ಸ್ಲಮ್ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು...
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 13, 09 ರ ಸಂಚಿಕೆಯಲ್ಲಿನ ಲೇಖನ.)
ಜೀವನಪ್ರೀತಿಯನ್ನು ನವೀಕರಿಸುತ್ತ ಆಶಾವಾದದಲ್ಲಿ ಮತ್ತು ಒಳ್ಳೆಯತನದಲ್ಲಿ ಕೊನೆಯಾಗುವ, ಈ ಆಸ್ಕರ್ ಪ್ರಶಸ್ತಿ ವಿಜೇತ ಸಿನೆಮಾವನ್ನು ಈ ಲೇಖನ ಬರೆಯುವುದಕ್ಕೆ ಸ್ವಲ್ಪ ಮುಂಚೆಯೆ ನೋಡಿದ್ದು. ಅದನ್ನು ನೋಡಿಕೊಂಡು ಹೊರಬರುತ್ತ, ಇಂತಹ ಒಳ್ಳೆಯ ಸಿನೆಮಾವನ್ನು "ಈ ಚಿತ್ರ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಅದು ಸರಿ ಇಲ್ಲ, ನಾವು ಹೇಗೆ ಇದ್ದರೂ ನಮ್ಮನ್ನು ಕೆಟ್ಟದಾಗಿ ತೋರಿಸಬಾರದು," ಎಂದು ಹೇಳುತ್ತಿರುವವರ ಮನಸ್ಥಿತಿಯವರ ಕುರಿತು ಯೋಚಿಸುತ್ತಿದ್ದೆ. ಈ ಸಿನೆಮಾದ ಬಗ್ಗೆ ಈ ರೀತಿಯ ಆಕ್ಷೇಪಣೆ ಎತ್ತುವವರು ರೋಗಗ್ರಸ್ತ ಮನಸ್ಸಿನವರೂ, ಕೀಳರಿಮೆಯಿಂದ ನರಳುತ್ತಿರುವ ಅಹಂಕಾರಿಗಳೂ, ತಮಗಿಂತ ಕೀಳಾದವರು ತಮ್ಮ ಸೇವೆಯನ್ನು ಮಾಡಲಷ್ಟೆ ಲಾಯಕ್ಕು ಎನ್ನುವ ಮನೋಭಾವದವರೂ ಆಗಿರಲೇಬೇಕು ಎಂಬಂತಹ ಕಟು ಅಭಿಪ್ರಾಯ ನನ್ನಲ್ಲಿ ಸುಳಿಯಿತು.
ಈ ಸಿನೆಮಾದ ಬಗ್ಗೆ ಜನ ಮಾತನಾಡಲು ಆರಂಭಿಸಿದಾಗಿನಿಂದ ಅಂತರ್ಜಾಲದಲ್ಲಿ, ಭಾರತದ ಮಾಧ್ಯಮಗಳಲ್ಲಿ, ಕನ್ನಡದ ಪತ್ರಿಕೆಗಳಲ್ಲಿ ಅದರ ಬಗ್ಗೆ ಬಂದ ವಿಮರ್ಶೆ ಮತ್ತು ಅಭಿಪ್ರ್ರಾಯಗಳನ್ನು ಓದುತ್ತ ಬಂದಿದ್ದೇನೆ. ಯಾವ ಸಮುದಾಯ ಅಥವ ವರ್ಗದ ಭಾರತೀಯರಿಗೆ ವಿದೇಶಗಳಲ್ಲಿ ಅವಕಾಶಗಳಿರುತ್ತವೆಯೊ ಅಥವ ಭಾರತದ ನವ-ಆರ್ಥಿಕ ವ್ಯವಸ್ಥೆಯಲ್ಲಿ ಯಾವ ವರ್ಗಗಳಿಗೆ ಹೆಚ್ಚು ಲಾಭವಾಗುತ್ತದೊ ಅಂತಹವರೆ ಈ ಸಿನೆಮಾ ನಮ್ಮ ದೇಶದ ಮಾನ ಹರಾಜು ಹಾಕುತ್ತಿದೆ ಎಂದು ಬೊಬ್ಬೆಯಿಡುವವರಲ್ಲಿ ಮುಂಚೂಣಿಯಲ್ಲಿರುವವರು. ಸುಲಭವಾಗಿ ಗುರುತಿಸಬಹುದಾದ ಒಂದು ಆರ್ಥಿಕ ಮತ್ತು ಸಾಮಾಜಿಕ ವರ್ಗಕ್ಕೆ ಸೇರಿದ ಜನ ಇವರು. ವಾಸ್ತವವನ್ನು ಮುಚ್ಚಿಟ್ಟು ಭಾವೋದ್ರೇಕ ವಿಷಯಗಳ ಮೇಲೆ ಬುಡಕಟ್ಟು ಕಟ್ಟಬಯಸುವ, ಮಧ್ಯಕಾಲೀನ ಯುಗಕ್ಕೆ ಹೋಗಬಯಸುವ ಗುಂಪಿದು. ಇದಕ್ಕೆ ಮುಂಚೆ "ವೈಟ್ ಟೈಗರ್" ಕಾದಂಬರಿ ಭಾರತದ ಮಾನ ಕಳೆಯುತ್ತದೆ ಎಂದು ಟೀಕಿಸಿದ ಗುಂಪೂ ಇದೇನೆ. ಕರ್ನಾಟಕದ ಗೃಹ ಸಚಿವರ ಮಾತನ್ನೆ ನೋಡಿ: "ಸ್ಲಮ್‌ಡಾಗ್ ಮಿಲಿಯನೇರ್ ಭಾರತವನ್ನು ಕೆಟ್ಟರೀತಿಯಲ್ಲಿ ತೋರಿಸುತ್ತದೆ. ಅಡಿಗರ ವೈಟ್ ಟೈಗರ್ ಪುಸ್ತಕವೂ ಅಷ್ಟೆ." ಸಮಾಜ ನಿರ್ಮಾಣದಲ್ಲಿ ಕಲೆ ಮತ್ತು ಸಾಹಿತ್ಯದ ಪ್ರಭಾವ ಮತ್ತು ಅದು ಹುಟ್ಟಿಸುವ ವೈಚಾರಿಕ ಸಂಘರ್ಷ ಮತ್ತು ನೈತಿಕತೆಯ ಮಹತ್ವ ಅರಿಯದ ಜನರಿವರು. ಸ್ವವಿಮರ್ಶೆಗೆ ಮತ್ತು ಬೇರೆಯವರ ವಿಮರ್ಶೆಗೆ ತೆರೆದುಕೊಳ್ಳದ, ಅಭದ್ರ ಮನಸ್ಥಿತಿಯ, ಆತ್ಮವಿಶ್ವಾಸವಿಲ್ಲದ ಗುಂಪು ಇದು.
ಈ ಚಿತ್ರವನ್ನು ಬಲಪಂಥೀಯ ಧೋರಣೆಯುಳ್ಳ ಎನ್ನಾರೈಗಳೂ ಬಲವಾಗಿ ವಿರೋಧಿಸಿರುವುದನ್ನು ನಾವು ಅಂತರ್ಜಾಲದಲ್ಲಿ ನೋಡಬಹುದು. ಈ ಸಿನೆಮಾ ನೋಡಿದ ವಿದೇಶಿಯರು (ಅಂದರೆ ಬಿಳಿಯರು) ಎಲ್ಲಿ ತಮ್ಮನ್ನು ಕೀಳಾಗಿ ಕಾಣಿಬಿಡುತ್ತಾರೊ ಎಂಬ ಭಯ ಮತ್ತು ಕೀಳರಿಮೆ ಇದನ್ನು ವಿರೋಧಿಸುವ ಎನ್ನಾರೈಗಳಿಗಿದ್ದಂತಿದೆ. ನಾನು ಚಿಕ್ಕವನಿದ್ದಾಗ ನನ್ನಮ್ಮ ಮತ್ತು ನನ್ನೂರಿನ ಇನ್ನೂ ಕೆಲವರು ನಮ್ಮ ಪಕ್ಕದ ಹಳ್ಳಿಯ ಶ್ರೀಮಂತ ಡಾಕ್ಟರೊಬ್ಬರ ಕತೆ ಹೇಳುತ್ತಿದ್ದರು. ಬೆಂಗಳೂರಿನಲ್ಲಿ ದೊಡ್ಡ ಡಾಕ್ಟರ್ ಆಗಿ ನೆಲೆಯಾದ ಆ ಮನುಷ್ಯ ತನ್ನ ಮನೆಗೆ ಬರುವ ಅತಿಥಿಗಳಿಗೆ ತನ್ನ ತಂದೆತಾಯಿಯರನ್ನು ತೋರಿಸಿ ಅವರು ನಮ್ಮ ಮನೆಯ ಆಳುಗಳು ಎಂದು ಹೇಳುತ್ತಿದ್ದರಂತೆ. ಬೇರೆಯವರ ಮುಂದೆ ಹಾಗೆಯೆ ನಡೆಸಿಕೊಳ್ಳುತ್ತಿದ್ದರಂತೆ. ಈ ಕತೆ ಎಷ್ಟು ನಿಜವೊ ಉತ್ಪ್ರೇಕ್ಷೆಯೋ ಗೊತ್ತಿಲ್ಲ. ಅದರೆ ಆರ್ಥಿಕ ಸ್ಥಿತಿಯಲ್ಲಿ ಮೇಲಕ್ಕೆ ಹೋದ ಒಂದಷ್ಟು ಜನರಲ್ಲಿ ಕಾಣುವ ಕೀಳರಿಮೆಯನ್ನೂ ಮತ್ತು ಅವರ ದುಷ್ಟತನಗಳನ್ನೂ ನೋಡಿರುವವರಿಗೆ ಈ ಕತೆ ಅವಾಸ್ತವ ಎನ್ನಿಸುವುದಿಲ್ಲ. ದೊಡ್ಡ ಮನುಷ್ಯನಾಗಿಬಿಡುವ ಆಸೆಗಾಗಿ ಶ್ರೀಮಂತರ ಮನೆಯ ಹೆಣ್ಣನ್ನು ಮದುವೆಯಾಗಿ ನಂತರ ತನ್ನ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ಯಾವೊಂದು ಸಂಬಂಧವನ್ನೂ ಇಟ್ಟುಕೊಳ್ಳದೆ ಅವರನ್ನು Disown ಮಾಡಿರುವ ಅನೇಕ "ಪ್ರತಿಭಾವಂತ" ಜನ ನಮ್ಮ ಪಟ್ಟಣಗಳಲ್ಲಿ ಹೇರಳವಾಗಿ ಸಿಗುತ್ತಾರೆ. ಇನ್ನೊಬ್ಬರ ಮುಂದೆ ನಮ್ಮನ್ನು ದೊಡ್ಡದಾಗಿ ಬಿಂಬಿಸದ ಯಾವೊಂದೂ ನಮ್ಮದಲ್ಲ. ನಾವು ಅದೆಲ್ಲವನ್ನೂ ಮೀರಿದವರು. ನಾವು ಪರಿಶುದ್ಧರು. ಶ್ರೇಷ್ಠಕುಲ ಸಂಜಾತರು. ಆಗರ್ಭ ಶ್ರೀಮಂತರು! ಇಂತಹ ಮನಸ್ಥಿತಿಗಳ ಮುಂದುವರಿದ ಭಾಗವೆ "(ವಿದೇಶಿಯರು ನೋಡುವ) ಸ್ಲಮ್‌ಡಾಗ್‌ನಲ್ಲಿ ಅದೆಲ್ಲ ತೋರಿಸುವ ಅವಶ್ಯಕತೆ ಇತ್ತೆ?" ಎನ್ನುವುದು.
ಎಲ್.ಕೆ. ಅಡ್ವಾನಿ ಎನ್ನುವ ರಾಷ್ಟ್ರನಾಯಕ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಹೇಳಿದರೆನ್ನಲಾದ ಮಾತನ್ನು ಈ ಸಿನೆಮಾಗೆ ಹೋಗುವ ಸ್ವಲ್ಪ ಮುಂಚೆಯಷ್ಟೆ ನಾನು ಪತ್ರಿಕೆಗಳಲ್ಲಿ ಓದಿ ಹೋಗಿದ್ದೆ. "ಸಂಸತ್‌ಭವನದ ಮೇಲೆ ದಾಳಿ ಮಾಡಿದ ಉಗ್ರನ ಹೆಸರು ಅಫ್ಜಲ್ ಗುರು ಎಂದಿರದೆ ಆನಂದನೊ, ಮೋಹನನೊ ಆಗಿದ್ದರೆ, ಇಷ್ಟರಲ್ಲಾಗಲೆ ಆತ ನೇಣು ಕಂಡಾಗಿರುತ್ತಿತ್ತು," ಎಂದಿದ್ದರು ಈ ನಮ್ಮ "ಉಕ್ಕಿನ" ರಾಷ್ಟ್ರನಾಯಕರು. ಎಂತಹ ಕೀಳು ಹೇಳಿಕೆ ಇದು? ದೇಶದ ಉಪ-ಪ್ರಧಾನಿಯಾಗಿದ್ದ ಒಬ್ಬ Statesman ಹೇಳುವ ಮಾತುಗಳಲ್ಲ ಇವು. ಅಧಿಕಾರ ದಾಹದಿಂದ ತನ್ನೆಲ್ಲ ಹಿರಿತನ ಮತ್ತು ಸಜ್ಜನಿಕೆಯನ್ನು ಕಳೆದುಕೊಂಡ ಹಿರಿಯನೊಬ್ಬನ ಹತಾಶ ಮಾತುಗಳಿವು. ಯುವಕರ ಮನಸ್ಸಿನಲ್ಲಿ ವಿಷ ಬಿತ್ತಿ, ಆ ಮೂಲಕ ದೇಶದ ಪ್ರಧಾನಿಯಾಗಬೇಕೆಂದು ಹಂಬಲಿಸುವ ಇಂತಹ ಮನಸ್ಥಿತಿಯ ಮನುಷ್ಯ ಭಾರತದ ಪ್ರಧಾನಿಯಾಗಿಬಿಟ್ಟರೆ ಭಾರತದ ಜನರ ಸ್ಥಿತಿ ಹಿಟ್ಲರ್‌ನ ಕಾಲದಲ್ಲಿ ಕೋಮುವಿಷವನ್ನು ಉಂಡ ಜರ್ಮನ್ನರ ಸ್ಥಿತಿಗಿಂತ ಬೇರೆ ಆಗುವುದಿಲ್ಲ. ಕೋಮುವಾದಿ ಪಕ್ಷದಿಂದ ಬಂದಿದ್ದರೂ ಸಹ ಅಧಿಕಾರದಾಹದೆಡೆಗೆ ಒಂದು ಮಟ್ಟದ ನಿರ್ಲಕ್ಷ್ಯವನ್ನು, ಕನಿಷ್ಠ ಸಜ್ಜನಿಕೆಯೊಂದನ್ನು, ಮತಸಹಿಷ್ಣುತೆಯನ್ನು ಮಾಜಿ ಪ್ರಧಾನಿ ವಾಜಪೇಯಿ ಹೊಂದಿದ್ದರು. ಆದರೆ, ಆ ಒಳ್ಳೆಯ ಗುಣಗಳ್ಯಾವುವೂ ಅಡ್ವಾನಿಯವರಲ್ಲಿ ಕಾಣಿಸುತ್ತಿಲ್ಲ.
ಸ್ಲಮ್‌ಡಾಗ್ ಸರಿ ಇಲ್ಲ ಎನ್ನುವ ಜನರಲ್ಲಿ ಬಹುಸಂಖ್ಯಾತ ಜನ ಭಾಜಪದ ಬೆಂಬಲಿಗರು ಎನ್ನುವುದಕ್ಕೆ ಯಾವುದೆ ಸಮೀಕ್ಷೆಯಾಗಲಿ, ಸಂಶೋಧನೆಯಾಗಲಿ ಮಾಡಬೇಕಿಲ್ಲ. ಇವರ ನಾಯಕ ಅಡ್ವಾನಿ ಹೇಳಿದ "ಅಫ್ಜಲ್, ಆನಂದ, ಮೋಹನ" ಥಿಯರಿಯನ್ನಿಟ್ಟುಕೊಂಡೆ ನಾವು ಸ್ಲಮ್‌ಡಾಗ್ ಅನ್ನು ವಿಶ್ಲೇಷಿಸಿದರೆ, ಆ ಜನಕ್ಕೆ ಈ ಸಿನೆಮಾ ಯಾಕೆ ಇಷ್ಟವಾಗಿಲ್ಲ ಎನ್ನುವುದಕ್ಕೆ ಇನ್ನೂ ಒಳ್ಳೆಯ ಕಾರಣ ಕೊಡಬಹುದು. ಅದು ಸಿನೆಮಾದ ನಾಯಕನ ಮತ. ಮೊದಲಿಗೆ ಸಿನೆಮಾದಲ್ಲಿ ಹಿಂದೂ ಕೋಮುವಾದಿಗಳು ಮುಸ್ಲಿಮರನ್ನು ಸಾಯಿಸುವ ಕೋಮುಗಲಭೆಯ ದೃಶ್ಯವಿದೆ. ಆ ದೃಶ್ಯದಲ್ಲಿ ಮುಸ್ಲಿಮ್ ತಾಯಿಯೊಬ್ಬಳನ್ನು ಆಕೆಯ ಮಕ್ಕಳ ಮುಂದೆಯೆ ಹಿಂದೂಗಳು ಕೊಲ್ಲುತ್ತಾರೆ. ಎಲ್ಲೂ ಮುಸಲ್ಮಾನ ದುಷ್ಟರು ಮುಗ್ಧ ಹಿಂದೂಗಳನ್ನು ಕೊಲ್ಲುವ ದೃಶ್ಯ ಇಲ್ಲ. ಭಾರತದಲ್ಲಿ ಮುಸಲ್ಮಾನರ ಮೇಲೆ ಹಿಂದೂಗಳು ಹಲ್ಲೆ ಮಾಡುವುದು ಈ ಚಿತ್ರದ ಮೂಲಕ ಪ್ರಪಂಚಕ್ಕೇ ಗೊತ್ತಾಗುತ್ತಿದೆಯೆ ಹೊರತು, ಮುಸಲ್ಮಾನರು ಹಿಂದೂಗಳನ್ನು ಸಾಯಿಸುವುದು ಪ್ರಪಂಚಕ್ಕೆ ಗೊತ್ತಾಗುತ್ತಿಲ್ಲ! ಎಂತಹ ಅಪಚಾರ ಮತ್ತು ಸುಳ್ಳಿನ ಪ್ರಚಾರ! ಈ ದೃಶ್ಯ ಹಾಳಾಗಿ ಹೋಗಲಿ ಅಂದರೆ, ಈ ಸಿನೆಮಾದ ಮುಸಲ್ಮಾನ ಹುಡುಗ ಕೊನೆಗೂ ಪಂದ್ಯ ಗೆದ್ದು ಬಿಡುತ್ತಾನೆ. ಸ್ಲಮ್ಮಿನಲ್ಲಿ ಬೆಳೆದ, ಯಾವೊಂದು ವಿದ್ಯೆಯೂ ಇಲ್ಲದ, ಕಾಲ್‌ಸೆಂಟರ್‌ನಲ್ಲಿ ಟೀ ಬಾಯ್ ಆದ ಹುಡುಗ ಪಂದ್ಯ ಗೆಲ್ಲುವುದೆಂದರೇನು? ಈ ಪಂದ್ಯ ಗೆದ್ದವನು ಹಿಂದೂವಾದರೂ ಆಗಿದ್ದರೆ ಅಷ್ಟು ಇಷ್ಟು ಸಹಿಸಿಕೊಳ್ಳಬಹುದಿತ್ತು. ಹೋಗಲಿ ಅಂದರೆ ಅವನು "ಆನಂದನೂ ಅಲ್ಲ, ಮೋಹನನೂ ಅಲ್ಲ. ಅವನ ಹೆಸರು ಜಮಾಲ್ ಮಲ್ಲಿಕ್." ಹೌದು. ಹೀಗೆ ಯೋಚನೆ ಮಾಡುವುದೆ ಎಷ್ಟೊಂದು ಕೀಳು ಎನ್ನಿಸುತ್ತದೆ ನನಗೂ. ಅದರೆ, ಪ್ರಜ್ಞಾಪೂರ್ವಕವಾಗಿ ಅಥವ ಅಪ್ರಜ್ಞಾಪೂರ್ವಕವಾಗಿ ಕೆಲವು ಸಂಕುಚಿತ ಮನೋಭಾವದ ಜನ ಹೀಗೆಯೂ ಯೋಚಿಸಬಲ್ಲರು ಎನ್ನುವುದಕ್ಕೆ ಅಡ್ವಾನಿ ಬಹಿರಂಗವಾಗಿ ಹೇಳಿದ ಮಾತನ್ನೆ ನಾವು ಆಧಾರವಾಗಿಟ್ಟುಕೊಳ್ಳಬಹುದು.
1927 ರಲ್ಲಿ ಅಮೆರಿಕದ ಕ್ಯಾಥರಿನ್ ಮೇಯೊ ಎನ್ನುವ ಬರಹಗಾರ್ತಿ "ಮದರ್ ಇಂಡಿಯಾ" ಎನ್ನುವ ಪುಸ್ತಕ ಬರೆಯುತ್ತಾಳೆ. ಅದರಲ್ಲಿ ಭಾರತವನ್ನು ಮೋರಿ-ಚರಂಡಿಗಳ ದೇಶ ಎಂಬಂತೆ ಬಿಂಬಿಸುತ್ತಾಳೆ. ಭಾರತೀಯರು ತಮ್ಮನ್ನು ತಾವು ಆಳಲು ಅನರ್ಹರು, ಬ್ರಿಟಿಷರು ಅವರನ್ನು ಆಳುವುದೆ ಉತ್ತಮ ಎನ್ನುತ್ತ್ತಾಳೆ. ಆ ಪುಸ್ತಕಕ್ಕೆ ಗಾಂಧಿ ಯಂಗ್ ಇಂಡಿಯಾದಲ್ಲಿ ವಿಮರ್ಶೆ ಬರೆಯುತ್ತ ಹೇಳುತ್ತಾರೆ: "ಈ ಪುಸ್ತಕವನ್ನು ಬಹಳ ಬುದ್ಧಿವಂತಿಕೆಯಿಂದ, ಪರಿಣಾಮಕಾರಿಯಾಗಿ ಬರೆಯಲಾಗಿದೆ. ಈ ಪುಸ್ತಕದಲ್ಲಿನ ಹೇಳಿಕೆಗಳನ್ನು ಬಹಳ ಜಾಗರೂಕತೆಯಿಂದ ಆರಿಸಲಾಗಿದೆ. ಹಾಗಾಗಿ ಆ ಹೇಳಿಕೆಗಳು ಈ ಪುಸ್ತಕ ನಿಜಕ್ಕೂ ಸತ್ಯವನ್ನೆ ಹೇಳುತ್ತದೆ ಎಂಬ ತಪ್ಪು ಅಭಿಪ್ರಾಯ ಮೂಡಿಸುತ್ತವೆ. ಆದರೆ ಈ ಪುಸ್ತಕ ನನ್ನಲ್ಲಿ ಮೂಡಿಸುವ ಅಭಿಪ್ರಾಯ ಏನೆಂದರೆ, ಈ ಪುಸ್ತಕ ಒಂದು ದೇಶದ ಮೋರಿಗಳನ್ನು ತೆರೆದು, ಅವನ್ನು ಪರಿಶೀಲಿಸಿ ನೋಡುವ ಏಕೈಕ ಉದ್ದೇಶದಿಂದ ಕಳುಹಿಸಲಾದ ಚರಂಡಿ ಪರಿಶೀಲಕನೊಬ್ಬನ ವರದಿ." ಹೀಗೆ ಹೇಳುವ ಗಾಂಧಿ ಇನ್ನೂ ಮುಂದಕ್ಕೆ ಹೋಗಿ ಭಾರತೀಯರಿಗೆ ಹೀಗೆ ಹೇಳುತ್ತಾರೆ: "ಪ್ರತಿಯೊಬ್ಬ ಭಾರತೀಯನೂ ಓದಬಹುದಾದ ಮತ್ತು ಆ ಮೂಲಕ ಒಂದಷ್ಟು ಲಾಭ ಮಾಡಿಕೊಳ್ಳಬಹುದಾದ ಪುಸ್ತಕ ಇದು. ಆಕೆ ಮಾಡಿರುವ ಅನೇಕ ಆರೋಪಗಳಲ್ಲಿ ಹುದುಗಿರುವ ಒಳಾರ್ಥವನ್ನು (ವಾಸ್ತವವನ್ನು) ನಾವು ಖಂಡಿತ ತಿರಸ್ಕರಿಸಲಾರೆವು. ಬೇರೆಯವರು ನಮ್ಮನ್ನು ಹೇಗೆ ನೋಡುತ್ತಾರೊ ಅದೇ ರೀತಿ ನಮ್ಮನ್ನು ನಾವು ನೋಡಿಕೊಳ್ಳುವುದು ಒಳ್ಳೆಯದೆ. ಆ ಪುಸ್ತಕವನ್ನು ಬರೆದ ಉದ್ದೇಶವನ್ನು ನಾವು ಪರೀಕ್ಷಿಸುವ ಅಗತ್ಯವಿಲ್ಲ. ಬದಲಿಗೆ ನಮ್ಮ ಸಮಾಜದೂಷಣೆಗೆ ಕಾರಣವಾದ ವಿಷಯಗಳನ್ನು ತೊಡೆದುಹಾಕಲು ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಯತ್ನಿಸುವಂತೆ ಅದು ನಮ್ಮನ್ನು ಪ್ರಚೋದಿಸಬೇಕು."
ಸ್ಲಮ್‌ಡಾಗ್ ಮಿಲಿಯನೇರ್ ಅನ್ನು ನಾವು ಯಾವ ಕೋನದಿಂದಲೂ "ಮದರ್ ಇಂಡಿಯಾ"ಗೆ ಹೋಲಿಸಲಾಗದು. ನಿಮಗೆ ಇಲ್ಲಿ ಒಬ್ಬ ಸಿನೆಮಾ ಪ್ರೇಮಿಯೊಬ್ಬನ, ಕಲಾವಿದನೊಬ್ಬನ ಕೃತಿ ಕಾಣಿಸುತ್ತದೆಯೆ ಹೊರತು "ಮೋರಿ ಪರಿಶೀಲಕನ" ಡಾಕ್ಯುಮೆಂಟರಿ ಅಲ್ಲ. ಭಾರತವನ್ನು ಕೆಟ್ಟದಾಗಿ ತೋರಿಸಬೇಕು ಎನ್ನುವ ಉದ್ದೇಶದಿಂದ ಈ ಚಿತ್ರ ನಿರ್ಮಿಸಲಾಗಿದೆ ಎಂದು ಹೇಳುವುದು ತೀರಾ ಬಾಲಿಶವಾದದ್ದು. ಆದರೂ, ಸಿನೆಮಾ ನೋಡುವ ಮನರಂಜನೆಯ ಹೊರತಾಗಿಯೂ ಈ ಸಿನೆಮಾ ನಮಗೆ ಒಂದಷ್ಟು ಕಲಿಸುತ್ತದೆ. ಹಾಲಿ ಮತ್ತು ಭಾವಿ ಭಾರತದ ಗಂಭೀರ ಸಮಸ್ಯೆಯೊಂದರ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಅದು Urban Poverty. ನಮ್ಮ ನಗರಗಳ ಕೊಳಚೆಪ್ರದೇಶಗಳಲ್ಲಿ ವಾಸಿಸುವವರ ಜೀವನ ಎಷ್ಟೋ ಸಲ ಹಳ್ಳಿಗಳಲ್ಲಿನ ದಲಿತರ ಜೀವನಕ್ಕಿಂತ ಕೆಟ್ಟದಾಗಿರುತ್ತದೆ. ದೊಡ್ಡದೊಡ್ಡ ನಗರಗಳಲ್ಲಿ ಬೇರೂರಿರುವ ಈ ಸ್ಲಮ್‌ಗಳು "breeding grounds for crime." ರಾಜಕೀಯ ಪ್ರೇರಿತ ಪೂರ್ವಯೋಜಿತ ಕೋಮುಗಲಭೆಗಳು ಮೊದಲಿಗೆ ಹುಟ್ಟುವುದೆ ಈ ಸ್ಲಮ್ಮುಗಳಲ್ಲಿ. ಇಲ್ಲಿ ಜೀವದ ಬೆಲೆ ಬಹಳ ಅಗ್ಗ. ಈಗಲಾದರೂ ನಮ್ಮ ಪಾಲಿಸಿ ಮೇಕರ್‌ಗಳು ನಗರಗಳಲ್ಲಿನ ಬಡತನವನ್ನು ಒಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಸ್ಲಮ್ಮುಗಳಲ್ಲಿನ ಜನರನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ, ಅವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿರುವ ಆರೋಗ್ಯವಂತ ಪರಿಸರ ನಿರ್ಮಿಸಿಕೊಡುವ, ಮತ್ತು ಅವರ ಬಡತನವನ್ನು ಕೊನೆಗೊಳಿಸುವ ದಿಕ್ಕಿನೆಡೆಗೆ ಚರ್ಚೆ ಮತ್ತು ಕೆಲಸಗಳನ್ನು ಆರಂಭಿಸುತ್ತಾರೆ ಎಂದು ಆಶಿಸೋಣ. ಸ್ಲಮ್‌ಡಾಗ್ ಮಿಲಿಯನೇರ್‌ನಿಂದ ನಮ್ಮ ಸಿನೆಮಾ ಜಗತ್ತು ಏನನ್ನು ಕಲಿಯತ್ತದೊ ಬಿಡುತ್ತದೊ, ಕನಿಷ್ಠ ನಮ್ಮ ಸಾಮಾಜಿಕ ಸಂದರ್ಭದಲ್ಲಾದರೂ ಅದು ನಗರಗಳಲ್ಲಿನ ಬಡತನದ ಬಗ್ಗೆ ಸಂವಾದ ಆರಂಭಿಸಿದರೆ ಅದೇ ಅದರ ದೊಡ್ಡ ಕೊಡುಗೆ. ನಮ್ಮವರು ಆರಂಭಿಸದಿದ್ದರೂ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಾದರೂ ಅದನ್ನು ಆರಂಭಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ.
- ravikreddy's blog
- Login or register to post comments
- 2929 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ
ನಮಸ್ಕಾರ ರವಿ..
ಎಲ್ಲಿಂದ ಹುಡುಕಿ ತಂದಿರೋ, ಆದರೆ ಈ ಲೇಖನ ತುಸು ಖಾರವಾಗಿದೆ.. ಚೆನ್ನಾಗಿದೆ. ಆದರೆ ಕೆಲವು ವಿಷಯಗಳತ್ತ ನಿಮ್ಮ ಗಮನಹರಿಸುವ ಪ್ರಯತ್ನ ಮಾಡಬೇಕಾಗಿದೆ.
ಮೊತ್ತ ಮೊದಲಾಗಿ ಲೇಖನದ ಈ ಸಾಲು.
ಈ ಸಿನೇಮಾವನ್ನು ಇಷ್ಟಪಡದ ನನ್ನಂಥ ಲಕ್ಷಗಟ್ಟಲೇ ಜನರ ಮನಸ್ಸು, Attitude, ಮನೋಭಾವವನ್ನು ಅದ್ಭುತವಾಗಿ Analyse ಮಾಡಲಾಗಿದೆ. ಧನ್ಯವಾದಗಳು. ಒಂದು ಜಿರಳೆಯ ನಾಲ್ಕು ಕಾಲುಗಳನ್ನು ಕತ್ತರಿಸಿ, ’ನಾಲ್ಕು ಕಾಲುಗಳನ್ನು ಕತ್ತರಿಸಿದರೆ ಜಿರಳೆಗೆ ಕಿವಿ ಕೇಳೋದಿಲ್ಲ’ ಎಂಬ ಜಾಣನೊಬ್ಬನ Analysis ನ ನೆನಪಾಯ್ತು. ಸರ್, ನಮ್ಮ ಬೇಡಿಕೆ ’ನಾವು ಹೇಗೇ ಇದ್ದರೂ, ನಮ್ಮನ್ನು ಕೆಟ್ಟದಾಗಿ ತೋರಿಸಬೇಡಿ’ ಎಂಬುದಲ್ಲ. ಇರುವುದನ್ನ ಇದ್ದ ಹಾಗೆ, ನಿಷ್ಪಕ್ಷವಾಗಿ ತೋರಿಸಿ ಎಂಬುದು.
ಯಾವ ಆಧಾರದ ಮೇಲೆ ಜೆನೆರಲೈಸ್ ಮಾಡಲಾಗುತ್ತಿದೆ? ನಾನು ಬಿಜೆಪಿ ಯ ಸಮರ್ಥಕನಲ್ಲ. ಆದರೆ ಸ್ಲಂಡಾಗ್ ನನಗೆ ಒಂದು ಚೂರೂ ಇಷ್ಟವಾಗಲಿಲ್ಲ. ಅಥವಾ ಸ್ಲಂ ಡಾಗ್ ಯಾರಿಗೆ ಇಷ್ಟವಾಗುವುದಿಲ್ಲವೋ ಅವರೆಲ್ಲ ಬಿಜೆಪಿ ಪಕ್ಷದವರು ಎಂಬುದು ಹೊಸ ಕಾಂಗ್ರೆಸ್ ಸ್ಲೋಗನ್ನೋ? ನನಗೆ ತೋಚಿದ ಹಾಗೂ ಇತ್ತೀಚಿಗೆ ನಾನೊಂದು ಪತ್ರಿಕೆಯಲ್ಲಿ ಓದಿದ ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಇವುಗಳಿಗೆ ಉತ್ತರಿಸಿ, ನನ್ನ confusion ನ್ನು ದಯವಿಟ್ಟು ದೂರಗೊಳಿಸಿ.
೧. ಲೇಖನದಲ್ಲಿ ಹೇಳಿದಂತೆ, ಅಡ್ವಾನಿ ಹಾಗೂ ಅವರ ಸಮರ್ಥಕರು ಕೋಮುವಾದಿಗಳು ಎಂದು ನಂಬೋಣ. ಡ್ಯಾನಿ ಬಾಯ್ಲ್ ಹಾಗೂ ಆತನ ಇತರ ಸಹಾಯಕರು, ಯಾವ ಪುಸ್ತಕದ ಮೇಲೆ ಆಧರಿಸಿ (Q&A- ವಿಕಾಸ್ ಸ್ವರೂಪ್) ಈ ಚಿತ್ರವನ್ನು ನಿರ್ಮಿಸಿದರೋ, ಆ ಪುಸ್ತಕದಲ್ಲಿ Protagonist ನ ಹೆಸರು ’ರಾಮ ಮೊಹಮ್ಮದ ಥಾಮಸ್’ ಎಂದಿದ್ದನ್ನು ’ಜಮಾಲ್ ಮಲಿಕ್’ ಎಂದು ಬದಲಾಯಿಸುವ ಅವಶ್ಯಕತೆ ಏನಿತ್ತು? ನಾಯಕನನ್ನು ಒಬ್ಬ ಮುಸಲ್ಮಾನನಾಗಿಸುವ ಅಗತ್ಯ ಏನಿತ್ತು? ಈ ಬಗ್ಗೆ ಪ್ರಶ್ನೆ ಮಾಡುವವರು, ಲೇಖಕನಿಗೆ ಮೂಲಭೂತವಾದಿಗಳು ಅನಿಸಿದರೆ, ನನ್ನ ಅಭ್ಯಂತರವೇನಿಲ್ಲ. ಆದರೆ, ಯಾವುದೇ Prejudice ಇಲ್ಲದೇ ಆತನ ಹೆಸರನ್ನು ಬದಲಾಯಿಸಿದರು ಎಂಬುದನ್ನು ಬುದ್ಧಿ ಇದ್ದವರು ಸುತರಾಂ ಒಪ್ಪುವುದಿಲ್ಲ. ಪುಸ್ತಕದಲ್ಲಿ ಸಲೀಂ ಎಂಬುವ ವ್ಯಕ್ತಿ, ಈ ರಾಮ್ ಮೊಹಮ್ಮದನ ಮಿತ್ರ. ಸೆಕ್ಯೂಲರ್ ಆದ ಯಾವುದೇ ವ್ಯಕ್ತಿ ಖುಷಿಪಡುವ ವಿಷಯ. ಆದರೆ ಹಿಂದೂ-ಮುಸ್ಲಿಂ ಬಾಂಧವ್ಯದ ಸುಂದರ interpretation ಕೊಡುವ ಬದಲು ಡ್ಯಾನಿ ಬಾಯ್ಲ್ ಮಾಡಿದ್ದೇನು?
೨. ಈ ಜಮಾಲ್ ಮಲಿಕ್ ಎಂಬಾತನಿಗೆ ಅದ್ಭುತ ಜ್ಞಾಪಕಶಕ್ತಿ ಇದೆ. ಆತನ ’ಸ್ಲಂ ಶಾಲೆಯಲ್ಲಿ’ ಆತನಿಗೆ ಶಿಕ್ಷಕರು ’ಥ್ರೀ ಮಸ್ಕಿಟಿಯರ್ಸ್’ ನ ಹೀರೋಗಳ ಹೆಸರನ್ನು ಕಲಿಸಿದ್ದಾರೆ. ಭಾರತದ ಯಾವ ಸ್ಲಮ್ಮಿನ ಶಾಲೆಯಲ್ಲಿ ’ಥ್ರೀ ಮಸ್ಕಿಟಿಯರ್ಸ್’ ಬಗ್ಗೆ ಕಲಿಸುತ್ತಾರೆ? ಸರಿಯಪ್ಪ, ಈ ಶಾಲೆಯಲ್ಲಿ ಕಲಿಸುತ್ತಾರೆ. ’ಥ್ರೀ ಮಸ್ಕಿಟಿಯರ್ಸ್’ ಬಗ್ಗೆ ಕಲಿಸುವ ಶಾಲೆಯಲ್ಲಿ ಭಾರತದ ಸ್ಲೋಗನ್ ಆದ ’ಸತ್ಯಮೇವ ಜಯತೇ’ ಬಗ್ಗೆ ಕಲಿಸುವುದಿಲ್ಲವೆ?ಇನ್ನೊಂದು ಉದಾಹರಣೆ ಕೊಡುತ್ತೇನೆ. ಒಂದು ವೇಳೆ ಅಮೇರಿಕೆಯ ಒಂದು ಶಾಲೆಯಲ್ಲಿ ’ಶಿವಾಜಿ ಮಹಾರಾಜರ’ ಬಗ್ಗೆ ಕಲಿಸುತ್ತಾರೆ ಎಂದುಕೊಳ್ಳೋಣ. ಅಲ್ಲಿಯ ಮಕ್ಕಳಿಗೆ ಶಿವಾಜಿಯ ಬಗ್ಗೆ ಗೊತ್ತಿದೆ ಆದರೆ ’ಇನ್ ಗಾಡ್ ವೀ ಟ್ರಸ್ಟ್’ ಎಂದರೇನೆಂದೇ ಗೊತ್ತಿಲ್ಲ, ಎಂದರೆ, ಅದನ್ನು ನಂಬುತ್ತೀರಾ? ಅಥವಾ ಭಾರತದ ಸ್ಲೋಗನ್ ಆದ ’ಸತ್ಯಮೇವ ಜಯತೇ’ ಎಂಬುದು ಅಷ್ಟು ಬಲಹೀನವೇ?
೩. ಸ್ಲಂಡಾಗ್ ನ ಒಂದು ದೃಷ್ಯದಲ್ಲಿ ನೀವು ನೋಡಿರಬಹುದು, ಬಾಲಕನೊಬ್ಬ ರಾಮನ ಹಾಗೆ ಕೈಯಲ್ಲಿ ಬಿಲ್ಲು ಬಾಣ ಹಿಡಿದು ನಿಂತಿದ್ದಾನೆ. (ಅದನ್ನು ನೆನಪಿಸಿಕೊಂಡೇ ಜಮಾಲ್ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಕೊಡುತ್ತಾನೆ) ರಾಮನ ಹಲವಾರು ಫೋಟೋಗಳನ್ನು ನೀವೂ ನೋಡಿದ್ದೀರಿ. ಯಾವ ಫೋಟೋದಲ್ಲಿ ರಾಮ ಅಷ್ಟು ಭೀಭತ್ಸವಾಗಿ ಕಾಣುತ್ತಾನೆ? ರಾಮ ಎಂಬ ದೇವರ ಬಗ್ಗೆ ಗೊತ್ತೇ ಇಲ್ಲದ ವಿದೇಶೀಯರಿಗೆ ಈ ಸ್ಲಂಡಾಗ್ ತಂಡದವರು ಕೊಡುತ್ತಿರುವ ಸಂದೇಶ ಏನು? ರಾಮ ಎಂಬ ಒಬ್ಬ ರಾಕ್ಷಸರೂಪಿ ರಾಜನಿದ್ದ ಎಂದೇ? ಅಲ್ಲಾಹುವಿನ ಅಥವಾ ಜೀಸಸ್ ನ ಈ ರೀತಿಯ ರೂಪವನ್ನು ಪರದೆಯ ಮೇಲೆ ತೋರಿಸುವ ಧೈರ್ಯ ಡ್ಯಾನಿ ಬಾಯ್ಲ್ ಗೆ ಇದೆಯೇ? ನೋವಾಗುವುದು ಬರೀ ಮುಸಲ್ಮಾನರ ಅಥವಾ ಕ್ರಿಶ್ಚಿಯನ್ನರ ಹಕ್ಕೇ? ಅಲ್ಲದೇ ಪುಸ್ತಕದಲ್ಲಿ ಕ್ವಿಜ್ ಮಾಸ್ಟರ್ ’ಜೀಸಸ್’ ನ ಕ್ರಾಸ್ ಮೇಲೆ ಬರೆಯಲಾದ ಶಬ್ದಗಳು ಯಾವವು? ಎಂಬ ಪ್ರಶ್ನೆಯನ್ನು ಕೇಳಿದ್ದಾನೆ. ಆ ಪ್ರಶ್ನೆಯ ಬದಲಿಗೆ ನಮ್ಮ ರಾಮನ ಪ್ರಶ್ನೆಯನ್ನು ಸೇರಿಸಿರುವುದರ ಔಚಿತ್ಯವೇನು?
೪. ದಂಗೆ ಆದಾಗ, ವಿಶೇಷವಾಗಿ ಹಿಂದೂ-ಮುಸ್ಲಿಂ ದಂಗೆ ಆದಾಗ, ಎರಡೂ ಕಡೆಯ ಹೆಣ ಬೀಳುತ್ತವೆ. ಈ ಫಿಲ್ಮಿನಲ್ಲಿ ಹಾಗಾಗುವುದಿಲ್ಲವಲ್ಲ. ಇಲ್ಲಿ ಕೇವಲ ಹಿಂದೂಗಳೆಂಬ ಮಹಾನ್ ದುಷ್ಟರು ನಿಷ್ಪಾಪಿ ಮುಸಲ್ಮಾನರ ಕಗ್ಗೊಲೆ ಮಾಡುತ್ತಿದ್ದಾರೆ. ಹಿಂದೂಗಳೆಲ್ಲ ಅಷ್ಟು ದುಷ್ಟರೇ? ಅಥವಾ ಹಿಂದೂ ಸಂಸ್ಕೃತಿ ಎಂಬುದೇ ಹಿಂಸಾತ್ಮಕ ಸಂಸ್ಕೃತಿಯೇ? ಇದು ನಿಜವಾದ ಪರಿಸ್ಥಿತಿಯೇ? ಸಿನೆಮ್ಯಾಟಿಕ್ ಲಿಬರ್ಟಿಯ ಹೆಸರಲ್ಲಿ ಪಕ್ಷಪಾತ ಮಾಡುವುದು ಎಷ್ಟು ಸಮಂಜಸ? ಭಾರತದ ಎಂಬುದು ಅಫಘಾನಿಸ್ತಾನವೇ? ಗುಜರಾತ್ ಬಗ್ಗೆ ಮಾತಾಡುವವರು ಸೆಕ್ಯೂಲರ್ ಗಳು, ಕಾಶ್ಮೀರ್ ಪಂಡಿತರ ಬಗ್ಗೆ ಮಾತಾಡುವವರು ಸ್ಯೂಡೋ ಸೆಕ್ಯೂಲರ್ ಗಳಾ?
೫. ’ದರ್ಶನ್ ದೋ ಭಗವಾನ್ ನಾಥ ಮೋರಿ ಅಖಿಯಾ ಪ್ಯಾಸೀ ರೇ’ ಎಂದು ಹಾಡುವ ಎಷ್ಟು ಭಿಕ್ಷುಕರನ್ನು ನೋಡಿದ್ದಾರೆ ಲೇಖಕರು? ನಾನಂತೂ ಜೀವನದಲ್ಲಿ ಈ ಹಾಡನ್ನು ಹಾಡುವ ಒಬ್ಬನೇ ಒಬ್ಬ ಭಿಕ್ಷುಕನನ್ನು ನೋಡಿಲ್ಲ. ಹಿಂದೂಗಳು ಭಕ್ತಿಯಿಂದ ಹಾಡುವ ಈ ಹಾಡನ್ನು ಬಳಸಿಕೊಳ್ಳುವ ಅಗತ್ಯವೇನಿತ್ತು? ಸಾಮಾನ್ಯವಾಗಿ ಮುಂಬಯಿಯಲ್ಲಿ ಭಿಕ್ಷೆ ಬೇಡುವ ಮಕ್ಕಳು ’ಸಾಯಿ ಬಾಬಾ’ ಹಾಡನ್ನು ಹಾಡುತ್ತಾರೆ (ಸಾಯಿ ಬಾಬಾ, ಹಿಂದೂ ಮತ್ತು ಮುಸ್ಲಿಂ, ಎರಡೂ ಮತಗಳ ಜನರು ಪೂಜಿಸುವ ದೇವನಾಗಿರುವುದರಿಂದ ಅತ್ಯಂತ ಸೇಫ್ ಹಾಡು ಅದು) ಅಥವಾ ಯಾವುದೇ ಫಿಲ್ಮಿನ ಹಾಡು ಹಾಡುತ್ತಾರೆ. ಅಂಥದ್ದರಲ್ಲಿ ’ದರ್ಶನ್ ದೋ ಭಗವಾನ್’ ಎಂಬ ಕೃಷ್ಣನ ಹಾಡನ್ನು ಉಪಯೋಗಿಸಿರುವುದರ ಔಚಿತ್ಯವೇನು? ಅಷ್ಟು ಒಳ್ಳೆಯ ಫಿಲ್ಮನ್ನು ನಿರ್ಮಿಸಿದವರು, ಇನ್ನೂ ಚೂರು research ಮಾಡಬಹುದಿತ್ತಲ್ಲ.
೬. ಇವತ್ತು ಸ್ಲಂಡಾಗ್ ಬಗ್ಗೆ ಕೆಟ್ಟ ಅಭಿಪ್ರಾಯವನ್ನಿಟ್ಟ ಜನರ ಬಗ್ಗೆ ಇಷ್ಟೊಂದು ಅಸಹನೀಯತೆಯಿಂದ ಬರೆಯುವವರು, ತಸ್ಲೀಮಾ ನಸ್ರೀನ್ ಮೇಲೆ ಹಲ್ಲೆ ಮಾಡಿದವರನ್ನು ಖಂಡಿಸಿ ಎಷ್ಟು ಲೇಖನ ಬರೆದಿದ್ದಾರೆ? ದಾವೂದ್ ಅಬ್ರಹಾಂ ಮೇಲೆ ಫತ್ವಾ ಹೊರಡಿಸದ ಮುಲ್ಲಾಗಳ ಮೇಲೆ ಯಾವ ಲೇಖನ ಬರೆದಿದ್ದಾರೆ? ಸಲ್ಮಾನ್ ರಶ್ದೀಯನ್ನು ಕೊಲ್ಲಹೊರಟ ಮತಾಂಧರನ್ನು ಖಂಡಿಸಿ ಯಾವ ಲೇಖನ ಬರೆದಿದ್ದಾರೆ?
೭. ಸ್ಲಂ ’ಡಾಗ್’ ಎಂಬುದರ ಅರ್ಥವೇನು? ಝೋಪಡಿಗಳಲ್ಲಿರುವವರು ನಾಯಿಗಳೆಂದೇ? ಈ ಪ್ರಶ್ನೆ immature ಎಂದು ನಿಮಗನಿಸಿದಲ್ಲಿ ಕ್ಷಮಿಸಿ. ಆದರೆ ಚಿತ್ರ ನಿರ್ಮಾಪಕರು ಚೂರು Maturity ತೋರಿಸಿ, ಬೇರೆಯೇ, ಚೆಂದಾದ ಹೆಸರಿಡಬಾರದಿತ್ತೆ?
೮. ಲೇಖನದ ಕೊನೆಯಲ್ಲಿ ಹೇಳಲಾದ ಮಾತನ್ನು ಒಪ್ಪುತ್ತೇನೆ. ಕೊಳಚೆಗೇರಿಯದ್ದು ಒಂದು ದೊಡ್ಡ ಸಮಸ್ಯೆಯೇ. ಆದರೆ ಅದು ನಮ್ಮ ದೇಶದ ಸಮಸ್ಯೆ. ನಮ್ಮ ಸಮಸ್ಯೆ. ಅದನ್ನು ವಿದೇಶೀಯರಿಗೆ ತೋರಿಸಿ, ಡ್ಯಾನಿ ಬಾಯ್ಲ್ ಭಾರತದ ಬಡತನ ನಿರ್ಮೂಲನೆಗೆ ಹೊರಟಿದ್ದಾನಾ? ಬ್ರಿಟನ್ನಿನಲ್ಲಿ ಸ್ಲಮ್ಮುಗಳಿಲ್ಲವೇ? ಇಷ್ಟೆಲ್ಲ Adapt ಮಾಡಿಕೊಂಡವರು, ತಮ್ಮ ದೇಶದ ಸ್ಲಮ್ಮಿನ ಕತೆಯೆಂದೇ ತೋರಿಸಬಹುದಿತ್ತಲ್ಲ. ಭಾರತವೇ ಬೇಕಿತ್ತೆ? ಅಥವಾ ಜಗತ್ತಿನಾದ್ಯಂತ ಸ್ಲಮ್ಮುಗಳಿರುವ ದೇಶ ಕೇವಲ ಭಾರತ ಮಾತ್ರವೇ?
ಲೇಖಕರು ಹೇಳುವ ಹಾಗೆ ’ಅಫ್ಜಾಲ್ ಗುರು ಬದಲು ಆತನ ಹೆಸರು ಆನಂದ ಅಥವಾ ಮೋಹನ ಎಂದಿದ್ದರೆ ಆತನನ್ನು ನೇಣಿಗೆ ಹಾಕಲಾಗಿರುತ್ತಿತ್ತು’ ಎಂದು ಹೇಳಿದ ಅಡ್ವಾಣಿಯವರ ಮಾತು ಅಸಹ್ಯವೇ. ಆದರೆ ಅಂಥ ಕೊಲೆಗಾರನೊಬ್ಬನನ್ನು, ಅಪರಾಧ ಸಾಬೀತಾಗಿರುವಾಗಲೂ ಇನ್ನೂ ಜೀವಂತವಾಗಿರಿಸಿ, Minority appeasement ಗಾಗಿ ಕಾಂಗ್ರೆಸ್ ಮಾಡುತ್ತಿರುವ ಕೆಲಸ ಅಸಹ್ಯವಲ್ಲ, ಹೇಯ. ಅಡ್ವಾಣಿ ಎಂಬ ಮನುಷ್ಯ ರಾಷ್ಟ್ರ ನಾಯಕನಾಗಿಬಿಟ್ಟರೆ, ಭಾರತದ ಸಮಸ್ತ ಯುವಕರ ಮನಸ್ಸಿನಲ್ಲಿ ಕೋಮುವಾದದ ವಿಷ ತುಂಬಿಹೋಗುತ್ತದೋ ಇಲ್ಲವೋ, ಖಚಿತವಾಗಿ ಹೇಳಲಾರೆ. ಆದರೆ ಈ ಕಾಂಗ್ರೆಸ್ಸಿನ ನಿರ್ವೀರ್ಯ ನಾಯಕರು ನಮ್ಮನ್ನಾಳುತ್ತಿದ್ದರೆ, ಖಂಡಿತ ಒಂದು ದಿನ ಸೋಮಾಲಿಯಾದ ಮೂಲಭೂತವಾದಿ ಯುವಕರೂ ಬಂದು, ಕಂಡಕಂಡಲ್ಲಿ ಬಾಂಬು ಎಸೆದು, ನಿಷ್ಪಾಪಿಗಳನ್ನು ಗುಂಡಿಗೆ ಬಲಿಯಾಗಿಸಿ, ನಗು ನಗುತ್ತ ಹೊರಟುಹೋಗುತ್ತಾರೆ ಎಂಬುದು ಅಷ್ಟೇ ಸತ್ಯ. ಮತ್ತೆ ನಾವು ಮಾತ್ರ, ಹೀಗೇ ಇರುತ್ತೇವೆ.
ಧನ್ಯವಾದಗಳು.
ಉ: ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ
ಅವಿನಾಶ್,
ನಾನು ಸ್ಲಮ್‌ಡಾಗ್ ಚಿತ್ರವನ್ನು ಎಲ್ಲೂ ಶ್ರೇಷ್ಠ ಚಿತ್ರ ಎಂದಾಗಲಿ, ಕುಂದೇ ಇಲ್ಲದ ಕಲಾಕೃತಿಯಿಂದಾಗಲಿ ಹೇಳಿಲ್ಲ. ಅದೊಂದು ಆಶಾವಾದದ, ಜೀವನಪ್ರೀತಿಯ, ಒಳ್ಳೆಯ ಚಿತ್ರ ಎಂದಿದ್ದೇನೆ. ಈ ಲೇಖನದಲ್ಲಿ ನಾನು ಚರ್ಚಿಸಿರುವುದು ಕೇವಲ ಎರಡು ವಿಷಯಗಳು. ಒಂದು, ಈ ಚಿತ್ರ ಸರಿ ಇಲ್ಲ, ಭಾರತದ ಮಾನ ಕಳೆಯುತ್ತದೆ ಎನ್ನುವವರು ಯಾರು ಮತ್ತು ಅವರ ಮನಸ್ಥಿತಿ ಎಂತಹುದು? ಎರಡನೆಯದು, ಈ ಚಿತ್ರದಿಂದ ನಾವು ಸ್ವೀಕರಿಸಬಹುದಾದ ಸಾಮಾಜಿಕ ಸಂದೇಶ ಏನು ಎನ್ನುವುದು.
ಹಾಗೆ ನೋಡಿದರೆ ನಾನು ಈ ಚಿತ್ರವನ್ನು ಎಲ್ಲೂ ವಿಮರ್ಶೆ ಮಾಡಿಲ್ಲ. ಹಾಗೆ ನೋಡಿದರೆ, ಹಲವಾರು ಅವಾಸ್ತವ ಅಥವ ಅಸಹಜ ಎನ್ನಬಹುದಾದ ದೃಶ್ಯಗಳು ಈ ಚಿತ್ರದಲ್ಲಿದೆ (ಹಾಗೆಯೆ ಸಾಂಕೇತಿಕವಾಗಿ ಮತ್ತು ನೇರವಾಗಿ ಕಾಣಬಹುದಾದ ಭೀಕರ ವಾಸ್ತವದ ದೃಶ್ಯಗಳೂ ಇವೆ.). ಅದನ್ನು ಇಲ್ಲಿ ಪಟ್ಟಿ ಮಾಡಲು ಹೋಗಲಾರೆ. ಆದರೆ, ನೀವು ಮೂಲಕತೆಯ ಹಾಗೆ ಚಿತ್ರ ಇಲ್ಲ ಎಂದಿದ್ದಕ್ಕೆ ಸ್ವಲ್ಪ ಚರ್ಚೆ ಮಾಡುವುದು ಒಳ್ಳೆಯದು. ಒಂದು ಕೃತಿಯನ್ನು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ರೂಪಾಂತರಿಸುವಾಗ (ಕತೆಕಾದಂಬರಿ->ನಾಟಕ/ಟಿವಿ/ಸಿನೆಮಾ) ಒಬ್ಬ ಸೃಜನಶೀಲ ವ್ಯಕ್ತಿ ಮೂಲಕ್ಕಿಂತ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಎಷ್ಟೋ ಶ್ರೇಷ್ಠ ಕತೆಕಾದಂಬರಿಗಳು ಸಿನೆಮಾ ಆಗಿ ಸೋತಿರುವುದು, ಈ ಬದಲಾವಣೆ ಅತಿ ಎನ್ನುವಷ್ಟು ಆದಾಗ, ಅಥವ ತಾವು ಮಾಡುತ್ತಿರುವ ಮಾಧ್ಯಮಕ್ಕೆ ಒಪ್ಪುವಂತೆ ಏನನ್ನೂ ಬದಲಾಯಿಸದೆ ಹೋದಾಗ. ಇದರ ಜೊತೆಗೆ ಸಮಕಾಲೀನ ವಾಸ್ತವಕ್ಕೆ ಹೊಂದಿಸಿಕೊಳ್ಳುವ ಹಾಗೆಯೂ, ಅಥವ ನಿರ್ದೇಶಕನ ವೈಯಕ್ತಿಕ ನೀತಿ-ಬದ್ಧತೆಯಿಂದಾಗಿ ಒಂದಷ್ಟು ಸಂದೇಶಗಳನ್ನು ಕೊಡುವ ಬಗ್ಗೆಯೂ ಒತ್ತಡ ಇರಬಹುದು. ಇವೆಲ್ಲ ಅವರವರ ಸ್ವಾತಂತ್ರ್ಯ ಮತ್ತು ಮನಸ್ಥಿತಿಯ ನೆಲೆಯಲ್ಲಿ ನಡೆಯುವಂತಹುದು. ಇಲ್ಲಿ ನೀವು ಅದನ್ನು ಪ್ರಶ್ನೆ ಮಾಡುವುದು ವಾದದ ದೃಷ್ಟಿಯಿಂದ ಹೌದಲ್ಲವೆ ಎನ್ನಿಸಬಹುದಾದರೂ ಅದಕ್ಕೆ ಬೇರೆ ಇನ್ಯಾವ ತೂಕವೂ ಇರುವುದಿಲ್ಲ.
ಇನ್ನು, ನಿಮ್ಮ ಆರನೆ ಪಾಯಿಂಟ್ ಬಗ್ಗೆ ಹೇಳಬಹುದಾದರೆ, ಅದೊಂದು ಪುರಾತನ ಆಪಾದನೆ. ನೀವು ಯಾರು ಏನನ್ನು ಹೇಳಿಲ್ಲ ಎಂದುಕೊಂಡಿದ್ದೀರೊ ಅವರು ಅದನ್ನು ಹೇಳಿದ್ದರೂ ನೀವು ಗಮನಿಸಿರುವುದಿಲ್ಲ ಅಥವ ಅವರ ಒಟ್ಟಾರೆ ಧ್ವನಿ ಯಾವುದರ ವಿರುದ್ಧ ಇದೆ ಎನ್ನುವುದನ್ನು ನೋಡಿರುವುದಿಲ್ಲ. ಇದು ತಕ್ಷಣಕ್ಕೆ ವಾದಗೆಲ್ಲುವ ಮತ್ತು ಸಾಕ್ಷ್ಯ ಕೇಳುವ ಮಾತೆ ಹೊರತು ಇದಕ್ಕೂ ಸಹ ಅದಕ್ಕಿಂತ ಮಿಗಿಲಾದ ತೂಕ ಇಲ್ಲ.
ಇನ್ನು, ಪಾರ್ಲಿಮೆಂಟ್ ದಾಳಿಯ ಬಗ್ಗೆ ಹೇಳುವುದಾದರೆ, ಆತನಿಗೆ ಗಲ್ಲು ಘೋಷಣೆಯಾದ ಕೆಲವೆ ದಿನಗಳಲ್ಲಿ ಪ್ರಜಾವಾಣಿಯಲ್ಲಿ ಲೇಖನವೊಂದು ಬಂದಿತ್ತು. ಅದರ ಸಾರಾಂಶ, ಯಾರನ್ನೆ ಆಗಲಿ ಗಲ್ಲಿಗೆ ಹಾಕುವ ಪ್ರಕ್ರಿಯೆ ಭಾರತದಲ್ಲಿ ಬಹಳ ದೊಡ್ಡದು ಮತ್ತು ಅಫ್ಜಲ್‍ನನ್ನು ಕೂಡಲೆ ಗಲ್ಲಿಗೆ ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು. ಯಾರೆ ಅಧಿಕಾರದಲ್ಲಿದ್ದರೂ ಅದು ಆಗುತ್ತಿದ್ದದ್ದು ಹಾಗೆಯೆ ಎನ್ನುವುದನ್ನು ಕೆಲವರು ಬೇಗ ಅರ್ಥ ಮಾಡಿಕೊಂಡಷ್ಟು ಅವರಲ್ಲಿ ಒಂದಷ್ಟು ದ್ವೇಷದ ಅಂಶ ಕಡಿಮೆಯಾಗಬಹುದು. ಹಾಗೆಯೆ, ಯಾರನ್ನೆ ಆಗಲಿ ರಾತ್ರೋರಾತ್ರಿ ಪ್ರಾಣತೆಗೆಯುವಂತಹ ಸರ್ಕಾರಿ-ಕಾನೂನು ವ್ಯವಸ್ಥೆ ನಮ್ಮದಲ್ಲ ಎಂಬ ಬಗ್ಗೆ ನಾವು ಹೆಮ್ಮೆ ಪಡಬೇಕು. ಇವತ್ತು ಅಪರಾಧಿಯನ್ನು ಒಂದೆರಡು ಮೇಲ್ಮನವಿ ಇಲ್ಲದೆ ಗಲ್ಲಿಗೆ ಹಾಕುವ ಹಾಗಾದರೆ, ಅಪರಾಧಿಯಾಗಿಲ್ಲದ ಆದರೆ ಅಪರಾಧಿ ಎಂದು (ಸರ್ಕಾರದಿಂದ) ನಿರೂಪಿತರಾದ ಮುಗ್ಧರು ದಿನಂಪ್ರತಿದಿನ ಗಲ್ಲಿಗೆ ಹಾಕಲ್ಪಡುತ್ತಾರೆ. ಅಪರಾಧಿಯನ್ನು ನಿರಪರಾಧಿ ಎಂದು ನಿರೂಪಿಸುವುದು ಎಷ್ಟು ಕಷ್ಟವೊ, ನಮ್ಮಲ್ಲಿ ಅದಕ್ಕಿಂತ ಕಮ್ಮಿ ಕಷ್ಟದ್ದು ನಿರಪರಾಧಿಗಳನ್ನು ಅಪರಾಧಿ ಎಂದು ನಿರೂಪಿಸುವುದು. ಹಾಗೆಯೆ, ಆರೋಪಿ ಮೇಲ್ನೋಟಕ್ಕೆ ಎಷ್ಟೇ ಭೀಕರನಾಗಿದ್ದರೂ ಅವನ ಪರವೂ ಮಾತನಾಡುವ ವಕೀಲವ್ಯವಸ್ಥೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದನ್ನು ಯಾಕೆ ಮತ್ತು ಯಾಕೆ ಎಂದು ಇಲ್ಲಿ ನಾನು ವಿವರಿಸಲು ಹೋಗುವುದಿಲ್ಲ. ಈ ನನ್ನ ಕೆಳಗಿನ ಲೇಖನದಲ್ಲಿ ಸ್ವಲ್ಪಮಟ್ಟಿಗೆ ಬರೆದಿದ್ದೇನೆ. ಆದರೆ ಅದೂ ಸಹ ಅಪೂರ್ಣವೆ.
http://www.ravikrish...
ಇಲ್ಲಿ ನೀವು ಎತ್ತಿರುವ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸುವುದು ಸೂಕ್ತ ಎನ್ನಿಸಿದ್ದರಿಂದ ಇಷ್ಟೆಲ್ಲ ಹೇಳಿದ್ದೇನೆ.
ನಮಸ್ಕಾರ,
ರವಿ...
ಉ: ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ
ರವಿ..
ನಾನು ಎತ್ತಿರುವ ಒಂದೆರಡು ಪ್ರಶ್ನೆಗಳಿಗಾದರೂ ಉತ್ತರಿಸುವುದು ನಿಮಗೆ ಸೂಕ್ತ ಅನಿಸಿದೆ. ನನ್ನ ಪುಣ್ಯ. ಧನ್ಯವಾದಗಳು.
ಕಷ್ಟಕರವಾದ ಪ್ರಶ್ನೆಗಳಿಗೆ ಉತ್ತರ ಕೊಡುವುದು ಅಸಾಧ್ಯವೆಂದಾದಾಗ, ಆ ಪ್ರಶ್ನೆಗಳು ತೂಕವಿಲ್ಲದ್ದು ಎಂಬ ಹಾರಿಕೆಯ ಉತ್ತರ ಕೊಟ್ಟು, ಕೈ ತೊಳೆದುಕೊಳ್ಳುವುದು, ಅಥವಾ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂಥ ಉತ್ತರ ಕೊಡುವುದು, ಮೊದಲಿಂದಲೂ ವಿದೇಶದಲ್ಲಿರುವ ಸಿರಿವಂತ ಎನ್ ಆರ್ ಐ ಗಳ ಹಾಗೂ ಭಾರತದ Elitist ಗಳ ಪುರಾತನ ಚಾಳಿ. ನಿಮ್ಮ ಲೇಖನವನ್ನೂ ಹಾಗೂ ನಂತರದ ಪ್ರತಿಕ್ರಿಯೆಯನ್ನೂ ನೋಡಿದಾಗ, ನೀವೂ ಈ ಮಾತಿಗೆ ಹೊರತಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಹೌದು, ನೀವು ಚಿತ್ರದ ವಿಮರ್ಶೆ ಖಂಡಿತ ಮಾಡಿಲ್ಲ. ಆದರೆ ಅದನ್ನು ವಿಮರ್ಶಿಸುತ್ತಿರುವವರ ಮನಸ್ಥಿತಿಯನ್ನು, ನಿಮ್ಮ ಪರಿಧಿಯಲ್ಲಿ ವಿಮರ್ಶಿಸುವ, Analyse ಮಾಡುವ Arrogant ಪ್ರಯತ್ನ ಮಾಡಿದ್ದೀರಿ. ಬಹುಶ: ನಿಮ್ಮ ಪರಿಧಿಯನ್ನು ಇನ್ನೂ ವಿಸ್ತರಿಸಿಕೊಳ್ಳುವ ಅವಶ್ಯಕತೆ ನಿಮಗೆ ಖಂಡಿತ ಇದೆ.
ಖಂಡಿತ ಚರ್ಚಿಸಿ. ಆದರೆ ನಿಮ್ಮದೇ ಆದ judgement ಕೊಡಬೇಡಿ. ಸ್ಲಂಡಾಗ್ ಚಿತ್ರ ಯಾರಿಗೆ ಇಷ್ಟವಾಗುವುದಿಲ್ಲವೋ, ಅಥವಾ ಆ ಚಿತ್ರದ ಬಗ್ಗೆ ಯಾರು ಆಕ್ಷೇಪಣೆಗಳನ್ನು ಎತ್ತುತ್ತಾರೋ, ಅವರೆಲ್ಲ ರೋಗಗ್ರಸ್ತ ಮನಸ್ಸಿನವರು, ಕೀಳರಿಮೆಯಿಂದ ನರಳುತ್ತಿರುವ ಅಹಂಕಾರಿಗಳು ಎಂಬಂಥ ಅಸಹ್ಯಕರ, Horrendously Arrogant statement ನೀಡುವ ಯಾವುದೇ ನೈತಿಕ ಹಕ್ಕು ನಿಮಗಿಲ್ಲ. ನಮಗೆ ಈ ಚಿತ್ರ ಇಷ್ಟವಾಗುವುದಿಲ್ಲ ಸ್ವಾಮಿ. ಆದ್ರೆ ನಾವೂ ನಿಮ್ಮಷ್ಟೇ Progressive ವಿಚಾರವನ್ನಿಟ್ಟುಕೊಂಡವರೇ. ನಮ್ಮ ಮನೆಯ ಸಮಸ್ಯೆಗಳನ್ನು ವಿದೇಶೀಯರಿಗೆ ತೋರಿಸಿ, ಆ ಮೂಲಕ ಹಣ ಮಾಡಿಕೊಳ್ಳಲು ಬಯಸುವವರ ವಿರುದ್ಧ ನಾವು ಚೂರು ಮಾತಾಡಿದ ಮಾತ್ರಕ್ಕೆ ನಾವು regressive ಜನ, ಮಧ್ಯಕಾಲೀನ ಯುಗಕ್ಕೆ ಹೋಗಬಯಸುವ ಜನ ಎಂಬ ಅತ್ಯಂತ ಬಾಲಿಶ ವಾಕ್ಯಗಳನ್ನು ಬರಿಯುತ್ತೀರಲ್ಲ, ನೀವು ನಿಜಕ್ಕೂ ನಿರಹಂಕಾರಿಗಳೇ?
ನಾನೂ ಒಬ್ಬ ನಟನಾಗಿರುವುದರಿಂದ, ನನಗೂ Artistic/ creative ಸ್ವಾತಂತ್ರ್ಯದ ಬಗ್ಗೆ ಚೂರು ತಿಳಿದಿದೆ ಎಂದುಕೊಳ್ಳುತ್ತಿದ್ದೇನೆ. ವಿಕಾಸ್ ಸ್ವರೂಪರ ಪುಸ್ತಕವನ್ನು, ಡ್ಯಾನಿ ಬಾಯ್ಲ್ ತನಗೆ ಬೇಕಾದ ರೀತಿಯಲ್ಲಿ Adapt ಮಾಡಿಕೊಂಡಿರುವುದರಲ್ಲಿ ನನಗೇನೂ ಸಮಸ್ಯೆ ಇಲ್ಲ. ಆದರೆ ನಿರ್ದೇಶಕನು ಅತ್ಯಂತ ಅಸಹಜ ಅನಿಸುವ, ಒಂದು ಧರ್ಮದವರನ್ನು ದುಷ್ಟರೆಂದು ನೇರಾನೇರವಾಗಿ ಬಿಂಬಿಸುವ ದೃಷ್ಯಗಳನ್ನು ಅನಗತ್ಯವಾಗಿ ಅಳವಡಿಸಿಕೊಂಡಾಗ, ಆಕ್ಷೇಪಣೆಗಳನ್ನು ಎತ್ತಲೇಬೇಕಾಗುತ್ತದೆ. ಆತನ intent ನ್ನು ಪ್ರಶ್ನೆ ಮಾಡಬೇಕಾಗುತ್ತದೆ. ನಿಮಗದು ಅರ್ಥವೂ ಆಗಲಿಕ್ಕಿಲ್ಲ ಬಿಡಿ. ಏಕೆಂದರೆ, ಇದೇ ಚಿತ್ರವನ್ನು ಭಾರತೀಯ ನಿರ್ದೇಶಕನೊಬ್ಬ ಮಾಡಿದ್ದರೆ, ನೀವು ಅದನ್ನೂ ಮೂಸುತ್ತಲೂ ಇರಲಿಲ್ಲ. ನಮ್ಮಲ್ಲಿರುವ ಹುಳುಕುಗಳನ್ನು, ವಿದೇಶೀಯನೊಬ್ಬ ತೋರಿಸಿದಾಗಲೇ ನಿಮಗೆ ವಿಕೃತ ಆನಂದ ಸಿಗುತ್ತದೆ.
ಜೀವನಪ್ರೀತಿಯ, ಆಶಾವಾದದ ಚಿತ್ರಗಳೇ ಬೇಕಿದ್ದರೆ,’ಕಭಿ ಖುಷಿ ಕಭೀ ಗಂ’ ಚಿತ್ರ ನೋಡಿ ಸಾರ್, ಕನಿಷ್ಟಪಕ್ಷ ಅದರಲ್ಲಿ ಯಾವುದೇ ಧರ್ಮದವರನ್ನು ತೆಗಳುವ, ಅನಗತ್ಯ ದೃಷ್ಯಗಳು ಇಲ್ಲ.
ಭಾರತದಲ್ಲಿ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸುವ ಪ್ರಕ್ರಿಯೆ ಬಹಳ ದೊಡ್ಡದು ಎಂಬುದು ನಿಜವೇ. ಆದರೆ, ಇಲ್ಲಿ ನಾವು ಮಾತನಾಡುತ್ತಿರುವುದು ರೇಪ್ ಮಾಡಿದ, ಕಗ್ಗೊಲೆ ಮಾಡಿದ ಕೊಲೆಗಾರನೊಬ್ಬನ ಬಗ್ಗೆ ಅಲ್ಲ. ನಮ್ಮ ದೇಶದ ವಿರುದ್ಧ ನೇರವಾಗಿ ಯುದ್ಧಕ್ಕಿಳಿದ ವ್ಯಕ್ತಿಯೊಬ್ಬನ ಬಗ್ಗೆ. ಆತನಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಆದಷ್ಟು ಬೇಗ ನೀಡಿ, ದೇಶದ್ರೋಹಿಗಳಿಗೆ ಒಂದು ಸಂದೇಶವನ್ನು ಕಳುಹಿಸುವುದು ಸರಕಾರದ ಜವಾಬ್ದಾರಿ. ಅಪರಾಧಿ-ನಿರಪರಾಧಿ ಎಂಬ ವಾದಗಳಲ್ಲಿಯೇ ನಮ್ಮ ದಿನಗಳು ಕಳೆದುಹೋಗುತ್ತವೆ. ಮತ್ತೊಂದು ದಿನ, ಪಾಕಿಸ್ತಾನದ ಉಗ್ರರು ನಮ್ಮ ವಿಮಾನವನ್ನು ಅಪಹರಿಸಿ ಆ ಅಫ್ಜಾಲ್ ಗುರುವನ್ನು ಕರೆದುಕೊಂಡು ಹೋಗುತ್ತಾರೆ. ನಿಮ್ಮಂಥವರಿಗೆ ಆಗ ಸಂತಸವಾಗುತ್ತದೆ. ಭಾರತದಲ್ಲಿ ಮುಗ್ಧ ಜನರನ್ನು ಯಾವಾಗೆಂದರೆ ಆವಾಗ ಸುಲಭವಾಗಿ ಕೊಂದು ಬಚಾವಾಗಿ ಹೋಗಬಹುದು ಎಂಬ confidence ಖಂಡಿತ ಭಯೋತ್ಪಾದಕರಲ್ಲಿ ಹುಟ್ಟುತ್ತದೆ. ಇನ್ನಷ್ಟು ನಿರಪರಾಧಿಗಳು ಸುಮ್ಮನೇ ಸಾಯುತ್ತಾರೆ. ನಿಮ್ಮಂಥ ಸೆಕ್ಯೂಲರ್ ಗಳು ಮಾತ್ರ, ಹೀಗೆ ಸಾರಾಸಗಟಾಗಿ ಕೊಲೆ ಮಾಡಿದವರಿಗೆ ಕಾನೂನಿನ ರಕ್ಷಣೆ- ಸಹಾಯ ಸಿಗಬೇಕೆಂದು ವಾದಿಸುತ್ತೀರಿ. ಸತ್ತವರಲ್ಲಿ ನಿಮ್ಮವರು ಯಾರೂ ಇರುವುದಿಲ್ಲವಲ್ಲ. ನೀವಿದ್ದೀರಿ ಅಮೇರಿಕೆಯಲ್ಲಿ.
ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಗೆ ನಿಮ್ಮ ಲೇಖನ ಯೋಗ್ಯವಲ್ಲ ಎಂಬ ಕಟು ಅಭಿಪ್ರಾಯ ನನ್ನಲ್ಲಿ ಸುಳಿಯುತ್ತಿದೆ. ಧನ್ಯವಾದಗಳು.
ಉ: ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ
ಅವಿನಾಶ್,
"ತೂಕವಿಲ್ಲದ್ದು" ಎನ್ನುವುದು ಹೇಗೆ ಹಾರಿಕೆಯ ಉತ್ತರವಾಗುತ್ತದೆ? ನೀವು ಎತ್ತಿರುವ ಪ್ರಶ್ನೆ ನನಗೆ ಇಲ್ಲಿಯ ಚರ್ಚೆಯ ದೃಷ್ಟಿಯಿಂದ ಮಹತ್ವದ್ದಲ್ಲ ಎನ್ನಿಸಿದ್ದಕ್ಕೆ ಅದು ತೂಕವಿಲ್ಲದ್ದು ಎಂದು ಹೇಳಿದರೆ ಅದು ಹೇಗೆ ಹಾರಿಕೆಯಾಗುತ್ತದೆ? ನಿಮ್ಮ ದೃಷ್ಟಿಯಿಂದ ಅದು ಹೇಗೆ ಮಹತ್ವದ್ದು ಎಂದು ವಿವರಿಸಿ. ಆಗಲಾದರೂ ನನಗೆ ಮಹತ್ವದ್ದು ಎನ್ನಿಸಿದರೆ ಉತ್ತರಿಸುತ್ತೇನೆ. ಹಾರಿಕೆ ಉತ್ತರ ನೀಡುವ ಉದ್ದೇಶ ಇಲ್ಲ. ಎಲ್ಲದರ ಆಳಕ್ಕೆ ಇಳಿಯೋಣ.
ಇನ್ನು ನನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಸಲಹೆ ಬಗ್ಗೆ: ಅದೇ ಪ್ರಯತ್ನದಲ್ಲಿ ನಾನಿದ್ದೇನೆ. ಇನ್ನೂ ವಿಸ್ತರಿಸಿಕೊಳ್ಳುವ ಮತ್ತು ವಿಸ್ತರಿಸಿಕೊಳ್ಳಬೇಕಾದ ಅಗತ್ಯ ಗೊತ್ತಿದೆ. ಇಲ್ಲಿಯ ನನ್ನ ಮಾತುಗಳು ನನ್ನ ಇವತ್ತಿನ ವಿಸ್ತಾರದಿಂದ ಬಂದಿರುವಂತಹವು. ಅದರಲ್ಲಿ ಮುಚ್ಚಿಡುವುದು ಅಥವ ನಿರಾಕರಿಸುವುದು ಏನೂ ಇಲ್ಲ.
ನಾನು ನಿರಹಂಕಾರಿ ಅಲ್ಲ. ಒಮ್ಮೊಮ್ಮೆ ನಾನು ಒಂದಷ್ಟು ವಿಚಾರದಲ್ಲಿ ಅಹಂಕಾರಿ ಅಥವ ಸಹನೆ ಇಲ್ಲದವನು ಎನ್ನಿಸುತ್ತದೆ. ಅಷ್ಟು ಮಟ್ಟಿನ ಧಾರ್ಷ್ಟ್ಯ/ಅಸಹನೆ ತೋರದಿದ್ದರೆ ಏನನ್ನೂ ಹೇಳಲಾಗುವುದಿಲ್ಲ. ಹಾಗಾಗಿ, ನಾನು ನಿರಹಂಕಾರಿ ಅಲ್ಲ ಎಂದಷ್ಟೆ ಹೇಳಬಲ್ಲೆ. ಆದರೆ, ನಾನು ನಿರಹಂಕಾರಿ ಎಂದು ಯಾವಾಗ ಘೋಷಿಸಿಕೊಂಡಿದ್ದೇನೆ?
ಅಂದ ಹಾಗೆ, ನಿಮ್ಮ Progressive ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆ. ಸ್ವಲ್ಪ ತಿಳಿಸಿಕೊಡಿ.
ನಾನು ಅಮೆರಿಕದಲ್ಲಿದ್ದರೂ ನನ್ನವರು ಮತ್ತು ನೀವು ಅಲ್ಲಿದ್ದೀರ. ನನ್ನವರ ಬಗ್ಗೆ ಯೋಚಿಸುವುದು, ಸಮಯ ಬಂದಾಗ ಅವರ ಹಕ್ಕುಗಳ ಬಗ್ಗೆ ಮತ್ತು ರಕ್ಷಣೆಯ ಬಗ್ಗೆ ಮಾತನಾಡುವುದು, ಕೆಲಸ ಮಾಡುವುದು ನನ್ನ ಜವಾಬ್ದಾರಿ. ನಮ್ಮ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ನೀವು ಹೇಳಬಹುದು. ನಾಳೆ ನಾನು ನೇರವಾಗಿ ಜವಾಬ್ದಾರನಾಗಬೇಕಾದವರೆ ಅದನ್ನು ಹೇಳಬಹುದು. ಆದರೂ, ಆ ಮಾತನ್ನು ನಿರಾಕರಿಸಿ ಮಾತನಾಡುತ್ತಿರುವುದು, ಕೆಲಸ ಮಾಡುತ್ತಿರುವುದು ನನ್ನ ಕರ್ತವ್ಯ. ಯಾರೊ ಅವಸರದಲ್ಲಿ, ಕೋಪದಲ್ಲಿ, ಸಿಟ್ಟಿನ ಸಮಯದಲ್ಲಿ ಹೇಳಿದ ಮಾತ್ರಕ್ಕೆ ಬಿಟ್ಟುಬಿಟ್ಟರೆ, ಅಲ್ಲಿ ಬದ್ಧತೆ ಎಲ್ಲಿ ಬಂತು? (ಮತ್ತೊಮ್ಮೆ ಗಿಡಿಯೆನ್ ನೆನಪಾಗುತ್ತಾನೆ. ಆತನ ಹೋರಾಟ ಆತನೊಬ್ಬನಿಗೇ ಒಳ್ಳೆಯದು ಮಾಡಲಿಲ್ಲ.)
---"ಅನಗತ್ಯವಾಗಿ ಅಳವಡಿಸಿಕೊಂಡಾಗ, ಆಕ್ಷೇಪಣೆಗಳನ್ನು ಎತ್ತಲೇಬೇಕಾಗುತ್ತದೆ."
ನಿಮ್ಮ ಆಕ್ಷೇಪಗಳು ಕೇವಲ ಒಂದೇ ವಿಷಯದ ಬಗ್ಗೆ (ಅಂದರೆ ಭಾರತದ ಮಾನ ಹೋಗುತ್ತಿದೆ) ಇದೆಯಲ್ಲ ಅದೆ ಇಲ್ಲಿನ ಸಮಸ್ಯೆ. ನೀವು ಭಾವನಾತ್ಮಕವಾದ ವಲಯದಿಂದ ಆಚೆಗೆ ಕ್ರಿಯಾತ್ಮಕ ವಲಯದತ್ತ ಹೋಗುತ್ತಿಲ್ಲ. ಅದನ್ನೆ ಗಾಂಧಿ ಹೇಳಿದ್ದು. ""ಮದರ್ ಇಂಡಿಯಾ" ಮೋರಿ ಪರಿಶೀಲಕನೊಬ್ಬನ ವರದಿ ಆಗಿದ್ದರೂ ನಾವದರಿಂದ ಒಂದಷ್ಟು ಕಲಿಯಬೇಕು. ನಮ್ಮ ಸಮಾಜದೂಷಣೆಗೆ ಕಾರಣವಾದ ವಿಷಯಗಳನ್ನು ನಿವಾರಿಸಿಕೊಳ್ಳಬೇಕು." ಟೀಕೆ ಮಾಡುವವರನ್ನು ನಿವಾರಿಸಿಕೊಂಡರೆ ಸಮಸ್ಯೆ ನಿವಾರಣೆ ಆಗುವುದಿಲ್ಲ.
ನನ್ನ ಲೇಖನದ ಯೋಗ್ಯತೆಯ ಬಗ್ಗೆ ನನಗೆ ಅಂತಹ ಒಲವಾಗಲಿ, ಭಯವಾಗಲಿ ಇಲ್ಲ. ನಿಮ್ಮ ಕಟು ಅಭಿಪ್ರಾಯವನ್ನು ನೀವು ಇನ್ನೂ ಹಂಚಿಕೊಳ್ಳಬಹುದು. ಅದರಿಂದ ವಿಷಯ ಮಾತ್ರ ತೆಗೆದುಕೊಳ್ಳುತ್ತೇನೆ.
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಸ್ಲಂ ಡಾಗ್ ಗೆ ಆಸ್ಕರ್ ಬಂದದ್ದು ತಮಗೇ ಎಂದು ಕುಣಿಯುತ್ತಿರುವವರು ಕೂಡ ಕಾಂಗ್ರೆಸ್ ಸಮರ್ಥಕರು ಎಂದು ಒಂದು ಷರಾ ಬರೆದುಬಿಟ್ಟರೆ ಸರಿಹೋಗುತ್ತದೆಯೆ? ಹೇಗೂ ಸ್ಲಂಗಳೂ ೬೦ ವರ್ಷಗಳ ಕಾಂಗ್ರಸ್ ಆಡಳಿತ ಕೊಡುಗೆಯೆ ಅಲ್ಲವೆ?
ಆಸ್ಕರ್ ಪ್ರಶಸ್ತಿಯ ಪೂರ್ಣ ಲಾಭ ಸಿಗಬೇಕಾದದ್ದು ಕಾಂಗ್ರೆಸ್ ಗೆ ಅಲ್ಲವೆ ಎಂದರೆ ನಿಮಗೆ ಕಣ್ಣುರಿಯಬಹುದು. ಗಾಜಿನ ಮನೆಯಲ್ಲಿ ನೀಂತವರು ಹೆಂಚಿನ ಮನೆಗೆ ಕಲ್ಲು ಹೊಡೆಯಬಾರದು ಎನ್ನುವ ಸೂಕ್ಷವೂ ನಿಮಗೆ ಮರೆತು ಹೋಯಿತೆ?
ರವಿಕೃಷ್ಣ ರವರೆ, ನೀವು ಚಿತ್ರ ನೋಡುವುದಕ್ಕೆ ಮುಂಚೆಯೆ ಈ ಚಿತ್ರದ ಬಗ್ಗೆ ಈಗಾಗಲೆ ಒಮ್ಮೆ ನಿಮ್ಮ ಅಭಿಪ್ರಾಯ ಬರೆದಿದ್ದಿರಿ. ಮತ್ತು ಈ ಲೇಖನ. ನೋಡುವುದಕ್ಕೆ ಮುಂಚೆಯೆ ವಿಮರ್ಷೆ, ನೀವೆಷ್ಟು ಪೂರ್ವಗ್ರಹ ಪೀಡಿತರು ಎಂಬುದನ್ನು ಎತ್ತಿ ಹಿಡಿಯುತ್ತದೆ. ಅದಕ್ಕೆ ದಾಖಲೆಗಳು ಸಾಕ್ಷಿಗಳು ಬೇಡ ಅಲ್ಲವೆ. ಭಾಜಪ ವನ್ನು ವಿರೋಧಿಸಲು ಬೇಕಾದಷ್ಟು ವಿಷಯಗಳಿವೆ. ಅದನ್ನು ಬಿಟ್ಟು ಅಪ್ಪಟ ರಾಷ್ಟ್ರೀಯತೆಯ ವಿಷಯವನ್ನು ಭಾಜಪದ ಸರಕಾಗಿಸಿ ಪರೋಕ್ಷವಾಗಿ ಆ ಪಕ್ಷಕ್ಕೆ ಕೆಲಸಮಾಡಬೇಡಿ. ಇದು ಆರೋಪವಲ್ಲ ವಿನಯ ಪೂರ್ವಕ ಸಲಹೆ.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಪ್ರಸ್ಕ,
ಯಾಕೊ ಇವತ್ತು ಸಂವಾದಕ್ಕೆ ಬೀಳಬೇಕು ಎಂದು ಮನಸಾಗಿದೆ!
ಸ್ಲಮ್‍ಡಾಗ್‌ಗೆ ಆಸ್ಕರ್ ಬಂದದ್ದಕ್ಕೆ ಕುಣಿಯುತ್ತಿರುವವರು ಕಾಂಗ್ರೆಸ್ ಸಮರ್ಥಕರು ಎನ್ನುವುದಕ್ಕಿಂತ ಭಾಜಪ ಸಿದ್ಧಾಂತದ ಬಗ್ಗೆ ಒಲವಿಲ್ಲದವರು ಅಥವ ಸಕಾರಾತ್ಮಕವಾಗಿಲ್ಲದವರು ಎನ್ನಬಹುದು. ಈ ರಾಜಕೀಯ, ಕೋಮುವಾದ, ರಾಷ್ಟ್ರೀಯತೆ, ಇತ್ಯಾದಿ, ಏನೂ ಗೊತ್ತಿಲ್ಲದವರೂ ಸಹ ಅದಕ್ಕೆ ಸಂತೋಷಪಟ್ಟಿರುವ ಸಾಧ್ಯತೆ ಇದೆ. ಇನ್ನು, ಭಾಜಪದಲ್ಲಿಯೇ ಭಾಜಪದ ಎಲ್ಲಾ ಸಿದ್ಧಾಂತವನ್ನು ಅಪ್ಪಿಕೊಳ್ಳದೆ, ಕೆಲವು ಭೇದಗಳನ್ನು ಇಟ್ಟುಕೊಂಡು ಇರುವವರೂ ಸಹ ಅದನ್ನು ಮೆಚ್ಚಿಕೊಂಡಿರಬಹುದು. ಹಾಗೆಯೆ ಭಾಜಪದ ಸಿದ್ಧಾಂತ ಇಷ್ಟಪಡದ ಕೆಲವರು ಸ್ಲಮ್‍ಡಾಗ್ ಅನ್ನು ಮೆಚ್ಚಿಕೊಳ್ಳದೆ ಇರಬಹುದು. ಹೀಗೆ ಇನ್ನೂ ಕೆಲವೊಂದಷ್ಟು ವಿವರಣೆ ಕೊಡಬಹುದು. ಆದರೆ, ನಾನು ಆಗಲೂ ಕೊನೆಗೆ ಬಂದು ನಿಲ್ಲುವ ಸ್ಥಾನ, 'ಆ ಚಿತ್ರವನ್ನು ವಿರೋಧಿಸುವವವರು ಹೆಚ್ಚಿನ ಪಾಲು ಕೋಮುವಾದದ ಸುಳಿಗೆ ಸಿಲುಕಿದವರು.' ಅವರೇ ಯಾಕೆ ಎನ್ನುವುದಕ್ಕೆ ಒಂದಷ್ಟು ಅಂಶಗಳನ್ನು ಈ ಲೇಖನದಲ್ಲಿ ಬರೆದಿದ್ದೇನೆ.
ಇನ್ನು, ನಾನು ಆ ಚಿತ್ರ ನೋಡುವುದಕ್ಕೆ ಮುಂಚೆಯೇ ಆ ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದೇನೆ ಎಂದಿದ್ದೀರ. ಏನ್ ಸುಳ್ಳುಸುಳ್ಳೆ ಹೇಳುತ್ತೀರ್ರಿ ನೀವು? ನಾನು ಮಾಮೂಲಿಯಂತೆ ಇದನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಮೇಲೆ ಹೇಳಿದಂತೆ ಇವತ್ತು ಯಾಕೊ ಮನಸ್ಸಾಗಿದೆ! ಮೇಲಿನ ಕಾಮೆಂಟ್‌ನಲ್ಲಿ ಈಗಾಗಲೆ ಬರೆದಿದ್ದೇನೆ, ನಾನು ಈ ಚಿತ್ರದ ವಿಮರ್ಶೆ ಮಾಡುತ್ತಿಲ್ಲ, ಅಂತ. ಹಾಗೆಯೆ ನೀವು ನಾನು ವಿಮರ್ಶೆ ಮಾಡಿದ್ದೇನೆ ಎಂದು ಹೇಳುವ ಹಿಂದಿನ ಲೇಖನದಲ್ಲೂ (http://sampada.net/b...) ಸ್ಪಷ್ಟವಾಗಿ 'ನಾನು ಈ ಯಾವ ಚಿತ್ರಗಳನ್ನೂ ನೋಡಿಲ್ಲ' ಎಂದು ಬರೆದಿದ್ದೇನೆ. ಇನ್ನು ಅದರಲ್ಲಿ ವಿಮರ್ಶೆ ಬರೆಯಲು ಹೇಗೆ ಸಾಧ್ಯ. ಅದರಲ್ಲಿ ನಾನು ಬರೆದಿರುವುದು ಆ ಚಿತ್ರವನ್ನು ಇಷ್ಟಪಟ್ಟ (ನಿಮ್ಮಂತಹವರನ್ನು ಹೊರತಾದ) ವೀಕ್ಷಕರು ಆ ಚಿತ್ರದಲ್ಲಿ ಕಂಡ ಜೀವನಪ್ರೀತಿ ಮತ್ತು ಜೀವನದ ಬಗೆಗಿನ ಆಶಾವಾದದ ಬಗ್ಗೆ. ದಯವಿಟ್ಟು ಸುಳ್ಳುಸುಳ್ಳು ಹೇಳಬೇಡಿ. ನಿಮ್ಮಂತಹವರು/ನನ್ನಂತಹವರು ಹೇಳುವ ಸುಳ್ಳನ್ನು ಅಥವ ಸುಳ್ಳುಸಾಕ್ಷಿಗಳನ್ನು ಪರೀಕ್ಷಿಸಿಕೊಳ್ಳದೆ ನಂಬುವ ಜನ ಇದ್ದಾರೆ. ಅವರ ಬಗ್ಗೆ ಪ್ರೀತಿ, ಅನುಕಂಪ, ಕರುಣೆ ಇಟ್ಟುಕೊಳ್ಳೋಣ. (ಯಾಕೆ ಎನ್ನುತ್ತೀರಾ? ಮತ್ತೊಮ್ಮೆ ಗಿಡಿಯೆನ್ನನ ಕಹಳೆ ಲೇಖನ ಓದಿ. ಸುಳ್ಳುಸಾಕ್ಷಿಯನ್ನು ನಂಬಿದ ಜ್ಯೂರಿಗಳು ಅವನನ್ನು ಜೈಲಿಗೆ ಹಾಕಿದ್ದರು. http://www.ravikrish...)
ಇನ್ನು, ಕೋಮುವಾದಿ/ವಿಚ್ಛಿದ್ರಕಾರಿ, ಪಿತೂರಿಕೋರರ ಪ್ರೇಮವಿಲ್ಲದ ಹುಸಿ-ರಾಷ್ಟ್ರೀಯತೆ ಸಿದ್ಧಾಂತವನ್ನು ವಿರೋಧಿಸುವುದಕ್ಕೆ ನನಗೆ ಸ್ಲಮ್‌ಡಾಗೇ ಆಗಬೇಕಿಲ್ಲ. ನೀವೆ ಹೇಳಿದಂತೆ ಅನೇಕ ವಿಷಯಗಳಿವೆ. ಅವನ್ನು ಈ ಮುಂಚೆ ಬಳಸಿಕೊಂಡೆಯೂ ಇದ್ದೇನೆ.
ಅಂದ ಹಾಗೆ, ನಿಮ್ಮ ಸಲಹೆ ವಿನಯ ಪೂರ್ವಕವಾಗಿ ಇಲ್ಲದಿದ್ದರೂ ನನಗೇನು ಬೇಸರವಿಲ್ಲ. ನಾನು ಹೇಳದೆ ಇರುವುದನ್ನು ಹೇಳಿದ್ದೇನೆ ಎನ್ನದಿದ್ದರೆ ಸಾಕು. ನೀವು ಬೇರೆಯವರಿಗೆ ಬರೆದಿರುವ ಇತರೆ ಕಾಮೆಂಟ್/ಸಲಹೆಗಳಲ್ಲೂ ಇಂತಹ ಹಸಿಹಸಿ ಸುಳ್ಳನ್ನೇ ಹೇಳಿದ್ದೀರಾದರೆ, ದಯವಿಟ್ಟು ಅವನ್ನು ಸರಿಪಡಿಸಿ. ಮುಂದಕ್ಕೆ ತಿದ್ದಿಕೊಳ್ಳಿ.
ನೀವು ಮುಂದಕ್ಕೆ ಇಲ್ಲಿ ಬರೆಯಬಹುದಾದ ಕಾಮೆಂಟುಗಳಿಗೆ ನಾನು ಉತ್ತರಿಸದೆ ಹೋಗಬಹುದು. ಅವಕ್ಕೆ ಉತ್ತರಿಸಲಾರದ ಹಾಗೆ ನೀವು ಪಾಯಿಂಟ್ ಹಾಕಿದ್ದೀರ, ಹಾಗಾಗಿ ಅವಕ್ಕೆ ಉತ್ತರಿಸುವ ಬೌದ್ಧಿಕ ಬಲವಿಲ್ಲದೆ ಉತ್ತರಿಸುತ್ತಿಲ್ಲ ಎಂದುಕೊಳ್ಳಬೇಡಿ. ಅದಕ್ಕೆ ಉತ್ತರಿಸುವ ಅಗತ್ಯತೆ, ನಿರ್ಲಕ್ಷ್ಯ, ಮುಖ್ಯ/ಅಮುಖ್ಯ, ಸಮಯ, ಇತ್ಯಾದಿಗಳು ಕಾರಣವಾಗಿರುತ್ತವೆ..
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
***ಯಾಕೊ ಇವತ್ತು ಸಂವಾದಕ್ಕೆ ಬೀಳಬೇಕು ಎಂದು ಮನಸಾಗಿದೆ!
ಮನ್ನಸ್ಸಾಗಿದೆ ಆದರೆ ಕೊನೆಯಲ್ಲಿ ಓಡಿಹೋಗುವ ಮನ್ನಸೂ ಇದೆ ;-) ಸಂವಾದಕ್ಕೆ ಇಳಿಯುವವರು ತಮ್ಮ ವಾದಕ್ಕೇ ಜೋತು ಬೀಳುವ ಅಪಾಯವಿರುತ್ತದೆ. ನಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ಮೊಲದ ಕಾಲನ್ನು ಮುರಿದಾದರೂ ಸಾಧಿಸುವುದು ನನಗೆ ಬೇಡ.
***ಸ್ಲಮ್‍ಡಾಗ್‌ಗೆ ಆಸ್ಕರ್ ಬಂದದ್ದಕ್ಕೆ ಕುಣಿಯುತ್ತಿರುವವರು ಕಾಂಗ್ರೆಸ್ ಸಮರ್ಥಕರು ಎನ್ನುವುದಕ್ಕಿಂತ ಭಾಜಪ ಸಿದ್ಧಾಂತದ ಬಗ್ಗೆ ಒಲವಿಲ್ಲದವರು ಅಥವ ಸಕಾರಾತ್ಮಕವಾಗಿಲ್ಲದವರು ಎನ್ನಬಹುದು.
ಸ್ಲಂ ಡಾಗ್ ವಿರೋಧಿಸುವವರು ಕೂಡಾ ಹೆತ್ತ ತಾಯಿಯನ್ನು ಬೆತ್ತಲೆ ತೋರಿಸುವವರ ಪರ ಎಂದು ಭಾವಿಸಬಹುದಲ್ಲವೆ?
***ಈ ರಾಜಕೀಯ, ಕೋಮುವಾದ, ರಾಷ್ಟ್ರೀಯತೆ, ಇತ್ಯಾದಿ, ಏನೂ ಗೊತ್ತಿಲ್ಲದವರೂ ಸಹ ಅದಕ್ಕೆ ಸಂತೋಷಪಟ್ಟಿರುವ ಸಾಧ್ಯತೆ ಇದೆ.
ಇಂತಹ ಮುಗ್ಧರನ್ನೆ ಅಲ್ಲವೇ ನಿಮ್ಮಂತವರು ದುರುಪಯೋಗಪಡಿಸಿಕೊಳ್ಳುವುದು.
***'ಆ ಚಿತ್ರವನ್ನು ವಿರೋಧಿಸುವವವರು ಹೆಚ್ಚಿನ ಪಾಲು ಕೋಮುವಾದದ ಸುಳಿಗೆ ಸಿಲುಕಿದವರು.' ಅವರೇ ಯಾಕೆ ಎನ್ನುವುದಕ್ಕೆ ಒಂದಷ್ಟು ಅಂಶಗಳನ್ನು ಈ ಲೇಖನದಲ್ಲಿ ಬರೆದಿದ್ದೇನೆ.
ಹಾಗೇ ನಾನೂ ಕೂಡಾ ಹೆತ್ತತಾಯಿಯನ್ನು ಬೆತ್ತಲೆ ತೋರಿಸಿದರು ಪರವಾಗಿಲ್ಲ ಪ್ರಶಸ್ತಿಯೆ ಮುಖ್ಯ ಎಂಬ ಡೋಂಗಿ ಜಾತ್ಯಾತೀತವಾದಿಗಳೆಮ್ದು ಷರಾ ಎಳೆದು ಬಿಟ್ಟಿಇದ್ದೇನೆ. ನಿಮ್ಮದೆ ಪ್ರೇರಣೆ ಅದಕ್ಕೆ.
***ಇನ್ನು, ನಾನು ಆ ಚಿತ್ರ ನೋಡುವುದಕ್ಕೆ ಮುಂಚೆಯೇ ಆ ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದೇನೆ ಎಂದಿದ್ದೀರ. ಏನ್ ಸುಳ್ಳುಸುಳ್ಳೆ ಹೇಳುತ್ತೀರ್ರಿ ನೀವು?
ಸುಳ್ಳು ಹೇಳುವುದರಲ್ಲಿ ಎಡಪ್ರಾಂಥೀಯರನ್ನು ;-) ಕಾಂಗ್ರೆಸ್ ನವರನ್ನು ಮೀರಿಸಲು ಮೀರ್ ಸಾದಕನಿಗೂ ಸಾಧ್ಯವಿಲ್ಲ ಬಿಡಿ.
***ನೀವು ಬೇರೆಯವರಿಗೆ ಬರೆದಿರುವ ಇತರೆ ಕಾಮೆಂಟ್/ಸಲಹೆಗಳಲ್ಲೂ ಇಂತಹ ಹಸಿಹಸಿ ಸುಳ್ಳನ್ನೇ ಹೇಳಿದ್ದೀರಾದರೆ, ದಯವಿಟ್ಟು ಅವನ್ನು ಸರಿಪಡಿಸಿ. ಮುಂದಕ್ಕೆ ತಿದ್ದಿಕೊಳ್ಳಿ.
ನಾನು ಬೇರೆಯವರಿಗೆ ಬರೆದ ಕಾಮೆಂಟ್ ಗಳು ಸಲಹೆಗಳು ನಿಮ್ಮ ವ್ಯಾಪ್ತಿ ಮತ್ತು ಕಲ್ಪನೆಯನ್ನು ಮೀರಿದ್ದು ಅದಕ್ಕೂ ನಿಮಗೂ ಸಂಭಂದವಿಲ್ಲ. ಅಕಸ್ಮಾತ್ ನೀವು ಅದನ್ನು ಹೇಳಬೇಕೆಂದಿದ್ದರೆ ಅಲ್ಲೇ ಹೇಳಿ ಇಲ್ಲಲ್ಲ. ಅಂತಹ ಸೌಜನ್ಯತೆ ತಮಗಿದೆಯೆಂದು ಭಾವಿಸಿದ್ದೇನೆ. ಅಷ್ಟು ಮಾತ್ರ ವಿವೇಕವಿದೆಯೆಂದು ಭಾವಿಸಲೆ?
ನೀವು ಮುಂದಕ್ಕೆ ಇಲ್ಲಿ ಬರೆಯಬಹುದಾದ ಕಾಮೆಂಟುಗಳಿಗೆ ನಾನು ಉತ್ತರಿಸದೆ ಹೋಗಬಹುದು. ಅವಕ್ಕೆ ಉತ್ತರಿಸಲಾರದ ಹಾಗೆ ನೀವು ಪಾಯಿಂಟ್ ಹಾಕಿದ್ದೀರ, ಹಾಗಾಗಿ ಅವಕ್ಕೆ ಉತ್ತರಿಸುವ ಬೌದ್ಧಿಕ ಬಲವಿಲ್ಲದೆ ಉತ್ತರಿಸುತ್ತಿಲ್ಲ ಎಂದುಕೊಳ್ಳಬೇಡಿ. ಅದಕ್ಕೆ ಉತ್ತರಿಸುವ ಅಗತ್ಯತೆ, ನಿರ್ಲಕ್ಷ್ಯ, ಮುಖ್ಯ/ಅಮುಖ್ಯ, ಸಮಯ, ಇತ್ಯಾದಿಗಳು ಕಾರಣವಾಗಿರುತ್ತವೆ
spit & run ಪಲಾಯನವಾದ ಎಡಪಂಥೀಯತೆಯ ಮತ್ತು ಸ'ಮಜಾ'ವಾದಿಗಳ ಹೆಗ್ಗುರುತು ಅದು ಅವರೆಲ್ಲ ಕಲಿತ ಮೊದಲ ಪಾಠವೆಂದು ಈಗ ಮನವರಿಕೆಯಾಗುತ್ತಿದೆ.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಸ್ಲಂ ಡಾಗ್ ವಿರೋಧಿಸುವವರು ಕೂಡಾ ಹೆತ್ತ ತಾಯಿಯನ್ನು ಬೆತ್ತಲೆ ತೋರಿಸುವವರ ಪರ ಎಂದು ಭಾವಿಸಬಹುದಲ್ಲವೆ?
ಸ್ಲಂ ಡಾಗ್ ಸಮರ್ಥಕರು ಕೂಡಾ ಹೆತ್ತ ತಾಯಿಯನ್ನು ಬೆತ್ತಲೆ ತೋರಿಸುವವರ ಪರ ಎಂದು ಭಾವಿಸಬಹುದಲ್ಲವೆ?
ತಿದ್ದುಪಡಿ
prasca ರ ಕಾಮೆಂಟ್ ಅನ್ನು ತೆಗೆಯಲಾಗಿದೆಯೆ?
ಈ ಕಾಮೆಂಟಿಗೆ ಪ್ರಸ್ಕರವರು ಉತ್ತರಿಸಿದ್ದನ್ನು ಓದಿದ ನೆನಪು. "ಮಟ್ಟ/ದೇಶ" ಹೀಗೆ ಏನೊ ಇದ್ದ ನೆನಪು. ಸ್ವಲ್ಪ ಸಮಯದ ನಂತರ ಉತ್ತರಿಸೋಣ ಎಂದು ಬೇರೆಯವಕ್ಕೆ ಉತ್ತರಿಸುತ್ತಿದ್ದೆ. ಈಗ ಹುಡುಕಿದರೂ ಸಿಗುತ್ತಿಲ್ಲ.
ಇದೆಲ್ಲ ನನ್ನ "ಭ್ರಮೆಯೆ?" ಅಥವ ಆ ಕಾಮೆಂಟನ್ನು ತೆಗೆದುಹಾಕಲಾಗಿದೆಯೆ? ಹಾಗೆ ಆಗಿದ್ದರೆ ಅದು ಅನಗತ್ಯ.
ತೆಗೆದು ಹಾಕಿದ್ದರೆ ದಯವಿಟ್ಟು ಅದನ್ನು ಪ್ರಸ್ಕರವರು ಇನ್ನೊಮ್ಮೆ ಪೋಸ್ಟ್ ಮಾಡಲು ಅಥವ ನಿರ್ವಾಹಕರು ಅದನ್ನು restore ಮಾಡಲು ಕೋರುತ್ತೇನೆ.
ಅವರು ಪೊಸ್ಟ್ ಮಾಡಿದ್ದು ನಿಜವೆ ಆಗಿದ್ದಲ್ಲಿ ಅದಕ್ಕೆ ಉತ್ತರಿಸುವ ಜವಾಬ್ದಾರಿ ನನ್ನದು.
ನಮಸ್ಕಾರ,
ರವಿ...
ಉ: prasca ರ ಕಾಮೆಂಟ್ ಅನ್ನು ತೆಗೆಯಲಾಗಿದೆಯೆ?
ಹೊಲಸು ತಿನ್ನುವ ದೇವರಿಗೆ ಹೆಂಡ ಕುಡಿಯುವ ಪೂಜಾರಿ ಎಂಬ ಗಾದೆ ಮಾತು ಹೇಳಿದ್ದೆ. ಬಹುಷಃ ಇದು ಆ ಪ್ರತಿಕ್ರಿಯೆಯಲ್ಲಿದ್ದ ಎಲ್ಲದರ ಹೂರಣ. ಇಷ್ಟು ಸಾಕು
ಉ: prasca ರ ಕಾಮೆಂಟ್ ಅನ್ನು ತೆಗೆಯಲಾಗಿದೆಯೆ?
ಪ್ರಸ್ಕ,
ನನಗೆ ಕೇವಲ ನಿಮ್ಮ "ಹೂರಣ" ಸಾಲದು. ಪೂರ್ತಿಯಾಗಿಯೆ ಬಡಿಸಿ. ನನಗೆ ಅಜೀರ್ಣ ಅಥವ ಅಪಥ್ಯವಾಗುತ್ತದೆ ಎನ್ನುವ ಕಾಳಜಿ ನಿಮಗೆ ಬೇಕಿಲ್ಲ. ತಟ್ಟೆ ತುಂಬ ಊಟ ಬಡಿಸಿ, ಮನುಷ್ಯ ತಿನ್ನಲು ಸಿದ್ಧನಾದ ಕೂಡಲೆ ತಕ್ಷಣ ಎಲ್ಲಾ ಎತ್ತಿಕೊಂಡು ಕೇವಲ ಹೂರಣ ಯಾಕೆ ಇಡುತ್ತೀರ?
ಇಷ್ಟೇ ಅಲ್ಲ. ಅದು ದೊಡ್ಡ ಕಾಮೆಂಟ್ ಆಗಿತ್ತು. ಅದನ್ನು ನೀವೆ ತೆಗೆದಿರಾ (ಅದು ಸಾಧ್ಯವೆ)? ಅಥವಾ ಬೇರೆಯವರು ತೆಗೆದರೆ? ಯಾಕಾಗಿ? ನನಗೆ ಗೊತ್ತಾಗುತ್ತಿಲ್ಲ. ನಿಮಗೆ ಉತ್ತರ ಗೊತ್ತಿದೆ. ದಯವಿಟ್ಟು ಉತ್ತರಿಸಿ.
ಅಂದ ಹಾಗೆ "ಹೊಲಸು ತಿನ್ನುವ ದೇವರೂ" ಇರುತ್ತಾರೆಯೆ? ಯಾವ ಊರಿನಲ್ಲಿ/ದೇಶದಲ್ಲಿ/ಮತದಲ್ಲಿ? ನನ್ನನ್ನು 'ಹೆಂಡ ಕುಡಿಯುವ ಪೂಜಾರಿ' ಎಂದಿರುವುದರಿಂದ ಹೇಳುತ್ತೇನೆ, ನಾನು ಮದ್ಯಪಾನಿ ಅಲ್ಲವೇ ಅಲ್ಲ. ಕುಡಿದೂ ಇಲ್ಲ, ಯಾವ ಹತ್ತಿರದ ಸ್ನೇಹಿತ/ಸಂಬಂಧಿಗೂ/ಯಾರಿಗೂ ನನ್ನ ದುಡ್ಡಿನಿಂದ ಕುಡಿಸಿಲ್ಲ. ಕುಡಿಸುವುದೂ ಇಲ್ಲ. ಅದು ನನ್ನ ಸಿದ್ಧಾಂತ.
ಈಗ ಮತ್ತೆ ಈ ಲೇಖನದ ಕುರಿತು ನಿಮ್ಮ ಮಾತುಗಳಿಗೆ ವಾಪಸು ಬರೋಣ. ನಿಮ್ಮ ಆಕ್ಷೇಪಣೆಯನ್ನು ನೇರವಾಗಿ ಬರೆಯಿರಿ. ಚರ್ಚಿಸೋಣ. ಚಾಟ್ ಮಾಡುವ ಹಾಗೆ ಒಂದೆರಡು ಪದ ಅಥವ ವಾಕ್ಯ ಬೇಡ.
ನಮಸ್ಕಾರ,
ರವಿ...
ಉ: prasca ರ ಕಾಮೆಂಟ್ ಅನ್ನು ತೆಗೆಯಲಾಗಿದೆಯೆ?
ರವಿಕೃಷ್ಣ ಅವರೆ ಗಾದೆಯ ಮಾತುಗಳನ್ನು ನಿಮಗೇ ಅಂದದ್ದು ಎಂದು ಕಪೋಲ ಕಲ್ಪಿತವಾಗಿ ನಿಮಗೆ ಏನು ಬೇಕೊ ಅದನ್ನು ಕಲ್ಪಿಸಿಕೊಂಡು ಏಕೆ ವೃಥಾರೋಪ ಮಾಡುತ್ತಿದ್ದೀರಿ? ಕಾಮೆಂಟ್ ಡಿಲೀಟ್ ಮಾಡಲು ಸಾಧ್ಯವಿಲ್ಲ. ಅದು ನಿರ್ವಾಹಕರ ಕೆಲಸ. ಉಪಮೆಗಳು ಸ್ವಾಮಿ ಅವು.
ನಾನು ಹೇಳಿರದ ಪದಗಳನ್ನೆಲ್ಲ ಊಹಿಸಿಕೊಂಡು ಬೊಬ್ಬೆ ಹೊಡೆಯುವುದನ್ನು ದಯಮಾಡಿ ನಿಲ್ಲಿಸಿ.
ನಿನ್ನ್**ನ್ ಅಕ್ಕ್**ನ್ ಎಂಬ ಪದಗಳನ್ನು ನಾನು ಯಾರಿಗೂ ಇದುವರೆವಿಗೂ ಎಲ್ಲಿಯೂ ಬಳಸಿಲ್ಲ. ನನಗೆ ಬಳಸಿದವರಿಗೆ ಇನ್ನೆಂದೂ ಯಾರನ್ನು ಹಾಗೆ ಹೇಳದಂತೆ ಬುದ್ದಿಕಲಿಸಿದ್ದೇನೆ ಕೂಡಾ(ಅದಕ್ಕೆ ನಾನು ಅನುವರಿಸಿದ ಮಾರ್ಗ ಕೇಳಿದರೆ ದಂಗಾಗಿ ಹೋಗುತ್ತೀರಿ). ಅದನ್ನು ನೀವೆ ಕಲ್ಪಿಸಿಕೊಂಡು ಆ ಪದಗಳನ್ನು ಸಂಪದಕ್ಕೆ ಎಳೆತಂದ ಕೀರ್ತಿ ನಿಮಗೆ ಸಲ್ಲಲಿ. ಇದು ನಿರ್ವಾಹಕರ ಗಮನಕ್ಕೆ ಬರದಿದ್ದು ನನ್ನ ದುರಾದೃಷ್ಟ.
ಡೇವಿಡ್ ಫ್ರಾಲಿ ಹೇಳುತ್ತಾನೆ ಭಾರತೀಯರನ್ನು (ಹಿಂದೂಗಳನ್ನು) ವಾಗ್ವಾದದಲ್ಲಿ ಬುದ್ದಿಜೀವಿಗಳು ಒಂದು ಹಂತದವರೆಗೂ ಸಹಿಸಿಕೊಳ್ಳುತ್ತಾರೆ ನಂತರ ಅವರ ಮೇಲೆ ಆರೋಪ ಹೊರಿಸುತ್ತಾ' ಅಯ್ಯೊ ನಮ್ಮನ್ನು ಹಿಂಸಿಸಿದರು ಎಂದು ಬೊಬ್ಬೆ ಹೊಡೆಯುವ ತಂತ್ರ ಹೂಡುತ್ತಾರೆ. ಆಗ ಮೂಲತಃ ಹಿಂಸಾವಾದಿಗಳಲ್ಲದವರು ಆ ಆರೋಪದಿಮ್ದ ಹೆದರಿ ಹಿಂಜರಿಯುತ್ತಾರೆ ಎಂದು. ಅದೇ ತಂತ್ರವನ್ನು ನೀವು ಇಲ್ಲಿ ಅಳವಡಿಸಿಕೊಂಡಿದ್ದೀರಿ.
ನಾನು ಎಲ್ಲೂ ನಿಮ್ಮ ಬಗ್ಗೆಯಿರಲಿ ನನ್ನ ಶತ್ರುಗಳ ಬಗ್ಗೆಯೂ ಕೂಡ ಹಾಗೆ ಮಾತನಾಡುವುದಿಲ್ಲ. ನಿಮ್ಮ ವಾದಕ್ಕೊಂದು ನಮಸ್ಕಾರ ಡೇವಿಡ್ ಹೇಳಿಕೆಯಂತೆ ನಿಮ್ಮ ಮಿಥ್ಯಾರೋಪಗಳಿಗೆ ಹೆದರಿ ಖಂಡಿತ ಹಿಂದೆ ಸರಿಯುತ್ತಿದ್ದೇನೆ.
ನಮಸ್ಕಾರ.
"ಹುಲ್ಲುಕಡ್ಡಿ ಹಿಡಿದವರು" "ಖಡ್ಗ ಹಿಡಿದವರನ್ನು" ಹಿಂಸಿಸುತ್ತಿದ್ದಾರೆ ! ?
ಪ್ರಸ್ಕ,
--"ಹೊಲಸು ತಿನ್ನುವ ದೇವರಿಗೆ ಹೆಂಡ ಕುಡಿಯುವ ಪೂಜಾರಿ ಎಂಬ ಗಾದೆ ಮಾತು ಹೇಳಿದ್ದೆ. ಬಹುಷಃ ಇದು ಆ ಪ್ರತಿಕ್ರಿಯೆಯಲ್ಲಿದ್ದ ಎಲ್ಲದರ ಹೂರಣ"
ಹೀಗೆ ಹೇಳಿದ್ದೀರ ಮೊದಲ ಕಾಮೆಂಟ್‌ನಲ್ಲಿ. ಅದಕ್ಕೆ ನಾನು ಹೆಂಡ ಕುಡಿಯುವ ಪೂಜಾರಿಯೆ (ಅಥವ ಅದಕ್ಕೆ ಸಮವೆ) ಅಂದದ್ದಕ್ಕೆ:
--" ಗಾದೆಯ ಮಾತುಗಳನ್ನು ನಿಮಗೇ ಅಂದದ್ದು ಎಂದು ಕಪೋಲ ಕಲ್ಪಿತವಾಗಿ ನಿಮಗೆ ಏನು ಬೇಕೊ ಅದನ್ನು ಕಲ್ಪಿಸಿಕೊಂಡು ಏಕೆ ವೃಥಾರೋಪ ಮಾಡುತ್ತಿದ್ದೀರಿ?"
ಎನ್ನುತ್ತೀರ.
--"ದುಷ್ಟರನ್ನು ಶಿಕ್ಷಿಸಲು ಅತಿ ದುಷ್ಟರೆ ಬರಬೇಕಿದೆ."
ಇಲ್ಲಿ ನೀವು ನನ್ನನ್ನು ದುಷ್ಟ ಎಂದಿದ್ದೀರ ಎಂದು ನಾನು ಭಾವಿಸಿದರೆ ಅದು "ಕಪೋಲಕಲ್ಪಿತವೆ?" ಹಾಗಿದ್ದರೆ ಯಾರನ್ನು ಕುರಿತು "ದುಷ್ಟರು" ಎಂದಿದ್ದೀರ? ಮತ್ತೆ ಇಲ್ಲಿ "ಶಿಷ್ಟರು" ಯಾರು?
ದಯವಿಟ್ಟು ಮೇಲಿನ ಎರಡು ಹೇಳಿಕೆಗಳನ್ನು ನಾನು ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು?
ಇದರ ಜೊತೆಗೆ ನಾನು,
--" ಬೊಬ್ಬೆ ಹೊಡೆಯು"ತ್ತಿದ್ದೇನೆ.
--"ಇನ್ನೆಂದೂ ಯಾರನ್ನು ಹಾಗೆ ಹೇಳದಂತೆ ಬುದ್ದಿಕಲಿಸಿದ್ದೇನೆ ಕೂಡಾ(ಅದಕ್ಕೆ ನಾನು ಅನುವರಿಸಿದ ಮಾರ್ಗ ಕೇಳಿದರೆ ದಂಗಾಗಿ ಹೋಗುತ್ತೀರಿ)"
ಇದರಿಂದ ನಾನೇನಾದರೂ ತೆಗೆದುಕೊಳ್ಳುವ ಸಂದೇಶ ಇದೆಯೆ? ನೀವು ಅನುಸರಿಸಿದ ಮಾರ್ಗ ಶೌರ್ಯ-ಪರಾಕ್ರಮದ್ದೆ ಅಥವ ಬಾಯಿಮತಿನ ವಾಕ್ಸರಣಿಯೆ? ನಾನು ಈ ಕೂಡಲೆ ನನ್ನ ದೈಹಿಕ ಸುರಕ್ಷತೆಯ ಕಡೆ ಗಮನ ಕೊಡಬೇಕು ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿದ್ದೀರ?
--"ನಮ್ಮನ್ನು ಹಿಂಸಿಸಿದರು ಎಂದು ಬೊಬ್ಬೆ ಹೊಡೆಯುವ ತಂತ್ರ ಹೂಡುತ್ತಾರೆ"-"ಅದೇ ತಂತ್ರವನ್ನು ನೀವು ಇಲ್ಲಿ ಅಳವಡಿಸಿಕೊಂಡಿದ್ದೀರಿ"
ನೀವು ನನ್ನನ್ನು ಹಿಂಸಿಸುತ್ತಿದೀರ ಎಂದು ನಾನು ಯಾವಾಗ ಬೊಬ್ಬೆ ಹೊಡೆದೆ?
ಹಾಗಿದ್ದರೆ,
--"ಖಡ್ಗ ಹಿಡಿದು ಹೋರಾಟಕ್ಕೆ ನಿಂತವನ ಮುಂದೆ ಹುಲ್ಲುಕಡ್ಡಿ ಹಿರಿದು ನಿಂತು ಹೋರಾಡಲೆ?"
ನೀವು ನನ್ನನ್ನು ಹಿಂಸಿಸುತ್ತಿದ್ದೀರ ಎಂದು ನಾನು ಬೊಬ್ಬೆ ಹೊಡೆಯುತ್ತಿರುವಾಗ "ಖಡ್ಗ ಹಿಡಿದು ಹೋರಾಟಕ್ಕೆ ನಿಂತ" "ಅವನು" ನಾನಲ್ಲವೆ?
ಖಡ್ಗ ಹಿಡಿದ "ಅವನು" "ಹುಲ್ಲುಕಡ್ಡಿ ಹಿಡಿದವರು" ನನ್ನನ್ನು ಹಿಂಸಿಸುತ್ತಿದ್ದಾನೆ ಎನ್ನುತ್ತಿದ್ದಾನೆಯೆ? ಇನ್ನೆಂಥ ಧೂರ್ತನೂ, ದುಷ್ಟನೂ, ಆಗಿರಬೇಡ "ಅವನು"? ಏನು ಮಾಡೋಣ "ಅವನನ್ನು" ?
(ಇಲ್ಲಿ ನೀವು ನನ್ನನ್ನು ಏಕವಚನದಲ್ಲಿ ಕರೆದಿದ್ದೀರೆಂದು ನಾನು ಭಾವಿಸಿಲ್ಲ. ಹಾಗೆ ಕರೆದಿದ್ದರೂ ನಾನದನ್ನು ನಿರ್ಲಕ್ಷಿಸುತ್ತೇನೆ. ಆದರೆ, ನಿಮ್ಮ ಅಸಹನೆಯನ್ನು ಯಾವಯಾವ ರೀತಿ ಗುರುತಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ಇಲ್ಲಿ ಬಳಸಿಕೊಂಡಿದ್ದೇನೆ.)
--"ನಿಮ್ಮ ಮಿಥ್ಯಾರೋಪಗಳಿಗೆ ಹೆದರಿ ಖಂಡಿತ ಹಿಂದೆ ಸರಿಯುತ್ತಿದ್ದೇನೆ."
ಮಿಥ್ಯಾರೋಪಗಳು? ಯಾವವವು? ಮತ್ತೊಮ್ಮೆ ಮೇಲಿನ ನನ್ನ ಉತ್ತರ/ಪ್ರಶ್ನೆಗಳನ್ನು ನೋಡಿ.
ಅಂದ ಹಾಗೆ, ಸುಪ್ರೀತ್ ಎತ್ತಿದ ಕೆಲವು ಪ್ರಶ್ನೆಗಳಿಗೆ ನೀವು ಮತ್ತೆ ಪ್ರತಿಕ್ರಿಯಿಸಲು ಹೋಗಿಲ್ಲ. ಅದು ಇಲ್ಲಿನ ಚರ್ಚೆಗೆ ಬಹಳ ಮುಖ್ಯ. ದಯವಿಟ್ಟು ಅದಕ್ಕೆ ಉತ್ತರಿಸಿ. ಸುಪ್ರೀತರು ನಿಮಗೆ ಬರೆದ ಕಾಮೆಂಟನ್ನು ಇಲ್ಲಿ ಮತ್ತ್ರೆ ಕೊಡುತ್ತಿದ್ದೇನೆ:
"ವಾಸ್ತವವನ್ನು ತೋರಿರುವ ಸಿನೆಮಾದ ಬಗ್ಗೆ ತಾಯಿ/ಬೆತ್ತಲೆ ಎಂದೆಲ್ಲಾ ಎಳೆದು ತಂದಿರುವವರು ನೀವು. ಅದನ್ನು ಗೋಳಾಟದ ಸರಕನ್ನಾಗಿಸಿಕೊಂಡಿದ್ದೀರಿ.
ಹೋರಾಟ, ಹಾರಾಟದ ಮಾತೆಲ್ಲ ಯಾಕೋ ತಿಳಿದಿಲ್ಲ. ದುಷ್ಟರು ಯಾರು ಶಿಷ್ಟರು ಯಾರು ಎಂಬುದರ ಬಗ್ಗೆ ಆಗಲೇ ನೀವು ತೀರ್ಮಾನಿಸಿರುವಂತಿದೆ. ಇನ್ನು ಬೇರೆ ನೋಡುವ ಅವಶ್ಯಕತೆಯಿಲ್ಲ, ಯಾರ ಅರ್ಜಿಯನ್ನೂ ಪರಿಶೀಲಿಸುವ ವ್ಯವಧಾನವಿಲ್ಲ. ‘ಶಿಕ್ಷಿಸಿ’ ಎಂಬ ನನ್ನದಲ್ಲದ ಮಾತನ್ನು ನನ್ನಿಂದ ಹೊರಟಿದೆ ಎಂದು ಹೇಳಲು ನಿಮಗೆ ಮನಸ್ಸು ಒಪ್ಪಿದ್ದು ಏಕೆ?
ಪ್ರಚೋದನೆ, ಪ್ರತಿಕ್ರಿಯೆಗಳ ಬಗ್ಗೆ ನನಗೆ ರೇಜಿಗೆ ಹುಟ್ಟಿದೆ ಬಿಡಿ ಅದು ಸುಲಭಕ್ಕೆ ಪರಿಹಾರವಾಗುವಂಥದ್ದಲ್ಲ."
--"ಹೆದರಿ ಖಂಡಿತ ಹಿಂದೆ ಸರಿಯುತ್ತಿದ್ದೇನೆ."
ಬೇಡ. ನಿಮ್ಮನ್ನು ನಾನು "ಹಿಂಸಿಸುತ್ತಿಲ್ಲ." ಹಾಗೊಮ್ಮೆ ಹಿಂಸಿಸುತ್ತಿದ್ದರೂ, ನೀವು ಆ ಎಲ್ಲಾ ಮಿಥ್ಯಾರೋಪಗಳನ್ನು ಮತ್ತು ಹಿಂಸೆಯನ್ನು ಎದುರಿಸಿ ನಮಗೆ "ದಂಗಾಗುವಂತೆ" ಮಾಡಬೇಕು. ಭರತಭೂಮಿ ಮಿಥ್ಯಾರೋಪಗಳಿಗೆ ಮತ್ತು ಹಿಂಸೆಗೆ ಹೆದರುವವರಿಗೆ ಜನ್ಮ ನೀಡಿದೆಯೆ? ಹಾಗೆ ನೀಡಲು ಸಾಧ್ಯವೆ? ಎಂದಾದರೂ ನೀಡಿತ್ತೆ? ಅಕಟಕಟಾ!
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಈ ರೀತಿ ಬರೆಯುವುದಕ್ಕೆ ನಿಮಗೆ ಕನಿಷ್ಠ ಪಕ್ಷ ಮುಜುಗರವಾದರೂ ಆಗಲಿಲ್ಲವೇ ಸರ್?
ಇದೇ ಸಿನೆಮಾವನ್ನು, ಇದಕ್ಕಿಂತ ಹೆಚ್ಚು ವಾಸ್ತವವಾಂಶಗಳನ್ನು ಬಿಂಬಿಸಿ ಭಾರತೀಯರು ಸಿನೆಮಾಗಳನ್ನು ಮಾಡಿದ್ದಾರೆ. ಅದರ ಬಗ್ಗೆ ನಿಮಗೆ ಬೇಸರವಿಲ್ಲ ಅಂದರೆ - ನಿಮ್ಮದೇ ಧಾಟಿಯಲ್ಲಿ ಹೇಳುವುದಾದರೆ - ಹೆತ್ತ ತಾಯಿಯನ್ನು ನಮ್ಮವರು ಬೇಕಾದರೆ ಬೆತ್ತಲೆ ತೋರಬಹುದು ಎಂತಲೇ (ಈ ವಾಕ್ಯ ಬಳಸಲೂ ಹೇಸಿಗೆಯಾಗುತ್ತೆ!).
ಸ್ಲಮ್ಮುಗಳು, ಜಾತಿ ಕಲಹ, ಬಡತನ- ಸಿರಿತನದ ಅಂತರ, ಶೋಷಣೆ, ತುಳಿತ ಇವೆಲ್ಲಾ ಬೆತ್ತಲು ಎನ್ನುವವರು ಅದರ ಮೇಲೆ ಭ್ರಮೆಯ ಪೋಷಾಕು ಹೊದಿಸುವ ಕೆಲಸವನ್ನೇಕೆ ಮಾಡಬೇಕು? ಈ ಸಮಸ್ಯೆಗಳಿಂದ ಭಾರತ ದೇಶ ಬೆತ್ತಲಾಗಿ ಕಾಣುತ್ತಿದೆಯಲ್ಲವೇ? ಅದಕ್ಕೆ ಸುಧಾರಣೆಯಿಂದ, ಪ್ರಗತಿಯಿಂದ ಗೌರವಯುತವಾದ ತೊಡುಗೆ ತೊಡಿಸುವ ಬದಲು, ಅದನ್ನು ಬೆತ್ತಲಾಗಿ ಬಿಟ್ಟು, ಬೆತ್ತಲನ್ನು ತೋರಿಸಿದವರ ವಿರುದ್ಧ ಹರಿಹಾಯುವುದು ಎಷ್ಟರ ಮಟ್ಟಿಗೆ ಸಮಂಜಸ?
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಸಮಸ್ಯೆಯನ್ನು ಚೂರು ಇತ್ತ ಕಡೆಯಿಂದ ನೋಡಿ ಸುಪ್ರೀತ್.
ಭಾರತ ದೇಶದಲ್ಲಿ ಅನೇಕ ಸಮಸ್ಯೆಗಳಿವೆ ನಿಜ. ಎಲ್ಲ ದೇಶಗಳಲ್ಲೂ ಇರುತ್ತವೆ. ಅಭಿವೃದ್ಧಿಯ ಕೆಲಸವಾಗಬೇಕು. ಸ್ಲಮ್ಮುಗಳ ಜನರೂ ಗೌರವಾನ್ವಿತ ಬದುಕು ನಡೆಸುವಂತಾಗಬೇಕು. ಅದು ಒಂದು ರಾತ್ರಿಯಲ್ಲಿ ಆಗುವ ಕೆಲಸವಲ್ಲ. ವರ್ಷಾಂತರಗಳೇ ಬೇಕು.ಹೇಗಿದ್ದರೂ ಅದು ನಮ್ಮ ದೇಶದ ಆಂತರಿಕ ಸಮಸ್ಯೆ. ಪ್ರಶ್ನೆ ಭಾರತದಲ್ಲಿರುವ ಸಮಸ್ಯೆಗಳನ್ನು ತೋರಿಸುವುದರಲ್ಲಿಲ್ಲ. ಆದರೆ ವಿದೇಶೀಯನೊಬ್ಬ ಬಂದು, ಭಾರತದ ಸಮಸ್ಯೆಗಳನ್ನು ಅತಿಶಯೋಕ್ತಿಯೋಪಾಧಿಯಲ್ಲಿ ತೋರಿಸಿ, ಆ ಮೂಲಕ ತನ್ನ ಬ್ಯಾಂಕ್ ಬ್ಯಾಲನ್ಸ್ ಹೆಚ್ಚಿಸಿಕೊಳ್ಳುವುದರಲ್ಲಿದೆ. ಈ ರೀತಿಯ ಫಿಲ್ಮುಗಳಿಂದ ಭಾರತಕ್ಕೆ ಯಾವ ಪ್ರಕಾರದ ಲಾಭವಾದೀತು? ಎಂ.ಎನ್.ಸಿ ಕಂಪನಿಗಳ ನಿರ್ದೇಶಕರು, ಈ ಫಿಲ್ಮ್ ನೋಡಿ ರಾತ್ರೋರಾತ್ರಿ ಧಾರಾವಿಯಲ್ಲಿರುವವರ ನೆರವಿಗೆ ಧಾವಿಸಿ ಬರುತ್ತಾರಾ? ಇಲ್ಲ. ಭಾರತದ ಬಡತನದ ನಿರ್ಮೂಲನೆ ಸಾಧ್ಯವಾಗುತ್ತದಾ? ಇಲ್ಲ. ಹಾಗಿದ್ದರೆ ಈ ಫಿಲ್ಮಿನ ಲಾಭವಾದರೂ ಏನು?
ಲಾಭ ಏನೂ ಇಲ್ಲ ಅಂದಾಗ, ಯಾವ ಫಿಲ್ಮು ನಮಗೆ ಇಷ್ಟವಾಗುತ್ತೋ ಅದನ್ನು ಹೊಗಳುವ, ಇಷ್ಟವಾಗದಿದ್ದರೆ ತೆಗಳುವ ಕನಿಷ್ಟ ಹಕ್ಕೂ ನಮಗಿಲ್ಲವೇ? ನಾವು ಹಾಗೆ ಹೇಳಿದ ಮಾತ್ರಕ್ಕೆ, ಈ ಲೇಖನ ಬರೆದವರು ನಮ್ಮನ್ನು ’ರೋಗಗ್ರಸ್ತ ಮನಸ್ಸಿನವರು’ ಅನ್ನಬೇಕೆ? ಅದನ್ನು ಓದಿ ನಾವು ಸುಮ್ಮನಿರಬೇಕೇ?
ಹೋಗಲಿ, ಭಾರತೀಯ ನಿರ್ದೇಶಕನೊಬ್ಬ ಇಂಗ್ಲಂಡಿನ ಕೊಳಗೇರಿಗಳಿಗೆ ಹೋಗಿ, ಅಲ್ಲಿರುವ ಕ್ರಿಶ್ಚಿಯನ್ನರನ್ನು ನಿಂದಿಸುವಂಥ ಫಿಲ್ಮೊಂದನ್ನು ತಯಾರಿಸಿದರೆ, ಅಲ್ಲಿಯ ಜನ ಸುಮ್ಮನಿರುತ್ತಾರಾ?
Prasca ಬರೆದದ್ದು ತುಂಬ ತೀಕ್ಷ್ಣವಾಗಿದೆಯಾದರೂ, ಮನಸ್ಸಿಗೆ ನೋವಾದಾಗ ಇಂಥ ಪ್ರತಿಕ್ರಿಯೆಗಳು ಸಹಜವಲ್ಲವೆ?
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಹು, ಇಷ್ಟನ್ನು ಒಪ್ಪಿದರೆ ಅನೇಕ ಗೊಂದಲಗಳು ಪರಿಹಾರವಾಗುತ್ತದೆ. ನಮ್ಮಲ್ಲಿ ದೋಷವಿದೆ ಎಂಬ ಅರಿವು ಮೂಡಿದ ಕ್ಷಣದಲ್ಲೇ ಎಷ್ಟೋ ಹೊರೆ ಇಳಿದಂತೆ, ಸ್ನಾಯುಗಳು ಸಡಿಲವಾದಂತೆ ಆಗುತ್ತೆ.
ಕಲೆಗೆ ದೇಶ ಭಾಷೆಯ ಗಡಿಯ ಅಂತರವಿಲ್ಲ ಎಂದು ಕೇಳಿದ್ದೇನೆ. ಬಹುಶಃ ಆ ಮಾತೇ ಅತಿಶಯೋಕ್ತಿ ಇರಬೇಕೇನೋ.
ಭಾರತದ ಸಮಸ್ಯೆಯನ್ನು ‘ಅತಿಶಯೋಕ್ತಿಯೋಪಾಧಿಯಲ್ಲಿ’ ತೋರಿದ್ದಾರಾ? ಸಿನೆಮಾವನ್ನು ಅತ್ಯುಗ್ರವಾಗಿ ಖಂಡಿಸುವವರೂ ಸಹ ಈ ಆರೋಪ ಮಾಡಿದ್ದು ಕಂಡಿಲ್ಲ. ಅಂತಹ ಉಗ್ರ ಪ್ರತಾಪ ಸಿಂಹರೂ ಸಹ ಸಿನೆಮಾದಲ್ಲಿ ಅತಿಶಯೋಕ್ತಿಯಿಲ್ಲ ಎಂದು ಹೇಳಿದ್ದಾರೆ. ನಿಮಗೆ ಏನು ಅತಿಶಯೋಕ್ತಿ ಕಂಡಿದೆ?
ಹು, ಸಮಸ್ಯೆ ಇರುವುದು ಇಲ್ಲಿ.
ನಮ್ಮ ಬಡತನವನ್ನು ತೋರಿಸಿ ಸಿನೆಮಾ ಮಾಡಿ ಯಾರೋ ಪರದೇಶಿಯವ ದುಡ್ಡು ಮಾಡಿಕೊಂಡ. ಆ ಚಾಲಾಕಿತನದ ಬಗ್ಗೆ ನಮಗೆ ಸಹಜವಾಗಿ ಅಸೂಯೆಯಾಗಿದೆ. ನಮ್ಮ ಹಿತ್ತಿಲಲ್ಲೇ ಇದ್ದ ಗಿಡಮೂಲಿಕೆ ಕಿತ್ತು ತೆಗೆದುಕೊಂಡು ಹೋಗಿ ದೊಡ್ಡ ಹೆಸರು, ಹಣ ಮಾಡಿದವನ ಕಂಡು ಮೂಡುವ ಕರುಬುವಿಕೆ. ಇದಲ್ಲವೇ ನಮ್ಮ ಪ್ರಾಮಾಣಿಕ ಭಾವನೆ?
ಇಲ್ಲಿ ನನಗೆ ಡ್ಯಾನಿಯ ಕಾಳಜಿ, ಕಲೆಗಿಂತ ತಾಂತ್ರಿಕ ನಿಪುಣತೆ, ಚಾಲಾಕಿತನವೇ ಮೆಚ್ಚುಗೆಯಾಗುತ್ತೆ.
ಈ ತೋರಿಸಿ ಹಣ ಮಾಡುವ ಖಯಾಲಿ ಎಲ್ಲಾ ‘ಕಲೆ’ಯಲ್ಲೂ ಇದೆಯಲ್ಲವೇ? ಇದನ್ನು ಈ ಒಂದೇ ಸಿನೆಮಾದ ಸಂದರ್ಭದಲ್ಲಿ ಅತಿರಂಜಿತವಾಗಿ ಕಾಣುವುದು ಸಮಂಜಸ ಅನ್ನಿಸಲ್ಲ.
ಕಲಾವಿದರಾಗಿ ನೀವು ಈ ಮಾತನ್ನು ಹೇಳುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತೆ. ನಿಮ್ಮಲ್ಲಿನ ಕಲಾವಿದನಿಗೆ ಈ ಪ್ರಶ್ನೆ ಕೇಳಿ. ಆತ ಕಲಾಭಿವ್ಯಕ್ತಿಗಾಗಿ ಪಾತ್ರದಲ್ಲಿ ತಲ್ಲೀನನಾಗುವನೋ ಅಥವಾ ಅದರಿಂದ ಯಾರಿಗೇನು ಲಾಭ ಎನ್ನುವ ಲೆಕ್ಕಾಚಾರದಿಂದಲೋ? ಇದರ ಬಗ್ಗೆ ಹೆಚ್ಚು ಹೇಳಲು ನಾನು ಅಶಕ್ತ.
ಹೋಗಲಿ, ಭಾರತೀಯ ನಿರ್ದೇಶಕನೊಬ್ಬ ಇಂಗ್ಲಂಡಿನ ಕೊಳಗೇರಿಗಳಿಗೆ ಹೋಗಿ, ಅಲ್ಲಿರುವ ಕ್ರಿಶ್ಚಿಯನ್ನರನ್ನು ನಿಂದಿಸುವಂಥ ಫಿಲ್ಮೊಂದನ್ನು ತಯಾರಿಸಿದರೆ, ಅಲ್ಲಿಯ ಜನ ಸುಮ್ಮನಿರುತ್ತಾರಾ?
ರವಿಯವರು ಸಿನೆಮಾ ಇಷ್ಟ ಪಡದವರನ್ನು, ನೆಗೆಟೀವ್ ಆಗಿ ವಿಮರ್ಶಿಸಿದವರನ್ನು ಉದ್ದೇಶಿಸಿ ಆ ಮಾತುಗಳನ್ನು ಹೇಳಿಲ್ಲ ಎಂದು ನಾನು ಭಾವಿಸಿದ್ದೇನೆ. ಅವರ ಹಿಂದಿನ ಎಲ್ಲಾ ಲೇಖನಗಳನ್ನು ನೀವು ಓದಿದ್ದರೆ, ಅವರ ಚಿಂತನೆಯ ಧಾಟಿಯ ಪರಿಚಯವಿದ್ದರೆ, ಅವರ ಸೈದ್ಧಾಂತಿಕ ಬದ್ಧತೆಯ ಬಗ್ಗೆ ತಿಳಿದಿದ್ದರೆ ನೀವು ಹೀಗೆ ಭಾವಿಸುತ್ತಿರಲಿಲ್ಲ.
ಅವರು ದೋಷಗಳನ್ನು, ಹುಣ್ಣುಗಳನ್ನು ಬಿಸಿಲಿಗೆ ಒಡ್ಡುವ, ಆಮೂಲಕ ಅವಕ್ಕೆ ಪರಿಹಾರ ಕಾಣಲು ಬಯಸುವ ಎಲ್ಲಾ ಪ್ರಗತಿ ಪರ ಪ್ರಯತ್ನಗಳಿಗೆ ಅಡ್ಡಿಯುಂಟು ಮಾಡುವ ಪಟ್ಟ ಭದ್ರ ಮನಸ್ಸುಗಳನ್ನು ಕುರಿತು ಹಾಗೆ ಬರೆದಿರುವುದು. ಆದರೆ ಬರಹ ಏಕೋ ಅವಸರದಲ್ಲಿ ಮೂಡಿದಂತಿದೆ. ಹೀಗಾಗಿ ನನಗೂ ಆ ಸಾಲುಗಳು ಚೂರು ಗೊಂದಲ ಉಂಟು ಮಾಡಿದವು.
ಅಲ್ಲಿಯ ಜನ ಸುಮ್ಮನಿರುತ್ತಾರಾ ಅಂದಿದ್ದೀರಿ. ಅವರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನನ್ನ ಜನರು ಆ ರೀತಿಯ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನೇ ಪ್ರಶ್ನಿಸುವ, ನಿರ್ದೇಶಕ, ಚಿತ್ರಕಾರನ ಹಕ್ಕನ್ನೇ ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿಯಬಾರದು ಎಂಬ ಕಾಳಜಿಯಂತೂ ಇದೆ. ಕೆಟ್ಟ ಕಲಾಕೃತಿಗೆ ತಕ್ಕನಾದ ಉತ್ತರ ನೀಡಬೇಕಾದ್ದು ಉತ್ತಮವಾದ ಕಲಾಕೃತಿಯಿಂದ. ಕೆಟ್ಟ ಅಭಿವ್ಯಕ್ತಿಗೆ ಸದಭಿರುಚಿಯ ಅಭಿವ್ಯಕ್ತಿಯಿಂದ ಉತ್ತರಿಸಬೇಕು. ಅಭಿವ್ಯಕ್ತಿಯ ಹಕ್ಕನ್ನೇ ಕಿತ್ತುಕೊಳ್ಳುವುದರ ಮೂಲಕ ಅಲ್ಲ ಅನ್ನುವುದು ನನ್ನ ಗ್ರಹಿಕೆ.
ಆದರೆ ಈ ಪ್ರಶಸ್ತಿ, ಮಾರುಕಟ್ಟೆ ಲೆಕ್ಕಾಚಾರಗಳ ಬಗ್ಗೆ ನನಗೆ ರೇಜಿಗೆಯಿದೆ. ಸ್ಲಂ ಡಾಗಿಗೆ ಆಸ್ಕರ್ ಲಭ್ಯವಾಗಿರುವುದು ತೀರಾ ‘ಸೇಂಟ್ಲಿ ಕಾರಣ’ಗಳಿಗಲ್ಲ ಎನ್ನುವ ಗುಮಾನಿ ನನಗೂ ಇದೆ. ಮದರ್ ತೆರೆಸಾಗೆ ಪ್ರಚಾರ ಕೊಟ್ಟ ಹಾಗೆ ನಮ್ಮ ರಮಣರಿಗೆ, ರಾಮ ಕೃಷ್ಣ ಪರಮಹಂಸರಿಗೆ, ಆಮ್ಟೆಯವರಿಗೆ ಅಂತರಾಷ್ಟ್ರೀಯ ಮಾಧ್ಯಮ ಪ್ರಚಾರ ಕೊಡುವುದಿಲ್ಲ. ಇಲ್ಲಿ ಗ್ರಾಹಕರು, ಬಂಡವಾಳಶಾಹಿಗಳು, ಮಾರುಕಟ್ಟೆ ಸೂಕ್ಷ್ಮಗಳು ಅವುಗಳ ಹಿತಾಸಕ್ತಿ ಎಲ್ಲವೂ ಸೇರಿಕೊಂಡಿದೆ. ಹವೆಯಂತೂ ಶುದ್ಧವಾಗಿಲ್ಲ :)
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
"ಅಂತಹ ಉಗ್ರ ಪ್ರತಾಪ ಸಿಂಹರೂ ಸಹ ಸಿನೆಮಾದಲ್ಲಿ ಅತಿಶಯೋಕ್ತಿಯಿಲ್ಲ ಎಂದು ಹೇಳಿದ್ದಾರೆ"
ತಮ್ಮ ಹೇಳಿಕೆ ಸ್ವಲ್ಪ ವಿಸ್ತ್ರುತವಾಗಿ ಬರೆಯಿರಿ.. ಯಾವ ರೀತಿ ತಾವು ಪ್ರತಾಪಸಿಂಹರನ್ನು "ಉಗ್ರ" ಅಂತ ಹೇಳುತ್ತಾ ಇದ್ದೀರಿ ಅಂತ ಬರೆದರೆ ಮುಂದುವರೆಯಬಹುದು
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಅಷ್ಟುದ್ದದ ಪ್ರತಿಕ್ರಿಯೆಯಲ್ಲಿ ಬೇಕೆಂತಲೇ ಒಂದು ನುಣುಪಾದ, ಹರಿತವಲ್ಲದ, ನಿರುಪದ್ರವಕಾರಿಯಾದ ಕಲ್ಲು ಇಟ್ಟಿದ್ದೆ ;)
ಕೆಲವರು ತಮ್ಮ ವಿಚಾರವನ್ನು ವ್ಯಕ್ತ ಪಡಿಸುವುದರಲ್ಲಿ ಸೌಮ್ಯರಾಗಿರುತ್ತಾರೆ. ಉದಾಹರಣೆಗೆ ಜೋಗಿ, ಜಯಂತ್ ಕಾಯ್ಕಿಣಿ, ವಿಶ್ವೇಶ್ವರ ಭಟ್ಟರು ಹೀಗೆ. ಇನ್ನು ಕೆಲವರು ಅದನ್ನೇ ಉಗ್ರವಾಗಿ ಮಾಡುತ್ತಾರೆ. ಆ ಅರ್ಥದಲ್ಲಿ ಅಷ್ಟೇ ಪ್ರತಾಪರನ್ನು ಉಗ್ರ ಎಂದಿರುವುದು. ಹಾಗೂ ಅದು ತೀರಾ ಗಂಭೀರವಾಗಿ ಮಾಡಿದ ಕಮೆಂಟ್ ಅಲ್ಲ. ಹೀಗಾಗಿ ಅಲ್ಲಿಂದ ಮುಂದುವರೆಯುವ, ಅಲ್ಲೇ ನಿಲ್ಲುವ, ಅಲ್ಲಿಂದ ಹಿಂದಕ್ಕೆ ಬರುವ ಶ್ರಮ ತೆಗೆದುಕೊಳ್ಳುವುದು ಅನವಶ್ಯಕ.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಧನ್ಯವಾದ ನಿಮ್ಮ ಉತ್ತರಕ್ಕೆ.
ಹಾಗೆಯೆ ಎಲ್ಲದಿಕ್ಕೂ ಕೋಮುವಾದ ಅನ್ನುವವರು.. ಯವುದೋ ಒಂದು ಸಿನೇಮಾವನ್ನು ಕೆಟ್ಟದಾಗಿದೆ ಎನ್ನುವ ಜನರನ್ನು ಸಾರಸಗಟು ಬಿಜೆಪಿ ಬೆಂಬಲಿಗರು ಅಂಥಾ ಎದೆ ತಟ್ಟಿ ಬರೆಯುವವರೂ ಉಗ್ರರು .
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ನೀವು ನಿಜಕ್ಕೂ ಶ್ರಮಜೀವಿಗಳೇ ಕಣ್ರೀ.
ಮುಂದುವರೆಯುವ ಶ್ರಮ ಅನವಶ್ಯಕ ಅಂತ ನಿವೇದಿಸಿದ ಮೇಲೂ ಶ್ರಮ ತೆಗೆದುಕೊಳ್ಳುತ್ತೀರಿ :)
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಕೆಲವನ್ನ ಅಲ್ಲೇ ಬಿಟ್ಟರೆ ಬೇರೇಯೋರು ಅಪಾರ್ಥ ಮಾಡಿಕೊಳ್ಳಬಾರದು ನೋಡಿ ಅದಕ್ಕೆ. ಯವುದಕ್ಕೂ ಒಂದು ಇರಲಿ ಅಂತ :) ಇದರಲ್ಲಿ ಚೂರು ಶ್ರಮ ವಹಿಸಿದರೂ ಅದು ನನ್ನ ನೆಮ್ಮದಿಗೆ ಹಾಗೂ ಇತರರಿಗೆ ಅನಗತ್ಯ confuse ಮಾಡಬಾರದು ಅಂತ.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಭಾಸ್ಕರ ಮೈಸೂರು,
---"ಸಿನೇಮಾವನ್ನು ಕೆಟ್ಟದಾಗಿದೆ ಎನ್ನುವ ಜನರನ್ನು ಸಾರಸಗಟು ಬಿಜೆಪಿ ಬೆಂಬಲಿಗರು ಅಂಥಾ ಎದೆ ತಟ್ಟಿ ಬರೆಯುವವರೂ"
ಈ ಮಾತು ನನ್ನನ್ನು ಕುರಿತಾದದ್ದೆ? ನನಗೆ ಹೌದು ಎನ್ನಿಸುತ್ತದೆ. ದಯವಿಟ್ಟು ಯಾವುದನ್ನು ಯಾರ ಬಗ್ಗೆ ಹೇಳುತ್ತಿದ್ದೀರ ಎನ್ನುವ ವಿಷಯಕ್ಕೆ ಸ್ಪಷ್ಟವಾಗಿರಿ. ನಮ್ಮಂತಹವರಿಗೆ ಗೊಂದಲ ಇರುವುದಿಲ್ಲ.
ಅದನ್ನು ನನಗೇ ಹೇಳಿದ್ದೀರ ಎಂದುಕೊಂಡು ಮುಂದುವರೆಯುತ್ಟೇನೆ. ನಾನು ಎದೆ ತಟ್ಟಿಕೊಂಡು ಬರೆದೆನೆ? ನಾನು ಹಾಗೆ "ಎದೆ ತಟ್ಟಿ" ಬರೆಯುತ್ತೇನೆ ಎಂದು ನಿಮಗೆ ಹೇಗೆ ಗೊತ್ತಾಯಿತು? ಹಾಗೆ ಎದೆ ತಟ್ಟಿ ಬರೆಯಲು ಸಾಧ್ಯವೆ? ಹಾಗೆಯೆ ಯಾರ ಎದೆ ತಟ್ಟಿ? ನೀವು ಹಿಂದೊಮ್ಮೆ ಹೇಳಿದ್ದ ಮಾತಿನಲ್ಲಿ ಹೇಳಬಹುದಾದರೆ "ಕೀ ಬೋರ್ಡ್" "ಕುಟ್ಟಿ" ಬರೆದಿದ್ಡೇನೆ, ಬರೆಯುತ್ತಿದ್ದೇನೆ.
ಇನ್ನು ನೀವು ನನ್ನನ್ನು "ಉಗ್ರರೂ" ಅಂತಾದರೂ ಅನ್ನಿ, ಬೇರೆ ಏನಾದರೂ ಅನ್ನಿ. ಬೇರೆಯವರು "ಉಗ್ರ"ರಾಗಿದ್ದಕ್ಕೆ ನಾನೂ ಉಗ್ರನಾಗುವುದನ್ನು ನಾನು ವಿರೋಧಿಸುತ್ತೇನೆ. ನನ್ನ ಮೂಲ ಆಶಯ, ನನ್ನ ಹಲವು ಲೇಖನಗಳ ತತ್ವ ಇದೇನೆ. "ಅವರು" ಹಾಗೆ ಎಂದು ನಾವೂ ಹಾಗೆ ಆಗಬೇಕಿಲ್ಲ. ಒಳ್ಳೆಯದನ್ನು ಮಾಡುವುದಕ್ಕೆ ಪೈಪೋಟಿಗೆ ಬೀಳಬೇಕೆ ಹೊರತು ಕೆಟ್ಟದ್ದನ್ನು ಮಾಡುವುದಕ್ಕೆ ಅಲ್ಲ.
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
"ಎದೆ ತಟ್ಟಿ ಹೇಳುವುದು " ಅನ್ನುವುದು ಸಾಮನ್ಯ ಪದ ಪುಂಜ. ಆದರೆ ಇಲ್ಲಿ ಕಿ ಬೋರ್ಡ್ನಲ್ಲಿ ಟೈಪ್ ಮಾಡುವುದರಿಂದ ಅದನ್ನು "ಎದೆ ತಟ್ಟಿ ಬರೆಯುವವರು" ಎಂದು ಬಳಸಿದ್ದೇನೆ.
ನನ್ನ "ಕೀಬೋರ್ಡ್" ಪದ ನೆನಪಿಸಿದಕ್ಕೆ ಧನ್ಯವಾದಗಳು.
>>"ಯಾವುದನ್ನು ಯಾರ ಬಗ್ಗೆ ಹೇಳುತ್ತಿದ್ದೀರ ಎನ್ನುವ ವಿಷಯಕ್ಕೆ ಸ್ಪಷ್ಟವಾಗಿರಿ"
>>"ಒಳ್ಳೆಯದನ್ನು ಮಾಡುವುದಕ್ಕೆ ಪೈಪೋಟಿಗೆ ಬೀಳಬೇಕೆ ಹೊರತು ಕೆಟ್ಟದ್ದನ್ನು ಮಾಡುವುದಕ್ಕೆ ಅಲ್ಲ"
ನಿಮ್ಮ ಈ ಬುದ್ದಿವಾದದ ಮಾತುಗಳು ನಿಮಲ್ಲೂ ಅಳವಡಿಸಿಕೊಂಡರೆ ಉತ್ತಮ ಅನ್ನಿಸುತ್ತೆ. ತಾವು ಕೂಡ ಸಾರಸಗಟು ಒಂದು ಚಿತ್ರವನ್ನು ವಿರೋಧಿಸಿದವರು ಬಿಜೆಪಿ ಬೆಂಬಲಿಗರು ಅಂತ ಬರೆದು ಏನು ಮಾಡಿದ್ದೀರಿ? ಅಮಿತಾಬ್ ಕೂಡ ಈ ಚಿತ್ರದ ಬಗ್ಗೆ ಆಕ್ಷೇಪ ಎತ್ತಿದ್ದಾರೆ..
"Big B wrote on his blog, “If SM (Slumdog Millionaire) projects India as a Third World dirty underbelly developing nation and causes pain and disgust among nationalists and patriots, let it be known that a murky underbelly exists and thrives even in the most developed nations.”" ಹಾಗಿದಲ್ಲೆ ಅವರು ಬಿಜೆಪಿ ಬೆಂಬಲಿಗರೆ? ನನಗೆ ಆ ವಿಷಯ ಗೊತ್ತಿರಲಿಲ್ಲ ಕ್ಷಮಿಸಿ. ನಿಮ್ಮಿಂದ ಹೊಸ ವಿಷಯ ತಿಳಿದಂತಾಯಿತು.
ತಮ್ಮ ಈ ಹೇಳಿಕೆ ಯಾವ ರೀತಿ ಸಮಾಜದ ಸ್ವಾಸ್ಥಯಕ್ಕೆ ಒಳಿತು ಮಾಡುತ್ತಿದೆ? ಈ ರೀತಿ ಅನಗತ್ಯ ಎಲ್ಲರನ್ನೂ ಸೇರಿಸಿ ಒಟ್ಟಾರೆ ಜರಿಯುವ ಗುಂಪಿಗೆ ಸೇರಿಕೊಂಡಂತಾಗಲಿಲ್ಲವೇ?
ಹಿಂದೆ ಒಬ್ಬ ಮಹನೀಯರು ಸಂಪದದಲ್ಲಿ, ಕಾಮೆಂಟ್ ಮಾಡುವಾಗ, ಅಥವಾ ಇನ್ನೊಬ್ಬರೊಂದಿಗೆ ಸಂವಾದಿಸುವಾಗ ಗೌರವ ಕೊಟ್ಟು ಸಭ್ಹ್ಯತೆಯಿಂದ ಮಾತನಾಡಿ ಅಂತ ಬರೆದಿದ್ದರು.. ಅದಾದ ಕೆಲವೆ ದಿನಗಳಲ್ಲಿ ಅವರಿಂದ ಒಂದು ಲೇಖನ ಬಂತು ಅದರಲ್ಲಿ ಅವರು ಇನ್ನೊಬ್ಬರೊಂದಿಗೆ ಯಾವ ರೀತಿ "ಸಭ್ಯತೆ"ಯಿಂದ ನಡೆದುಕೊಂಡರು ಅನ್ನುವುದನ್ನು ನೋಡಿ ಬಹಳ "ಸಂತಸ " ಆಯಿತು.. ಹಾಗು ಆ ರೀತಿ ಸಭ್ಹ್ಯತೆ ನಮಗೆ ಹೇಲುತ್ತಿದ್ದರಾ ಅನ್ನುತ್ತ ವ್ಯಥೆಯಾಯಿತು. ಇನ್ನೊಬ್ಬರಿಗೆ ಬೋಧನೆ ಮಾಡುವುದು ಬಹಳ ಸುಲಭ... ಅದನ್ನ ನಮ್ಮಲ್ಲಿ ಅಳ್ವಡಿಸಿಕೊಳ್ಳುವಗ ಮಾತ್ರ "exceptions" . ಇದು ರಾಜಕಾರಣಿಗಳಲ್ಲಿ , ಸ್ವಘೋಷಿತ ಬುದ್ದಿಜೀವಿಗಳಲ್ಲಿ ಹೆಚ್ಚು ಕಾಣುತ್ತೆ ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
Typo
"ಹಾಗು ಆ ರೀತಿ ಸಭ್ಹ್ಯತೆ ನಮಗೆ ಹೇಲುತ್ತಿದ್ದರಾ ಅನ್ನುತ್ತ ವ್ಯಥೆಯಾಯಿತು. " ಇದು "ಹಾಗು ಆ ರೀತಿ ಸಭ್ಹ್ಯತೆ ನಮಗೆ ಹೇಳುತ್ತಿದ್ದರಾ ಅನ್ನುತ್ತ ವ್ಯಥೆಯಾಯಿತು" ಎಂದಾಗಬೇಕಿತ್ತು.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ತಮಾಷೆ ಎಂದರೆ , ಭಾಸ್ಕರ್ ಅವರೆ,
ಸಭ್ಯತೆ ಬಂದಾಗ "ಹೇಳುತ್ತಿದ್ದಾರೆ" ನ ಆಗಬೇಕಲ್ಲವಾ? (ಇಲ್ಲೇನೋ ಟೈಪೋ ಇಂದ "ಹೇಲುತ್ತಿದ್ದಾರೆ" ಆಗಿತ್ತು). ನಾನು ಹೇಳುತ್ತಿರುವುದು "ಸಭ್ಯತೆ" ಅನ್ನುವುದು
Prefix ಇದ್ದಾಗ "ಹೇಳುತ್ತಿದ್ದಾರೆ" irrespective ಆಗಿ ಆಗಬೇಕು ಅಂತ)
~ ಇದೂ ಒಂದು ಪದ-ಪುಂಜದ ನಿಯಮ!
ಏನಂತೀರಾ?
~ಮೀನಾ
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಭಾಸ್ಕರ,
ನನ್ನ ಲೇಖನದಲ್ಲಿ "ಸ್ಲಮ್‌ಡಾಗ್ ಸರಿ ಇಲ್ಲ ಎನ್ನುವ ಜನರಲ್ಲಿ ಬಹುಸಂಖ್ಯಾತ ಜನ ಭಾಜಪದ" ಎಂದು ಸ್ಪಷ್ಟವಾಗಿ ಬರೆದಿದ್ದೇನೆ. ಇಲ್ಲಿ "ಬಹುಸಂಖ್ಯಾತ" ಪದ ಬಳಸಿರುವುದರ ಉದ್ದೇಶ ಎಲ್ಲರೂ ಅವರೆ ಅಂತಲ್ಲ. ಇನ್ನು, ಒಬ್ಬಾತ ರಾಜಕಾರಣಿಯಲ್ಲದ ಮಾತ್ರಕ್ಕೆ ಅಥವ ರಾಜಕೀಯ ಸಿದ್ಧಾಂತದ ಒಲವುಗಳಿಲ್ಲದ ಮಾತ್ರಕ್ಕೆ ಆತ ಒಂದು ರಾಜಕೀಯ/ಸಾಂಸ್ಥಿಕ ಗುಂಪು ಯೋಚಿಸುವ ಹಾಗೆ ಯೋಚಿಸುವುದಿಲ್ಲ ಎಂದು ಹೇಗೆ ಹೇಳುತ್ತೀರಿ? ಪಕ್ಷಗಳಲ್ಲಿರುವ ಎಲ್ಲರೂ ಆ ಪಕ್ಷಗಳ ಸಿದ್ದಾಂತದಂತೆಯೆ ವರ್ತಿಸುತ್ತಾರೆಯೆ? ಕಾಂಗ್ರೆಸ್‌ನಲ್ಲಿ ಭಾಜಪದವರಂತೆ ಯೋಚಿಸುವವರೂ, ಭಾಜಪದಲ್ಲಿ ಕಾಂಗ್ರೆಸ್‌ನವರಂತೆ ಯೋಚಿಸುವವರೂ ಇಲ್ಲವೆ?
---"ತಮ್ಮ ಈ ಹೇಳಿಕೆ ಯಾವ ರೀತಿ ಸಮಾಜದ ಸ್ವಾಸ್ಥಯಕ್ಕೆ ಒಳಿತು ಮಾಡುತ್ತಿದೆ? ಈ ರೀತಿ ಅನಗತ್ಯ ಎಲ್ಲರನ್ನೂ ಸೇರಿಸಿ ಒಟ್ಟಾರೆ ಜರಿಯುವ ಗುಂಪಿಗೆ ಸೇರಿಕೊಂಡಂತಾಗಲಿಲ್ಲವೇ?"
ನನ್ನ ಮಾತುಗಳಿಂದ ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದು ಎಂದು ನಾನು ಎಲ್ಲೂ ಘೋಷಿಸಿಕೊಂಡಿಲ್ಲ. ಆದರೆ, ನಾನು ಎತ್ತುವ ಕೆಲವು ಪ್ರಶ್ನೆ ಮತ್ತು ವಿಷಯಗಳಿಂದ ಎಲ್ಲರಿಗೂ ಅಲ್ಲದಿದ್ದರೂ ಬಹುಸಂಖ್ಯಾತರಿಗೆ, (ಆರ್ಥಿಕ/ಸಾಮಾಜಿಕ) ಬಲಹೀನರಿಗೆ ಒಳ್ಳೆಯದಾಗಬಹುದೇನೊ ಎನ್ನುವ ನಂಬಿಕೆ ಇದೆ. ಹಾಗೆಯೆ ಅದು ಏನೂ ಮಾಡಲಾರದೇನೊ ಎನ್ನುವ ಸಂದೇಹವೂ ಇದೆ. ಈಗ ನಿಮ್ಮ ಪ್ರಶ್ನೆಗೆ ಬರುವುದಾದರೆ, ಈ ನನ್ನ ಹೇಳಿಕೆ/ಲೇಖನ ಹೇಗೆ ಸಮಾಜದ ಸ್ವಾಸ್ಥ್ಯಕ್ಕೆ ಹಾನಿ? ಹಾಗೆಯೆ "ಸ್ಲಮ್‌ಡಾಗ್/ತಾಯಿ/ದೇಶ/ಬೆತ್ತಲೆ" ಎನ್ನುತ್ತ ಬಂದವರ ಹೇಳಿಕೆ ಹೇಗೆ ಸ್ವಾಸ್ಥ್ಯ ಉಳಿಸುತ್ತದೆ ಎಂದು ತಿಳಿಸಿ.
"ಸ್ವಘೋಷಿತ ಬುದ್ಧಿಜೀವಿಗಳು" ಎಂದಿದ್ದೀರ. ಯಾರಾದರೂ ತಮ್ಮನ್ನು ಬುದ್ಧಿಜೀವಿ ಎಂದು ಘೋಷಿಸಿಕೊಂಡದ್ದನ್ನು ನೀವು ಕಂಡಿದ್ದೀರಾ ಅಥವ ಓದಿದ್ದೀರಾ? ದಯವಿಟ್ಟು ಹಂಚಿಕೊಳ್ಳಿ.
ಇನ್ನು, ನಾನು ಹೇಳುವುದು ಬುದ್ಧಿವಾದ ಅಂತಾಗಲಿ, ಅದನ್ನು ಬೇರೆಯವರು ಪಾಲಿಸಬೇಕು ಅಂತಾಗಲಿ ನಾನು ಅಂದುಕೊಂಡಿಲ್ಲ. ನಾನು ಬರೆದದ್ದನ್ನು ಓದಿ ಅಥವ ಮಾತನಾಡಿದ್ದನ್ನು ಕೇಳಿ, ಬೇರೆ ಏನನ್ನೂ ಆಲೋಚಿಸದೆ ಜನ ನನ್ನ "ಹಿಂಬಾಲಕ"ರಾಗಲಿ ಎನ್ನುವ ಆಸೆಯೂ ನನ್ನದಲ್ಲ. ಜನರ ಮುಂದೆ ಕೆಲವು ವಿಷಯಗಳನ್ನು ಇಟ್ಟು, ಅವರು ಅದನ್ನು ವಿಮರ್ಶಿಸಿ, ತಮಗೆ ಸತ್ಯ ಮತ್ತು ಸರಿ ಎಂದುಕೊಂಡದ್ದನ್ನು ತೆಗೆದುಕೊಳ್ಳಬೇಕು; ಈ ಪ್ರಕ್ರಿಯೆಯಲ್ಲಿ ಯಾರದೆ ಜುಲ್ಮಾನೆ ಅಥವ ಭಾವನಾತ್ಮಕ ಪ್ರಭಾವ ಇರಬಾರದು; ಇದು ನನ್ನ ಆಶಯ. ಕುವೆಂಪುರವರು ಹೇಳಿದಂತೆ ಎಲ್ಲರೂ "ನಿರಂಕುಶಮತಿ"ಗಳಾಗಲಿ ಎಂದು ನಾನು ಆಶಿಸುತ್ತೇನೆಯೆ ಹೊರತು "ಬುದ್ಧಿವಾದ" ಕೇಳಿ ಅವರನ್ನೆ ಹಿಂಬಾಲಿಸುವ "ಹಿಂಬಾಲಕ"ರಾಗಲಿ ಅಂತಲ್ಲ.
ನಾನು "ಬೇರೆಯವರಿಗೆ ಹೇಳುತ್ತಿದ್ದೆನೆಯೆ ಹೊರತು ಅದನ್ನು ಪಾಲಿಸುತ್ತಿಲ್ಲ, ಅದು ಈ ಈ ಕಾರಣಗಳಿಗೆ" ಎಂದು ಕೆಲವು ಕಾರಣ ಕೊಟ್ಟಿದ್ದೀರ. ವಾಸ್ತವವನ್ನು ಹೇಳಿದರೆ "ಕೆಟ್ಟದ್ದು ಮಾಡುವುದಕ್ಕೆ ಪೈಪೋಟಿ" ಹೇಗಾಗುತ್ತದೆ? ಕಾಯಿಲೆಯನ್ನೆ ಗುರುತಿಸದೆ ಔಷಧಿ ಹೇಗೆ ಕಂಡುಹಿಡಿಯುತ್ತೀರಿ? ಬಟ್ಟೆಯೊಳಗೆ ಮುಚ್ಚಿರುವ ಹುಣ್ಣನ್ನು ಬಟ್ಟೆ ಸರಿಸಿ ನೋಡದೆಯೆ ಹೇಳಬೇಕು ಎಂದರೆ ಹೇಗೆ? ನನಗೆ ಅಂತಹ ಅತೀಂದ್ರೀಯ ಶಕ್ತಿಯ (ಅದು ಇದೆಯೆ?) ಪರಿಚಯ ಆಗಿಲ್ಲ.
ಮೊದಲೆ ಹೇಳಿದಂತೆ, "ಯಾರೊ ಹೀಗೆ ಅಂದರು, ಆಮೇಲೆ ಹೀಗಾಯಿತು; ’ಸಂತಸ’ವಾಯಿತು," ಎಂದು ಗೂಢವಾಗಿ ಬರೆಯಬೇಡಿ. ಇಲ್ಲಿನ ವಿಷಯಕ್ಕೆ ಪ್ರಸ್ತುತವಿದ್ದರೆ ನೇರವಾಗಿ ತನ್ನಿ.
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ನನ್ನ ಲೇಖನದಲ್ಲಿ "ಸ್ಲಮ್‌ಡಾಗ್ ಸರಿ ಇಲ್ಲ ಎನ್ನುವ ಜನರಲ್ಲಿ ಬಹುಸಂಖ್ಯಾತ ಜನ ಭಾಜಪದ" ಎಂದು ಸ್ಪಷ್ಟವಾಗಿ ಬರೆದಿದ್ದೇನೆ
>> ಯಾರು ಯಾರು ಆ ಬಹುಸಂಖ್ಯಾತರು ಪಟ್ಟಿ ಕೊಡಿ.. "ಬಹುಸಂಖ್ಯಾತ" ಅಂತ ಹೇಳಿದರೆ ಅರ್ಥಾ ಆಗುವ ಅಥವಾ ಆ ಬಹುಸಂಖ್ಯಾತ ಗುಂಪನ್ನು ಗುರುತಿಸುವ ಅತೀಂದ್ರಿಯ ಶಕ್ತಿಯ ಪರಿಚಯ ಆಗಿಲ್ಲ.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಭಾಸ್ಕರ,
ಇದಕ್ಕೆ ಅಷ್ಟು ಕಷ್ಟ ಪಡಬೇಕಿಲ್ಲ. ಈಗ ಇಲ್ಲಿ ನನ್ನ ಲೇಖನ ಮತ್ತು ಕಾಮೆಂಟ್‌ಗಳ ಪರಿಧಿಯೊಳಗೇ ಅದಕ್ಕೆ ಉತ್ತರವಿದೆ. ಇಲ್ಲಿ ನಾನು ಹೇಳಿರುವುದನ್ನು ಕೆಲವರು ವ್ಯತಿರೇಕಿಸಿದ್ದಾರೆ. ಆ ಅಸಮ್ಮತಿಯನ್ನು ಬದಿಗಿಟ್ಟುಕೊಂಡು, "ಸ್ಲಮ್‌ಡಾಗ್ ಸಿನೆಮಾ ಭಾರತದ ಮಾನ ಕಳೆಯುತ್ತಿದೆ; ನಮ್ಮ ದೇಶವನ್ನು ಹೊಲಸಾಗಿ ತೋರಿಸಿದ್ದಾರೆ; ಹೀಗೆ ನಮ್ಮನ್ನು ತೋರಿಸುವುದು ಅಪರಾಧ; ಹಾಗೆ ಮಾಡಲು ಅವರಿಗೆ ಹಕ್ಕಿಲ್ಲ," ಎಂದು ಇಲ್ಲಿ ಹೇಳುತ್ತಿರುವ ಜನರ ಒಲವು ಯಾವ ರಾಜಕೀಯ ಸಿದ್ಧಾಂತದ ಕಡೆಗಿದೆ? ಎನ್ನುವುದರ ಪೋಲಿಂಗ್ ಮಾಡಿ. ಇತ್ತೀಚಿನ ವರ್ಷಗಳಲ್ಲಿ ಅವರು ಯಾವ ಪಕ್ಷಕ್ಕೆ ವೋಟು ಹಾಕಿದ್ದಾರೆ (ವೋಟು ಹಾಕಬಲ್ಲ ಹಕ್ಕು ಮತ್ತು ಅವಕಾಶವಿದ್ದವರು)? ಯಾಕಾಗಿ ಹಾಕಿದ್ದಾರೆ?
ಇಲ್ಲಿ ವೈಯಕ್ತಿಕವಾಗಿ ಒಂದು ಪ್ರಶ್ನೆ. ಕೇಳುವುದು ಅಪರಾಧವಲ್ಲ ಎಂದು ಕೇಳುತ್ತಿದ್ದೇನೆ. ನೀವು ಬೆಂಬಲಿಸುವುದೇ ಆದರೆ ಯಾವ ಪಕ್ಷವನ್ನು ಬೆಂಬಲಿಸುತ್ತೀರ? ಅಥವ ನೀವು ಹಾಲಿ ಯಾವ ಪಕ್ಷದ ಬೆಂಬಲಿಗರು?
ನನ್ನನ್ನು ನೀವು ಕೇಳಿದರೆ, "ಉದಾರವಾದಿ ನಿಲುವಿಲ್ಲದ ಕೋಮುವಾದಿ ಪಕ್ಷಗಳಿಗೆ ನನ್ನ ಒಲವಿಲ್ಲ." ಎನ್ನುತ್ತೇನೆ. ನಾನು ಇಲ್ಲಿಯ ತನಕ ಯಾವುದೆ ಪಕ್ಷದ ಸದಸ್ಯನಾಗಿಲ್ಲ. ಆದರೆ ಕರ್ನಾಟಕದಲ್ಲಿನ ಎಲ್ಲಾ ಪಕ್ಷಗಳಿಗೆ ಓಟು ಹಾಕಿರುವ ಸಾಧ್ಯತೆ ಇದೆ. ಭಾಜಪಕ್ಕೂ ಹಾಕಿರಬಹುದು ಎನ್ನಿಸುತ್ತದೆ (ಆನೇಕಲ್ ಕ್ಷೇತ್ರದಲ್ಲಿ ವೈ. ರಾಮಕೃಷ್ಣ ಎನ್ನುವ ಮಾಜಿ ಕಾಂಗ್ರೆಸ್ ಮಂತ್ರಿ ಭಾಜಪದ ಅಭ್ಯರ್ಥಿಯಾಗಿ ನಿಂತಾಗ ಭಾಜಪದವರೊಡನೆ ಓಡಾಡಿದ್ದೆ; ಅಪ್ಪಟ ಸ್ಥಳೀಯ ಕಾರಣಗಳಿಗಾಗಿ. ಆದರೆ ಆಗ ನನಗೆ ವೋಟು ಹಾಕುವ ವಯಸ್ಸು ಆಗಿತ್ತೆ ಇಲ್ಲವೆ ಎನ್ನುವುದರ ಬಗ್ಗೆ ಸಂಶಯ ಇದೆ. ಆಗಿಲ್ಲವಾದರೆ. ಹಾಕಿಲ್ಲದಿರಬಹುದು.)
ಇಲ್ಲಿ ಇನ್ನೊಂದು ವಿಷಯ ಸ್ಪಷ್ಟಪಡಿಸಬಯಸುತ್ತೇನೆ. ನನಗೆ ಭಾಜಪದ ಅಥವ ಆ ರೀತಿಯ (ಕ್ರೈಸ್ತ/ಯಹೂದಿ/ಮುಸ್ಲಿಮ್ ಕೋಮುವಾದಿ) ಸಿದ್ದಾಂತದ ಬಗ್ಗೆ ಒಲವಿಲ್ಲ. ಅದನ್ನು ವಿರೋಧಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಭಾಜಪದಲ್ಲಿರುವ ಎಲ್ಲಾ ವ್ಯಕ್ತಿಗಳನ್ನು ದ್ವೇಷಿಸುತ್ತೇನೆ ಎಂದುಕೊಳ್ಳಬಾರದು. ಇಷ್ಟಕ್ಕೂ ಅಷ್ಟೊಂದು ಜನರನ್ನು ದ್ವೇಷಿಸುವುದು ನನ್ನಿಂದ ಅಸಾಧ್ಯ. ಜನರಿಗಿಂತ ಅವರ ಸಿದ್ಧಾಂತದ ಬಗ್ಗೆ ತಕರಾರು ನನ್ನದು. ನಿಮ್ಮ ಸಿದ್ಧಾಂತ ಏನೇ ಇದ್ದರೂ ವ್ಯಕ್ತಿಗತವಾಗಿ ನಿಮ್ಮೊಡನೆ ಒಡನಾಡಲು ನನಗೆ ಸಾಧ್ಯವಿದೆ. ಈ ತಿಂಗಳಾಂತ್ಯದಲ್ಲಿ ಬೆಂಗಳೂರಿನಲ್ಲಿ ಸಿಗುವ ಹಾಗಿದ್ದರೆ ತಿಳಿಸಿ. ಜೊತೆಯಾಗಿ ಊಟ ಮಾಡೋಣ. ನೀವು ಇಲ್ಲಿಯ ಸಂವಾದ ವೈಯಕ್ತಿಕವಾದದ್ದು ಎಂದುಕೊಳ್ಳಬಾರದು ಎಂದು ಈ ಆಹ್ವಾನ. ನಿಮ್ಮೊಡನೆ ಊಟ ಮಾಡಲು ನಾನು ಅನರ್ಹ ಎಂದು ನೀವು ತಿರಸ್ಕರಿಸುವುದಿಲ್ಲ ಎಂದುಕೊಳ್ಳುತ್ತೇನೆ. ಆದರೆ ಯಾವ ಕಾರಣಕ್ಕೆ ತಿರಸ್ಕರಿಸಿದರೂ ಬೇಸರವಿಲ್ಲ.
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಕ್ಷಮಿಸಿ,,
ಸಂವಿಧನದ ಪ್ರಕಾರ ನಮ್ಮದು ಗೋಪ್ಯ ಮತದಾನ ಪದ್ದತಿ ಇದೆ. ಹಾಗಾಗಿ ನಾವು ಯಾರಿಗೆ ಮತ ಹಾಕಿದ್ದೀರಿ, ಹಾಕುತ್ತೀರಿ, ನಿಮ್ಮ ಪಕ್ಷ ಯಾವುದು ಅಂತ ಕೇಳುವುದು ಅದಕ್ಕೆ ವಿರೋಧ ಮಾಡಿದ ಹಾಗೆ ಅಗುತ್ತದೆ.
ಹಾಗೆಯೆ ಹೇಳ ಬಯುಸುತ್ತೆನೆ, ನಾನು ಎಲ್ಲಾ ಪಕ್ಷಗಳಲ್ಲಿರುವ ಒಳ್ಳೆಯ ವ್ಯಕ್ತಿಗಳನ್ನು ಗೌರವಿಸುತ್ತೇನೆ. ಆದರೆ ನಾನು ನಂಬಿರುವ ಸಿದ್ದಂತದ ಪ್ರಶ್ನೆ ಬಂದಾಗ ಯಾವ ಪಕ್ಷವೂ ಅದರ ಹತ್ತಿರ ಇಲ್ಲ ಈಗ.
ನನ್ನ ಅನಿಸಿಕೆ ನಾವು ಮತ ಹಾಕುತ್ತಿರುವುದು " BY force, not by Choice" .
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಭಾಸ್ಕರ,
---"ನನ್ನ ಅನಿಸಿಕೆ ನಾವು ಮತ ಹಾಕುತ್ತಿರುವುದು " BY force, not by Choice".
"By force" ಎನ್ನುವುದನ್ನು "force in the form of money/religious/sectarian/sentimental influence" ಎಂದುಕೊಂಡರೆ ನಿಮ್ಮ ಮಾತಿಗೆ ನನ್ನ ಸಹಮತವಿದೆ.
--"ನಾನು ನಂಬಿರುವ ಸಿದ್ದಂತದ ಪ್ರಶ್ನೆ ಬಂದಾಗ ಯಾವ ಪಕ್ಷವೂ ಅದರ ಹತ್ತಿರ ಇಲ್ಲ ಈಗ."
"ಈಗ" ಇಲ್ಲ ಅಂದಿದ್ದೀರ. ಆಗ ಇದಕ್ಕೆ ಮುಂಚೆ ಇತ್ತೆ ಎನ್ನುವ ಪ್ರಶ್ನೆ ತಾನೆತಾನಾಗಿ ಬರುತ್ತದೆ. ಉತ್ತರಿಸುವುದರಲ್ಲಿ ತಪ್ಪಿಲ್ಲ ಎನ್ನಿಸಿದರೆ ಉತ್ತರಿಸಿ. (ಆಗ ಈಗ ಯಾಕಿಲ್ಲ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಸಾಧ್ಯವಾದರೆ ಅದಕ್ಕೂ ಉತ್ತರಿಸಿ. )
ಗೋಪ್ಯ ಮತದಾನದ ಬಗ್ಗೆ ನಿಮ್ಮ ನಂಬಿಕೆ/ಕಾರಣದ ವಿರುದ್ಧ ಹೋಗುವ ಅಗತ್ಯ ನನಗಿಲ್ಲ.
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
By force" ಎನ್ನುವುದನ್ನು "force in the form of money/religious/sectarian/sentimental influence" ಎಂದುಕೊಂಡರೆ
ಇಲ್ಲ.. ಇದೆಲ್ಲ ಬಿಟ್ಟೂ ಇನ್ನೂ ಎರಡು ಇದೆ... ನನ್ನ ಮತ ಅನಗತ್ಯವಾಗಿ ಇನ್ನೊಬ್ಬರು ಚಲಾಯಿಸಬಾರದು ಎಂದು.. ಕಳ್ಳ ವೋಟು ಹಾಕಲು ಹೋಗಿ ಸಿಕ್ಕಿಕೊಂಡ ಹಲವಾರು ಘಟನೆಗಳನ್ನ ನಾನು ಪತ್ರಿಕೆಗಳಲ್ಲಿ ಓದಿದ್ದೇನೆ.
ಹಾಗಾಗಿ ನಾನು ಮತ ಹಾಕುತ್ತೇನೆ ಅಷ್ಟೆ. ಹಾಗು ಮತದಾನ ನನ್ನ ಹಕ್ಕು.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಗೋಪ್ಯ ಮತದಾನ ನನ್ನ ನಂಬಿಕೆ/ ಕಾರಣ ಅಲ್ಲ.. ಅದು ನಮ್ಮ ಸಂವಿಧಾನದ ಪ್ರಕಾರ ನಾನು ಹೇಳುತ್ತಾ ಇರುವುದು.
ನೀವು ಅದರ ವಿರುದ್ದ ಹೋದರೆ ಅದು ನಿಮ್ಮ ಇಷ್ಟ. ಹಿಂದೆ ಒಮ್ಮೆ ಕಾನೂನಿನ ವಿರುದ್ದ ಹೋದವರ ಬಗ್ಗೆ ಇರುವ ವಕಾಲತ್ತಿಗೆ ಸಹಿ ಮಾಡಿ ಅಂತ ಸಂಪದದಲ್ಲೇ ಕೇಳಿಕೊಂಡಿದ್ದೀರಲ್ಲ ತಾವು.. ಬಹುಶ: ತಮಗೆ ಅದು ಇಷ್ಟ ಆಗಿರಬಹುದು. http://sampada.net/blog/ravikreddy/03/02/2009/16434 .
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಭಾಸ್ಕರ,
ಗೋಪ್ಯ ಮತದಾನ ಹಕ್ಕಿರಬಹುದು. ಆದರೆ ನಾನು ಇಂತಿಂತವರಿಗೆ ವೋಟು ಹಾಕಿದೆ ಎಂದು ಹೇಳಿಕೊಳ್ಳುವುದು ಅಪರಾಧವಲ್ಲ. ಜನರನ್ನು ಕೆಲವು intimidation ಗಳಿಂದ ರಕ್ಷಿಸುವುದಕ್ಕೆ ಅದು ಸಂವಿಧಾನ ಕೊಟ್ಟಿರುವ ಹಕ್ಕೆ ಹೊರತು, ವೋಟು ಹಾಕಿದ ನಂತರ ಅದನ್ನು ಯಾರು ಯಾರಿಗೂ ಹೇಳಿಕೊಳ್ಳಬಾರದು ಎಂದಿಲ್ಲ.
http://en.wikipedia....
ಇದನ್ನು ಸ್ಪಷ್ಟಪಡಿಸಿಕೊಳ್ಳದೆ ಮತ್ತೆಮತ್ತೆ ಅದನ್ನೆ ಹೇಳಬೇಡಿ. ನಿಮಗೆ ಹೇಳುವ ಇಷ್ಟವಿಲ್ಲದಿದ್ದರೆ ಬೇಡ. ಅದಕ್ಕೆಯೆ ನಾನು ನಂಬಿಕೆ/ಕಾರಣ ಎಂದದ್ದು. ಆದರೆ ಹಾಗೆ ಹೇಳಿಕೊಳ್ಳುವುದು "ಕಾನೂನಿನ ಪ್ರಕಾರ ಅಪರಾಧ" ಎಂದು ಅರ್ಥ ಬರುವಂತೆ ಹೇಳಬೇಡಿ.
ಇನ್ನು ಪಟ್ಟಾಭಿರಾಮ ಸೋಮಯಾಜಿಯವರ ವಿಷಯಕ್ಕೆ ಬಂದರೆ, ಸರ್ಕಾರದ ವಿರುದ್ಧ ಅಥವ ಒಂದು ಗುಂಪಿನ ವಿರುದ್ಧ ಮಾತನಾಡುವುದು ಸಂವಿಧಾನದ ಪ್ರಕಾರ ಅಪರಾಧವೆ? ಅದು ಕಾಲೇಜು ಮ್ಯಾನೇಜ್‍ಮೆಂಟ್ ನಿಯಮಾವಳಿಗಳ ಪ್ರಕಾರ ತಪ್ಪಿರುವುದೂ ನನಗೆ ಸಂದೇಹವೆ. ವಿಮರ್ಶೆ ಅಥವ ಟೀಕೆಯನ್ನು ಅಷ್ಟು ಮಾತ್ರವೂ ಸಹಿಸದೆ ಜೈಲಿಗೆ ಹಾಕುವಂತಹ ಕೆಟ್ಟ ವ್ಯವಸ್ಥೆಯೆ ನಮ್ಮದು? ವರ್ಷಕ್ಕೆ ಹತ್ತಾರು ಸಲ ಯಾವಯಾವುದೊ ಸರ್ಕಾರಿ ವಿಭಾಗಗಳ ನೌಕರರು ಸ್ಟ್ರೈಕ್ ಮಾಡುತ್ತಾರೆ. ಅವರೆಲ್ಲ ಸಂವಿಧಾನದ ಪ್ರಕಾರ ಅಪರಾಧಿಗಳಾಗಿಬಿಡುತ್ತಾರೆಯೆ? ಯಾರಿಗಾದರೂ ಜೈಲಾಗಿದೆಯೆ? Esma ಜಾರಿಗೊಳಿಸಲು ಸರ್ಕಾರಗಳು ಹೆದರುವುದು ಏಕೆ?
http://en.wikipedia.org/wiki/ESMA_(India)
ಜಾರಿಗೊಳಿಸಿದರೂ ಶಿಕ್ಷೆ ಆಗಿದೆಯೆ? ಯಾಕೆ ಅವರಿಗೆಲ್ಲ ಕೊನೆಗೆ ಮಾಫಿ ಮಾಡಲಾಗುತ್ತದೆ?
ಇಂತಹವನ್ನೆಲ್ಲ ಪರಿಶೀಲನೆಗೆ ಆಸ್ಪದವಿಲ್ಲದ ವೇದಿಕೆಗಳಲ್ಲಿ ಅಸಂಬದ್ಧವಾಗಿ ಬರೆದುಕೊಂಡು ಕೆಲವರು ಬಚಾವಾಗಬಹುದೇನೊ. ಆದರೆ, ಹಾಗಾದ ಮಾತ್ರಕ್ಕೆ ಅದೆಲ್ಲ ಅಥವ ನೀವು ಹೇಳುವುದೆಲ್ಲ ನಿಜವೆ?
ಅವರು ( ಪಟ್ಟಾಭಿರಾಮ ಸೋಮಯಾಜಿ) ಕಾನೂನಿನ ವಿರುದ್ಧ ಹೋಗಿದ್ದಾರೆ ಎನ್ನುತ್ತೀರ. ಅದು ಸಾಬೀತಾಯಿತೆ? ಅದನ್ನು ಸಾಬೀತು ಮಾಡಲು ಮಂತ್ರಿಗಳ ಒತ್ತಡವೇಕೆ? ಇದನ್ನೆ ನಾನು ಇನ್ನೊಂದು ಕಾಮೆಂಟಿನಲ್ಲಿ ಹೇಳಿದ್ದು, ನಮ್ಮಲ್ಲಿ ಅಪರಾಧಿಗಳನ್ನು ನಿರಪರಾಧಿ ಮಾಡುವುದು, ನಿರಪರಾಧಿಗಳನ್ನು ಅಪರಾಧಿ ಮಾಡುವುದು ಅಷ್ಟೇನೂ ಕಷ್ಟವಿಲ್ಲ, ಎಂದು. ಕಾನೂನಿನ ಪ್ರಕಾರ ತೆಗೆದುಕೊಳ್ಳುವ ಕ್ರಮಕ್ಕೆ ನನ್ನ ತಕರಾರಿಲ್ಲ. ಇದ್ದರೂ ಅದು ಕಾನೂನಿನ ವ್ಯಾಪ್ತಿಯಲ್ಲಿಯೆ ಇರುತ್ತದೆ. ನನ್ನದು (ಮನವಿ/ವಕಾಲತ್ತು) ಕಾನೂನಿನ ವ್ಯಾಪ್ತಿಯಲ್ಲಿ ಇಲ್ಲ ಎಂದು ಹೇಗೆ ಹೇಳುತ್ತೀರಿ? ಅದಕ್ಕೆ ಬೆಂಬಲಿಸಿದವರೆಲ್ಲ ಈಗ ಅಪರಾಧಿಗಳೆ?
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ನೋಡಿ ನಿಮ್ಮ ಲೇಖನದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಇದೆ.
ಪ್ರ: ಅವರು ( ಪಟ್ಟಾಭಿರಾಮ ಸೋಮಯಾಜಿ) ಕಾನೂನಿನ ವಿರುದ್ಧ ಹೋಗಿದ್ದಾರೆ ಎನ್ನುತ್ತೀರ. ಅದು ಸಾಬೀತಾಯಿತೆ?
ಉ: ನಮ್ಮಲ್ಲಿ ಅಪರಾಧಿಗಳನ್ನು ನಿರಪರಾಧಿ ಮಾಡುವುದು, ನಿರಪರಾಧಿಗಳನ್ನು ಅಪರಾಧಿ ಮಾಡುವುದು ಅಷ್ಟೇನೂ ಕಷ್ಟವಿಲ್ಲ, ಎಂದು.
ಇಷ್ಟೆ ಸಾಕಲ್ಲವೆ..
ಇನ್ನು ಸಾಬೀತು. ಸ್ವಾಮಿ ಅದೇನು ೨೦-೨೦ ಕ್ರಿಕೆಟ್ ಮ್ಯಾಚೆ ೩ ಘಂಟೆಗಳಲ್ಲಿ ತೀರ್ಮಾನ ಆಗಿ ಬಿಡಕ್ಕೆ.. ಕೋರ್ಟ್ ಅಪರಾದಿ ಅಂತ ತೀರ್ಪು ಕೊಟ್ಟಿದ್ದರೂ ಅಫ್ಜಲ್ ಗುರು ನೆಮ್ಮದಿಯಾಗಿ ಬದುಕಿಲ್ಲವೆ? ಅಪರಾದಿ ಅಂತ ಶಿಕ್ಷೆ ಕೊಟ್ಟಿದರೂ ಶಿಬು ಸೊರೆನ್ ಆಚೆ ಇಲ್ಲವೆ? ೯೩ರ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಗೆ ಶಿಕ್ಷೆ ಆಗಿದ್ದರೂ ಸಮಾಜವಾದಿ ಪಕ್ಷದಿಂದ ಅವರು ಲೋಕಸಭೆಗೆ ನಿಲ್ಲುತ್ತಿಲ್ಲವೇ?
ಇನ್ನು ಸರ್ಕಾರಿ ನೌಕರರು ಸರ್ಕಾರದ ಮಾಧ್ಯಮಗಳಿಗೆ ಅನ್ನುಮತಿ ಇಲ್ಲದೆ ಮಾತನಾಡೂವಂತಿಲ್ಲ ಎಂದು rule 11 Government Servants' Conduct Rules ಹೀಗೆ ಹೇಳುತ್ತೆ
"Similarly, rule 11 of the Government Servants' Conduct Rules prohibits them from sharing information with another government servant, a non-official or the press, while also considering it an offence under section 5 of the Official Secrets Act. "
http://www.goanews.c...
http://www.tngda.com..., ಈ ಕೊಂಡಿಯಲ್ಲಿ ತಮಿಳುನಾಡಿನಲ್ಲಿ ಮಂಡಿಸಿರುವ ಇದೇ ರೀತಿ ವಿದೇಯಕ ಇದೇ ನೋಡಿ.
ಪಟ್ಟಾಭಿರಾಮಯ್ಯ ಇನ್ನೂ ಸರ್ಕಾರಿ ಸೇವೆಯಲ್ಲಿ ಇದ್ದಾರೆ, ಹಾಗಾಗಿ ಅವರು ಸರ್ಕಾರದ ಅಥವಾ ಯಾರದೋ ವಿರುದ್ದ "ಪೂರ್ವಾನುಮತಿ" ಇಲ್ಲದೆ ಮಾತನಾಡುವ ಹಾಗಿಲ್ಲ. ಅಷ್ಟು ಅವಶ್ಯಕತೆ ಇದ್ದಲ್ಲ್ಲಿ ರಾಜೀನಾಮೆ ಕೊಟ್ಟು ಯಾರ ವಿರುದ್ದ ಬೇಕಾದರೂ ಮಾತನಾಡಲಿ. ಆಗ ಯಾರೂ ವಕಾಲತ್ತು ಹಾಕುವ ಅವಶ್ಯಕತೆ ಇರುವುದಿಲ್ಲ.
ಕಾನೂನಿನಲ್ಲಿ ಪೋಲಿಸರು ಮಾತ್ರ ಸ್ಟ್ರೈಕ್ ಮಾಡುವ ಹಾಗೆ ಇಲ್ಲ ಅಂದಿದೆ. ಸರ್ಕಾರಿ ನೌಕರರೆಲ್ಲ ಅಂದಿಲ್ಲ. ಹಾಗಾಗಿ ಅವರು ಸ್ಟ್ರೈಕ್ ಮಾಡುತ್ತಾರೆ. ಪೋಲೀಸರು/ಮಿಲಿಟರಿ ಸ್ಟ್ರೈಕ್ ಮಾಡಿದ್ದಾರೆಯೆ?
ಪಟ್ಟಾಭಿರಾಮಯ್ಯ ತಪ್ಪು ಮಾಡಿಲ್ಲ ಅಂತ ತಾವು ಹೇಗೆ ಹೇಳುತ್ತಿರಾ? ಕಾನೂನು ಇಲ್ಲವೆ? ಅವರ ಪರವಾಗಿ ವಕಾಲತ್ತು ಯಾಕೆ?ಕಾನೂನಿನ ಮೇಲೆ ತಮಗೆ ನಂಬಿಕೆ ಇಲ್ಲವೆ?
ಸ್ವಘೋಷಿತ ಬುದ್ದಿಜೀವಿ, ರಾಜ್ಯಪಾಲರ ಬಳಿ ಯಾಕೆ ಹೋಗಬೇಕಿತ್ತು? ಸಾವಿರಾರು ಜನ ವಿಮರ್ಶೆ ಟೀಕೆ ಮಾಡಿದ್ದಾರೆ, ತಮಗೆ ಅಗತ್ಯಕ್ಕೆ ತಕ್ಕಂತಹ ಪದಗಳನ್ನು ಬಳಸಿ ಕೊಂಡಿದ್ದಾರೆ,, ಅವರನ್ನು ಯಾರು ಜೈಲಿಗೆ ಕಳಿಸಿಲ್ಲ ಅಥವಾ ಅವರ ಮೇಲೆ ಕೇಸ್ ಹಾಕಿಲ್ಲ.. ವ್ಯವಸ್ಥೆ ಸರಿಯಾಗೆ ಇದೆ.. ಆದರೆ ತಮ್ಮ ಅಥವಾ ತಮ್ಮವರ ಪರವಾಗಿ ಬಂದಾಗ ಜನ ಅದನ್ನ ಸರಿಗಿಲ್ಲ.. ಅಂತೆ ಸಂಭೋದಿಸುತ್ತಾರೆ ಅಷ್ಟೆ.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಭಾಸ್ಕರ್,
ಪಟ್ಟಾಭಿಯವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರೆ ಖುದ್ದು ಒತ್ತಡ ತರುತ್ತಿದ್ದಾರೆ ಎನ್ನುವ ಸುದ್ಧಿ ಪತ್ರಿಕೆಗಳಲ್ಲಿ ಬಂದಿತ್ತು. ಅದನ್ನು ಸರ್ಕಾರದ ವತಿಯಿಂದ ಯಾರೂ ನಿರಾಕರಿಸಲಿಲ್ಲ. ಇಷ್ಟಿದ್ದರೂ ಆರೋಪಿಯನ್ನು ಅಪರಾಧಿ ಎಂದು ಸಾಬೀತು ಪಡಿಸುವುದು ಕಷ್ಟವಾಯಿತೆ? ಇಂತಹ "ಅಧಿಕಾರಸ್ಥರ/ಪ್ರಭಾವಶಾಲಿಗಳ" ಒತ್ತಡದಿಂದಾಗಿಯೆ "ನಮ್ಮಲ್ಲಿ ಅಪರಾಧಿಗಳನ್ನು ನಿರಪರಾಧಿ ಮಾಡುವುದು, ನಿರಪರಾಧಿಗಳನ್ನು ಅಪರಾಧಿ ಮಾಡುವುದು ಅಷ್ಟೇನೂ ಕಷ್ಟವಿಲ್ಲ" ಎಂದು ನಾನಂದಿರುವುದು. ಹಾಗಿದ್ದರೂ ಇಲ್ಲಿ ಪ್ರಭಾವ/ಒತ್ತಡ ಕೆಲಸ ಮಾಡಿಲ್ಲ ಅಂದರೆ ವ್ಯವಸ್ಥೆಯನ್ನು ಅಷ್ಟು ಕೆಟ್ಟದಾಗಿ ಬಳಸಿಕೊಳ್ಳಲು ಈಗಲೂ ನಮ್ಮಲ್ಲಿ ಪ್ರತಿರೋಧವಿದೆ ಎಂದಾಯಿತು.
ಗೋವಾ ಮತ್ತು ತಮಿಳುನಾಡಿನ ವಿಷಯ ಹೇಳಿದ್ದೀರ. ಕರ್ನಾಟಕದಲ್ಲೂ ಕಾನೂನು ಹಾಗೆಯೆ ಇದೆ ಎಂದು ಭಾವಿಸೋಣ. ಪಟ್ಟಾಭಿಯವರು "ಸರ್ಕಾರದ ವಿರುದ್ಧ" ಮಾತನಾಡಿದ್ದರೆ (ಒಂದು ಗುಂಪಿನ ವಿರುದ್ಧ ಅಥವ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವುದು ಅಪರಾಧ ಎಂದು ಅಲ್ಲಿ ಕಾಣಿಸಲಿಲ್ಲ) ಅದಕ್ಕೆ ಆಗಬೇಕಾದ ಇಲಾಖಾ ವಿಚಾರಣೆ ಆಗಲಿ. ಆಗ ಅವರು ಏನು ಹೇಳಿದ್ದಾರೆ, ಯಾಕೆ ಹೇಳಿದ್ದಾರೆ ಎನ್ನುವ ವಿಷಯಕ್ಕೆ ಜನರಲ್ಲೂ ಚರ್ಚೆಯಾಗುತ್ತದೆ. ಅದರಿಂದ ಅಪಾಯವಾಗುತ್ತದೆ ಎಂದು ನನಗನ್ನಿಸುತ್ತಿಲ್ಲ. ಅವರಿಗೆ ಇಲಾಖೆಯಿಂದ ಶಿಕ್ಷೆಯಾದರೆ ಅಥವ ಕೋರ್ಟು ಅವರಿಗೆ ಶಿಕ್ಷೆ ವಿಧಿಸಿದರೆ, ನಮ್ಮ ವಕಾಲತ್ತು ಅದನ್ನು ತಡೆಯುವುದಿಲ್ಲ. ಆದರೆ ಇಲ್ಲಿರುವುದು ಸರ್ಕಾರ ನಡೆಸುತ್ತಿರುವ ಪಕ್ಷದವರು ರಾಜಕೀಯ ಕಾರಣಗಳಿಗಾಗಿ 'witch hunt' ಮಾಡುತ್ತಿದ್ದಾರೆ, ಎನ್ನುವುದು. "ಇಲ್ಲಿ ಹಾಗೆ ಆಗುತ್ತಿಲ್ಲ, ಆದರೂ ಸರಿ" ಎನ್ನುವುದೇ ನಿಮ್ಮ ಮಾತು?
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಇಲ್ಲಿ ಯಾರೂ ವ್ಯವಸ್ಥೆಯನ್ನ ಒಳ್ಳೆದಾಗಿ ಕೆಟ್ಟದ್ದ್ದಾಗಿ ಬಳಸಿಕೊಳ್ಳುವ ಪ್ರಶ್ನೆ ಅಲ್ಲ. ಪತ್ರಿಕೆಗಳಲ್ಲಿ ಬರುವುದೆಲ್ಲಾ ನಂಬುವುದಾದರೆ, ಒಮ್ಮೆ ವೆಂಕಟಗಿರಿಗೌಡರು ದೇವೆಗೌಡರ ಮೇಲೆ ಬರೆದ ವಿಷಯಗಳನ್ನು ನಂಬಲೇ ಬೇಕಾಗುತ್ತದೆ. ಸರ್ಕಾರದ ವತಿಯಿಂದ ಅದನ್ನು ನಿರಾಕರಿಸಿಲ್ಲ ಅನ್ನುವುದಾದರೆ ಅದನ್ನು ಒಪ್ಪಿ ಕೊಂಡಂತೆ ಏನೂ ಇಲ್ಲವಲ್ಲ. ಎಲ್ಲ ಪ್ರತಿಕ್ರಿಯೆಗಳಿಗೆ ತಾವು ಉತ್ತರ ಬರೆಯಲಿಲ್ಲ ಅನ್ನುವುದಾದರೆ ಅದನ್ನು ತಾವು ಒಪ್ಪಿಕೊಂಡಂತೆ ಅಂತಾಗುತ್ತದೆಯೆ? ತಾವೆ ಹೇಳಿದಂತೆ ಅದನ್ನು ನಿರಾಕರಿಸುವ ಅಥವಾ ಒಪ್ಪೊಕೊಳ್ಳಲು ಸರ್ಕಾರಕ್ಕೆ ಹಲವಾರು ಕಾರಣಗಳು ಇರುತ್ತವೆ. ಎಲ್ಲಾ ಮಾಡುವ ಆಪಾದನೆಗಳ ಬಗ್ಗೆ ನಿರಾಕರಿಸುವ ಇಲ್ಲ ಒಪ್ಪಿಕೊಳ್ಳುವ ಹಾಗೆ ಆದಲ್ಲಿ ಸರ್ಕಾರ ಅದಕ್ಕೆ ಒಂದು ಮಂತ್ರಿ ನೇಮಿಸಿ ಒಂದು ಅಧಿಕಾರಿವರ್ಗವನ್ನು ಅಲ್ಲಿ ಇಡಬೇಕಾಗುತ್ತದೆ.ಅದೂ ಕರ್ನಾಟಕದಲ್ಲಿ ದೇವೆಗೌಡರಂತಹ ರೈತರ ಪರ ಚಿಂತಿಸುವ, ಮಣ್ಣೀನ ಮಗ ಇರುವಾಗ. ದಿನ ಬೆಳಗಾದರೆ ನೋಡುತ್ತೀರ ಅವರು ಸರ್ಕಾರಕ್ಕೆ ಪತ್ರ ಬರೆದರು ಅಂತ......
ಸರ್ಕಾರದ ಪರ, ವಿರೋಧ ಅಥವಾ ಇನ್ನು ಯಾರ ಪರ ವಿರೋಧವಾಗಲಿ ಮಾಧ್ಯಮಕ್ಕೆ ಮಾತನಾಡೂವ ಮೊದಲು ಅವರು ಸರ್ಕಾರದ ಅನುಮತಿ ಪಡೆದಿರಲೇ ಬೇಕು ಅನ್ನಿಸುತೆ. ಇಲ್ಲವಾದಲ್ಲಿ ಸುಮ್ಮನೆ ಯಾವನೋ ಏನೋ ಅಂದ ಅಂದು ಕೇಸು ಹಾಕಲು ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ಲವೇ? ಒಬ್ಬ ಶಿಕ್ಷಕ ಮೊದಲು ಕಾನೂನು ತಾನು ಪಾಲಿಸಿ ಅದನು ತನ್ನ ವಿಧ್ಯಾರ್ಥಿಗಳಿಗೂ ಹೇಳಿಕೊಡಬೇಕು . ಇದೇ ಪಟ್ಟಾಭಿಯವರು ಎಷ್ಟು ಬಾರಿ ಕಾಶ್ಮೀರದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಪ್ರತಿಭಟಿಸಿ ಮಾತನಾಡಿದ್ದಾರೆ? ಬೆಂಗಳೂರು ಬಾಂಬ್ ಸ್ಫೋಟವನ್ನ ಖಂಡಿಸಿ ಯಾವ ಯಾವ ಟಿವಿ ಚಾನೆಲ್ ಗಳಿಗೆ ಮಾತನಾಡಿದ್ದಾರೆ? ಪಾರ್ಲಿಮೆಂಟ್ ಮೇಲೆ ನಡೆದ ಹಲ್ಲೆ, ಅಕ್ಷರಧಾಮದಲ್ಲಿ ನಡೆದ ಹತ್ಯೆ, ಇದೆಲ್ಲ ಇಅವರ ಬಾಯಿಯಿಂದ ಯಾಕೆ ಹೊರಬಂದಿಲ್ಲ? ಒಮ್ಮೆ internet ನಲ್ಲಿ ಇವರ ಹೆಸರು ಹಾಕಿ ನೋಡಿ, ಇವರ ಹೇಳಿಕೆಗಳು , ಇವರ ಲೇಖನಗಳು ಯಾವ ಉದ್ದೇಶದಿಂದ ಕೂಡಿದೆ, ಪೂರ್ವಾಗ್ರಹಪೀಡಿತರೇ ಅಲ್ಲವೆ ಅಂತ ತುಲನೆ ಮಾಡಿ.
ಪೂರ್ವಾಗ್ರಹಪೀಡಿತರು ಹೇಳುವುದೆಲ್ಲವೂ ಅಬದ್ಧವೆ?
ಭಾಸ್ಕರ,
--"ಸರ್ಕಾರದ ಪರ, ವಿರೋಧ ಅಥವಾ ಇನ್ನು ಯಾರ ಪರ ವಿರೋಧವಾಗಲಿ ಮಾಧ್ಯಮಕ್ಕೆ ಮಾತನಾಡೂವ ಮೊದಲು ಅವರು ಸರ್ಕಾರದ ಅನುಮತಿ ಪಡೆದಿರಲೇ ಬೇಕು ಅನ್ನಿಸುತೆ."
"ಅನ್ನಿಸುತ್ತೆ" ?
ಇಲ್ಲಿ ಸ್ಪಷ್ಟತೆ ಇಲ್ಲದೆ ಹೋಗಿರುವುದನ್ನು ಈ ಪದ ಹೇಳುತ್ತದೆ. ಮಾಧ್ಯಮದೊಂದಿಗೆ ಕೆಲವೊಂದು (ವೃತ್ತಿಗೆ ಸಂಬಂಧಿಸಿದಂತೆ, ಸರ್ಕಾರಿ ಗೌಪ್ಯತೆಗ ಸಂಬಂಧಿಸಿದಂತೆ) ಮಾತನಾಡಬಾರದು ಮತ್ತು ಸರ್ಕಾರದ ವಿರುದ್ಧ ಮತ್ತು ಇತರೆ ಕೇಂದ್ರ/ರಾಜ್ಯ ಸರ್ಕಾರಗಳಿಗೂ ಈ ಸರ್ಕಾರಕ್ಕೂ ತಿಕ್ಕಾಟ ತರುವ ಹಾಗೆ ಮಾತನಾಡಬಾರದು ಎಂದು ತಮಿಳುನಾಡಿನ ಮಸೂದೆ ಹೇಳುತ್ತದೆ. ’ಮಾಧ್ಯಮದೊಂದಿಗೆ ಏನನ್ನು ಮಾತನಾಡಲೂ ಒಪ್ಪಿಗೆ ತೆಗೆದುಕೊಳ್ಳಬೇಕು’ ಎಂದಿಲ್ಲ. ಸುಮ್ಮನೆ ಅದನ್ನೆ "ಮಾಧ್ಯಮದೊಂದಿಗೆ ಮಾತನಾಡುವುದೆ ಅಪರಾಧ" ಎಂದು ಪದೆಪದೆ ಹೇಳಬೇಡಿ. ಈ ವಿಚಾರದಲ್ಲಿ ಇಲ್ಲಿಯ ತನಕ ಭಾರತದ ಇನ್ಯಾವುದೆ ಭಾಗದಲ್ಲಿ ಯಾವುದೆ ಕಾಲೇಜು ಪ್ರೊಫೆಸರ್‌ಗೆ ಶಿಕ್ಷೆ ಆಗಿದೆ ಎನ್ನುವುದನ್ನು ನಾನು ಕೇಳಿಲ. (ಆಗಿದ್ದರೂ ಆಗಿರಬಹುದು. ಆದರೆ ಈ ವಿಚಾರ ಗಂಭಿರವಾದ್ದರಿಂದ ಮತ್ತು ಅಷ್ಟಿದ್ದರೂ ಅದರ ಬಗ್ಗೆ ಕೇಳಿಲ್ಲವಾದ್ದರಿಂದ ಹಾಗೆ ಆಗಿಲ್ಲ ಎಂದು ಭಾವಿಸುತ್ತೇನೆ.) ಹಾಗೆಂದು ಯಾವೊಬ್ಬ ಸರ್ಕಾರಿ ಮೇಷ್ಟ್ರು ಪತ್ರಿಕೆ/ಮಾಧ್ಯಮಗಳೊಂದಿಗೆ ಮಾತನಾಡಿಯೆ ಇಲ್ಲವೆ? ಪ್ರತಿಸಲವೂ ಅದಕ್ಕೆ ಒಪ್ಪಿಗೆ ತೆಗೆದುಕೊಳ್ಳುತ್ತಾರೆಯೆ? ತೆಗೆದುಕೊಂಡಿಲ್ಲ ಎಂದಾದರೆ ಅಷ್ಟೊಂದು "ಕಾನೂನು ಉಲ್ಲಂಘಕ" ಮೇಷ್ಟ್ರುಗಳು ನಮ್ಮಲ್ಲಿ ಇದ್ದಾರೆಯೆ? ಇದ್ದದ್ದೇ ಆದರೆ ಇಂತಹ ಕೆಟ್ಟ ಗುರುಗಳನ್ನೆಲ್ಲ ಗಲ್ಲಿಗೆ ಹಾಕಲು ನೀವು ತಕ್ಷಣ ಹೋರಾಡುವುದು ದೇಶಭಕ್ತಿಯನ್ನು ತೋರಿಸಿದಂತೆ ಆಗುವುದಿಲ್ಲವೆ? ಯಾಕೆ ಅ ಬಗ್ಗೆ ಚಳವಳಿ ಆರಂಭಿಸಿಲ್ಲ? ಹಾಗೊಂದು ವೇಳೆ ಅದು ಹೊಳೆಯದೆ ಹೋಗಿದ್ದಲ್ಲಿ ಈಗ ನಾನು ಅದರ ಸಾಧ್ಯತೆಯನ್ನು ನಿಮಗೆ ಸೂಚಿಸಿದ್ದೇನೆ. ನಾಳೆಯಿಂದಲೆ "ಗಲ್ಲು ಅಭಿಯಾನ" ಆರಂಭವಾಗಲಿ. ಏನಂತೀರ?
--"ಬೆಂಗಳೂರು ಬಾಂಬ್ ಸ್ಫೋಟವನ್ನ ಖಂಡಿಸಿ ಯಾವ ಯಾವ ಟಿವಿ ಚಾನೆಲ್ ಗಳಿಗೆ ಮಾತನಾಡಿದ್ದಾರೆ" ಇನ್ನೂ ಇಂತಹ ಪ್ರಶ್ನೆಗಳಿಗೆ...: ಮಾತನಾಡಿರುವುದಕ್ಕೆ ನನ್ನಲ್ಲಿ ಸಾಕ್ಷ್ಯ ಇಲ್ಲ. ಆದರೆ ಮಾತನಾಡದೆ ಇರುವುದ್ದಕ್ಕೆ ನಿಮ್ಮಲ್ಲಿ ಸಾಕ್ಷ್ಯಗಳಿವೆಯೆ? ಅವರು ೨೪/೭ ಏನು ಹೇಳುತ್ತಾರೆ, ಏನು ಮಾಡುತ್ತಾರೆ ಎನ್ನುವುದಕ್ಕೆ ನಿಮ್ಮಲ್ಲಿ ದಾಖಲು ಇದೆಯೆ? ಇಬ್ಬರಲ್ಲೂ ಇಲ್ಲ ಎಂದಮೇಲೆ ಅದನ್ನು ಅಲ್ಲಿಗೇ ಬಿಡಿ. ಸುಮ್ಮನೆ ಅದು ಮಾಡಿಲ್ಲ, ಇದು ಮಾಡಿಲ್ಲ ಎನ್ನಬೇಡಿ. ಇಲ್ಲಿ ನಾವು ಚರ್ಚಿಸುತ್ತಿರುವ ವಿಷಯ ಅದಲ್ಲ.
ಹಾಗೆಯೆ, ಅವರು ಹೇಳಬೇಕು ಎನ್ನಿಸಿದಾಗಲೆಲ್ಲ ಟಿವಿಯವರು ಅವರ ಮನೆಯ ಮುಂದೆ ಹಾಜರಿರುವುದಿಲ್ಲ. ಅವರ ಮಾತು ಯಾವ ವಿಷಯಕ್ಕೆ ಪ್ರಭಾವಶಾಲಿ ಎಂದು ಟಿವಿಯವರಿಗೆ ಅನ್ನಿಸುತ್ತದೆಯೊ ಅಂತಹುದಕ್ಕೆ ಮಾತ್ರ ಅವರನ್ನು ಕೇಳುತ್ತಾರೆ. ಮಿಕ್ಕ ಸಮಯದಲ್ಲಿ ಟಿವಿಯವರು ಅವರನ್ನಾಗಲಿ, ಆ ವಿಷಯಕ್ಕೆ ಯಾರನ್ನೆ ಆಗಲಿ ಕ್ಯಾರೆ ಎನ್ನುವುದಿಲ್ಲ. ಈ ವಿಚಾರಗಳು ನಿಮಗೆ ಗೊತ್ತಿಲ್ಲವೆ? ಇಲ್ಲಾ, ಎಲ್ಲಾ ವಿಷಯಕ್ಕೂ ಅವರ ಅಭಿಪ್ರಾಯ ಕೇಳಲು ಮಾಧ್ಯಮಗಳು ಅವರ ಮನೆಯ ಮುಂದೆಯೆ ಠಿಕಾಣಿ ಹಾಕಿವೆ ಎನ್ನುತ್ತೀರೊ?
ಇನ್ನು ’ಪೂರ್ವಾಗ್ರಹಪೀಡಿತರು’ ಎನ್ನುವುದಕ್ಕೆ, ಇರಬಹುದೇನೊ. ಹಾಗೆಂದು ಅವರು ಹೇಳಿದ್ದನ್ನು ನಾವೇನು ಚಾಚೂತಪ್ಪದೆ ಮಾಡುತ್ತಿದ್ದೇವಾ? ಅದನ್ನು ವಿಮರ್ಶಿಸುವ ಯೋಗ್ಯತೆ ನಮಗಿಲ್ಲವೆ? ಹಾಗೆಯೆ ಪೂರ್ವಾಗ್ರಹಪೀಡಿತರು ಹೇಳುವುದೆಲ್ಲವೂ ಅಬದ್ಧವೆ? ಕೇಳಿಸಿಕೊಳ್ಳಲು ಅನರ್ಹವೆ? "ಪೂರ್ವಾಗ್ರಹಪೀಡಿತರನ್ನು" ಜೈಲಿಗೆ ಹಾಕುವುದೊ ಅಥವ ಶಿಕ್ಷಿಸುವುದೊ ಒಂದೆ ಅದಕ್ಕೆ ಪರಿಹಾರವೆ? ನಾಳೆ ನಿಮ್ಮನ್ನು ಯಾರಾದರು ಪೂರ್ವಾಗ್ರಹಪೀಡಿತರು ಎಂದು ಆಪಾದಿಸಿ, ನಿಮಗೆ ಶಿಕ್ಷೆಯಾಗಬೇಕು ಎಂದರೆ, ಅದು ನ್ಯಾಯವೆ?
ನಮಸ್ಕಾರ,
ರವಿ...
ಉ: ಪೂರ್ವಾಗ್ರಹಪೀಡಿತರು ಹೇಳುವುದೆಲ್ಲವೂ ಅಬದ್ಧವೆ?
--"ಬೆಂಗಳೂರು ಬಾಂಬ್ ಸ್ಫೋಟವನ್ನ ಖಂಡಿಸಿ ಯಾವ ಯಾವ ಟಿವಿ ಚಾನೆಲ್ ಗಳಿಗೆ ಮಾತನಾಡಿದ್ದಾರೆ" ಇನ್ನೂ ಇಂತಹ ಪ್ರಶ್ನೆಗಳಿಗೆ...: ಮಾತನಾಡಿರುವುದಕ್ಕೆ ನನ್ನಲ್ಲಿ ಸಾಕ್ಷ್ಯ ಇಲ್ಲ. ಆದರೆ ಮಾತನಾಡದೆ ಇರುವುದ್ದಕ್ಕೆ ನಿಮ್ಮಲ್ಲಿ ಸಾಕ್ಷ್ಯಗಳಿವೆಯೆ? ಅವರು ೨೪/೭ ಏನು ಹೇಳುತ್ತಾರೆ, ಏನು ಮಾಡುತ್ತಾರೆ ಎನ್ನುವುದಕ್ಕೆ ನಿಮ್ಮಲ್ಲಿ ದಾಖಲು ಇದೆಯೆ? ಇಬ್ಬರಲ್ಲೂ ಇಲ್ಲ ಎಂದಮೇಲೆ ಅದನ್ನು ಅಲ್ಲಿಗೇ ಬಿಡಿ. ಸುಮ್ಮನೆ ಅದು ಮಾಡಿಲ್ಲ, ಇದು ಮಾಡಿಲ್ಲ ಎನ್ನಬೇಡಿ. ಇಲ್ಲಿ ನಾವು ಚರ್ಚಿಸುತ್ತಿರುವ ವಿಷಯ ಅದಲ್ಲ.
>> ನಾನು ಹೇಳಿದಂತೆ ಈ ಮಹಾನುಭಾವರ ಹೆಸರನ್ನು google ನಲ್ಲಿ ಬರೆದು ಹುಡುಕಿ. ಇವರ ಹೇಳಿಕೆಗಳು, ಲೇಖನಗಳು ಸಿಗುತ್ತವೆ. ಇವರು ಒಂದು ವಿಚಾರದ ವಿರುದ್ದ ಮಾತನಾಡುವ ಲೇಖನಗಳು, ಹೇಳೀಕೆಗಳು ಮಾತ್ರ ಸಿಕ್ಕುತವೆ ಎನ್ನುವುದಾದರೆ, ಇವರು ಪೂರ್ವಾಗ್ರಹಪೀಡಿತರು ಎಂದೇ ಅರ್ಥ ಅಲ್ಲವೇ? ತಾವು ಹೇಗೆ ವಾಜಪೇಯಿ ಅವರ ಪಕ್ಷವನ್ನು ಕೋಮುವಾದಿ ಎಂದಿದ್ದೀರಿ? ಅವರು ಕೋಮುವಾದದ ವಿರುದ್ದ ಮಾತನಾಡಿದ ದಾಖಲೆಗಳು ತಮ್ಮ ಬಳಿ ಇಲ್ಲ ಅನ್ನುವುದು ಮಾತ್ರ ತಾನೆ? ನಾನು ಹಾಗೆಯೆ ಹೇಳಿರುವುದು. ಆಡ್ವಾಣಿಯವರ ಒಂದು ಮಾತನ್ನು "quote" ಮಾಡಿ ಕೋಮುವಾದಿ ಅನ್ನುವುದಾದರೆ, ಇದನ್ನು ಯಾಕೆ ತಾವು ಪೂರ್ವಾಗ್ರಪೀಡಿತರು ಅಂತ ಒಪ್ಪಿ ಕೊಳ್ಳುತ್ತಿಲ್ಲ? ಬಿಜೆಪಿಯ ಜೋಷಿ, ಕಾಶ್ಮೀರಕ್ಕೆ ಹೋಗಿ ರಾಷ್ಟ್ರಧ್ವಜ ಹಾರಿಸಿ ಬಂದರಲ್ಲ, ಅದು ನಿಮ್ಮ ಕಣ್ಣೀಗೆ ಕಂಡಿಲ್ಲವೆ, ಭಯೋತ್ಪದಕರು ನೀಡಿದ್ದ ಆಹ್ವಾನ ಸರ್ಕಾರ ಕೂಡ ಸ್ವೀಕರಿಸಿರಲಿಲ್ಲ.. ಅಂದು ಒಬ್ಬ ದೇಶದ ಪ್ರಜೆಯಾಗಿ ಅಲ್ಲಿ ಹೋಗಿ ಧ್ವಜ ಹಾರಿಸಿ ಬಂದರು, ಇದು ಕೇಲವ ರಾಜಕೀಯ ತಂತ್ರ ಅಂದು ಕೆಲವರಿಗೆ ಕಾಣಬಹುದು, ಅದಕ್ಕೆ ಯಾರ ಅಭ್ಯಂತರವೂ ಇಲ್ಲ.. ಎಲ್ಲ ಕಡೆ ಕಾಮಾಲೆ ಕಣ್ಣೂಗಳು ಇದ್ದೇ ಇರುತ್ತವೆ.
ಇನ್ನು ಸ್ಪಷ್ಟತೆ ಬಗ್ಗೆ... ಯಾವ ಯಾವ NRI ಹೇಳಿದ್ದರೆ ಅನ್ನುವುದು ನಿಮಲ್ಲೂ ಸ್ಪಷ್ಟತೆ ಇಲ್ಲ, ಆ ವಿಷಯದಲ್ಲಿ ತಾವೆ ಸೋಲು ಒಪ್ಪಿಕೊಂಡಿದ್ದೀರ, ಹಾಗಿದ್ದರೂ ಅ ರೀತಿ ಹೇಳಿರುವ NRI ಇದ್ದಾರೆ ಅಂತ ವಾದಿಸುತ್ತಿದ್ದೀರ, ನಾನು ಈ ಪಟ್ಟಾಭಿ ಸೋಮಯಾಜಿಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿಯೇ ಬರೆದಿರುವುದು. ಇನ್ನು NRI ಗಳೂ ೨೪/೭ ಏನು ಏನು ಹೇಳಿದ್ದಾರೆ, ಏನು ಮಡುತ್ತರೆ ಅನ್ನುವುದಕ್ಕೆ ತಮ್ಮ ಬಳಿ ಇರುವ ದಾಖಲೆಗಳನ್ನು ಓದಗಿಸಿ. ಅವರು ಈ ಸಿನೇಮಾ ಕಲೆಯ ದೃಷ್ಟಿಯಲಿ ಒಪ್ಪಿಕೊಂಡಿಲ್ಲ ಅಂತ ಹೇಗೆ ನಂಬುತ್ತೀರಾ? ನೀವು ಒಂದು ಗುಂಪಿನ ಬಗ್ಗೆ ಬರೆದಿರುವುದು ಪತ್ರಿಕೆಗಳಲ್ಲಿ ಓದಿಯೆ ತಾನೆ.. ನಿಮ್ಮ ಲೇಖನದ ೨ನೇ ಪ್ಯಾರ ದಲ್ಲಿ ಸ್ಪಷ್ಟವಾಗಿ ಬರೆದಿದ್ದೀರ. ಈ ಚಿತ್ರದ ಬಗ್ಗೆ ಕೆಟ್ತದಾಗಿ ಮಾತನಾಡಿರುವವರ ಬಗ್ಗೆ ನಿಮ್ಮ ದೃಷ್ಟಿ ನೆಟ್ಟಿದೆ. ಅದಕ್ಕೆ ಅಗತ್ಯಕ್ಕೆ ತಕ್ಕಂತೆ ತಾವು ಪತ್ರಿಕಾವರದಿಗಳನ್ನ ಓದಿದ್ದೀರ ಅಷ್ಟೆ. ನೀವು ಅಷ್ಟೆ , NRI ಗಳ ದಿನಚರಿ , ಎಲ್ಲ ಹೇಳೀಕೆಗಳು ಗೊತ್ತಿಲ್ಲ ಅಂದ ಮೇಲೆ ಒಂದು ಗುಂಪಿನ ಬಗ್ಗೆ ಬಿಜೆಪಿ ಬೆಂಬಲಿಗರು ಎಂದು ಬರೆಯಬೇಡಿ.
ಇನ್ನು ಸೋಮಯಾಜಿ ಬಗ್ಗೆ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ತಮ್ಮ ಲೇಖನಕ್ಕೆ ಕಾಮೆಂಟ್ ಬರೆದಿದ್ದಾರೆ... ಅದನ್ನು ಒಮ್ಮೆ ಓದಿ ದಯವಿಟ್ಟು. ಒಬ್ಬ ಶಿಕ್ಷಕ ಮೊದಲು ವಿದ್ಯರ್ಥಿಗಳಿಗೆ ಒಳ್ಲೆದು ಬೋಧನೆ ಮಾಡಬೇಕು. ಅಲ್ಲಿ ಅವರು ಬರೆದಿರುವುದು ನೋಡಿ.. ಅದೇ ಕಾಲೇಜಿನ ವಿದ್ಯಾರ್ಥಿ, ಶಿಕ್ಷಕನ ಬಗ್ಗೆ ವಕಾಲತ್ತು ಹಾಕುವ ಕೆಲಸ ಮಾಡಲ್ಲ ಅನ್ನ ಬೇಕಿದ್ದರೆ ಅವರ "ಘನತೆ" ಯಾವ ಮಟ್ಟದ್ದು ಎಂದು ತಿಳಿಯುತ್ತದೆ.
ಅವರು ಮಾದ್ಯಮಗಳಲ್ಲಿ ಮಾತನಡದಿದ್ದರೆ ಪರವಾಗಿಲ್ಲ, ತಮ್ಮ ಲೇಖನಗಳಿಂದಾದರು ಎಲ್ಲ ಘಟನೆಗಳ ಬಗ್ಗೆ ಬರೆಯಬೇಕು, ಇಲ್ಲವಾದಲ್ಲಿ biased" ಗುಣ ತೋರಿಸಿದಂತಾಗುವುದಿಲ್ಲವೇ ? ಕಾನೂನು ಉಲ್ಲಂಘಿಸಿವವರಿಗೆಲ್ಲಾ ಶಿಕ್ಷೆ ಸರಿಯಾದ ಸಮಯದಲ್ಲಿ ಆಗುವ ಹಾಗಿದ್ದರೆ ಜೈಲುಗಳು ತುಂಬಿ ತುಳುಕಾಡುತ್ತಿದ್ದವು. ಸರ್ಕಾರದ ಬೊಕ್ಕಸ ತುಂಬಿ ಹರಿಯುತಿತ್ತು ದಂಡದ ಹಣದಿಂದ. ಬೇರೆಯೋರು ತಪ್ಪ ಮಾಡಿ ಬಚಾವ್ ಆಗಿದರೆ ಅಂದರೆ ಎಲ್ಲರೂ ಆಗಬೇಕು ಅಂದೇನು ಇಲ್ಲವಲ್ಲ? ಇನ್ನೊಮೆ ಈ ಮಹನೀಯರ ಹೆಸರನ್ನು google ನಲ್ಲಿ ಹುಡೂಕಿ.
ಪೂರ್ವಾಗ್ರಹಪೀಡಿತರು ಹೇಳುವುದೆಲ್ಲಾ ಅನರ್ಹವಲ್ಲ, ಕೇಳಿಸಿಕೊಳ್ಳುವುದು ತಪ್ಪಲ್ಲ ಅನ್ನುವುದಾದರೆ, ಆಡ್ವಾಣೀಯವರ ಹೇಳಿಕೆಗೆ ಯಾಕೆ ಈ ಲೇಖನದಲ್ಲಿ ತಂದು ಗೂಬೆ ಕೂರಿಸಿದಿರಿ? ಆಡ್ವಾಣಿ ರಾಜಕಾರಣಿ, ವಿದ್ಯರ್ಥಿಗಳು ಒಂದು ದಿನ ಅವರ ಮಾತು ಕೇಳಬಹುದ, ಆದರೆ ನೆನಪಿಡಿ ಸೋಮಯಾಜಿ ಒಬ್ಬ ಶಿಕ್ಷಕ, ದಿನ ಪಾಠ ಮಾಡುತ್ತಾರೆ, ಅದೇ ತಮ್ಮ ವಾದವನ್ನು ವಿದ್ಯಾರ್ಥಿಗಳಿಗೆ ದಿನಾ ತುತ್ತೂರಿ ಊದಿದರೆ? ನಾನು ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆ [ ಪ್ರೊ| ಬಗವಾನ್] ಹಿಂದೆ ಸಂಪದದಲ್ಲಿ ಹಾಕಿದ್ದೆ, ಒಮ್ಮೆ ನೋಡಿ.
ಪೂರ್ವಾಗ್ರಹಪೀಡೀತರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ನಾನು ಹೇಳುತ್ತಿಲ್ಲ,. ನೀವು ಸುಮ್ಮನೆ ತಿರುಚಲು ಪ್ರಯತ್ನ ಪಡುತ್ತಿದ್ದಿರ ಅಷ್ಟೆ. ಕಾನೂನಿನ ಪ್ರಕಾರ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ಆಗಬೇಕು ಅದು ಎಲ್ಲರ ಅಬ್ಭಿಪ್ರಾಯ. ನೀವೂ ಅದರ ವಿರುದ್ದ ಮಾತನಾಡುವುದಾದರೆ ಅದು ನಿಮ್ಮ ಸ್ವಂತ ವಿಚಾರ ಅಷ್ಟೆ.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
"ಮೊದಲೆ ಹೇಳಿದಂತೆ, "ಯಾರೊ ಹೀಗೆ ಅಂದರು, ಆಮೇಲೆ ಹೀಗಾಯಿತು; ’ಸಂತಸ’ವಾಯಿತು," ಎಂದು ಗೂಢವಾಗಿ ಬರೆಯಬೇಡಿ. ಇಲ್ಲಿನ ವಿಷಯಕ್ಕೆ ಪ್ರಸ್ತುತವಿದ್ದರೆ ನೇರವಾಗಿ ತನ್ನಿ. "
-- ಯಾವುದು ಗೂಡವಿಲ್ಲ.. ಸಂಪದದ ಲೇಖನಗಳು ಹಾಗು ಅದರ ಪ್ರತಿಕ್ರಿಯೆಗಳನ್ನು ಒಮ್ಮೆ ನೋಡಿ ಸಾಕು ತಮಗೆ ಅರ್ಥ ಆಗಿ ಹೋಗುತ್ತೆ ಯಾರು ಆ ರೀತಿ ಅಂದರು ಅಂತ..
ಇನ್ನು ವಿಷಯಕ್ಕೆ ಪ್ರಸ್ತುತ,, ಆಡ್ವಾನಿ, ಬಿಜೆಪಿ ಹಾಗು ಸ್ಲಮ್ ಡಾಗ್, ಇವಕ್ಕೆ ಎಲ್ಲಿಂದ ಎಲ್ಲಿ ಸಂಭಂಧ ? ಲೇಖನದ ತಲೆ ಬರಹಕ್ಕೂ ಆಡ್ವಾಣಿಗೂ, ಅವರ ಅಫ಼್ಜಲ್ ಗುರು ಬಗ್ಗೆ ಹೇಳಿಕೆಗೂ ಯಾಕೆ ತಾವು ಸಂಬಂಧ ಕಲ್ಪಿಸುತಿದ್ದೀರಾ? ಒಟ್ಟಿನಲ್ಲಿ ತಮಗೆ ಬಿಜೆಪಿಯನ್ನು , ಆಡ್ವಾಣಿಯನ್ನು ತೆಗಳಲು ಒಂದು platform ಬೇಕಾಗಿತ್ತು ಅನ್ನಿಸುತ್ತೆ. ಚುನಾವಣೆಯಲಿ ಠೇವಣಿ ಹುಟ್ಟದ ಚಂಪಾ ನೆನಪಾಗುತ್ತಾರೆ ಇಲ್ಲಿ. ಎಲ್ಲಾದಿಕ್ಕೂ ಬ್ರಾಹ್ಮಣರನ್ನು, ಮಠಾದಿಪತಿಗಳನ್ನು ತೆಗಳುತ್ತಾ ಇರುತ್ತಾರೆ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
"ಅಂತಹ ಉಗ್ರ ಪ್ರತಾಪ ಸಿಂಹರೂ ಸಹ ಸಿನೆಮಾದಲ್ಲಿ ಅತಿಶಯೋಕ್ತಿಯಿಲ್ಲ ಎಂದು ಹೇಳಿದ್ದಾರೆ"
ಈ ಮಾತನ್ನೇ ನಾವು ಅತಿಶಯೋಕ್ತಿಯ ಪರಮಾವದಿ ಎಂದು ಹೇಳಲಡ್ಡಿಯಿಲ್ಲ ಅನಿಸುತ್ತಿದೆ ನನಗೆ
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
??
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಪ್ರತಿಕ್ರಿಯೆಗೆ ಥ್ಯಾಂಕ್ಸ್ ಸುಪ್ರೀತ್
೧. ನಾನು ಹೇಳಿದ ’ಅತಿಶಯೋಕ್ತಿಗಳು’ ಯಾವವು ಎಂಬುದನ್ನು, ನಾನು ಬರೆದ ಮೊದಲ ಪ್ರತಿಕ್ರಿಯೆಯ ಎಂಟು ಪ್ರಶ್ನೆಗಳಲ್ಲಿ ಕಾಣಬಹುದು. ಸ್ಲಮ್ಮಿನಲ್ಲಿ ’ಥ್ರೀ ಮಸ್ಕಿಟಿಯರ್ಸ್’ ಕಲಿಸುವುದರಿಂದ ಹಿಡಿದು ಮುಂಬಯಿಯಲ್ಲಿ ’ದರ್ಶನ ದೋ ಭಗವಾನ್’ ಎಂಬ ಹಾಡನ್ನು ಹಾಡುವ ಭಿಕ್ಷುಕರವರೆಗೆ, ಎಲ್ಲ ಅತಿಶಯೋಕ್ತಿಗಳೇ. ಭಾರತೀಯ ಸ್ಲಮ್ಮಿನ ಹುಡುಗನೊಬ್ಬನಿಗೆ ಥ್ರೀ ಮಸ್ಕಿಟಿಯರ್ಸ್ ನ ಹೀರೋಗಳ ಹೆಸರಿನ ಪರಿಚಯವಿದೆ, ಆದರೆ ಭಾರತದ ಸ್ಲೋಗನ್ ’ಸತ್ಯಮೇವ ಜಯತೆ’ ಅಂದರೆ ಗೊತ್ತಿಲ್ಲ. ಅಷ್ಟು ಪೊಳ್ಳು ಸ್ಲೋಗನ್ ಅದು ಎನ್ನುವ ಅತಿಶಯೋಕ್ತಿ. ಈ ಸಿನೇಮಾವನ್ನು ಅತ್ಯುಗ್ರವಾಗಿ ಖಂಡಿಸುವವರ ಕಣ್ಣಿಗೆ ಈ ಅತಿಶಯೋಕ್ತಿ ಕಂಡಿರದಿದ್ದರೆ, ಏನು ಮಾಡಲು ಸಾಧ್ಯ ಸುಪ್ರೀತ್?
೨. ಡ್ಯಾನಿ ಬಾಯ್ಲ್ ಬಗ್ಗೆ ನನಗೆ ಅಸೂಯೆಯೆ? ಆತನ Trainspotting ನೋಡಿದಾಗಿನಿಂದ ಆತನ ಫ್ಯಾನ್ ನಾನು. ಆದರೆ ಒಂದು ಪುಸ್ತಕವನ್ನು ಆ ಪರಿ Adapt ಮಾಡಿಕೊಂಡವರು, ಅದರ Background ಆಗಿ ಇಂಗ್ಲಂಡನ್ನೇ ಆಯ್ದುಕೊಳ್ಳಬಹುದಿತ್ತಲ್ಲ ಎಂಬುದು ನನ್ನ ಪ್ರಶ್ನೆ. ಭಾರತದಲ್ಲಿಯೇ ಹಲವಾರು ನಿರ್ದೇಶಕರು ಭಾರತದ ಸಮಸ್ಯೆಗಳ ಬಗ್ಗೆ ಸಾವಿರಾರು ಫಿಲ್ಮ್ ಮಾಡಿದ್ದಾರೆ. ಅವರಿಗೆ ಆ ಹಕ್ಕಿದೆ. ಆದರೆ ಡ್ಯಾನಿ ಬಾಯ್ಲ್ ಹೊರಗಿನವ. ಅವನಿಗೆ ಆ ಹಕ್ಕು ಹೇಗೆ ಬರಲು ಸಾಧ್ಯ? ಒಂದು ಚಿಕ್ಕ Amateur ಉದಾಹರಣೆ ಕೊಡುತ್ತೇನೆ. ನಿಮ್ಮ ಮನೆಯ ಒಂದು ಗೋಡೆ ಹಾಳಾಗಿದೆ ಅಂದುಕೊಳ್ಳಿ. ಅದನ್ನು ರಿಪೇರ್ ಮಾಡಲು ನಿಮ್ಮಲ್ಲಿ ಹಣವಿಲ್ಲ ಎಂದುಕೊಳ್ಳಿ. ನಿಮ್ಮ ಪಕ್ಕದ ಮನೆಯವ ಬಂದು, ನಾನು ಅದರ ಫೋಟೋ ತೆಗೆದು, ಅದನ್ನು ಜಗತ್ತಿಗೆ ತೋರಿಸುತ್ತೇನೆ, ಅದನ್ನ ನೋಡಿದವರು ಯಾರಾದರೂ ಬಂದು ನಿಮಗೆ ಸಹಾಯ ಮಾಡಬಹುದು ಎಂದರೆ, ಆತನನ್ನು ನಿಮ್ಮ ಮನೆಯೊಳಗೆ ನುಗ್ಗಲು ಬಿಡುತ್ತೀರಾ? ಅದು ನಿಮ್ಮ ಮನೆ, ನಿಮ್ಮ ಸಮಸ್ಯೆ. ಅದರ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯೂ ನಿಮ್ಮದೇ. ನಮ್ಮ ಹುಳುಕುಗಳನ್ನು ಒಬ್ಬ ವಿದೇಶಿಗ ನಮಗೆ ತೋರಿಸಬೇಕೆಂದಿಲ್ಲ. ಅವನ ಮನೆಯ ಹುಳುಕುಗಳ ಬಗ್ಗೆ ಆತ ಯೋಚನೆ ಮಾಡಲಿ. ಇನ್ನು ಡ್ಯಾನಿ ಬಾಯ್ಲ್ ನ ನೈಪುಣ್ಯತೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಆತನ intent ಬಗ್ಗೆ ಪ್ರಶ್ನೆಗಳಿವೆ.
೩. ಈ ಫಿಲ್ಮನ್ನು ನಾನು ಖಂಡಿತ ಕಲಾವಿದನಾಗಿ ವಿಮರ್ಶೆ ಮಾದುತ್ತಿಲ್ಲ. ಕಲಾವಿದನಾಗಿ ವಿಮರ್ಶೆ ಮಾಡಿದರೆ, ಅನಿಲ್ ಕಪೂರನ ನಟನೆ, ಮಕ್ಕಳ ನಟನೆ, ಅದ್ಭುತ ಅನಿಸುವ Editing, Sound Design, ಸಂಗೀತ ಇತ್ಯಾದಿಗಳ ಬಗ್ಗೆ ಮಾತಾಡಬೇಕಿತ್ತು. ಅವೆಲ್ಲ ನನಗೆ ಇಷ್ಟವಾದ ಸಂಗತಿಗಳೇ. In fact, ನನ್ನ ಗೆಳೆಯನೊಬ್ಬ, ಫಿಲ್ಮಿನ ಪ್ರಾರಂಭದಲ್ಲಿ ಸೌರಭ್ ಶುಕ್ಲಾ ’ಮಾದರ್...’ ಎನ್ನುವುದನ್ನು ಕೇಳಿ ನಿಂದಿಸಿದಾಗ, ನಾನೇ ಆತನಿಗೆ Cinematic Liberties ಬಗ್ಗೆ ಚಿಕ್ಕ ಭಾಷಣ ಕೊಟ್ಟದ್ದೂ ಇದೆ. ಆದರೆ, ಒಂದು ಪುಸ್ತಕದಿಂದ ಕತೆಯೊಂದನ್ನು ಆಯ್ದು, ಅದನ್ನು ಬೇರೆ ಮಾಧ್ಯಮಕ್ಕೆ ಅಳವಡಿಸಿಕೊಳ್ಳುವಾಗ, ಅದರ ಹಿಂದೆ ಒಂದು Reasoning ಇರಬೇಕು. ಆ ರೀತಿಯ ಯಾವುದೇ Reasoning ಅಥವಾ Bad intent ಇಲ್ಲವಾಗಿದ್ದಲ್ಲಿ, ನಾಯಕನ ಹೆಸರನ್ನು ’ರಾಂ ಮೊಹಮ್ಮದ್ ಥಾಮಸ್’ ನಿಂದ ’ಜಮಾಲ್ ಮಲಿಕ್’ ಆಗಿ ಬದಲಾಯಿಸಿದ್ದರ, ಅವನ ತಾಯಿಯನ್ನು ಹಿಂದು ಜನರಿಂದ ಕೊಲ್ಲಿಸಿದ್ದರ ಔಚಿತ್ಯವೇನು ಎಂದು ಕೇಳಬೇಕಾಗುತ್ತದೆ.
೪. ಅಭಿವ್ಯಕ್ತಿಯ ಹಕ್ಕನ್ನೇ ಕಿತ್ತುಕೊಳ್ಳಬೇಕೆಂದು ನಾನೆಲ್ಲಿ ಹೇಳಿದೆ ಸುಪ್ರೀತ್? ಒಬ್ಬ ನಟನಾಗಿ ನಾನು ಆ ಮಾತನ್ನು ಹೇಳಲೂ ಸಾಧ್ಯವಿಲ್ಲ. ಆದರೆ, ಜಾಗತಿಕ ಮಟ್ಟದಲ್ಲಿ ಒಂದು ಸಿನೇಮಾ ನಿರ್ಮಿಸುತ್ತಿರುವಾಗ, ಒಂದು ಚೂರು ಜವಾಬ್ದಾರಿಯಿಂದ, ಯಾವುದೇ ಧರ್ಮದವರಿಗೆ ನೋವಾಗದಂತೆ ವರ್ತಿಸಿದರೆ ಚೆನ್ನ ಎಂಬುದು ಗೊತ್ತಿರಬೇಕಲ್ಲವೇ? ಡ್ಯಾನಿ ಬಾಯ್ಲ್ ಇನ್ನು ಯಾವುದೇ ಫಿಲ್ಮನ್ನು ನಿರ್ದೇಶಿಸಲೇಬಾರದು ಎಂಬ ಯಾವುದೇ ಫರ್ಮಾನನ್ನು ಹೊರಡಿಸಲಾಗಿಲ್ಲವಲ್ಲ.
೫. ಇಲ್ಲ, ರವಿಯವರ ಬೇರೆ ಯಾವುದೇ ಲೇಖನಗಳನ್ನು ಓದಿಲ್ಲ. ಅವರಿಗೆ ಭಾಷೆಯ ಮೇಲೆ ಒಳ್ಳೆಯ ಹಿಡಿತವಿದೆ ಎಂಬುದು ಈ ಲೇಖನದಲ್ಲಿ ಸಾಬೀತಾಗುತ್ತದೆ. ಆದರೆ ತಮ್ಮ ಯೋಚನೆಗಳ ಮೇಲೆ, ಅನಿಸಿದ್ದನ್ನು ಬರೆಯುವ ಶೈಲಿಯ ಮೇಲೆ ಹಿಡಿತವಿದೆಯೇ? ಗೊತ್ತಿಲ್ಲ. ಹಾಗಿದ್ದರೆ, ಬರೆದಿದ್ದನ್ನು ಸ್ವಲ್ಪ ಸೌಮ್ಯವಾಗಿ ಬರೆಯಬಹುದಿತ್ತು. "ಇಂತಿಂಥವರು ರೋಗಗ್ರಸ್ತ ಮನಸ್ಸಿನವರು, ಅಹಂಕಾರಿಗಳು", "ಬಿಜೇಪಿಯ ಅನುಯಾಯಿಗಳು/ ಕೋಮುವಾದಿಗಳು" ಅನ್ನುವಂಥ ಅಸಂಬದ್ಧ ಮಾತನ್ನು ಬರೆದದ್ದರಿಂದಲೇ, ಆ ರೀತಿಯ ಪ್ರತಿಕ್ರಿಯೆ ಬರೆಯಬೇಕಾಗಿ ಬಂತು.
ಧನ್ಯವಾದಗಳು.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ನಿಮ್ಮ ಈ ಪ್ರತಿಕ್ರಿಯೆಯಲ್ಲಿನ ಯಾವ ಅಂಶಕ್ಕೂ ನನ್ನ ಅಸಮ್ಮತಿಯಿಲ್ಲ; ಆ ‘ವಿದೇಶಿಯ’ನ ಹಕ್ಕಿನ ಪ್ರಶ್ನೆಯ ಕುರಿತಾದುದನ್ನು ಬಿಟ್ಟು.
ನೀವು ನೀಡಿದ ಅಮೆಚ್ಯೂರ್ ಉದಾಹರಣೆ ನನ್ನನ್ನು ಆಲೋಚನೆಗೆ ಪ್ರೇರೇಪಿಸಿದೆ. ಬೇರೆಯದೇ ಗ್ರಹಿಕೆಯನ್ನು ಒದಗಿಸಿದೆ. ಒಂದು ಮನೆಯ ವಿಷಯ ಬಂದಾಗ ನನ್ನ ಮನೆ, ಅದರ ಹುಳುಕು ತೋರುವ ಹಕ್ಕು ಪಕ್ಕದ ಮನೆಯವನಿಗಿಲ್ಲ ಎನ್ನುತ್ತೇವೆ. ಒಂದೇ ಮನೆಯವರಾದಾಗ, ಇದು ನನ್ನ ಹುಳುಕು ಇದನ್ನು ತೋರುವ ಹಕ್ಕು ನಿನಗೆ ನಾನು ಕೊಟ್ಟಿಲ್ಲ ಎಂದು ಇತರರ ಮೇಲೆ ಹರಿಹಾಯುತ್ತೇವೆ. ದೇಶದ ಪ್ರಶ್ನೆ ಬಂದಾಗ ನಮ್ಮ ಮನೆಗಳವರನ್ನೆಲ್ಲ ಒಂದು ಸೇರಿಸಿಕೊಂಡು, ನಮ್ಮ ನಮ್ಮ ಮನೆಗಳ ಗೋಡೆಗಳನ್ನು ಕೆಡವಿ ಪಕ್ಕದ ಮನೆಯವರನ್ನೆಲ್ಲಾ ಸೇರಿಸಿಕೊಂಡು ದೇಶದ ಸುತ್ತ ಗೋಡೆ ಕಟ್ಟುತ್ತೇವೆ! ಈ ಪ್ರಕ್ರಿಯೆಯೇ ಅದೆಷ್ಟು ಸೋಜಿಗ ಅಲ್ಲವಾ?
ನಿಮ್ಮೊಂದಿನ ಸಂವಾದ ಬೆಳಕು ನೀಡಿತು. ಧನ್ಯವಾದಗಳು ಅವಿನಾಶ್.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಸುಪ್ರೀತ್,
ನಾನು ಲೇಖನದ ಮೊದಲ ಪ್ಯಾರಾದಲ್ಲಿಯೆ "*** "ಈ ಚಿತ್ರ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಅದು ಸರಿ ಇಲ್ಲ, ನಾವು ಹೇಗೆ ಇದ್ದರೂ ನಮ್ಮನ್ನು ಕೆಟ್ಟದಾಗಿ ತೋರಿಸಬಾರದು," ಎಂದು ಹೇಳುತ್ತಿರುವವರ ಮನಸ್ಥಿತಿ(ಯವರ)***" ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಚಿತ್ರವನ್ನು ಸಕಾರಣವಾಗಿ ವಿಮರ್ಶಿಸಿದವರ ಅಥವ ಮನರಂಜನೆಯ ಕಾರಣದಿಂದ ಇಷ್ಟವಾಗದೆ ಹೋದವರ, ಅಥವ ಅವಾಸ್ತವ ಅನ್ನಿಸಿದವರ, ಅಥವ ತಾಂತ್ರಿಕವಾಗಿ-ಕಲಾತ್ಮಕವಾಗಿ ಒಳ್ಳೆಯ ಚಿತ್ರ ಅಂದವರ ಬಗ್ಗೆ ಅಲ್ಲ ನನ್ನ ತಕರಾರು.
ಅಂದ ಹಾಗೆ ಆ ಮೇಲಿನ ಸಾಲಿನಲ್ಲಿ ಮೂರು ಅಕ್ಷರಗಳು ಅನಗತ್ಯವಾಗಿ ಉಳಿದುಕೊಂಡು ಬಿಟ್ಟಿದೆ. ಅವಸರ ಅನ್ನುವುದಕ್ಕಿಂತ ಕಾಗುಣಿತ ಅಥವ ವ್ಯಾಕರಣ ಪರೀಕ್ಷಿಸದೆ ಕೇವಲ ಭಾವಾರ್ಥದ ಕಲ್ಪನೆ ಮೇಲೆ ಮುಂದಕ್ಕೆ ಹೋಗಿರುವ ಸಾಧ್ಯತೆ ಇದೆ. ಆ ಮೂರು ಪದಗಳ "ಹೇಳುತ್ತಿರುವವರ ಮನಸ್ಥಿತಿಯವರ" ಗೊಂದಲಕ್ಕೆ ಕ್ಷಮೆ ಕೇಳುತ್ತೇನೆ.
ಇನ್ನು, ಆಸ್ಕರ್ ಕೊಡುವ ಲೆಕ್ಕಾಚಾರಗಳ ಕುರಿತ ನನ್ನ ಅಭಿಪ್ರಾಯ್ತವನ್ನು ನನ್ನ ಹಿಂದಿನ ಲೇಖನದಲ್ಲಿ ಹೇಳಿದ್ದೇನೆ.
http://sampada.net/b...
ಸ್ಲಮ್‌ಡಾಗ್ ಬೇರೆ ಆಸ್ಕರ್ contenders ಗಿಂತ ಹೇಗೆ ಉತ್ತಮ ಅಥವ ಅಲ್ಲ ಎಂದು ಹೇಳಲು ಮಿಕ್ಕ ಚಿತ್ರಗಳನ್ನು ನಾನು ನೋಡಿಲ್ಲ. ಅಂದ ಹಾಗೆ ಈ ಚಿತ್ರಕ್ಕೆ ಆಸ್ಕರ್ ಬಂದಿರುವುದರ ಕುರಿತಾದ ಚರ್ಚೆ ಅಲ್ಲವೆ ಅಲ್ಲ ಈ ಲೇಖನದ ಉದ್ದೇಶ.
--"ಕೆಟ್ಟ ಕಲಾಕೃತಿಗೆ ತಕ್ಕನಾದ ಉತ್ತರ ನೀಡಬೇಕಾದ್ದು ಉತ್ತಮವಾದ ಕಲಾಕೃತಿಯಿಂದ."
ಇಲ್ಲಿ "ಕೆಟ್ಟ" ಎನ್ನುವುದನ್ನು "ನಮಗೆ ಇಷ್ಟವಾಗದ ಅಥವ ನಮ್ಮ ನಂಬಿಕೆಗಳಿಗೆ ವಿರುದ್ಧವಾದ" ಎಂದು ಅರ್ಥ ಮಾಡಿಕೊಂಡು ನಿಮ್ಮ ಮಾತಿಗೆ ಸಹಮತ ತೋರುತ್ತೇನೆ. ಈ ಬಗ್ಗೆ ಒಮ್ಮೆ ನಾನು "High Noon" ಮತ್ತು "Rio Bravo" ಉದಾಹರಣೆ ಕೊಟ್ಟು ಲೇಖನ ಬರೆದಿದ್ದೆ.
http://amerikadimdar...
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಗೊಂದಲ ಪರಿಹರಿಸಿದ್ದಕ್ಕಾಗಿ ಧನ್ಯವಾದಗಳು ಸರ್.
ಹಾಗೆಯೇ ನಿಮ್ಮ ಹಳೆಯ ಲೇಖನದ ಲಿಂಕುಗಳಿಗಾಗಿ ಧನ್ಯವಾದಗಳು. ಅವನ್ನೆಲ್ಲ ಹಿಂದೊಮ್ಮೆ ಓದಿರುವೆನಾದರೂ ಮತ್ತೊಮ್ಮೆ ನೋಡುವೆ.
ಸಂಪದದಲ್ಲಿ ಸಂವಾದಿಸಲು ಸಮಯ ಮಾಡಿಕೊಂಡದ್ದಕ್ಕೆ ಸಂತೋಷವಾಯ್ತು. ನಿಮ್ಮ ಚಿಂತನೆಗಳು, ಮಾರ್ಗದರ್ಶನ ನಮಗೆ ಬಹು ಉಪಯುಕ್ತವಾಗುತ್ತವೆ.
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಬೆತ್ತಲೆ ತೋರಿಸುವವವ್ರಿಗೆ, ಅದನ್ನೆ ಸಮರ್ಥಿಸುವವರಿಗೆ ಇಲ್ಲದ ಮುಜುಗರ ನೈತಿಕತೆಯನ್ನು ನನ್ನಲ್ಲಿ ನೀವು ಅಪೇಕ್ಷಿಸುವುದು ಎಷ್ಟು ಸರಿ ಸುಪ್ರೀತ್. ಖಡ್ಗ ಹಿಡಿದು ಹೋರಾಟಕ್ಕೆ ನಿಂತವನ ಮುಂದೆ ಹುಲ್ಲುಕಡ್ಡಿ ಹಿರಿದು ನಿಂತು ಹೋರಾಡಲೆ? ನೀವು ಮಾಡಿ ನನಗೆ ಅದರ ಅವಶ್ಯಕತೆಯಿಲ್ಲ.
ದುಷ್ಟರನ್ನು ಶಿಷ್ಟರು ಸರಿಪಡಿಸುವ ಕಾಲವೇ ಇದು? ದುಷ್ಟರನ್ನು ಶಿಕ್ಷಿಸಲು ಅತಿ ದುಷ್ಟರೆ ಬರಬೇಕಿದೆ.
ಪ್ರಚೋದನೆ ಮಾಡುವವರನ್ನು ಬಿಟ್ಟು ಒಳಗಾದವರನ್ನು ಶಿಕ್ಷಿಸುವಂತೆ ಹೇಳಲು ನಿಮ್ಮ ಮನಸ್ಸು ಹೇಗೆ ಒಪ್ಪಿತು. ಪ್ರಚೋದನೆಯೆ ಇಲ್ಲದಿದ್ದರೆ ಇದೆಲ್ಲ ನಡೆಯುತ್ತಿರಲಿಲ್ಲ ಎಂಬ ಸಾಮಾನ್ಯ ತಿಳುವಳಿಕೆ ನಿಮಗಿದೆ ಆದರೂ ಜಾಣ ಕುರುಡೇಕೆ?
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಪ್ರಸ್ಕ,
---"ಖಡ್ಗ ಹಿಡಿದು ಹೋರಾಟಕ್ಕೆ ನಿಂತವನ ಮುಂದೆ ಹುಲ್ಲುಕಡ್ಡಿ ಹಿರಿದು ನಿಂತು ಹೋರಾಡಲೆ?"
ಇಲ್ಲಿ ಯಾವನವನು "ಹೋರಾಟಕ್ಕೆ ನಿಂತವನು"? ಅದು ನನ್ನನ್ನೆ ಕುರಿತು ಆಡಿರುವ ಮಾತಾಗಿದ್ದರೆ, ನಿಮ್ಮ ಹತ್ತಿರ ಇರುವ ಕಂಪ್ಯೂಟರ/ಇಂಟರ್ನೆಟ್ ಸಲಕರಣೆಯೆ ನನ್ನಲ್ಲಿಯೂ ಇರುವುದು. ನಾನು ಖಡ್ಗವನ್ನೂ ಹಿಡಿದಿಲ್ಲ, ನೀವು ಹುಲ್ಲನ್ನೂ ಹಿಡಿದಿಲ್ಲ. ಇನ್ನು, ನಾನು ಯುದ್ಧಕ್ಕಂತೂ ನಿಂತಿಲ್ಲ. ನೀವು ಹಾಗೇಕೆ ಅಂದುಕೊಂಡಿರಿ. ಈ ಚರ್ಚೆಯನ್ನು ಮುಂದುವರೆಸೋಣ ಎಂದಷ್ಟೆ "ಕುಳಿತಿದ್ದೇನೆ."
---"ದುಷ್ಟರನ್ನು ಶಿಷ್ಟರು ಸರಿಪಡಿಸುವ ಕಾಲವೇ ಇದು? ದುಷ್ಟರನ್ನು ಶಿಕ್ಷಿಸಲು ಅತಿ ದುಷ್ಟರೆ ಬರಬೇಕಿದೆ."
ನಿಮ್ಮ ಕೋರಿಕೆ ಹೀಗೆ ನೇರವೇರದಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ದುಷ್ಟರು ಸರಿಹೋಗಲಿ ಅಥವ ಶಿಷ್ಟರೆ ಮೇಲುಗೈ ಪಡೆಯಲಿ ಎನ್ನುವುದು ನನ್ನ ಪ್ರಾರ್ಥನೆ. (ಅಷ್ಟಕ್ಕೂ ನಾನು ನಾಸ್ತಿಕ ಅಲ್ಲ. ನನ್ನ ಕಷ್ಟ-ನೋವು-ನಲಿವು-ಸಂದರ್ಭಕ್ಕೆ ತಕ್ಕಂತೆ ಆಸ್ತಿಕ ಇಲ್ಲವೆ ನಿರಾಸಕ್ತ. ನನ್ನ ಕೈಮೀರಿದ ಕಷ್ಟ ಬಂದಾಗ ಏನಕ್ಕೊ ಒಂದಕ್ಕೆ ಮೊರೆ ಇಡಬೇಕು ಎನ್ನುವ ಅಸಹಾಯಕತೆ ಬರುತ್ತದೆ. ಆಗ ರಾಮ, ಕೃಷ್ಣ, ಭಗವಂತ ಎಂದುಕೊಳ್ಳುತ್ತೇನೆ.)
ಹಾಗೆಯೆ, ನಾನು ಅಥವ ನನ್ನಂತಹವರು ದುಷ್ಟರಾದರೆ ಇನ್ನೆಂತಹ ದುಷ್ಟರು ಬಂದು ನಮ್ಮನ್ನು ಶಿಕ್ಷಿಸಬೇಕು? ಅವರು ಹೇಗಿರುತ್ತಾರೆ? ನಮ್ಮನ್ನು ಶಿಕ್ಷಿಸಿದ ನಂತರ ಆ "ಅತಿ ದುಷ್ಟರು" ಏನಾಗುತ್ತಾರೆ? ನಿಮ್ಮನ್ನು ಆಳುತ್ತಾರೆಯೆ? ನಿಮಗದು ಸಮ್ಮತವೆ?
ಯಾರಿಗೆ ಆಗಲಿ ಹಾಗೆ ಆಗುವುದು ನನಗೆ ಸಮ್ಮತವಿಲ್ಲ. ಅದಕ್ಕಾಗಿಯೆ ನಿಮ್ಮ ಕೋರಿಕೆ ನೇರವೇರದಿರಲಿ ಎನ್ನುವ ಕೋರಿಕೆ ನನ್ನದು.
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ಬೆತ್ತಲೆ ತೋರಿಸುವವವ್ರಿಗೆ, ಅದನ್ನೆ ಸಮರ್ಥಿಸುವವರಿಗೆ ಇಲ್ಲದ ಮುಜುಗರ ನೈತಿಕತೆಯನ್ನು ನನ್ನಲ್ಲಿ ನೀವು ಅಪೇಕ್ಷಿಸುವುದು ಎಷ್ಟು ಸರಿ ಸುಪ್ರೀತ್. ಖಡ್ಗ ಹಿಡಿದು ಹೋರಾಟಕ್ಕೆ ನಿಂತವನ ಮುಂದೆ ಹುಲ್ಲುಕಡ್ಡಿ ಹಿರಿದು ನಿಂತು ಹೋರಾಡಲೆ? ನೀವು ಮಾಡಿ ನನಗೆ ಅದರ ಅವಶ್ಯಕತೆಯಿಲ್ಲ.
ದುಷ್ಟರನ್ನು ಶಿಷ್ಟರು ಸರಿಪಡಿಸುವ ಕಾಲವೇ ಇದು? ದುಷ್ಟರನ್ನು ಶಿಕ್ಷಿಸಲು ಅತಿ ದುಷ್ಟರೆ ಬರಬೇಕಿದೆ.
ಪ್ರಚೋದನೆ ಮಾಡುವವರನ್ನು ಬಿಟ್ಟು ಒಳಗಾದವರನ್ನು ಶಿಕ್ಶಿಹಸುವಂತೆ ಹೇಳಲು ನಿಮ್ಮ ಮನಸ್ಸು ಹೇಗೆ ಒಪ್ಪಿತು. ಪ್ರಚೋದನೆಯೆ ಇಲ್ಲದಿದ್ದರೆ ಇದೆಲ್ಲ ನಡೆಯುತ್ತಿರಲಿಲ್ಲ ಎಂಬ ಸಾಮಾನ್ಯ ತಿಳುವಳಿಕೆ ನಿಮಗಿದೆ ಆದರೂ ಜಾಣ ಕುರುಡೇಕೆ?
ನಮ್ಮನ್ನು ಶಿಕ್ಷಿಸಿದ ನಂತರ ಆ "ಅತಿ ದುಷ್ಟರು" ಏನಾಗುತ್ತಾರೆ?
ಪ್ರಸ್ಕ,
---"ಖಡ್ಗ ಹಿಡಿದು ಹೋರಾಟಕ್ಕೆ ನಿಂತವನ ಮುಂದೆ ಹುಲ್ಲುಕಡ್ಡಿ ಹಿರಿದು ನಿಂತು ಹೋರಾಡಲೆ?"
ಇಲ್ಲಿ ಯಾವನವನು "ಹೋರಾಟಕ್ಕೆ ನಿಂತವನು"? ಅದು ನನ್ನನ್ನೆ ಕುರಿತು ಆಡಿರುವ ಮಾತಾಗಿದ್ದರೆ, ನಿಮ್ಮ ಹತ್ತಿರ ಇರುವ ಕಂಪ್ಯೂಟರ/ಇಂಟರ್ನೆಟ್ ಸಲಕರಣೆಯೆ ನನ್ನಲ್ಲಿಯೂ ಇರುವುದು. ನಾನು ಖಡ್ಗವನ್ನೂ ಹಿಡಿದಿಲ್ಲ, ನೀವು ಹುಲ್ಲನ್ನೂ ಹಿಡಿದಿಲ್ಲ. ಇನ್ನು, ನಾನು ಯುದ್ಧಕ್ಕಂತೂ ನಿಂತಿಲ್ಲ. ನೀವು ಹಾಗೇಕೆ ಅಂದುಕೊಂಡಿರಿ. ಈ ಚರ್ಚೆಯನ್ನು ಮುಂದುವರೆಸೋಣ ಎಂದಷ್ಟೆ "ಕುಳಿತಿದ್ದೇನೆ."
---"ದುಷ್ಟರನ್ನು ಶಿಷ್ಟರು ಸರಿಪಡಿಸುವ ಕಾಲವೇ ಇದು? ದುಷ್ಟರನ್ನು ಶಿಕ್ಷಿಸಲು ಅತಿ ದುಷ್ಟರೆ ಬರಬೇಕಿದೆ."
ನಿಮ್ಮ ಕೋರಿಕೆ ಹೀಗೆ ನೇರವೇರದಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ದುಷ್ಟರು ಸರಿಹೋಗಲಿ ಅಥವ ಶಿಷ್ಟರೆ ಮೇಲುಗೈ ಪಡೆಯಲಿ ಎನ್ನುವುದು ನನ್ನ ಪ್ರಾರ್ಥನೆ. (ಅಷ್ಟಕ್ಕೂ ನಾನು ನಾಸ್ತಿಕ ಅಲ್ಲ. ನನ್ನ ಕಷ್ಟ-ನೋವು-ನಲಿವು-ಸಂದರ್ಭಕ್ಕೆ ತಕ್ಕಂತೆ ಆಸ್ತಿಕ ಇಲ್ಲವೆ ನಿರಾಸಕ್ತ. ನನ್ನ ಕೈಮೀರಿದ ಕಷ್ಟ ಬಂದಾಗ ಏನಕ್ಕೊ ಒಂದಕ್ಕೆ ಮೊರೆ ಇಡಬೇಕು ಎನ್ನುವ ಅಸಹಾಯಕತೆ ಬರುತ್ತದೆ. ಆಗ ರಾಮ, ಕೃಷ್ಣ, ಭಗವಂತ ಎಂದುಕೊಳ್ಳುತ್ತೇನೆ.)
ಹಾಗೆಯೆ, ನಾನು ಅಥವ ನನ್ನಂತಹವರು ದುಷ್ಟರಾದರೆ ಇನ್ನೆಂತಹ ದುಷ್ಟರು ಬಂದು ನಮ್ಮನ್ನು ಶಿಕ್ಷಿಸಬೇಕು? ಅವರು ಹೇಗಿರುತ್ತಾರೆ? ನಮ್ಮನ್ನು ಶಿಕ್ಷಿಸಿದ ನಂತರ ಆ "ಅತಿ ದುಷ್ಟರು" ಏನಾಗುತ್ತಾರೆ? ನಿಮ್ಮನ್ನು ಆಳುತ್ತಾರೆಯೆ? ನಿಮಗದು ಸಮ್ಮತವೆ?
ಯಾರಿಗೆ ಆಗಲಿ ಹಾಗೆ ಆಗುವುದು ನನಗೆ ಸಮ್ಮತವಿಲ್ಲ. ಅದಕ್ಕಾಗಿಯೆ ನಿಮ್ಮ ಕೋರಿಕೆ ನೇರವೇರದಿರಲಿ ಎನ್ನುವ ಕೋರಿಕೆ ನನ್ನದು.
ನಮಸ್ಕಾರ,
ರವಿ...
ಉ: ಆ ಸಿನೆಮಾ ಸರಿ ಇದೆ ಅನ್ನುವವರು...
ವಾಸ್ತವವನ್ನು ತೋರಿರುವ ಸಿನೆಮಾದ ಬಗ್ಗೆ ತಾಯಿ/ಬೆತ್ತಲೆ ಎಂದೆಲ್ಲಾ ಎಳೆದು ತಂದಿರುವವರು ನೀವು. ಅದನ್ನು ಗೋಳಾಟದ ಸರಕನ್ನಾಗಿಸಿಕೊಂಡಿದ್ದೀರಿ.
ಹೋರಾಟ, ಹಾರಾಟದ ಮಾತೆಲ್ಲ ಯಾಕೋ ತಿಳಿದಿಲ್ಲ.
ದುಷ್ಟರು ಯಾರು ಶಿಷ್ಟರು ಯಾರು ಎಂಬುದರ ಬಗ್ಗೆ ಆಗಲೇ ನೀವು ತೀರ್ಮಾನಿಸಿರುವಂತಿದೆ. ಇನ್ನು ಬೇರೆ ನೋಡುವ ಅವಶ್ಯಕತೆಯಿಲ್ಲ, ಯಾರ ಅರ್ಜಿಯನ್ನೂ ಪರಿಶೀಲಿಸುವ ವ್ಯವಧಾನವಿಲ್ಲ.
‘ಶಿಕ್ಷಿಸಿ’ ಎಂಬ ನನ್ನದಲ್ಲದ ಮಾತನ್ನು ನನ್ನಿಂದ ಹೊರಟಿದೆ ಎಂದು ಹೇಳಲು ನಿಮಗೆ ಮನಸ್ಸು ಒಪ್ಪಿದ್ದು ಏಕೆ?
ಪ್ರಚೋದನೆ, ಪ್ರತಿಕ್ರಿಯೆಗಳ ಬಗ್ಗೆ ನನಗೆ ರೇಜಿಗೆ ಹುಟ್ಟಿದೆ ಬಿಡಿ ಅದು ಸುಲಭಕ್ಕೆ ಪರಿಹಾರವಾಗುವಂಥದ್ದಲ್ಲ.