ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ravikreddy ರವರ ಬ್ಲಾಗ್

ಸಂಸ್ಕಾರ ಕಲಿತಿಲ್ಲದವರು ಮಾಡುತ್ತಿರುವ ಸ್ವಧರ್ಮದ "ತಿಥಿ" ಮತ್ತು "ತಿಥಿ" ಪಾಠ...

February 21, 2008 - 9:59am — ravikreddy

ಮಂಗಳೂರಿನ ಕೆಲವು "ಅತಿಮಡಿವಂತ" ಕಾಲೇಜು ಹಿಂದಿ ಅಧ್ಯಾಪಕರು "'ಸಂಸ್ಕಾರ' ಕಾದಂಬರಿಯನ್ನು ಬೋಧಿಸಲು ಮುಜುಗರವಾಗುತ್ತದೆ, ದಯವಿಟ್ಟು ಅದನ್ನು ತೆಗೆದುಹಾಕಿ," ಎಂದದ್ದು ನಿಮಗೆ ಗೊತ್ತಿರಬಹುದು. ಅವರ ಈ ಕೋರಿಕೆಗೆ ಆ ಪ್ರದೇಶದ ಸಾಹಿತ್ಯಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಿವೆ ಎನ್ನುವ ಸಂದೇಹ ನನ್ನದು. ಆದರೆ ಆ ಆಯಾಮಗಳು ಇಲ್ಲಿ ಅಪ್ರಸ್ತುತ. ಇಲ್ಲಿ ನಮಗೆ ಮುಖ್ಯವಾಗಬೇಕಿರುವ ಆಯಾಯಮವನ್ನು ಮುಂದಿಟ್ಟುಕೊಂಡು, ಸ್ಯಾನ್‍ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ (ಮೈಸೂರು ಮೂಲದ) ಗೆಳೆಯ ಡಾ. ಪೃಥ್ವಿ ದತ್ತ ಚಂದ್ರ ಶೋಭಿ ವಿವರವಾಗಿ ವಾರದ ಹಿಂದೆಯೆ ಚುರುಮುರಿ.ಕಾಮಿನಲ್ಲಿ ಬರೆದಿದ್ದರು. ಅದಾದ ನಾಲ್ಕೈದು ದಿನಗಳಿಗೆ ಕನ್ನಡಪ್ರಭದಲ್ಲಿ ಉಷಾ ಕಟ್ಟೆಮನೆಯವರು ಇದೇ ವಾದವನ್ನು ಪುಷ್ಟೀಕರಿಸುವಂತಹ ಲೇಖನವನ್ನು ಬರೆಯುವ ತನಕ ಯಾವೊಂದು ಕನ್ನಡ ದಿನಪತ್ರಿಕೆಯೂ ಈ ವಿವಾದದ ಮೂಲಸಮಸ್ಯೆಯತ್ತ ಗಮನ ಹರಿಸಿರಲಿಲ್ಲ. ವಿವಾದಗಳನ್ನು ಸೃಷ್ಟಿಸುವ ಅಥವ ವಿವಾದಗಳಿಂದ ತಮ್ಮ ಅಜೆಂಡಾ ಪೂರೈಸಿಕೊಳ್ಳುವ ಒಂದು ಹೀನಾಯ ಸಂಸ್ಕೃತಿಯನ್ನೆ ಪತ್ರಿಕೋದ್ಯಮ ಎಂದುಕೊಂಡುಬಿಟ್ಟಿದ್ದಾರೆ ನಾಡಿನ ಉದ್ದಾಮ ಪತ್ರಕರ್ತರು.

"ಸ್ವಧರ್ಮೇ ನಿಧನಮ್ ಶ್ರೇಯಃ" ಎನ್ನುತ್ತಾನೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ. ಈಗಿನ ಕೆಲವರು ಕೃಷ್ಣನ ಈ ಮಾತನ್ನು ಹೇಗೆಂದರೆ ಹಾಗೆ ತಮ್ಮ ಮೂಗಿನ ನೇರಕ್ಕೆ, ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ. ಇಲ್ಲಿ ಸ್ವಧರ್ಮವೆಂದರೆ ನಿನ್ನ ಪಾಲಿಗೆ ಬಂದಿರುವ ಕಾಯಕ, ನೀನು ಏನು ಮಾಡಬೇಕಾಗಿದೆಯೊ ಅದು ಎಂದು ಪ್ರವಚನಕಾರರೊಬ್ಬರು ಹೇಳಿದ್ದನ್ನು ಕೇಳಿದ್ದೆ. ಈಗ ಅದೇ ಹಿನ್ನೆಲೆಯಲ್ಲಿ ಹೇಳಬಹುದಾದರೆ, ಯೋಗ್ಯವಾಗಿ ಪಾಠ ಮಾಡಬೇಕಾದ ತಮ್ಮ ಸ್ವಧರ್ಮವನ್ನು ಬಹುಪಾಲು ಭಾರತದ ಶಿಕ್ಷಕರು ಪಾಲಿಸುತ್ತಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಓದಲು ಕಲಿಸುತ್ತಿದೆ. It is just teaching to "read" sentences; not to "reason".

ಈ ಹಿನ್ನೆಲೆಯಲ್ಲಿ, ಸಂಸ್ಕಾರವನ್ನು ಹೇಗೆ ಪಾಠ ಮಾಡಬೇಕೊ ಹಾಗೆ ಮಾಡಲಾಗುತ್ತಿಲ್ಲ ಎನ್ನುವ ಶಿಕ್ಷಕರು ತಮ್ಮ ಸ್ವಧರ್ಮದ "ತಿಥಿ" ಯನ್ನು ಚೆನ್ನಾಗಿಯೇ ಮಾಡುತ್ತಿದ್ದಾರೆ ಎನ್ನಬೇಕು.

ನನ್ನ ಈ ವಾರದ ಅಂಕಣ ಲೇಖನ ಈ ಮೇಲಿನವುಗಳ ಹಿನ್ನೆಲೆಯಲ್ಲಿದೆ. ಪೃಥ್ವಿಯವರ ಇಂಗ್ಲಿಷ್ ಬ್ಲಾಗ್ ಬರಹದ ಬಹುಪಾಲನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಪೂರ್ಣ ಲೇಖನ ಇಲ್ಲಿದೆ.
http://amerikadimdaravi.blogspot.com/2008/02/blog-post_20.html


ಲೇಖನದ ವಿಡಿಯೊ ಪ್ರಸ್ತುತಿ

~.~
  • ravikreddy ರವರ ಬ್ಲಾಗ್
  • Login or register to post comments
  • 226 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 26 ವರ್ಷಗಳಿಂದ ಪ್ರಕಟವಾಗುತ್ತಿರುವ "ವಿಜ್ಞಾನ ವಿಶೇಷ" ಮತ್ತು ನಾಗೇಶ್ ಹೆಗಡೆಯವರು...
  • ಅಗಾಧ ಸಾಧ್ಯತೆಗಳ ನ್ಯಾನೊ ಕಾರು...
  • ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!!
  • IT ಗೆ ಬಂತು ಆಪತ್ತು ! ?
  • ಸ್ವತಂತ್ರ, ನಿರಂಕುಶಮತಿಗಳನ್ನು ಸೃಷ್ಟಿಸಬೇಕಿರುವ ಶಿಕ್ಷಣ ವ್ಯವಸ್ಥೆ...
Syndicate content

ಲೇಖಕರು

ravikreddy's picture

ಪೂರ್ಣ ಹೆಸರು
ರವಿ ಕೃಷ್ಣಾ ರೆಡ್ಡಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator