ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಕೊಲೆಗಾರ(ರ್ತಿ) ಯಾರು ?

June 13, 2008 - 1:54pm — roopablrao

ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ.
ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ್ತು.
ಕುತ್ತಿಗೆಯ ಆಯ ಕಟ್ಟಿಗೆ ಚೂರಿ ಚುಚ್ಚಿ ಕೊಲೆ ಮಾಡಲಾಗಿತ್ತು
ಸುಮತಿಯ ಮದುವೆ ಇನ್ನೊಂದು ವಾರವಿತ್ತು ಲಗ್ನ ಪತ್ರಿಕೆ ಹಂಚಿ ಬರಲೆಂದು ಹೋದವಳು ಶವವಾಗಿ ಮರಳಿದಳು. ರಸ್ತೆಯಲ್ಲಿ ಹೆಣವಾಗಿ ಬಿದ್ದವಳನ್ನು ವಾಹನದಲ್ಲಿ ಹೊತ್ತು ತಂದಿದ್ದರು
ಶೇಖರ್ ಅಂತೂ ಮಾತು ಬಾರದೆ ಮೂಕನಾಗಿ ಹೋಗಿದ್ದ. ನವಜೀವನದ ಕನಸು ನನಸಾಗುವುದರಲ್ಲಿ ನುಚ್ಚು ನೂರಾಗಿತ್ತು.
ಸುಮತಿಯ ಸಂಗೀತದ ಮೇಡಂ‌ನ ರೋದನ ಮುಗಿಲು ಮುಟ್ಟಿತ್ತು. ಸುಮತಿ ಅವರ ಅತ್ಯುತ್ತಮ ವಿಧ್ಯಾರ್ಥಿನಿ. ಅವಳು ಸಂಗೀತಕ್ಕೆ ಜೀವನವನ್ನೇ ಮುಡಿಪಾಗಿಡಬೇಕೆಂದ ಆಸೆ ಹೊತ್ತಿದ್ದಳು. ಸುಮತಿಯ ಕಂಠಕ್ಕೆ ಮಾರು ಹೋಗದವರೇ ಇರಲಿಲ್ಲ.

ಸುಮತಿಯ ತಂದೆ ರಾಘವೇಂದರು ಹಣ್ಣಾಗಿ ಹೋಗಿದ್ದರು ಇದ್ದೊಬ್ಬ ಒಬ್ಬಳೇ ಮಗಳನ್ನು ಕಳೆದುಕೊಂಡು ನಿತ್ರಾಣಾರಾಗಿದ್ದರು. ತಾಯಿ ಇಲ್ಲದ ಮಗಳನ್ನು ಅಕ್ಕರೆ ಇಂದ ಬೆಳೆಸಿದ್ದರು.
ಶಾಲಿನಿಯಂತೂ ಪ್ರಜ್ನೆ ತಪ್ಪಿ ಬಿದ್ದಿದ್ದಳು .ಸುಮತಿ ಅವಳ ಜೀವದ ಗೆಳತಿಯಾಗಿದ್ದಳು.
ಯಾರ ಮೇಲೂ ಅನುಮಾನ ಬರುವಂತಿರಲಿಲ್ಲ. ಸುಮತಿ ತನ್ನ ಒಳ್ಳೆಯ ನಡತೆ ಸದ್ಗುಣಗಳಿಂದ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು.
ಯಾರೋ ಒಡವೆಯ ಆಸೆಗೆ ಕೊಂದಿದ್ದಾರೆ ಎನ್ನುವಂತಿರಲಿಲ್ಲ ಏಕೆಂದರೆ ಸುಮತಿ ಧರಿಸಿದ್ದ ಒಡವೆಗಳು ಹಾಗೆ ಇದ್ದವು.
ಅತ್ಯಾಚಾರದ ಪ್ರಯತ್ನದ ಯಾವ ಪುರಾವೆಗಳು ಕಾಣಲಿಲ್ಲ
ಯಾರೋ ಗೊತ್ತಿರುವವರೇ ಮುಂದಿನಿಂದಲೆ ಆಕ್ರಮಣ ಮಾಡಿರುವುದು ಪೋಲೀಸರನ್ನು ಚಿಂತೆಗೀಡು ಮಾಡಲಾಯಿತು.
ಅವಳು ಯಾರ ಯಾರ ಮನೆಗೆ ಹೋಗಬೇಕೆಂಬ ಯೋಚನೆ ಮಾಡಿದ್ದಳೋ ಒಬ್ಬರಿಗೂ ಗೊತ್ತಿರಲಿಲ್ಲ.
ಅದೂ ಅಂದು ಅವಳು ತಮ್ಮ ಮನೆಗೆ ಬರಲೇ ಇಲ್ಲವೆಂದು ಅವರಿಗೆ ತಿಳಿದವರೆಲ್ಲಾ ಹೇಳಿದರು .

ಅವಳ ಕತ್ತಿನಲ್ಲೇ ಇದ್ದ ಚೂರಿಯ ಮೇಲೂ ಯಾರ ಬೆರಳ ಗುರುತೂ ಇರಲಿಲ್ಲ

ಹಾಗಿದ್ದರೆ ಯಾರು ಕೊಲೆ ಮಾಡಿದವರು?

ಒಬ್ಬರಿಗೆ ಒಂದೇ ಅವಕಾಶ
ಉತ್ತರಿಸುವುದಕ್ಕೆ .
ಉತ್ತರದ ಜೊತೆಗೆ ಕಾರಣವೂ ಬೇಕು
(ಮುಂದುವರೆಯುವುದು)

  • ಸಣ್ಣ ಕತೆ
~.~
  • roopablrao ರವರ ಬ್ಲಾಗ್
  • Login or register to post comments
  • 558 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 13, 2008 - 2:13pm — gururajkodkani

ಉ: ಕೊಲೆಗಾರ ಯಾರು ?

gururajkodkani's picture

ಗುಱುಱಾಜ
www.kannadaguru.blogspot.com

ಈ ಕಥೆಯಲ್ಲಿ ಅವಳ ಸಾವಿಗೆ ಕಾರಣರಾದವರು.............................ರೂಪಾ ರಾವ್ ಯಾಕೆ೦ದರೆ ಕತೆ ಬರೆದುದ್ದು ಅವರೆ,Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 2:15pm — roopablrao

ಉ: ಕೊಲೆಗಾರ ಯಾರು ?

roopablrao's picture

ಅದಿರಲಿ
ಸರಿ ಉತ್ತರ ಹುಡುಕಿ ಗುರುರಾಜರೇ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 2:35pm — harshab

ಉ: ಕೊಲೆಗಾರ ಯಾರು ?

harshab's picture

ಸುಮ್ಮನೆ ಒಂದು ಗೆಸ್,
ಶಾಲಿನಿ ಮಾಡಿರಬಹುದು Smiling. ಕಾರಣ, ಯಾರಿಗೇನೂ ಹೆಳದಿದ್ರು, ಜೀವದ ಗೆಳತಿಗೆ ತಾನು ಎಲ್ಲಿಗೆ ಹೋಗ್ತಿದಿನಿ ಅಂತ ಹೇಳಿರಲೇಬೇಕು, ಕೊಲೆಗೆ ಕಾರಣ, ಶಾಲಿನಿ, ಶೇಖರ್ ನ love ಮಾಡ್ತಿರಬಹುದು Smiling (ಅಥವಾ ಇಬ್ರದು affair Eye-wink ).
ಆದ್ರೂ ಕ್ಲ್ಯೂಗಳು insufficient....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 3:09pm — ಶ್ರೀನಿವಾಸ ವೀ. ಬ೦ಗೋಡಿ

ಉ: ಕೊಲೆಗಾರ ಯಾರು ?

ಶ್ರೀನಿವಾಸ ವೀ. ಬ೦ಗೋಡಿ's picture

Quote:
ಕುತ್ತಿಗೆಯ ಆಯ ಕಟ್ಟಿಗೆ ಚೂರಿ ಚುಚ್ಚಿ ಕೊಲೆ ಮಾಡಲಾಗಿತ್ತು

Quote:
ಸುಮತಿಯ ಸಂಗೀತದ ಮೇಡಂ‌ನ ರೋದನ ಮುಗಿಲು ಮುಟ್ಟಿತ್ತು

?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 6:22pm — roopablrao

ಉ: ಕೊಲೆಗಾರ ಯಾರು ?

roopablrao's picture

ಮುಂದುವರೆಸಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 7:21pm — ಶ್ರೀನಿವಾಸ ವೀ. ಬ೦ಗೋಡಿ

ಉ: ಕೊಲೆಗಾರ ಯಾರು ?

ಶ್ರೀನಿವಾಸ ವೀ. ಬ೦ಗೋಡಿ's picture

ಸಂಗೀತದ ಮೇಡಂ ತನ್ನ ಶಿಷ್ಯೆಯ ಏಳಿಗೆ/ಪ್ರತಿಭೆಯನ್ನು ಸಹಿಸಲಾರೆದೆ, ಕೊಲೆ ಮಾಡಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 9:09pm — yuvapremi

ಉ: ಕೊಲೆಗಾರ ಯಾರು ?

yuvapremi's picture

ಹೌದು ಹೌದು..!

ಸಂಗೀತದ ಮೇಡಂಗೆ ಎಲ್ಲಿ ಮದುವೆ ಆದ್ಮೇಲಿ ಸುಮತಿ ಅವರ ಹಾಗೆ ಸಂಗಿತದ ಕ್ಲಾಸ್ ಶುರು ಮಾಡಿ ಬುಸಿನೆಸ್ಸ್ ಡಲ್ ಮಾಡ್ತಾಳೊ ಅಂತ ಸಂಗೀತದ ಮೇಡಮ್ ಹೀಗಿ ಮಾಡಿರ್ತಾರೆ.

Eye-wink
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 19, 2008 - 6:25pm — ಸಂಗನಗೌಡ

ಉ: ಕೊಲೆಗಾರ ಯಾರು ?

ಸಂಗನಗೌಡ's picture

ಕೊಲೆ ಮಾಡಿದ್ದು ಸಂಗೀತದ ಮೇಡಮ್.
ಶ್ರೀನಿವಾಸ ಬಂಗೋಡಿಯವರ ಅನುಮಾನದ ಎಳೆಗಳು ಸರಿ ಇವೆ..
ಆದರೆ ಕಾರಣ ತನ್ನ ಶಿಷ್ಯೆಯ ಏಳಿಗೆ ಸಹಿಸದೇ ಅಲ್ಲ.., ಸಂಗೀತಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ ಎಂದು ತಾನು ನಂಬಿಕೆ ಇರಿಸಿದ್ದ ತನ್ನ ಶಿಷ್ಯೆ ಮದುವೆ ಆಗಲು ನಿಂತಿದ್ದು!!

ಈ ಸಾಲುಗಳನ್ನು ನೋಡಿ,..

Quote:
ಸುಮತಿಯ ಸಂಗೀತದ ಮೇಡಂ‌ನ ರೋದನ ಮುಗಿಲು ಮುಟ್ಟಿತ್ತು. ಸುಮತಿ ಅವರ ಅತ್ಯುತ್ತಮ ವಿಧ್ಯಾರ್ಥಿನಿ. ಅವಳು ಸಂಗೀತಕ್ಕೆ ಜೀವನವನ್ನೇ ಮುಡಿಪಾಗಿಡಬೇಕೆಂದ ಆಸೆ ಹೊತ್ತಿದ್ದಳು.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 20, 2008 - 11:46am — roopablrao

ಉ: ಕೊಲೆಗಾರ ಯಾರು ?

roopablrao's picture

ಸಂಗನ ಗೌಡರ ಉತ್ತರ ಸರಿಯಾಗಿದೆ .

ಕಾರಣವೂ ನಾನು ಅಂದುಕೊಂಡಂತೆ ಇದೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2008 - 4:57pm — yuvapremi

ಉ: ಕೊಲೆಗಾರ ಯಾರು ?

yuvapremi's picture

ಓ......! ಕೊಲೆಗಾರ್ತಿ ಸಿಕ್ಕಿಬಿಟ್ರ..! ಮತ್ಯಾಕೆ ತಟ, ಕಳಿಸಿ ಜೈಲಿಗೆ...! Sad
ಆದರು ನನಗೆ ಒಂದು ವಿಷಯ ತಿಳಿಯುತಿಲ್ಲ, Shocked
ಸುಮತಿ ಮದುವೆ ಆಗ್ತಾಳೆ ಅಂದ್ರೆ ಅವಳ ಸಂಗೀತದ ಮೇಡಮ್ ಯಾಕೆ ಅವಳ ಕೊಲೆ ಮಾಡಬೇಕು ? Shocked
ಮದುವೆ ಆದ್ಮೆಲೆ ಸುಮತಿಗೆ ಮಾತು ನಿಂತೋಗುತ್ತ ? ಸುಮತಿ ಎಂದಿನಂತೆ ಹಾಡಬಹುದು ಅಲ್ಲವೆ..! Shocked

ಇದು ನನ್ನ ಕ್ರಿಮಿನಲ್ ಪಾಯ್ಂಟ್....! Smiling

ಸುಮತಿಯ ಸಂಗೀತದ ಮೇಡಮ್ ಗೆ ನಾನು ಬೇಕಿದ್ರೆ ಲಾಯರ್ ಆಗ್ತಿನಿ..! Smiling
ಅನ್ಯಾಯವಾಗಿ ಒಂದು ಜೀವ ಜೈಲು ಸೇರಬಾರದು ಅಲ್ವ..! Sad

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 5:29pm — yuvapremi

ಉ: ಕೊಲೆಗಾರ ಯಾರು ?

yuvapremi's picture

ಹೊಃ, ಒರಿಜಿನಲ್ ಕತೆ ಇಲ್ಲಿದೆ..!

ಒಂದು ಗೆಸ್ಸ್ ಮಾಡಿದ್ರೆ,
ಸುಮತಿಯನ್ನ ಮನೆಯ ಹತ್ತಿರದ ಒಬ್ಬ ಹುಡುಗ ಗೊತ್ತಿಲ್ಲದ ಹಾಗೆ ಪ್ರೀತಿಸುತಿದ್ದ.
ಸುಮತಿಯ ಮದುವೆ ನಿರ್ಚಯವಾದ ಸುದ್ದಿ ಕೇಳಿ ತಾನು ಪ್ರೀತಿಸುತಿರುವ ವಿಶಯ ತಿಳಿಸಲು ಸಮಯಕ್ಕಾಗಿ ಹಾತೊರೆಯುತಿದ್ದ.
ಆಂದು ಆವಳು ಮನೆಯಿಂದ ಹೊರ ಹೊರಟಿದ್ದನ್ನು ಕಂಡು ಹಿಂಬಾಲಿಸಿ ದಾರಿಯಲ್ಲಿ ವಿಶಯ ತಿಳಿಸಲು ಅಡ್ಡ ಕಟ್ಟಿದ.

ತನ್ನ ಮದುವೆ ಆಗಲೆ ನಿರ್ಚಯವಾಗಿರುವ ಕಾರಣ, ಆ ಹುಡುಗನ ಪ್ರಪೊಸಲ್ ಒಪ್ಪದ ಸುಮತಿಯನ್ನು ಕುತ್ತಿಗೆಗೆ ಇರುದು ಹುಡುಗ ಓಡಿ ಹೋದ.

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 6:23pm — roopablrao

ಉ: ಕೊಲೆಗಾರ ಯಾರು ?

roopablrao's picture

ನಾನು ಹೇಳಿದ ಪಾತ್ರಧಾರಿಗಳಲ್ಲೇ ಒಬ್ಬರು
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 10:44pm — kalpana

ಉ: ಕೊಲೆಗಾರ ಯಾರು ?

kalpana's picture

ಶೇಖರ್ ಚಲನಚಿತ್ರ ಕ್ಷೇತ್ರದ ಪ್ರ(ಕು?)ಖ್ಯಾತ ಸಂಗೀತ ನಿರ್ದೇಶಕ. ಅವನ ಇತ್ತೀಚಿನ "ಕಂತ್ರಿ ನಾಯಿನಾ, ನೀನು ಕಂತ್ರಿ ನಾಯಿನಾ", "ತಿಣುಕುತಿಹೆ ಯಾಕೋ ಇಂದು, ಕೂತಲ್ಲೆ ಎದ್ದಾಗ್ಲಿಂದ್ಲೂ" ಹಾಡುಗಳು ಪಡ್ಡೆ ಹುಡುಗರ ನಾಲಿಗೆಯಲ್ಲಿ ನಲಿಯುತ್ತಿದ್ದವು. ಅವನು ಸುಮತಿಯನ್ನು ಮದುವೆಯಾಗಿ ಅವಳನ್ನು ದೊಡ್ಡ ಹಿನ್ನೆಲೆ ಗಾಯಕಿಯನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದ. ಆಗಲೇ, "ನಾನು ಧಾರ್ವಾಡ್ ಪೇಡ, ನೋಡಿ ಜೊಲ್ಲ್ ಸುರ್ಸ್ಬೇಡ", "ನಾ ಉಗಿಯುವ ಉಗುಳಲ್ಲಿ ನೀ, ನನ್ನ ನೆಗಡಿಯ ಬುರುಗಲ್ಲಿ ನೀ.." ಎನ್ನುವ ಹಾಡುಗಳನ್ನು ಅವಳ ಮಧುರ ಕಂಠದಿಂದ ಹಾಡಿಸಬೇಕೆಂದು ರೆಡಿ ಮಾಡಿಟ್ಟಿದ್ದ. ಹೀಗಿರುವಾಗ...

ನಮ್ಮ ಸುಮತಿಯ ಸಂಗೀತ ಮೇಡಂ, ಮದುವೆಯ ದಿನವೇ ಸುಮತಿಯಿಂದ ಕಛೇರಿ ಇಡಿಸಿ, ಅಲ್ಲಿ ಅವಳಿಂದ "ಬ್ರೋಚೇವಾರೆವರುರಾ..", "ದೇವಾಧಿದೇವಾ.." ಮುಂತಾದವನ್ನು ಹಾಡಿಸಬೇಕೆಂದಿದ್ದರು. ನಂತರ, ಸುಮತಿ, ಎಂ.ಎಸ್.ಎಸ್. ಅವರ ಪಟ್ಟ ಶಿಷ್ಯೆಯ,ಶಿಷ್ಯೆಯ,ಶಿಷ್ಯೆಯ,ಶಿಷ್ಯೆಯ,ಶಿಷ್ಯೆಯ, ಖಾಸಾ ಶಿಷ್ಯೆಯೆಂದು ಪ್ರಚಾರ ಮಾಡಿ ಅವಳಿಗೆ ವಿದೇಶದಲ್ಲಿ ಸಂಗೀತ ಕಛೇರಿಗಳನ್ನು ಸಹ ಏರ್ಪಡಿಸಬೇಕೆಂದಿದ್ದರು. ಆದರೆ....

ಇವರಿಬ್ಬರ ಪಿಲಾನನ್ನೂ ತಿಳಿದ ಸುಮತಿಯ ಮತಿ ಪೂರ್ತಿ ಕಂಗೆಟ್ಟು ಕಪ್ಪಿಟ್ಟು ಹೋಯಿತು. ಈ ದರಿದ್ರ ಕಂಠದ ಹಿಂದಲ್ಲವೇ ನೀವೆಲ್ಲರೂ ಬಿದ್ದಿರುವುದು. ಛೇ! ಎಂದು ಕಳಾಸಿಪಾಳ್ಯದ ದಾರಿಯಲ್ಲಿ "ಮಚ್ಚು ಮಂಜ" ಗ್ಯಾಂಗ್ ಬಿಟ್ಟು ಹೋಗಿದ್ದ ಲಾಂಗ್ ಕೈಯಲ್ಲಿ ಹಿಡಿದು ತನ್ನ ಕೋಮಲ ಕತ್ತನ್ನು ತಾನೇ ಇರಿದು ಕೊಂಡು ಸತ್ತಳು ಎಂಬಲ್ಲಿಗೆ ರೂಪಾ ಮೇಡಂ ಬರೆದು, ಸಂಪದಿಗರಿಗೆ ಕೊರೆದ ಕಥೆಯು ಮುಕ್ತಾಯವಾಯಿತು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 2:08am — yuvapremi

ಉ: ಕೊಲೆಗಾರ ಯಾರು ?

yuvapremi's picture

are waaah...!! Eye-wink
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 2:17am — kalpana

ಉ: ಕೊಲೆಗಾರ ಯಾರು ?

kalpana's picture

ಥ್ಯಾಂಕ್ಸ್ ಯುವಪ್ರೇಮಿಗಳೇ ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 2:16am — kalpana

ಉ: ಕೊಲೆಗಾರ ಯಾರು ?

kalpana's picture

ಕೊನೆಯಲ್ಲಿ ದಯವಿಟ್ಟು "ರೂಪಾ ಮೇಡಂ ಬರೆದು, ಸಂಪದಿಗರಿಗೆ ಕಲ್ಪನಾರವರು ಕೊರೆದ ಕಥೆಯು ಮುಕ್ತಾಯವಾಯಿತು" ಎಂದು ಓದಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2008 - 9:56am — harshab

ಉ: ಕೊಲೆಗಾರ ಯಾರು ?

harshab's picture

ನಿಜಕ್ಕೂ ನೀವು ಬರೆದದ್ದು ultimate ಆಗಿದೆ., ನಿಮ್ಮ ಹಾಸ್ಯ - ಪ್ರಜ್ಣೆ ಅದುಭುತ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 16, 2008 - 12:43pm — madhava_hs

ಉ: ಕೊಲೆಗಾರ ಯಾರು ?

madhava_hs's picture

ಅಪರಾಧಿ ನಾನಲ್ಲ. ಅಪರಾಧ ವೆನಗಿಲ್ಲ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 16, 2008 - 2:16pm — ಶ್ರೀನಿವಾಸ ವೀ. ಬ೦ಗೋಡಿ

ಉ: ಕೊಲೆಗಾರ ಯಾರು ?

ಶ್ರೀನಿವಾಸ ವೀ. ಬ೦ಗೋಡಿ's picture

ಓ, ಗೊತ್ತಾಯ್ತು! ಕೊಲೆ ಮಾಡಿದವನೇ/ಳೇ ಕೊಲೆಗಾರ! Sticking out tongue

Quote:
ಕೊಲೆಗಾರ ಯಾರು ?

ಅಂದರೆ, ಕೊಲೆ ಮಾಡಿದ್ದು ಗಂಡಸೇ? ಹೆಂಗಸು ಕೊಲೆ ಮಾಡಿದ್ರೆ ಕೊಲೆಗಾರ್ತಿ ಆಗ್ತಾಳಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 16, 2008 - 3:29pm — ASHMYA

ಉ: ಕೊಲೆಗಾರ ಯಾರು ?

ASHMYA's picture

ಕೊಲೆಗಾರ-ಶೇಖರ್
ಕಾರಣ-ನೀವು ಹೇಳಿರುವುದು ’ಕೊಲೆಗಾರ’ ಎಂದು. ನಿಮ್ಮ ಕತೆಯಲಿ ಇಬ್ಬರೆ ಗಂಡಸರು.ಶಾಲಿನಿಯ ತಂದೆ ಮಗಳ ಕೊಲೆ ಮಾಡಿರುವ ಸಾಧ್ಯತೆಗಳು ತುಂಬ ಕಡಮೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೊಲೆಗಾರ ಯಾರು -೧ ?
  • ಅವಳು ಮಾತುಗಾರ್ತಿ....
  • ಯಾರೋ
  • ಇವಳೇನಾ ?
  • ಮರಳಿ ಗೂಡಿಗೆ ಬಂತು ಮರಿ ಹಕ್ಕಿ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 86 ಅತಿಥಿಗಳು ಆನ್ಲೈನ್ ಇರುವರು.


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator