ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಕೊಂದವರು ಯಾರು ಭಾಗ-೨
ಇದರ ಮೊದಲ ಭಾಗ ಇಲ್ಲಿದೆ http://www.sampada.net/blog/roopablrao/03/04/2008/8183 ಇನ್ಸ್ಪೆಕ್ಟರ್ ಶಿವು
ನನ್ನ ಯಾವ ಪ್ರಯತ್ನಗಳೂ ಕೈ ಗೂಡಿಲ್ಲ .
ಸತ್ತವ ಕ್ರೂರಿಯೇ ಇರಬಹುದು ಅಥವ ರೌಡಿಯೇ ಇರಬಹುದು ಆದರೆ ಕೊಲೆ ಮಾಡಿದವರು ಯಾರು ಎಂದು ತಿಳಿಯದೇ ಫೈಲ್ ಕ್ಲೋಸ್ ಮಾಡುವ ಹಾಗಿಲ್ಲ
ಆ ನಾಲ್ಕು ಜನ ಕೊಲೆಗೆ ಪ್ರಯತ್ನ ಪಟ್ಟವರು ಚಂದ್ರಕಾಂತನಿಂದ ಒಂದಲ್ಲ ಒಂದು ತೊಂದರೆಗೆ ಸಿಕ್ಕಿ ಹಾಕಿಕೊಂಡವರು.
ಸಿದ್ದನ ಮಗಳ ಕತೆಯಂತೂ ಪೋಲಿಸಾದ ತನ್ಮ್ನ ಮನಸನ್ನೇ ಕಲಕಿ ಬಿಡುತ್ತದೆ.
ಪೆಟ್ಟು ಸರಿಯಾಗಿ ನೆತ್ತಿಯ ಮೇಲೆ ಬಿದ್ದಿದೆ ಹೊಡೆದವ ಚಂದ್ರಕಾಂತ್ ನಿಗಿಂತ್ ಎತ್ತರವಿರಬೇಕು .ಆದರೆ ಚಂದ್ರಕಾಂತನೇ ೬.೫೦ ಅಡಿಗಿಂತ ಜಾಸ್ತಿ ಇದ್ದಾನೆ. ಹಾಗಿದ್ದರೆ..............?
ಫೋನ್ ರಿಂಗಣಿಸಿತು
" ಸಾರ್ ಕೂಡಲೆ ಬನ್ನಿ ರೆಸಾರ್ಟ್‍೬ಗೆ "
" ಯಾಕೆ"
ಅವರು ಹೇಳಿದ ಮಾತನ್ನು ಕೇಳಿದ ಕೂಡಲೆ ಕೊಲೆಗಾರ ಯಾರು ಎಂಬುದು ಹೊಳೆಯಿತು. ಆದರೆ ಅದು ಕೊಲೆಯಾಗಿರಲಿಲ್ಲ. ಮುಖದಲ್ಲಿ ಸಣ್ಣಗೆ ನಗು ಮೂಡಿತು. ಅಲ್ಲೇ ಇದ್ದ ದೇವರ ಫೋಟೊಗೆ ಕೈ ಮುಗಿದೆ
ಅಬ್ಬ ದೇವರೆ ನಿನ್ನ ಕೈವಾಡ ಹೇಗೆ ಹೇಗೆ ಇದೆ .
ಎಲ್ಲಾ ವಿಧಿ. ಹೀಗೆ ಸಾಯಬೇಕೆಂದು ಅವನ ಇಛ್ಛೆ ಆಗಿತ್ತನಿಸುತದೆ.
ನನ್ನ ಮುಂದಿನ ಕಾರ್ಯಕ್ಕೆ ಅನುವಾದೆ.
ವಿಧಿ
ನನ್ನನ್ನು ಸಾಯಿಸಲು ಆ ಬ್ರಹ್ಮನಿಂದಲ್ಲೂ ಸಾಧ್ಯವಿಲ್ಲ . ಎಂದು ಆ ದುರುಳ ಹೇಗೆ ತಿಳಿದುಕೊಂಡ.
ಬ್ರಹ್ಮ ಅವನ ಸಾವನ್ನು ಅದೇ ರೆಸಾರ್ಟ್ನಲ್ಲಿ ಇಟ್ಟಿದ್ದ. ಹಾಗಾಗಿಯ ಅವನು ಅಲ್ಲಿಗೆ ಹೋದ.
ಅಷ್ಟೆಲ್ಲಾ ಮೆರೆದ ಆತನಿಗೆ ತಾನು ಕೊಟ್ಟ ಸಾವಾದರೂ ಎಂತಹದು.
ಅವ ಅಲ್ಲಿಗೆಬರುವ ಮುಂಚೆಯೆ ರೆಸ್ಸಾರ್ಟನವರಿಗೆ . ಅವರ್ ಕೆರೆಗೆಒಂದು ಸೇತುವೆ ಕಟ್ಟುವ ಬುದ್ದಿ ಕೊಟ್ಟೆ
ಯಾವಾಗಲ್ಲೂ ಸರಿಯಾಗಿ ಕೆಲಸ ಮಾಡುವ ಕೆಲಸಗಾರನ ಮನಸನ್ನೋ ಎತ್ತಲೋ ಹಾಯುವಂತೆ ಮಾಡಿ ಆ ಒಂದು ಮರದ ಹಲಗೆಯನ್ನ ಮಾತ್ರ ಸರಿಯಾಗಿ ಜೋಡಿಸದಂತೆ ಮಾಡಿದ್ದೂ ನಾನೆ.
ಆ ನಾಲ್ಕು ಸಲವೂ ಪಾರಾದ ನಂತರ ವರುಣ್‌ಗೆ ಫೋನ್ ಮಾಡಿ ಬಂದು ನಿಂತಿದ್ದು ಇದೇ ಮರದ ಹಲಗೆಯ ಕೆಳಗೆ ಸರಿಯಾಗಿ. ಅದಕ್ಕೂ ತಾನೆ ಪ್ರೇರಣೆ
ಬಂದವ ಸುಮ್ಮನಿರದೆ ಅದೇನೊ ಕೋಪಕ್ಕೆ ಆಧಾರ ಮರದ್ ದಿಮ್ಮಿಯನ್ನು ಒದ್ದ. ಅವನ ಅಂತ್ಯದ ಕ್ಷಣ ಸಮೀಪಿಸಿತ್ತು
ಅದಕ್ಕೆ ಕಾಯುತ್ತಿದ್ದ ಆ ಮರದ ಹಲಗೆ ಅವನ ತಲೆಯ ಮೇಲೆ ಎಂದಿಗೆ ಬೀಳುವದಕ್ಕಿಂತಲೂ ರಭಸವಾಗೆ ಬಿತ್ತು.
ಕೂಗಲೂ ಆಗದೆ ಆತ ಕ್ಷಣದಲ್ಲೇ ಸತ್ತ.
ಮನುಶ್ಯ ನನ್ನಿಂದ ಸೃಷ್ತಿಸಲ್ಪಟ್ಟಿದ್ದಾನೆ ಆದರೆ ಅವನು ನನ್ನನ್ನೇ ಧಿಕ್ಕರಿಸಿ ನಡೆದರೆ ............?
ನಾನು ಮಾಡಿದ್ದು ತಪ್ಪಾ?

- roopablrao ರವರ ಬ್ಲಾಗ್
- Login or register to post comments
- 366 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕೊಂದವರು ಯಾರು ಭಾಗ-೨
ಗುಱುಱಾಜ
www.kannadaguru.blogspot.com
ತು೦ಬಾ ಸು೦ದರ ಕತೆ ರೂಪಾ ಪತ್ತೆದಾರಿ ಕತೆ ವಿಭಿನ್ನ ಅ೦ತ್ಯದೊ೦ದಿಗೆ.
ಸವಿಯೊದಗು.
ಉ: ಕೊಂದವರು ಯಾರು ಭಾಗ-೨
ಏನ್ರೀ ರೂಪಾ. ಕತೇನಾ ಒಳ್ಳೆ ಬಲೂನ ತರಹ ಊದಿಸಿ ಕೊನೆಗೆ ಟುಸ್ಸ್ ಅನಿಸಿಬಿಟ್ಟಿರಲ್ಲಾ.
ಉ: ಕೊಂದವರು ಯಾರು ಭಾಗ-೨
ರೂಪಾ ಅವರೆ, ಕತೆಯ ಕೊನೆ ಅಷ್ಟು ಮನತಟ್ಟಲಿಲ್ಲವಾದರೂ, ನೀವು ಕತೆ ಹೆಣೆದ ರೀತಿ ಸೊಗಸಾಗಿದೆ. ಹೀಗೆ ಸಂಪದದ ಹರಿವನ್ನು ವಿಸ್ತರಿಸುವಲ್ಲಿ ಕೈಜೋಡಿಸುತ್ತಾ ಇರಿ.
ಉ: ಕೊಂದವರು ಯಾರು ಭಾಗ-೨
ನಿಮ್ಮ ಪ್ರಕಾರ ಕತೆ ಹೇಗೆ ಕೊನೆಯಾಗಬೇಕಿತ್ತ್ತು.?
ನೀವಾಗಿದ್ದರೆ ಹೇಗೆ ಅಂತ್ಯ ಮಾಡುತಿದಿರಿ?
ರೂಪ
ಉ: ಕೊಂದವರು ಯಾರು ಭಾಗ-೨
ರೀ, ನೀವು ತುಂಬಾ ಕಷ್ಟದ ಪ್ರಶ್ನೆ ಕೇಳ್ತೀರಪ್ಪಾ. ನನಗೆ ಅಷ್ಟೆಲ್ಲ ತಲೆ ಓಡಲ್ಲ. ನೀವು ಭಾಗ ೧ ರಲ್ಲಿ ನಮ್ಮ ಊಹೆಗೆ ಕತೆ ಬಿಟ್ಟಿದ್ರಲ್ಲಾ, ಆಗ ನಾನು ಏನೇನೆಲ್ಲಾ ಯೋಚನೆ ಗುಡ್ಡೆ ಹಾಕಿದ್ದೆ ಗೊತ್ತಾ ?
---------------------------------------------------------------------------------------
ಚಂದ್ರಕಾಂತನಿಗೆ ಮದುವೆ ಆಗೋಕ್ಕೆ ಮುಂಚೆ ಒಬ್ಬಳು ಪ್ರೇಯಸಿ ಇರುತ್ತಾಳೆ, ಚಂದ್ರಿಕಾ. ಅವಳ ಮನೆಯ ಮಾಣಿ, 'ಚುಕ್ಕಿ' ತುಂಬಾ ಒಳ್ಳೆಯವನು. ಅವನಿಗೆ ಇವರಿಬ್ಬರೂ ಪ್ರೀತಿಸುತ್ತಿರುವದು ಗೊತ್ತಿರತ್ತೆ. ಮಾಣಿಯ ಕೈಯಿಂದ ಚಂದ್ರಕಾಂತನ ಕೊಲೆ ಆಗಿರಬಹುದೇ ಅಂತ ಯೋಚಿಸುತ್ತಿದ್ದೆ. ಮಾಣಿ ಏಕೆ ಚಂದ್ರಕಾಂತನ ಕೊಲೆ ಮಾಡಿದ ಹೇಳಿ ನೋಡೋಣ ? ಎಂಬಲ್ಲಿಗೆ ಮೂರನೆ ಸಂಚಿಕೆ ರೆಡಿ ಮಾಡ್ತಾ ಇದ್ದೆ.
---------------------------------------------------------------------------------------