ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

roopablrao ರವರ ಬ್ಲಾಗ್

ಮಾತು ಮೌನವಾದಾಗ-ಮೌನ ಮಾತಾದಾಗ-ಮೌನ ಮೌನವಾದಾಗ

 ಮೌನ ನಗುತ್ತದೆ .


ಈಗ ಹೇಳು ನೀ ಹೇಳಿದ್ದೆಲ್ಲಾ ಸತ್ಯವೇ?. ನೀನೆಂದು ತೋರಿಸಿಕೊಳ್ಳುತ್ತಿರುವ ಆ ನೀನು ನೀನೇನಾ?. ನಿನ್ನೊಳಗಿನ ಮಾತುಗಳ ಅರ್ಥವನ್ನು ಹೇಳಿದೆ ಎಂದುಕೊಂಡೆ . ನಿಜ ಹೇಳಿದೆಯಾ?


ಮೌನ ಹಾಡುತ್ತದೆ


ನಾನಿರದಿದ್ದಾಗ ನೀ ನುಡಿದಿದ್ದು ನಾ ಕೇಳಲಿಲ್ಲವೇ? ನಿನ್ನೊಳಗಿನ ತುಮುಲ ಹೊರಬರಲೆಂದು ಚಡಪಡಿಸಿ ಇರುವಿಕೆ ಸಾರ ಹೊರಟಿದ್ದು ನಾ ಅರಿಯಲಿಲ್ಲವೇ?  ಬದುಕಲ್ಲಿ ಏನೋ ಇದೆ ಎಂದು ಅರಿವಾಗುವ ವೇಳೆಗೆ ಬೆನ್ನು ತಿರುಗಿಸಿದ್ದು ಏಕೆ?  ನಿನ್ನಾತ್ಮಕ್ಕೆ  ಎದುರಾಗಿ ಮಾತಾಡಿ , ಈಗ ಖೇದವೇಕೆ


ಮೌನ ಮಾತಾಗುತ್ತದೆ


ಯಾವುದೋ ನೆನಪಲ್ಲಿ ಕಣ್ಣ್ ಹನಿ ಯಾಗಿದ್ದು ಏಕೆ? ಯಾರ ನೆನೆಸಿ ಮತ್ತಾರ ಮುಂದೆಯೋ ಬಯಲಾಗುವ ಈ ಪರಿ ಏಕೆ?  ಮತ್ತಾವುದೋ ನೆನಪಲ್ಲಿ ತುಟಿ ಅರಳಿದ್ದೇಕೆ? ನನ್ನಿರಿವಿಕೆಯಲ್ಲಿ ನಿನ್ನ ಮನದಿ ತುಂಬಿರುವ ಆ ನೂರು ನೆನಪುಗಳು ನಿನ್ನೆದೆಗೆ ಧಾಳಿ ಇಡುತ್ತಿದೆಯೇ?ನೂರು ನೆನಪುಗಳ ತಂದುಕೊಡವ ನಾ ಬಳಿಯಲ್ಲಿ ಇರಲು ಒಲ್ಲೆಯೇಕೆ ನೀ?  ಮುಂದೆ ಓದಿ »

ಈ ಬರ್ತ್ ಡೇ ಗಿಫ್ಟ್ ಕೊಡೋಕೆ ಆಗತ್ತಾ ಮಮ್ಮಾ?

"ಅಮ್ಮಾ ನಿನ್ನನ್ನ ಅಮ್ಮಾ ಅಂತ ಕರೆದ್ರೆ ಬೈತೀಯಾ ಮತ್ತೆ ಏನಂತ ಕರೆದ್ರೆ ನಿಂಗೆ ಖುಶಿ ಆಗುತ್ತೆ. ಹಾ ಮಮ್ಮ ಅಂತ ಕರೆದ್ರೆ ಅಲ್ವಾ? ಸರಿ ಮಮ್ಮಾ ನೆನ್ನೆ ನೀನು ನನ್ನ ಹತ್ರ "ವಿನು ನೆನ್ನೆ ನೀನು ಹುಟ್ಟಿ ನಾಳೆಗೆ ೩ ಯಿಯರ್ಸ್ ಆಗುತ್ತೆ ನಿಂಗೇನು ಬೇಕು ಪುಟ್ಟಾ ಅಂತ ಕೇಳಿದೆಯಲ್ಲಾ . ಮಮ್ಮ ನಂಗೆ ಐಸ್ ಕ್ರೀಮ್ ಬೇಡಾ ಚಾಕ್ಲೇಟ್ ಬೇಡಾ, ಡಾಲ್ಸ್ ಬೇಡಾ. ನಂಗೆ ನೀವಿಬ್ರೂ ಬೇಕು ಅಂತಾ ಹೇಳಿಬಿಡೋಣ ಅನ್ನಿಸ್ತು . ಆದರೆ ನಿಂಗೆ ಬೇಜಾರಾಗುತ್ತೆ ಅಂತಾ ನಾನೇನೂ ಹೇಳಲಿಲ್ಲ ಮಮ್ಮಾ. ಇನ್ನೂ ನಂಗೇನೇನೋ ಅನ್ನಿಸ್ತಾ ಇದೆ ಎಲಾ ಹೇಳಿ ಬಿಡ್ತೀನಿ ಅಳ್ತಾನೆ . ಅರ್ಥ ಆದರೆ ಮಾಡಿಕೋ ಇಲ್ಲಾಂದ್ರೆ ಯಾವಾಗಲೂ ಮಾಡೋ ಹಾಗೆ ಆ ಕೆಲ್ಸದ ನ್ಯಾನಿ ಹತ್ರ ಕೊಟ್ಟು ಕಳಿಸಿಬಿಡು ನನ್ನನ್ನ.

ಮಮ್ಮಾ ನಾನು ಹುಟ್ಟಿದಾಗ ಸುತ್ತಾ ಮುತ್ತಾ ನೋಡಿದೆ ಬಿಳಿ ಬಟ್ಟೇ ಹಾಕೊಂಡಿದ್ದವರಿಬ್ಬರೂ ನನ್ನನ್ನ ಎತ್ತಿ ನೋಡಿ ಮೇಲ್ ಬೇಬಿ ಅಂದರು. ನಂಗೆ ಅವರ ಮಾತು ಬೇಕಿರಲಿಲ್ಲ . ನಂಗೆ ನೀನು ಬೇಕಿತ್ತು. ಆದರೆ ನಿಂಗೆ ಸಿಸೇರಿಯನ್ ಮಾಡಿಬಿಟ್ಟಿದ್ರಲ್ಲಾ ಹಾಗಾಗಿ ನನ್ನನ್ನ ದೂರಾನೇ ಇಟ್ಟುಬಿಟ್ರು.  ಮುಂದೆ ಓದಿ »

ಆ ಹುಡುಗ ಹುಡುಗಿ

ಆ ಹುಡುಗ ಒಳ್ಳೆ ಸ್ಮಾರ್ಟ್ ಆದವ . ಆಗಿನಿಂದ ಹುಡುಕುತ್ತಲೇ ಇದ್ದ.


ಅವಳೂ ಅಷ್ಟೇ ಚಂದದ ಮುದ್ದಿನ ಬೆಡಗಿ . ಕಾಯುತ್ತಲೇ ಇದ್ದಳು.


ಇಬ್ಬರೂ ಜನುಮದ ಜೋಡಿಯಲ್ಲಿನ ಜೋಡಿಗಳು ಸಂತೆಯಲ್ಲಿ ಹುಡುಕುತ್ತಾ ಅಲೆಯುತ್ತಿದ್ದಂತೆ ಫೋರಮ್ ನಲ್ಲಿ ಅಲೆಯುತ್ತಿದ್ದರು


ಅವನಿಗೋ ನೋಡಲೇ ಬೇಕೆಂಬ ತವಕ . ಅವಳಿಗೋ ನೆನೆಸಿಕೊಂಡರೇ ಮೈ ಪುಳಕ . ಒಟ್ಟಿನಲ್ಲಿ  ಇಬ್ಬರ ಮನಸು ಮಂಗನಂತಾಗಿತ್ತು


ಅಲ್ಲಲ್ಲಿ ಹಾರುತ್ತಾ  ಅಲ್ಲಿ ಇಲ್ಲಿ ಹೋಗುತ್ತಾ  ಜೊತೆಗಿದ್ದ ಹೆತ್ತವರ ಕಣ್ಣು ತಪ್ಪಿಸುವ ಹುನ್ನಾರ ಬೇರೆ. ಎಲ್ಲಿ ನೋಡಿಬಿಟ್ಟಾರೋ  ಎಂಬ ಭಯ . ಬೇಡ ಎನ್ನುತ್ತ್ತಾರೇನೋ ಎಂಬ ಆತಂಕ ಅವರಿಬ್ಬರ ಕಣ್ಣುಗಳಲ್ಲಿ ಮನೆ ಮಾಡಿತ್ತು.


ಕೊನೆಗೂ


ಅವನ ಕಣ್ಣು ಅಲ್ಲಿ ಹಾಯಿತು. ಅವನು ನೋಡಿಯೇ ಬಿಟ್ಟ


ಅವಳೂ ಅಷ್ಟೆ ಅವಳ ಮನದಾಸೆಯನ್ನು ಇದಿರೇ ಕಂಡೇಬಿಟ್ಟಳು


ಅಪ್ಪನ ದೃಷ್ಟಿ ತಪ್ಪಿಸಿ ಅವಳು ಓಡಿ  ಬಂದಳು


ಅವನೂ ಅಷ್ಟೇ


ಇಬ್ಬರೂ ಎದಿರು ಬದಿರಾದರು


ಇಬ್ಬರ ಕಣ್ಣಲ್ಲೂ ಏನೋ ಆಸೆ  ಮುಂದೆ ಓದಿ »

ಡೀಮ್ಡ್ ವಿವಿ ಅಮಾನ್ಯ ಮಾಡುವುದೇ ಇದ್ದಾಗ ಮಾನ್ಯತೆ ನೀಡಿದ್ದೇಕೆ

ಇಂದು  ಡೀಮ್ಡ್ ವಿವಿಗಳನ್ನು  ಅಮಾನ್ಯ ಮಾಡುತ್ತಿದ್ದಾರೆಂಬ ವಿಷಯ ತಿಳಿದ ಕೂಡಲೆ  ನನ್ನ ವಿದ್ಯಾರ್ಥಿಗಳಿಂದ ಕರೆಗಳ ಸುರಿಮಳೆ


ಮೇಡಮ್ ನನ್ನ ಡಿಗ್ರೀ ವ್ಯಾಲಿಡಿಟಿ ಇದೆಯಾ? ನನಗೆ ಈ ಸರ್ಟಿಫಿಕೇಟ್ಸ್‍ನಿಂದ ಕೆಲ್ಸ ಸಿಗುತ್ತಾ . ನನಗೆ ಬೇರೆ ವಿವಿ ಇಂದ ಮಾಡಿಸಿಕೊಡಿ.ಅವರ ಆತಂಕಗಳು ಅನೇಕ.


ಹೀಗೆ ಆಗಿತ್ತು ಅಂದು ಛತ್ತೀಸ್ ಘಡ ಎಂಬ ರಾಜ್ಯವೊಂದು ಅಸ್ತಿತ್ವಕ್ಕೆ ಬಂದುದುನ್ನೆ ಕಾಯುತ್ತಿದ್ದವರಂತೆ ೨೦೦೨ರಲ್ಲಿ


ಖಾಸಗಿ ವಿವಿಗಳು ನಾಯಿಕೊಡೆಗಳಂತೆ ತಲೆ ಎತ್ತಿದವು.  ಕೇವಲ ರಾಜ್ಯ ಸರ್ಕಾರದ ಒಪ್ಪಿಗೆ ಇದ್ದರೆ ಸಾಕು  ಅಂತಹ ವಿವಿ  ಯಾವುದೇ ಕಾಲೇಜಿಗಾಗಲಿ ಅಥವ ಸಂಸ್ಥೆಗಾಗಲಿ ತನ್ನ  ಹೆಸರಿನಲ್ಲಿ ನಡೆಸುವುದಕ್ಕೆ ಪರವಾನಗಿ ಕೊಡುವಂತಹ  ಆಕ್ಟ್(Under Section 5 of the Act the State) ಪ್ರಯೋಜನ ಪಡೆದವು . ಬೀದಿಗೊಂಡು ವಿವಿಗಳು ತಲೆ ಎತ್ತಿದವು. ಒಂದೊಂದರ ಕೋರ್ಸ್ ಗಳು ಅತ್ಯಾಕರ್ಷಕ. ಎಷ್ಟೋ ವಿವಿಗಳು ಹೊರರಾಜ್ಯಕ್ಕೆ ಸ್ಟಡಿ ಸೆಂಟರ್ಸ್ ಕೊಡಲಾರಂಭಿಸಿದವು. ಸಾವಿರಾರು ವಿದ್ಯಾರ್ಥಿಗಳು ಈ ವಿವಿಗೆ ಸೇರಿದರು.  ಮುಂದೆ ಓದಿ »

ಜವಾಬ್ದಾರಿಗಳಿಗೂ ಯಶಸಿಗೂ (ಸಾಧನೆ)ಗೂ ವಿಲೋಮಾನುಪಾತವಿದೆಯೆ?

ಜವಾಬ್ದಾರಿಗಳಿಗೂ   (ಯಶಸು) ಸಾಧನೆಗೂ ವಿಲೋಮಾನುಪಾತವಿದೆಯೆ? (ತಿದ್ದು ಪಡಿ ಸುಪ್ರೀತರಿಂದ)


ಹೀಗೊಂದು  ಪ್ರಶ್ನೆ ಕಾಡಿದ್ದು ನೆನ್ನೆ. ಮದುವೆ ಮಕ್ಕಳು ಗಂಡ ,ಹೆಂಡತಿ  ಸಂಸಾರ ನೆಂಟರು ಇಷ್ಟರು ಸ್ನೇಹಿತರು ಇವರುಗಳ ಸಂಖ್ಯೆ ಬೆಳೆಯುತ್ತಿದ್ದಂತೆ ವ್ಯಕ್ತಿಯ ಕಾರ್ಯ ಕ್ಷಮತೆ  ಕಡಿಮೆಯಾಗುತ್ತಾ ಹೋಗುತ್ತದೆಯೇ? ಇವುಗಳ ಬಗ್ಗೆ ಅಕ್ಕರೆ ವ್ಯಾಮೋಹ ಹೆಚ್ಚಾದಂತೆ ನಮಗೂ ನಮ್ಮ ಜೀವನದ ಗುರಿ(ಆದ್ಯಾತ್ಮಿಕತೆ, ಸಾಹಿತ್ಯಾಭಿರುಚಿ ,ಉದ್ಯೋಗ, ಬಿಸಿನೆಸ್)ಯ  ಅಂತರ ಹೆಚ್ಚಾಗುತ್ತದೆಯಲ್ಲವೇ?


ಎಷ್ಟೋ ಯಶಸ್ಸು ಪಡೇದವರ ಸಂಖ್ಯೆಗಳನ್ನು ಗಮನಿಸಿ ಜಯಲಲಿತ, ಕಿರಣ್ ಮುಜುಂದಾರ್ ಶಾ ಮಾಯಾವತಿ, ಅಬ್ದುಲ್ ಕಲಾಮ್, ವಾಜಪೇಯಿ. ಇವರುಗಳೆಲ್ಲಾ ಜೀವನದಲ್ಲಿ ಗುರಿಯೆಡೆಗೆ ತದೇಕ ಚಿತ್ತವನ್ನು ಇಟ್ಟು ಬೆಳೆದವರಲ್ಲವೇ?


ಹಾಗಿದ್ದಲ್ಲಿ ಗುರಿ ತಲುಪುವ ಪ್ರಕ್ರಿಯೆಯೂ ಒಂದು ರೀತಿಯ ನಿರ್ಲಿಪ್ತತೆ . ಅತೀ ಭಾವುಕತನ , ಸಂಸಾರದ ಬಗ್ಗೆ ಅತಿಯಾದ ವ್ಯಾಮೋಹ, ಎಡಬಿಡದ ಜವಾಬ್ದಾರಿಯ ಭಾರ ನಮ್ಮನ್ನು ನಿರ್ಲಿಪ್ತತೆಯಿಂದ ಇರಲು ಬಿಡುವುದಿಲ್ಲ ಅನ್ನಿಸುತ್ತದೆ.  ಮುಂದೆ ಓದಿ »

Syndicate content