ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬೇಸರದ ದಿನ ಜನುಮ ದಿನ

ಮದ್ಯರಾತ್ರಿ ೧೨ ಘಂಟೆಗೆ ಮೊಬೈಲ್‌ಗೆ ಮೆಸ್ಸೇಜ್ ಬಂತು .
ಯಾರಪ್ಪ ಇಷ್ಟು ಹೊತ್ತಿನಲ್ಲಿ ಮೆಸ್ಸೇಜ್ ಮಾಡಿದವರು ಎಂದು ತೆರೆದು ನೋಡಿದರೆ ನಮ್ಮ ಯಜಮಾನರು.
ಹುಟ್ಟಿದ ದಿನದ ಶುಭಾಷಯಗಳನ್ನು ಪಕ್ಕದಲ್ಲೇ ಇದ್ದೂ ಮೆಸ್ಸೇಜ್ ಮಾಡಿದ್ದರು. (ಅದಕ್ಕೆ ಹಿಂದಿನ ದಿನದ ಜಗಳವೂ ಕಾರಣ ಎನ್ನಿ).
ಆಗಷ್ಟೆ ನೆನಪಾಯ್ತು ಓ ನನ್ನ ಬರ್ತ್ ಡೇ ಎಂದು

ಬೆಳಗಾಯ್ತು ಮಗಳೂವಿಷ್ ಮಾಡಿದಳು (ಅವಳ ಅಪ್ಪ ಹೇಳಿಕೊಟ್ತಿದ್ದರು)

ಒಂದೇ ಸಮನೆ ಕುತ್ತಿಗೆ ನೋವು ಸ್ನಾನ ಮಾಡಲೂ ಆಗಲಿಲ್ಲ
ಕೆಲವು ವಿದ್ಯಾರ್ಥಿಗಳು ಸ್ನೇಹಿತರಿಂದ ಶುಭಾಶಯಗಳು ಬಂದವು
ನಾನು ನಿರಿಕ್ಷೆ ಮಾಡುತ್ತಿದ್ದವರಿಂದ ಬರಲಿಲ್ಲ.

ಇವರ ಆಫೀಸ್ ಟೈಮ್ ಆಯ್ತು ಅಂತ ಇವರೂ ಹೊರಟರು
ನಾನು ಯಾವುದೋ ಫೋನ್‌ ರಿಂಗ್‌ಗೆ ಕಾಯುತ್ತಿದ್ದೆ .

ಹೌದು ನಾನು ಅಮ್ಮ ಹಾಗು ಅಕ್ಕನ ವಿಷ್‌ಸಗೆ ಕಾಯುತ್ತಿದ್ದೆ.
ಬೇಕೆಂದೇ ಫೋನ್ ಮಾಡಿ ಮಾತಾಡಿದೆ ಆದರೂ ಅವರಿಗೆ ಬರ್ತ್ ಡೆ ನೆನಪೂ ಇರಲಿಲ್ಲ.

ಕಣ್ನಲ್ಲಿ ಧಾರಾಕಾರಾವಾಗಿ ನೀರು ಬರುತಿತ್ತು

ನನ್ನ ಅಂದಿನ ಜನುಮ ದಿನದ ಆಚರಣೆಗಳು ಎಷ್ಟು ಚೆನ್ನಾಗಿದ್ದವು

ಬೆಳಗ್ಗೆ ೪ ಘಂಟೆಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ ಹೊಸ ಬಟ್ಟೆ ಧರಿಸಿ ಅಮ್ಮನ ಕಾಲಿಗೆ ಬೀಳುತ್ತಿದ್ದ ಆ ಸಡಗರ ನೆನಪಾಯ್ತು
ಅಷ್ಟರಲ್ಲಿ ಅಕ್ಕ ಎದ್ದು ನನಗೆ ಏನಾದ್ರೂ ಗಿಫ್ಟ್ ತರುತ್ತಿದ್ದಳು . ಅಮ್ಮ ಮಾಡಿದ ಸ್ವೀಟ್ಸ್ ತಿಂದು ದೇವಸ್ಥಾನಕ್ಕೆ ಹೋಗಿ ಹಾಗಿಂದ ಹಾಗೆ ಹೋಟೆಲಿಗೆ ಹೋಗಿ ತಿಂಡಿ ತಿಂದು ಯಾವುದಾದರೂ ಪಿಚ್ಚರ್ ನೋಡಿಕೊಂಡು ಬರುತ್ತಿದ್ದೆವು
ಅಬ್ಬಾ ಎಷ್ಟೊಂದು ಚೆನ್ನಾಗಿದ್ದವು ಆ ದಿನಗಳು
ಈ ಧಾವಂತ ದ ದಿನಗಳಲ್ಲಿ ಅವೆಲ್ಲಾ ಸಾಧ್ಯವೇ ಇಲ್ಲ ಎನಿಸುತ್ತದೆ

ಮದ್ಯಾಹ್ನ ಅಯ್ತು ಮಗಳಿಗೆ ಹೋಟೆಲಿ‍ನಿಂದ ತಿಂಡಿ ತರಿಸಿಕೊಟ್ಟೆ . ನಾನು ಏನೂ ತಿನ್ನಲಿಲ್ಲ . ಮೊದಲ ಬಾರಿಗೆ ನನ್ನ ಅಮ್ಮ ನನ್ನ ಬರ್ತ್ ಡೇ ಮರೆತಿದ್ದಳು. ಹಾಗೊಂದು ವಿಷಯವೇ ನನ್ನ ಮನಸನ್ನು ಇರಿಯುತ್ತಿತ್ತು.
ಎಲ್ಲೂ ಹೋಗಲಿಲ್ಲ .
ಕೊನೆಗೆ ಸಂಜೆ ನಾನೆ ಫೋನ್ ಮಾಡಿದೆ
"ಅಮ್ಮ ಇವತ್ತು ಮರೆತು ಬಿಟ್ಟೆಯಾ?"
ನನ್ನ ಅಮ್ಮನಿಗೆ ಆಗ ನೆನಪಾಯ್ತು .
ನಾನು ಗಂಟಲು ಗದ್ಗದಿತವಾತ್ತು.
ಅಮ್ಮನೂ ಅತ್ತಳು. ಸ್ವಲ್ಪ ಹೊತ್ತಿನ ನಂತರ ಅಕ್ಕನಿಂದ ಫೋನ್ ಬಂತು . ಅವಳೂ ತುಂಬಾ ಬೇಸರಗೊಂಡಿದ್ದಳು
ಕೊನೆಗೆ ನನ್ನ ಬರ್ತ್ ಡೇ ಯನ್ನ ಪೋಸ್ಟ್ ಪೋನ್ ಮಾಡಿ ಅಕ್ಟೋಬರ್ ೮ ಕೀ ಇಡುವುದೆಂದು ತೀರ್ಮಾನಿಸಲಾಯ್ತು
ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಜನುಮ ದಿನ ಬೇಸರ ತಂದಂತಹ ದಿನವಾಗಿತ್ತು ನನ್ನ ಪಾಲಿಗೆ

.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬೇಸರದ ದಿನ ಜನುಮ ದಿನ

vikashegde's picture

ಈ ಹುಡುಗೀರು ವಿಚಿತ್ರನಪ್ಪ. ಬರ್ತಡೇ ಗೆ ವಿಷ್ ಮಾಡ್ಲಿಲ್ಲ, ಹೊಸ ಬಟ್ಟೆ ಹಾಕ್ಕೊಂಡಿದ್ರೂ ಕೇಳಲಿಲ್ಲ, ಚೆನ್ನಾಗಿ ಕಾಣ್ತಿದೀಯಾ ಅಂತ ಕಾಂಪ್ಲಿಮೆಂಟು ಕೊಡ್ಲಿಲ್ಲ, ಏನೋ ಮಾಡ್ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಲಿಲ್ಲ ಅಂತೆಲ್ಲಾ ತಲೆ ಕೆಡಿಸಿಕೊಂಡು ಬೇಸರ ಪಟ್ಟುಕೋತಿರ್ತಾರೆ !
**************************
http://vikasavada.bl...
**************************

ಉ: ಬೇಸರದ ದಿನ ಜನುಮ ದಿನ

malathi shimoga's picture

ರೀ ವಿ.ರ.ಹೆ. ಅವ್ರೆ,
ರೂಪ ಅವ್ರು ಬೇಸರ ಮಾಡೊಂಡಿದ್ದು ಅವರ ಅಮ್ಮ ಶುಭಾಶಯ ತಿಳುಸ್ಲಿಲ್ಲ ಅಂತ ಕಣ್ರೀ, ಕೋಟಿ ಜನದ ಶುಭಾಶಯ ಆ ತಾಯಿಯ ಶುಭಾಶಯಕ್ಕೆ ಸಮ ಅಲ್ಲಾರಿ, ನಾವೆಲ್ಲ ಈ ಭೂಮಿಗೆ ಬಂದು ಹುಟ್ಟಿದಬ್ಬ ಆಚರಿಸಿಕೊಳ್ಳೋಕೆ ಅವಳೆ ಅಲ್ವ ಕಾರಣ.
ಬೇಜಾರು ಮಾಡ್ಕೋಬೇಡ್ರಿ ಹೀಗೆ ಹೇಳ್ತಾಇದೀನಿ ಅಂತ.

ಉ: ಬೇಸರದ ದಿನ ಜನುಮ ದಿನ

Deeparavishankar's picture

ಅಯ್ಯೊ, ಇದ್ಯಾಕೆ ರೂಪಾ ಇಷ್ಟಕ್ಕೆ ಬೇಜಾರು? ಇದು ಸ೦ತೋಷ ಪಡಬೇಕಾದ ವಿಷಯ. ಎರೆಡು ವಿಷಯಗಳಿಗಾಗಿ ನೀವು ಸ೦ತೋಷ ಪಡಬೇಕು. ೧. ಮದುವೆಯಾಗಿ, ಒ೦ದು ಮಗುವಾದ ಮೇಲೆ ನಮ್ಮ ಹುಟ್ಟಿದ ದಿನವನ್ನು ಜನ ಮರೆಯುವುದೇ ಮೇಲು. ಇಸವಿಯನ್ನು ಮರೆತರ೦ತೂ ಆನ೦ದ.
೨. ಮರೆತವರಿಗೆ ಚೆನ್ನಾಗಿ ಗಿಲ್ಟ್ ಫೀಲ್ ಮಾಡಿಸಿ ಹುಟ್ಟಿದ ದಿನದ ಉಡುಗೊರೆ ಜೊತೆ ತಪ್ಪುಕಾಣಿಕೆನೂ ವಸೂಲಿ ಮಾಡಬಹುದು.
ಇ೦ಥ ಅವಕಾಶನ ಬಿಟ್ಟು ನೀವು..... :-)

ಉ: ಬೇಸರದ ದಿನ ಜನುಮ ದಿನ

hpn's picture

ನಿಜ! ಪ್ರತಿ ವರ್ಷ ನನಗೆ ಯಾರಾದರೂ ವಿಶ್ ಮಾಡಿದಾಗಲೆಲ್ಲ, ಮತ್ತೊಂದು ವರ್ಷ ವಯಸ್ಸಾಗಿಹೋಯ್ತಲ್ಲ ಅಂತ ಅನ್ನಿಸೋಕೆ ಶುರುವಾಗಿಬಿಡುತ್ತದೆ. ಇದೆಷ್ಟು ಬೇಗ ಬಂತಲ್ಲ ನವೆಂಬರ್, ನಾನೇನೇನು ಮಾಡಿದೆ ಈ ವರ್ಷ, ಅದು ಇಷ್ಟು ಬೇಗೆ ಕಳೆದು ಹೋದದ್ದಾದರೂ ಹೇಗೆ ಅಂತ ಆಲೋಚಿಸಿ ಹೊರಡೋವಾಗ ಈ 'ಹ್ಯಾಪಿ ಬರ್ತ್ ಡೆ' - sorrow ಆಗಿಬಿಡತ್ತೆ! "ಹುಟ್ಟಿದ 'ಹಬ್ಬ' ಯಾಕಾದ್ರೂ ಬರುತ್ತೋ" ಅನ್ನಿಸೋದುಂಟು ನನಗೆ ಪ್ರತಿಸಾರಿ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

ಉ: ಬೇಸರದ ದಿನ ಜನುಮ ದಿನ

hpn's picture

ರೂಪ, ಜನ್ಮದಿನದಂದು ನೆನೆಸಿಕೊಂಡರೆ ಮಾತ್ರ ಪ್ರೀತಿ ವಿಶ್ವಾಸ ಎನ್ನುವುದು ಸರಿಯಲ್ಲ. ಅದೂ ಅಮ್ಮನಿಂದ ಅಂತದ್ದು ಬಯಸಕೂಡದು ಎಂಬುದು ನನ್ನ ಅನಿಸಿಕೆ. ಏಕೆಂದರೆ ಅಮ್ಮಂದಿರಿಗೆ ಪ್ರತಿದಿನವೂ ಮಕ್ಕಳ ಹುಟ್ಟುಹಬ್ಬ - ಪ್ರತಿ ನಿತ್ಯ ಅಷ್ಟೇ ಪ್ರೀತಿ ವಿಶ್ವಾಸದಿಂದ ನೋಡುತ್ತಾರೆ. ನಿತ್ಯ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿರುತ್ತಾರೆ!
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

ಉ: ಬೇಸರದ ದಿನ ಜನುಮ ದಿನ

hamsanandi's picture

ಇದು ಒಪ್ಪೋ ಮಾತು - ಮನಸ್ಸಲ್ಲಿ ಇದ್ದಮೇಲೆ, ಫೋನ್ ಮಾಡೋದಕ್ಕೆ ಮರೆತೋ ಅಥವಾ ಕೆಲಸಗಳ ಧಾವಂತಗಳಿಂದಲೋ ಆಗದಿದ್ದರೇನು? ಮನಸ್ಸಿನ ಹಾರೈಕೆ ಯಾವತ್ತಿಗೂ ಹೆಚ್ಚೇ!

ಇದೇ ಮಾತನ್ನೇ ನಾನು 'ಅಪ್ಪನ ದಿನ' 'ಅಮ್ಮನ ದಿನ' ದ ವಿಷಯಕ್ಕೂ ಹೇಳ್ತೀನಿ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಬೇಸರದ ದಿನ ಜನುಮ ದಿನ

kalpana's picture

ರೂಪ,
ಮೊದಲಿಗೆ, ಹುಟ್ಟುಹಬ್ಬದ ಶುಭಹಾರೈಕೆಗಳು! ನಿಮಗೆಲ್ಲವೂ ಒಳ್ಳೆಯದಾಗಲಿ.
ಬೇಜಾರು ಮಾಡ್ಕೋಬೇಡಿ. ನಿಮ್ಮ ತಾಯಿ ಹುಟ್ಟುಹಬ್ಬ ಮರೆಯುವುದಕ್ಕೆ ಯಾವುದೋ ಬಲವಾದ ಕಾರಣವಿರಬಹುದು. ಅವರಿಗೆ ಆ ದಿನ ಕೆಲಸದ ಒತ್ತಡ ಜಾಸ್ತಿ ಇದ್ದಿರಬಹುದು. ಕೆಲವರಿಗೆ ಮರೆವು ಸಹ ಹೆಚ್ಹು ಇರುತ್ತೆ. ನಾನು ನನ್ನ ಹುಟ್ಟಿದಹಬ್ಬ, ನನ್ನ ತಾಯಿಯದು, ಗಂಡನದು, ಮಕ್ಕಳದು ಎಷ್ಟೋ ಬಾರಿ ಮರೆತಿದ್ದೇನೆ. Alzheimer's ಇರಬಹುದೂಂತ ಹೆದರಿಕೆನೂ ಆಗಿದೆ. ಇರಲಿ, ಇದೆಲ್ಲ ಹೇಳಿದ್ದು ಮನುಷ್ಯನಿಗೆ ಮರೆವು ಸಹಜ ಅಂತ ತಿಳಿಸುವುದಕ್ಕೆ. ನಿಮ್ಮ ತಾಯಿ ಏನು ಮರೆತರೂ ನಿಮ್ಮ ಮೇಲಿನ ಪ್ರೀತಿ ಮಾತ್ರ ಮರೆಯೊಲ್ಲ ಬಿಡಿ.
~ಕಲ್ಪನ

ಉ: ಬೇಸರದ ದಿನ ಜನುಮ ದಿನ

kannadakanda's picture

Alzhiemer ಹಾಗೆಲ್ಲ ಬಾರದು. ಹಾಗಾದಾಗ ನಿಮ್ಮ ನಡೆವಳಿಕೆಯಲ್ಲೇ ಏಱುಪೇಱು ಕಾಣಿಸಿಕೊಳ್ಳುತ್ತದೆ. Alzhiemerಗೆ ಮೆದುಳಿಗೆ ಹಾನಿಗೆ ಕಾರಣವಾಗುವ ತಲೆಗೆ ಪೆಟ್ಟು, ಮಧುಮೇಹ ಹಾಗೂ ರಕ್ತದೊತ್ತಡದ ಪರಿಣಾಮಗಳಿಂದ ಉಂಟಾಗುವ ಮೆದುಳಿನ ಹಾನಿಯಿಂದ ಬರುತ್ತದೆ.

ಉ: ಬೇಸರದ ದಿನ ಜನುಮ ದಿನ

kannadakanda's picture

ಮೆದುಳು=ಮೆದುೞು ಆಗಬೇಕೆಂದು ನಮ್ಮ ಅಭಿಪ್ರಾಯ.

ಉ: ಬೇಸರದ ದಿನ ಜನುಮ ದಿನ

Sunil Jayaprakash's picture

ಬೇಸರ ಬೇಡ, ರೂಪ ಮೇಡಂ. ಈ ಬಾರಿಯಿಂದ ನಿಮ್ಮ ಬಳಗದವರ ಜೊತೆ ಸಂಪದಿಗರೂ ಶುಭಾಶಯವನ್ನು ಕೋರುತ್ತಾರೆ. "ಸವಿ ಸವಿ ಪುಟ್ಟು ಪರ್ವ" !!!!!!!!!!!

ಉ: ಬೇಸರದ ದಿನ ಜನುಮ ದಿನ

ಗಣೇಶ's picture

ರೂಪಾ ಮೇಡಮ್,

೨ ವರ್ಷದ ಹಿಂದೆ ನಡೆದ ಘಟನೆ.
ರಾತ್ರಿ ನನ್ನ ತಂಗಿ ಗಂಡ ಫೋನ್ ಮಾಡಿ 'ಬೆಳಗ್ಗಿನಿಂದ ನಿನ್ನ ತಂಗಿ ಅಳುತ್ತಿದ್ದಾಳೆ. ಒಮ್ಮೆ ಫೋನ್ ಮಾಡಿ ಬರ್ತ್‌ಡೇ ಶುಭಾಶಯ ತಿಳಿಸು ಮಾರಾಯಾ'.ಎಂದಿದ್ದ. ಬೆಳಗ್ಗೆ ಲೈನ್ ಸಿಗದಿದ್ದರಿಂದ ಮತ್ತೆ ಮಾಡಿದರಾಯಿತೆಂದು ಉದಾಸೀನ ಮಾಡಿ ತಪ್ಪು ಮಾಡಿದ್ದೆ.
ಸಂಪದಿಗರೆ,
ಅಕ್ಕ, ತಂಗಿ,ತಾಯಿ,ಮಗಳು,ಗೆಳತಿ,ಹೆಂಡತಿ ಯಾರದ್ದೇ ಹುಟ್ಟಿದ ಹಬ್ಬವನ್ನು ಮರೆಯಬೇಡಿ. ಒಂದು ಮಾತು ಬೆಳಗ್ಗೆಯೇ ಹೇಳಿ.

-ಗಣೇಶ.
ರೂಪಾರವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಉ: ಬೇಸರದ ದಿನ ಜನುಮ ದಿನ

gururajkodkani's picture

ಗುಱುಱಾಜ
www.kannadaguru.blog...

ನನ್ನ ಹುಟ್ಟಿದಹಬ್ಬ ಮನೆಯವರು ಇನ್ನೂವರೆಗೆ ಮರೆತೇ ಇಲ್ಲ.ಪ್ರತಿವರ್ಷವೂ ಮೊದಲು ಫೋನ್ ಮಾಡಿ ವಿಷ್ ಮಾಡುವುದು ಅವರೇ

ಉ: ಬೇಸರದ ದಿನ ಜನುಮ ದಿನ

Nagaraj.G's picture

ಇದರ ಜೊತೆಗೆ ನಮ್ಮ ಸಂಪದ ತಂಡದವರ ಜನ್ಮದಿನಾಂಕ ಎಲ್ಲಿಯಾದರೂ ತೋರಿಸಲು ಅನುವು ಇದ್ದರೆ ನಮ್ಮ ತಂಡದವರ ಜನ್ಮ ದಿನದಂದು ನಾವು ಸಹ ಶುಭಾಷಯ ತಿಲಿಸಬಹುದಲ್ಲ ಏನಂತಿರಿ?
ನಾಗರಾಜ್. ಜಿ

ಉ: ಬೇಸರದ ದಿನ ಜನುಮ ದಿನ

malathi shimoga's picture

ಹೌದು ನಾಗರಜ್ ಅವರೆ ಇದರಿಂದ ನಮ್ಮಗಳ ನಡುವೆ ಇರುವ ಆತ್ಮೀಯತೆ ಇನ್ನು ಹೆಚ್ಚಾಗುತ್ತೆ.