ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ನಮ್ಮ ಅಮ್ಮನ ಮನೆಯಲ್ಲಿ ಇದ್ದಾಗ ನಂಗೆ ಅಡಿಗೆ ಮಾಡೋಕೆ ಬರ್ತಿರಲಿಲ ಅನ್ನೊ ವಿಷಯ ಈಗಾಗಲೆ ಹೇಳಿದೀನಿ ಅದರಿಂದಾದ ಪಜೀತಿನೊ ಒಳ್ಳೆ ಮೆಗಾ ಧಾರವಾಹಿ ತರಹ ಎಳೆದು ಬರೆದಿದ್ದೀನಿ
ಹ್ಯಾಗೊ ಅಲ್ಲಿ ಇಲ್ಲಿ ನೋಡಿ ಕಲಿತು ಒಂದದು ಹುಳಿ , ಸಾರು ಆಂಬೊಡೆ, ಜಾಮೂನು ಇವುಗಳನ್ನ ಚೆನ್ನಾಗಿ ಮಾಡೋದನ್ನ ಕಲ್ತಿದೀನಿ.
ಈಗ ಮೂರು ತಿಂಗಳಿಂದ ನಮ್ಮ ಪತಿರಾಯರು ನಮ್ಮ ಚಿಕ್ಕಮ್ಮ (ಅವರ ಮಗನಿಗೆ ಹೆಣ್ಣು ಹುಡುಕಬೇಕಾದ್ದು) ಮುದ್ದೆ ಎಷ್ಟು ಚೆನ್ನಾಗಿ ಮಾಡ್ತಾರೆ ಗೊತ್ತಾ ಅದೆಲ್ಲಾ ಮಾಡೋಕೆ ಪುಣ್ಯ ಮಾಡಿರಬೇಕು ಅಂತ ಹಂಗಿಸುತಿದ್ದರು.
ನನಗೂ ಸಾಕಾಯಿತು. ಒಮ್ಮೆ ಮಾಡೋಣ ಅಂತ ಕೈ ಹಾಕಿದೆ
ಗಂಟು ಗಂಟಾದ ಗಂಜಿಯ ರೀತಿಯ ರಾಗಿ ಹಿಟ್ಟು ಆಯಿತು
ಇನ್ನು ಮೇಲೆ ಮುದ್ದೆಯ ಹೆಸರೂ ಕೂಡ ಅಪ್ಪಿತಪ್ಪಿ ನಿನ್ನ ಮುಂದೆ ಹೇಳೊದಿಲ್ಲ ಅಂತಂದುಬಿಟ್ಟರು.
ಸರಿ ಮತ್ತೊಮ್ಮೆಸ್ವಲ್ಪ ನೀರು ಕಡಿಮೆ ಹಾಕಿ ಮಾಡಿದೆ
ಹಸಿ ಹಸಿ ಹಿಟ್ಟು ಬಾಯಿಗೆ ಸಿಕ್ಕಿತು
ಈ ಬಾರಿ ಅವರಿಗೆ ಕೊಡಲಿಲ್ಲ
ಹಾಗೆ ಇಂಟರ್ನೆಟ್ನಲ್ಲಿ ಗೂಗಲ್ ಸರ್ಚ್ ಮಾಡಿದೆ ರಾಗಿ ಮುದ್ದೆ ಅಂತ
ಮಧು ಅವರ ಈ ಬ್ಲಾಗ್‌ನಲ್ಲಿ
http://ruchii.wordpress.com/2006/09/13/ragi-mudde/
ಸಿಕ್ಕಿತು
ಕೊನೆಗೆ ಅವರು ಹೇಳಿದ ಅಳತೆಗೆ ನೀರಿಟ್ಟು ಮಾಡಿದೆ
ಅಬ್ಬಾ i just can't believe it "ಅಷ್ಟೊಂದು ಈಸಿಯಾಗಿ ಬಂತು.
ನಮ್ಮ ಮನೆಯಲ್ಲಿ ಹೇಳಿದ್ದೇ ಹೇಳಿದ್ದು
ಇವರ ಚಿಕ್ಕಮ್ಮ ನೂ ಇಷ್ಟು ಚೆನ್ನಾಗಿ ಮಾಡೋದಿಲ್ಲವಂತೆ. ಅದಕ್ಕೆ ಕಾಳು ಹುಳಿ ಮಾಡಿಕೊಟ್ಟರಂತೂ ಚಪ್ಪರಿಸಿಕೊಂಡು ತಿನ್ನುತ್ತಾರೆ
ಇವರ ಅಮ್ಮನ ಮನೆಗೆ , ನಮ್ಮ ಅಮ್ಮನಿಗೆ, ಅಕ್ಕನಿಗೆ ಎಲ್ಲರಿಗೂ ಈ ಮೆಥೆಡ್ ಹೇಳಿದ್ದೇ ಹೇಳಿದ್ದು.
ನಾನಂತೂ ಯುರೇಕಾ ಅಂತಾ ಆಗಸದ ಮೇಲೆ ತೇಲುತ್ತಿದ್ದೇನೆ
ಅದನ್ನ ಕನ್ನಡದಲ್ಲಿ ಹೇಳೊದಾದರೆ
ಮೊದಲು ಒಂದು ಅಳತೆಯ ನೀರಿಗೆ ಒಂದು ಅಳತೆಯ ಹಿಟ್ಟನ್ನು ಗಂಟಾಗದಂತೆ ಕಲಸಿ
ನಂತರ ಒಂದು ಅಳತೆಯ ನೀರನ್ನು ಕುದಿಯೋಕೆ ಇಟ್ಟು ಕುದ್ದ ಮೇಲೆ ಕಲಸಿಕೊಂಡ ಪೇಸ್ಟ್ನ್ನು ಅದಕ್ಕೆ ಹಾಕೆ ಗೊಟಾಯಿಸಬೇಕು ನಂತರ ಕೆಳಗಿಳಿಸಿಕೊಂಡು ಮುದ್ದೆಯಾಕಾರ ಮಾಡಬೇಕು.
ಮಾಡಿ ನೋಡಿ
ಹುಡುಗರಾ ಇದು ನಮಗಲ್ಲ ಅಂತ ಬಿಗುಮಾನ ಬೇಡ. ಯಾರಿಗೆ ಗೊತ್ತು ಮುಂದೆ ನಿಮ್ಮ ಹೆಂದತಿಯಾಗುವವಳಿಗೆ ಮುದ್ದೆ ಮಾಡಿಕೊಡಬೇಕಾಗೂ ಬರಬಹುದು ![]()

- roopablrao ರವರ ಬ್ಲಾಗ್
- Login or register to post comments
- 624 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಅಯ್ಯೋ ಕರ್ಮವೇ, ಈಗಿನ ಹುಡ್ಗೀರ (ಆಂಟಿರ?
no offense plz) ಕಥೆ ನೋಡ್ರಿ.. ರಾಗಿ ಮುದ್ದೆನು ಇಂಟರ್ನೆಟ್ಟಿನಲ್ಲಿ ನೋಡ್ಕೊಂಡು ಮಾಡೋ ಹಾಗಾಗೋಗಿದೆ.
ಒಮ್ಮೆ ಸುಧಾ ಬರಗೂರು ಹೇಳಿದ್ದು ನೆನಪಾಯ್ತು. ಅವರ ಮಗಳಿಗೆ ಮುದ್ದೆ ಮಾಡೋದು ಹೇಳಿಕೊಡುವಾಗ ಮಗಳು ಕೇಳಿದ್ಲಂತೆ.." ಅಮ್ಮಾ ಮುದ್ದೆಗೆ ದ್ರಾಕ್ಷೆ ಗೋಡಂಬಿ ಎನೂ ಹಾಕೋದು ಬೇಡ್ವಾ" ಅಂತ. ಅದಕ್ಕೆ ಇವರು.." ಇಲ್ಲಾ ಪುಟ್ಟಿ, ಸರಿಯಾಗಿ stirrrrrrrr ಮಾಡ್ಲಿಲ್ಲಾ ಅಂದ್ರೆ ದ್ರಾಕ್ಷೆ ಗೋಡಂಬಿ ಎಲ್ಲಾ ತಾನಾಗೆ ಹುಟ್ಕೋತವೆ ಅದರಲ್ಲಿ " ಅಂತ
ಆದ್ರೂ ರೂಪಕ್ಕನವರ ಸಾಧನೆಗೆ........ ಚಪ್ಪಾಳೆ...

ಭಾವ ಪಾಆಆಆಆಪ
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಅದರಲ್ಲಿ ತಪ್ಪೇನಿದೆ. ಮ್ದೊದಲು ಅಡಿಗೆ ಬುಕ್ ನೋಡಿ ಮಾಡ್ತಿದ್ದರು ಈಗ ಇಂಟರ್ನೆಟ್
ಆಂಟಿ ಅನ್ನೊ ಹಾಗೇನಿಲ್ಲಪ್ಪ ಅಕ್ಕ ಅನ್ನಿ ಸಾಕು
http://thereda-mana.blogspot.com/
ರೂಪ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಅಕ್ಕನ ಆತ್ಮೀಯತೆ ಆಂಟಿಯಲ್ಲಿ ಕಾಣೋದಿಲ್ಲ
http://thereda-mana.blogspot.com/
ರೂಪ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಸಾಮಾನ್ಯ ತಿನಿಸುಗಳಾದ ಅನ್ನ ಸಾರು , ಮುದ್ದೆ , ರೊಟ್ಟಿ ಎಲ್ಲಾ ಯಾರೂ ಬುಕ್ ನೋಡಿ ಮಾಡಲ್ವಪ್ಪ. ಹಾಗೇ ಮನೆಲ್ಲಿ ಕಲಿತುಕೊಳ್ತಾ ಇದ್ರು ಅಮ್ಮನ ಹತ್ತಿರ.
ಆದ್ರೂ ಈಗ ......ಇರಬಹುದೇನೋ ಕಾಲ ಬದಲಾಗಿದೆಯಂತೆ !.
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಚಾಂಗು ಭಳಾ, ಚಾಂಗು ಭಳಾ, ಚಾಂಗುರೇ. ಭಲ ಭಲ ರೂಪರೇ,
ನೋಡಿ ಮಕ್ಳ, ಹೊಟ್ಟೆ ತುಂಬ ತಿಂದರೆ,
ಅಲಲಲರೆ, ಓಡುತಿರದೆ, ಸಕ್ರೆ, ಕೊಬ್ಬು, ತೊಂದರೆ!!!!!!
ಮತ್ತೆ, ರಾಗಿ ಬಿಸ್ಕೇಟು ಯಾವಾಗ ?
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
"ಅಲಲಲರೆ, ಓಡುತಿರದೆ, ಸಕ್ರೆ, ಕೊಬ್ಬು, ತೊಂದರೆ!!!!!!"
ಉಳಿದೆಲ್ಲ ಸರಿ, ಸಕ್ರೆ ಓಡೋದೇನೋ ಹಳೆಯ ಕಾಲದ food fad. ಎಷ್ಟೋ ಸಾರಿ ನಾನೇ ಮುದ್ದೆ ತಿಂದು ರಕ್ತಪರೀಕ್ಷೆ ಮಾಡಿಕೊಂಡು ರಾಗಿಮುದ್ದೆಯಿಂದ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವುದನ್ನು ಗಮನಿಸಿದ್ದೇನೆ. ಆದರೆ ರಾಗಿಮುದ್ದೆಯ ರುಚಿಯ ಬಗ್ಗೆ ಯಾವುದೇ ತಕರಾರಿಲ್ಲ.
"ಏರಿದವನು ಚಿಕ್ಕವನಿರಬೇಕು"
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ರಮೇಶರೆ, ನನಗೆ ಈ ವಿಚಾರ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ನನ್ನಿ. ಇದರ ಬಗ್ಗೆ ಮತ್ತಷ್ಟು ವಿಚಾರಿಸಿ ತಿಳಿದುಕೊಳ್ಳುತ್ತೇನೆ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ರೂಪ,
ಒಳ್ಳೆಯ ಲಿಂಕು! ನನಗೂ ರಾಗಿ ಮುದ್ದೆ ಸರ್ರಿಯಾಗಿ ಮಾಡ್ಬೇಕಾದ್ರೆ ಬಹಳ trial & error ಆಯ್ತು. ಇನ್ನು ಮೈಸೂರು ಪಾಕ್ ಒಂದು ಸಾಧಿಸಬೇಕು. ಹೀಗೆ bulletproof recipe ಇದ್ರೆ ದಯವಿಟ್ಟು ತಿಳಿಸಿ. ಹಿಂದಿನ ಸರ್ತಿ ಮೈಸೂರ್ ಪಾಕ್ ಶುರು ಮಾಡಿ, ಸರಿಹೋಗದೆ, ಕೊನೆಗೆ ಬರ್ಫಿಯಾಗಿ ಪರಿವರ್ತಿಸಿದೆ.
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಮೈಸೂರು ಪಾಕ್ ಮಾಡುವವರಲ್ಲಿ ನನ್ನ ಕೆಲವು ಕೋರಿಕೆ.
೧. ಮೈಸೂರು ಪಾಕು ಚೆನ್ನಾಗಿ ಕಲಿತ ಮೇಲೆ, ಸೆವೆನ್-ಕಪ್ ಮಾಡೋದನ್ನ ರೂಢಿಸಿಕೊಳ್ಳಿ. ಹೆಚ್ಚುಕಡ್ಮೆ ಮೈಸೂರು ಪಾಕಿಗೆ ಬೇಕಾದವೇ ಇದಕ್ಕೂ ಬೇಕಾಗಿರೋದು. ಇದರಲ್ಲಿ ತುಪ್ಪದ ಅಂಶ ಕಡ್ಮೆ ಇರತ್ತೆ. ಬೇಗ ಇಷ್ಟ ಆಗತ್ತೆ.
೨. ಮೈಸೂರು ಪಾಕ್ ತೀರಾ ಮ್ಯಾತ್ತುಗೆ ಮಾಡಬೇಡಿ.
೩. ಮೈಸೂರು ಪಾಕ್ ಮಾಡಿ ಇಳಿಸಿಯಾದ ಮೇಲೆ, ಆರ್ತಾ ಇರತ್ತಲ್ಲ, ಆಗ ಮೇಲ್ಗಡೆ, ಸ್ವಲ್ಪ ಸಕ್ಕರೆ ಉದುರಿಸಿ. ತಿನ್ನುವಾಗ ವಿಶೇಷ ರುಚಿ ಬರತ್ತೆ.
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಮೈಕ್ರೋವೇವ್ ನಲ್ಲಿ ಮುದ್ದೆ ಮಾಡ್ಬೋದಾ?
/ಮಿ ಪ್ರಯತ್ನ ಪಡ್ತಾನೆ ...
--_ರಾಘವ_
http://raghavan.vinay.googlepages.com
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಅರೆರೇ ರಾಘವಾ (hacker) ಫೋಟೋ ಹಾಕ್ಕೊಂಡುಬಿಟ್ಟಿದೀಯ
ನಿಮ್ಮವನೇ,
ಅರವಿಂದ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಸುನೀಲ್,
ನನ್ನ ಮೈಸೂರ್ ಪಾಕ್ ಒಂದು ಸರ್ತಿ ಸರಿಯಾಗಿ ಬಂತು. ಮುಂದಿನ ಸರ್ತಿ ಈ ಸೆವೆನ್-ಕಪ್ ಸ್ವೀಟ್ ಆಗಿ ಪರಿವರ್ತಿಸಿದೆ. ಆಂದ್ರೆ, ನಾನು ಹೇಳ್ತಾ ಇರೋದು ಉಲ್ಟಾ. ಮೈಸೂರ್ ಪಾಕ್ ಮಾಡೋದು ಕಷ್ಟ, ಈ ಸೆವೆನ್-ಕಪ್ ಸುಲಭ. ಇದನ್ನು ಮಾಡೋಕೇನು ಮೈಸೂರ್ ಪಾಕ್ expertise ಬೇಕಿಲ್ಲ. ಅಳತೆ ಸರಿ ಇದ್ರೆ ಯಾರ್ಬೇಕಾದ್ರೂ ಮಾಡ್ಬೋದು. ಮ.ಪಾ. ಹಾಗಲ್ಲ.
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಕಲ್ಪನಾ ಅವರೆ, ನೀವು ಹೇಳೋದು ಸರಿ. ಅದಕ್ಕೆ ನಾನು ಹೇಳಿದ್ದು, ಮೊದಲು ಮೈಸೂರು ಪಾಕು ಕಲಿತು ಆಮೇಲೆ ಸೆವೆನ್ ಕಪ್ ಮಾಡ್ಬೇಕು ಅಂತ. ಮೊದಲೇ ಸೆವೆನ್ ಕಪ್ ಹೇಳಿಕೊಟ್ಟುಬಿಟ್ರೆ, "ಇದೇ ಚೆನ್ನಾಗಿದ್ಯಲ್ಲಾ, ಬರೀ ತುಪ್ಪ ಕುಡ್ಯೋ ಆ ಮ್ಯಾತ್ತು, ತೊಪ್ಪೆ ಮೈಸೂರು ಪಾಕು ಯಾಕೆ", ಅಂತ ಮೂದಲಿಸಿಬಿಟ್ರೆ ಏನ್ಮಾಡೋದು. ಆಗ ನಿಜಕ್ಕೂ ಸಖತ್ತಾಗಿ ಮೈಸೂರು ಪಾಕು ಮಾಡೋರ ಗತಿಯೇನು. ಅದಕ್ಕೆ, ಮೊದಲು ಮೈಸೂರು ಪಾಕು, ಆಮೇಲೆ ಸೆವೆನ್ ಕಪ್. ಒಂಥರಾ, ಮೊದಲು ಮೈಸೂರು ಸಿಲ್ಕು, ಆಮೇಲೆ ಮಿಕ್ಕವು ಅನ್ನೋ ಹಾಗೆ.
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
"..ಪೇಸ್ಟ್ನ್ನು ಅದಕ್ಕೆ ಹಾಕೆ ಗೊಟಾಯಿಸಬೇಕು ನಂತರ ಕೆಳಗಿಳಿಸಿಕೊಂಡು ಮುದ್ದೆಯಾಕಾರ ಮಾಡಬೇಕು..."
ಅದು ಗೊಟಾಯಿಸು ಅಲ್ಲ 'ವೋನಿಸು'. ಕುದಿದ ನೀರಿಗೆ ರಾಗಿ ಹಿಟ್ಟು ಹಾಕುವಾಗ ಹಿಟ್ಟಿನ ದೊಣ್ಣೆಯಿಂದ ಚೆನ್ನಾಗಿ ವೋನಿಸಬೇಕು. ಇಲ್ಲಾಂದ್ರೆ ಗಂಟಾಗ್ಬುಡುತ್ತೆ. ಮತ್ತೆ ನೀರು ಹಿಟ್ಟು ಸರಿಯಾದ ಅನುಪಾತದಲ್ಲಿರಬೇಕು ಇಲ್ಲ ಅಂದ್ರೆ ಮುದ್ದೆ ತೆಳ್ಳಗೆ ಆಗ್ ಬುಡುತ್ತೆ. ನಮ್ಮಂತವರಿಗೆ ಮುದ್ದೆ ತೆಳ್ಳಗೆ ಇರ್ ಬಾರದು. ಗಟ್ಟಿಗೆ ಇರಬೇಕು. ಆಗ ನುಂಗಕ್ಕೆ ಸಲೀಸು.
ಜೊತೆಗೆ ಉಪ್ಪೇಸರು ಸಾರು ,ಚುರುಗುಟ್ಟ್ಟೊ ಕಾರ ಇದ್ರೆ ಸಕ್ಕತ್. ಮಜವಾಗಿ ಹೊಡಿಬಹುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಗಂಡಸರ ಮನಸು ಗೆಲ್ಲಬೇಕೆ , ಹಾಗಿದ್ರೆ ರಾಗಿ ಮುದ್ದೆ ಮಾಡಿ ಕೊಡಿ..!!
ನೀವು ಮುದ್ದೆ ಮಾಡಲು ಪಟ್ಟ ಪಾಡು ನೋಡಿದ್ರೆ ಅಯ್ಯೊ ಪಾಪ ಅನ್ಸುತ್ತೆ. ಆದ್ರು ಕೊನೆನಲ್ಲಿ ನೀವು ಮುದ್ದೆ ಮಾಡಿ ಗೆದ್ಬಿಟ್ರಲ್ಲ..!
ನನಗು ಮುದ್ದೆ ಅಂದ್ರೆ ಬಹಳ ಇಷ್ಟ, ಆದ್ರೆ ನನಗೆ ಮಾಡಿಕೊಡೋಕೆ ಜೊತೆನಲ್ಲಿ ಪ್ಯಾಮಲಿ ಇಲ್ಲ. ಅದಕ್ಕೆ ನಾನು ನನ್ನ ಗೆಳಯ ಸೇರಿ ಒಂದು ದಿನ ೨೦ ಜನಕ್ಕೆ ಆಗುವಷ್ಟು ರಾಗಿ ಮುದ್ದೆ ಮಾಡೊ ಸಾಹಸಕ್ಕೆ ನಿಂತುಬಿಟ್ವಿ.
ಆದ್ರೆ ನಾನು ನಮ್ಮ ತಾಯಿ ಮಾಡುತಿದ್ದ ರೀತಿ (ಕುದಿವ ನೀರಿಗೆ ರಾಗಿ ಹಿಟ್ಟು) ಅನುಸರಿಸಿಯೇ ಮಾಡಿದ್ದು.
ಮೊದಲ ೨-೩ ಮುದ್ದೆ ತುಂಬ ಮೆತ್ತಗಿತ್ತು, ಆಮೇಲೆ ಎಲ್ಲ ಮುದ್ದೆ ಬಹಳ ಚನ್ನಗಿ ಬಂತು.
ನಮ್ಮ ಸ್ನೇಹಿತರ ಗುಂಪೋ ನಮ್ಮನ್ನ ಹೊಗಳಿದ್ದೆ ಹೊಗಳಿದ್ದು.
-ಯುವಪ್ರೇಮಿ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ನೀವು ಹೇಳಿರುವ ಬಗೆಯಲ್ಲಿ ಟ್ರೈ ಮಾಡುವೆನು, ಗೊಟಾಯಿಸುವದು ಅಂದರೆ ಏನು? ಮತ್ತು ಉಪ್ಪು ಹಾಕಬೇಕಾ?