IT ಗೆ ಬಂತು ಆಪತ್ತು ! ?
ಹಿಂದೊಮ್ಮೆ (ಅಂದರೆ ಕೇವಲ ಏಳು ವರ್ಷಗಳ ಹಿಂದೆ!) ಬೆಂಗಳೂರಿನ ಐಟಿ ಹುಡುಗರ ಎದೆ ಒಮ್ಮೆ ಭಯದಿಂದ ಕಂಪಿಸಿತ್ತು. ಈಗ ಮತ್ತೆ ಆ ಕಂಪನ ಆರಂಭವಾಗಿದೆ. ಅಷ್ಟೇನೂ ಜೀವನಾನುಭವ ಇಲ್ಲದ (ಮುಖ್ಯವಾಗಿ ವಯಸ್ಸಿನ ಕಾರಣದಿಂದಾಗಿ), ಕೇವಲ ಒಳ್ಳೆಯ ದಿನಗಳನ್ನೆ ನೋಡುತ್ತ ಬಂದವರಿಗೆ ಈಗಿನ ಸದ್ಯದ ಸ್ಥಿತಿಯಲ್ಲಿ ಪ್ರಳಯದ ಭಾವನೆಗಳು ಸಹಜ. ಆದರೆ, ಈ ಶತಮಾನ ವಯಸ್ಸಿನ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಲೇಯಾಫ್, ಹೈರಿಂಗ್ freeze, ನಿರುದ್ಯೋಗ, ಮತ್ತೆ ರಾಕೆಟ್ ವೇಗದಲ್ಲಿ ಮುನ್ನುಗ್ಗುವಿಕೆ, ಇವೆಲ್ಲ ಇದ್ದದ್ದೆ. ಈ ಪ್ರಳಯವಲ್ಲದ, ಆದರೆ ನಿರಾಶಾದಾಯಕ ದಿನಗಳಲ್ಲಿ ನಮ್ಮ ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಬರಲಿರುವ ದಿನಗಳನ್ನು ನಿರ್ದೇಶಿಸುತ್ತದೆ.
2002 ರಲ್ಲಿ ಕೇವಲ 2400 ಜನ ಉದ್ಯೋಗಿಗಳನ್ನು ಹೊಂದಿದ್ದ ನಷ್ಟದಲ್ಲಿದ್ದ ಉದ್ದಿಮೆ NGEF ಅನ್ನು ಮುಚ್ಚುವಷ್ಟರಲ್ಲಿ ಕರ್ನಾಟಕ ಸರ್ಕಾರಕ್ಕೆ ಸಾಕಾಗಿ ಹೋಗಿತ್ತು. ಆದರೆ ಈಗ 2,80,000 ಉದ್ಯೊಗಿಗಳನ್ನು ಹೊಂದಿರುವ ಭಾರತದ ಮೂರು ಅತಿದೊಡ್ಡ ಐಟಿ ಕಂಪನಿಗಳು ತಮ್ಮಲ್ಲಿ ಬೆಂಚ್ ಮೇಲೆ ಇರುವವರನ್ನು ಉಳಿತಾಯದ ಕಾರಣ ಕೊಟ್ಟು ಲೇಯಾಫ್ ಮಾಡಿದರೆ ಸಾಕು NGEF ನ ಒಟ್ಟು ಉದ್ಯೋಗಿಗಳ ಇಪ್ಪತ್ತರಷ್ಟು ಜನ ಮನೆಗೆ ಹೋಗಬೇಕಾಗುತ್ತದೆ. ಇನ್ನು ಎಲ್ಲರೂ ಅದೆ ಮಾಡಿದರೆ ಲಕ್ಷಾಂತರ ಜನ ಆಗಿಬಿಡುತ್ತಾರೆ. NGEF ಉದ್ಯೋಗಿಗಳ ಪರವಾಗಿ ಪ್ರತಿಭಟನೆಗಳಾದವು. ಅಸೆಂಬ್ಲಿಯಲ್ಲಿ ವಿರೋಧ, ಗದ್ದಲಗಳೆಲ್ಲ ದಾಖಲಾದವು. ಆದರೆ ಐಟಿ ಹುಡುಗರ ಪರವಾಗಿ ಅಂತಹುದೇನೂ ಆಗುವುದಿಲ್ಲ. ಯಾಕೆ ಎನ್ನುವುದಕ್ಕೆ ಅನೇಕ ಕಾರಣಗಳಿವೆ.
ನನ್ನ ಈ ವಾರದ ಅಂಕಣ ಲೇಖನ, ಬೆಂಗಳೂರಿನ ರಿಯಲ್ ಎಸ್ಟೇಟ್, ಭಾರತದ ಐಟಿ ಇಂಡಸ್ಟ್ರಿಯ ಏಳುಬೀಳುಗಳು, ಆಗಿಹೋದ ಇತಿಹಾಸ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಆಗುತ್ತಲೆ ಇರುವ ಏರಿಳಿತಗಳು, corrections, ಇತ್ಯಾದಿಗಳ ಕುರಿತು ಇದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/03/blog-post_20.html

- ravikreddy ರವರ ಬ್ಲಾಗ್
- Login or register to post comments
- 342 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: IT ಗೆ ಬಂತು ಆಪತ್ತು ! ?
ರವಿ,
ಬರಹ ಸಮಯೋಚಿತವಾಗಿದೆ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: IT ಗೆ ಬಂತು ಆಪತ್ತು ! ?
ನಾನು ಬೆಂಗಳೂರಿನ ಐ.ಟಿ. ಕಂಪನಿಯೊಂದರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. 2002ರಲ್ಲಿ ಇಂಜಿನಿಯರಿಂಗ್ ಮುಗಿಸಿದಾಗ, ಕಲಸಕ್ಕಾಗಿ ಪರದಾಡಿದ "ಆ ದಿನಗಳ" ನೆನಪು ಎನ್ನೂ ಮಾಸಿಲ್ಲ. ಈಗ ಮತ್ತೊಂಮ್ಮೆ "ಸ್ಲೋ ಡೌನ್" ಎಂಬ ಭೂತ ದರ್ಶನ!ನಿಮ್ಮ ಬರಹವನ್ನೋದಿ ಸ್ವಲ್ಪ ಧೈರ್ಯ ತಂದುಕೊಂಡೆ. ತುಂಬ ಧನ್ಯವಾದಗಳು.
ಆದರೆ ನನ್ನದೊಂದು ಪ್ರಶ್ನೆ - ಬ್ರಜಿಲ್, ಚೀನ, ರಷಿಯಾ ಮುಂತಾದ ರಾಷ್ಟ್ರಗಳು "ಹೊರ ಗುತ್ತಿಗೆ"ಯನ್ನು ಪಡೆಯುವುದರಲ್ಲಿ ಭಾರತದ ಜೊತೆ ಪೈಪೋಟಿ ನಡೆಸಿವೆ. ರಾಜಕೀಯವಾಗಿ ಭಾರತ್ತಕ್ಕಿಂತ ಬಲವಾಗಿರುವ ಇವು, ರಸ್ತೆ ಮುಂತಾದ ಸವಲತ್ತುಗಳನ್ನು ಬೆಂಗಳುರಿಗಿಂತ ಉತ್ತಮವಾಗಿ ನೀಡುತ್ತಿವೆ. ಹೀಗಿರುವಾಗ, ಐ.ಟಿ. ಹುದ್ದೆಗಳು ನಮಲ್ಲಿ ಕ್ರಮೇಣ ಕಡಿಮೆಯಾಗುವುದಿಲ್ಲವೇ? ಈಗ ಉತ್ತುಂಗದಲ್ಲಿರುವ ಐ.ಟಿ. ಮುಂದಿನ 5 ವರ್ಷಗಳಲ್ಲಿ ಇಳಿಮುಖವಾಗಿ, ನಶಿಸಿಹೋಗದಿದ್ದರರೂ ಕೂಡ, ಒoದು ಹಂತಕ್ಕೆ ಬಂದು stabilize ಆಗುತ್ತದೆ ಎಂದು ನನ್ನ ಭವನೆ. ನೀವೇನಂತೀರಿ?
ಬಾchi - www.sumneblog.com
ಉ: IT ಗೆ ಬಂತು ಆಪತ್ತು ! ?
ರವಿರೆಡ್ಡಿಗಾರು
"ಬೆಂಗಳೂರಿನ ಐಟಿ ಹುಡುಗರ ಎದೆ ಒಮ್ಮೆ ಭಯದಿಂದ ಕಂಪಿಸಿತ್ತು"
ನೋಡಂಡಿ, ಈ ಸಾಲು ಸರಿಯಿಲ್ಲ... ಬೆಂಗಳೂರಿನ ಅಯ್.ಟಿ ಹುಡುಗರ ಎದೆಗಳು ಒಮ್ಮೆ ಬಯದಿಂದ ಕಂಪಿಸಿದ್ವು.
ತಮಾಸೆಗೆ...
ಆದ್ರೂ ನೀವು ಹುಡುಗ/ಹುಡುಗಿಯರ ಇಲ್ವೇ ಹುಡುರ
ಎದೆಗಳು ಎಂದು ಲಿಂಗ-ತಾರತಮಯವನ್ನು ತೋರಸದಿರಿ...( ಮೊನ್ಮನ್ನೇ ಮಯಿಳಾ ದಿನಾಸರಣೆ ಆಯ್ತಲ್ಲ.. ಅದರ ಗುಂಗು
)
ಏನೊಪ್ಪ ಹಿರಿಯರು, ಅನುಬವದವರು ನೀವು.. ನಾನಿನ್ನು ಪಿಳ್ಳೆ.. ನಂಗೆ ಹೆದರ್‍ಕೆ ಇದ್ದೇ ಅಯ್ತೆ...
ಅದ್ ಸರಿಯಂಡಿ, ನೀವ್ ಯಾಕೆ ಬರೆದು ಬರೆದದನ್ನೆಲ್ಲ ವಿಡಿಯೋ ಹಾಕ್ತೀರಂಡಿ? [ ನಿಜಂಗಾ ನಂಗೆ ಕುತೂಹಲ... ]
ಉ: IT ಗೆ ಬಂತು ಆಪತ್ತು ! ?
ಮಹೇಸಣ್ಣ,
ಈ ಐಡಿಯ ಹೆಂಗೆ ಬಂದಿದ್ದು ಅಂತ ಶುರು ಮಾಡಿದಾಗಲೆ ಬರೆದಿದ್ದೆ ಕಣಣ್ಣ.
http://www.sampada.net/blog/ravikreddy/24/07/2007/5097
ಹೇಳಬೇಕೆಂದರೆ, ಓದೋರ್ಗಿಂತ ಕೇಳೋರೆ ಜಾಸ್ತಿ ಜನ ಅವ್ರೆ ಕಣಣ್ಣ.
http://www.youtube.com/profile_videos?user=ravikrishnareddy07&p=v
ಆಮೇಲೆ ಅಲ್ಲಿನೂ ಬಾಳ ಜನ ಕಾಮೆಂಟೂ ಮಾಡ್ತಾರೆ. ಒಂದೊಂದ್ ಸಲ ಚೆನ್ನಾಗಿ ಮಂಗಳಾರತೀನು ಎತ್‍ತಾರೆ. ಅವರ್ಗೇಳ್ತೀವಿ, ಇವರ್ಗೇಳ್ತೀವಿ, ಹುಸಾರ್ ಅಂತಾರೆ.
http://www.youtube.com/profile_videos?user=ravikrishnareddy07&p=d
ಏನೊ ಒಂತರ ಭಯ ಹುಟ್ಗಂಡದೆ ಅಣ್ಣೊ. ಅದ್ರಾಗೆ ನೀನೂ ಹಿಂಗಂದ್ಬುಟ್ಟೆ ಶಾನೇ ಬೇಜಾರಾಗೋಯ್ತು. ತಾವೆ ಹಿಂಗೆಲ್ಲ ಕ್ವೊಸ್ಚನ್ ಮಾಡಿದ್ರೆ ಹೆಂಗೆ ಅಂತೀನಿ.
ಉ: IT ಗೆ ಬಂತು ಆಪತ್ತು ! ?
"ತಾವೆ ಹಿಂಗೆಲ್ಲ ಕ್ವೊಸ್ಚನ್ ಮಾಡಿದ್ರೆ ಹೆಂಗೆ ಅಂತೀನಿ."
ರೆಡ್ಡಿಗಾರು ಬೇಜಾರ್ ಬೇಡ್ರೀ... ನಂಗೆ ದಿಟವಾಗಲೂ ಆ ಕುತುಕ ಇತ್ತಂಡಿ.