ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ritershivaram ರವರ ಬ್ಲಾಗ್

ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

September 28, 2007 - 5:58pm — ritershivaram

ಸೂರ್ಯ ಎಂಬ ಪದವನ್ನೇ  ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ.  ಏಕೆನ್ನುತ್ತೀರಾ-  ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ್ಷರವನ್ನು ಅರೆ ಉಚ್ಛರಿಸುತ್ತೇವೆ ಅದಕ್ಕಾಗಿಯೆ ಅರ್ಕಾವೊತ್ತಲ್ಲವೇ...
ಶುಭಾಷಯಗಳು  ತಪ್ಪು.  “ಶುಭಾಶಯಗಳು” ಸರಿ.   ನಾವು ಆಶಯ ಎಂದು ಉಚ್ಛರಿಸುವಾಗ ಸ್ವರಲಾಲಿತ್ಯ ಅದೆಷ್ಟು ಮಧುರ! ಆಷಯ ಎನ್ನಲಾರೆವಲ್ಲ ಕರ್ಕಷವಾಗಿ. ಆದ್ದರಿಂದಲೇ ‘ಶುಭಾಶಯ’ ಸರಿ.
ಹಾರ್ಧಿಕ ಶುಭಾಷಯಗಳು ಇದೂ ಕೂಡ ತಪ್ಪು.   “ಹಾರ್ದಿಕ ಶುಭಾಶಯಗಳು”ಸರಿ.
ಪ್ರಶಸ್ತಿ ಪ್ರಧಾನ – ಇಲ್ಲಿ ಪ್ರಧಾನ ತಪ್ಪಾಗಿದೆ.  ಯಾಕೆಂದರೆ, ನೋಡಿ ದಾನದಲ್ಲಿ ಪ್ರದಾನ ವಾದ್ದು “ಪ್ರಶಸ್ತಿ ಪ್ರದಾನ” ಸರಿ. 
ಪ್ರಧಾನ ಮಂತ್ರಿ ಅಥವಾ ಪ್ರಧಾನ ಕಛೇರಿ ಇತ್ಯಾದಿ ಬಳಸಿದಾಗ ಧಾ ಸೂಕ್ತ.
ಹೀಗೆ ಇತ್ತೀಚೆಗೆ ಕನ್ನಡ ನಾಮ ಫಲಕಗಳನ್ನು ನೋಡುತ್ತಿದ್ದರೆ  ಇನ್ನೂ ಬಹಳ ಶಬ್ದಗಳು ಸಿಗುತ್ತದೆ.

ಇನ್ನು ಅನುವಾದದ ಬಗ್ಗೆ -

ನನ್ನ ಅಭಿಪ್ರಾಯದಲ್ಲಿ  ಇಂಗ್ಷೀಷ್‌ನ ಪದ ಪದ ಜಗ್ಗುತ್ತಾ ಅನುವಾದಮಾಡುವುದಕ್ಕಿಂತ,  ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ನಾವು ನಮಗಿಂತ ಹಿರಿಯರಿಗೆ ಪತ್ರ ಬರೆಯುವಾಗ, ಪತ್ರದದ ಆರಂಭದಲ್ಲಿ, ಕೊನೆಯಲ್ಲಿ  ಮುಗಿಸುವುದು ಹೇಗೆ ರೂಢಿಯಲ್ಲಿದೆ ಎಂಬುದೇ ಮುಖ್ಯ. 
ಇಂತಿ ವಂದನೆಗಳೊಂದಿಗೆ,
ಇಂತಿ ನಮಸ್ಕಾರಗಳು,
ಇಂತಿ ನಿಮ್ಮ ಶ್ರೇಯೋಭಿಲಾಷಿ,
Regards ಗೆ ಪರ್ಯಾಯವಾಗಿ, ಗೌರವ ಪೂರ್ವಕವಾಗಿ  ಎನ್ನಬಹುದೇ ಹೊರತು  ಒಂದೇ ಪದ ಹುಡುಕುವುದಲ್ಲ.
ಹಾಗೆಯೆ E-Mail ಕೂಡ. ಇಲೆಕ್ಟ್ರಾನಿಕ್  ಅಂಚೆ ಎನ್ನಬಹುದು. ವಿದ್ಯುನ್ಮಾನ ಅಂಚೆ ಎನ್ನಬಹುದುದಾದರೂ ‘ಇಲೆಕ್ಟ್ರಾನಿಕ್’ ಎಂಬ ಪದ ಒಬ್ಬ ಅನಕ್ಷರಸ್ಥ ಹಳ್ಳಿಯವನ ಆಡುಭಾಷೆಯಲ್ಲಿಯೊ ಸರಾಗ ಬೆರೆತಿರುವಾಗ ಅವನಿಗೆ ಇಲೆಕ್ಷ್ರಾನಿಕ್ ಉಪಕರಣ ಕಂಪ್ಯೂಟರ್  ಮೊಲಕ ಕಳುಹಿಸುವ ಅಂಚೆ ಎಂದು ತಿಳಿದಿರುವಾಗ “ವಿದ್ಯುನ್ಮಾನ” ಎಂದರೆ ಅವನು ತಲೆಕೆರೆದುಕೊಂಡಾನು. ಅಂಚೆ ಆತನಿಗೆ ಬಹಳ ಹಳೆಯ ಸರಳ ಶಬ್ದವಾಗಿರುತ್ತದೆ. ಭಾಷೆಯು ಮನುಷ್ಯ ಮನುಷ್ಯರ ನಡುವಣ ಸಂವಹನ ಮಾಧ್ಯಮವಷ್ಟೇ. ಅಲ್ಲದೇ, ಪ್ರತಿಯೊಂದು ಭಾಷೆಗೂ ಅದರದೇ ಆದ ಸ್ವರ ಲಾಲಿತ್ಯವಿದೆ. ಹಾಗೂ ಬಳಕೆಯಲ್ಲಿ ಹಿಂದಿನಿಂದಲೂ ತನ್ನದೇ ರೀತಿಯಲ್ಲಿ, ಬರವಣಿಗೆಯಲ್ಲಿಯೊ ತನ್ನದೇ ರೂಢಿಗತ ಶೈಲಿಯಲ್ಲಿ ಅದು ಕಂಡು ಬರುತ್ತದೆ.   ಓದುವ ಆಡುಮಾತಿನ ಉಚ್ಛಾರಣೆಯಲ್ಲಿಯೊ ಇವೆಲ್ಲ ಗಮನಕ್ಕೆ ಬರುತ್ತದೆ.  ಇಂಗ್ಷೀಷ್ ಅಂತೂ ಭಾರತೀಯರ ಉಚ್ಛಾರಕ್ಕೂ ಅಮೆರಿಕನ್ನರ ಉಚ್ಛಾರಕ್ಕೂ ಬಹಳ ಅಂತರವಿದೆಯಾದರೂ ಭಾರತೀಯರ ಇಂಗ್ಷೀಷ್ ಸಾಹಿತ್ಯವೂ ಕೂಡ ತನ್ನದೇ ಸ್ಥಾನ ಪಡೆದುಕೊಂಡು ಹೆಸರಾಗಿದೆಯಲ್ಲ! ಆದ್ದರಿಂದ, ಅನುವಾದಕ್ಕಾಗಿ ಅನುವಾದವಲ್ಲ. ಅನುವಾದವೆಂಬುದೂ ಆ ಭಾಷೆಯಲ್ಲಿ ಅಂತರ್ಗತವಾದ ಸಹಜ ಧ್ವನಿಯಾಗಿ ಬರಬೇಕು.
-ರೈಟರ್ ಶಿವರಾಂ

  • ಲೇಖನ
~.~
  • ritershivaram ರವರ ಬ್ಲಾಗ್
  • Login or register to post comments
  • 388 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 28, 2007 - 11:53pm — hamsanandi

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

hamsanandi's picture

Quote:

ಸೂರ್ಯ ಎಂಬ ಪದವನ್ನೇ ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ. ಏಕೆನ್ನುತ್ತೀರಾ- ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ್ಷರವನ್ನು ಅರೆ ಉಚ್ಛರಿಸುತ್ತೇವೆ ಅದಕ್ಕಾಗಿಯೆ ಅರ್ಕಾವೊತ್ತಲ್ಲವೇ...

ಈ ತರ್ಕವನ್ನು ನಾವು ಉಪಯೋಗಿಸುವುದು ಅಷ್ಟೇನೂ ಸರಿಯಲ್ಲ ಅನ್ನಿಸುತ್ತೆ - ರೂಢಿಯಲ್ಲಿ ನೀವು ಹೇಳಿದ್ದು ಸರಿಯೇ. ಆದರೆ, ಕನ್ನಡ ಒತ್ತಕ್ಷರಗಳಲ್ಲಿ ಈ ರೀತಿ ಬರೆಯುವುದೂ ಸಹಜವೇ.

ಉದಾಹರಣೆಗೆ, ಅಷ್ಟು ಎಂಬ ಪದವನ್ನು ನೋಡಿ. ನಾವು ಪೂರ್ತಿಯಾಗಿ ಹೇಳುವುದು ಟು ಎಂದು, ಆದರೆ, ಟ ಕಾರವು ಚಿಕ್ಕದಾಗಿ ಕೆಳಗಿರುತ್ತದೆ. ಅರೆಯಾಗಿ ಉಚ್ಚರಿಸುವ ಷ ಕಾರವೇ ಮೇಲೆ ಇರುತ್ತೆ. ಅಲ್ಲವೆ?

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 30, 2007 - 1:16am — ವೈಭವ

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

ವೈಭವ's picture

ಡಿ.ಎನ್, ಶಂಕರಬಟ್ಟರು 'ಸೂರ್‍ಯ'( 'ರ' ಕ್ಕೆ 'ಯ' ಒತ್ತು) ಪದವೇ ಸರಿ, 'ಸೂರ್ಯ' ತಪ್ಪು ಎಂದು ಹೇಳುತ್ತಾರೆ.
ಕನ್ನಡದ ಒತ್ತಕ್ಕರಗಳಲ್ಲಿ ಮೊದಲ ಅಕ್ಕರವನ್ನು ತೀರ(ಪೂರ) ಬರೆದು ಒತ್ತಕ್ಕರವನ್ನು ಅರೆ ಬರೆಯಬೇಕು. ಇದು ಕನ್ನಡದ ಸೊಗಡು.

----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 30, 2007 - 8:58am — mahesha

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

mahesha's picture

ವೈಬವ...

ಕನ್ನಡದಲ್ಲಿ ರಕ್ಕೆ ಯವೊತ್ತು ಇರುವ ಒರೆಗಳೇ ಇಲ್ಲ... ಆದ್ರೆ ಅರೆಕವೊತ್ತು ಬೇಕು.. ಅದು ನಮ್ಮ ಕನ್ನಡವನ್ನು ಸರಳಗೊಳಿಸಿದೆ, ಸಕ್ಕದ ಕನ್ನಡ ಎರಡು ಬಲ್ಲವರಿಗೆ ಬಲು ಸುಲಬವಾಗಿಸಿದೆ.

ಗಮನಿಸಿರಿ..
ಸೂರ್ಯ, ಕಾರ್ಯ, ಭಾರ್‍ಯ ಮುಂತಾದವು ಸಕ್ಕದದವೇ...

ಸರಿಯಾಗಿ ಕನ್ನಡದಲ್ಲಿ ಇಂತವನ್ನು ಬರೆವುದಿಂದ್ರೆ.. ಸೂರಿಯ, ಕಾರಿಯ ಇದೇ!! ಆದ್ರೆ ನಮ್ಮ ಸಕ್ಕದವನ್ನು ಎಕ್ಕಮಕ್ಕ ಬಳಸೋರು ಇದನ್ನು ನಿಕ್ಕುವ ಒಪ್ಪಲ್ಲ...

ಅದಿರಲಿ... ಮೊದಲ ಬರಹದಲ್ಲೇ ಹಲವು ಸಂಗತಿಗಳು ಸರಿಯಿಲ್ಲ. ಹಲವು ತಿಳಿಯಾಗಿ ಓಸುಗರಗಳೊಡ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 30, 2007 - 10:32pm — ವೈಭವ

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

ವೈಭವ's picture

ಅಣ್ಣ ,
ಈ ಅರಕ ವತ್ತಿಂದಲೆ ಕನ್ನಡದ ಸೊಗಡು ಹಾಳಾಗಿದೆ. ಈ ಅರಕ ವತ್ತಿಂದ ನಾವು ಸಕ್ಕದ ಪದಗಳನ್ನು ಸಕ್ಕದದಲ್ಲಿ ಹೇಗೆ ಬರೆಯುತ್ತಾರೋ ಹಾಗೆ ಬರೆಯಬೇಕೆಂಬ ಬೇಡದೆ ಇರುವ ಕಟ್ಟಳೆ ಹಾಕಿಕೊಂಡಿರುವುದರಿಂದ ಆಗಿರುವುದು.

ನನಗೆ ಗೊತ್ತು ರ ಕ್ಕೆ ಯ ವತ್ತು ಇರುವ ಅಚ್ಚಕನ್ನಡ ಪದಗಳು ಇಲ್ಲ, ಇರುವುದು ಇಲ್ಲ. ಆದರೆ ನಾವು ಇಲ್ಲಿ ಮಾತಾಡುತ್ತಿರುವುದು ಸಕ್ಕದದ ಒರೆಗಳನ್ನು ಕನ್ನಡದಲ್ಲಿ ಬರೆಯುವಾಗ ಹೇಗೆ ಬರೆಯಬೇಕು ಎಂಬುದರ ಬಗ್ಗೆ. Smiling

ಸೂರ್ ಯ ಎಂದು ಬಿಡಿಸು ಬರೆಯುವುದಕ್ಕೆ ನನ್ನ ಬೆಂಬಲವೂ ಇದೆ. 'ಕನ್ನಡ ಬಾವುಟ' ಎಂಬ ಹೊತ್ತಗೆಯಲ್ಲಿ ಈ ಮೊಗಸು ಮಾಡಲಾಗಿದೆ.

----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 1, 2007 - 2:41am — anivaasi

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

anivaasi's picture

ನನಗೆ ನಿಮ್ಮಗಳಷ್ಟು ನುಡಿಯ ಬಗ್ಗೆ ತಿಳಿದಿಲ್ಲ. ಆದರೂ ಇಲ್ಲಿ ಹೇಳುವ ಧೈರ್ಯ ಮಾಡ್ತಾ ಇದ್ದೀನಿ! Smiling

ಇಂಗ್ಲೀಷಲ್ಲಿ ಕೆಲವು ಪದಗಳ ಸ್ಪೆಲ್ಲಿಂಗನ್ನು ಆ ಪದಗಳ ಮೂಲ ನೆನಪುಳಿಯಲು ಅಥವಾ ಆ ಪದ ಆಮದು ಎಂದು ಮರೆಯದಿರಲು ಬೇರೆಯಾಗಿ ಹೇಳುವುದುಂಟು.
ಉದಾ : phone, photo, graph - ಇಲ್ಲಿ ph - ಫ ಸದ್ದಿನ ಸ್ಪೆಲ್ಲಿಂಗ್ - ಅದು ಗ್ರೀಕ್ ಮೂಲದ ಪದ ಎಂದು ಸೂಚಿಸಲು. ಗ್ರೀಕರು fone ಎಂದೇ ಬರೆಯುತ್ತಾರಂತೆ!!

ಈ ವಿಧಾನ ಸರಿ/ತಪ್ಪು ಅನ್ನುವುದಕ್ಕಿಂತ ಗಮನಸಿಬಹುದಾದ ಮಾತು ಎಂದು ಇಲ್ಲಿ ಹೇಳಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 1, 2007 - 3:52am — ವೈಭವ

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

ವೈಭವ's picture

ಆದರೆ ಅದು ಎಲ್ಲ ಕಡೆ ಹಾಗೆ ಇಲ್ಲ

ಉದಾ kannada ನ canarese ಮಾಡಿದ್ದಾರೆ
bengalooru ನ bangalore ಮಾಡಿದ್ದಾರೆ.

ಇಂಗಲೀಸರು ಅವರು ಉಲಿಯಲು ಸಲೀಸಾಗಲು ಆವರು ಮಾಡಿಕೊಂಡಿದ್ದಾರೆ. ಇದಕ್ಕೆ ಹೊರತಾಗೆಇ ಕೆಲವು 'ph' ಗಳು ಇರಬೌದು

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 1, 2007 - 9:03am — mahesha

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

mahesha's picture

ಅನಿವಾಸಿಯರೇ...

ನಾವು ಹಾಗೇ ಮಾಡಬೇಕೆಂದಿಲ್ಲ.. ನಮ್ಮ ಕನ್ನಡಕ್ಕೆ ತಕ್ಕಂತೆ ಮಾರ್ಪು ಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 1, 2007 - 9:02am — mahesha

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

mahesha's picture

ತೆಲುಗಲ್ಲಿ ಅರೆಕವತ್ತಿಲ್ಲ...

ಸೂರ್‍ಯ ಇದನ್ನು ಸೂರಕ್ಕೆ ಯವೊತ್ತು ಕೊಡೊದು.

ರ್‍ಯ(ನ್ಯ ತೆರ) ಇದು ಯಾಕೆ ಯುನಿಕೋಡಲ್ಲಿ ಸರಿಯಾಗಿ ಮೂಡಲ್ಲ? ಅದು ಗೊತ್ತಿಲ್ಲ.

ಇರಲಿ ಬಿಡಿ...

ನಾವು ಸೂರಿಯ ಅಂತ ಬರೆಯೋಣ Smiling...

ಹಿಂದಿಯವರೇ ಸೂರ್ಯ => ಸೂರಜ್ ಮಾಡವ್ರೆ.... Smiling, ನಾವು ಕನ್ನಡದೊರು ಬಲು ಮಡಿ..!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 1, 2007 - 9:02am — mahesha

ಉ: ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..

mahesha's picture

ತೆಲುಗಲ್ಲಿ ಅರೆಕವತ್ತಿಲ್ಲ...

ಸೂರ್‍ಯ ಇದನ್ನು ಸೂರಕ್ಕೆ ಯವೊತ್ತು ಕೊಡೊದು.

ರ್‍ಯ(ನ್ಯ ತೆರ) ಇದು ಯಾಕೆ ಯುನಿಕೋಡಲ್ಲಿ ಸರಿಯಾಗಿ ಮೂಡಲ್ಲ? ಅದು ಗೊತ್ತಿಲ್ಲ.

ಇರಲಿ ಬಿಡಿ...

ನಾವು ಸೂರಿಯ ಅಂತ ಬರೆಯೋಣ Smiling...

ಹಿಂದಿಯವರೇ ಸೂರ್ಯ => ಸೂರಜ್ ಮಾಡವ್ರೆ.... Smiling, ನಾವು ಕನ್ನಡದೊರು ಬಲು ಮಡಿ..!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತ್ರ ಬರೆಯುವ ಬಗೆ
  • ಬೊಮ್ಮನಹಳ್ಳಿ, ಹೆಸರ್ಹಿಟ್ಟು, ಹೆಣ್ಹೆತ್ತ, ಬಂದ್ ಹೋಗು, ಸಿಮ್ಹ(ಸಿಂಹ) ಇವೆಲ್ಲ ತಪ್ಪು ಪದಗಳು ಅಲ್ಲವೆ?
  • ಇ-ಮೇಲ್ ಬಗ್ಗೆ
  • ಕನ್ನಡದಲ್ಲಿ ಞ ಮತ್ತು ಙ
  • ಅಸಲಿ ತಂತ್ರಾಂಶ ತಂತ್ರಜ್ಞ
Syndicate content

ಲೇಖಕರು

ritershivaram's picture

ಪೂರ್ಣ ಹೆಸರು
ritershivaram

ಪರಿಚಯ

ನಿವೃತ್ತ ನೌಕರ(Bsnl). ಚಿಂತಕ,ಸಾಹಿತಿ ಮತ್ತು ಕಂಪ್ಯೂಟರ್ ಶಿಕ್ಷಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 10:56pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator