ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ritershivaram ರವರ ಬ್ಲಾಗ್

ಬಂತಿದೋ ಚುನಾವಣೆಯ ಕಾಲ.ತಂತಿದೊ ಸುಭಿಕ್ಷ(ದುರ್ಭಿಕ್ಷ) ಕಾಲ!

April 10, 2008 - 6:46pm — ritershivaram

ಬಂತಿದೋ ಚುನಾವಣೆಯ ಕಾಲ. ಯಾರಿಗೆ ಎಂಥವರಿಗೆ ಸುಭಿಕ್ಷ ಕಾಲ...? ಇನ್ಯಾರಿಗೆ ಇನ್ನೆಂಥ ಪಾಪದ ಜನರಿಗೆ ದುರ್ಭಿಕ್ಷ ಕಾಲವೋ ಏನೋ... ನೋಡಿರಿ ನೋಡುತ್ತಿರಿ ಪಕ್ಷಗಳ ಪ್ರಣಾಳಿಕೆ!!  ಇಂದು ಮೊದಲನೆಯದಾಗಿ ಪತ್ರಿಕೆಯ ಮುಖಪುಟದ ಹೆಡ್ ಲೈನ್ಸ್ ನಲ್ಲಿ ಕಾಂಗ್ರೇಸ್ ತಾನೇ ಅಧಿಕಾರಕ್ಕೆ ಬರಲೇ ಬೇಕೆಂದು ಹಠತೊಟ್ಟಂತೆ ಹಠಾತ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ! ಅದರ ಸಪ್ತ ಭರವಸೆಗಳಲ್ಲಿ ಎಂಥೆಂಥ ಅತ್ಯಮೊಲ್ಯವಾದವುಗಳು!! ೨ ಕೆ.ಜಿ. ಅಕ್ಕಿ-ತಿಂಗಳಿಗೆ ೨೫ ಕೆ.ಜಿ! ಶೇ ೩% ಬಡ್ಡಿದರದಲ್ಲಿ ಸಾಲ ಸಾಲ! ಕೊನೆಗೆ ಯಾವ ಮಗಾನೂ ತೀರಿಸ್ಬೇಕಿಲ್ಲ.  ಯಾಕೆಂತಿರಾ.. ಅವರು ಉದ್ಯೋಗದ ಬಗ್ಗೆ ಅಷ್ಟೇನೂ ಚಿಂತೆ ಮಾಡ್ಬೇಕಾಗಿಲ್ಲ! ಯಾಕಂದ್ರೇ ಅವ್ರ ಭರವಸೆಗಳಲ್ಲಿ ಅತ್ಯಂತ ಗಮನಿಸಬೇಕಾದದ್ದೆಂದರೆ- ಎಸ್ಸೆಸ್ಸೆಲ್ಸಿ ಪಾಸಾದ (ಸಧ್ಯ ಅಷ್ಟಾದರೂ ವಿದ್ಯಾವಂತನಾಗಲೇ ಬೇಕು) ನಿರುದ್ಯೋಗಿ ಯುವಕರಿಗೆ ಮಾಸಿಕ ೧,೨೦೦ ರೂ. ಶಿಷ್ಯವೇತನ! ಇನ್ನು ಮುಂದೆ ನಮ್ಮ ನಾಡಿನ ಮಕ್ಕಳು ಅದರಲ್ಲೂ ಯುವಕರು ಹೆಚ್ಚು ಓದುವುದೇ ಬೇಡಾ... ಜಸ್ಟ್ ಎಸ್ಸೆಸ್ಸೆಲ್ಸಿ ಪಾಸೇ ಸಾಕು. ಬರೀ ಓಟು ಹಾಕಲಿಕ್ಕಷ್ಟೇ ಅಲ್ಲ;ರಾಜಕೀಯ ಮಾಡಲು, ವಾಹ್ !ಯುವ ಕಾರ್ಯ ಕರ್ತನಾಗಲು. (ಯವತಿಯರಿಗಿಲ್ಲ! ಪಾಪ;ಅವರೇನು ಅನ್ಯಾಯ ಮಾಡಿದ್ದಾರೋ....  ಅಥವಾ ಅವರೇ ಪುಣ್ಯವಂತರು ಬಿಡಿ,ಚೆನ್ನಾಗಿ ಓದಿಯೆ ಇಂಥ ದುರ್ಭಿಕ್ಷ ಅಲ್ಲಲ್ಲ ಸುಭಿಕ್ಷ ಕಾಲದಲ್ಲೂ ಹಠತೊಟ್ಟು ಮುಂದೆ ಬರಲೀ).

ಏನಂತೀರಿ? ನೀವೂ ನಮ್ಮ ನಾಣ್ಣುಡಿಯೊಂದನ್ನು ಕೇಳಿರಲೇ ಬೇಕಲ್ಲ...! "ನಿನಗೇನೂ ಉದ್ಯೋಗ ಮಾಡಾಕೆ ಬರದಿದ್ದರೆ, ರಾಜಕೀಯ ಮಾಡು." ಅಂತ. ಹೌದ್ಹೌದು, ಓದಾಕೆ ಆಗದಿರೇ ಹೋಗಲಿ ಬಿಡಲಾ, ಹೆಂಗೂ ನಮ್ಮ ಮನೆಗೆ ಪುಕ್ಕಟ್ಟೆ ಕಲರ್‍ ಟಿ.ವಿ. ಬರ್‍ತದೇ.. ನೀನು ಉಂಡುಂಡು ಅದರ ಮುಂದೆ ಕೂತ್ಕೋಭೋದು. ನಿಂಗೆ ನಮ್ಮ ಸರ್ಕಾರ ಕುತ್ಮಂಡೇ ತಿನ್ನೋಕೆ ಅಟೀಟೂ ತಿರುಗಾಡ್ತಾ ನಮ್ಮ ರಾಜಕಾರಣಿ ನಾಯಕರ್‍ಗಳಿಗೆ ಭೋ ಪರಾಕು, ಜೈ ಜೈ ಕಾರ ಮಾಡಾಕೆ ಶಿಷ್ಯವೇತನ ಕೊಡ್ತೈತೆ..! ಇನ್ನೇನು ಬೇಕಲಾ ಮಗಾ.. ಹೆಂಗಾರೆ ಮಾಡಿ ಎಸ್ಸೆಸ್ಸೆಲ್ಸಿ ಪ್ಯಾಸ್ ಮಾಡ್ಕಳ್ಲಾ...ಎಂದು ಇನ್ಮುಂದೆ ಹಳ್ಳಿಗಳಲ್ಲಿ ಹಾಗೂ ನಮ್ಮ ನಗರಗಳ ಸ್ಲಮ್ ಗಳಲ್ಲಿ ಡೈಲಾಗ್ ಕೇಳಿ ಬಂದ್ರೆ... ನಾವೂ ನೀವೂ ಯಾರೂ ಅಚ್ಚರಿ ಪಡೋದೇನಿಲ್ಲ; ಅಲ್ವರಾ...

ರೈಟರ್ ಟೈಮ್ಸ್

  • ಸುದ್ದಿ ಸ್ವಾರಸ್ಯ
~.~
  • ritershivaram ರವರ ಬ್ಲಾಗ್
  • Login or register to post comments
  • 222 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಲಿಗಾಲ
  • ಕವಿತೆ: ಪೋಲೆಂಡ್: ಯುಗದ ಮಕ್ಕಳು
  • ನಾಳೆ ನೀವೂ ಮಾಯ.............
  • 2 ರೂಪಾಯಿಗೆ ಅಕ್ಕಿ ಕೊಟ್ರೆ ಸಾಕಾ?
  • ಬಾಣಲೆ ಬೆಂಕಿ
Syndicate content

ಲೇಖಕರು

ritershivaram's picture

ಪೂರ್ಣ ಹೆಸರು
ritershivaram

ಪರಿಚಯ

ನಿವೃತ್ತ ನೌಕರ(Bsnl). ಚಿಂತಕ,ಸಾಹಿತಿ ಮತ್ತು ಕಂಪ್ಯೂಟರ್ ಶಿಕ್ಷಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 50 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator