ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ನನ್ನವರಿಗೆ ಕನ್ನಡ ಕಲಿಸಿದ್ದು
ನಾನು ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿ.
ನನ್ನವರೋ ಉಡುಪಿಯಿಂದ ವಲಸೆ ಹೋಗಿ ತಮಿಳುನಾಡಿಗೆ ಸೇರಿದ್ದ ಮಾಧ್ವರ ಸಂತತಿಯ ತುಂಡು.
ಅಲ್ಲಿಯೇ ಹುಟ್ಟಿ ಬೆಳೆದದ್ದರಿಂದ ತಮಿಳಿನ ಗಾಳಿ ಚೆನ್ನಾಗಿ ಆವರಿಗೆ ಚೆನ್ನಾಗಿಯೆ ಹೊಡೆದಿತ್ತು.
ನಮ್ಮದು ಪ್ರೇಮ ವಿವಾಹ.
ಪ್ರೀತಿಸುವಾಗ ಅವರ ತಮಿಳು ಮಿಶ್ರಿತ ಕನ್ನಡ ನನಗೆ ಏನೂ ಅನ್ನಿಸುತ್ತಿರಲಿಲ್ಲ.
ಮದುವೆಗೆ ಮುಂಚೆಯೇ ನಮ್ಮ ಅಮ್ಮ ಹೇಳಿದ್ದರು . ನಿನಗೆ ಅವರಿಗೆ ಕನ್ನಡದ ಬಗ್ಗೆ ಜಗಳ ಜಾಸ್ತಿ ಆಗುತ್ತದೆ ಎಂದು. ಆದರೆ ನಾನು ಒಪ್ಪಿರಲಿಲ್ಲ.
ಹಾಗೂ ಹೀಗೂ ಮದುವೆ ಮುಗಿದು ಅವರ ಮನೆಗೆ ಹೋದಾಗ ಪರಿಸ್ಠಿತಿಯ ಅರಿವು ಆಗಿತ್ತು. ಬರೀ ತಮಿಳು ಚಾನೆಲ್ , ತಮಿಳ್ ಹಾಡು .
ತಮಿಳಿನಲ್ಲಿ ಮಾತಾಡುತ್ತಿದ್ದಾರೊ ಅಥವ ಕನ್ನಡವೋ ಎಂದು ಅರಿವಾಗದ ಸ್ಥಿತಿ. ತಮಿಳು ನಾಡಿಗೆ ಬಂದುಬಿಟ್ಟೆನೋ ಎಂಬ ಗಾಭರಿ
"ಅಲ್ಲಿಗೊಂದು ವರೆ ಇಟ್ಟುಬಿಡು" ಎಂದರು ನಮ್ಮ ಅತ್ತೆ ಹಾಗೆಂದರೇನು ? ತಿಳಿಯಲಿಲ್ಲ ಆಮೇಲೆ ಅದು ಬಟ್ಟೆ ಎಂದು ಗೊತ್ತಯಿತು
"ನಂಗೆ ಹುಳಿ ಸಾರಲ್ಲ" ನಮ್ಮ ಭಾವ ಹೇಳಿದಾಗ ಗೊಂದಲ . "ನಮಗೂ ಅಷ್ಟೆ ಹುಳಿ ಸಾರಲ್ಲ ಅದೇ ಬೇರೆ ಇದೇ ಬೇರೆ " ಎಂದಿದ್ದೆ ನಾನು.
ನಮ್ಮ ವರು ಸಾರಲ್ಲ ಎಂದರೆ ಸೇರೊದಿಲ್ಲ ಎಂದು ಹೇಳಿದಾಗ ನಗು
ಸ್ವಲ್ಪ ಕಾಫಿ ಧೂಳು ಕಡಿಮೆ ಹಾಕು ಎಂದಿದ್ದರು ಇವರು. ಧೂಳು ಎಂದರೆ ಪುಡಿ ಎಂದು ತಿಳಿಯಿತು
ಹಾಗೆ ಗೂಡೆ, ವಾಟೆ ಏನೇನೂ ವಿಚಿತ್ರವದ ಕೇಳರಿಯದ ಶಬ್ದಗಳು.
ಮಾತು ಮಾತಿಗೆ ರಜನಿ, ಜಯಲಲಿತ, ಕರುಣಾನಿಧಿಯ ಮೆರೆಸುವಿಕೆ
ಆಗಲೇ ನಿರ್ಧರಿಸಿದೆ . ಹೇಗಾದರೂ ಮಾಡಿ ಇವರನ್ನು ಕನ್ನಡಿಗರನ್ನಾಗಿ ಮಾಡಬೇಕೆಂದು
ಒಮ್ಮೆ ಹಟ ಮಾಡಿ ಎರೆಡು ಕನ್ನಡ ಚಿತ್ರಗಳಿಗೆ ಕರೆದುಕೊಂಡು ಹೋಗಿದ್ದೆ. ನಂತರ ಮನೆಯಲ್ಲಿ ಗಲಾಟೆ ಮಾಡಿ ಉದಯ ಟಿ.ವಿ ಹಾಕುವಂತೆ ಮಾಡಿದ್ದೆ.
ನನ್ನ ಮಗಳು ಹುಟ್ಟಿದ ನಂತರ ಸ್ವಚ್ಚ ಕನ್ನಡ ಕಲಿತರೇ ಮನೆಗೆ ಬರುವುದಾಗಿ ಹೆದರಿಸಿದೆ.
ನಮ್ಮವರು ನಮ್ಮ ಅಮ್ಮನ ಬಳಿಯಲ್ಲಿ ಕನ್ನಡ ಕಲಿಯಲು ಬರುತ್ತಿದ್ದ ದಿನಗಳು ಈಗಲೂ ನೆನೆಪಿದೆ. ಆಗಲೇ ’ಮುಂಗಾರು ಮಳೆ’ ಯಾಗಿ ಕನ್ನಡದ ಹಾಡುಗಳು ಅತೀ ಮಧುರವಾಗತೊಡಗಿದವು. ಅವರ ಕನ್ನಡ ಆಸಕ್ತಿ ತೀವ್ರವಾಗತೊಡಗಿತು
ಈಗ ನನಗೆ ಆಶ್ಛರ್ಯವಾಗುವಂತೆ ಸ್ವಚ್ಚ ಕನ್ನಡದಲ್ಲಿ ದೊಡ್ಡ ದೊಡ್ಡ ಪದಗಳನ್ನು ನನ್ನ ಮುಂದಷ್ಟೆ ಅಲ್ಲ ಅವರ ನೆಂಟರ ಬಳಿಯೂ ಆಡುತ್ತಾರೆ.
ಅವರು ಕನ್ನಡ ಓದಲೂ ಬರೆಯಲೂ ಕಲಿತಿದ್ದಾರೆಂದು ತಿಳಿದಾಗ ತುಂಬ ಹೆಮ್ಮೆಯಾಯಿತು
ನಾನು ಕನ್ನಡದವನು ನಮ್ಮ ವಂಶದವರು ಇಲ್ಲೇ ಉಡುಪಿಯವರು ಎಂದು ಎದೆ ತಟ್ಟಿ ನುಡಿಯುವಾಗಲೆಲ್ಲಾ ನಾ ಹಿಡಿದ ಪಟ್ಟು ವ್ಯರ್ಥವಾಗಲಿಲ್ಲ ಎಂಬ ನೆಮ್ಮದಿ.
ಒಮ್ಮೊಮ್ಮೆ ನಾನೆ ಹಿಂದಿ ಸಿನಿಮಾ ನೋಡಿದಾಗಲೆಲ್ಲ " ನೀನು ಕನ್ನಡದವಳಾಗಲು ಲಾಯಕಿಲ್ಲ " ಎಂದು ರೇಗಿಸುತ್ತಾರೆ.
ಮೊನ್ನಿನ ಹೊಗೇನ್‌ಕಲ್ ಗಲಾಟೆ ಯಲ್ಲಿ ಅವರು ಸಮರ್ಥಿಸಿದ್ದು ನಮ್ಮನ್ನೇ.

- roopablrao ರವರ ಬ್ಲಾಗ್
- Login or register to post comments
- 486 hits
- Email this blog





RSS:
ಪ್ರತಿಕ್ರಿಯೆಗಳು
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ಚಾಂಗು ಭಳಾ ಭಾಫುರೆ, ಭಾಪು ಭಳಿರೇ. ಅಬ್ಬಬ್ಬಾ, ಗಂಡನನ್ನೇ ತುಂಡಾಗಿಸಿ, ನಿಮ್ಮ 'ಅವರಿಗೆ' ಕನ್ನಡ ಕಲಿಸಿದ್ದಕ್ಕಾಗಿ ಹೆನ್ನನ್ನಿ. ನಿಮ್ಮವರಿಗೇ ಕನ್ನಡ ಕಲಿಸಿರುವಾಗ, ಮಗಳಿಗೂ ಕನ್ನಡ ಕಲಿಸಿಯೇ ಕಲಿಸುತ್ತೀರ, ಬಿಡಿ. ನಿಮ್ಮಂತಹ ನೇರ, ದಿಟ್ಟ ಮಹಿಳೆಯರ ಸಂತತಿ ಹೆಚ್ಚಾಗಲಿ. ಸವಿಗೂ ಮಿಕ್ಕು ಸವಿ.
ಕೇಸರಿ ಹಾಕಿರುವ ಬಾದಾಮಿ ಹಾಲಿನಲ್ಲಿ ಜಿಲೇಬಿಯನ್ನು ಅದ್ದಿ ಮೆದ್ದ ಹಾಗಾಯಿತು
ಹಾಗೆಯೇ, ನೀವು ಕನ್ನಡ ಹಾಡುಗಳ ಪ್ರಸ್ತಾಪ ಮಾಡಿದ್ದೂ ಕೂಡ ಸರಿಯಾಗಿದೆ. ಕನ್ನಡವನ್ನು ನಾವು ಭಾವುಕವಾಗಿ ಸಮರ್ಥಿಸುಕೊಳ್ಳುವುದು ಒಂದುಕಡೆಯಾದರೆ, ಹೀಗೆ ನಮ್ಮ ಬೇರೆ ಬೇರೆ ಉತ್ಪನ್ನಗಳನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದರೆ ಕನ್ನಡತನ ಇನ್ನೂ ಗಟ್ಟಿಯಾಗುತ್ತದೆ ಅಂತ ನಾನು ನಂಬಿದ್ದೇನೆ. ನೀವು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೀರಿ. ಸೂಪರ್.
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ವಾಹ್ . ನಿಮ್ಮ ಕೆಲಸವನ್ನು ಮೆಚ್ಚಲೇ ಬೇಕು . ಮನೆಯಲ್ಲಿ ಕನ್ನಡ ಬೆಳೆದರೆ ಸಾಕು, ಬೀದಿಯಲ್ಲೂ ಬೆಳೆದೇ ಬೆಳೆಯುತ್ತೆ.
ನಮ್ಮ ಹೆಮ್ಮೆಯ ’ಸಂಪದತಿ’ ನೀವು
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ನಿಮ್ಮ ಕನ್ನಡ ಪ್ರೇಮ ನಿಜಕ್ಕೂ ಅಭಿನಂದನಾರ್ಹ..
ನಿಮಗೆ ಒಳ್ಳೆಯದಾಗಲಿ..ನಿಮ್ಮ ’ಅವರಿಗೆ’ ಕನ್ನಡ ಕಲಿಸಿದ್ದಕ್ಕಾಗಿ ನನ್ನಿ.
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ಅಬ್ಭಾ! ತಮಿಳುನಾಡಿನಲ್ಲಿ ಹುಟ್ಟಿಬೆಳೆದವರನ್ನು ಕನ್ನಡಿಗರನ್ನಾಗಿ ಪರಿವರ್ತಿಸಿದ್ದೀರ. ಅದು ನಿಜಕ್ಕೂ ಶ್ಲಾಘನೀಯ ಕಣ್ರೀ
ಯಾಕಂದರೆ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನನ್ನ ತಮಿಳು ಸ್ನೇಹಿತೆಯರಿಗೆ ಕನ್ನಡ ಇವತ್ತಿನ ದಿನವೂ ಸರಿಯಾಗಿ ಬರುವುದಿಲ್ಲ! ಆದರೆ, ತೆಲುಗಿನ ಸ್ನೇಹಿತೆಯರು ಪರವಾಗಿಲ್ಲ, ಕನ್ನಡ ಕಲಿತು ಚೆನ್ನಾಗಿ ಮಾತನಾಡುತ್ತಾರೆ. ಅದೂ ಅಲ್ಲದೆ, ತಮಿಳು ಗಂಡನಿಗೆ ಕನ್ನಡ ಕಲಿಸಲಾರದೆ, englishನಲ್ಲಿ ಮಾತನಾಡುವ ಒಂದಷ್ಟು ಸ್ನೇಹಿತೆಯರಿದ್ದಾರೆ! ಆದ್ದರಿಂದ, ನಿಮ್ಮ ಕನ್ನಡ ಪ್ರೀತಿಗೆ ಜೈ 
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ಕಲ್ಪನರವರೇ
ಫೋಟೊನಲ್ಲಿ cricket ಆಡುತ್ತಿರುವವರು ಯಾರು?
ರೂಪ
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ನಿಜಕ್ಕೂ ಗೊತ್ತಿಲ್ಲ
ಅಂತರ್ಜಾಲದಲ್ಲಿ ಎಲ್ಲೋ ಸಿಕ್ಕಿದ್ದು ಇತ್ತು. ಚೆನ್ನಾಗಿದೆ ಅಂತ ಹಾಕಿಕೊಂಡೆ.
ನಿಮ್ಮ ಮಗಳು(?) ಬಹಳ cute ಆಗಿದ್ದಾಳೆ
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ನನ್ನ ಮಗಳು ಥ್ಯಾಂಕ್ಸ್ ಹೇಳ್ತಾ ಇದಾಳೆ
ರೂಪ
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ಬಹಳ ಚೆನ್ನಾಗಿದೆ. ಅಭಿನಂದನೆಗಳು.
ಈಗ ನೀವೇ ಹೇಳಿ, ಹೆಂಗಸರಿಗೆ ಸ್ವಾತಂತ್ರ ಇಲ್ಲ ಅನ್ನುವುದು ಯಾರು?
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ತುಂಬಾ ಥ್ಯಾಂಕ್ಸ್ ಆದರೆ
ಇಷ್ತೆಲ್ಲಾ ಹೊಗಳೊ ಅಂತಹ ಕೆಲಸ ಏನು ಮಾಡಿಲ್ಲ
ನನಗೆ ತಮಿಳು ಬರಲ್ಲ
ಮನಸಿನ ಭಾವನೆಗಳನ್ನ ನಮ್ಮ ತಾಯ್ನುಡಿಯಲ್ಲಿ ಹೇಳಿದಷ್ಟು ಚೆನ್ನಾಗಿ ಇಂಗ್ಲೀಷನ್ಅಲ್ಲಿ ಹೇಳಲು ಸಾಧ್ಯವಿಲ್ಲ . ಹಾಗಾಗಿ ನನ್ ಸ್ವಾರ್ಥವೂ ಅಡಗಿತ್ತು.
ರೂಪ
ಉ: ನನ್ನವರಿಗೆ ಕನ್ನಡ ಕಲಿಸಿದ್ದು
ಭಳಿರೆ ಕನ್ನಡದ ವೀರ ವನಿತೆ. ನಿಮಗೆ ಕತ್ತಿ ಕುದುರೆ ಕೊಟ್ಟು ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಕೊಡುವ ಕೆಲ್ಸ ಮಾಡಿದ್ದಿರ. ನಿಮ್ಮ ಪತಿ ಕಡೆ ಅವರು ನಿಮ್ಮ ಕನ್ನಡದ ಶಂಖನಾದ ಕೆಳಲಾಗದೆ ಕಿವಿಯಲ್ಲಿ ಹತ್ತಿ ಇಟ್ಟುಗೊಂಡು ನಿಮಗೆ 'ಹತ್ತಿಮಬ್ಬೆ' ಪ್ರಶಸ್ತಿ ಕೊಟ್ಟಾರು ಜೋಕೆ:)