ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ritershivaram ರವರ ಬ್ಲಾಗ್

ಜೀವನ-ಚೇತನ-2

July 2, 2007 - 12:28pm — ritershivaram

ನಮ್ಮ ದರ್ಶನೇಂದ್ರಿಯದ ಅನುಭವಗಳಲ್ಲಿ...

ಸಮುಊಹ ಸನ್ನಿಗೆ ಸಿಲುಕದಿರಬೇಕಾದರೆ ಸತ್ವಶಾಲಿಯಾಗಬೇಕು. ಅಜ್ಞಾನ ಕಳೆದು ಅಂತಃ ಸತ್ವ ಹೆಚ್ಚಬೇಕಾದರೆ ತನ್ನೊಳಗೇ ಅರಿವು ಮುಊಡಬೇಕು. ಎಲ್ಲ ಕಾಲಕ್ಕೂ ಸಮಾಜವು ಅಸ್ವಸ್ಥವಾಗಿರುವಂತೆ ತೋರುವುವದೇ ಹೆಚ್ಚು. ಇಲ್ಲೇ ನಮ್ಮ ಸ್ವಾಸ್ಥ್ಯಕ್ಕಾಗಿ ಸ್ವಸ್ಥವಾಗಿರುವ ಪರಿಸರವನ್ನು ಹುಡುಕಿಕೊಳ್ಳುವುದೇ ಜಾಣತನ. ಅದು ಸುಲಭ ಸಾಧ್ಯವೇನಲ್ಲ. ಈ ಬದುಕಿಗೆ ಅರ್ಥ ಏಕೆ ಬೇಕು? ಎಂದು ಹೇಳುವ ಗುರು ಅಲ್ಲದ ಗೂರೂಜಿಗಳಿದ್ದರೆ, ಸ್ವತಃ ಬೆತ್ತಲೆಯಾಗಿದ್ದು ಸಾರ್ವಜನಿಕ ವೇದಿಕೆಯಲ್ಲಿ ಬದುಕಿಗೆ ಅರ್ಥ ಇರಬೇಕೆಂದೇ ಬೋಧಿಸುವ ದಿಗಂಬರ ಸ್ವಾಮೀಜಿಗಳೂ ಇಲ್ಲಿದ್ದಾರೆ.

ಹೌದು, ಅರ್ಥ ಏಕೆ ಬೇಕು? ಹೇಗಾದರೂ ಬದುಕುವುದಷ್ಟೇ ಎಂದರೆ, ಬದುಕು ಅಸ್ತವ್ಯಸ್ತವಾದೀತು. ಬಟ್ಟೆಯುಟ್ಟುಕೊಂಡಿದ್ದರೂ ಬದುಕು ಮುಊರಾಬಟ್ಟೆಯಾದಿತಷ್ಟೇ. ಹಾಗೆಯೆ ಬಟ್ಟೆಯುಟ್ಟುಕೊಂಡವರೆಲ್ಲ ಅರ್ಥ ಕಂಡವರಲ್ಲ. ಯಾವ ಯಾವುದೋ ಕಾರಣಕ್ಕೆ ಬೆತ್ತಲೆಯಾದವರೆಲ್ಲ ದಿಗಂಬರ ಸನ್ಯಾಸಿಗಳಲ್ಲ.  ದಿಗಂಬರರಾದವರಲ್ಲೂ ದಿವ್ಯ ಸಾನ್ನಿಧ್ಯವೊಂದರ ಹುಡುಕಾಟವಿದೆ. ಬಟ್ಟೆಯುಟ್ಟವರಲ್ಲೂ ಬದುಕಿನ ಸಾಂಗತ್ಯದ ತಡಕಾಟವಿದ್ದೇ ಇರುತ್ತದೆ. ಇಲ್ಲವಾದರೆ ಅದು ಮನುಷ್ಯನ ಬದುಕಾಗುವುದಿಲ್ಲ.

ನಿಜವಾಗಿ ನೋಡಿದರೆ ಅನುಭವ ಮಾತ್ರವೇ ಜೀವನ ದೃಷ್ಟಿಯಾಗುವುದಿಲ್ಲ.  ಅದು ನೀಡುವ ಹೊಸ ಚೈತನ್ಯದಲ್ಲಷ್ಟೇ ಅದು ಅಡಗಿದೆ. ಅದರ ವಿನಿಮಯದಲ್ಲಡಗಿದೆ. ಆದರೇನು! ಸಮಕಾಲೀನ ಸಮಾಜದಲ್ಲಿ ಅನುಭವವೆಂಬದು ನಮಗೇ ಗುರುತು ಸಿಗಲಾರದಷ್ಟು ವಿಚ್ಛಿದ್ರಕಾರಿಯಾಗುತ್ತಿದೆ. ಪದವಿ ಗಿಟ್ಟಿಸಿಕೊಂಡೇ ಹಿರಿಯರೆನಿಸಿಕೊಂಡವರಲ್ಲಿ ಅದರ ಮತ್ತಿನಿಂದಲೆ ಉದ್ಭವಿಸಿದ ಅವರ ಅನುಭವವೇ ಅವಹೇಳನಕಾರಿಯಾಗಿದೆ. ಯುವಜನಾಂಗದ ದ್ವಂದ್ವ ವ್ಯಕ್ತಿತ್ವಗಳೋ,ಗೊಂದಲದ ಸನ್ನಿವೇಶಗಳಲ್ಲಿ ವಿದ್ರೂಪಗೊಳ್ಳುತ್ತಿದೆ.  ಮನಸ್ಸುಗಳು ಒಗ್ಗಟ್ಟಿನಲ್ಲಿ ಒಂದಾಗುವುದರ ಬದಲು ನುಚ್ಟುನೂರಾಗುತ್ತಿದೆ. ಬದುಕೆಂಬುದು ಯಾಂತ್ರಿಕವಾಗುತ್ತ ಕ್ರಿಯಾಶಕ್ತಿ ಎಂಬುದು ಕೇವಲ ಹಣ ಗಳಿಕೆಗಷ್ಟೇ ಸೀಮಿತವಾಗುತ್ತಿದೆ.

ಆದರೂ ಇಂಥ ಸಮಾಜದಲ್ಲಿ ನಾವು ನಿರಾಶರಾಗಬೇಕಿಲ್ಲ;ಹತಾಶೆಗೆಡೆಕೊಡಬೇಕಿಲ್ಲ. ಇನ್ನೂ ಮನುಷ್ಯ-ಮನುಷ್ಯರನ್ನು ಇಡಿಯಾಗಿ ಗ್ರಹಿಸುವ, ನಮ್ಮ ದರ್ಶನೇಂದ್ರಿಯದ ಅನುಭವಗಳಲ್ಲಿ ಅವನನ್ನು ಹುಡಿಯಾಗಿಸಿ ಹುರಿಯಾಳಾಗಿಸಿ ಎಂದಿಗೂ ಹಿಡಿದಿಡುವ ಬಲ ಕೇವಲ ನಮ್ಮ ಭಾಷೆಯ ಬಳಕೆಯಲ್ಲಷ್ಟೇ ಇದೆ;ಅದರ ವ್ಯಾಪ್ತಿಯಲ್ಲಡಗಿದೆ. ನಮ್ಮ ಪ್ರಾಪ್ತಿಯಲ್ಲಿದೆ. ಅದು ಸಾಹಿತ್ಯದಲ್ಲಿ ಕಾಣಸಿಗುತ್ತಲೇ ಇರುತ್ತದೆ. ಆ ಸಾಹಿತ್ಯ ಶಕ್ತಿಯಷ್ಟೇ ಬದುಕನ್ನೆದುರಿಸುವ ಆತ್ಮ ಸ್ಥೈರ್ಯ ನೀಡುತ್ತದೆ. . 

"ನಹಿ ಜ್ಞಾನೇನ ಸದೃಶಂ"

-ಎಚ್.ಶಿವರಾಂ
ಜೀವನ-ಚೇತನ
  • ಚಿಂತನ
~.~
  • ritershivaram ರವರ ಬ್ಲಾಗ್
  • Login or register to post comments
  • 244 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಪ್ರೀತಿಸಿದ ಹುಡುಗಿ"
  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
  • ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
  • ಕುಂಟನಿ ಎಂಬ ವಿಸ್ಮಯ
  • ಚಲುವ ಕನ್ನಡ ಕಸ್ತೂರಿ
Syndicate content

ಲೇಖಕರು

ritershivaram's picture

ಪೂರ್ಣ ಹೆಸರು
ritershivaram

ಪರಿಚಯ

ನಿವೃತ್ತ ನೌಕರ(Bsnl). ಚಿಂತಕ,ಸಾಹಿತಿ ಮತ್ತು ಕಂಪ್ಯೂಟರ್ ಶಿಕ್ಷಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator