ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.
ಹೆಣ್ಣಿನ ಮೇಲೆ ಅತ್ಯಾಚಾರ ಯಾಕೆ ನಡೆಯುತ್ತದೆ ಎಂಬುದನ್ನು ಮೊದಲು ವಿಶ್ಲೇಷಿಸಿದಾಗ ಈ ಕಾರಣಗಳು ನನಗೆ ಹೊಳೆದವು. ನನ್ನ ಜೀವನ ಯಾತ್ರೆಯಲ್ಲಿ ಕೆಲವು ಇಂತಹ ಸಂಗತಿಗಳೂ ನಡೆದಿವೆ. ಅದನ್ನೂ ಇಲ್ಲಿ ಬರೆದ್ದಿದ್ದೇನೆ
ಸಂಧರ್ಭ:
ಗಂಡಸರು ಅನುಕೂಲಸಿಂಧುಗಳು.
ಇಂದು ಕ್ಲೋಸ್ ಫ್ರೆಂಡ್ ಆಗಿರುವುವನೇ ನಾಳೆ ರೇಪಿಸ್ಟ್ ಆಗಬಹುದು.
ನಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಲೈಬ್ರರಿಯಲ್ಲಿ ಶನಿವಾರ (ಅಂದು ರಜಾ) ಭೇಟಿ ಕೊಟ್ಟಿದ್ದೆ.
ಯಾರು ಇರಲಿಲ್ಲ ವಾದ್ದರಿಂದ ಆತನ ಬುದ್ದಿಗೇನಾಯಿತೊ ಮೇಲೆ ಬೀಳಲು ಹವಣಿಸಿದ. ಇಷ್ಟು ದಿನ ಕ್ಲೋಸ್ ಆಗಿ ಮಾತಾಡುತ್ತಿದ್ದೆಯಲ್ಲ . ಇಂದು ಇದಕ್ಕೂ ಒಪ್ಪಿಕೋ ಎಂದ./ ಹ್ಯಾಗೊ ಅವನಿಂದ ತಪ್ಪಿಸಿಕೊಂಡು ಬಂದಾಗಲಷ್ಟೆ ನೆಮ್ಮದಿಯ ಉಸಿರು ಬಿಟ್ಟೆ. ಯಾರಿಗೂ ಹೇಳಲಿಲ್ಲ . ಹೇಳಿದರೆ ನೀನ್ಯಾಕೆ ರಜಾದಿನದಲ್ಲಿ ಹೋದೆ . ನಿನ್ನದೇ ತಪ್ಪು ಅಂತಾರೆ.ಆ ಪರಿಸ್ಥಿತಿ ಅವನಿಗೆ ಧೈರ್ಯ ತಂದುಕೊಟ್ತಿತ್ತು
ಹೆಣ್ಣಿನ ಸ್ಥಿತಿ
ಅಕಸ್ಮಾತ್ ಹೆಣ್ಣು ಗಂಡಿಗಿಂತ ಆರ್ಥಿಕವಾಗಿಯೋ ಅಥವ ದೈಹಿಕವಾಗಿಯೊ ದುರ್ಬಲಳಾಗಿದ್ದರೆ ಅವಳು ಗಂಡಿಗೆ ಬಡಿಸಿಟ್ಟ ಎಲೆ ಎಂದುಕೊಳ್ಳುತ್ತಾನೆ . ಸಾಮಾನ್ಯವಾಗಿ ಹುಡುಗಿಯರು ತಮ್ಮ ಕೆಲಸದಲ್ಲಿ ಅಥವ ಕಾಲೇಜಿನಲ್ಲಿ ಇಂತಹ ಸಂಧರ್ಭ ಎದುರಿಸಬೇಕಾಗುತ್ತದೆ.
ಗಂಡಿನ ಸ್ಥಿತಿ
ಗಂಡು ಕೆಲವೊಮ್ಮೆ ಇಲ್ಲೀವರೆಗೆ ಹೆಣ್ಣನ್ನೂ ಕಾಣದಿದ್ದಾಗ(ಬ್ರಹ್ಮಚಾರಿಗಳಾಗಿದ್ದವರು) ಮತ್ತು ತಮ್ಮ ಕಾಮ ತೀವ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಇದ್ದಾಗ(ದುರ್ಬಲ ಮನಸಿನವರು ,ಎಲ್ಲರೂ ಅಲ್ಲ ) ಅತ್ಯಾಚಾರಕ್ಕೆ ದಾರಿ ಯಾಗಬಹುದು.
ಹೆಣ್ಣಿನ ನಡತೆ
ಯಾರೇನೆ ಅಂದರೂ ಹೆಣ್ಣು ಯಾರೊಡನೆಯಾದರೂ ನಗುತ್ತಾ ಮಾತನಾಡಿದರೆ , ಮುಟ್ಟಿ ಮಾತನಾಡಿಸಿದರೆ ಅವಳು ’ಅದಕ್ಕೆ ಕೊಡುವ ಇಂಡೈರೆಕ್ಟ್ ಇನ್ವಿಟೇಶನ್ ಅಂತ ಅಂದುಕೊಳ್ಳುವ ಸಮಾಜ ಇನ್ನೂ ಬದಲಾಗುವುದಿಲ್ಲ. ಆಗುವುದೂ ಇಲ್ಲ.
ಒಮ್ಮೆ ಒಂದು ಸಂಸ್ಥೆಯ ಅಧಿಕಾರಿಯಾಗಿ ನಾನು ಒಬ್ಬ ವಿದ್ಯಾರ್ಥಿಯೊಡನೆ ರಸ್ತೆಯಲ್ಲಿ ಸಿಕ್ಕನೆಂದು ಮಾತನಾಡಿ ಸ್ವಲ್ಪ ದೂರ ಬಂದೊಡನೆ ಯಾರೋ " ಅವನ ಜೊತೇಲಿ ಮಾತ್ರ ಬರ್ತೀರ ನಮ್ಮ ಜೊತೆ ಬರಲ್ಲ್ವಾ " ಅಂತ ಕೆಟ್ಟಾದಾಗಿ ಕೇಳಿದಾಗ ಇನ್ನೊಮ್ಮೆ ಯಾರೊಡನೆಯೂ ರಸ್ತೆಯಲ್ಲಿ ಮಾತನಾಡುತ್ತಾ ನಿಲ್ಲಬಾರದು ಎನಿಸಿತು.
ಹೆಣ್ಣಿನ ಉಡುಪು
ಖಂಡಿತಾ ಇದು ಸತ್ಯ.
ಈಗಿನ ಫ್ಯಾಶನ್ ಕಡಿಮೆ ಬಟ್ಟೆ ಹಾಕುವುದು. ಅದು ನಿಜ . ನಾನೂ ಒಪ್ಪುತ್ತೇನೆ. ಅದು ಎಲ್ಲಿವರೆಗೆ?
ನಾವು ಸಮಾಜದಲ್ಲಿ ಬದುಕುತ್ತಿದ್ದಾಗ ಸಮಾಜದ ಕಟ್ಟುಪಾಡುಗಳು ಅತಿ ಮುಖ್ಯ. ಅದನ್ನು ಮೀರಿದವಳು, ’ಅಂತಹವಳು’ ಎಂದು ಬ್ರಾಂಡ್ ಆಗುವುದು ನಿಜ. ಅಂತಹವರು ಗಂಡನ್ನು ಪ್ರಚೋದಿಸುವುದೂ ನಿಜ
ನಾನು ಚಿಕ್ಕವಳಿದ್ದಾಗ (೧೫ ವರ್ಷದವಳು)ಒಂದು ನಗರವಾಗುತ್ತಿರುವ ಹಳ್ಳಿಯಲ್ಲಿ ಕೆಲ ಕಾಲ ಇದ್ದೆವು . ಪ್ಯಾಂಟ್ ಶರ್ಟ್ ಧರಿಸಿ ನಾನು ಆ ಹಳ್ಳಿಯಲ್ಲಿ ಬರುತ್ತಿದ್ದಾಗ ಸಭ್ಯತೆಯ ಎಲ್ಲೆ ಮೀರಿ ಅಲ್ಲಿನ ಗಂಡಸರು ಮಾತನಾಡಿದ್ದು ನೆನಪಿದೆ.. ಅಂದಿನಿಂದ ಆ ಹಳ್ಳಿಯಲ್ಲಿ ಇರುವಷ್ಟು ದಿನ ನಾನು ಚೂಡಿದಾರ ಹಾಕಿಯೇ ಒಡಾಡುತ್ತಿದೆ. ಅಂತಹ ಪ್ರಸಂಗ ನನಗೆ ಮತ್ತೆ ಎದುರಾಗಲೇ ಇಲ್ಲ.
ಪಾಶ್ಚಾತ್ಯ ರಾಷ್ತ್ರಗಳಲ್ಲಿ ಹೇಗೊ ಗೊತ್ತಿಲ್ಲ .
ಆದರೆ ನಮ್ಮ ಸಮಾಜದ ಲಕ್ಶ್ಮಣ ರೇಖೆ ಯನ್ನೂ ದಾಟದೇ ಇರುವ ವರೆಗೂ ಹೆಣ್ಣು ಎಂದಿಗೂ ಈ ಅತ್ಯಾಚಾರಕ್ಕೆ ಬಲಿಯಾಗುವುದು ಕಡಿಮೆ
ಹೆಣ್ಣು ಇದಕ್ಕೆ ಏನು ಮಾಡಬಹುದು
ನನ್ನ ಅನಿಸಿಕೆಗಳು
ಆದಷ್ಟು ರಾತ್ರಿ ಒಬ್ಬಳೆ ಒಡಾಡುವುದನ್ನು ಕಡಿಮೆ ಮಾಡಬೇಕು ಇಲ್ಲವಾದರೆ ಜನರಿರುವ ರಸ್ತೆಯಲ್ಲಿ ಓಡಾಡಬೇಕು ಇಲ್ಲವಾದರೆ ಯಾರಾದರೂ ಗೊತ್ತಿರುವವರು ಜೊತೆ ಇರಬೇಕು. ಗೊತ್ತಿಲ್ಲ್ಲದ ಸ್ಥಳಕ್ಕೆ ಹೋಗುವಾಗ ಯಾರಾದರೂ ಜೊತೆ ಇದ್ದರೆ ಉತ್ತಮ . ಅಥವ ತಾವು ಹೋಗುವ ಸ್ಥಳದ ಬಗ್ಗೆ ಪೂರ್ಣಾ ಮಾಹಿತಿ ಪಡೆಯಬೇಕು
ಟೀನಾರವರು ಹೇಳಿದಂತೆ ಆತ್ಮರಕ್ಶಣೆಯ ಕಲೆಯನ್ನು ರೂಡಿಸಿಕೊಳ್ಳಬೇಕು, ಜೊತೆಯಲ್ಲಿ ಪೆಪ್ಪರ್ ಸ್ಪ್ರೇ ಆಥವ ಆ ಥರಹದ ಇನ್ನೇನಾದರೂ ಇಟ್ಟುಕೊಳ್ಳಾಬೇಕು
ನಾನು ಯಾವುದೇ ಸಮಯ್ದಲ್ಲೂ ಆಟೊನಲ್ಲಿ ಅಥವ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗಲೆಲ್ಲಾ . ಆ ಡ್ರೈವರ್‌ನ ಪೋಲಿಸ್ ನಂಬರನ್ನು ನನಗೆ ತಿಳಿದವರಿಗೆ ಎಸ್. ಎಮ್ .ಎಸ್ ಮಾಡುತ್ತೇನೆ. ದಾರಿಯಲ್ಲಿ ಫೋನನ್ನಲ್ಲಿ ಮಾತಾಡುತ್ತಾ ನನಗೆ ತಿಳಿದವರು ಈ ರಸ್ತೆಯಲ್ಲಿ ಸಿಕ್ಕಿ ಹತ್ತುತ್ತಾರೆ ಎಂಬುದನ್ನು ಅವನಿಗೆ ಸೂಚ್ಯವಾಗಿ ಹೇಳುತ್ತೇನೆ. ನಂತರ ಅವನ ಜೊತೆ ಮಾತನಾಡಲಾರಂಭಿಸುತ್ತೇನೆ. ಅವನ ಜೊತೆ ಮಾತಾನಾಡುತ್ತಾ ಒಂದು ರೀತಿಯ ಅತ್ಮೀಯ ವಾತವರಣ ನಿರ್ಮಿಸುತ್ತೇನೆ ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಜಾರಿಕೆಯ ಮಾತಾಗಲಿ , ವೈಯುಕ್ತಿಕ ವಿಷಯ ವಾಗಲಿ ನುಸುಳದಂತೆ ಎಚ್ಚರ ವಹಿಸುತ್ತೇನೆ.
ತನ್ನ ಬಟ್ಟೆ ಹಾಗೂ ತನ್ನ ನಡುವಳಿಕೆಯ ಮೇಲೆ ಗಮನ(ಎಚ್ಚರ ) ವಿರಬೇಕು. ಯಾವುದೇ ಕಾರಣಕೂ ತನ್ನ ಉಡುಪಿನಿಂದ ಅಂಗಾಂಗ ಪ್ರದರ್ಶನವಾಗಬಾರದು (ಯಾವುದೇ ಉಡುಪು ಧರಿಸಿದರೂ). ಹಾಗೂ ಎಷ್ಟೆ ಮಾತನಾಡಿದರೂ ದೈಹಿಕ ಸ್ಪರ್ಶವನ್ನು ಕಡಿಮೆ ಮಾಡಬೇಕು. (ಹೆಂಗಸರು ತಮ್ಮ ಗೆಳತಿಯರಂತೆ ತಮ್ಮ ಗೆಳೆಯರ ಮೇಲೂ ಕೈ ಹಾಕಿ ನಡೆಯುವುದನ್ನು ನಾನು ನೋಡಿದ್ದೇನೆ).
ಸಣ್ಣ ಪುಟ್ಟ ಸಹಾಯ ಡ್ರಾಪ್ ಮಾಡು ಕಾಫಿ ಕೊಡಿಸು. ತೆಗೆದುಕೊಂಡು ಬಾ ಎಂಬ ತಾವೆ ಮಾಡಬಹುದಾದಂತಹ ಕೆಲಸಗಳಿಗೆ ಗಂಡಸರ ಸಹಾಯ ಪಡೆಯುವುದು ತಪ್ಪು
ಇದನ್ನೆಲ್ಲಾ ಮಾಡಿದರೆ ಅತ್ಯಾಚಾರ ಎನ್ನುವುದೇ ಇಲ್ಲವಾಗುತ್ತವೆ ಎಂಬುದು ಸುಳ್ಳು
ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ
ಗಮನಿಸಿ . ಇಲ್ಲಿ ಯಾವುದನ್ನು ಜೆನರಲೈಸ್ಡ್ ಆಗಿ ಹೇಳಿಲ್ಲ .






RSS:
ಪ್ರತಿಕ್ರಿಯೆಗಳು
ಉ: ಅತ್ಯಾಚಾರ ಮತ್ತು ಕಾರಣಗಳು
ಗುಱುಱಾಜ
www.kannadaguru.blogspot.com
ರೂಪಾ ,ಚೆನ್ನಾಗಿ ಹೇಳಿದ್ದಿರಾ....ಅದರಲ್ಲೂ ಬಟ್ಟೆಯ ಬಗೆಗಿನ ವಿಷಯವ೦ತೂ ತು೦ಬಾ ನಿಜ.ನನಗನಿಸಿದ ಪ್ರಕಾರ ಬಹುಶ: ೫೦% ರಷ್ಟು ಅತ್ಯಾಚಾರ ಪ್ರಕರಣಗಳಿಗೆ ಇದು ಮುಖ್ಯ ಕಾರಣವೆನಿಸುತ್ತದೆ.ಮುಖ್ಯವಾಗಿ ದುರ್ಬಲ ಮನಸ್ಸಿನ,ಅತೀ ಭಾವುಕ ಮನಸ್ಸಿನ ಹುಡುಗ/ಗ೦ಡಸರಿ೦ದ ದೂರವಿರುವುದು ಉತ್ತಮ.ಹಿ೦ದೆ ಎಲ್ಲೋ ಓದಿದ ನೆನಪು ಪುರುಷನೊಬ್ಬನ ಸ್ಪರ್ಷ ಮಾತ್ರದಿ೦ದಲೇ ,ಅವನ ಉದ್ದೇಶ ತಿಳಿದುಕೊಳ್ಳುವ ಶಕ್ತಿ ಹುಡುಗಿಯರಿಗಿದೆಯ೦ತೆ.ಎಷ್ಟು ನಿಜವೋ ಗೊತ್ತಿಲ್ಲ.ಆದರೆ ಅವರು ಮಾಡುವ behaiourನಿ೦ದ ತಿಳಿದುಕೊ೦ಡು ಬಿಡಬಹುದಲ್ಲ್ಲವೇ
ಉ: ಅತ್ಯಾಚಾರ ಮತ್ತು ಕಾರಣಗಳು
"ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು" ೧೦೦% ಕರೆಕ್ಟ್ ಆಗಿ ಇದೆ,
ತುಂಬಾ ಪ್ರ್ಯಾಕ್ಟಿಕಲ್ ಗೆ ಟಚ್ ಕೊಟ್ಟಾಗೆ ಇದೆ ಇಮ್ಮ ಬ್ಲೋಗ್.
ನಮ್ಮ ಕಾಲೇಜ್ ಅಲ್ಲಿ, ಸುಮಾರು ಹುಡಾಗಿರು, ಚೆನ್ನಾಗೂ ಇದ್ರು ನೋಡೋಕೆ,
ಅದ್ರಲ್ಲಿ, ಕೆಲವೊಂದು ಹುಡಾಗಿರು , ನಕ್ರ, ನಾಟಕ, ಅವರ ದ್ರೇಸ್ಸು ತುಂಬ ಆಕರ್ಷಣೆ ಮಾಡ್ತಾ ಇತ್ತು.
ಕಾಲೇಜ್ ಅಲ್ಲಿ ನಮ್ಮ ಜೂನಿಔೂರ್ಸ್ ಕೂಡ ಅವ್ರ ಬಗ್ಗೆ ಮಾತಾಡ್ತಾ ಇದ್ರು, ಬೇರೆ ಕಾಲೇಜ್ ಇಂದ ಬಂದು ಜನ ಲೈನ್ ಹೊಡ್ದು ಹೋಗ್ತಾ ಇದ್ರು, ಅದ್ಕೆ ಇವ್ರು ನಗ್ತಾ ಇದ್ರು.ಹುದ್ಗಿರ ಈ ತರ, ವರ್ತನೆ, ಆಕಾಶಣೆ ಜಾಸ್ತಿ ಮಾಡುತ್ತೆ.
ಅದೇ ಇನ್ನೂ ಕೆಲವು ಜನ ಹುಡಾಗಿರು, ಅವರು ಇವರಿಗಿಂತ ಚೆನ್ನಾಗಿ ಇದ್ರು ನೋಡೋಕೆ, ಆದ್ರೆ ಅವರಲ್ಲಿ, ಗಂಭೀರತೆ ಅನ್ನೋದು ಇತ್ತು, ಆವ್ರುಎಲ್ಲ ತರ, ದ್ರೇಸ್ಸು, ಮಾತಾಡೋದು ಮಾಡ್ತಾ ಇದ್ರು.ಇವ್ರಿಗೆ ನೋಡಿದ್ರೆ ಆ ತರ, ಯಾರು ವಿಚಾರ ಮಾಡ್ತಾ ನೇ ಇರ್ಲಿಲ್ಲ, ಎಲ್ರೂ ಹೇಳ್ತಾ ಇದ್ರು, ತುಂಬ ಒಳ್ಳೇ ಹುಡುಗಿ.
ಹೂದ್ಗಿರು, ಹುದ್ಗಿರ ತರನೇ ಇರಬೇಕು, ಇಲ್ಲ ಅಂದ್ರೆ ಅಕ್ರಮ ಅತ್ಯಾಚಾರ ಗಳು ಜಾಸ್ತಿ ಆಗೇ ಆಗುತ್ತೆ.
-ವಿನೋದ್.
ಉ: ಅತ್ಯಾಚಾರ ಮತ್ತು ಕಾರಣಗಳು
-----------ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು. ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ-------
ಹೌದು ರೂಪ, ಇದು ನಿಜ.
ಒಳ್ಳೆಯ ವಿಚಾರವುಳ್ಳ ನಿಮ್ಮ ಬರಹ ನೋಡಿ ಖುಷಿಯಾಯಿತು.
ಚುಡಾಯಿಸುವಿಕೆ, ಅತ್ಯಾಚಾರ, ದೌರ್ಜನ್ಯ ಇವೆಲ್ಲ ನಿಲ್ಲಿಸುವುದರಲ್ಲಿ ಹೆಣ್ಣಿನ ಪಾತ್ರವೂ ಬಹಳ ಮುಖ್ಯ. ಪರಸ್ಪರ ಗೌರವ ಭಾವನೆ ಮೂಡಿದಾಗ ಇಂಥವೆಲ್ಲ ಇಲ್ಲವಾಗಿಸಬಹುದು.
ಉ: ಅತ್ಯಾಚಾರ ಮತ್ತು ಕಾರಣಗಳು
-----------ಮುಖ್ಯವಾಗಿ ಗಂಡಸರಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಅದನ್ನು ಮೂಡಿಸುವ ಕೆಲಸ ಆಗಬೇಕು. ಅದು ಹೆಂಗಸರಿಂದ (ನಮ್ಮಿಂದಲೇ) ಆಗುವ ಕೆಲಸ--------
ಹೌದು ರೂಪಾ ಅವರೆ - ಒಬ್ಬ ಒಳ್ಳೇ ತಾಯಿ, ಒಬ್ಬ ಒಳ್ಳೇ ಅಕ್ಕ್ಕತಂಗಿಯಿರುವ ವ್ಯಕ್ತಿ ಯಾವತ್ತೂ ಅಂತಹ ತಪ್ಪು ಕೆಲಸ ಮಾಡಲಾರ.
ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಅತ್ಯಾಚಾರ ಮತ್ತು ಕಾರಣಗಳು
------ಒಬ್ಬ ಒಳ್ಳೇ ತಾಯಿ, ಒಬ್ಬ ಒಳ್ಳೇ ಅಕ್ಕ್ಕತಂಗಿಯಿರುವ ವ್ಯಕ್ತಿ ಯಾವತ್ತೂ ಅಂತಹ ತಪ್ಪು ಕೆಲಸ ಮಾಡಲಾರ. -----
ಇದು ಮತ್ತೊಂದು ಜನರಲೈಸೇಶನ್ ಎಂದು ಭಾವಿಸುತ್ತೇನೆ. ಇದರಿಂದ ಗಂಡಸಿನ ಅಪರಾಧಕ್ಕೆ ಮತ್ತೆ ಆತನ ತಾಯಿಯನ್ನು, ಅಕ್ಕಂದಿರನ್ನು ಹೊಣೆ ಮಾಡುವ ಭಾವ ಕಾಣುತ್ತದೆ ಇದರಲ್ಲಿ. ಮನೆಯ ಪರಿಸರ, ಸಂಸ್ಕಾರ ಎಂಥದ್ದೇ ಇದ್ದರೂ ಪ್ರತಿಯೊಬ್ಬನಿಗೂ ವೈಯಕ್ತಿಕವಾದ ಆಯ್ಕೆಯ, ವಿವೇಚನೆಯ ಜವಾಬ್ದಾರಿ ಇರುತ್ತದೆ.
ಮನೆಯಿಂದ ಹೊರಗೆ ಹೆಣ್ಣಿಗಾಗಿ ಹಪಹಪಿಸುವವನ ಹೆಂಡತಿ ಸರಿಯಿಲ್ಲವೇನೋ, ಆತನ ತಾಯಿ ಸರಿಯಾದ ಸಂಸ್ಕಾರ ಕಲಿಸಿಲ್ಲವೇನೋ ಎಂದೆಲ್ಲಾ ಮಾತನಾಡುವುದು ಸಮಸ್ಯೆಯ ಮೂಲದಿಂದ ಪಲಾಯನ ಮಾಡಿದ ಹಾಗೆ... ಎನ್ನುವುದು ನನ್ನ ಭಾವನೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಅತ್ಯಾಚಾರ ಮತ್ತು ಕಾರಣಗಳು
ಸುಪ್ರಿಯವರೆ,
ನನಗೆ ನಿಮ್ಮ ಮಾತು ಸರಿ ಅನ್ನಿಸಿತು. ನಾನು ನೋಡಿ ಮತ್ತು ಅನುಭವಿಸಿದ ಹಾಗೆ, ಭಾರತದಲ್ಲಿ, ಯಾವುದೇ ರೀತಿಯ ಪ್ರಚೋದನೆ ಇಲ್ಲದೇನೆ ಗಂಡು ಹೆಣ್ಣಿನ ಮೈ ಮೇಲೆ ಬೀಳುವುದು ನಡೆದಿದೆ. ನಾನು ತರುಣಿಯಾಗಿದ್ದಾಗ ಈ ಬೀದಿ ಕಾಮಣ್ಣರ ವರ್ತನೆಯಿಂದ ಎಷ್ಟು ಬೇಸತ್ತಿದ್ದೆನೆಂದರೆ, ಒಂದು ಸ್ನೋ,ಪೌಡರ್ ಹಚ್ಚುವುದನ್ನು ಸಹ ತೊರೆದುಬಿಟ್ಟಿದ್ದೆ. ಇನ್ನು ಶರ್ಟು, ಪ್ಯಾಂಟು ದೂರದ ಮಾತು, ಕೈಕಾಲು ಸಹ ಕಾಣದಿರುವಂತಹ ಗೋಣಿಚೀಲದಂತಹ ಬಟ್ಟೆ ಹಾಕಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ ಎಂದರೆ ಉತ್ರೇಕ್ಷೆಯಲ್ಲ. ನಾನು ಕುರೂಪಿಯಾಗಿದ್ದರೆ ಚೆನ್ನಾಗಿತ್ತು ಎಂದು ಬಹಳ ಸರ್ತಿ ಅನ್ನಿಸಿತ್ತು. ಇದು ಜಂಭದ ಮಾತು ಖಂಡಿತ ಅಲ್ಲ! ನಾನು ಅಮೇರಿಕೆಗೆ ಬಂದ ನಂತರವೇ ನಿರಾಳವಾಗಿ ಓಡಾಡಿಕೊಂಡಿರಲು ಸಾಧ್ಯವಾಗಿದ್ದು. ಆಮೇರಿಕದಲ್ಲಿ ಗಂಡು-ಹೆಣ್ಣು ಪರಸ್ಪರ ಮುತ್ತಿಕ್ಕುವುದು etc. ಕಂಡುಬಂದರೂ, ಒಬ್ಬನೇ ಒಬ್ಬ ಬಿಳಿ ಗಂಡಸು ಸಹ ನನ್ನ ಬಳಿ ಅನುಚಿತವಾಗಿ ನಡೆದುಕೊಂಡಿಲ್ಲ. ಇಲ್ಲಿರುವ ನನ್ನ ಸ್ನೇಹಿತೆಯರು ಸಹ ಇದನ್ನೆ ಹೇಳುತ್ತಾರೆ. ಆದರೆ, ಇಲ್ಲಿರುವ ಭಾರತೀಯ ಗಂಡಸರ ವರ್ತನೆ ಮಾತ್ರ ಕೆಲವೊಮ್ಮೆ ಅಲ್ಲಿನ ಹಾಗೆ ಇರುತ್ತೆ, ಹುಟ್ಟು ಗುಣ ಸುಟ್ಟರೂ ಹೋಗದು ಅನ್ನುವ ಹಾಗೆ.
ಆದ್ದರಿಂದ, ನನಗನ್ನಿಸುವುದು, ನಾವು ಹೆಂಗಸರು ಹೇಗಿದ್ದರೂ, ಗಂಡಸರು ಸಹಮಾನವನಿಗೆ ಕೊಡುವ ಗೌರವವನ್ನು ನಮಗೆ ಕೊಡಲು ಕಲಿಯಬೇಕು. personal space, personal boundary ಮೀರಿ ಅತಿಕ್ರಮಿಸಬಾರದು. ಗಂಡಸರನ್ನು ಹದ್ದುಬಸ್ತಿನಲ್ಲಿರಿಸುವುದು ಹೆಂಗಸರ ಜವಾಬ್ದಾರಿಯಲ್ಲ! ಒಬ್ಬ ಗಂಡಸು ತನ್ನ ಕಾಮಭಾವನೆಯನ್ನು ನಿಗ್ರಹಿಸಲಿಲ್ಲ ಎಂಬುದೊಂದೇ ಅತ್ಯಾಚಾರಕ್ಕೆ ಕಾರಣ, ಬೇರೇನೂ ಅಲ್ಲ.
ಉ: ಅತ್ಯಾಚಾರ ಮತ್ತು ಕಾರಣಗಳು
ಮದುವೆಯಾದ ಅದೆಷ್ಟೋ ಹೆಣ್ಣ್ ಮಕ್ಕಳು - ಮಾನಸಿಕ ಅತ್ಯಾಚಾರಕ್ಕೆ ಗುರಿಯಾಗ್ತಾರೆ.
ಅದೂ ಅಲ್ಲದೇ ಗ೦ಡ ಕೂಡ ಅತ್ಯಾಚಾರ ಮಾಡ ಬಹುದು - ಅದಕ್ಕೆ ಪೂರ್ತಿ ಸ್ವಾತ೦ತ್ರ್ಯವಿತ್ತು..
ಸದ್ಯಕ್ಕೆ ಭಾರತದಲ್ಲಿ "Domestic Violence Act " ಅ೦ಬೋ ಹೊಸ ಕಾನೂನ್ ಮಾಡಿ ಹೆಣ್ಣಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದರೂ , ಇದರ ಪ್ರಯೋಗವನ್ನು ಎಷ್ಟ್ ಮ೦ದಿ ತಗೋತ್ತಾರೆ ?
ನಮ್ಮ ಚಲನಚಿತ್ರಗಳಲ್ಲಿ ಒ೦ದೆರಡು ರೇಪ್ ಸಿನ್ಗಳು ಇರಲೇ ಬೇಕಿತ್ತು.
ಹುಡುಗಿ "ನಹೀ ", "ನಹೀ" ಅ೦ತಾನೋ "ಬಚಾವ್" ..ಅ೦ತಾ ಕಿರುಚಿ ಕೊ೦ಡು ರೋಧಿಸುತ್ತಿರುವ ದೃಶ್ಯಗಳು ಸಾಧಾರಣವಾಗಿತ್ತು.
ಹೀಗೆ ನೂರಾರ್ ಕಡೆಯಿ೦ದಾ ಪ್ರಚೋದನೆ ಸಿಕ್ಕಿ ಗ೦ಡ್ಸೂ ತನ್ನ ಮೃಗೀಯ ಮುಖದ ಪದರ್ಶನವನ್ನು ಮಾಡುತ್ತಾನೆ.
ನೀವು ಹೇಳಿದ ಹಾಗೆ ಒಮ್ಮೆ ಬಸ್ಸ್ ನಲ್ಲಿ ಬಡ ಸು೦ದರ ಹೆಣ್ಣು ಮಗಳು (ಕೂಲಿಯವಳು) ರಾತ್ರಿ ಪಯಣಿಸುತ್ತಿರುವಾಗ ಕೂತಿದ್ದಳು.
ಯಾರೋ ಒಬ್ಬ ಅವಳ ಪಕ್ಕಾ ಕುತ್ಕೊ೦ಡು ತಳ್ಳೀ ,, ಕೈ ಅವಳ ಮೇಲಿಟ್ಟು ಎದ್ದು ನಿ೦ತಾ .. ಹೀಗೆ ಕ೦ಡಕ್ಟರ್ ಯಿ೦ದಾ ಹಿಡಿದು ಎಲ್ಲರೂ ಪಬ್ಲಿಕ್ ಪ್ರಾಪರ್ಟಿ ಅ೦ದ್ಕೊ ಬಿಡ್ತಾರೆ..ಬಡ ಹೆಣ್ಣೂ ಮಗಳೊಬ್ಬಳನ್ನು.
ಇನ್ನು ಆಸ್ಪತ್ರೆಗಳಲ್ಲಿ ಅತ್ಯಾಚಾರಗಳು ನಡೆಯುವುದು ಜಾಸ್ತಿ. ವೈದ್ಯರು ತಮ್ಮ ಬಳಿ ಬರುವ ರೋಗಿಗಳ ದೇಹದ ಮೇಲೆ ಹಕ್ಕು ಚಲಾಯಿಸುವ
ಉದ್ವೇಗದಲ್ಲಿ ಅತ್ಯಾಚಾರ ಮಾಡದಿದ್ದರೂ .. ತಮ್ಮ ಸ್ಥಾನಗಳನ್ನು ದುರ್ಭಳಕೆ ಮಾಡೋದು ಹೆಚ್ಚು. ಅದರಿ೦ದಾ ತಿಳಿದು ಪರಿಚಯ ಇರುವ
ವೈದ್ಯರ ಬಳಿ ಹೋಗುವುದು ಲೇಸು.
ನರ್ಸ್ ಗಳು ಅಷ್ಟೆ .. ಮೌನವಾಗಿ ವೈದ್ಯರು ಮಾಡುವ ಅತ್ಯಾಚಾರಗಳನ್ನು ಮೌನದಿ೦ದಲೆ ಸಹಿಸಿ ಕೊಳ್ಳುತ್ತಾರೆ.