19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕೊನೆಗೂ ಫೈನ್ ಕಟ್ಟಿದೆ

April 15, 2009 - 8:51am
roopablrao
ಯಾವಾಗಲೂ ಹಾಗೆ ಮಾಡುತ್ತಿದ್ದೆ ಒಂದಿನಾನೂ ಈ ಟ್ರಾಫಿಕ್ ಪೋಲೀಸರು ಹಿಡಿದಿರಲಿಲ್ಲ ನೆನ್ನೆ ಎಂದಿನಂತೆ ಒನ್ ವೇ ನಲ್ಲಿ ಸ್ಕೂಟಿ ವಿರುದ್ದ ದಿಕ್ಕಿನಲ್ಲಿ ತಂದು ಟರ್ನ್ ಮಾಡಲು ಬರುತ್ತಿದ್ದಂತೆ ಟ್ರಾಫಿಕ್ ಪೋಲೀಸ್ ತಡೆದರು. ಅವರು ನಂಗೆ ಗೊತ್ತಿರೋರೆ. ಯಾವಾಗಲೂ ನಾನು ಅದೇ ದಾರೀಲಿ ಹೋಗೋದು, ಬರೋದು. ಆಗೆಲ್ಲಾ ತಡೆದಿರಲಿಲ್ಲ ಟ್ರಾಫಿಕ್ ಪೋಲೀಸರ ಜೊತೆ ಬಹಳ ಜೊತೆ ಮಾತಾಡಿದ್ದರೂ ಸಿಕ್ಕಿ ಹಾಕಿಕೊಂಡು ಮಾತಾಡಿದ್ದು ಇದೇ ಮೊದಲು ನನ್ನ ಡಾಕ್ಯುಮೆಂಟ್ಸ್ ತೋರಿಸಿದೆ . ಎಲ್ಲಾ ಚೆಕ್ ಮಾಡಿದ ಮೇಲೆ ಹೇಳಿದ್ದು " ಏನ್ ಮೇಡಮ್ ನಿಮ್ತರದೋರೆ ಹೀಗ್ಮಾ ಡಿದ್ರೆ ಇನ್ನು ಬೇರೆಯೋರು ಇನ್ನೇನು ಮಾಡ್ತಾರೆ." "ಬೆಳಗ್ಗೆ ತಾನೆ ಇದೇ ದಾರೀಲಿ ಹೀಗೆ ಬಂದ ಕಡೆ ಒಂದು ಆಕ್ಸಿಡೆಂಟ್ ಆಗಿದೆ. ಅದಕ್ಕೆ ಇನ್ಮೆಲೇ ಈ ಥರ ಕ್ರಾಸ್ ಮಾಡಿಕೊಂಡು ಬರಬೇಡಿ ಆಮೇಲೆ ಫೈನ್ ಹಾಕಬೇಕಾಗುತ್ತೆ ಇದು ಕಡೇ ವಾರ್ನಿಂಗ್" ಎಂದ ತಪ್ಪು ನನ್ನದಲ್ಲವೇ "ಫೈನ್ ಎಷ್ಟು.ನಾನು ಫೈನ್ ಕಟ್ಟ್ರೀನಿ "ಎಂದು ಕೇಳಿದ "ನೂರು ರೂಪಾಯಿ " ಎಂದ ದುಡ್ಡು ಕೊಟ್ಟು ರಸೀತಿ ತೆಗೆದುಕೊಂಡು ಬಂದೆ ತಪ್ಪು ಮಾಡಿದ ಮೇಲೆ ಶಿಕ್ಶೆ ಅನುಭವಿಸಲೇ ಬೇಕಲ್ಲವೇ.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by shaamala on
ರೂಪ, ಪೋಲಿಸ್ ಹೇಳಿದ್ದು ಸರಿ- ನೀವೇ ಹೀಗ್ಮಾಡಿದ್ರೆ? ಟ್ರಾಫಿಕ್ ನಿಯಮಗಳ್ನ ಪಾಲಿಸಿದರೆ ಎಷ್ಟು ಜೀವಗಳ ರಕ್ಷಣೆ ಆಗತ್ತೆ ನಮ್ ದೇಶದಲ್ಲಿ! ಮಗಳ ಮಗನ ಮದುವೆಗೆ ಬರಕ್ಕೆ ಅಂತ ಯು.ಎಸ್ ಗೆ ಹೊರಟಿದ್ದ ೬೦ ವರ್ಷದ ಹಿರಿಯರೊಬ್ಬರಿಗೆ ಒನ್ ವೇನಲ್ಲಿ ವಿರುದ್ಧ ದಿಕ್ನಲ್ಲಿ ಒಬ್ಬ ಬೈಕ್ನಲ್ಲಿ ಜೋರಾಗಿ ಬಂದು ಹೊಡೆದು ಆತ ಅಲ್ಲೇ ಹೋಗ್ಬಿಟ್ರು. ಪಾಪ - ಮದುವೆ ಕ್ಯಾನ್ಸಲ್ ಮಾಡಿ ಮಗಳು ಅಪ್ಪನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿಗೆ ಬರೋ ಹಾಗಾಯ್ತು. ಭಾಸ್ಕರ್ ಫ್ರೆಂಡ್ ನೋಡಿ ಪಾಪ! ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಅದಕ್ಕೆ ಶಾಮಲಾರವರೇ ಇನ್ನು ಮೇಲೆ ಕಷ್ಟವಾದರೂ ಸರಿಯಾದ ದಾರಿಯಲ್ಲೇ ಹೋಗೋಣ ಅನ್ಕೊಂಡಿದ್ದೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on
:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ರೂಪಾ, ನೀವು "ಫೈನ್" ಕಟ್ಟಿದ್ರಲ್ಲಾ "ಫೈನ್" ಆಯ್ತು ಬಿಡಿ. ನಾನಾಗಿದ್ರೆ ದಂಡ ಕಟ್ಟಿ ಅಂತಿದ್ದೆ "ನನ್ನ ಬಿಟ್ಟು ಬಿಡಿ" :-) ರಸೀತಿ ಪಡಕೊಂಡದ್ದು ಒಳ್ಳೇದಾಯ್ತು...ಇಲ್ಲಾಂದ್ರೆ, ನಿಮ್ಮಿಂದ ಇನ್ನೊಂದು ತಪ್ಪು ಆಗ್ತಿತ್ತು (ಲಂಚ ಕೊಡುವ ತಪ್ಪು). ಸದ್ಯ...ಆ ಪೋಲೀಸಪ್ಪನ್ನ "ನಾನ್ ಮಾಡಿದ್ದು ತಪ್ಪಾ...?" ಅಂತ ಕೇಳಿಲ್ಲವಲ್ಲಾ ನೀವು... (ನಿನ್ನೆಯ ನಿಮ್ಮ ಪ್ರಶ್ನೆ ನೆನಪಾಯ್ತು ನನಗೆ) :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Vyasraj on
ಫೈನ್ ಕಟ್ಟಿದ್ದು ಒಳ್ಳೆದಾಯ್ತು :) > ಆದ್ರೆ ಶಿಕ್ಷೆ ಅನುಭವ್ಸೊವರ್ಗೂ ತಪ್ಪು ಮಾಡ್ತಾ ಇರ್ಬಾರ್ದು ( ತಪ್ಪು ಅಂತ ಗೊತ್ತಾದ್ಮೇಲೂ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinay_2009 on
ಫೈನೆ ಕಟ್ಟಿ ಒಳ್ಳೆ ಕೆಲ್ಸ ಮಾಡಿದಿರಿ.... ಅದರೆ ಮತ್ತೆ ಸಿಗ್ನಲ್ ಜಮ್ಪ್ /ರೂಲ್ ಬ್ರೇಕ್ ಮಾಡಲು ಹೋಗ್ಬೇಡಿ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ಅಲ್ಲ ಮೇಡಂ, ಟ್ರಾಫಿಕ್ ಪೋಲೀಸ್ ವಾರ್ನ್ ಮಾಡೋವರ್ಗು ನಿಮ್ಮದು ತಪ್ಪು ಅಂತ ಗೊತ್ತಿರಲಿಲ್ಲವೇ? ಪೋಲಿಸಿನವರು ಫೈನ್ ಕಟ್ಟಿಸಿಕೊಳ್ಳದೇ ಬಿಟ್ಟರೂ, ನೀವೇ ಹೋಗಿ ಕಟ್ಟಿದ್ದು ನನಗೇಕೋ ಅತಿ ಎನಿಸಿತು. ಕಾನೂನಿನ ಪಾಲನೆಯಲ್ಲಿ ಅಷ್ಟೊಂದು ಆಸಕ್ತಿಯಿದ್ದರೆ, ಇಷ್ಟು ದಿನ ಒನ್ ವೇನಲ್ಲಿ ಹೋದದ್ದಕ್ಕೂ ಫೈನ್ ಕಟ್ಟಿ ಬರಬೇಕಿತ್ತಪ್ಪ. ನಿಮ್ಮದು ತಪ್ಪು ಎಂದು ತಿಳಿದ ಮೇಲೆ, ಅದನ್ನು ಮುಂದೆ ನೀವು ಮಾಡುವುದಿಲ್ಲವೆಂದಾದ ಮೇಲೆ, ಅದನ್ನು ಪೋಲಿಸಿನವರು ಮನ್ನಿಸಿದ ಮೇಲೆ, ದಂಡ ಕಟ್ಟಿದ್ದೇಕೆ? ಅದು ಪ್ರಾಯಶ್ಚಿತ್ತವೆಂದಾದರೆ ಇಷ್ಟು ದಿನದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳದೆ ಬಿಟ್ಟಂತಾಯ್ತಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vini.mysore on
:) ;) :) ಹೇಮರವರೆ ಸಮಾಧಾನ ಮಾಡ್ಕೊಳ್ಳಿ. ರೂಪಕ್ಕ ಏನೊ ಆ ಕ್ಷಣಕ್ಕೆ ಸರಿ ಅನ್ಸಿದ್ದು ಮಾಡಿದಾರೆ. ಇನ್ಮೇಲೆ ರಾಂಗ್ ವೇನಲ್ಲಿ ಹೋಗಲ್ಲ ಅಂತ ತೀರ್ಮಾನಾನೂ ಮಾಡಿದಾರೆ.. ಇದೊಂದ್ಸಲ ಕ್ಷಮಿಸಿ, ಮತ್ತೆ ಇನ್ನೊಂದಪ ಇದೇ ತರ ಕೆಲ್ಸ ಮಾಡಿದ್ರೆ ತರಾಟೆಗೆ ತಗೋಳನ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ವಿನಯ ಹೇಮಾರವರ ಕ್ಷಮೆಗಿಂತ ನನ್ನ ಅಂತರಾತ್ಮದ ಕ್ಷಮೆ ಮುಖ್ಯ ಅಲ್ಲವೇ? ಅದು ನನಗೆ ಸಿಕ್ಕಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ನಂಗೇನೂ ಅದೆಲ್ಲ ಮಾಡಿದ್ದು ಇಲ್ ಬರೆಯೋಕೆ ಅಂತ ಅನ್ನಿಸಿಬಿಡ್ತಯ್ತಲ್ಲ.. ಯಾಕಿರಬೋದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vini.mysore on
ನಮಸ್ಕಾರ ಗುರುಗಳೆ.. ನೀವು ಉಡ ಇದ್ದಂಗೆ ಹಿಡ್ಕಂಡ್ರೆ ಬಿಡಾಕಿಲ್ಲ.. ನಿಮಗೆ ಒಂದೊಂದ್ಸಲನೂ ಎನಾರ 'ಅನ್ನಿಸ್ತು' ಅಂದ್ರೆ ಯಾರದೋ ಗ್ರಾಚಾರ ಸರಿ ಇಲ್ಲ ಅಂತಾನೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on
ರೂಪಕ್ಕನ ಇಸ್ಯ ತಿಳೀದು ... ಆದ್ರೆ ಕೆಲವು ಘಟ್ನೆಗಲಾಗ್ತಿದ್ದಂಗೆ ಅದರ ಬಗ್ಗೆ ನನ್ ಸ್ನೇತರಿಗೆ ಎಂಗ್ ಮಸಾಲೆ ಅಚ್ಚಿ ಹೆಲ್ಬೌದು ಅನ್ನೋ ಇಚಾರ ಮೂಡ್ತಾ ಇರತ್ತೆ...ನನ್ಮಟ್ಟಿಗೆ ಇಸ್ತಂತೂ ನಿಜ... ವಸಿ ಉಸಾರಾಗಿರಿ ಇನಯನೊರೆ, 'ಗರಾಸರ ಸರಿ ಇಲ್ಲ' ಅಂದ್ರೂ ಕಷ್ಟ ... :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ಶಾಸ್ತ್ರಿಗೊಳ್ಯಾಕೋ ಸಿಕ್ಕಾಪಟ್ಟೆ ಳಕಾರ ಲೋಪ ಮಾಡ್ತವ್ರೆ? ಘಟನೆಗಳು ವೋಗಿ ಘಟನೆಗಲು. ಹೇಳು ವೋಗಿ ಹೇಲ್ಬೌದು ಆಗದೆ.. ಳಕಾರ ಇಲ್ಲದೇ ಮಾತಾಡೋ ಕನ್ನಡ ಇದೇ ಮೊದಲ ಕಿತ ನೋಡಿದ್ದು... ಪರವಾಗಿಲ್ಲ.. ಯಾವೂರ್‍ ಕನ್ನಡ ಅಂದ್ರೆ ಯೋಳಿದ್ರೆ ಸಾಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on
ಔದಲ್ಲ, ಅದ್ನೀಗ್ ಎಂಗೆ ಚರಿ ಮಾಡ್ಬೌದು ಅಂತ ನೀವೇ ಏಳ್ಕೊಡಿ...:-) :-( ಇದು ಮಂಡ್ಯದ ಭಾಸೆ ನೀವ್ಗೊಳ ಮಾತಾಡೋದ್ ಕೇಳಿ ನಂಗೂ ಇಷ್ಟ ಆಗಿ ಕಷ್ಟ ಪಟ್ಟು ಬರಿತೀವ್ನಿ ..ಇದಕ್ ಮೊದ್ಲು ಅದೇನೋ ಅಂತಾರಲ್ಲ "ಎಕ್ಸಪೀರಿಅನ್ಸ" ಅದಿಲ್ಲ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ಯೆಂಗೂ ಸರಿ ಮಾಡ್‌ಬ್ಯಾಡಿ.. ನಾನೇಲ್ಲೋ ನೀವ್ ಳನ ಲ ಮಾಡ್ಕೊಂಡ್ ಮಾತಾಡ್ತೀರ ಅಂತ ಅಂದ್ಕೊಂಡೆ. ಆಟೇಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on
"ರೂಪಕ್ಕನ ಇಸ್ಯ ತಿಳೀದು ... ಆದ್ರೆ ಕೆಲವು ಘಟ್ನೆಗಳಾಗ್ತಿದ್ದಂಗೆನೆ ಅದರ ಬಗ್ಗೆ ನನ್ ಸ್ನೇತರಿಗೆ ಎಂಗ್ ಮಸಾಲೆ ಅಚ್ಚಿ ಹೇಳಬೌದು ಅನ್ನೋ ಇಚಾರ ನಂಗೆ ಮೂಡ್ತಾ ಇರತ್ತೆ...ನನ್ಮಟ್ಟಿಗೆ ಇಸ್ತಂತೂ ನಿಜ..." ಅಂತ ಬರ್ಯೋಕೆ ಹೊರಟಿದ್ದೆ ಬೇರೆ ಏನೋ ಆಗ್ಬಿಟ್ಟಿದೆ...ಕ್ಷಮಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
:D ನಿದ್ದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಓ ನಿಮಗೆ ಮಸಾಲೆ ಚೆನ್ನಾಗಿ ಸೇರಿಸಕ್ಕೆ ಬರುತ್ತಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on
ಹ್ಞೂ... ಒಂದ್ ಸ್ವಲ್ಪ, ಅಂದಂಗೆ ರೂಪಕ್ಕ, ಹೇಳೋದೇ ಮರೆತಿದ್ದೆ, ನೀವ್ ಫೈನ್ ಕಟ್ಟಿದ್ದು, ನಮ್ಗೇಳಿದ್ದು ಒಳ್ಳೇದೇ. ಇಲ್ಲೇ ಹೇಳ್ಬಿಡ್ತೀನಿ, ಯಾವತ್ತಾದರೂ ನಾನು ಅತಿಯಾಗಿ ಅಂದ್ರೆ ದಯವಿಟ್ಟು ಎಚ್ಚರಿಸಿ... ಇಷ್ಟರಲ್ಲೇ ಏನಾದರೂ ತಪ್ಪಾಗಿದ್ರೆ ಕ್ಷಮಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ಓ ಹಂಗಾ... :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಉಡ ಬಗ್ಗೆ ಗೊತ್ತಿಲ್ಲ ಹಿಡಿದರೆ ಬಿಡದವರನ್ನ ಕಪಿ ಮುಷ್ಟೀ ,ಜಿಗಟು, ಆಕ್ಟೋಪಸ್, ಜಿಗಣೆ, ಪಿನ್ಸಾರಿ ಅಂತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಮಾಯ್ಸಾರವರೆ thanks a lot ನಿಮ್ಮ ಅನಿಸಿಕೆ ಹೀಗೆ ಮುಂದುವರೆಯಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಹೇಮಾ ನೆನ್ನೇವರೆಗೆ ಆ ಜಂಕ್ಷನ್‌ನಲ್ಲಿ ಎಲ್ರೂ ಹೋಗುವಾಗ ಅದೇ ಟ್ರಾಫಿಕ್ ಪೋಲಿಸ್‌ನವನು ಸುಮ್ಮನಿದ್ದ. ನೆನ್ನೆಯಿಂದ ತಾನೆ ಎಲ್ಲರಿಗೂ ವಾರ್ನ್ ಮಾಡಿ ಕಳಿಸ್ತಾ ಇದಾನೆ. ನಾನು ಆರು ವರ್ಷದಿಂದ ಅದೇ ರೋಡ್ನಲ್ಲಿ ಹಾಗೆ ಟರ್ನ್ ತಗೋತಿದ್ದೆ ಅದು ತಪ್ಪು ಅಂತ ನಂಗೆ ಗೊತ್ತಿರಲಿಲ್ಲ ತಪ್ಪು ಅಂತ ಗೊತ್ತಾದಮೇಲೆ ಮತ್ತೆ ಮಾಡೋದಿಲ್ಲ. ತಪ್ಪು ಅಂತ ಹೇಳಬೇಕಾದವರೆ ಇಲ್ಲೀವರೆಗೆ ಹೇಳದೆ ನೆನ್ನೆಯದೊಂದೇ ತಪ್ಪು ಎಂದು ಹೇಳಿದಾಗ ನಾನೇಕೆ ಅನಾವಶ್ಯಕವಾಗಿ ಅದರಲ್ಲಿ ಸಿಕ್ಕಿ ಒದ್ದಾಡಲಿ. ಹಣ ಕಳೆದುಕೊಳ್ಳಲಿ? ಸಾಮಾಜಿಕ ಜವಾಬ್ದಾರಿ ಇದೆ ಎಂದು ಎಲ್ಲವನ್ನೂ ಮೈ ಮೇಲೆ ಎಳೆದುಕೊಳ್ಳುವುದಲ್ಲ. ಪೋಲೀಸಿನವನಿಗೆ ದಂಡ ಕೊಟ್ತಿದ್ದೇಕೆಂದರೆ ನಾಳೆ ಇದನ್ನೆ ನೆಪ ಮಾಡಿಕೊಂಡು ಅವನು ನನಗೆ ಮಹದುಪಕಾರ ಮಾಡುವನಂತೆ ನನ್ನ ಬಳಿ ಲಂಚಕ್ಕೆ ಕೈ ಚಾಚದಿರಲಿ ಎಂದು ಇಂದು ಒಂದು ತಪ್ಪನ್ನು ಸುಮ್ಮನೆ ಮನ್ನಿಸಿದವನು ನಾಳೆ ಅಕಸ್ಮಾತ್ ಇಂತಹ ಪ್ರಾಬ್ಲಮ್ಸ್ ಏನಾದರೂ ಆದಾಗ ಲಂಚಕ್ಕೆ ಕೊಡಿ ಸರಿ ಮಾಡುತ್ತೇನೆ ಎಂದರೆ ಏನು ಮಾಡೋದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ತಿಳಿಯದೇ ಮಾಡಿದ್ದಿರಿ, ಮನವರಿಕೆಯಾದ ಮೇಲೆ ನಿಲ್ಲಿಸಬಹುದಿತ್ತಲ್ಲ, ದಂಡ ಸುಮ್ಮನೆ ದಂಡವಾಯ್ತು ಅಂದೆ ಅಷ್ಟೇ. ಮುಂದೆ ನಿಮಗೆ ಯಾವಾಗಲಾದರೂ ತೊಂದರೆಯಾಗಿ ಆಗ ಲಂಚಕ್ಕೆ ಕೈಯೊಡ್ಡಬಾರದು ಎಂಬ ಸದುದ್ದೇಶ ಒಳ್ಳೆಯದೇ, ಆದರೆ ಅಂತಹ ಸಮಯ ಬಂದಾಗ ನೀವು ಪ್ರಾಮಾಣಿಕವಾಗಿ ಫೈನ್ ಕಟ್ಟುತ್ತೇನೆಂದು ಹೇಳಬಹುದಿತ್ತು. ಬೆಂಗಳೂರಿನಲ್ಲಿ ಗಲ್ಲಿಗೆ ಒಂದರಂತೆ ಒನ್ ವೇ ಗಳಿವೆ, ಅರ್ಧಕಿಲೋಮೀಟರಿಗೆ ನಾಲ್ಕು ಸಿಗ್ನಲ್, ಎಂತಹ ಪ್ರಾಮಾಣಿಕರೂ ಕೆಲವು ಸಲ ಕಾನೂನು ಮುರಿಯಬೇಕಾದಾಂತಹ ಪರಿಸ್ಥಿತಿ ಇದೆ. ಕಾನೂನು ಪಾಲನೆಯಲ್ಲಿ ಅಷ್ಟು ಪ್ರಾಮಾಣಿಕಳಲ್ಲದ ನಾನು ದಿನವು ತಡವಾಗಿ ಆಫೀಸಿಗೆ ತಲುಪುವುದನ್ನು ತಡೆಯಲು ಇಂತಹ ಅಪ್ರಮಾಣಿಕ ಕೆಲಸಗಳನ್ನು ಮಾಡುತ್ತಲೇ ಇರುತ್ತೇನೆ. ಅಪಘಾತಕ್ಕೆ ಎಡೆಮಾಡಿಕೊಡದಂತಹ ಇಂತಹ ಎಚ್ಚರಿಕೆಯ ಸಣ್ಣಪುಟ್ಟ ಅಪ್ರಮಾಣಿಕತೆಗಳು ನಮ್ಮ ಬೆಂಗಳೂರಿನ ಅವೈಜ್ಞಾನಿಕ ರಸ್ತೆಗಳು ಅದರ ನಿಯಮಗಳಿಂದ ನಮ್ಮ ಸಮಯ ಉಳಿಸುವಲ್ಲಿ ನೆರವಾಗುತ್ತವೆ ಎಂಬುದು ನನ್ನ ಅಭಿಪ್ರಾಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಹೌದು ಅಪ್ರಾಮಾಣೀಕತೆಗಳಿಗೆ ಮೂಲ ಕಾರಣವೇ ವ್ಯವಸ್ಥೆ. ನಾನು ಸರಿ ದಾರಿಯಲ್ಲಿ ಹೋಗಬೇಕಾದರೆ ೧ ಕಿಮೀ ಬಳಸಿ ಹೋಗಬೇಕು. ಆದರೆ ಈಗ ಬಹಳ ಕಟ್ಟಿನಿಟ್ಟಾಗಿ ಆರ್ಡರ್ ಜಾರಿ ಮಾಡಿದ್ದರಾದ್ದರಿಂದ ಇನ್ನು ಬೇರೆ ದಾರಿಯೇ ಇಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by createam on
ಇಲ್ಲಿ ಇದನ್ನ ಬರೆದಿದ್ದು ಮೆಚ್ಚಬೇಕು. ಫೈನ್ ಕಟ್ಟಿದ್ರಿ, ಒಳ್ಳೇದು. ಆದ್ರೆ, ವನ್ ವೇ ಅಲ್ಲಿ ಗಾಡಿ ಓಡ್ಸೋದು, ಸಿಗ್ನಲ್ ಜಂಪ್ ಮಾಡೋದು, ಇದು ಎರಡು ಹಚ್ಚಿನ ಅಪಘಾತ ಆಗೋದಿಕ್ಕೆ ಕಾರಣಗಳೂ. ಬಂಜೀ ಜಂಪ್ ಅಲ್ಲಿ ಸತ್ರೆ ಅದು ದೊಡ್ಡ ಸುದ್ದಿ ಆಗುತ್ತೆ (ಅದು ತಪ್ಪು ಅಂತಿಲ್ಲ) ಆದರೆ ಪ್ರತಿ ವಾರ ಬೆಂಗ್ಳೂರಲ್ಲಿ ರಸ್ತೆ ಮೇಲೆ ಸಾಯುವವ್ರ್ ಬಗ್ಗೆ ಸುದ್ದೀನೇ ಆಗಲ್ಲ. ನಿನ್ನೆ ಅಪ್ಪನ ಹತ್ರ ಮಾತಾಡ್ವಾಗ ಈ ವಿಷ್ಯ ಬಂತು, ಬಂಜೀ ಜಂಪ್ ಮಾಡ್ತಾ ಬಿದ್ದು ಒಬ್ಬರು ಸತ್ತುಹೋದ್ರು ಅಂತ. ನಾನು ಹೇಳ್ದೆ, "ದುಃಖದ ವಿಷಯ, ಆದ್ರೆ ದಿನಾ ರೋಡಲ್ಲಿ ಎಷ್ಟು ಜನ ಸಾಯ್ತಾರೆ ಗೊತ್ತ?" ಅದಕ್ಕೆ ಅವರು, "ಅದು ಬೇರೆ, ಅದಕ್ಕೆ ಏನೂ ಮಾಡೋದಿಕ್ಕೆ ಆಗಲ್ಲ. ಆದ್ರೆ ಈ ಅಡ್ವೆಂಚರ್ಗಳನ್ನು ನಾವು ಅವಾಯ್ಡ್ ಮಾಡ್ಬೋದು". ಜೀವ ಅನ್ನೋದು ಜೀವ ಅಷ್ಟೆ. ಅದು ರೋಡಲ್ಲಿ ಹೋಗುತ್ತೋ, ನೀರಲ್ಲಿ ಹೋಗುತ್ತೋ ಅಥವಾ ಬಂಜೀ ಜಂಪಲ್ಲಿ ಹೋಗುತ್ತೋ, ಹೋದಾಗ ಅಲ್ಲಿ ಕೆಲವರು ತಮ್ಮ ಗಂಡ, ಹೆಂಡತಿ, ಮಗ, ಮಗಳು, ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ ಅಥವಾ ತಂಗಿಯನ್ನ ಅಚಾನಕ್ ಆಗಿ ಕಳ್ಕೋತಾರೆ. ಆಫ್ ಟಾಪಿಕ್ ಹೋದೆ ಅನ್ಸುತ್ತೆ, ಆದ್ರೆ ನಾನು ಹೇಳೋಕೆ ಹೊರ್‍ಟಿರೋದು ಏನು ಅಂದ್ರೆ ಅಡ್ವೆಂಚರ್ ಮಾಡ್ವಾಗ ನಾವು ಯೋಚಿಸೋ ಸೇಫ್ಟಿ ವಿಷಯಗಳು ದಿನಾ ರಸ್ತೆಯಲ್ಲಿ ಹೋಗ್ವಾಗಲೂ ಯೋಚಿಸಬೇಕು. ಈಗೀಗ ರಸ್ತೇಲಿ ಹೋಗೋದೇ ದೊಡ್ಡ ಸಾಹಸ ಆಗ್ತಿದೆ. ರಸ್ತೆ ಸುರಕ್ಷೆ ತುಂಬಾ ತುಂಬಾ ಮುಖ್ಯ. ಇಂತಾ ಕಮೆಂಟುಗಳು ಬರುತ್ತೆ ಅಂತಾ ಗೊತ್ತಿದ್ರು ನೀವು ಈ ಪೋಸ್ಟ್ ಬರೆದ್ರಿ, ನಿಜಕ್ಕೂ ಇಷ್ಟ ಆಯ್ತು. ನೀವು ಜವಾಬ್ದಾರಿ ಅರಿತವರು, ನಿಮ್ಮಿಂದ ಇಂತ ತಪ್ಪು ಮತ್ತೆ ಆಗೋದಿಲ್ಲ ಅನ್ನೋ ನಂಬಿಕೆ ನನಗಿದೆ :) (ನಾನೇನೂ ಪರ್ಫೆಕ್ಟ್ ಅಲ್ಲ, ಆದ್ರೆ ಈ ವಿಶಯದಲ್ಲಿ ಪರ್ಫೆಕ್ಟ್ ಆಗ್ಬೇಕು ಅಂದ್ಕೊಂಡಿದೀನಿ ಅಷ್ಟೆ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಹೌದು ಮನೋಜ್ ಎಲ್ಲರಿಗೂ ಇದು ಗೊತ್ತಾಗಲಿ ಅಂತಾನೆ ಬರೆದಿರೋದು. ತಪ್ಪು ಮಾಡೋದನ್ನ ಹೇಳಿಕೊಂಡರೆ ಮನಸಿನ ಅರ್ಧ ಕಷ್ಟ ದೂರ ಆಗುತ್ತೆ ಹೇಗೂ ಕೆಲವರು ಬೈದಿದ್ದಾರೆ. ಅದೇ ಸಾಕಲ್ಲ್ಲವೇ ಪ್ರಾಯಶ್ಚಿತಕ್ಕೆ ಮತ್ತೆ ರಾಂಗ್ ರೂಟ್‍೬ನಲ್ಲಿ ಹೋಗೋ ಯೋಚನೆ ಸಹಾ ಮಾಡೋದಿಲ್ಲ ಎಷ್ಟಾದರೂ ಜೀವ ನಂದಲ್ವಾ?, ಮಗು ಇದೆ ಮನೆಯವರಿದ್ದಾರೆ ಅವರನ್ನೆಲ್ಲಾ ಬಿಟ್ಟು ಹೋಗೋದು , ಅಥವ ಅವರ ಮೇಲೆ ಭಾರ ಆಗೋದು ಛೇ ಛೇ ಇಲ್ಲ ಇಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.