ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಈ ಹಾಡನ್ನು ಪೂರ್ಣ ಮಾಡಬಲ್ಲಿರಾ
ನಾನು ಶಾಲೆಯಲ್ಲಿದ್ದಾಗ ಒಮ್ಮೆ ಕಂಠೀರವ ಸ್ಟೇಡಿಯಮ್ನಲ್ಲಿ ಈ ಹಾಡನ್ನು ಹಾಡಿದ್ದೆವು
ಆ ಹಾಡಿನ ಕೊನೆಯ ೧ ಸಾಲು ನೆನಪಿಲ್ಲ
ಗೊತ್ತಿದ್ದರೆ ಪೂರ್ಣ ಮಾಡಿ
ಕನ್ನಡ ನಾಡಿನ ಮಂಗಳ ಚಂದಿರ ತುಂಬಿ ಬೆಳಗಿ ಬರಲಿ
ತುಂಬಿ ಬೆಳಗಿ ಬರಲಿ
ಹೊನ್ನಿನ ಬೀಡಿನ ಅಂಗಳದಲಿ ಬೆಳದಿಂಗಳು ಚಿರವಿರಲಿ
ತುಂಬಿ ಬೆಳಗಿ ಬರಲಿ
ಧಾರೆ ಧಾರೆ ಝರಿ ಧವಳ ಮಾಲೆ ಸಹ್ಯಾದ್ರಿ ಮೇರುಸಾಲು
ಗೇರು ಸೊಪ್ಪೆ ಜಲ ಜೀವ ಮಾಲೆ ಶ್ರೀ ಗಂಧದ ಮಲೆ ಜಾಲ
ಕಲೆಯ ಬೀಡ ಕರುನಾಡ ಸೊಬಗ ಹಸಿರೆಲೆಯ ಪರದೆ ತೆರೆವಾ
ಶಿಲಾಬಾಲೆಯರ ಶಿಲ್ಪ ವೈಭವ
ಬಾಹುಬಲಿಯು ಇರುವಾ (೨)
ಕನ್ನಡಾ ನಾಡಿನ
ದೇವ ಪಂಪ ರನ್ನಾಧ್ಯ ಕವಿಗಳ ಕಾವ್ಯ ಕಲ್ಪ ನಾಕ
ದಿವ್ಯ ತಾರೆಗಳ ಹಾಲು ಧಾರೆಯ ಚಿರಂಜೀವಿ ಲೋಕ
????????????
ದೇವಿಗಿರಲಿ ಭುವನೇಶ್ವರಿಗೈಸಿರಿ
ಅಮೃತ ಧಾರೆಯ ಜಳಕಾ
ಈ ಮೇಲಿನ ಸಾಲು ಮರೆತು ಹೋಗಿದೆ ತಿಳಿದವರು ಹೇಳಬೇಕು
ಹಾಗೆ ಇದನ್ನು ಬರೆದವರು ಯಾರು ಎಂಬುದು ತಿಳಿದಿದ್ದರೆ ಹೇಳಿ
ರೂಪ

- roopablrao ರವರ ಬ್ಲಾಗ್
- Login or register to post comments
- 254 hits
- Email this blog





RSS:
ಪ್ರತಿಕ್ರಿಯೆಗಳು
ಉ: ಈ ಹಾಡನ್ನು ಪೂರ್ಣ ಮಾಡಬಲ್ಲಿರಾ
ಮರೆತ ಸಾಲು: ಜೀವ ಜೀವನಕೆ ನಾಡ ಪರಂಪರೆ ಇಹಪರ ಗತಿ ನೌಕಾ
ಬರೆದವರು ಸದ್ಯಕ್ಕೆ ಗೊತ್ತಿಲ್ಲ
ಹಾಡಿಕೊಂಡು ಖುಷಿಪಡಿ
ಉ: ಈ ಹಾಡನ್ನು ಪೂರ್ಣ ಮಾಡಬಲ್ಲಿರಾ
ತುಂಬಾ ವಂದನೆಗಳು
ರೂಪ
ಉ: ಈ ಹಾಡನ್ನು ಪೂರ್ಣ ಮಾಡಬಲ್ಲಿರಾ
ಈ ಹಾಡು ನೆನಪಿಸಿದ್ದಕ್ಕೆ ಥ್ಯಾಂಕ್ಸ್.
ಒಂದೆರಡು ಇಷ್ಟ ಮತ್ತು ಬದಲುಗಳು-
- ಕಲೆಯ ಬೀಡ - ನಾನು ಕೇಳಿರುವುದು "ಮಲೆಯ ಬೀಡ" ಅಂತ. ನನಗೇನೋ "ಕಲೆಯ ಬೀಡ" ಪ್ರಯೋಗ imposing ಅನ್ನಿಸತ್ತೆ. ಆ ಚರಣದಲ್ಲಿ ಮಲೆಯ ಬೀಡು ಸರಿಯಿರಬೇಕು.
- ರನ್ನಾಧ್ಯ ಅಲ್ಲ ರನ್ಯಾದ್ಯ ... ಅಲ್ಲವೆ?
- ಜಿರಂಜೀವಿ ಲೋಕ - ನಾನು ಕೇಳಿರುವುದು ಜಿರಂಜೀವ ಲೋಕ- immortal land - ತುಂಬಾ ಸೊಗಸಾದ ಬಳಕೆ ಅಲ್ಲವೆ? ಜಿರಂಜೀವಿ ಕೇಳಿದ್ದೆ ಆದರೆ "ಜಿರಂಜೀವ ಲೋಕ" ಮೊದಲು ಕೇಳಿರಲಿಲ್ಲ. ಅಲ್ಲದೆ "ದಿವ್ಯ ತಾರೆಗಳ ಹಾಲು ಧಾರೆಯ ಜಿರಂಜೀವ ಲೋಕ" - ನೋಡಿ- ಈ ನಾಡನ್ನು cosmic ಆಗಿಸುವ ಪ್ರಯತ್ನ! milkyway ಯಲ್ಲಿರುವ immortal land!!!