ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ritershivaram ರವರ ಬ್ಲಾಗ್

ಮಹಾಭಾರತದಲ್ಲಿ ಕರ್ಣ

September 8, 2007 - 6:56pm — ritershivaram

"ಮಹಾಭಾರತದಲ್ಲಿ ನೆನೆಯುವಿರಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆ" ಎಂಬುದಾಗಿಯೂ ಹೇಳುತ್ತಾರೆ. ಆತ ನೀಚ ಕುಲದವ,ನಿರ್ಗತಿಕ ಆದರೂ ಅದ್ವಿತೀಯ ವೀರಾಧಿವೀರ ಮತ್ತು ದಾನಶೂರನು. ಆದರೇನು! ದೈವಬಲವಿದಲ್ಲದವನು. ಹೌದು, ಭೀಷ್ಮನನ್ನು ಬಿಟ್ಟರೆ ಅತಿರಥ ಮಹಾರಥರಲ್ಲಿ ಕರ್ಣನೆ ಪ್ರಪ್ರಥಮ. ದರ್ಯೋಧನ ದುರಳನಾದರೂ ಪಿತಾಮಹ ಭೀಷ್ಮ ಆತ ತಮಗೆ ತಾತ ಅತ್ಯಂತ ಹಿರಿಯನೆಂಬ ಕಾರಣಕ್ಕೂ ಮೊದಲು ಗೌರವಿಸಿ ಆತನಿಗೇ ಸೇನಾಧಿಪತ್ಯಕೊಡುತ್ತಾನೆ. ಕರ್ಣನಿಗೆ ದೈವಬಲ ಇರಲಿಲ್ಲ. ಅದೇ ಕಾರಣಕ್ಕೆ ತಾನು ಅದುವರೆಗೂ ಕಾಣದಿದ್ದ ತಾಯಿಯನ್ನು ಕಂಡಾಗಲೂ ಆ ತಾಯಿಯಿಂದಲೂ ಅವಕೃಪೆಗೊಳಗಾಗುತ್ತಾನೆ. ತಾಯಿ ಕುಂತಿ ಶ್ರೀ ಕೃಷ್ಣನ ಪ್ರೇರಣೆಯಿಂದ ಕರ್ಣನಿಗೆ ತೊಟ್ಟಬಾಣವನ್ನು ತೊಡಬೇಡ( ಯುದ್ಧ ಕಾಲದಲ್ಲಿ ಅದು ಸರ್ಪಾಸ್ತ್ರವಾಗಿ ಅವನನ್ನು ಕೆಣಕುತ್ತದೆ). ಅಷ್ಟು ಸಾಲದೇ ಪಂಚ ಪಾಂಡವರಲ್ಲಿ ಯಾರ ಜೀವವನ್ನೂ ತೆಗೆಯ ಬಾರದು ನೀನು ಎಂದೂ ಕೇಳುತ್ತಾಳೆ. ಆಗ ದುರ್ಯೋಧನನ ಉಪ್ಪು ಉಂಡು ಅವನ ಪ್ರಾಣ ಮಿತ್ರನಾಗಿದ್ದು ಅವನ ಕಡು ವೈರಿ ಅರ್ಜುನನ್ನು ಮಾತ್ರ ಬಿಡಲಾರೆನೆಂದೂ ಕರ್ಣ ಮಾತು ಕೊಡುತ್ತಾನೆ. ಮುಂದೆ ರಣರಂಗದಲ್ಲಿ ಅವನೂ ಭೀಮನೊಡನೆ ಗದಾಯುದ್ಧ ಮಾಡುತ್ತಾನೆ. ಹೋರಾಟದಲ್ಲಿ ಭೀಮ ಅವನತ ಮುಖಿಯಾಗಿಯಾದಾಗ ತನ್ನ ಗದೆ ಎತ್ತಿ ಇನ್ನೇನು ಅವನನ್ನು ಕೊಲ್ಲಬೇಕು, ಆಗ ತಾಯಿ ಕುಂತಿಗೆ ತಾನು ಕೊಟ್ಟ ವಾಗ್ದಾನ ನೆನಪಾಗುತ್ತದೆ. ಅರ್ಜುನನ್ನು ಕೊಲ್ಲಲು ಪ್ರಯತ್ನಿಸಿದಾಗಲು ಅವನ ಸಾರಥಿ ಕೃಷ್ಣನ ಕಪಟವೇ ಮೇಲುಗೈಯಾಗಿ ಬಿಡುತ್ತದೆ. ಹಾಗೆ ಕರ್ಣ ಅಪ್ರತಿಮ ಸಾಮರ್ಥ್ಯವುಳ್ಳವನೂ ವೀರಾಧಿ ವೀರನಾದರೂ ದೈವ ಬಲವಿಲ್ಲದೇನೆ ಗುರುಶಾಪ, ತಾಯಿಯ ಅವಕೃಪೆಯಿಂದ ಕಡೆಗೆ ಮರಣವನ್ನಪ್ಪುತ್ತಾನೆ.

  • ಚಿಂತನ ಲೇಖನ
~.~
  • ritershivaram ರವರ ಬ್ಲಾಗ್
  • Login or register to post comments
  • 421 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 9, 2007 - 10:57am — muralihr

ಉ: ಮಹಾಭಾರತದಲ್ಲಿ ಕರ್ಣ

muralihr's picture

ಕುವೆ೦ಪುರವರ ಕುಮಾರವ್ಯಾಸನ ಕರ್ಣವನ್ನು ಓದಿ , ಚೆನ್ನಾಗಿ ವಿಮರ್ಷೆ ಮಾಡಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 10, 2007 - 10:28am — ritershivaram

ಉ: ಮಹಾಭಾರತದಲ್ಲಿ ಕರ್ಣ

ritershivaram's picture

ಕುವೆಂಪುರವರ “ಕುಮಾರ ವ್ಯಾಸನ ಕರ್ಣವನ್ನು” ನಾನು ಓದಿಲ್ಲ. ಅನೇಕ ಮಹಾಭಾರತಗಳಿವೆ. ಅವು ಇಂದಿಗೂ ಹೊಸ ಹೊಸ ಬಗೆಗಳಲ್ಲಿ ರೂಪ ತಳೆಯುತ್ತಿವೆ. ಅವುಗಳಿಗೆ ಅನೇಕಾನೇಕ ವಿಮರ್ಶೆಗಳಿವೆ. ಸಮಸ್ತರಿಗೆ ಸಹಸ್ರ ಸಹಸ್ರ ದೃಷ್ಟಿಕೋನಗಳು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 10, 2007 - 11:01pm — hamsanandi

ಉ: ಮಹಾಭಾರತದಲ್ಲಿ ಕರ್ಣ

hamsanandi's picture

ನಾನು ವ್ಯಾಸ ಭಾರತದ ನೇರ ಅನುವಾದಗಳನ್ನು ಹೆಚ್ಚಾಗಿ ಓದಿಲ್ಲ. ಆದರೂ, ನಾರಾಯಣಾಚಾರ್ಯರ ಲೇಖನವೊಂದರಲ್ಲಿ, ಮೂಲ ಭಾರತದಲ್ಲಿ ಕರ್ಣನನ್ನು ಬಹಳ ಒಳ್ಳೆಯವನನ್ನಾಗಿ ಚಿತ್ರಿಸಿಲ್ಲ, ಅನ್ನುವ ನೆನಪು. ನಂತರದ ಕವಿಗಳು ಕರ್ಣನ ಪಾತ್ರಕ್ಕೆ ಹೆಚ್ಚು ಮೇಲ್ಮೆಯನ್ನು ತಂದುಕೊಟ್ಟಿದ್ದಾರೆ.

ಬಹುಶಃ ಭಾಸನ ಪ್ರಯತ್ನ ಈ ದಿಸೆಯಲ್ಲಿ ಮೊದಲಿರಬಹುದು. ಕರ್ಣಭಾರಂ ನ ಕರ್ಣ ಮನಸ್ಸಿನಲ್ಲಿ ನಿಲ್ಲುವ ದುರಂತನಾಯಕ. ಅಂದರೆ, ಮೂಲ ಭಾರತ ಬಂದ ಕೆಲವಾರು ಶತಮಾನಗಳಲ್ಲೇ ಅದರ ಮೇಲೆ ಹೊಸ ಪ್ರಯೋಗಗಳನ್ನು ಮಾಡಲು ಆರಂಭಿಸಿದರು ಎನ್ನಬಹುದು. ಭಾಸ ಸುಮಾರು ಕ್ರಿ.ಪೂ.೨೦೦ ರಿಂದ ಕ್ರಿ.ಶ.೩೦೦ ರ ಒಳಗೆ ಆಗಿಹೋದವನು ( ಈ ನಾಟಕವನ್ನು ಭಾಸನೇ ಬರೆದದ್ದು ನಿಜವಾದರೆ - ಏಕೆಂದರೆ, ಸ್ವಪ್ನನಾಟಕ, ಮತ್ತು ಪ್ರತಿಜ್ಞಾ ನಾಟಕಗಳನ್ನುಳಿದು ಉಳಿದ ನಾಟಕಗಳನ್ನು, ನಂತರದ ಯಾರೋ ನಾಟಕಕಾರ ಬರೆದಿರಬಹುದೆಂಬ ವಾದವೂ ಇದೆ).

ಕನ್ನಡದಲ್ಲಿ ಪಂಪ ಕರ್ಣನನ್ನು ಮೇಲಕ್ಕೇರಿಸಿ, ಕರ್ಣರಸಾಯನಮಲ್ತೆ ಭಾರತಂ ಎಂದಿದ್ದಾನಂತೆ. ಇನ್ನು ಕುಮಾರವ್ಯಾಸ ಅಂತೂ, ಕರ್ಣನನ್ನು ಭಾರೀ ದುರಂತನಾಯಕನನ್ನಾಗೇ ಮಾಡಿದ್ದಾನೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 9:29am — ritershivaram

ಉ: ಮಹಾಭಾರತದಲ್ಲಿ ಕರ್ಣ

ritershivaram's picture

ಹಂಸಾನಂದಿಯವರೇ, ಧನ್ಯವಾದಗಳು,
“ಮಹಾಭಾರತದಲ್ಲಿ ನೆನೆಯುವಿರಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆ” ಎಂಬುದಾಗಿ ಏಕೆ ಹೇಳಿದ್ದಾರೆ? ಎಂದು ಚಿಂತಿಸಿದಾಗ ನನಗೆ ಹೊಳೆಯುತ್ತದೆ- ಒಂದು ಹುಟ್ಟು ತಿಳಿಸುವ ಲೆಕ್ಕಾಚಾರಕ್ಕಿಂತ ಒಂದು ಸಾವು ಹೇಳಿ ಕೊಡುವ ಪಾಠ ದೊಡ್ಡದು. ಮಹಾಭಾರತದ ಒಂದೊಂದೇ ಪಾತ್ರಗಳನ್ನು ಮೊಲಾಧಾರವಾಗಿಟ್ಟುಕೊಂಡು ಪೂರ್ಣವಾಗಿ ಆ ಪುರಾವನ್ನೆ ಬರೆದವರೆಷ್ಟೋ ಮಂದಿ. ಹಾಗೆಯೆ ಕರ್ಣನ ಪಾತ್ರವನ್ನೇ ಪ್ರಧಾನವಾಗಿ ದೃಷ್ಟಿಕೋನದಲ್ಲಿಟ್ಟುಕೊಂಡು ಇಡೀ ಮಹಾಭಾರವನ್ನೇ ನೋಡಿದಾಗ, ಆ ದುರಂತ ನಾಯಕನ ಪಾತ್ರ ಮತ್ತು ಅದೇ ರೀತಿಯ ಅವನ ಮರಣದಿಂದ ನಾವು ಅರಿತುಕೊಳ್ಳವುದು ಬಹಳವಿದೆ ಎನಿಸತ್ತದೆ.
-ರೈಟರ್ ಶಿವರಾಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಪ್ರೀತಿಸಿದ ಹುಡುಗಿ"
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • ಒಂಥರಾ ಪ್ರೀತಿ...
  • ಚಿಂತನ
  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
Syndicate content

ಲೇಖಕರು

ritershivaram's picture

ಪೂರ್ಣ ಹೆಸರು
ritershivaram

ಪರಿಚಯ

ನಿವೃತ್ತ ನೌಕರ(Bsnl). ಚಿಂತಕ,ಸಾಹಿತಿ ಮತ್ತು ಕಂಪ್ಯೂಟರ್ ಶಿಕ್ಷಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator