ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು
ಮೊನ್ನೆ ಮಡಿಕೇರಿಯಲ್ಲಿ ನಡೆದ ಹೊಗೇನಕಲ್ ಧರಣಿಯ ಬಗ್ಗೆ ಬರೆಯುತ್ತ ವಿಜಯ ಕರ್ನಾಟಕದಲ್ಲಿ ಒಂದು ವಾಕ್ಯ
"ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಹೋರಾಟದಲ್ಲಿ ಒಂದು ನಾಯಕರಿಲ್ಲದ ಅನಾಥ ಪ್ರಜ್ನೆ ಕಾಡಿತು."
ಹೌದು ಕನ್ನಡ ಚಿತ್ರರಂಗದ ಗಣ್ಯರು ಎನಿಸಿಕೊಂಡ ಯಾರಿಗೂ ಈ ಹೊಗೇನಕಲ್ ವಿವಾದದ ಬಗ್ಗೆ ಮಾತನಾಡಲು ದೈರ್ಯ ಅಥವ ಮಾತನಾಡುವುದಿರಲಿ ಅಲ್ಲಿಗೆ ಹಾಜಾರಾಗುವುದಕ್ಕೆ ಪೋಲು ಮಾಡುವಷ್ಟು ಸಮಯವಿರಲಿಲ್ಲ.
ಈ ಹಿಂದೆ ಕರ್ನಾಟಕದ ಹಿತಾಸಕ್ತಿಗೆ ಯವುದೇ ರೀತಿಯ ಕುಂದು ಬಂದರೂ . ಒಂದು ಅಚ್ಚ್ಚ ಕನ್ನಡ ಭಾಷಾ ಪ್ರೇಮಿ ಕೈ ಎತ್ತುತ್ತಿತು . ಕೋಟಿ ಕೋಟಿ ಜನರ ಧ್ವನಿಗೆ ಕೊರಳಾಗುತಿತ್ತು. ಜನರನ್ನು ಸಂಘಟನೆ ಮಾಡಲು ಅವರ ಒಂದು ಕರೆ ಸಾಕಾಗುತ್ತಿತ್ತು.
ಅವರು ನಮ್ಮನ್ನು ಅಗಲಿ ೨ ವರ್ಷಗಳಾಗಿವೆ.
ಆದರೆ ಈ ಅವಧಿಯಲ್ಲಿ ಅವರ ಪ್ರತಿನಿಧಿಯಾಗಿ ಅಥವ ಕನ್ನಡನಾಡಿನ ಕೊರಳಾಗಿ ಕೂಗಲು , ಯಾರು ಮುಂದೆ ಬಂದಿಲ್ಲ
ಚಿತ್ರರಂಗದ ಎಲ್ಲರಿಗೂ ಅವರವರ ಹಿತ , ಪರ, ಸಮಸ್ಯೆಗಳೆ ಮುಖ್ಯವಾಗಿದೆ.
ಅಲ್ಲಿಂದ ಡಾ.ರಾಜರಂತೆ ಒಂದು ಶಕ್ಥಿ ಮುಂದೆ ಬಂದಿಲ್ಲ ಎನ್ನುವುದು ಖೇದದ ಸಂಗತಿಯೇ ಸರಿ
ಡಾ.ರಾಜ್‌ರ ನೆನೆಪು ನನ್ನಂತಹ ಈಗಿನ ಪೀಳಿಗೆಯವರಿಗೆ ಇಷ್ಟು ಕಾಡಿರುವಾಗ ಅವರ ಪ್ರಭಾವ ಎಂತಹ ಅಗಾಧವಾದುದು ಎಂದು ಊಹಿಸಬಹುದು.
ಹೋರಾಟ ದಲ್ಲಿ ಬಿಡಿ
ಸಿನಿಮಾದಲ್ಲಿನ ಅವರ ಆದರ್ಶ , ಕನ್ನಡನುಡಿ, ಅಮ್ಮನ ಪ್ರೇಮ, ಸರಳತೆ ,ಸಜ್ಜನಿಕೆಗಳು ಇಂದು ಮಹಾ ನಟರು ಎಂದು ಕರೆಸಿಕೊಳ್ಳುವವರಲ್ಲಿ ಕಾಣ ಸಿಗದು.
ಅವರಿಗೆ ಪರಭಾಷೆಯಿಂದ ಅಹ್ಹಾನ ಬಂದರೂ ಒಪ್ಪಿರಲಿಲ್ಲ. ರಿಮೇಕ ವಿರೋಧಿಗಳಾಗಿದ್ದರು. ಆ ಭಾಷ ಪ್ರಿಯತೆ ಇಂದು ಯಾರಲ್ಲಿ ಇದೆ.
ಪರಭಾಷೆಯ ಒಂದು ಚಿತ್ರದಲ್ಲಿ ಅಭಿನಯಿಸಲು ತಮ್ಮ ಅಭಿಮಾನವನ್ನಾದರೂ ಒತ್ತೆ ಗಿಡುವ ನಟ ನಟರಿದ್ದಾರೆ.
ಇಲ್ಲಿ ಹೀರೊಗಳಾಗಿ ನಟಿಸಿ ಪರಭಾಷೆಯಲ್ಲಿ ನಾಯಕನ ಕೈನಿಂದ ಒದೆ ತಿನ್ನುವ ಎರೆಡನೆ ಅಥವ ಮೂರನೆ ಖಳನಾಯಕರಾಗಿ ಅನುಭವಿಸಿದವರೂ ಇದ್ದಾರೆ.
ಇವರೆಲ್ಲರ ಮಧ್ಯದಲ್ಲಿ ಪ್ರತ್ಯೇಕ ವಾಗಿ ನಿಲ್ಲುವುದೇ ಡಾ.ರಾಜ್ ರವರ ಅಮೋಘ ವ್ಯಕ್ತಿತ್ವ.
ಸದಭಿರುಚಿಯ ಚಿತ್ರಗಳು, ಮಧುರ ಗೀತೆಗಳು, ಅರ್ಥಪೂರ್ಣಾ ಸಾಹಿತ್ಯ ಅವರ ಜೊತೆಗೆ ಹೊರಟು ಹೋಯಿತೇನೊಎಂದು ಕೆಲವೊಮ್ಮೆ ಅನ್ನಿಸುವುದುಂಟು.
ಹಾಗಾಗಿ ಕೆಲವೊಮ್ಮೆ ಡಾ. ರಾಜ್‌ರ ನಂತರ ಯಾರು ? ಎಂಬ ಪ್ರಶ್ನೆಗೆ ಉತ್ತರವೆ ಇಲ್ಲ ಎನ್ನಿಸುವುದೂ ಉಂಟು
ಇದೊಂದು ಆ ಮಹಾನ್ ನಟನಿಗೆ, ಆ ಮಹಾನ್ ಸಂಘಟಿಕನಿಗೆ ನನ್ನ ಶ್ರದ್ದಾಂಜಲಿ
ರೂಪ

- roopablrao ರವರ ಬ್ಲಾಗ್
- Login or register to post comments
- 395 hits
- Email this blog





RSS:
ಪ್ರತಿಕ್ರಿಯೆಗಳು
ಉ: ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು
ನಾಲ್ಕು ತಲೆಮಾರಿನ ಜನ ಒಟ್ಟಿಗೆ ಕುಳಿತು ಕನ್ನಡ ಸಿನೆಮಾ ನೋಡುತ್ತಿದ್ದಾರೆ ಅಂದರೆ ಅದು ರಾಜ್ ಸಿನೆಮಾ ಮಾತ್ರ
-ಗಣೇಶ.
ಉ: ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು
"ಅಣ್ಣಾವ್ರು", ಬಹುಶಃ, ನಾನು ಈ ಪದವನ್ನು ಮುಂಚೆ ಎಲ್ಲಿಯೂ ಬಳಸಿಲ್ಲ. ಆದರೆ, ಆತ ಕನ್ನಡದ ವಿಷಯದಲ್ಲಿ ಮೈಗೂಡಿಸಿಕೊಂಡ ಆದರ್ಶವನ್ನು ವಿಶ್ಲೇಷಿಸುತ್ತಾ ಕೂತರೆ, ಡಾ||ರಾಜ್ಕುಮಾರನ ಮೇಲೆ ಅದೆಷ್ಟು ಗೌರವ ಮೂಡುತ್ತೆ ಗೊತ್ತಾ. ನನಗೆ ಡಾ||ರಾಜನ್ನು "ಅಣ್ಣಾವ್ರು" ಅಂತ ಕರೆಯೋಕ್ಕೆ ಸೌಜನ್ಯವಾಗಲೀ, ಮುಜುಗರವಾಗುವುದೇ ಅಡ್ಡವಾಗುವದೇ ಇಲ್ಲ. ಅದೇಕೋ ಗೊತ್ತಿಲ್ಲ, ನನಗೆ ಡಾ||ರಾಜ್ ಅನ್ನು ಏಕೆವಚನದಲ್ಲಿ ಕೆರೆಯೋದೇ ಇಷ್ಟ. ಬಹುವಚನ ಬಳಸಿಬಿಟ್ಟರೆ, ಅವನು ಯಾರೋ ಬೇರೆಯವನಾಗಿ ನಿಂತು ಬಿಡುತ್ತಾನೆ. ಅಲ್ಲಾ, ರಾಜ್ಕುಮಾರು ನಮಗೆ ಮಾರ್ಗತೋರಿಸಿಕೊಟ್ಟ ಆದರ್ಶವಾದರೂ ಎಂಥಾದ್ರೀ.
"ಜಗವೇ ಒಂದು ರಣರಂಗ". ಎಂಥ ಹಾಡ್ ಕಣ್ರೀ ಇದು. ಹುಚ್ಚೆದ್ದು ಕುಣಿಸುತ್ತದೆ ನನ್ನನ್ನ. ಅದೇನು ಧಾಟಿ, ಅದೇನು ನೀತಿಬೋಧೆ. ಯಪ್ಪಾ!!! ಎಂತಹ ತಾತ್ವಿಕ ನೆಲೆಯನ್ನು ನನಗೆ ತೋರಿಸಿಕೊಟ್ಟಿದೆ ಎಂದರೆ, ನಾನು ಈ ಹಾಡನ್ನು, "ನನ್ನ ನಿತ್ಯಸ್ತುತಿ"ಯನ್ನಾಗಿ ಮಾಡಿಕೊಳ್ಳಬೇಕು ಅಂತ ಇದ್ದೀನಿ.
ಉ: ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು
ಅದೇನು ಕಾಕತಾಳೀಯವೋ ಗೊತ್ತಿಲ್ಲ. ಈದಿನವಷ್ಟೇ ಬಸವನಗುಡಿಯಲ್ಲಿ, ಡಾ||ರಾಜ್ ಹಾಡಿರುವ ೪೦ ಹಾಡುಗಳ ಸಿಡಿ ಕೊಂಡುತಂದು, ಮನೆಗೆ ಬಂದರೆ, ನಿಮ್ಮ ಬ್ಲಾಗ್ ಕಣ್ಣಿಗೆ ಬಿತ್ತು.
ರೂಪಾ ಅವರೇ, ನಿಮಗೆ ಹೆಚ್ಚೆಚ್ಚುನನ್ನಿ ಕಣ್ರೀ. ಈದಿನ "ಅಣ್ಣಾವ್ರನ್ನ" ನಮ್ಮನೆಗೆ ಕಳಿಸಿಕೊಟ್ಟಿದ್ದಕ್ಕೆ.