ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ನಮಸ್ಕಾರ ಗೆಳೆಯರೆ,
ಡಿಜಿಟಲ್ ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದಲು ಯತ್ನಿಸಿದ ನನ್ನಂಥವರು ಅದರ ಕಷ್ಟ ಮತ್ತು ನೋವುಗಳನ್ನು ತಿಳಿದಿರುತ್ತಾರೆ. ಪುಸ್ತಕಗಳನ್ನು PDFನಲ್ಲಿ ಓದಲು ಸಹಾಯವಾಗುವಹಾಗೆ, ಮೊದ ಮೊದಲಿಗೆ ಈ ತರಹ ಕಷ್ಟಗಳನ್ನು ಪಟ್ಟ ನಾಡಿಗರು unix scriptನ್ನು ಮತ್ತು ಸುನಿಲ್ ಜಯಪ್ರಕಾಶ್‍ರವರು java ಕ್ರಮವಿಧಿಯನ್ನು ನಿಮ್ಮೊಂದಿಗೆ ಹಂಚಿಕೊಂಡರು. ಅದೇ java ಕ್ರಮವಿಧಿಯನ್ನು ಬಳಸಿ ನಾನೊಂದು ಸಣ್ಣ GUI ಸಲಕರಣವನ್ನು ರಚಿಸಿದ್ದೇನೆ.
BookCreator version 1.0ನ್ನು ಡೌನ್‍ಲೋಡ್ ಮಾಡಿ
ಇದನ್ನು ಉಪಯೋಗಿಸಲು ತಮ್ಮ ಗಣಕಯಂತ್ರದಲ್ಲಿ java(JDK ಅಥವಾ JRE) ಸ್ಥಾಪಿಸಿರಬೇಕು. javaದ ಕೋಶಕ್ಕನುಗುಣವಾಗಿ ನಿಮ್ಮ ಗಣಕಯಂತ್ರದ PATH ಮತ್ತು CLASSPATHಗಳನ್ನು ನಿಯಮಿಸಬೇಕು. ತದನಂತರ, DOS promptನಲ್ಲಿ 'java -jar bookcreator.jar' ಎಂದು ಈ ತಂತ್ರಾಂಶವನ್ನು ಉಳಿಸಿರುವ ಕೋಶದಿಂದ ಮೇಲ್ಕಂಡ ಆಙ್ಞೆಯನ್ನು ಟೈಪಿಸಿಬೇಕು.
ನನಗೆ ತಿಳಿದಿರುವ ಲೋಪದೋಷಗಳು ಹೀಗಿವೆ:
- ಪುಸ್ತಕಗಳನ್ನು ಡೌನ್‍ಲೋಡ್ ಮಾಡುವಾಗ, ಈ ಉಪಕರಣ ಕೆಲವೊಮ್ಮೆ ನಿಮ್ಮ ತೋರು ಉಪಕರಣಕ್ಕೆ ಪ್ರತಿಕ್ರಿಯಿಸುವುದಿಲ್ಲ ಅಥವಾ ತಡವಾಗಿ ಪ್ರತಿಕ್ರಿಯಿಸುತ್ತದೆ.
- firewall ಸ್ಥಾಪಿತವಾಗಿರುವ ಜಾಲದಲ್ಲಿ ಇದು ನಡೆಯುವುದಿಲ್ಲ.
ಈ ಉಪಕರಣವನ್ನು ಉಪಯೋಗಿಸಿ, ನಿಮಗೆ ತಿಳಿದ ದೋಷಗಳನ್ನು ಮತ್ತು ಇತರೆ ಅನಸಿಕೆಗಳನ್ನು ನನಗೆ ತಿಳಿಸಿರಿ.

- Rohith ರವರ ಬ್ಲಾಗ್
- Login or register to post comments
- 1674 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ರೋಹಿತ್, ನನ್ನಿಗಳು, ನೀವು ಬರೆದ GUI ಟೂಲನ್ನು ಬಳಸಿದೆ. ಬಳಸಲು ಸುಲಭವಾಗಿದೆ. ಬಳಸಲು ಕಮ್ಯಾಂಡ್ ಲೈನ್ ಜಾವಾಗಿಂತ ಸುಲಭವಾಗಿದೆ. ನನ್ನ ಇತರ ಗೆಳೆಯರಿಗೂ ಇದನ್ನು ತೋರುವೆ. ಮುಂದೆ ಅಗತ್ಯಬಿದ್ದರೆ ಇನ್ನೂ ಏನನ್ನಾದರೂ functionality ಸೇರಿಸೋಣ.
Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ತುಂಬಾ ಧನ್ಯವಾದಗಳು. ಇನ್ನೂ ಏನಾದರೂ ಕಾರ್ಯಗಳನ್ನು ಸೇರಿಸಲು ನನಗೇನೂ ಅಭ್ಯಂತರವಿಲ್ಲ. ಎರಡನೇ ಆವೃತ್ತಿಯನ್ನು Windows exeಯಾಗಿ ಕೂಡಾ ಹೊರತರಬೇಕೆಂದಿದ್ದೇನೆ. ಈ ಆವೃತ್ತಿಯಲ್ಲೇ ಪ್ರತ್ನಿಸಿದೆ ಆದರೆ ಏಕೋ ಕೈಗೂಡಲಿಲ್ಲ.
Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
Namaskara Rohit..
dayavittu kshamisi.. nanna kannada IME kai kottirodrinda englishanalliyes type maadabekaada paristhiti nanage bandide..
since i dont have internet at home.. i can only check it in office
But since in my office the permission is denied for the above mentioned site i am unable to downlad this tool..
so is there any facility to download this from SAMPADHA.
(Any body can upload this to here and i can get it...)
Dhayavittu enadaru maadi sar.. nanage DLI dhinda pusthakagalanna odabekaagide.. aadare.. download maadlikke aagtha illa...
dhanyavaadagalondige
Vinayak
Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ನಮಸ್ಕಾರ ವಿನಾಯಕ್,
ನಿಮ್ಮ ತೊಂದರೆ ನನಗೆ ಅರ್ಥವಾಗುತ್ತದೆ. ನಿಮಗೆ ಬೇಕಾದ ಪುಸ್ತಕದ ಕೊಂಡಿಯನ್ನು ನನಗೆ ಕಳಿಸಿದರೆ, ಕೈಲಾದಷ್ಟು ಬೇಗ ನನ್ನ ಬ್ಲಾಗ್‍ನಲ್ಲಿ ಅದನ್ನು ಅಪ್‍ಲೋಡ್ ಮಾಡಿ ಕೊಂಡಿಯನ್ನು ಒದಗಿಸುತ್ತೇನೆ. ಬಹುಷ ಆಸಕ್ತರಿಗೆ ಕೆಲವು ಪುಸ್ತಕಗಳನ್ನು ಓದಲು ಇದೊಂದು ಅವಕಾಶ ಒದಗಿಸಬಹುದು.
ದಯವಿಟ್ಟು ಈ ಸಲಕರಣದಲ್ಲಿ ತಿಳಿಸಿದ ಹಾಗೆ ಕೊಂಡಿಯನ್ನು ನನಗೆ ಕಳಿಸಿ, ಏಕೆಂದರೆ, ನಿಮಗೆ ಗೊತ್ತಿರುವ ಹಾಗೆ, DLIನಲ್ಲಿ ಪುಸ್ತಕ ಹುಡುಕುದೆಂದರೆ ಅಸಾಧ್ಯಕ್ಕೆ ಸಮ.
ಉದಾ. ತಮಿಳು ತಲೆಗಳ ನಡುವೆ ಪುಸ್ತಕದ ಕೊಂಡಿ http://dli.iiit.ac.in//server25/data3/upload/SVI_DEC_06/KANNADA/_tamil1u...
ಇದನ್ನು ನಾನು ಪುಸ್ತಕದ Admin Metadata ಕ್ಲಿಕ್ಕಿಸಿ ಆ ಪುಟದ ಕೊನೆಯಲ್ಲಿ Click here ಕೊಂಡಿಯಿಂದ ಪಡೆದೆ. ಆ ಕೊಂಡಿಯ targetನ್ನು ನೋಡಿದರೆ ನಿಮಗೆ ಮೇಲ್ಕಂಡ ಕೊಂಡಿ ಸಿಗುವುದು.
ಉ: Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ರೋಹಿತರವರೆ..
ತುಂಬಾ ವಿಷಾದವಾಗಿ ಅರುಹುತ್ತಿದ್ದೇನೆ, ಏನಾದರೂ ಮಾಡಿ ನನಗೆ ಈ ಸಲಕರಣವನ್ನು ಪಡೆಯಲೇಬೇಕು.
ನೀವು ನನಗೆ ಎರಡು ಬಾರಿ ಕಳಿಸಿದ ಈ-ಮೇಲ್ ನ್ನು ನನ್ನ ಫೈರವಾಲ್ ತಡೆಹಿಡಿಯಿತು.
ಇದನ್ನು ನನ್ನ ಫೈರವಾಲ್ ತಡೆಹಿಡಿಯಲಾರದಂತೆ ಯಾವ ರೀತಿಯಲ್ಲಿ ಪಡೆಯಬಹುದು ಅಂತ ಯಾರಾದರೂ ತಿಳಿಸಿದರೆ ಅಥವಾ ಕಳಿಸಿದರೆ ತುಂಬಾ ಧನ್ಯವಾದ ಅರ್ಪಿಸುವೆ.
ವಿನಾಯಕ.
ಉ: Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ವಿನಾಯಕರವರೆ, ನಾನು ಅಂದೇ ಹೇಳಿದೆ, ನಿಮ್ಮ ಖಾಸಗಿ ವಿ-ವಿಳಾಸ ಕೊಡಿ ಅಂತ.
ನಾನು ಒಂದು ತಿಂಗಳಿಗೆ ತಾಯ್ನಾಡಿಗೆ ಹೋಗುತ್ತಿದ್ದೇನೆ, ನಾನು ನಾಳೆ ಮಾತ್ರ ನಿಮಗೆ ಈ ಸಲಕರಣವನ್ನು ಕಳುಹಿಸಲು ಸಾಧ್ಯ, ನೀವು ನಿಮ್ಮ ಖಾಸಗಿ ವಿ-ವಿಳಾಸ ಕಳುಹಿಸಿರಿ, ತಕ್ಷಣ ಪ್ರತಿಕ್ರಿಯಿಸುತ್ತೇನೆ. ನನ್ನ GMail ವಿಳಾಸಕ್ಕೆ ಕಳಿಸಿ.
ಬಹುಶಃ ಭಾರತದಲ್ಲಿದ್ದಾಗ ಕಳಿಸಲು ಪ್ರಯತ್ನ ಮಾಡಬಹುದು.
ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ಒಳ್ಳೆಯ ಕೆಲಸ, ರೋಹಿತ್.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ಧನ್ಯವಾದಗಳು
Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ನಾನು ತಂತ್ರಾಂಶವನ್ನು ಉಪಯೋಗಿಸಿದೆ. ಒಂದು ಪುಸ್ತಕವನ್ನು ಸಹ ಡೌನ್‍ಲೋಡ್ ಮಾಡಿದೆ. ನಂತರ ಪಿಡಿೆಎಫ್ ಕಡತದ ಗಾತ್ರವನ್ನು ನೋಡಿದಾಗ 42.2 MB (640 ಪುಟ) ಇತ್ತು. 100 ಪುಟ ಪುಸ್ತಕ ಡೌನ್‍ಲೋಡ್ ಮಾಡಲು ಎಷ್ಟು Bandwidth ಉಪಯೋಗಿಸುತ್ತದೆ.
Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ಸತೀಷ್‍ರವರೆ,
ತುಂಬಾ ಸಂತೋಷ, ಈ ತಂತ್ರಾಂಶ ನಿಮಗೆ ಹಿಡಿಸಿತೆಂದು ನಂಬಿದ್ದೇನೆ.
ನನಗೆ ತಿಳಿದ ಮಟ್ಟಿಗೆ bandwidth ಮತ್ತು ಕಡತದ ಗಾತ್ರಕ್ಕೂ ನೇರವಾದ ಸಂಬಂಧವಿಲ್ಲ.
Bandwidth ಏನೇ ಆದರೂ, ನಿಮ್ಮ ಅಂತರ್ಜಾಲ ವೀಕ್ಷಕ ಎಷ್ಟು ಮಟ್ಟಿಗೆ ಅಂತರ್ಜಾಲವನ್ನು ತೋರಲು ಬಳಸುವುದೊ ಅಷ್ಟೇ ಈ ತಂತ್ರಾಂಶವೂ ಕೂಡಾ ಉಪಯೊಗಿಸುತ್ತದೆ.
ನೀವು ಹೇಳಿದ ಹಾಗೆ ಕಡತದ ಗಾತ್ರದ ಮೇಲೆ ಪುಟಗಳ ಸಂಖ್ಯೆ ದೊಡ್ಡ ಪ್ರಮಾಣದ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ನೀವು ಡೌನ್‍ಲೋಡ್ ಮಾಡುವ ಪುಸ್ತಕದ ಪುಟಗಳು ಹೆಚ್ಚು ಗಾತ್ರದ್ದಾಗಿರಬಹುದು (ಹೆಚ್ಚು ಚಿತ್ರಗಳುಳ್ಳ ಬಹುದು) ಅಥವಾ ಕಡಿಮೆ ಗಾತ್ರದ್ದಾಗಿರಬಹುದು (ಅಕ್ಷರಗಳು ಮಾತ್ರ). ಆದ್ದರಿಂದ, ೧೦೦ ಪುಟಗಳಿಗೆ ಎಷ್ಟು ದೊಡ್ಡ ಕಡತವಾಗುತ್ತದೆ ಎಂದು ಹೇಳಲು ಕಷ್ಟಸಾಧ್ಯ.
ಅದೂ ಅಲ್ಲದೆ, ಡಿಜಿಟಲ್ ಲೈಬ್ರರಿಯವರು ಎಷ್ಟು ಗಾತ್ರದ tiff ಕಡತಗಳನ್ನು ತಮ್ಮ ತಾಣದಲ್ಲಿರಿಸಿದ್ದಾರೆ ಎನ್ನುವುದರ ಮೇಲೆ ಆಧಾರಿತವಾಗಿರುತ್ತದೆ.
Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ರೋಹಿತ್ ಅವರೆ,
ನಾನು ಒ೦ದು ಪುಸ್ತಕ ಉಳಿಸಲು ಪ್ರಯತಿನಿಸಿದೆ, ಆದರೆ ನನಗೆ Command line ನಲ್ಲಿ ಈ ಕೆಳಕ೦ಡ ಸ೦ದೇಶ ಬರುತ್ತಿದೆ, ಇದರ ಕಾರಣ ನಿಮಗೆ ತಿಳಿದರೆ ದಯವಿಟ್ಟು ತಿಳಿಸಿ.
Exception in C:\Documents and Settings\sampath\My Documents\My eBooks/00002346.t
if Bad endianness tag (not 0x4949 or 0x4d4d).
ವ೦ದನೆಗಳು
Re: ಉ: if Bad endianness tag (not 0x4949 or 0x4d4d)
ನಮಸ್ಕಾರ ಸಂಪತ್‍ರವರೆ (ನಿಮ್ಮ windows documents path ನೋಡಿ ಊಹಿಸುತ್ತಿರುವೆ),
ನೀವು ಉಳಿಸಲು ಪ್ರಯತ್ನಿಸಿದ ಪುಸ್ತಕದ ಪುಟಗಳಲ್ಲಿ ಒಂದು tiff ಕಡತ (2346ನೇ ಪುಟ) ಸರಿಯಾಗಿ scan ಮಾಡಲ್ಪಟ್ಟಿಲ್ಲ ಅಥವಾ ಉಳಿಸಲ್ಪಟ್ಟಿಲ್ಲ, ಆದ್ದರಿಂದ ನಿಮಗೆ ಈ ಲೋಪಸಂದೇಷ ಕಾಣುತ್ತಿದೆ. ಇದಕ್ಕೆ ಕಾರಣ tiff ಕಡತದ ಮಾಹಿತಿಯಲ್ಲಿರುವ ತಪ್ಪು ಅಂಕಿಗಳು, ಸ್ಪಷ್ಟೀಕರಣ ಇಲ್ಲಿದೆ. ನಿಮಗೆ ಈ Endianness ಬಗ್ಗೆ ಆಸಕ್ತಿ ಇದ್ದಲ್ಲಿ, ಈ ಪುಟಗಳನ್ನು ಓದಿ: ವಿಕಿಪೀಡಿಯ ಅಥವಾ ನೆಟ್ರಿನೊ.
ನನಗನ್ನಿಸಿದ ಮಟ್ಟಿಗೆ ಡಿಜಿಟಲ್ ಲೈಬ್ರರಿಯವರು tiif ಕಡತಗಳನ್ನು ಸರಿಯಾಗಿ ಉಳಿಸಿಲ್ಲ, ಆದ್ದರಿಂದ ಅದನ್ನು ಬಳಸಲು ಪ್ರಯತ್ನಿಸಿದಾಗ ಈ ಸಂದೇಷ ಕಾಣುತ್ತದೆ.
ಉ: Re: ಉ: if Bad endianness tag (not 0x4949 or 0x4d4d)
ನಮಸ್ಕಾರ ರೋಹಿತ್..,
ತುಂಬಾ ಒಳ್ಳೆಯ ಪ್ರಯತ್ನ..ನಾನು ಡೌನ್ಲೋಡ್ ಮಾಡಿದ್ದೇನೆ ಆದರೆ ಈ ಕೆಳಗಿನ ಎರ್ರರ್ ಬರ್ತ ಇದೆ ..ದಯವಿಟ್ಟು ಏನು ಮಾಡಬಹುದೆಂದು ತಿಳಿಸಿ.
C:\>java -jar bookcreator.jar(ZipFile.java:138)(JarFile.java:146)(JarFile.java:84)
Exception in thread "main" java.util.zip.ZipException: The filename, directory n
ame, or volume label syntax is incorrect bookcreator.jar;.;C:\Program Files\IBM\
Java141\jre\lib\ext\QTJava.zip
at java.util.zip.ZipFile.open(Native Method)
at java.util.zip.ZipFile.
at java.util.jar.JarFile.
at java.util.jar.JarFile.
at com.simontuffs.onejar.Boot.run(Boot.java:179)
at com.simontuffs.onejar.Boot.main(Boot.java:105)
ಬದುಕಲಿ ದ್ವಂದ್ವ ಎಂದು ಕೈ ಬಿಡದು,
ಮನಕ್ಕೆ ತರ್ಕ ರುಚಿಸಲಿಲ್ಲ,
ಬದುಕು ಭಾವನೆಗೆ ಬಗ್ಗಲಿಲ್ಲ...
ಉ: Re: ಉ: if Bad endianness tag (not 0x4949 or 0x4d4d)
ನಮಸ್ಕಾರ ಅಭಿಮಾನಿ,
ಧನ್ಯವಾದಗಳು, ನನ್ನ ಅಳಿಲು ಸೇವೆಗೂ ಅಭಿಮಾನಿಗಳಿದ್ದಾರೆಂದರೆ ನಂಬಲು ಅಸಾಧ್ಯ!
.
ನನಗೆ ತಿಳಿದ ಮಟ್ಟಿಗೆ, ಈ ತರಹದ error ಬರಲು ಒಂದು ಕಾರಣ ನೀವು download ಮಾಡಿದ ಕಡತ ಬಹುಶಃ ಸರಿಯಾಗಿಲ್ಲದಿರಬಹುದು. ಇನ್ನೊಮ್ಮೆ download ಮಾಡಿ ಪ್ರಯತ್ನಿಸಿ. ಅಲ್ಲಿಗೂ ಸರಿಹೋಗದಿದ್ದಲ್ಲಿ, ನಿಮ್ಮ java ಸರಿಯಾಗಿ ಸ್ಥಾಪಿತವಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ತದನಂತರ ಪ್ರಯತ್ನಿಸಿ.
Re: command prompt ನಲ್ಲಿ Exception
ಸಂಪತ್ ಅವರೇ, ಬಹಳ ಮಾಡಿ ನೀವು URL ಸರಿಯಾಗಿ ಕೊಟ್ಟಿರಲಿಕ್ಕಿಲ್ಲ. ತಪ್ಪು URL ಗೆ ನನಗೆ ಅದೇ exception ಕಾಣಿಸಿಕೊಂಡಿದ್ದು. ರೋಹಿತ್ ಅವರು ಕೊಟ್ಟಿರುವ ಮಾದರಿ URL ಇದೆಯಲ್ಲಾ, ಅದೇ ರೀತಿಯಲ್ಲಿ ಕೊಡಿ. ಕೆಲಸವಾಗುತ್ತೆ.
good work ರೋಹಿತ್ ಅವರೇ.
http://dli.iiit.ac.in//server25/data3/upload/SVI_DEC_06/KANNADA/_tamil1u...
Re: command prompt ನಲ್ಲಿ Exception
ಸಂಗನಗೌಡರಿಗೆ ನನ್ನ ಧನ್ಯವಾದಗಳು
ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
MNS Rao
ನಿಮ್ಮ ಸಲಕರಣೆ ಪುಸ್ತಕ ಪ್ರಿಯರಿಗೆ ತುಂಬ ಉಪಯುಕ್ತ. ಪುಸ್ತಕಗಳನ್ನು ಇಳಿಸಿಕೊಳ್ಳಲು ಉಪಯೋಗಿಸಬೇಕಾದ ಕೊಂಡಿಗಳ ಬಗ್ಗೆ ನಿಖರವಾದ ಮಾಹಿತಿ ಬೇಕಾಗಿದೆ. Interface 1 , Interface 2 (beta), Admin Metadata(ಇದರಲ್ಲಿ ’ಇಲ್ಲಿ ಕ್ಲಿಕ್ಕಿಸಿ’ ಎಂದು ಎರಡು ಕಡೆ ಇದೆ). Ran'gand-nd-ana Kanasina Dinagal'u ಅನ್ನು ಹೈದರಾಬಾದ್ ತಾಣದಿಂದ ಇಳಿಸಿಕೊಳ್ಳಲು ಯಾವ ಕೊಂಡಿಯಿಂದಲೂ ಆಗಲಿಲ್ಲ.
ನಾನು ಅಷ್ಟೊಂದು ಅಂತರ್ಜಾಲ ಪರಿಣತನಲ್ಲ.
ಕಷ್ತ್ಟಕೊಟ್ಟಿದ್ದಕ್ಕೆ ಮನ್ನಿಸಿ.
ಎಂ.ಎನ್.ಸತ್ಯನಾರಾಯಣ ರಾವ್
ಉ:
ನಮಸ್ಕಾರ ರಾವ್‍ರವರೆ,
ನಿಖರವಾದ ಮಾಹಿತಿ ತಂತ್ರಾಂಶದ "ಸಹಾಯ" ಪುಟಗಳಲ್ಲಿ ಬರೆಯದೆ ಅದನ್ನು ಲಭ್ಯವಾಗಿಸಿರುವುದಕ್ಕೆ ನನ್ನನ್ನು ಕ್ಷಮಿಸಿ. ಹೈದರಾಬಾದಿನ ತಾಣದಲ್ಲಿ ನೀವು ಹೇಳಿದ ಪುಸ್ತಕ ನೋಡಿದೆ, ಅದಕ್ಕೆ ಎರಡು ಕೊಂಡಿಗಳೇನೊ ದೊರೆತವು, ಆದರೆ ಎರಡೂ ಸರಿಯಿಲ್ಲ. ಇಲ್ಲಿ ನಾನು Admin Metadataದಿಂದ ಪಡೆದಿರುವ ಮಾಹಿತಿ ಕೊಡುತ್ತಿದ್ದೇನೆ: http://dli.iiit.ac.in//server25/data2/upload/TIL/TIL_OU_MAR_06_HDD_0017/... ಇದು ೩೪೯ ಹಾಳೆಗಳಿರುವ ಪುಸ್ತಕಕ್ಕೆ ಕೊಂಡಿ.
ಪುಸ್ತಕ ಹುಡುಕಿದಾಗ ನಿಮಗೆ ಮತ್ತೊಂದು ಕೊಂಡಿಯೂ (೩೩೯ ಪುಟಗಳ ಪುಸ್ತಕ) ಸಿಗಬಹುದು, ಅದು ಈಗ ಕೆಲಸ ಮಾಡುತ್ತಿಲ್ಲ.
ಸಧ್ಯಕ್ಕೆ ಎರಡೂ ಕೊಂಡಿಗಳು ಸರಿಯಿಲ್ಲ. ಕೆಲವು ದಿನಗಳ ನಂತರ ಪ್ರಯತ್ನ ಮಾಡಿದರೆ ಬಹುಶಃ ಕೈಗೂಡಬಹುದು.
ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ರೋಹಿತ್,
ಈ ಉಪಕರಣದ ಬಗ್ಗೆ ಇವತ್ತು ತಾನೆ ತಿಳಿಯಿತು. ಇದಕ್ಕಾಗಿ ನನ್ನಿಗಳು. ಆದರೆ URL ಕೊಡುವುದು ಹೇಗೆ ಅ೦ತ ಗೊ೦ದಲ ಆಗ್ತಾ ಇದೆ. ಉದಾಹರಣೆಗೆ "ತಮಿಳು ತಲೆಗಳ ನಡುವೆ" ಪುಸ್ತಕ download ಮಾಡಲು ಈ ಕೆಳಗಿನ URL ಬಳಸಿದೆ.
http://dli.iiit.ac.in/cgi-bin/Browse/scripts/use_scripts/advnew/metainfo...
೩೦ ನಿಮಿಷಗಳದರೂ downloading ಅ೦ತ ತೋರಿಸ್ತಾನೆ ಇತ್ತು. ಆದರೆ hang ಆಗಿರಲಿಲ್ಲ. ಸಹಾಯವನ್ನು ನೋಡಿದಾಗ, "URL ending with PTIFF" ಅ೦ತ ಇದೆ. ಅದನ್ನು ಹ್ಯಾಗೆ ಕೊಡಬೇಕು ಅ೦ತ ಗೊತ್ತಾಗ್ತ ಇಲ್ಲ. ದಯವಿಟ್ಟು ಹೇಳ್ತಿರಾ?
ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ಶ್ರೀನಿವಾಸರವರೆ,
ಈ ಉಪಕರಣ ಇನ್ನೂ ಮೊದಲನೇಯ ಆವೃತ್ತುಯಲ್ಲಿರುವುದರಿಂದ ಇದರ ಸಹಾಯ ಪುಟಗಳು ಸ್ಪಷ್ಟವಾಗಿ ವಿವರಗಳನ್ನು ನೀಡುತ್ತಿಲ್ಲ, ಕ್ಷಮಿಸಿ. ನೀವು ಮೇಲೆ ನೀಡಿರುವ ಕೊಂಡಿಯವರೆಗೆ ಹೊದ ಮೇಲೆ, ಅಲ್ಲಿರುವ Admin Metadata ಕೊಂಡಿಯನ್ನು ಕ್ಲಿಕ್ಕಿಸಿ, ಕಂಡುಬರುವ ಪುಟದಲ್ಲಿ ನಿಮಗೆ Table of Contents ಎದುರಿಗಿರುವ Click here ಅನ್ನುವ ಕೊಂಡಿಯ ಮೇಲೆ right click ಮಾಡಿ, copy shortcut ಮಾಡಿ. ತದನಂತರ, ಹೀಗೆ ಪಡೆದಿರುವ ದತ್ತವನ್ನು notepadನಲ್ಲೊ ಅಥವ ಬೇರೆ ಯಾವುದಾದ್ರು ತಂತ್ರಾಶದಲ್ಲಿ ಇರಿಸಿ, ಅಲ್ಲಿ ಕಂಡುಬರುವ ಕೊಂಡಿಯಲ್ಲಿ target= ಮತ್ತು structure.xml ನಡುವೆ ಇರುವ ಮಾಹಿತಿಯನ್ನು BookCreatorನಲ್ಲಿ ನೀಡಿ.
ಉದಾ:
ಅಸಲಿ ಕೊಂಡಿ ಹೀಗಿರುತ್ತದೆ (copy shortcut ನಂತರ):
http://dli.iiit.ac.in/cgi-bin/Browse/scripts/use_scripts/advnew/aui/STRUCTURALMETA/showStructure.cgi?target=http://dli.iiit.ac.in//server25/data3/upload/SVI_DEC_06/KANNADA/_tamil1u_talegal1a_gad1uve_/structure.xml&format=tif&bookpath=/server25/data3/upload/SVI_DEC_06/KANNADA/_tamil1u_talegal1a_gad1uve_&first=1&last=172&barcode=5010010051160´
ನಮಗೆ ಬೇಕಾದ ಮಾಹಿತಿ: http://dli.iiit.ac.in//server25/data3/upload/SVI_DEC_06/KANNADA/_tamil1u...
ಇದಕ್ಕೆ ನಿಮಗೆ ಸುಲಭವಾದಲ್ಲಿ ಕೊನೆಗೆ PTIFF ಸೇರಿಸಬಹುದು, (ಇಲ್ಲದಿದ್ದರೂ ಸರಿ)
ಹೀಗೆ: http://dli.iiit.ac.in//server25/data3/upload/SVI_DEC_06/KANNADA/_tamil1u...
download ಮಾಡಿ, ಸಾಹಿತ್ಯ ಸವಿಯಿರಿ
ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
Download ಆತು! ಎಷ್ಟು ಸರಳ ಐತಲ್ರಿ ಸರ್...
ಭಾಳ ಭಾಳ thanks ರಿಪಾ...
ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ
ಚೊಲೊ ಆತ್ ಬಿಡ್ರಿ
ನಿಮಗ ಸಹಾಯ ಆತಲ್ಲ, ಅದೇ ಸಂತೋಷ.