ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು
ಈವರೆಗೆ ನನ್ನ ಹೊಸ ಆವೃತಿಯ ಕಂಪ್ಯೂಟರ್ ಪುಸ್ತಕದ ಬರವಣಿಗೆ ಮತ್ತು ಪ್ರಕಟಣೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ನನಗೆ ಇಲ್ಲಿ ಬರೆಯಲಾಗಿರಲಿಲ್ಲ. ನನ್ನ ಕನ್ನಡ ಕಂಪ್ಯೂಟರ್ ಪುಸ್ತಕಗಳ ಬಗ್ಗೆ ಸಂಪದ ಓದುಗರಲ್ಲಿ ಹೇಳಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೀಗ ಒದಗಿ ಬಂದಿದೆ. ಹೌದು, ಕನ್ನಡದಲ್ಲಿ ಕಂಪ್ಯೂಟರ್ ಕಲಿಯುವವರಿಗೆ ಮತ್ತು ಕಲಿಸುವ ಶಿಕ್ಷಕರಿಗೆ ಅಪರೂಪವೆನಿಸಿರುವ ಮತ್ತು ಅತಿ ಹೆಚ್ಚು ಬೇಡಿಕೆಯಲ್ಲಿರುವ ನನ್ನ ಈ 3 ಪುಸ್ತಕಗಳ ಪರಿಚಯ ಮಾಡಿಕೊಡುತ್ತಿದ್ದೇನೆ-
1.ವಿನ್ ಕಂಪ್ಯೂಟರ್ (Software Made Simple)
2.ವಿನ್ ಯುವರ್ PC (Hardware Made Easy)
3.ಮೇಜಿನ ಮೇಲಿನ ಪ್ರಕಾಶನ (D.T.P.Made Easy)
ಕಂಪ್ಯೂಟರ್ ಶಿಕ್ಷಣದಲ್ಲಿಯೆ ಅತ್ಯಂತ ಸರಳ ಹಾಗೂ ಸುಲಭ ವಿಧಾನಗಳನ್ನು ಹೊಂದಿರುವ ಈ ಮೊರು ಪುಸ್ತಕಗಳು ಪ್ರಾಥಮಿಕ ಕಲಿಕೆಯಲ್ಲಿ ಇರಬಹುದಾದ ಎಲ್ಲ ಇತಿಮಿತಿಗಳನ್ನೂ ಮೀರಿ ನಿಲ್ಲುತ್ತವೆ. ಕಂಪ್ಯೂಟರ್ ಶಿಕ್ಷಕರಿಗೆ ಹಾಗೂ
ಕಂಪ್ಯೂಟರ್ ಬಗ್ಗೆ ಏನೇನೂ ಗೊತ್ತಿಲ್ಲದವರಿಗೂ ಮನೆಯಲ್ಲೇ ಕುಳಿತು ಸ್ವತಃ ಕಲಿಯಲು ನೆರವಾಗುತ್ತವೆ.
ಅಷ್ಟೇ ಅಲ್ಲ;ಕಲಿಕೆಯಲ್ಲಿ ನಿಮಗೆ ಔದ್ಯೋಗಿಕವಾಗಿಯೊ ಬಹಳ ಉಪಯುಕ್ತವಾಗಿವೆ.
ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗ ಬೇಕು ನಿಜ.
ಆದರೆ,ಇಂಗ್ಷೀಷ್ ಜತೆಗಿರಬೇಕು ಎಂಬ ಮಾತೂ ನಿಜವೇ ಆಗಿದೆಯಲ್ಲ...
ಅಂತೆಯೆ ಇದೀಗ ಕನ್ನಡದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಈ ಮೊರು ಕಂಪ್ಯೂಟರ್ ಪುಸ್ತಕಗಳು -
ನಾಡು ನುಡಿಗೆ ಮೀಸಲಾದ
ದೇಶ ಭಾಷೆಗೆ ಮಿಗಿಲಾದ
ಜ್ಞಾನ ದಾಹಿಗಳಿಗೆ,
ಅರ್ಪಣೆಯಾಗಿವೆ.
ಪರಿಚಯ ಮತ್ತು ಹೆಚ್ಚಿನ ಮಾಹಿತಿಗೆ ಹಾಗೂ ನನ್ನ ಮೊದಲ ಪುಸ್ತಕ-
ಕಂಪ್ಯೂಟರ್ ಕಲಿಕೆಗೊಂದು ಕೈಪಿಡಿ-2001 ಇ-ಬಕ್ ಸಹಿತ ಉಚಿತ ಲಭ್ಯವಿದೆ;ಇಲ್ಲಿ ಕ್ಲಿಕ್ಕಿಸಿರಿ-ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಪುಸ್ತಕಗಳು
-ಎಚ್. ಶಿವರಾಂ

- ritershivaram ರವರ ಬ್ಲಾಗ್
- Login or register to post comments
- 343 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು
ಅತ್ಯಧಿಕ ಬೇಡಿಕೆಯಲ್ಲಿರುವುದು ಎಂದು ನೀವೇ ಹೇಳಿಕೊಳ್ಳುವುದು ಸರಿಯಿರುತ್ತದೆಯೇ, ರೈಟರ್ ಶಿವರಾಮ್? ನೀವು ಮೊದಲು ಕೊಟ್ಟ ಶೀರ್ಷಿಕೆಯೇ ಸರಿ ಇತ್ತು.
ಹೀಗೆ ನೇರ ಪ್ರಮೋಶನ್ ಗಿಟ್ಟಿಸಿಕೊಳ್ಳಲು ಹಾಕಿದಂತಿರುವ ಪೋಸ್ಟುಗಳನ್ನು ಸಂಪದದಿಂದ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಲಾಗುತ್ತದೆ ಎಂಬುದು ಹೇಳಬೇಕಿಲ್ಲ ಅಂದುಕೊಳ್ಳುತ್ತೇನೆ. ಈ ಬಾರಿ ಸರಿ, ಮುಂದಿನ ಸಾರಿಯಿಂದ ಇಂತಹ ಬರಹಗಳಿಗೆ ನೇರ ಕತ್ತರಿ ಬೀಳುವುದು. ಮನ್ನಿಸಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು
ಸಂಪದದ Terms of Use (Policies and Guidelines) ನಲ್ಲಿ ಎಲ್ಲೂ ಹಾಗೆ ಹೇಳಿಲ್ಲವಲ್ಲ ಹೆಚ್ ಪಿನ್ ರವರೇ... ಹಾಗೇನಾದರೂ ಇದ್ದಲ್ಲಿ ಖಂಡಿತ ಈ ಶಿರ್ಷಿಕೆಯನ್ನು ನಾನು ಬದಲಿಸುತ್ತಿರಲಿಲ್ಲ. ವಾಸ್ತವಿಕತೆಯನ್ನು ಹೇಳಿದ್ದೇನೆ( ಈ ಪುಸ್ತಕಗಳು ತೃತೀಯ ಹಾಗೂ ದ್ವೀತೀಯ ಮುದ್ರಣ ಕಂಡಿವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಇದರಲ್ಲಿ ನನಗೆ ಏನು ಪ್ರಮೋಷನ್ ಸಿಗುತ್ತದೆ ಅರ್ಥವಾಗಲಿಲ್ಲ.