Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ravikreddy ರವರ ಬ್ಲಾಗ್

"ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು

March 1, 2008 - 6:44am — ravikreddy

ಇವು 2007 ರ ಜನವರಿಯಿಂದ ಜುಲೈ ವರೆಗೆ ಬರೆದಿರುವ ಅಂಕಣ ಲೇಖನಗಳು. ಇವುಗಳೊಂದಿಗೆ ನಾನು ಇಲ್ಲಿಯವರೆಗೆ ಅಂಕಣಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನೂ ಅಂತರ್ಜಾಲಕ್ಕೆ ಸೇರಿಸಿದಂತಾಯಿತು. ಇದೇ ಸಮಯದಲ್ಲಿ ಅಂಕಣಕ್ಕಲ್ಲದೆ ಪತ್ರಿಕೆಗೆ ಬರೆದ ಇತರ ಇನ್ನೂ ಒಂದೆರಡು ಲೇಖನಗಳಿವೆ. ನಿಧಾನಕ್ಕೆ ಸೇರಿಸಬೇಕು.

  • ಕಲಿಯುಗದಿಂದ ಕೃತಯುಗಕ್ಕೆ
  • ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!!
  • ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!!
  • ...<-->ಹಾಯ್ -> ಲವ್ ಯು -> ಬೈ--><---...
  • ಕಂಪ್ಯೂಟರ್‌ನಲ್ಲಿ ಕನ್ನಡ - ಯಾಹೂ!!!
  • ನೌಕರರನ್ನು ಲಾಭಕ್ಕೆ ಮಾರಿಕೊಳ್ಳುತ್ತಿರುವ ಇನ್ಫೋಸಿಸ್, ವಿಪ್ರೊ!!
  • ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು
  • ಸಲಿಂಗ ಕಾಮ ಮತ್ತು ಇತಿಹಾಸ
  • ಗಿಡಿಯೆನ್ನನ ಕಹಳೆ
  • ಮಟಮಟ ಮಧ್ಯಾಹ್ನದಲ್ಲಿ ಏಕಾಂಗಿ
  • ಅಲ್ಲಿ ಪ್ರತಿಭಾ ಶೋಧ, ಇಲ್ಲಿ ಪ್ರತಿಭಾ ಸಮಾಧಿ???
  • ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ...
  • ಜೀವಂತ ರೋಲ್ ಮಾಡೆಲ್ ಇನ್ನಿಲ್ಲ...
  • ಮಂಗಳೂರಿನ ಸಜ್ಜನರೊಡನೆ...
  • ಈ ಅಂಧಕಾರ ನಮ್ಮನ್ನು ದೀನರನ್ನಾಗಿ ಮಾಡಿದೆ...
  • ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ...
  • ದೇವರೆ, ಸ್ನೇಹಿತರಿಂದ ನನ್ನನ್ನು ಕಾಪಾಡು!
  • ಮಹಿಮಾ "ಗಾಂಧಿ", ಕ್ರಿಯಾಶೀಲ ಕೃಷ್ಣ...
  • ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ.
  • ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?
  • ಆಂಧ್ರದ ಜಯಪ್ರಕಾಶ್ ನಾರಾಯಣ್, ಬೆಂಗಳೂರಿನ ರಮೇಶ್
  • ಹತ್ತು ಸಾವಿರ ಜನರಲ್ಲಿ ಒಬ್ಬರೂ ಕೈಎತ್ತಿಲ್ಲ!!!
  • ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು
  • ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು...
  • ತಿಮ್ಮಕ್ಕನಿಂದ ಕಲಿತಿದ್ದೇನು?
  • ಸ್ಟೀರಿಯೋಟೈಪ್‌ಗಳನ್ನು ನಂಬಿದರೆ ಜೀವನಪ್ರೀತಿ ಸಾಧ್ಯವೆ?

ಈಗ ಈ ಲೇಖನಗಳನ್ನು ಮತ್ತೆ ನೋಡುತ್ತಿದ್ದಾಗ ತೇಜಸ್ವಿ ಮತ್ತು ಭೈರಪ್ಪನವರು ಒಂದಲ್ಲ ಒಂದು ಸಂದರ್ಭದಲ್ಲಿ ಈ ಅವಧಿಯಲ್ಲಿ (ಅಂದರೆ 2007 ರ ಪೂರ್ವಾರ್ಧದಲ್ಲಿ) ನನಗೆ ಪ್ರಸ್ತುತರಾಗಿದ್ದು ಕಾಣಿಸುತ್ತದೆ. ತೇಜಸ್ವಿಯವರು ಸಾಯುವ ನಾಲ್ಕೈದು ದಿನಗಳ ಹಿಂದೆ ಬರೆದಿದ್ದ "ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ..." ಲೇಖನದಲ್ಲೂ ಅವರಿದ್ದಾರೆ. ಅವರು ತೀರಿಕೊಂಡ ಸಂದರ್ಭದಲ್ಲಿ ಬರೆದದ್ದು "ಜೀವಂತ ರೋಲ್ ಮಾಡೆಲ್ ಇನ್ನಿಲ್ಲ...". ಹಾಗೆಯೆ, ರಾಮದಾಸರು ತೀರಿಕೊಂಡ ಸಂದರ್ಭದಲ್ಲಿ ಬರೆದ "ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು..." ಲೇಖನದಲ್ಲೂ ನೆನಪಾಗಿದ್ದಾರೆ.

ಇನ್ನು ಭೈರಪ್ಪನವರೂ ಮೂರ್ನಾಲ್ಕು ಕಡೆ ಕಾಣಿಸಿಕೊಂಡಿರುವುದನ್ನು ಕಂಡಾಗ ನನಗೇನಾದರೂ ಭೈರಪ್ಪ-ಫೋಬಿಯ ಇತ್ತೆ ಎನ್ನುವ ಸಂದೇಹ ಬರುತ್ತದೆ. ಆದರೆ ಅದು ನನ್ನೊಬ್ಬನದೆ ಕತೆಯಲ್ಲ, ಹಾಗೂ ಆ ಸಮಯದಲ್ಲಿ ವರ್ತಮಾನಕ್ಕೆ ಪ್ರತಿಕ್ರಿಯಿಸುತ್ತಿದ್ದ ಕನ್ನಡ ಬರಹಗಾರರು ಈ ವಿಚಾರದಲ್ಲಿ ಪದೆಪದೆ ಭೈರಪ್ಪನವರನ್ನು (ಪರ-ವಿರೋಧ) ಚರ್ಚಿಸಿದ್ದಾರೆ ಎನ್ನಿಸುತ್ತದೆ. ಯಾಕೆಂದರೆ, ಅದು ಆವರಣದ ಮಾಯೆ ಆವರಿಸಿಕೊಂಡಿದ್ದ ಕಾಲ. ಭೈರಪ್ಪನವರನ್ನು ಪ್ರತ್ಯಕ್ಷ-ಪರೋಕ್ಷವಾಗಿ ನೆನಪಿಸಿಕೊಂಡಿರುವ ಲೇಖನಗಳು:

  • ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು
  • ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?
  • ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು
  • ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು...

ಇನ್ನು, ಸಂಪದದ ಬಗ್ಗೆ:

"ಹಾಗೆಯೆ, ಸಂಪದ.ನೆಟ್ ಎಂಬ ಇನ್ನೊಂದು ವೆಬ್‌ಸೈಟ್ ಮತ್ತು ತಂಡದ ಬಗ್ಗೆಯೂ ಹೇಳಬೇಕು. ಇನ್ನೂ 25-30 ದಾಟದ ಚುರುಕು ಕನ್ನಡ ಹುಡುಗರ ಈ ಗುಂಪಿನಲ್ಲಿ ಅನೇಕ ಮೌಲ್ಯಯುತ ಬರಹಗಳು, ಚರ್ಚೆಗಳು, ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ದಿಸೆಯಲ್ಲಿನ ಕೆಲಸಗಳು ನಡೆಯುತ್ತಿವೆ. ಕನ್ನಡ ಪಂಡಿತರಲ್ಲದ, ಮಡಿಮೈಲಿಗೆ ಇಲ್ಲದ, ಹೊಸವಿಚಾರಗಳಿಗೆ, ಪ್ರಯೋಗಗಳಿಗೆ ಮೈಯೊಡ್ಡಿಕೊಳ್ಳುವ ಇಂತಹ ಒಂದು ಸಕ್ರಿಯ ಗುಂಪು ಇದೆ ಎನ್ನುವುದೆ ಹೆಮ್ಮೆಯ ವಿಚಾರ. ... "

ಇದು "ಕಂಪ್ಯೂಟರ್‌ನಲ್ಲಿ ಕನ್ನಡ - ಯಾಹೂ!!!" ಲೇಖನದಲ್ಲಿ ಪ್ರಸ್ತಾಪವಾಗಿದೆ.

ಇತ್ತೀಚೆಗೆ ಗೆಳೆಯ ನರೇಂದ್ರ ಪೈ ಕತೆಗಾರ ವಿವೇಕ್ ಶಾನುಭೋಗರ ಆಡಿಯೊ ಸಂದರ್ಶನ ಮಾಡಿದ್ದ ಪಾಡ್‍ಕ್ಯಾಸ್ಟ್ ನೀವೆಲ್ಲ ಕೇಳಿರಬಹುದು. ಸಂಪದ ತಂಡದ ಇಂತಹ ಪ್ರಯತ್ನಗಳ ಬಗ್ಗೆ ಹೆಮ್ಮೆ ಪಟ್ಟುಕೊಂಡು

"http://www.sampada.net/podcasts ವೆಬ್‌ಸೈಟಿನಲ್ಲಿ ತೇಜಸ್ವಿ, ಕಂಬಾರ, ಅನಂತಮೂರ್ತಿ, ಜಿಎಸ್ಸೆಸ್, ನಿಸಾರ್ ಅಹ್ಮದ್ ಮತ್ತಿತರ ಕನ್ನಡ ಸಾಹಿತಿಗಳ ಬಿಚ್ಚುಮಾತಿನ ಸಂದರ್ಶನಗಳ ಧ್ವನಿಮುದ್ರಣಗಳೂ ಇವೆ. ಓ.ಎಲ್.ಎನ್. ಸ್ವಾಮಿ, ಉದಯವಾಣಿಯ ಇಸ್ಮಾಯಿಲ್ ಮುಂತಾದವರು ಮಾಡಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಇದನ್ನೆಲ್ಲ ಇವರು ಮಾಡಿರುವುದು ತಮ್ಮ ಬಿಡುವಿನ ವೇಳೆಯಲ್ಲಿ. ಇಂಟರ್‌ನೆಟ್‌ನಲ್ಲಿ ಸುಮ್ಮನೆ ಬಡಬಡಿಸುವ, ಸ್ವರತಿಯಲ್ಲಿ ಮುಳುಗಿರುವ ಅನೇಕ ಕನ್ನಡಿಗರು ಮಾತಿಗಿಂತ ಕೃತಿಯಲ್ಲಿ ತೊಡಗಿಕೊಳ್ಳಲು ಇವೆಲ್ಲ ಪ್ರೇರಣೆಯಾಗಬೇಕಿದೆ. ಅಲ್ಲವೆ?"

ಎಂದು ಬರೆದದ್ದು "ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ." ಲೇಖನದಲ್ಲಿ.

ಎಂದಿನಂತೆ, ಪ್ರತಿಕ್ರಿಯೆಗಳಿಗೆ ಮತ್ತು ವಿಮರ್ಶೆಗಳಿಗೆ ಮುಕ್ತ ಸ್ವಾಗತವಿದೆ.

ನಮಸ್ಕಾರ,
ರವಿ...

Ornamental seperator
  • ravikreddy ರವರ ಬ್ಲಾಗ್
  • Login or register to post comments
  • 179 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀಲುಗಳು
  • ಭೀಮಸೇನ ಜೋಷಿ: ನೆನಪಾದದ್ದು
  • ಅಚ್ಚ-ಕನ್ನಡದ ಬರಹಗಾರರು/ಕಬ್ಬಿಗರು
  • ಒಂದೆರಡು ರೇಖಾಚಿತ್ರಗಳು
  • 2006 ರಲ್ಲಿ ಬರೆದಿರುವ ಅಂಕಣ ಲೇಖನಗಳು ಹಾಗೂ ಅಡಿಗರ ನೆನಪು...
Syndicate content

ಲೇಖಕರು

ravikreddy's picture

ಪೂರ್ಣ ಹೆಸರು
ರವಿ ಕೃಷ್ಣಾ ರೆಡ್ಡಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 5:56pm
  • ಸಂಗನಗೌಡ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 5:27pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator