ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
(ಕೃಷ್ಣನ ಕೊರಳಿನಾ ಕರೆಯ ರಚನೆಕಾರರ ಕ್ಷಮೆ ಕೋರಿ)
ನೆಚ್ಚಿನಾ ಬ್ಲಾಗನ್ನ ತೆರೆ
ವೀಕ್ಷಿಸು ನೆಚ್ಚಿನ ಬ್ಲಾಗನ್ನ ತೆರೆ
ತೆರೆ ತೆರೆ
------------------------------
ರಿಂಗಿಸೊ ಫೋನನ್ನು ತೊರೆ ತೊರೆ
ಕಡತದ ವಿಷಯಾನಾ ಮರೆ ಮರೆ
ಗಣಕದಲಿ ಬ್ಲಾಗನ ತೆರೆ ತೆರೆ
ನೆಟ್ಟಿನಾ ಬ್ಲಾಗಿನಾ ತೆರೆ
-----------------------------------
ಮನೆಯಲ್ಲಿನ ಗಂಡನ್ನ ಮರೆ ಮರೆ
ಅಳುತ್ತಿರೋ ಕಂದನ್ನ ಮಾಡು ಮರೆ
ಆನಲೈನ್ ಪ್ರಪಂಚಕೆ ನಡೆ ನಡೆ
ವೀಕ್ಷಿಸು ನೆಟ್ಟಿನಾ ಬ್ಲಾಗಿನಾ ತೆರೆ
--------------------------------------------
ಅಳುತಿಹ ಮಗನು ತಾಯಿಯ ಮೋರೆಯ
ಹುಡುಕುತಿರುವ ರೀತಿ
ಛಾಯ ಜಗದ ಮಾಯ ತೆರೆಯು
ತಂದಾಯಿತೆ ಭ್ರಾಂತಿ
ಇನ್ನಾಯಿತೆ ಪ್ರೀತಿ
ಇನ್ನಾಯಿತೆ ಪ್ರೀತಿ
ನೆಚ್ಚಿನಾ ಬ್ಲಾಗಿನಾ ತೆರೆ
--------------------------------
- roopablrao's blog
- Login or register to post comments
- 386 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
:D ... ಇದೂ ಒಂದು ಕವನ! :D
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
.
.
.
.
ನಾನು ಕವನ ಅಂತ ಹೇಳಿಲ್ಲವಲ್ಲ
ಸುಮ್ನೆ ಯಾಕೆ ಕಲ್ಪನೆ ಮಾಡಿಕೋತೀರಾ
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ನಾನೂ ಅದೊಂದು ಕವನ ಎಂದು ಹೇಳಿಲ್ಲ... ನೀವ್ ಯಾಕೆ ಕಲ್ಪನೆ ಮಾಡಿಕೊಂಡ್ರಿ?
!! ಇರಬೋದಾ ಅಂತ. ಅದೇನು ಅಂತ ತಿಳೀಲಿಲ್ಲ. ಅಶ್ಟು ಚನ್ನಾಗಿತ್ತು. :D
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ಇದು ಒಂದು ಕವನಾ ಅಂತ ಬರೆದು ವಿಕಟ ನಗುವಿನ ಮುಖವಾಡ ಧರಿಸಿದರೆ ಪ್ರಶ್ನೆ ಅಂತ ಗೊತ್ತಿರಲಿಲ್ಲ ಬಿಡಿ
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ಚೆನ್ನಾಗಿದೆ ! ಇದೇ ತರಹಾನೇ ತೆರೆಯೋ ಬ್ರೌಸರನು ಅಂತ ಹಿಂದೆ ನಾನು ಬರೆದಿದ್ದೆ. 'ತಾರಕ್ಕ ಬಿಂದಿಗೆ' ಹಾಡಿನ ಧಾಟಿಯಲ್ಲಿ . ಇಲ್ಲಿದೆ ನೋಡಿ . http://sampada.net/a...
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ನಿಮ್ಮ ತಾರಕ್ಕ ಬಿಂದಿಗೆ ಓದಿದೆ
ತುಂಬಾ ಚೆನ್ನಾಗಿದೆ
ಧನ್ಯವಾದಗಳು
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ರೂಪ,
ಹೇಗಿದ್ದೀರ, ಬಹಳ ದಿವಸ ಆಯ್ತು.
ತುಂಬ ಚೆನ್ನಾಗಿದೆ. ಮೂಲ ರಚನೆ ಬೇರೆಯವರದೆ ಆದರೂ ನಿಮಗೆ ಆ ಹಾಡಿನಿಂದ ಪ್ರೇರೇಪಿತರಾಗಿ, ಸರಿಯಾಗಿ ಜೋಡಿಸಿ, ಬರೆಯುವುದು ಸ್ವಲ್ಪ ಕಷ್ಟವೆ. ಚೆನ್ನಾಗಿ ಬಂದಿದೆ.
ಕಮಲ
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ಏನೋ ಕಮಲ
ಮನಸಿಗೆ ಬಂದ ಹಾಗೆ ಬರೆದೆ
ನಾನು ನೆಟ್ಟನ್ನು ಹಚ್ಚಿಕೊಂಡಿರೋ ರೀತಿ ಅಷ್ಟೆ
ವಂದನೆಗಳು
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ನೀವೂ ಹಾಡು ಬರೆಯಲು ತೊಡಗಿದರೆ ನಾವು ಬೇರೆ ಹಾದಿ ಹಿಡಿಯ ಬೇಕಾದೀತೇನೋ.
ಹಾಡು (ಕವನ ಅಲ್ಲ ಅಂತ ನೀವೇ ಹೇಳಿದ್ದೀರಿ) ಚೆನ್ನಾಗಿದೆ.
ಹೀಗೆಯೇ ಬರೆಯುತ್ತಿರಿ.
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ನೀವೂ ಹಾಡು ಬರೆಯಲು ತೊಡಗಿದರೆ ನಾವು ಬೇರೆ ಹಾದಿ ಹಿಡಿಯ ಬೇಕಾದೀತೇನೋ.
ಅಂದರೆ?
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ಹೆಗಡೆಯವರಿಗೆ ಹೆದರಿಕೆಯಾಗಿದೆ.. ನೀವು ಆಗಲೇ ಅಷ್ಟು ಚೆನ್ನಾಗಿ ಕತೆ ಬರೆಯುತ್ತಿದ್ದವರು, ಹಾಡೂ.. ಬರೆಯೋಕೆ ಶುರು ಮಾಡಿದರೆ, ಅವರ ಕವನ/ಹಾಡಗಳನ್ನ ಮೂಸೋರು ಇಲ್ಲವಾಗುತ್ತಾರಾ? ;)
ಏನಂತೀರಿ ಹೆಗಡೆಯವರೇ..?
ನಿಮ್ಮೊಲವಿನ,
ಸತ್ಯ..
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
>>ಹಾಡೂ.. ಬರೆಯೋಕೆ ಶುರು ಮಾಡಿದರೆ, ಅವರ ಕವನ/ಹಾಡಗಳನ್ನ ಮೂಸೋರು ಇಲ್ಲವಾಗುತ್ತಾರಾ?
ಏನಂತೀರಿ ಹೆಗಡೆಯವರೇ..?
ನಾನೆಲ್ಲಿ ಸುರೇಶರವರೆಲ್ಲಿ
ಅಜ ನಾನಾದರೆ ಗಜ ಅವರು
ನನ್ನ ಹಾಡಿಗೂ ಅವರ ಕವನಕೂ ಅಜಗಜಾಂತರ
>>ಮೂಸೋರು ಇಲ್ಲವಾಗುತ್ತಾರಾ?
ದಯವಿಟ್ಟು ಪದ ಚೇಂಜ್ ಮಾಡಿ
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
@>>ಮೂಸೋರು ಇಲ್ಲವಾಗುತ್ತಾರಾ?
ದಯವಿಟ್ಟು ಪದ ಚೇಂಜ್ ಮಾಡಿ
ಸ್ವಲ್ಪ ಬೇಕೆಂದೇ.. ಉತ್ಪ್ರೇಕ್ಷೆ ಮಾಡಿದೆ..
ತಪ್ಪು ತಿಳಿಯಬೇಕಿಲ್ಲಾ.. ಹೆಗ್ಡೆಯವರ ಉತ್ತರಕ್ಕಾಗಿ ಕಾದಿದ್ದೇನೆ..
ಅವರು.. ಯಾವ ಅರ್ಥದಲ್ಲಿ ಹೇಳಿದರೋ.. ಇದು ನನ್ನ ಊಹೆ..
ಅವರಿಗೂ ನಾನು ಹೇಳಿದ್ದು ಜಾಸ್ತಿಯಾಯಿತು ಅನ್ನಿಸಿದರೆ.. ನನ್ನ ಮಾತು ವಾಪಸ್ ತೆಗೆದುಕೊಳ್ಳುತ್ತೇನೆ.. ಈ ಕ್ಷಣದಿಂದಲೇ..
ನನ್ನ ಮನ್ನಿಸಿ..
ನಿಮ್ಮೊಲವಿನ,
ಸತ್ಯ..
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
ರೂಪಾ,
ಕತೆ ಬರೆಯುವುದರಲ್ಲಿ ನೀವು ಸಿಸ್ಸೀಮರು. ನಿಮ್ಮ ಕತೆಗಳನ್ನು ಮೆಚ್ಚಿ ಬರೆದಿದ್ದೆ ಕೂಡ.
ಇನ್ನು ಕವಿತೆಯನ್ನೂ ಶುರುಮಾಡಿದ್ದೀರಿ ಅಂದಾಗ ಭಯವಾಗತೊಡಗಿದೆ. ನೀವು ಕವಿತೆ ಬರೆಯತೊಡಗಿದರೆ ನಮ್ಮ ಕವಿತೆಗಳಿಗೆ ಬೇಡಿಕೆ ಇರೋಲ್ಲವೇನೋ ಅಂತ.
ನಿಮ್ಮನ್ನು ಹೊಗಳಿದ್ದೇ ಆದರೂ, ಅದು ಪರೋಕ್ಷವಾಗಿ ಅಷ್ಟೆ. ತೆಗಳಿದ್ದಂತೂ ಅಲ್ಲ. ಸತ್ಯಚರಣರು ನನ್ನ ಮಾತನ್ನು ಇಷ್ಟೊಂದು ಚೆನ್ನಾಗಿ ಅರ್ಥೈಸಿಕೊಂಡಿರೋದು ತಿಳಿದು ಅತೀವ ಆನಂದವಾಯ್ತು. ಸದ್ಯ ಯಾರೂ ಅಪಾರ್ಥ ಮಾಡಿಕೊಂಡಿಲ್ಲಲ್ವಾ...?
ಬೇರೆ ಹಾದಿ ಅಂದರೆ "ಬದುಕುವ ಬೇರೆ ಹಾದಿ". ಇದು ಇಲ್ಲಿ ಭಾವನಾತ್ಮಕ ಮತ್ತು ಸಾಂಕೇತಿಕ ಅಷ್ಟೆ.
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
@ಸದ್ಯ ಯಾರೂ ಅಪಾರ್ಥ ಮಾಡಿಕೊಂಡಿಲ್ಲಲ್ವಾ...?
ಈಗ ನಿಮ್ಮ ಈ ಹೆದರಿಕೆ ನೋಡಿ ನನಗೆ ಸಣ್ಣದಾಗಿ ನಗು ಬಂತು.. :) ಇಷ್ಟೆಲ್ಲಾ ಹೆದರಿಕೆ ತರಿಸಿದವನು ಪರೋಕ್ಷವಾಗಿ ನಾನಾ ಅಂತಾ? ಕ್ಷಮಿಸಿ..
@ಸತ್ಯಚರಣರು ನನ್ನ ಮಾತನ್ನು ಇಷ್ಟೊಂದು ಚೆನ್ನಾಗಿ ಅರ್ಥೈಸಿಕೊಂಡಿರೋದು ತಿಳಿದು ಅತೀವ ಆನಂದವಾಯ್ತು.
ಈಗ ಸ್ವಲ್ಪ ಮಟ್ಟಿಗೆ ನಾನು ಉತ್ತಮಗೊಳ್ಳುತ್ತಿದ್ದೇನೆ ಸರ‍್.. :) (You can see the improvement in this little child :))
ಧನ್ಯವಾದಗಳು ಅನಿಸಿಕೆ ಹೇಳಿ ವಿಚಾರ ತಿಳಿಗೊಳಿಸಿದ್ದಕ್ಕೆ..
ನಿಮ್ಮೊಲವಿನ,
ಸತ್ಯ..
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
>>ಇಷ್ಟೆಲ್ಲಾ ಹೆದರಿಕೆ ತರಿಸಿದವನು ಪರೋಕ್ಷವಾಗಿ ನಾನಾ ಅಂತಾ? ಕ್ಷಮಿಸಿ..<<
ರೂಪರವರು ಪ್ರಶ್ನೆ ಕೇಳಿದರು, ಅನುಮಾನ ಪರಿಹಾರ ಮಾಡಿಕೊಳ್ಳುವುದಕ್ಕೆ. ಆದರೆ ಅಪಾರ್ಥ
ಮಾಡಿಕೊಂಡು ತಮ್ಮದೇ ನಿರ್ಧಾರಕ್ಕೆ ಬರಲಿಲ್ಲ ಅಲ್ಲಿ. ಅದನ್ನು ಮೆಚ್ಚಿದೆ ನಾನು. ಹಾಗಾಗಿ ಬರೆದೆ. ನಿಮಗಲ್ಲ ಬಿಡಿ.
>>ಈಗ ಸ್ವಲ್ಪ ಮಟ್ಟಿಗೆ ನಾನು ಉತ್ತಮಗೊಳ್ಳುತ್ತಿದ್ದೇನೆ<<
ನನಗೂ ಸಂತಸವೇ...
>> ಸರ್<<
ಸರ್ ಬೇಡ ...
>>(You can see the improvement in this little child )
ಇದನ್ನೇ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಹೇಳಬಹುದು ಅಲ್ವೇ...
(ಈ ಚಿಕ್ಕ ಮಗುವಿನಲ್ಲಿ ಆಗುತ್ತಿರುವ ಸುಧಾರಣೆಗಳನ್ನು ನೀವೇ ಕಾಣಬಹುದು)
ನನಗೆ ಆಂಗ್ಲ ಭಾಷೆ ಇಷ್ಟ ಹೌದು, ಆದರೆ, ಸಂಪದದಲ್ಲಿ ಅಲ್ಲ.
ಉ: ನೆಚ್ಚಿನಾ ಬ್ಲಾಗಿನಾ ತೆರೆ-ಆನಲೈನ್ ಪ್ರಪಂಚಕೊಂದು ಹಾಡು
@ಇದನ್ನೇ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಹೇಳಬಹುದು ಅಲ್ವೇ...
ಖಂಡಿತ ಹೆಗ್ಡೆಯವರೆ.. (ಸರ‍್ ಅಂತಿಲ್ಲಾ..! ;) @ಸರ್ ಬೇಡ ...)
ಆದರೆ.. ಆ ಮಾತು ಸ್ವಲ್ಪ ಹುಡುಗಾಟದ ಬುದ್ಧಿಯಲ್ಲಿ ಯೋಚಿಸಿದ್ದು.. ಹಾಗಾಗಿ ತಕ್ಷಣ ಅದಕ್ಕೆ ಕನ್ನಡ ವಾಕ್ಯ ನೆನಪಿಗೆ ಬರಲಿಲ್ಲ.. ಸರಿಯಾದ ವಾಕ್ಯ :)
ನನಗೆ ಆಂಗ್ಲ ಅಷ್ಟೊಂದು ಇಷ್ಟ ಆಗೋಲ್ಲ.. ಕೆಲವೆಡೆ.. ಬೇರೆ ಗತಿಯಿಲ್ಲ ಅಂತ ಉಪಯೋಗಿಸೋದು.. ಇಲ್ಲಿಂದು, ಈ ಮೇಲಿಂದು ಬಿಟ್ಟು..
ನಿಮ್ಮೊಲವಿನ,
ಸತ್ಯ..