ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೌದಾ ಪಪ್ಪಾ..?

Innocentಪಪ್ಪಾ ಅಯ್ಯಪ್ಪ ಸಾಮಿ ಗುಡಿಗೆ ಹೆಂಗಸರು ಹೋಗೋ ಹಾಗಿಲ್ವಂತೆ...?

ಹೌದು ಮಗು

ಮತ್ತೇ ಸಿನಿಮಾ ತಾರೆಯರು ಹೋಗಿದ್ದರಂತೆ...

ಹೌದು ಮಗು

ಹಾಗೆ ಹೋಗಿದ್ದು ತಪ್ಪಲ್ವಾ...

ಹೌದು ಮಗು, ತಪ್ಪಾಗಿದೇಂತ ಒಬ್ಬ ನಟಿ ಬರೆದೂ ಕೊಟ್ಟಿದಾರೆ

ಪಪ್ಪಾ, ಅವರ್ ನೆಲ್ಲಾ ಯಾರು ಒಳಗ್ ಬಿಟ್ಟಿದ್ದೂ

ಆ ದೇವಸ್ಥಾನದವರೇ ಮಗು...

ಪಪ್ಪಾ, ಅದ್ಹೇಗೆ ಬಿಟ್ರೂ ಆ ಹೆಂಗಸ್ರನೆಲ್ಲ

ಅವರೆಲ್ಲ ಸ್ಟಾರ್ ಗಳೂ ತುಂಬಾ ಫೇಮಸ್ಸೂ ಅದಕ್ಕೇ....

ಪಪ್ಪಾ....... ಮತ್ತೇ...... ಮತ್ತೇ........

ಹೇಳು ಮಗೂ....

ಮತ್ತೇ.. ನನ್ನಮ್ಮಾನೂ ಸಿನಿಮಾ ಸ್ಟಾರ್ ಆಗಿ

ದೊಡ್ಡ ಹೀರೋಗಳೆಲ್ಲರ ಜೊತೆ ಚೆನ್ನಾಗಿ ಡ್ಯಾನ್ಸ್ ಮಾಡಿ

ತುಂಬಾ ಫೇಮಸ್ಸಾದ್ರೇ ಅವಳನ್ನೂ...

ಆ ಗುಡಿಯೊಳಗೆ ಸುಮ್ನೆ ಬಿಟ್ಟು ಬಿಡ್ತಾರಾ....?

ಗೊತ್ತಿಲ್ಲ ಮಗೂ...

.-ಎಚ್.ಶಿವರಾಂ

4 ಜುಲೈ,2006 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹೌದಾ ಪಪ್ಪಾ..?

yuvapremi's picture

ಸರ್,

ನಿಮ್ಮ "ಗೊತ್ತಿಲ್ಲ" ಅಂದ ಉತ್ತರ ಏನನ್ನು ಹೇಳ್ತಾಇದೆ ?

ಇಲ್ಲ ಫ಼ೇಮಸ್ ಆಗೊಲ್ಲ ಅಂತಲೊ..? :)
ಹೀರೋಯಿನ್ ಆಗೊಲ್ಲ ಅಂತಲೊ ? :o

-ಯುವಪ್ರೇಮಿ