಈ ವಾರದ ಅಂಕಣ ಲೇಖನ, ಬೆಂಗಳೂರಿನ ರಿಯಲ್ ಎಸ್ಟೇಟ್, ಭಾರತದ ಐಟಿ ಇಂಡಸ್ಟ್ರಿಯ ಏಳುಬೀಳುಗಳು, ಆಗಿಹೋದ ಇತಿಹಾಸ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಆಗುತ್ತಲೆ ಇರುವ ಏರಿಳಿತಗಳು, corrections, ಇತ್ಯಾದಿಗಳ ಕುರಿತು ಇದೆ. ಪೂರ್ಣ ಲೇಖನ ಇಲ್ಲಿದೆ:

http://amerikadimdaravi.blogspot.com/2008/03/blog-post_20.html  ಮುಂದೆ ಓದಿ »

Ornamental seperator

26 ವರ್ಷಗಳಿಂದ ಪ್ರಕಟವಾಗುತ್ತಿರುವ "ವಿಜ್ಞಾನ ವಿಶೇಷ" ಮತ್ತು ನಾಗೇಶ್ ಹೆಗಡೆಯವರು...

ಪ್ರಜಾವಾಣಿಯಲ್ಲಿ ಪ್ರಕಟಗೊಳ್ಳುವ ನಾಗೇಶ್ ಹೆಗಡೆಯವರ "ವಿಜ್ಞಾನ ವಿಶೇಷ" ಅಂಕಣಕ್ಕೆ ಈಗ 26 ವರ್ಷ! ಬಹುಶಃ ಕನ್ನಡದ ಸುದೀರ್ಘ ಅಂಕಣ ಇದೆ ಇರಬೇಕು. (ಇಲ್ಲದಿದ್ದಲ್ಲಿ, ಖಂಡಿತವಾಗಲೂ ಅವುಗಳಲ್ಲಿ ಒಂದು.)

ಹಲವಾರು ವೇದಿಕೆಗಳಲ್ಲಿ ಚರ್ಚಿಸಲ್ಪಟ್ಟ, ಓದಲ್ಪಟ್ಟ ಕನ್ನಡದ ಕೆಲವೆ ಪತ್ರಕರ್ತರಲ್ಲಿ ನಾಗೇಶ್ ಹೆಗಡೆಯವರೂ ಒಬ್ಬರು. ಕರ್ನಾಟಕದ ಪರಿಸರ, ಜಲ, ನೆಲ, ಕೃಷಿ, ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು. ಸುಮಾರು ಮೂರು ದಶಕಗಳ ಕಾಲ ಸುಧಾ-ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ದುಡಿದು, ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದಾರೆ. ಕಳೆದ ತಿಂಗಳು ಸಂಪದ ತಂಡ ನಾಗೇಶ್ ಹೆಗಡೆಯವರ ಆಡಿಯೊ ಸಂದರ್ಶನ ಮಾಡಿ ಅದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದರು. ಅದೇ ಸಂದರ್ಶನದ ಹಿನ್ನೆಲೆಯಲ್ಲಿ ನನ್ನ ಈ ವಾರದ ಅಂಕಣ ಲೇಖನ ಬರೆದಿದ್ದೇನೆ.

ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/03/blog-post_12.html  ಮುಂದೆ ಓದಿ »

Ornamental seperator

ಮದುವೆಯಾಗದವರ ತೊಳಲಾಟ, ಸಮಜಾಯಿಷಿ, ಜವಾಬ್ದಾರಿ, ಮತ್ತು ಸ್ವಾತಂತ್ರ್ಯಗಳ ಸ್ವಗತ...

ಮೇಲಿನ ಶೀರ್ಷಿಕೆ ಸುಮ್ಮನೆ, ಒಂದು ರೀತಿಯಲ್ಲಿ ಗಮನ ಸೆಳೆಯಲಿ ಎಂದು ಬರೆದದ್ದು. ಅದರ ಬಗ್ಗೆ ನಂತರ ಬರುತ್ತೇನೆ.

ಈ ನಡುವೆ ಮೂರ್ನಾಲ್ಕು ತಿಂಗಳಿನಿಂದ ಯಾವುದೆ ಕಥೆ-ಕಾದಂಬರಿ ಓದಲು ಆಗಿರಲಿಲ್ಲ. ಈ ಮಧ್ಯೆ ಗೆಳೆಯ ನರೇಂದ್ರ ಪೈ‍ರವರ ಮೊದಲ ಕಥಾಸಂಕಲನ "ಟಕ್ ಟಿಕ್ ಪೆನ್ನು" ಬಿಡುಗಡೆ ಆಯಿತು. ಆದರೆ ದಯವಿಟ್ಟು ಕಳುಹಿಸಿ, ಎಂದಿದ್ದೆ. ನೆನ್ನೆ ಬಂತು. ಬಂದ ಮೂರ್ನಾಲ್ಕು ಗಂಟೆಗಳಲ್ಲಿ ಓದಿ ಮುಗಿಸಿದೆ. ಒಂದು ರೀತಿಯಲ್ಲಿ ಮೂರ್ನಾಲ್ಕು ಕಾದಂಬರಿಗಳನ್ನು ಓದಿದ ತೃಪ್ತಿ ಸಿಕ್ಕಿತು.

ಸುಮ್ಮನೆ ಕುತೂಹಲಕ್ಕೆ ಕತೆಯೊಂದರ ಭಾಗವನ್ನು ಉಲ್ಲೇಖಿಸುತ್ತೇನೆ:

"ಜಾನೆಟ್ಟಳ ಸವಾಲೆಸೆಯುವ ದೇಹಸಂಪತ್ತು, ಸೋಲೇ ಕಾಣದ ರತಿ ಉತ್ಸಾಹದ ನೆನಪಾದರೆ. ಛೇ, ಅದನ್ನು ಬಿಟ್ಟುಬಿಡಲು ಸಾಧ್ಯವೆ ಎನಿಸಿ ಆತಂಕಗೊಳ್ಳುತ್ತೇನೆ. ಕೈಗಳಲ್ಲಿ ಜಾನೆಟ್ಟಳ ಬಿಗಿಯಾದ ತುಂಬಿದ ಮೊಲೆಗಳಿರುವಾಗ, ಬೆತ್ತಲೆ ತೊಡೆಗಳು ಬೆಸೆದುಕೊಂಡು ಸುಖಿಸಲು ತಹತಹಿಸಿ ಉಕ್ಕುತ್ತಿರುವ ದೇಹ ಜ್ವರವೇರಿದಂತೆ ಬಿಸಿಯಾಗಿ ನಡುಗುತ್ತಿರುವಾಗ ಕಠೋಪನಿಷತ್ತಿನ ನಚಿಕೇತ ನೆನಪಾಗುವುದಿಲ್ಲ. ಮೃತ್ಯುದೇವತೆ ನಚಿಕೇತನ ಸಂಯಮ, ಶ್ರದ್ಧೆ, ನಿರ್ವಿಕಾರ, ನಿರ್ಲಿಪ್ತಿ, ನಿರ್ಮೋಹಗಳನ್ನೆಲ್ಲ ಹೊಗಳಿದ್ದೆಲ್ಲ ರಿಲವಂಟ್ ಎನಿಸುವುದಿಲ್ಲ, ಬದುಕಿಗೆ."

ಕತೆಗಳಲ್ಲಿ ಕತೆ ಮತ್ತು ಘಟನೆಗಳಿಗಿಂತ ವಿವರವೆ ಹೆಚ್ಚಾದರೆ ನನಗೆ ಅದು ಅಷ್ಟೇನೂ ತಟ್ಟುವುದಿಲ್ಲ. ಮತ್ತೆ ಕತೆ ಎಲ್ಲಿ ಪ್ರಾರಂಭವಾಗುತ್ತೆ ಎಂದು ಹುಡುಕುವ ಸ್ವಭಾವ. ಆದರೆ, ಈ ಪುಸ್ತಕದಲ್ಲಿ ಹಲವಾರು ಕಡೆ ಇರುವ ಇಂತಹ ವಾಕ್ಯಗಳು ಬಹಳ ಗಮನ ಸೆಳೆದವು: "ಅಲ್ಲಿ ವಿರಹದ ನೆನಪುಗಳಲ್ಲಿ ಅದ್ದಿತೆಗೆದಂತಿದ್ದ ಭಾವವೇ ಒಂದು ಹಾಡಾಗಿ, ಮನದ ನೋವೇ ಒಂದು ನಾದವಾಗಿ, ಬೆಂದ ಎದೆಯಿಂದಲೇ ಹೊರಟ ರಾಗದ ಬಳ್ಳಿಗೆ ಸುರುಳಿ ಸುತ್ತಿಕೊಂಡ ಭಾಷೆಯ ಆಯ್ದ ಶಬ್ದಗಳಲ್ಲಿ ಸಂಕಟಗಳೆಲ್ಲ ಭಗ್ನಪ್ರೇಮದ ಆಲಾಪನೆಯಾಗುತ್ತಿರಲು ಇವನ ಎದೆ ಕರಗತೊಡಗಿತ್ತು."  ಮುಂದೆ ಓದಿ »

Ornamental seperator
Syndicate content