Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ravikreddy ರವರ ಬ್ಲಾಗ್

2006 ರಲ್ಲಿ ಬರೆದಿರುವ ಅಂಕಣ ಲೇಖನಗಳು ಹಾಗೂ ಅಡಿಗರ ನೆನಪು...

February 23, 2008 - 10:12am — ravikreddy

ಆನ್‍ಲೈನ್‌ನಲ್ಲಿ ಇಲ್ಲದಿರುವ ನನ್ನ ಇತರೆ ಲೇಖನಗಳನ್ನೆಲ್ಲ ಬ್ಲಾಗಿನಲ್ಲಿ ಇಲ್ಲವೆ ವೆಬ್‌ಸೈಟಿನಲ್ಲಿ ಹಾಕಬೇಕು ಎಂದು ಒಂದಷ್ಟು ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಆ ಪಟ್ಟಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ಲೇಖನಗಳಿದ್ದವು. ನನ್ನ ಸುಮಾರು ಒಂದು ಒಂದು ವರ್ಷದ ಚಿಂತನೆ ಮತ್ತು ಚಿಂತೆಗಳ ಮೂರ್ತರೂಪ ಅವು. ಎಂದಿನಂತೆ ಯಾವುದೆ ಒಂದು ವಿಷಯಕ್ಕೆ ಸೀಮಿತಗೊಳಿಸಿಕೊಳ್ಳದೆ ಬರೆದಿರುವವು. 2006 ರ ಆಗಸ್ಟ್ ‍ನಿಂದ ಡಿಸೆಂಬರ್ 30 ರವರೆಗೆ ಬರೆದಿರುವ 21 ಲೇಖನಗಳನ್ನು ಈಗ ಬ್ಲಾಗಿಗೆ ಸೇರಿಸಿದ್ದೇನೆ. ಇದೇ ಅವಧಿಯಲ್ಲಿ ಬರೆದಿರುವ ಇತರೆ ಒಂದೆರಡು ಲೇಖನಗಳನ್ನು ಇನ್ನೂ ಸೇರಿಸಬೇಕು. ಹಾಗೆಯೆ 2007 ರ ಉತ್ತರಾರ್ಧದಲ್ಲಿ ಬರೆದಿರುವ ಲೇಖನಗಳನ್ನೂ ಮುಂದಿನ ದಿನಗಳಲ್ಲಿ ಸೇರಿಸಲಿದ್ದೇನೆ.

2006 ರಲ್ಲಿ ಬರೆದಿರುವ ಲೇಖನಗಳು (ಕಾಲಾನುಕ್ರಮಣದಲ್ಲಿ):

  • ಪತ್ರಿಕೆ ಬರಬೇಕಿದ್ದರೆ ಹೆಗಲು ಕೊಟ್ಟು ದುಡಿದವರು...
  • ಎಲ್ಲಾ ಹೆಣ್ಣು ಮಕ್ಕಳಿಗೂ ಸೈಕಲ್
  • ಅಕ್ಕ ಸಮ್ಮೇಳನದಲ್ಲಿ ನಮ್ಮನ್ನು ಪ್ರತಿನಿಧಿಸುವವರು
  • 'ಅಕ್ಕ' ಸಂಭ್ರಮದಲ್ಲಿ...
  • ಭೈರಪ್ಪನವರ ಬೈರಿಗೆ
  • ಗೃಹ ಖಾತೆಯೆನ್ನುವುದು ಒಂದಿದೆಯೆ?
  • ಮುಖ್ಯಮಂತ್ರಿ ಹೆಸರಿನ ಉಪ ಮುಖ್ಯಮಂತ್ರಿಗಳು-ಧರಂ, ಕುಮಾರ್
  • ಅಯೋಗ್ಯರನ್ನು ಕೈಯ್ಯಾರೆ ಆರಿಸಿಕೊಂಡು ಅಭಿವೃದ್ಧಿಯಾಗಲಿಲ್ಲ ಅಂದರೆ?
  • ಆಮಿಷಕ್ಕೊಳಗಾಗದ ಆಮಿಷರು
  • ಕೊಂದವನ ಮನೆಯವರಿಗೆ ಪ್ರೀತಿ ತೋರಿದವರು
  • ದೇಶಪ್ರೇಮ ಎಂದರೆ ಸ್ವಮತಪ್ರೇಮವೆ?
  • ನೀವು ಪ್ರಾಮಾಣಿಕರಾಗಿದ್ದರೆ ಇನ್ನು ಲಂಚ ಕೊಡಬೇಕಾಗಿಲ್ಲ!
  • ಇದು ಲಂಚಕ್ಕಿಂತ ಪವರ್‌ಪುಲ್ ಕಣ್ರಿ!
  • ಬುಷ್ ಹಲ್ಲು ಕಿತ್ತ ಅಮೇರಿಕನ್ನರು
  • The name is Bond, ‘Money’ Minting Bond!
  • ಶಿರವಿಲ್ಲದವರು ಮಾತ್ರ ಶಿರಸ್ತ್ರಾಣ ಬೇಡವೆನ್ನುತ್ತಾರೆ!
  • 60 ಜನರಲ್ಲಿ ಒಬ್ಬನ ಬಳಿ AK-47
  • ಅಮೇರಿಕ ಎಂದರೆ ಭುವಿಯ ಮೇಲಿನ ಸ್ವರ್ಗವೇನಲ್ಲ!
  • ಸಾಹಿತ್ಯ ಗೋಷ್ಠಿ ಮತ್ತು ಮರ್ಕ್ಯುರಿ ನ್ಯೂಸ್
  • ಅಣ್ವಸ್ತ್ರ ಒಪ್ಪಂದಕ್ಕೆ ವಿರೋಧವೇಕೆ?
  • ಇಬ್ಬರು ರಾಷ್ಟ್ರಾಧ್ಯಕ್ಷರ ಮರಣ

ಇವೆಲ್ಲ MS Word ಫೈಲುಗಳಲ್ಲಿ 'ಬರಹ' ಫಾರ್ಮ್ಯಾಟ್‍ನಲ್ಲಿ ಇದ್ದವು. ಇವನ್ನು ಯೂನಿಕೋಡ್‍ಗೆ ಪರಿವರ್ತಿಸುವಾಗ ಮಿ/ವಿ/ಯಿ/ಹಿ/ಷಿ ಯಂತಹ ಅಕ್ಷರಗಳು ನಾಪತ್ತೆಯಾಗುತ್ತಿದ್ದವು. ಏನೊ ನನ್ನ ಸೆಟ್ಟಿಂಗ್‌ ಸಮಸ್ಯೆ. ಆದಷ್ಟೂ ಬಹುಪಾಲನ್ನು ಸರಿಪಡಿಸಿದ್ದೇನೆ. ಆದರೂ ಅಲ್ಲಿ ಇಲಿ ಒಂದೊಂದು ತಪ್ಪು ಉಳಿದುಬಿಟ್ಟಿರಬಹುದು. ಕ್ಷಮೆ ಇರಲಿ. (ಆಸಕ್ತರು ಓದುವಾಗ ಈ ತಪ್ಪುಗಳನ್ನು ಕಂಡರೆ, ಅವನ್ನು ಎತ್ತಿ ತೋರಿಸಿದರೆ, ಭಾರಿ ಖುಷಿ ಸ್ವಾಮಿ!)

ಕೆಲವೊಂದು ಬರಹಗಳಿಗೆ (ಯಾರದೇ ಆಗಿರಲಿ) ಕಾಲದ ಹಂಗಿರುವುದಿಲ್ಲ. ನಾನು ಎಂದೋ ಬರೆದಿದ್ದ ಲೇಖನವನ್ನು ನೆನ್ನೆ ತಾನೆ ಓದಿ ಭಾರೀ ದು:ಖ ಮತ್ತು ಅಸಹನೆಗೊಂಡ ಓದುಗರೊಬ್ಬರು (lostman888) "ಶ್ಯಾನೇ ಪ್ರೀತಿಯಿಂದ" ಬರೆದ ಪತ್ರ ಇವತ್ತು ತಾನೆ ಬಂದಿದೆ. ಇಂತಹ ತತ್‍ಕ್ಷಣದ ಪ್ರತಿಕ್ರಿಯೆಗಳ ವಿಚಾರಕ್ಕೆ ಮತ್ತು ಆಕಸ್ಮಿಕ ಓದುಗಳ (ಅಂದರೆ ಎಲ್ಲೆಲ್ಲಿಂದಲೊ ಆರಂಭಿಸಿ ಎಲ್ಲೆಲ್ಲೊ ಹೋಗಿ ಮುಟ್ಟುವ) ವಿಷಯಕ್ಕೆ ಇಂಟರ್‍ನೆಟ್ ನಿಜಕ್ಕೂ ಕ್ರಾಂತಿ ಮಾಡಿದೆ. ಮುದ್ರಿತ ಪುಸ್ತಕಗಳ ವಿಚಾರದಲ್ಲಿ ನಮ್ಮ ಅಭಿರುಚಿಯದನ್ನೆ ಕೊಳ್ಳುತ್ತೇವೆ, ಓದುತ್ತೇವೆ. ಇಂಟರ್‍ನೆಟ್‍ನಲ್ಲಿನ ಬರಹಗಳಿಗೆ ಆ ಮಿತಿಯಿಲ್ಲ.

ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಮತ್ತು ಚಿಂತಕರಲ್ಲಿ ಒಬ್ಬರಾದ ಗೋಪಾಲಕೃಷ್ಣ ಅಡಿಗರ ಸಾಹಿತ್ಯವನ್ನು ನಾನು ಓದಿಯೇ ಇಲ್ಲ ಅನ್ನಬೇಕು. ಕವನ ಮತ್ತು ಕಾವ್ಯ ಓದುವ ಅಭ್ಯಾಸವನ್ನು ಇಲ್ಲಿಯವರೆಗೆ ರೂಢಿಸಿಕೊಳ್ಳಲಾಗದೆ ಇರುವುದೆ ಅದಕ್ಕೆ ಮುಖ್ಯ ಕಾರಣ. ಆದರೆ ಅಡಿಗರು ಅನುವಾದಿಸಿರುವ "ಬನದ ಮಕ್ಕಳು" ನನ್ನ ಫೇವರೈಟ್‍ಗಳಲ್ಲಿ ಒಂದು. ಬಟಾಬಯಲಿನಲ್ಲಿ ಹಸುಗಳನ್ನು ಮೇಯಿಸುತ್ತ ಯಾವುದೊ ಒಂದು ಮರದ ಕೆಳಗೆ, ಕೆಲವೊಮ್ಮೆ ನಮ್ಮ ಗದ್ದೆಯ ದೊಡ್ಡಬದಿಯ ಹೊಂಗೆ ಮರಗಳ ಕೆಳಗೆ, ನಮ್ಮ ಹುಲ್ಲುಗಾವಲಿನಲ್ಲಿದ್ದ ಜಾಲಿಮರದ ಅರೆಬರೆ ನೆರಳು/ಬಿಸಿಲಿನ ಕೆಳಗೆ, ಇಲ್ಲವೆ ಬೆಳಿಗ್ಗೆ ಹತ್ತರ ಸುಮಾರಿನ ಎಳೆಬಿಸಿಲಿನಲ್ಲಿ ಹಸಿರು ಹುಲ್ಲಿನ ಮೇಲೆ ಟರ್ಕಿ ಟವೆಲ್ ಹಾಸಿಕೊಂಡು, ಬೋರಲು ಮಲಗಿಕೊಂಡು, ಇಂಗ್ಲೆಂಡಿನ ನವಬನದ ಮಕ್ಕಳ ಕತೆಯನ್ನು ನನ್ನ ಹೈಸ್ಕೂಲು ದಿನಗಳಲ್ಲಿ ಅನೇಕ ಸಲ (ಏಳೆಂಟು ಸಲವಾದರೂ) ಓದಿದ್ದೇನೆ. ಆ ಮುಗ್ಧತೆಯ ದಿನಗಳಲ್ಲಿ ಆ ಪುಸ್ತಕದಲ್ಲಿದ್ದ ಅಡಿಗರ ಅಡ್ರೆಸ್‌ಗೆ ಆ ಪುಸ್ತಕದ ಬಗ್ಗೆ ಒಂದು ಪತ್ರವನ್ನೂ ಬರೆದಿದ್ದೆ (ಬಹುಶಃ 1988-90 ರ ಸುಮಾರಿನಲ್ಲಿರಬೇಕು). ಅನೇಕ ಊರುಗಳಲ್ಲಿ ಅಧ್ಯಾಪನ ಮಾಡಿದ ಅಡಿಗರಿಗೆ ಆ ಪತ್ರ ತಲುಪಿರುವ ಸಾಧ್ಯತೆ ಬಹಳ ಕಮ್ಮಿ ಎನ್ನಿಸುತ್ತದೆ ಈಗ. ನಾನು ಲೇಖಕರೊಬ್ಬರಿಗೆ ಪೆನ್ನಿನಲ್ಲಿ ಬರೆದ ಮೊದಲ ಮತ್ತು ಕೊನೆಯ ಪತ್ರ ಇರಬೇಕು ಅದು!!

ಇವತ್ತು ಆ ಪುಸ್ತಕದ ಇಂಗ್ಲಿಷ್ ಮೂಲ ಗುಟೆನ್‍ಬರ್ಗ್ ನಲ್ಲಿ ಲಭ್ಯವಿದೆ. ಓದಬೇಕು ಎಂದು ಮನಸ್ಸು ಬಹಳ ತುಡಿಯುತ್ತದೆ. ಆದರೆ ಆ ತುಡಿತವನ್ನು ಅಮುಕಿಕೊಂಡು ಕನ್ನಡದ ಪುಸ್ತಕವನ್ನು ಏಳೆಂಟು ವರ್ಷಗಳಿಂದ ಹುಡುಕುತ್ತಿದ್ದೇನೆ. ಸಿಗುತ್ತಿಲ್ಲ.

ನಾನು ಯಾವಾಗಲೊ ಬರೆದ ಲೇಖನಕ್ಕೆ ಓದುಗನೊಬ್ಬ ಇವತ್ತು (ಕೋಪದ!) ಪ್ರತಿಕ್ರಿಯೆ ತೋರಿದ ಬಗ್ಗೆ ಯೊಚಿಸುತ್ತಿದ್ದಾಗ ಅಡಿಗರು ಎಂದೊ ಅನುವಾದಿಸಿದ ಪುಸ್ತಕವನ್ನು ಬೆಂಗಳೂರು ಪಕ್ಕದ ಹಳ್ಳಿಯ ಹುಡುಗ ಓದಿ ಅವರಿಗೆ ಪತ್ರ ಬರೆದದ್ದು ನೆನಪಾಯಿತು. ಈಗ ನೋಡಿದರೆ ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಆದರೆ ಆ ಸಮಯದಲ್ಲಿ ಮನಸ್ಸು ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಜಿಗಿಯುತ್ತ ಹೋಯಿತು ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಹಾಗೆಯೆ, ಕೆಲವು ಬರವಣಿಗೆಗಳಿಗೆ ಮತ್ತು ಚಿಂತನೆಗಳಿಗೆ ಕಾಲದ ಮಿತಿಯಿರುವುದಿಲ್ಲ ಎನ್ನುವುದೂ ಅರಿವಾಗುತ್ತದೆ.

Ornamental seperator
  • ravikreddy ರವರ ಬ್ಲಾಗ್
  • Login or register to post comments
  • 164 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು
  • ಒಂದೆರಡು ರೇಖಾಚಿತ್ರಗಳು
  • ಗರ್ವ, ಮಾಯಾಮೃಗ, ಮನ್ವಂತರ ಹಾಗು ಮುಕ್ತ ಶೀರ್ಷಿಕೆ ಗೀತೆಗಳು
  • iPod ಸೂಕ್ಷ್ಮೋ - ಇನ್ವಿಸಿಯೋ ?
  • ಅಡಿಗರ ಮೋಹನ ಮುರಲಿ
Syndicate content

ಲೇಖಕರು

ravikreddy's picture

ಪೂರ್ಣ ಹೆಸರು
ರವಿ ಕೃಷ್ಣಾ ರೆಡ್ಡಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 5:56pm
  • ಸಂಗನಗೌಡ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 5:27pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator