ಈಗಿನಂತೆ 5 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅರ್ಜುನ ಮತ್ತು ಧರ್ಮರಾಯ ಧನುರ್ವಿದ್ಯಾ ಪರೀಕ್ಷೆಯ ಕತೆ ಎಚ್ಚೆಸ್ವಿಯವರ ನೋಟದಲ್ಲಿ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
04
Nov
2011
ಬ್ಲಾಗ್ ಬರಹ

ದನುರ್ವಿದ್ಯಾಪರೀಕ್ಷೆಯಲ್ಲಿ ಯುಧಿಷ್ಟಿರ ಹೇಳಿದ್ದು ಅಂತ ಒಂದು ಬರುತ್ತೆ. ನಮ್ಮಲ್ಲಿ ಏನು ಮಹಾಭಾರತಕತೆಯಲ್ಲಿ ಕುಮಾರವ್ಯಾಸನ ಕತೆಯಲ್ಲಿ ಏನು ಬರುತ್ತೆ ಅಂದ್ರೆ ಅರ್ಜುನ ಅಲ್ಲಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 292
ಅರಮನೆ ಮೈದಾನದಲ್ಲಿ- ಆರೋಗ್ಯ ವಸ್ತು ಪ್ರದರ್ಶನ-ಚೆನ್ನಾಗಿದೆ.
ಗಣೇಶ's picture
ಗಣೇಶ
09
Dec
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 1
ಹಿಟ್ಸ್ : 593
ಜೋಗ ನೋಡಿರಿ ಈಗ
rajeshnaik111's picture
14
Aug
2006
ಬ್ಲಾಗ್ ಬರಹ

ಮೊನ್ನೆ ಶನಿವಾರ ವಿಪರೀತ ಕೆಲಸವಿದ್ದುದರಿಂದ ರಾತ್ರಿ ಮನೆಗೆ ಬಂದಾಗ ಮಧ್ಯರಾತ್ರಿ ದಾಟಿತ್ತು. ನಿನ್ನೆ ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ,...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,482
ಮತ್ತೆ ಚಿಗುರಿದೆ 'ಸಂಪದ'
hpn's picture
ಹರಿ ಪ್ರಸಾದ್ ನಾಡಿಗ್
01
Nov
2009
ಪುಟ

ಎರಡು ತಿಂಗಳ ಹಿಂದೆ ಆದ ಅವಗಢದಿಂದಾಗಿ ಸಂಪದ ಕಾರ್ಯನಿರ್ವಹಿಸದಂತಾಗಿತ್ತು. ಮುಂಚೆಯೇ ಪ್ರತಿ ದಿನ ಹೆಚ್ಚುತ್ತಿದ್ದ ಟ್ರಾಫಿಕ್ ನಿರೀಕ್ಷೆಗೆ ಮೀರಿದ ತಾಂತ್ರಿಕ ತೊಂದರೆಗಳನ್ನು...

ಪ್ರತಿಕ್ರಿಯೆಗಳು: 76
ಹಿಟ್ಸ್ : 3,075
ಇಂಧನ ದುಬಾರಿಯಾದರೆ ಮತ್ತೆ ಎತ್ತಿನ ಕಾರು
patwarikantu's picture
ಕಾ0ತು ಬಾಗಲವಾಡ‌
01
Oct
2011
ಲೇಖನ

 ಇಂಧನ ದರ ಗಗನಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ಬದಲಿ ಇಂಧನಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಪೆಟ್ರೋಲ್ ದರ ದುಬಾರಿಯಾಗುತ್ತಿದೆ. ಹೀಗಾಗಿ ಎಲ್ಲರೂ ಡೀಸೆಲ್...

ಪ್ರತಿಕ್ರಿಯೆಗಳು: 3
ಹಿಟ್ಸ್ : 149
’ಸೂಪರ್ ಮೂನ್’ ಅಪಾಯಕಾರಿಯಲ್ಲ
ಶ್ರೀಕಾಂತ ರಾವ್'s picture
ಶ್ರೀಕಾಂತ
13
Mar
2011
ಲೇಖನ

ಮೊದಲಿಗೆ ಜಪಾನ್’ನ ಭೂಕಂಪ ಮತ್ತು ಅದರಿಂದ ಉಂಟಾದ ತ್ಸುನಾಮಿಯ ಅವಘಡದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಲೆಕ್ಕಕ್ಕೆ ಸಿಗದಿರುವಷ್ಟು ಜನರ ಮರಣ,...

ಪ್ರತಿಕ್ರಿಯೆಗಳು: 13
ಹಿಟ್ಸ್ : 872
ನೆನಪಿನ ಚಿತ್ರಕಲಾ ಶಾಲೆ-ಭಾಗ ೨: ಇದ್ದಂಗೇ ಬರೆಯೋದಂದ್ರೆ
anilkumar's picture
ಎಚ್.ಎ. ಅನಿಲ್ ಕುಮಾರ್
13
Jul
2011
ಲೇಖನ

 (೪)

 
ಸ್ಥಿರಚಿತ್ರಣ ಅಥವ ಸ್ಟಿಲ್...
ಪ್ರತಿಕ್ರಿಯೆಗಳು: 1
ಹಿಟ್ಸ್ : 298
ತಲೆಯ ಮೇಲಿನ ಹೊರೆ
hamsanandi's picture
ಹಂಸಾನಂದಿ
18
Nov
2009
ಬ್ಲಾಗ್ ಬರಹ

ಎಳವೆಯಲುಣಿಸಿದ ತುಸು ನೀರಿನಾಸರೆಯನೇ ನೆನೆದು
ತಲೆಮೇಲೆ ಹೊರೆಯನಿಟ್ಟು ಕೊನೆಯವರೆಗೂ ತೆಂಗು
ಮರಳಿಸುವುದು ಮನುಜರಿಗೆ ಅಮೃತದೆಳನೀರನ್ನು;
ಮರೆಯರು ಸುಗುಣಿಗಳೆಂದೂ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,008
ಜಲದ ಕಣ್ಣುಗಳನ್ನು ಅರಳಿಸಬೇಕಿದೆ.
ramaswamy's picture
ಡಿ.ಎಸ್.ರಾಮಸ್ವಾಮಿ
26
Aug
2010
ಪುಟ

 
ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ  ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ...

ಪ್ರತಿಕ್ರಿಯೆಗಳು: 3
ಹಿಟ್ಸ್ : 795
ಎಳ್ಳುಬೆಲ್ಲವ ಮೆಲ್ಲೋಣ... ಒಳ್ಳೊಳ್ಳೆಯ ಮಾತನಾಡೋಣ....
vinyasa's picture
ಮಂಜುಳಾ ದೇವಿ
13
Jan
2011
ಲೇಖನ

ಮಕರ ಸಂಕ್ರಾಂತಿ, ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಸಂಭ್ರಮದ ದಿನ.ಹೊಸ ಬಟ್ಟೆ ಧರಿಸಿ,ಅಲಂಕರಿಸಿಕೊಂಡು ಮನೆಮನೆಗೆ ಎಳ್ಳು ಬೀರುವ ಸಡಗರದ ದಿನ. ನಾವು ಚಿಕ್ಕವರಿದ್ದಾಗ ನಮ್ಮ...

ಪ್ರತಿಕ್ರಿಯೆಗಳು: 12
ಹಿಟ್ಸ್ : 566

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

"ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...

"ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...

ಸುಮಾರು ಒಂದೂವರೆ ವರ್ಷದ ಹಿಂದೆ ಸರಿಯಾಗಿ 111 ಪುಟಗಳ ಆ ಪುಸ್ತಕವನ್ನು ಕೈಯಲ್ಲಿ ಹಿಡಿದವನು ಬಹುಶಃ ನಾಲ್ಕೈದು ಗಂಟೆಗಳಲ್ಲಿ ಓದಿ ಮುಗಿಸಿರಬೇಕು. ಆ ಪುಟ್ಟ ಕಾದಂಬರಿಯ ಹೆಸರು "ವಲಸೆ ಹಕ್ಕಿಯ ಹಾಡು." 1995 ರಲ್ಲಿ ಮುದ್ರಣಗೊಂಡದ್ದದು. "ಸ್ವಾತಂತ್ರ್ಯ ಹೋರಾಟಗಾರರಲ್ಲಿಯೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದ, ಎಂದೂ ಉತ್ಪ್ರೇಕ್ಷೆ ಮಾಡದೆ ಚಳವಳಿಯನ್ನು ನಿರ್ಲಿಪ್ತವಾಗಿ ನಿರೂಪಿಸುವ, ಹುಟ್ಟು ಹೋರಾಟಗಾರನಲ್ಲದ, ಚಳವಳಿ ಕಾಲದಲ್ಲಿ ದೇಶದ ಉದ್ದಗಲಕ್ಕೆ ಓಡಾಡಿದ ಪ್ರಯಾಣಿಕ"ನನ್ನು ಕಥಾನಾಯಕನಾಗಿ ಹೊಂದಿರುವ ಕಥೆ ಅದು. ಸ್ವಾತಂತ್ರ್ಯೋತ್ತರ ಭಾರತದ ಗ್ರಾಮೀಣ ರಾಜಕೀಯವನ್ನು, ಗ್ರಾಮೀಣ ಬದುಕನ್ನು, ಆ ಪುಟ್ಟ ಕಾದಂಬರಿಯಲ್ಲಿ ವಿಶ್ಲೇಷಿಸಿರುವ, ನಿರೂಪಿಸಿರುವ ರೀತಿ ಅದ್ಭುತವಾದದ್ದು. ಅದನ್ನು ಓದಿ ಮುಗಿಸಿದ ಮೇಲೆ ಆ ಲೇಖಕನೊಡನೆ ಆ ಕೂಡಲೆ ಮಾತನಾಡಬೇಕು ಎಂದು ಬಲವಾಗಿ ಅನ್ನಿಸಿಬಿಟ್ಟಿತು. ಅದಕ್ಕೆ ಮುಖ್ಯ ಕಾರಣ, "ಅರೆ, ನಾನು 'ನ್ಯಾಗಟಿ ಸಿಟಿ ಚಂದರ್' ಎಂದುಕೊಂಡಿದ್ದ ಈ ಲೇಖಕ ನಿಜವಾಗಲೂ ನಾಗತಿಹಳ್ಳಿಯಾತ," ಎನ್ನಿಸಿದ್ದು. ಹೌದು, ಆ "ವಲಸೆ ಹಕ್ಕಿಯ ಹಾಡು"ವಿನ ಕರ್ತೃ, ನಾಗತಿಹಳ್ಳಿ ಚಂದ್ರಶೇಖರ್. ಆದರೆ, ಅಂದು ನಾಗತಿಹಳ್ಳಿಯವರ ಜೊತೆ ಮಾತನಾಡಲಾಗಲಿಲ್ಲ. ಬಹುಶಃ ಅದಾದ ಒಂದೆರಡು ತಿಂಗಳಿಗೆ ಅವರ "ಅಮೃತಧಾರೆ" ಸಿನಿಮಾ ಬಿಡುಗಡೆಯಾಯಿತು. ಅದು ಸಿಲಿಕಾನ್ ಕಣಿವೆಯ ಸ್ಯಾನ್ ಹೋಸೆಯಲ್ಲಿ ಬಿಡುಗಡೆಯಾಗುವಷ್ಟರಲ್ಲಿ ಕನ್ನಡದ ದಿನಪತ್ರಿಕೆಗಳಲ್ಲಿ ಅದರ ವಿಮರ್ಶೆಗಳು ಬಂದುಬಿಟ್ಟಿದ್ದವು. ಬಹುತೇಕ ವಿಮರ್ಶೆಗಳು ಅದನ್ನು ಅತ್ಯದ್ಭುತ ಚಿತ್ರ, ಮಹೋನ್ನತ ಚಿತ್ರ ಎಂದೆಲ್ಲ ಬಣ್ಣಿಸಿದ್ದ ನೆನಪು. ಅಷ್ಟೊತ್ತಿಗೆ ನನಗೆ ಕನ್ನಡ ಚಿತ್ರವಿಮರ್ಶೆಗಳ "ತಲೆಹಿಡುಕತನ"ದ ಪರಿಚಯ ಆಗಿತ್ತು. ದಟ್ಟದರಿದ್ರ ಸಿನಿಮಾದ ಪುಟಗೋಸಿ ಡೈಲಾಗ್‌ಗಳಿಗೆಲ್ಲ ಆಧ್ಯಾತ್ಮ, ನೈತಿಕತೆ, ಆದರ್ಶ ಮುಂತಾದ ಸಾರ್ವಕಾಲಿಕ ಗುಣಗಳನ್ನು ಆರೋಪಿಸಿ, ರಂಗುರಂಗಾಗಿ ಬರೆದು "ಪೇಯ್ಡ್" ಜಾಹಿರಾತನ್ನು ಚಿತ್ರವಿಮರ್ಶೆಯ ಹೆಸರಿನಲ್ಲಿ ಪ್ರಕಟಿಸುವುದನ್ನು ನೋಡಿದ್ದ ನನಗೆ "ಅಮೃತಧಾರೆ"ಯ ಬಗೆಗೂ ಸ್ವಲ್ಪ ಸಂದೇಹವಿತ್ತು. ಆದರೆ, ಯಾವಾಗ ನಾಗತಿಹಳ್ಳಿಯವರು, "ಈ ಚಿತ್ರಕ್ಕಾಗಿ ನನ್ನ ಪ್ರತಿಭೆಯನ್ನೆಲ್ಲ ಬಸಿದಿದ್ದೇನೆ," ಎನ್ನುವಂತಹ ಮಾತನ್ನು ಆಡಿದರೊ, ಈ ಚಿತ್ರವನ್ನು ನೋಡಲು ನಿಜಕ್ಕೂ ಎದುರು ನೋಡುತ್ತಿದ್ದೆ. ಅದೊಂದು ನಿಜಕ್ಕೂ ಮೀಡಿಯೋಕರ್ ಚಿತ್ರ. ಅಂತಃಸ್ಸತ್ವವಿಲ್ಲದ, ಅವಾಸ್ತವ ಡೈಲಾಗ್‌ಗಳ, ಪರಕೀಯ, ನಾಟಕೀಯ ಚಿತ್ರ. ಅಮಿತಾಬ್ ಬಚ್ಚನ್, ರಮ್ಯ, ಧ್ಯಾನ್‍ಗಳಿರುವ ದೃಶ್ಯವಂತೂ ಅಪ್ಪಟ Con Job. ಅಮಿತಾಬ್ ಕೈಯ್ಯಲ್ಲಿ ಒಂದು ಡೈಲಾಗ್ ಹೊಡೆಸಿ, ಅವರಿಲ್ಲದ ಸಮಯದಲ್ಲಿ ಮೇಲೆ ನೋಡಿಕೊಂಡು ರಮ್ಯ ಮಾತನಾಡುವುದನ್ನು ಅಮಿತಾಬ್‌ರೊಡನೆ ರಮ್ಯ ಸಂಭಾಷಿಸುತ್ತಿರುವ ದೃಶ್ಯ ಎನ್ನುವಂತೆ ಚಿತ್ರೀಕರಿಸಿ, ಅದನ್ನೆಲ್ಲ ಅಮೆಚೂರಿಷ್ ಆಗಿ ತೋರಿಸಿ, "ಅಮಿತಾಬ್ ನಟಿಸಿದ ಕನ್ನಡದ ಅತ್ಯಮೋಘ ಚಿತ್ರ, ನನ್ನ ಪ್ರತಿಭೆಯನ್ನೆಲ್ಲ ಬಳಸಿ ತೆಗೆದ ಚಿತ್ರ," ಎಂದೆಲ್ಲ ಹೇಳಿಕೊಂಡ ಆ ಚಿತ್ರವನ್ನು ನೋಡಿ ನನಗಂತೂ, "ಇಲ್ಲ, ಕಳೆದ ಹತ್ತುಹದಿನೈದು ವರ್ಷದಲ್ಲಿ ಇವರು ನಿಜಕ್ಕೂ ಕಳೆದು ಹೋಗಿದ್ದಾರೆ, ಇವರು ನಾಗತಿಹಳ್ಳಿ ಚಂದ್ರಶೇಖರ ಅಲ್ಲ, ಅವರೀಗ ನ್ಯಾಗಟಿ ಸಿಟಿ ಚಂದರ್ ಎಂಬ ಪರಕೀಯ," ಎನ್ನಿಸಿಬಿಟ್ಟಿತು. ಇದಾದ ಮೂರ್ನಾಲ್ಕು ತಿಂಗಳಿಗೆಲ್ಲ ಸ್ವತಃ ನಾಗತಿಹಳ್ಳಿಯವರೆ ನನ್ನ ಅನಿಸಿಕೆಗೆ ಅಂತಿಮ ಮೊಳೆ ಹೊಡೆದುಬಿಟ್ಟರು. ಹೇಗೆಂದರೆ, "ನನ್ನ ಜೀವನದ ಆಶೆಗಳಲ್ಲಿ ಒಂದಾದ ಮರ್ಸಿಡಿಸ್-ಬೆನ್ಜ್ ಅನ್ನು ಕೊಂಡುಕೊಂಡಿದ್ದೇನೆ. ಎಷ್ಟೆಷ್ಟೊ ಕಷ್ಟ ಪಟ್ಟೆ, ಈಗಲೂ ಕಾಲ ಹಾಗೆ ಇದೆಯ?" ಎನ್ನುವಂತಹ ತಮ್ಮ ಬಡತನದ, ಕಷ್ಟಕಾಲದ ದಿನಗಳನ್ನು ವೈಭವೀಕರಿಸಿಕೊಂಡ, ಮತ್ತು ಈಗಿನ ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವ ಕೀಳರಿಮೆ ಎನ್ನಬಹುದಾದ ಮಾತುಗಳನ್ನು ಸಾರ್ವಜನಿಕವಾಗಿ ಪತ್ರಿಕೆಗಳಲ್ಲಿ ಹೇಳಿಕೊಳ್ಳುವ ಮೂಲಕ. ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೆ ಇಲ್ಲಿ ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿಯೂ ನಾಗತಿಹಳ್ಳಿಯವರ ಇತ್ತೀಚಿನ ಚಿತ್ರ "ಮಾತಾಡ್ ಮಾತಾಡು ಮಲ್ಲಿಗೆ" ಬಿಡುಗಡೆಯಾಗಿದೆ. ಇಲ್ಲಿ ಯಾವುದೆ ಕನ್ನಡ ಚಿತ್ರ ಬಂದರೂ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕೆಂಬ ಒಂದೇ ಕಾರಣಕ್ಕೆ ಎಲ್ಲಾ ಸಿನಿಮಾಗಳನ್ನು ನೋಡಲು ಪ್ರಯತ್ನಿಸುವ ನಾನು ಇದನ್ನು ತಪ್ಪಿಸಿಕೊಳ್ಳುವ ಹಾಗೆಯೆ ಇರಲಿಲ್ಲ. ಸಿನಿಮಾಗೆ ಹೋಗುವ ಮುನ್ನ ಭಾನುವಾರದ ಕನ್ನಡ ದಿನಪತ್ರಿಕೆಗಳ ವಿಮರ್ಶೆಯನ್ನು ಓದಿದ್ದೆ. ಪ್ರಜಾವಾಣಿಯಲ್ಲಿ ಸ್ನೇಹಿತ ಚ.ಹ. ರಘುನಾಥ ಚಿತ್ರವಿಮರ್ಶೆ ಮಾಡಿದ್ದರು. ಬೇರೆ ಕೆಲವು ಪತ್ರಿಕೆಗಳ ಚಿತ್ರವಿಮರ್ಶಕರ ರೀತಿಯ ಓದುಗರಿಗೆ ತಲೆಹಿಡಿಯುವ ಬರಹವಲ್ಲ ಇವರದು. "ಜಾಗತೀಕರಣವನ್ನು ವ್ಯಾಖ್ಯಾನಿಸಲು ನಾಗತಿಹಳ್ಳಿ ಚಿಟ್ಟೆಯ ರೂಪಕವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಆದರೆ ಚಿತ್ರಕ್ಕೆ ಸಂಬಂಧಿಸಿದಂತೆ ಅವರ ಸೃಜನಶೀಲತೆ ಈ ರೂಪಕಕ್ಕಷ್ಟೆ ಮೀಸಲಾದಂತಿದೆ. ಉಳಿದಂತೆ, ಮಲ್ಲಿಗೆ ಅರಳುವ ಮೌನದಲ್ಲಿ ನೋಡುಗನ ಕಾಡಬೇಕಿದ್ದ ವಾಸ್ತವ ಜಗತ್ತಿನ ಆತಂಕಗಳು ಭಾವುಕತೆಯ ಆರ್ಭಟದಲ್ಲಿ ಕೊನೆಗೊಳ್ಳುತ್ತವೆ." ಎಂದಿದ್ದರು ರಘುನಾಥ. ಒಟ್ಟಿನಲ್ಲಿ, ಉತ್ತಮ ಅಭಿನಯದ, ಚಂದ್ರೇಗೌಡರ ಕಟ್ಟೆಪುರಾಣದ ಪಾತ್ರಗಳಿರುವ, ಮಲ್ಲಿಗೆ ಅರಳುವಷ್ಟು ಸಹಜವಾಗಿಲ್ಲದ ಚಿತ್ರ ಎಂದಿದ್ದರೂ, ಎಲ್ಲಿಯೂ ಕೆಟ್ಟ ಚಿತ್ರ ಎಂದಾಗಲಿ, ಮಹೋನ್ನತ ದೃಶ್ಯಕಾವ್ಯ ಎಂಬಂತಹ ಅತ್ಯುಗ್ರ ಗುಣವಿಶೇಷಣಗಳಾಗಲಿ ಇರಲಿಲ್ಲ. ಊರೆಲ್ಲ ನಾಗಮಂಗಲದ ಭಾಷೆ ಮಾತನಾಡುತ್ತ ದಕ್ಷಿಣ ಕರ್ನಾಟಕದ ಕಡೆಯವರಂತೆ ಪಂಚೆ ಉಟ್ಟ ರೈತರಿದ್ದರೆ ನಾಯಕ ಮಾತ್ರ ಕಚ್ಚೆ ಉಟ್ಟ, ದಿನವೂ ಬಣ್ಣಬಣ್ಣದ ರುಮಾಲು ತೊಟ್ಟ, ಕೆಂಚುಗಡ್ಡದ, ಕೆಸರೆ ಅಂಟಿರದ ಕೋಮಲ ಕೈಗಳ, ಫ್ಯಾsಬ್‌ಇಂಡಿಯಾದ ಜುಬ್ಬಾಗಳ ರೂಪದರ್ಶಿ!! ಗ್ರಾಮ್ಯ ಕನ್ನಡ ಮಾತನಾಡುವ, ಅಷ್ಟೇನೂ ಹೊರಗಿನ ಪ್ರಪಂಚದ ಪರಿಚಯವಿಲ್ಲದ ಆತನ ಹೆಂಡತಿ ಗಂಡನಿಗೆ ಧೈರ್ಯ ತುಂಬಲು ಮೂರ್ನಾಲ್ಕು ಸಲ ಪಾಶ್ಚಿಮಾತ್ಯ ಜೆಷ್ಚರ್ ಆದ ಥಂಬ್ಸ್ ಅಪ್ ಮಾಡುತ್ತಾಳೆ!!! ಗ್ರಾಫಿಕ್ ಮಳೆ ಸುರಿಯುತ್ತದೆ; ಯಾರೂ ನೆನೆಯುವುದಿಲ್ಲ. ನಿರ್ಜೀವ ಗ್ರಾಫಿಕ್ಸ್ ಚಿಟ್ಟೆಗಳು ಹಾರಾಡುತ್ತವೆ. ಇನ್ನೂ ಹಲವು ಓರೆಕೋರೆಗಳು... ಆದರೆ ಇವು ಯಾವುವೂ ನಮ್ಮ ನ್ಯಾಗಟಿ ಸಿಟಿ "ಮಾತಾಡ್ ಮಾತಾಡು ಮಲ್ಲಿಗೆ"ಯಿಂದ ಮತ್ತೆ ನಾಗತಿಹಳ್ಳಿಯತ್ತ ಮುಖ ಮಾಡಿದ್ದಾರೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ. ಚಂದ್ರೇಗೌಡರ ಕಟ್ಟೆಪುರಾಣದ ಪಾತ್ರಗಳನ್ನು ಚಿತ್ರದಲ್ಲಿ ಬಳಸಿರುವ ದೃಷ್ಟಿಯಾಗಲಿ, ತೆಗೆದುಕೊಂಡಿರುವ ರೈತರ ಜಮೀನು ಸ್ವಾಧೀನದ ವಿಷಯವಾಗಲಿ, ಅಲ್ಲಲ್ಲಿ ಬರುವ ಸಮಕಾಲೀನ ವಿಷಯಗಳ ಬಗೆಗಿನ ಸಮಾಜಚಿಂತಕನ ಕಾಮೆಂಟ್‌ಗಳಾಗಲಿ, ರೂಪಕಗಳನ್ನು ಬಳಸುವ ರೀತಿಯಾಗಲಿ, ಸಮಕಾಲೀನ ಕನ್ನಡ ಚಿತ್ರಜಗತ್ತಿನಲ್ಲಿ ಕೇವಲ ಸೂಕ್ಷ್ಮ ಬರಹಗಾರ ನಾಗತಿಹಳ್ಳಿ ಮಾತ್ರ ಮಾಡಬಲ್ಲರು. ಅಮೇರಿಕ-ಅಮೇರಿಕದ ತರುವಾಯ ಮಾತೆತ್ತಿದರೆ ಶ್ರೀಮಂತ ಎನ್ನಾರೈ ಸ್ನೇಹಿತರ ಬಗ್ಗೆ ಮಾತನಾಡುವ, ಮರ್ಸಿಡಿಸ್ ಕೊಂಡದ್ದನ್ನು ಊರಿಗೆಲ್ಲ ಹೇಳಿಕೊಂಡು ಬರುವ, ಅವಾಸ್ತವಿಕ ಚಿತ್ರಗಳನ್ನು ಕೊಡುತ್ತ ಬಂದ, ಕೀಳರಿಮೆಯ ನಿರ್ದೇಶಕರ ತರಹವೆ ಮಾತೆತ್ತಿದರೆ ಹಾಡುಗಳಲ್ಲಿ ಫಾರಿನ್‍ಗೆ ಜಂಪ್ ಮಾಡುತ್ತಿದ್ದ ನಾಗತಿಹಳ್ಳಿಯವರು ಈ ಚಿತ್ರದಲ್ಲಿ ಮತ್ತೆ ಮಣ್ಣಿಗೆ ಮರಳುವ ಪ್ರಯತ್ನ ಮಾಡಿದ್ದಾರೆ. ಮಣ್ಣಿನ ಮಗನೇ ಆದ ನಾಗತಿಹಳ್ಳಿಯವರು ವರ್ತಮಾನದಲ್ಲಿ ಸಲ್ಲಬೇಕು ಎನ್ನುವ ಕೀರ್ತಿ-ಐಶ್ವರ್ಯಗಳ ಮಹಾನ್ ಆಮಿಷವನ್ನು ಈಗಲಾದರೂ ಮೀರಬೇಕಿದೆ. ಎಂದಿಗೂ ಸಲ್ಲುವ ಪ್ರತಿಭೆ ಇರುವ ನಾಗತಿಹಳ್ಳಿಯವರು ಒಮ್ಮೆ ತಾವೇ ಬರೆದ (ಇತ್ತೀಚಿನ ಪ್ರೇಮಪತ್ರಗಳಲ್ಲ!) ಪುಟ್ಟಕ್ಕನ ಮೆಡಿಕಲ್ ಕಾಲೇಜು, ವಲಸೆ ಹಕ್ಕಿಯ ಹಾಡುಗಳನ್ನು ಓದಿ, ತಮ್ಮನ್ನೆ ತಾವು ಪುನರ್‌ಶೋಧಿಸಿಕೊಳ್ಳಬೇಕಿದೆ. ಸಾಮಾಜಿಕ ಕಾಳಜಿಯುಳ್ಳ ನಾಗತಿಹಳ್ಳಿಯವರು ಸಹವಾಸ ದೋಷದಿಂದ ಕೆಡದಿದ್ದರೆ, ತಮ್ಮ ಶ್ರೀಮಂತಿಕೆಯ ಈ ಕಾಲದಲ್ಲಿ ತಾವು ಮಾಡುವ ಪ್ರತಿ ಸಿನಿಮಾವೂ ಕೋಟ್ಯಾಂತರ ರೂಗಳ ಬಜೆಟ್‌ದೇ ಆಗಿರಬೇಕು ಮತ್ತು ಅದು ಕಮರ್ಷಿಯಲ್ ಆಗಿ ಗೆಲ್ಲಲೇ ಬೇಕು ಎನ್ನುವ ಹಠ ಇಟ್ಟುಕೊಳ್ಳದಿದ್ದರೆ, ಅವರಿಗೇ ಆದ ಒಂದು ಸಾಂಸ್ಕೃತಿಕ ನಾಯಕತ್ವ ಕರ್ನಾಟಕದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಅಂಬರೀಷೋತ್ತರ ಮಂಡ್ಯ ರಾಜಕೀಯದಲ್ಲಿ ರಾಜಕೀಯ ನಾಯಕತ್ವವೂ ಸಾಧ್ಯವಾಗಬಹುದು. ಆದರೆ ಇದಕ್ಕೆಲ್ಲ ನಾಗತಿಹಳ್ಳಿಯತ್ತ ಮುಖ ಮಾಡಿರುವ ಅವರು ಊರನ್ನು ಮುಟ್ಟಬೇಕಿದೆ. ಇಲ್ಲದಿದ್ದರೆ, ಐದತ್ತು ವರ್ಷಗಳ ನಂತರ ತಮ್ಮ ಶ್ರೀಮಂತ ಬಂಗಲೆಯಲ್ಲಿ, ರೋಲ್ಸ್‌ರಾಯ್ಸ್‍ನಲ್ಲಿ ಜೀವನ ಕಳೆಯುವ ವೇಸ್ಟೆಡ್ ಪ್ರತಿಭೆ ಅವರದಾಗುವ ಅಪಾಯ ಇದೆ. ಇದೇ ಸಮಯದಲ್ಲಿ, ಯಾಕೋ ನಾಗತಿಹಳ್ಳಿಯವರ ಇತ್ತೀಚಿನ ಮಹಾಕಾವ್ಯವನ್ನು ನೋಡಿ ಕಣ್ಣಲ್ಲಿ ನೀರು ಸುರಿಸಿದವರಾಗಲಿ, ಭಾವೋದ್ವೇಗಕ್ಕೆ ಒಳಗಾಗಿ ಅವರನ್ನು ತಬ್ಬಿಕೊಂಡು, ಅದನ್ನೆಲ್ಲ ಬರೆದವರಾಗಲಿ ಕಾಣಲಿಲ್ಲ!!! ಮುಂದಿನ ಒಂದೆರಡು ವಾರಗಳಲ್ಲಿ ಆಗಬಹುದು; ಆಗದೆಯೂ ಇರಬಹುದು. ಆದರೆ, ಒಳ್ಳೆಯ ಚಿತ್ರ ಮತ್ತು ಅದರ ಕಮರ್ಷಿಯಲ್ ಸಕ್ಸೆಸ್ ಈ ಎಲ್ಲಾ ತಂತ್ರ, ಗುಂಪುಗಾರಿಕೆ, ಸ್ವಜನಪಕ್ಷಪಾತಗಳನ್ನು ಮೀರಿದ್ದು. ನಾಗತಿಹಳ್ಳಿಯತ್ತ ಮುಖ ಮಾಡಿರುವ ಒಂದು ಕಾಲದ ಪರಿಸರವಾದಿ, ಶಿವರಾಮ ಕಾರಂತರ ಚುನಾವಣೆಯಲ್ಲಿ ಮಹಾನ್ ಆಶಾವಾದದಿಂದ ಓಡಾಡಿದ ಯುವಕ ಚಂದ್ರಶೇಖರರಿಗೆ ಇವನ್ನು ಯಾರೇನೂ ಹೇಳಬೇಕಾಗಿಲ್ಲ. ಅನ್‍ಲೆಸ್, ಅವರೇ ಪ್ರಜ್ಞಾಪೂರ್ವಕವಾಗಿ ಮರೆತಿದ್ದರೆ ಮತ್ತು ಅದನ್ನು ಅವರ ನೈಜ ಹಿತೈಷಿಗಳು ಒತ್ತಿ ಹೇಳದೇ ಹೋಗಿಬಿಟ್ಟಿದ್ದರೆ... "ವಲಸೆ ಹಕ್ಕಿಯ ಹಾಡು"ವಿನ ಮುನ್ನುಡಿಯಲ್ಲಿ ನಾಗತಿಹಳ್ಳಿ ಹೀಗೆ ಬರೆಯುತ್ತಾರೆ: "ಈ ದೇಶದ ದುರಂತವೆಂದರೆ ವ್ಯಕ್ತಿಯ ಎಲ್ಲ ಶಕ್ತಿ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳದೆ-ಅರ್ಥ ಮಾಡಿಕೊಳ್ಳುವುದಿರಲಿ ಅವನ ಕ್ರಿಯಾಶೀಲತೆಯ ಬೇರನ್ನೆ ಕಿತ್ತುಹಾಕಿ-ನಿಷ್ಕ್ರಿಯಗೊಳಿಸಿ ಅವನನ್ನು ಜಡಗೊಂಡ ನಿರುಪಯುಕ್ತ ಮನುಷ್ಯನನ್ನಾಗಿಸುವುದು. ಯಾವ ವ್ಯವಸ್ಥೆ ಮನುಷ್ಯನಿಗೆ ಅನಂತ ಸಾಧ್ಯತೆಗಳ ದ್ವಾರವನ್ನು ತೆರೆಯುವುದಿಲ್ಲವೋ ಅಲ್ಲಿ ವ್ಯಕ್ತಿ ಸಿನಿಕನೂ, ಸೋಮಾರಿಯೂ ಹೊಣೆಗೇಡಿಯೂ ಆಗುತ್ತಾನೆ." ಕನ್ನಡದ ಒಂದು ಮಣ್ಣಿನ ಪ್ರತಿಭೆ ವರ್ತಮಾನದ ಲೌಕಿಕದಲ್ಲಿ ಸಲ್ಲಬೇಕು ಎನ್ನುವ ಹಠದಲ್ಲಿ ತನ್ನನ್ನೆ ತಾನು ಅರ್ಥಮಾಡಿಕೊಳ್ಳದೆ, ಈ ಅನಂತ ಸಾಧ್ಯತೆಗಳ ಸಮಯದಲ್ಲಿ ತನ್ನ ಕ್ರಿಯಾಶಕ್ತಿಯನ್ನು ಗೌಣವಾಗಿ ನೋಡುತ್ತಿದೆ ಎನ್ನಿಸಿದ್ದರಿಂದ ಇಷ್ಟೆಲ್ಲ ಹೇಳಬೇಕಾಯಿತು. (ವಿಕ್ರಾಂತ ಕರ್ನಾಟಕ - ಸೆಪ್ಟೆಂಬರ್ 7, 2007 ರ ಸಂಚಿಕೆಯಲ್ಲಿನ ಬರಹ)
ಲೇಖನದ ವಿಡಿಯೊ ಪ್ರಸ್ತುತಿ: http://www.youtube.c...
No votes yet
1789 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mahesha's picture
30
Aug
2007
8:05

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ಕೆಲವು ಮಾತು ನನಗೆ ಅರಿತವಾಗಿಲ್ಲ. ಆದ್ರೂ ಒಂತರ ಚನ್ನಾಗಿದೆ. "ಅಂಬರೀಷೋತ್ತರ ಮಂಡ್ಯ ರಾಜಕೀಯದಲ್ಲಿ ರಾಜಕೀಯ ನಾಯಕತ್ವವೂ ಸಾಧ್ಯವಾಗಬಹುದು" ಸಾರ್‍.. ನಾಗತಿಹಳ್ಳೀ ಹಾಸನ ಚನ್ನರಾಯಪಟ್ಟಣದಲ್ಲಿ ಇರೋದು, ಅಲ್ವಾ!! ಮಂಡ್ಯದವರು ಹಾಸನವರನ್ನ ಯಾಕೆ ಗೆಲ್ಲಿಸ್ತಾರೆ? ಅಂಬರೀಶ್ ಮಂಡ್ಯದೊರು, ಅದಕ್ಕೆ ಗೆದ್ದಿದ್ದು. ಅದು ಇನ್ನು ಮುಂದೆ ಲೋಕಸಭೆಗೆ ನಿಲ್ಲಲ್ವಂತೆ. ಮಂಡ್ಯದಲ್ಲಿ ಮುಂದಾಳು ಈಗಾಲೇ ಒಬ್ಬ ಸಚಿವರು ತಯಾರಾಗಿ ಇದ್ದಾರಲ್ಲ. ಇನ್ನು ಮಂಡ್ಯದಿಂದ ನಿಲ್ಲಕ್ಕೆ ಸಿನಿದೊರು ಬೇಕಾಷ್ಟ ಮಂದಿ ಇದ್ದಾರೆ, ರಮ್ಯ, ಜೋಗಿ ಪ್ರೇಮ್, ದರ್ಶನ್ ಮುಂತಾದವರು!! ನಾನು ವಿಕ್ರಾಂತ ಕರ್ನಾಟಕ ಓದಿಲ್ಲ. ಇಂಟರ್ನೆಟಲ್ಲಿ ಅದರ URL ಕೊಡಿರಿ.
Vasanth Kaje's picture
31
Aug
2007
1:41

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ನಾಗತಿಹಳ್ಳಿ ಚಂದ್ರಶೇಖರರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಮಾತುಗಳನ್ನೇ ನೀವು ಬರೆದಂತನ್ನಿಸಿತು. ಅವರ ’ಅಮೃತಧಾರೆ’ ಯ ಬಗ್ಗೆ ವಿ.ಕ ದ ವಿಶ್ವೇಶ್ವರ ಭಟ್ಟರು ವಾಚಾಮಗೋಚರವಾಗಿ(!) ಹೊಗಳಿ ಬರೆದುದನ್ನು ನೋಡಿ ಭಟ್ಟರ ಬಗ್ಗೆ ಗೌರವ ಇಟ್ಟುಕೊಂಡಿರುವ ನನಗೆ ’ಈ ಅಸಾಮಿ ಬರೆದದ್ದನ್ನೆಲ್ಲ ನಂಬುವಂತಿಲ್ಲ’ ಎಂದು ಅರಿವಾಯಿತು. ನಾಗತಿ ಇತ್ತೀಚೆಗೆ ಒಂದು ದೈನಿಕ ಧಾರಾವಾಹಿ ಸುರುಮಾಡಿದ್ದರು. ಅದು ಕೆಲವು ತಿಂಗಳುಗಳೊಳಗೆ ತೀರಿಹೋಯಿತು ! ವಸಂತ್ ಕಜೆ
kpbolumbu's picture
03
Sep
2007
2:27

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ವಿಶ್ವೇಶ್ವರ ಭಟ್ಟರು ಬರೆದದ್ದನ್ನು ಓದಿದಾಗ ನನಗೆ ಹಾಗನ್ನಿಸಲಿಲ್ಲ. ______________________________ ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ! ಕೃಷ್ಣ ಪ್ರಕಾಶ ಬೊಳುಂಬು
Vasanth Kaje's picture
03
Sep
2007
3:57

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... kpboLumbu ಅವರೇ, ನಾನು ಹೇಳಿದ್ದು ’ಅಮೃತ ಧಾರೆ’ ಯ ಬಗ್ಗೆ. ನೀವು ಬರೆದಿರುವುದು ’ಮಲ್ಲಿಗೆ’ ಯ ಬಗ್ಗೆ... ವಸಂತ್ ಕಜೆ
ಶಿವ's picture
03
Sep
2007
3:21

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ನಾಗತಿಹಳ್ಳಿಯ ಸಿನೆಮಾದ ಕತೆ,ಪಾತ್ರಗಳು ಹಳ್ಳಿ ಕಡೇ ಹೋಗಿವೆ.ಆದರೆ ಅವರು ಹೋದ ಹಾಗೆ ಕಾಣಿಸುವುದಿಲ್ಲ.ದಿನಪತ್ರಿಕೆಯನ್ನು ಓದಿಕೊಂಡು, ತಮ್ಮ ಡ್ರಾಯಿಂಗ್ ರೂಮ್‍ನಲ್ಲಿ ಕೂತು ಬರೆದ ಹಾಗಿದೆ ಚಿತ್ರಕತೆ.
roshan_netla's picture
04
Sep
2007
10:42

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ಅವರು ಹಳ್ಳಿಗೆ ಹೊಗಬೇಕೊ? ಹಾಗಾದರೆ ಈ ಲೆಖನ ಬರೆದಿರುವವರು ಯೆಲ್ಲಿ ಕೂತು ಬರೆದಿರುವುದು? ಅವರಿಗೆ ಬೆಳೆಯುವ ಆಸೆ ಇದೆ ಅದು ತಪಲ್ಲ ಅಲ್ವೆ, ಕಾರು ತೆಗೆದು ಕೊಳುವ ಕನಸು ನನಸಾಗಿರುವುದನ್ನು ಹೆಳಿದರೆ ಆತ ಅಹಂಕಾರಿ ಆಗುತ್ತಾನೆಯೆ?
kpbolumbu's picture
04
Sep
2007
1:14

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ವಿಶ್ವೇಶ್ವರ ಭಟ್ಟರು ಬರೆಯುವುದನ್ನು ನಾನು ಪ್ರತಿವಾರ ಓದುತ್ತೇನೆ. ತಾನೇ ರಚಿಸಿದ ಹಾಡನ್ನು ಒಳಗೊ೦ಡಿದ್ದ ಚಿತ್ರದ ಬಿಡುಗಡೆಯನ್ನೂ ಅವರು ವೈಭವೀಕರಿಸಲಿಲ್ಲ. ಎಲ್ಲ ಪತ್ರಿಕೆಗಳಲ್ಲಿ ಬ೦ದ೦ತೆಯೇ ಸುದ್ದಿಗಳು ಪ್ರಕಟವಾದುವು. 'ನಿನದೇ ನೆನಪು' ಚಿತ್ರಕ್ಕೆ ಸ೦ಬ೦ಧಿಸಿದ೦ತೆ ಒ೦ದನ್ನು ನೆನಪಿಸಿಕೊಳ್ಳಬಹುದು. ಈ ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರ೦ಭದಲ್ಲಿ ಕಿರಣ್ ಹೇಳಿದುದನ್ನು ವಿಜಯ ಕರ್ನಾಟಕದಲ್ಲಿ ವಿವಾದವಾಗಿಸಲಿಲ್ಲ. ಆದರೆ ಇನ್ನೊ೦ದು ಸಮಾರ೦ಭದಲ್ಲಿ ನಡೆದ ಡಾ|ನಾಗೇಶ್ ಅಧ್ಯಾಯವು ವಿಜಯ ಕರ್ನಾಟಕದಲ್ಲಿ ವಸ್ತುನಿಷ್ಠವಾಗಿ ವರದಿಯಾಗಿತ್ತು.ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆ೦ಬ೦ತೆ ಇತ್ತೀಚೆಗೆ ವಿಶ್ವೇಶ್ವರ ಭಟ್ಟರನ್ನು ಹಲವರು ಬೇರೆಯಾಗಿ ನೋಡುತ್ತಿದ್ದಾರೆ. ಕನ್ನಡ ಚಿತ್ರವಿಮರ್ಶೆಗಳ "ತಲೆಹಿಡುಕತನ"ದ ಬಗ್ಗೆ comments ಬಂದಾಗ ವಿಜಯ ಕರ್ನಾಟಕದ ಬಗ್ಗೆ ಬರೆಯುವುದು ನನ್ನ ದೃಷ್ಟಿಯಿ೦ದ(ಸ೦ಕುಚಿತ-ಹಾಗೆ೦ದುಕೊಳ್ಳಬಹುದು) ಸರಿಯೆನಿಸದು.ವಿಜಯ ಕರ್ನಾಟಕದಲ್ಲಿ ರಜನಿಕಾ೦ತ್ ಬಗ್ಗೆ ಲೇಖನ ಪ್ರಕಟವಾಗಿದ್ದರಿ೦ದ 'ಶಿವಾಜಿ' ಚಿತ್ರ ಕರ್ನಾಟಕದಲ್ಲಿ ಗೆದ್ದದ್ದಲ್ಲ, ಅದಕ್ಕೆ ಅದರದ್ದೇ ಆದ sourceಗಳಿದ್ದುವು. ಇದರ ಉಲ್ಲೇಖ ಏಕೆ೦ದರೆ 'ಕನ್ನಡ ಪತ್ರಿಕೆಗಳು 'ಶಿವಾಜಿ' ಪರ ಪ್ರಚಾರ ನಡೆಸುತ್ತವೆ' ಎ೦ಬ ದೂರುಗಳು ವಿವಿಧ ನೆಟ್‍ಪತ್ರಿಕೆಗಳಲ್ಲಿ ಕ೦ಡುಬ೦ದಿದ್ದುವು.ರಜನಿಕಾ೦ತ್ ಬಗ್ಗೆ ಬರೆದದ್ದನ್ನು ಹೇಳುವುದಾದರೆ ಚೆನ್ನಾಗಿಯೇ ಬರೆದಿದ್ದಾರೆ. ರವಿ, "ದಟ್ಟದರಿದ್ರ ಸಿನಿಮಾದ ಪುಟಗೋಸಿ ಡೈಲಾಗ್‌ಗಳಿಗೆಲ್ಲ ಆಧ್ಯಾತ್ಮ, ನೈತಿಕತೆ, ಆದರ್ಶ ಮುಂತಾದ ಸಾರ್ವಕಾಲಿಕ ಗುಣಗಳನ್ನು ಆರೋಪಿಸಿ, ರಂಗುರಂಗಾಗಿ ಬರೆದು" ಎನ್ನುತ್ತೀರಿ. ಗುಣಗಳನ್ನು ಆರೋಪಿಸುವುದು ಎ೦ದರೇನು?ಯಾರೋ ಬರೆದರೆ೦ದು ನೀವೂ ಯಾಕೆ ಬರೆಯಬೇಕು? 'ಆರೋಪಣೆ' ನಿಷೇಧಾರ್ಥವನ್ನು ಸೂಚಿಸುತ್ತದೆ, ಅ೦ದರೆ positive ಆಗಿ ಬರೆಯಬೇಕಾದುದಲ್ಲ. ಚಿತ್ರವನ್ನು ವೈಭವೀಕರಿಸುವುದು ಕೂಡ ನಿಜ, ಅದೂ ನಡೆಯುತ್ತಿದೆ. ಸಾಹಿತಿಯಾದವನಿಗೂ ಪತ್ರಕರ್ತನಿಗೂ ಕೆಲವು ಸಾಮಾಜಿಕ ಜವಾಬ್ದಾರಿಗಳಿವೆ. ಅವುಗಳಲ್ಲಿ ಒ೦ದೆ೦ದರೆ ಸಾರ್ವಜನಿಕವಾಗಿ ಹೇಳಬೇಕಾದ ವಿಚಾರಗಳ ಬಗ್ಗೆ ಏಕನಿಷ್ಠೆಯಿರುವುದು. ಹಲವು ಸಾಹಿತಿಗಳ ವಿಚಾರದಲ್ಲಿ ಇದು ಹೀಗಲ್ಲ. ಉದಾಹರಣೆಯಾಗಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ 'ಕಾಸರಗೋಡು ಕನ್ನಡದ ನೆಲ, ಅದು ಕರ್ನಾಟಕಕ್ಕೆ ಸೇರಬೇಕು' ಎನ್ನುವುದು; ಹಿ೦ದಿನಿ೦ದ ಅದು ಕೇರಳದಲ್ಲಿ ಇದ್ದರೂ ಕನ್ನಡದ ಗುಣಗಳನ್ನು ಉಳಿಸಿಕೊಳ್ಳಬೇಕು, ಅವರಿಗೆ ಆ ಸಾಧ್ಯತೆಗಳಿವೆ, ಅದಲ್ಲದೆ ಕಾಸರಗೋಡು ಪುರಸಭೆಯಲ್ಲಿ ಕರ್ನಾಟಕಕ್ಕೆ ಸೇರಿಸುವ ಅರ್ಜಿ ಬ೦ದಾಗ ನಾವೂ ಅದನ್ನು ಬೆ೦ಬಲಿಸುವುದಲ್ಲ, ಎನ್ನುವುದು. ನನಗ೦ತೂ ಕರ್ನಾಟಕಕ್ಕೆ ಸೇರಬೇಕೆ೦ಬ ಮೋಹವಿಲ್ಲ. ಅದೊ೦ದು ಕಾಲವಿತ್ತು, 'ಕಾಸರಗೋಡು ಕನ್ನಡದ ನೆಲ' ಎ೦ದುಕೊ೦ಡು ಇತರರು ಹೇಳಿದುದನ್ನು ಮುಗ್ಧವಾಗಿ ನ೦ಬಿಕೊ೦ಡು ಬದುಕಿದ್ದ೦ತಹುದು. ಈಗ ನಾನು ಆ ಹ೦ತವನ್ನು ದಾಟಿ ಬ೦ದಾಗಿದೆ.ವಿಚಾರವೊ೦ದಕ್ಕೆ ಸ೦ಬ೦ಧಿಸಿ ಎರಡು ಅಭಿಪ್ರಾಯಗಳನ್ನು ಇಟ್ಟುಕೊ೦ಡು ಸಮಯ-ಸ೦ದರ್ಭಗಳಿಗೆ ತಕ್ಕ೦ತೆ ಜಾಣ್ಮೆಯಿ೦ದ ಮಾತನಾಡುವ ಇ೦ತಹ ಇಬ್ಬ೦ದಿತನವನ್ನು ವಿಶ್ವೇಶ್ವರ ಭಟ್ಟರು ಮಾಡುವುದಿಲ್ಲ.
Vasanth Kaje's picture
04
Sep
2007
1:42

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ಪ್ರತಿಯೊಬ್ಬನಿಗೂ ಚಿತ್ರವಿಮರ್ಶೆಯಲ್ಲಿ ತನ್ನದೇ ಆದ ವಿಮರ್ಶಾ ಮಟ್ಟಗಳಿರುತ್ತವೆ. ನಾನು ಹೆಚ್ಚು ವಾಸ್ತವಕ್ಕೆ ಹತ್ತಿರವಾದ ಚಿತ್ರಗಳನ್ನು ಇಷ್ಟಪಡುವವನು (ಉದಾ: ಚಾಂದಿನಿ ಬಾರ್ / ವಾಟರ್). ನನ್ನ ದೃಷ್ಟಿಕೋನದಿಂದ ನೋಡಿದಾಗ ನನಗೆ ನಾಗತಿಹಳ್ಳಿಯ ಚಿತ್ರಗಳು ಇಷ್ಟವಾಗುವುದಿಲ್ಲ. ನನಗೆ ಅವು ಸಾಮಾನ್ಯ ಕಮರ್ಷಿಯಲ್ ಚಿತ್ರಗಳಿಂದ ಬೇರೆಯಾಗಿ ಕಾಣುವುದಿಲ್ಲ. ನನಗೆ ಸಾಮಾನ್ಯವೆಂದೆನಿಸಿದ ಚಿತ್ರಗಳನ್ನು ಗುರುವಾರದ ಒಂದು ಅಂಕಣವನ್ನು ಮೀಸಲಿಟ್ಟು ಹೊಗಳಿದುದರಿಂದ ನನಗೆ ಭಟ್ಟರ ಚಿತ್ರ ವಿಮರ್ಶೆಯ ಬಗ್ಗೆ ಅಭಿಪ್ರಾಯ ಭೇದವಿದೆ ಎಂದಷ್ಟೇ ಹೇಳಲು ಬಯಸುತ್ತೇನೆ. ಆದರೆ ಅವರು ಅವರ ಅಭಿಪ್ರಾಯ ವ್ಯಕ್ತ ಪಡಿಸಲು ಸ್ವತಂತ್ರರು. ವಸಂತ್ ಕಜೆ
ವೈಭವ's picture
04
Sep
2007
2:19

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ವಸಂತ್, ಹಾಗೆಯೆ ನಿಮಗೆ ಕನ್ನಡದ್ದೇ ಆದ ಆಕ್ಸಿಡೆಂಟ್, ಮಿಂಚಿನ ಓಟ, ಬೆಂಕಿಯ ಬಲೆ, ಚಂದನದ ಗೊಂಬೆ, ಶರಪಂಜರ, ಗೆಜ್ಜೆಪೂಜೆ ...ಹೀಗೆ ಇನ್ನು ಹಲವು ಸಿನಿಮಾಗಳು ಕೂಡ ನೆನಪಿಗೆ ಬರಲಿ ಎಂದು ಹಾರಯ್ಸುತ್ತೇನೆ. :)
hpn's picture
04
Sep
2007
3:31

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... "ವಾಟರ್" ಚಿತ್ರ ನನಗೆ ಒಂದು ಚೂರೂ ಇಷ್ಟವಾಗ್ಲಿಲ್ಲ. ವಾಸ್ತವಕ್ಕೆ ಹತ್ತಿರ ಅಲ್ಲವೇ ಅಲ್ಲ ಅನ್ನಿಸ್ತು. ದೀಪಾ ಮೆಹ್ತಾ ಸ್ವಾತಂತ್ರ್ಯ ಪೂರ್ವ ಸೆಟ್ಟಿಂಗ್ ಇಟ್ಟುಕೊಂಡದ್ದು ಬಹುಶಃ ಅದಕ್ಕೇ ಇರಬಹುದು. ಕಳೆದ ಐವತ್ತು ವರ್ಷಗಳಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗಿವೆ, ಆದರೆ ಅದನ್ನು (ಪಬ್ಲಿಸಿಟಿ ಸಮಯದಲ್ಲಿ) ಭಾರತದ ಎಲ್ಲೆಡೆಯ ಈಗಿನ ಪರಿಸ್ಥಿತಿಯೆಂಬಂತೆ ಪಶ್ಚಿಮದ ದೇಶಗಳಿಗೆ ಬಿಂಬಿಸಿ ಆಸ್ಕರ್ ಮೆಟ್ಟಿಲು ಹತ್ತಿದ್ದು ನೋಡಿ ಸಿಟ್ಟು ಬಂತು. ಚಿತ್ರದ ಟೆಕ್ನಿಕಾಲಿಟಿಯೂ, ಸ್ಕ್ರಿಪ್ಟೂ ಗಲೀಜಾಗಿದ್ದವು. ಕನ್ನಡದಲ್ಲಿ "ದ್ವೀಪ" ನಿಜಜೀವನಕ್ಕೆ ಕನ್ನಡಿ ಹಿಡಿದಂತಿತ್ತು. ಹೆಚ್ಚಿನ ಡ್ರಾಮಾಟೈಸೇಶನ್ ಇರಲಿಲ್ಲ. -- ನನ್ನ ಬ್ಲಾಗ್: ಪರಿವೇಶಣ | PariveshaNa
ismail's picture
12
Sep
2007
9:52

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...

ಮಾತಾಡ್ ಮಾತಾಡ್ ಮಲ್ಲಿಗೆ ಒಂದು ಕೆಟ್ಟ ಸಿನಿಮಾ. ಇನ್ನೂ ಸ್ಪಷ್ಟ ಪಡಿಸಬೇಕೆಂದರೆ ಒಂದು ಕೆಟ್ಟ ಕಲಾಕೃತಿ. ಅದನ್ನು ಧೈರ್ಯವಾಗಿ ಹೇಳಬೇಕಷ್ಟೇ. ಕಲಾಕೃತಿಯಾಗಿ ಸೋತ ಒಂದು ಸಿನಿಮಾವನ್ನು ಸಮರ್ಥಿಸಿಕೊಳ್ಳಲು ಜಾಗತೀಕರಣ, ಬಹುರಾಷ್ಟ್ರೀಯ ಕಂಪೆನಿಗಳ ದಾಳಿ ಇತ್ಯಾದಿಗಳನ್ನೆಲ್ಲಾ ಎಳೆದುತರಬೇಕಷ್ಟೇ. ಬರೆಹಗಾರರಾಗಿ ಬದುಕಿನ ಸಂಕೀರ್ಣತೆಯನ್ನು ಕಟ್ಟಿಕೊಡಲು ಸಮರ್ಥರಾಗಿದ್ದ ನಾಗತಿಹಳ್ಳಿ ಸಿನಿಮಾ ಮಾಧ್ಯಮಕ್ಕೆ ಬಂದ ತಕ್ಷಣ ಗಾಂಧಿನಗರಿಗರಾಗುತ್ತಾರೆ. ಅವರ 'ಉಂಡೂ ಹೋದ ಕೊಂಡೂ ಹೋದ' ಚಿತ್ರದ ಮಟ್ಟಕ್ಕೆ ಉಳಿದ ಯಾವ ಚಿತ್ರಗಳೂ ಬರಲಿಲ್ಲವೇನೋ. ಮಾತಾಡ್ ಮಾತಾಡ್ ಮಲ್ಲಿಗೆಗಾಗಿ ಎರಡು ವರ್ಷಗಳ ಸಂಶೋಧನೆ ನಡೆಸಿದ್ದೇನೆಂದು ನಾಗತಿಹಳ್ಳಿ ಟಿ.ವಿ. ಸಂದರ್ಶನವೊಂದರಲ್ಲಿ ಹೇಳಿದ್ದರು. ಎರಡು ವರ್ಷದ ಸಂಶೋಧನೆ ವಿಷ್ಣುವರ್ಧನ್ ಬಾಯಲ್ಲಿ ಬರುವ ಅಂಕಿ-ಅಂಶಗಳಲ್ಲಿ ಮಾತ್ರ ಕಾಣಿಸುತ್ತದೆ. ಇಷ್ಟಕ್ಕಾಗಿ ಎರಡು ವರ್ಷಗಳ ಸಂಶೋಧನೆಯೇನೂ ಬೇಕಾಗಿರಲಿಲ್ಲ. ಒಂದು ಸಾರಿ ಗೂಗಲಿಸಿದ್ದರೆ ಅವರೆದುರು ಪ್ರತ್ಯಕ್ಷವಾಗುತ್ತಿತ್ತು. ಎರಡು ವರ್ಷಗಳ ಸಂಶೋಧನೆಯಲ್ಲಿ ಅವರಿಗೆ ದಕ್ಷಿಣ ಅಮೆರಿಕಾ, ಆಫ್ರಿಕಾದ ಸತ್ಯಗಳೆಲ್ಲಾ ತಿಳಿದವೇ ಹೊರತು ಕರ್ನಾಟಕದಲ್ಲೇ ವಿವಿಧ ಯೋಜನೆಗಳಿಗೆ ಬಲಿಯಾದವರ ಅಂಕಿ-ಅಂಶಗಳೂ ತಿಳಿಯಲಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನೆಲೆ ಕಳೆದುಕೊಂಡವರ ಸಂಖ್ಯೆ ಒಂದು ಲಕ್ಷ ಮೀರುತ್ತದೆ. ಇದು ಅಧಿಕೃತವಾಗಿಯೇ ನರ್ಮದಾ ಯೋಜನೆಗಿಂತ ಹೆಚ್ಚು ಮಂದಿಯ ನೆಲೆಯಲ್ಲಿ ಕಿತ್ತುಕೊಂಡ ಯೋಜನೆ!

ಇಸ್ಮಾಯಿಲ್ ನನ್ನ ಬ್ಲಾಗ್: http://ismail.in
mahesha's picture
13
Sep
2007
1:07

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... "ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನೆಲೆ ಕಳೆದುಕೊಂಡವರ ಸಂಖ್ಯೆ ಒಂದು ಲಕ್ಷ ಮೀರುತ್ತದೆ. ಇದು ಅಧಿಕೃತವಾಗಿಯೇ ನರ್ಮದಾ ಯೋಜನೆಗಿಂತ ಹೆಚ್ಚು ಮಂದಿಯ ನೆಲೆಯಲ್ಲಿ ಕಿತ್ತುಕೊಂಡ ಯೋಜನೆ!" ಇಸ್ಮಯ್ಲ್ .. ಸರಿಯಾಗಿ ಹೇಳಿದ್ರಿ.. ವಿಷ್ಣುವರ್ದನ ಉಡುಗೆ-ತೊಡುಗೆಗಳೂ ಹಿಂಗೆ ನಮ್ಮ ಹಳ್ಳೀಯನ್ನು ರಾಜಸ್ತಾನಿಗಳು ಆಳ್ತಾ ಇರೋ ಹಾಗೆ ತೋರಿಸ್ದಂತೆ ಇತ್ತು. ನಮ್ಮಂಗೆ ಈ ಸಿನಿಮದ ಉಡುಗೆ-ತೊಡುಗೆ ಒಂಚೂರು ಹಿಡಿಸಿಲ್ಲ, ಮನೆಗೆ ಬಂದು ತುಂಬ ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂದ್ರು. ಆದ್ರೆ ಒಂದು ಸರತಿ ಒಂದು ಬೇರೆ ತೆರ ಸಿನಿಮ ನೋಡಿ ಟೈಮ್ ಪಾಸ್ಗೆ ಯಾವ ಅಡ್ಡಿಯಿಲ್ಲ!!
ವೈಭವ's picture
13
Sep
2007
1:51

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... ಅಯ್ಯೋ ಬಿಡ್ರಿ. ತಮಿಳಿನ 'ಶಿವಾಜಿ', ಹಿಂದಿಯ 'ಪಾಟ್ನರ್' ಗಿಂತ ನೂರು ಪಟ್ಟು ಚನ್ನಾಗಿದೆ ಈ ಸಿನಿಮಾ(....ಮಲ್ಲಿಗೆ). ಅಂತ ಡಬ್ಬ ಸಿನಿಮಾಗಳನ್ನೇ ಅವರು ಮೆರೆಸುತ್ತಿರುವಾಗ ನಮ್ಮ ಒಳ್ಳೆ ಅಂಶಗಳನ್ನೊಳಗೊಂಡ ನಮ್ಮ(ಕನ್ನಡ) ಸಿನಿಮಾವನ್ನು ನಾವೇಕೆ ಮೆರೆಸಬಾರದು. ಇದೆ ಸಿನಿಮಾನ ಹಿಂದಿಲೋ, ತಮಿಳಲ್ಲೊ ಮಾಡಿದ್ದರೆ ನಮ್ಮ ಕನ್ನಡಿಗರೇ ಚನ್ನಾಗೈತೆ ಅಂತ ಮೆರೆಸುತ್ತಿದ್ದರು. :) ----- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
roshan_netla's picture
13
Sep
2007
3:46

ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... (ಕೆಲವೊಂದು ಅಪವಾದಗಳ ಹೊರತು) ಕನ್ನಡ ಸಿನೆಮಾಗಳಲ್ಲಿ ಜೀವಂತಿಕೆ ಕಮ್ಮಿ!! ಮಲಯಳಂ, ತಮಿಳು ಸಿನಮದವರುಅವರ ಸಿನಿಮಾಗಳಿಗೆ ಚೆನ್ನಾಗಿ ತಯಾರಿ ಮಾಡಿಕೊಳುತ್ತಾರೆ, ನಮ್ಮವರು ಮನೆಕೆಲಸ(home work) ಮಾಡಿಕೊಳೊದಿಲ್ಲ. ನಾಯಕ ನಟ ಹಳ್ಳಿ ಗೆಟಪನಲ್ಲಿ ಇಂಗ್ಲೆಂಡನ ಬೀದಿಯಲ್ಲಿ ಡುಯೆಟ್ ಹಾಡ್ತನೆ, ಇಸ್ತ್ರಿ ಹಾಕಿದ ಬಟ್ಟೆ ಇಲ್ಲದೆ ಆತ ಗದ್ದೆ ಕೆಲ್ಸಕ್ಕೆ ಕೂಡ ಹೊಗಲ್ಲ ಇಂತ ಸಾವಿರಾರು ಅಸಂಬದ್ದಗಳು.