19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಳೆಯ ವ್ಯಾಮೋಹ

February 11, 2009 - 6:22pm
roopablrao
ಜೀವನವೇ ಇಷ್ಟು, ಇರುವವರೆಗೆ ಹೊನ್ನು ಹಣ ಮಣ್ಣು ಎಂದು ಕಿತ್ತಾಟ ಕಾದಾಟ ಸತ್ತಮೇಲೆನಿದೆ ಬರೀ ಮಣ್ಣು ಸಾಯುವವರೆಗೂ ದೊಡ್ಡ ಮನುಷ್ಯ ಸತ್ತ ಮೇಲೆ ಬರಿಯ ಕಳೆ ಬರ ಹೀಗೆ ಆಲೋಚನೆಗಳು ಮೂಡಿ ವೈರಾಗ್ಯ ತುಂಬಿ , ಜೀವನ ನಶ್ವರ ಆತ್ಮ ಶಾಶ್ವತ, ಇನ್ನೇಕೆ ಆಸ್ತಿ ಹಣ ವ್ಯಾಮೋಹ ಮನುಷ್ಯ ಎಂದಿದ್ದರೂ ಹೊತ್ತಿಕೊಂಡು ಹೋಗೋದಿಲ್ಲ ಸತ್ತಾಗ ಏನನ್ನೂ ಒರೆಸಿಕೊಂಡು ಕಣ್ಣಾ ಹೊರ ಬಂದು ಕಾರನೇರುತ್ತಿದ್ದಂತೆಯೇ ಮೊಬೈಲ್ ಒಂದಕ್ಕೆ ಈದ ಉತ್ತರ "ಹೇ ಇನ್ನೂ ದುಡ್ಡು ಕೊಟ್ಟಿಲ್ವಾ , ಯಾವಾಗ ಕೊಡೋದು" ಘರ್ಜಿಸಿದಾಗೊಮ್ಮೆ ನಗು ಕೇವಲ ಕೊಂಚ ಹೊತ್ತೇ ಈ ವೈರಾಗ್ಯ ಮನುಜನ ಬಿಡದಲ್ಲಾ ಈ ಇಳೆಯ ವ್ಯಾಮೋಹ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on
ಇದರ ಅರ್ಥ ವ್ಯಾಮೋಹ ಅಂತ ಅಲ್ಲ, ರೂಪಾಜೀ. ಜೀವನದ ಬಂಡಿ ಸಾಗುತ್ತಲೇ ಇರಬೇಕು. ಹೋದವರು ನಮಗೆ ಎಷ್ಟೇ ಆತ್ಮೀಯರಾದರೂ ನಾವು ಅವರ ಹಿಂದೆ ಹೋಗಲಾಗುವುದಿಲ್ಲ. ಅಲ್ಲದೆ ಅವರಿಗಾಗಿ ಕೊರಗುತ್ತಾ ಇಲ್ಲಿನ ಜೀವನ ಯಾತ್ರೆಯನ್ನು ನಿಲ್ಲಿಸಲಾಗುವುದಿಲ್ಲ. ಇದು ಸತ್ಯ. ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ನೀವು ಹೇಳಿದ್ದು ನಿಜ ಸುರೇಶ್ ಸ್ಮಶಾನ ವೈರಾಗ್ಯ ಎಂಬುದೇ ಹೀಗಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.