26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗುರಿಯನರಸಿ

August 4, 2008 - 2:51pm
roopablrao
ಬಿಡದ ಛಲದ ನಂಬಿಕೆ ಮನದ ಹಠದ ಕೂಗಿಗೆ ಶರಣಾಗಿ ಬಂದೆ ನಾ ನಿನಗೆ ದೂರದಿ ಕಂಡು ನನ್ನ ಸನಿಹ ಕರೆದು ನಡೆದಿಹೆ ನೀ ಮುಂದು ಪ್ರೀತಿ ಬಿಟ್ಟು, ಸ್ನೇಹ ಬಿಟ್ಟು ನಿನ್ನರಸಿ ಬಂದೆ ನಾನೆಲ್ಲಾ ಬಿಟ್ಟು ಹರೆಯದಾಟ ಬೇಡ ಎಂದೆ ಬರಿಯ ಹಣ ಒಲ್ಲೆ ಎಂದೆ ನಿನ್ನ ತಲುಪಲೆನ್ನ ಗಮನ ಒಂದೆ ನೀ ಬದುಕಿನರ್ಥ ನನಗೆ ನಿನ್ನ ಹುಡುಕಿ ಮನದಿ ಮಿಡುಕಿ ಬಾಳು ವ್ಯರ್ಥ ವಾಗದೆನಗೆ ನೀ ಸಿಗುವ ತನಕ ಸಾಯಲಾರೆ ನಿನ ಹಿಡಿಯದೆ ಹೋಗಲಾರೆ ನೀನಿರದ ಎಡೆಯ ಬಯಸಲಾರೆ ಎಲ್ಲಿಯೋ ನೀನಿರುವೆ ಇಲ್ಲಿಯೇ ನಾನಿರುವೆ ನಮ್ಮಿಬ್ಬರ ಮಿಲನಕಾಗೆ ನಾ ಕಾದಿರುವೆ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.