ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

July 17, 2008 - 12:31pm — roopablrao

"ಇಂಗ್ಲೀಶ್ ಮೀಡಿಯಮ್‌ನಲ್ಲಿ ಓದಿದ್ರೆ ಮಕ್ಕಳು ತುಂಬಾ ಬುದ್ದಿವಂತರಾಗ್ತಾರೆ"

"ಸಂಸ್ಕೃತ ತಗೊಂಡ್ರೆ ಹೈ ಸ್ಕೋರ್‍ ಮಾಡಬಹುದು, ಕನ್ನಡಕ್ಕೆ ಮಾರ್ಕೇ ಹಾಕಲ್ಲ"

ಇದು ಈಗಿನ ಅಲ್ಲ ಯಾವಾಗಿನಿಂದಲೋ ಬರುತ್ತಿರುವ ಕೂಗು. ನಾನು ಚಿಕ್ಕವಳಿದ್ದಾಗಲಿಂದಲೂ ಇದೇ ಕೂಗು

ನಾನು ಏಳನೇ ಕ್ಲಾಸ್ ಮುಗಿಸಿ ಎಂಟನೇ ತರಗತಿಗೆ ಸರ್ಕಾರಿ ಸ್ಕೂಲ್ ಒಂದಕ್ಕೆ ಸೇರಬೇಕಿತ್ತು
ನನ್ನ ಮಾತು ನನ್ನ ಮಾರ್ಕ್ಸು ನೋಡಿ ನಮ್ಮ ಹೆಡ್ ಮಾಸ್ಟರ್ "ನಿಮ್ಮ ಮಗಳನ್ನ ಇಂಗ್ಲೀಷ್ ಮೀಡಿಯಮ್‌ಗೆ ಸೇರಿಸಿ ಚೆನ್ನಾಗಿ ಓದ್ತಾಳೆ . ಮುಂದೆ ಒಳ್ಳೆ ಭವಿಷ್ಯ ಇದೆ " ಅಂದಿದ್ದರು.
ಅಮ್ಮಾನೂ ಹಾಗೆ ಹೇಳಿದರು.
ಆದರೆ ನಾನು ಒಪ್ಪಲಿಲ್ಲ
ನಂಗೆ ಗೊತ್ತಿತ್ತು ನಾನು ಓದಿದ್ದು ಕನ್ನಡ ಮೀಡಿಯಮ್‌‍ನಲ್ಲಿ ಹಾಗಾಗಿ ಇಂಗ್ಲೀಷ ಸ್ವಲ್ಪ ಕಷ್ಟ ಅಂತ. ಜೊತೆಗೆ ಕನ್ನಡದಲ್ಲಿ ಓದಿದರೆ ಅರ್ಥವಾಗೋ ಎಷ್ಟೋ ವಿಷಯಗಳು ಇಂಗ್ಲೀಷನಲ್ಲಿ ಸರಿಯಾಗಿ ತಿಳಿಯುತ್ತಿರಲಿಲ್ಲ. ಹಠ ಮಾಡಿ ಕನ್ನಡ ಮೀಡಿಯಮ್ ಸೇರಿದೆ.
ಹಾಗೇನೆ ಕ್ಲಾಸ್‌ಗೆ ಮೊದಲೂ ಬರುತ್ತಿದ್ದೆ
ಆದರೆ ಈ ಕನ್ನಡ ಮೀಡಿಯಮ್‌ನಲ್ಲಿ ಓದಿದ್ದಕ್ಕೆ ನಾನು ಕೊಡಬೇಕಾಗಿ ಬಂದ ಬೆಲೆ ನಾನು ಹತ್ತನೇ ತರಗತಿಗೆ ಬಂದಾಗಿನಿಂದ ತಿಳಿಯಿತು.
೧)
ಸ್ಕೂಲ್ ಎಲೆಕ್ಷನ್‌ನಲ್ಲಿ ಪ್ರೆಸಿಡೆಂಟ್ ಆಗಿ ನಾನೆ ಆರಿಸಿ ಬಂದರೂ . ಕೇವಲ ಇಂಗ್ಲೀಷ ಸರಿಯಾಗಿ ಮಾತನಾಡಲು ಬರುವುದಿಲ್ಲ ಹಾಗೂ ಸ್ಕೂಲ್ ರೆಪ್ರೆಸೆಂಟ್ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ನನ್ನನ್ನು ವೈಸ್ ಪ್ರೆಸಿಡೆಂಟ ಮಾಡಿ ನನಗಿಂತ ಎರೆಡನೆಯವಳಾಗಿ ಆರಿಸಿ ಬಂದಿದ್ದ ಇಂಗ್ಲೀಷ್ ಮೀಡಿಯಮ್ ನಲ್ಲಿ ಓದುತಿದ್ದ ಇನ್ನೊಬ್ಬಳನ್ನು ಪ್ರೆಸಿಡೆಂಟ್ ಮಾಡಿದಾಗ.

೨) ಹತ್ತನೇ ತರಗತಿಯಲ್ಲಿ ಒಳ್ಳೆ ಮಾರ್ಕ್ಸ್ ತೆಗೆದುಕೊಂಡು ವಿಜ್ನಾನ ವಿಷಯ ಆರಿಸಿಕೊಂಡೆ . ಅಲ್ಲಿದ್ದ ಎಷ್ಟೊಂದು ಪದಗಳು ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟು ಅತ್ತಾಗ.

೩) ಪಿ ಯು ಸಿ ಯಲ್ಲಿ ವಿಷಯಗಳನ್ನೆಲ್ಲಾ ಚೆನ್ನಾಗಿ ತಿಳಿದ್ದಿದ್ದರೂ ಅದನ್ನು ಪೇಪರ್ ಮೇಲೆ ಮೂಡಿಸಲು ಸಾಧ್ಯವಾಗದೆ ಹೋಗಿ ಕಡಿಮೆ ಅಂಕ ತೆಗೆದುಕೊಂಡಾಗ.

ಹೀಗೆ ಹತ್ತು ಹಲವು ಕಡೆ ಇಂಗ್ಲೀಶ್‌ ಇಲ್ಲದೆ ನೊಂದಾಗ ನನಗೆ ಅನ್ನಿಸಿದ್ದುದ್ದು . ನಾನು ಇಂಗ್ಲೀಷ್ ಮೀಡಿಯಮ್‍ನಲ್ಲಿ ಓದಿದ್ದರೆ ಚೆನ್ನಾಗಿರುತ್ತಿತ್ತು

ಈಗ ಪರವಾಗಿಲ್ಲ ವೃತ್ತಿ ಬದುಕಿನ ಒಂದೆಡೆ ನಿಂತಾಗ ನಾನು ಹೇಳುತ್ತೇನೆ." ಕನ್ನಡ ಮೀಡಿಯಮ್‌ನಲ್ಲಿ ಓದಿದರೆ ಏನೂ ಆಗಲ್ಲ ಈಗ ನಾವೆಲ್ಲಾ ಇಲ್ಲವಾ. ಇಂಗ್ಲೀಶ್ ಮೀಡಿಯಮ್‍ನಲ್ಲಿ ಓದಿದವರಿಗಿಂತ ಒಂದು ಪಟ್ಟು ಮೇಲೆ ಸಂಪಾದಿಸ್ತೀವೆ"

ಆದರೆ ಆಗೆಲ್ಲಾ ನಾನು ಅನುಭವಿಸಿದ ನೋವು ............... ಆ ವಯಸ್ಸಿನಲ್ಲಿ ಆದ ಆಘಾತ........................ ಅದಕ್ಕೆ ಬೆಲೆ ಉಂಟೇ

ಇದೆಲ್ಲಾ ಗಮನಿಸಿದಾಗ

ಮಕ್ಕಳನ್ನು ಇಂಗ್ಲೀಷ್ ಮೀಡಿಯಮ್‍ನಲ್ಲೇ ಓದಿಸುವುದು ಮೇಲು. ನಾವೆಲ್ಲಾ ಓದುತ್ತಿದ್ದಾಗ ಇದ್ದ ಸ್ಪರ್ಧೆಗೂ ಈಗಿನ ಸ್ಪರ್ದೆಗೂ ಅಜಗಜಾಂತರವಿದೆ. ಈಗಿನ ಮಕ್ಕಳಿಗೆ ನಮಗಿದ್ದ ತಾಳ್ಮೆ ಇಲ್ಲ . ಜೀವನದಲ್ಲಿ ಒಂದು ಚಿಕ್ಕ ಸೋಲೂ ಸಹ ಅವರನ್ನು ಹಣ್ಣಾಗಿಸುತ್ತದೆ. ಅದಕ್ಕೆ ನಾವೇಕೆ ಆಸ್ಪದ ಮಾಡಿಕೊಡಬೇಕು?.

ಆದರೆ ಈ ಸಂಸ್ಕೃತ ಮೊದಲ ಭಾಷೆಯನ್ನಾಗಿ ತೆಗೆದುಕೊಳ್ಳುವುದು ಕೇವಲ ಅಂಕಗಳ ಆಸೆಗೆ.

ಕನ್ನಡ ಭಾಷೆಗೂ ಮೌಲ್ಯಮಾಪನ ಸ್ವಲ್ಪ ಸಡಿಲವಾಗಿದ್ದರೆ ಖಂಡಿತಾ ಕನ್ನಡವನ್ನೇ ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುತ್ತಾರೆ
ಹಾಗಾಗಿಯಾದರೂ ಕನ್ನಡ ಕಲಿಯುತ್ತಾರೆ

ನಾನು ಈಗ ಕನ್ನಡಿಗಳಾಗಿ ನನ್ನ ಮಗಳಿಗೆ ಮನೆಯಲ್ಲಿ ಕನ್ನಡದಲ್ಲೇ ಮಾತಾಡಿಸುತ್ತೇನೆ

ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಜೊತೆಗೆ ತಾರೆಗಳ ತೋಟದಿಂದ ಚಂದಿರ ಬಂದ

ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಜೊತೆಗೆ ಬೆಕ್ಕೇ ಬೆಕ್ಕೆ ಮುದ್ದಿನ ಸೊಕ್ಕೆ

ಜಾಕ್ ಅಂಡ್ ಜಿಲ್ ಜೊತೆಗೆ ಬಣ್ಣದ ತಗಡಿನ ತುತ್ತೂರಿ

ಪದ್ಯಗಳನ್ನೂ ಹೇಳಿಕೊಡುತ್ತೇನೆ

ABCD ಜೊತೆಗೆ ಅ ಆ ಬರೆಯಲೂ ಕಲಿಸುತ್ತಿದ್ದೇನೆ

ಇದು ಕನ್ನಡಿಗಳಾಗಿ ನನ್ನ ಕರ್ತವ್ಯ

ಆದರೆ ಕಳಿಸುವುದು ಇಂಗ್ಲೀಷ್ ಮೀಡಿಯಮ್‌ಗೆ ಅದೂ ICSE ಸಿಲಬಸ್ ಇರುವ ಸ್ಕೂಲ್‌‌‍ಗೆ. ಏಕೆಂದರೆ ನಾನು ಒಬ್ಬ ತಾಯಿಯಾಗಿ ನನ್ನ ಮಗಳ ಭವಿಶ್ಯದ ಕಡೆಗೆ ಯೋಚಿಸುವುದು ಮಾತೃ ಧರ್ಮ.

ಎಲ್ಲಾ ತಾಯಂದಿರೂ ಕನ್ನಡದ ಗಂಧವನ್ನು ಸ್ವಲ್ಪ ತೇದರೆ ಸಾಕು ಮಕ್ಕಳು ವಿದೇಶದಲ್ಲಿ ಇದ್ದರೂ ಅದರ ಗಂಧವನ್ನು ತಮ್ಮಲ್ಲಿ ಪಸರಿಸಿಕೊಂಡು ಎಲ್ಲೆಡೆ ಹರಡುತ್ತಾರೆ

ಸುಮ್ಮನೆ ಮಕ್ಕಳನ್ನು ಕನ್ನಡ ಮೀಡಿಯಮ್‌ಗೆ ಕಳಿಸಿದರೆ ತೊಂದರೆಯಾಗುವುದು ಕನ್ನಡ ಮಾಧ್ಯಮದಲ್ಲೇ ಪಾಥಮಿಕ ಶಿಕ್ಶ್ಗಣ ಇರಲಿ ಎಂದು ಬೊಬ್ಬೆ ಹೊಡೆಯುವವರಿಗಲ್ಲ ಆ ಮಕ್ಕಳಿಗೆ.

ಹಾಗೆ ಬೊಬ್ಬೆ ಹೊಡೆದವರ ಮಕ್ಕಳೂ ಇಂಗ್ಲೀಷ್ ಮೀಡಿಯಮ್‍ನಲ್ಲೇ ಓದುತ್ತಿರುವುದು ಎಂಬುದು ಮರೆಯಬಾರದು

  • ವಿಚಾರ
~.~
  • roopablrao ರವರ ಬ್ಲಾಗ್
  • Login or register to post comments
  • 494 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 17, 2008 - 12:52pm — mahesha

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

mahesha's picture

ಚಪ್ಪಳೆ.. ನಿಮ್ಮ ಮಾತ್ರುದರ್ಮ ಮೆಚ್ಚತಕ್ಕದ್ದು... ತಮಾಶೆಯಲ್ಲ...

ನೀವು ದಿಟವಾಗಲೂ ನಿಮ್ಮ ಮಗಳ ಬವಿಶ್ಯಕ್ಕೆ ಒಳ್ಳೇದನ್ನೇ ಮಾಡಿದ್ದೀರಿ.. ಸದ್ಯ ನನ್ನ ಯೋಚನೆಗೆ ಜೊತೆ ಇದೆ.

ಒಂದು ಗುಟ್ಟು ಹೇಳ್ತೀನಿ ರೂಪಕ್ಕ.. ಹೀಗೆ ಮನಸ್ಸುಬಿಚ್ಚಿ ದಿಟವನ್ನ ಎಲ್ಲೆಡೆ ಹೇಳಬೇಡಿ..

ಈ ತಮ್ಮನ ಉಪಾಯಗಳು
೧) ಯಾರಾದರೂ ನಿಮ್ಮ ಮಕ್ಕಳನ್ನು ಯಾಕೆ ಇಂಗ್ಲೀಶ್ ಮೀಡಿಯಮ್ಮಿಗೆ ಹಾಕಿದಿರಿ, ಇಶ್ಟೆಲ್ಲ ಕನ್ನಡ ಅಂತೀರಿ ಅಂತ ಯಾವುದಾರೂ ಕನ್ನಡ ಸಂಗದ ಬುದ್ದಿಜೀವಿಗಳು ಕೇಳಿದರೆ, ’ನಮ್ಮ ಯಜಮಾನರನ್ನು ಕೇಳಿ, ಎಶ್ಟೇ ಆದರೂ ನಾನು ಹೆಣ್ಣು" ಎಂದು ಹೇಳಿ. ವಾದಕ್ಕೆ ಇಳಿಯಬೇಡಿ.. ಯಾಕೆ ಗೊತ್ತಾ? ಈ ಹೆಚ್ಚು ಬುದ್ದಿಜೀವಿಗಳ ಕನ್ನಡ ಬರಹಗಾರ ಮಕ್ಕಳು ಆಗಲೇ ಇಂಗ್ಲೀಶಲ್ಲಿ ಓದಿ ಅಮೆರಿಕದಲ್ಲಿ ಇದ್ದಾರಂತೆ.. ಅದರ ಬಗ್ಗೆ ಈ ಬರಹಗಾರರೇ ಹೆಮ್ಮೆಯಿಂದ ಬ್ಲಾಗುಗಳನ್ನು , ಬರಹಗಳನ್ನು ಬರೆದುಕೊಂಡಿದ್ದಾರೆ. ಸುಮ್ನೇ ವಾದಾತಿವಾದ ಮಾಡ್ತಾರೆ.

೨) ಎಲ್ಲರೂ ಇಂಗ್ಲೀಶ್ ಮೀಡಿಯಂಗೆ ಸೇರಿದ್ರೆ, ನಮ್ಮ ಮಕ್ಕಳಿಗೆ ಕಾಂಪಿಟೇಶನ್ನು ಜಾಸ್ತಿ ಆಗಲ್ವ.. ಅದಕ್ಕೆ ಕನ್ನಡ ಮೀಡಿಯಮ್ಮಲ್ಲಿ ಓದಿಸ್ತೀನಿ ಅನ್ನೋರಿಗೆ ಬಹಳ ಸಂತೋಶ, ಒಳ್ಳೇ ಕೆಲಸ ಮಾಡಿದ್ರಿ.. ನನಗೆ ಹಾಗೆ ಮಾಡಕ್ಕೆ ಆಗಲಿಲ್ಲ ಅಂತ ಹುಸಿ ಬೇಸರ ತೋರಿಸಿರಿ..

ದೇವರಾಣೆ ಇದು ತಮಾಶೆಯಲ್ಲ.. ನಿಮ್ಮ ತಮ್ಮ ಒಳ್ಳೆಯ ಮನಸ್ನಿಂದ ಹೇಳಿದ್ದೀನಿ...!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 1:11pm — roopablrao

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

roopablrao's picture

ಮಹೇಶ್ ನನ್ನಿ
ಆದರೆ
ನಿಜ ಹೇಳೊದಕ್ಕೆ ನಂಗೆ ಯಾವ ಭಯವೂ ಇಲ್ಲ.
ಇದು ನನ್ನ ಅನಿಸಿಕೆ ಮಾತ್ರವಲ್ಲ 99% ಕನ್ನಡಿಗರ ,ಏಕೆ ಎಲ್ಲಾ ತಂದೆ ತಾಯಂದಿರ ಆಲೋಚನೆಗಳೂ ಹೀಗೆ ಇವೆ
ಹೇಳಲು ಹೋದರ ತಮ್ಮನ್ನೆಲ್ಲಿ ಕನ್ನಡ ವಿರೋಧಿ ಎನ್ನುತ್ತಾರೋ ಎಂಬ ಭಯವಿರುತ್ತದೆ ಅಷ್ಟೆ.

ಇಂಗ್ಲೀಶ್ ವೃತ್ತಿಯಂತೆ ಹಣ ಸಂಪಾದಿಸುವುದಕ್ಕೆ, ಸ್ಪರ್ದೆ ಎದುರಿಸುವುದಕ್ಕೆ
ಕನ್ನಡ ತಾಯಿಯಂತೆ ಸಂಗಾತಿಯಂತೆ ಮನೆಯಲ್ಲಿ ನಲ್ಮೆ , ಪ್ರೀತಿ, ನೆಮ್ಮದಿಗಾಗಿ.

ವೃತ್ತಿ ಸಂಗಾತಿ(ತಾಯಿ) ಎಲ್ಲರೂ ಎಲ್ಲವೂ ಬೇಕು ಬಾಳಲು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 1:20pm — mahesha

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

mahesha's picture

ಹು...

ಆದರೆ ಒಂದು ನೆನೆಪಿಡಿ.. ಎಲ್ಲರಿಗೂ ಎಲ್ಲ ವಿಶಯ ತಿಳಿಯಲ್ಲ..!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 2:21pm — varunbhatbm

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

varunbhatbm's picture

ಚೆನ್ನಾಗಿ ಬರೆದಿದ್ದೀರಿ, ರೂಪ.
ಈ ಲೇಖನ ಓದುತ್ತಾ, ನನ್ನ ಹೈಸ್ಕೂಲ್ ದಿನಗಳು ನೆನಪಾದವು. ೮ನೇ ತರಗತಿಯಲ್ಲಿ ನನಗೂ ಇದೇ ರೀತಿಯ ಅನುಭವಗಳು ಆಗಿದ್ವು..

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 3:29pm — vikashegde

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

vikashegde's picture

ನನಗೇನೋ ಒಟ್ಟಾರೆ ವ್ಯವಸ್ಥೆಯಲ್ಲೇ ತಪ್ಪಿದೆ ಅನ್ನಿಸುತ್ತೆ.

ಹೈಫೈ ಇಂಗ್ಲೀಷ್ ಮಾತಾಡಕ್ಕೆ ಬರದಿದ್ರೆ ಅವರನ್ನು ಕಡೆಗಣಿಸೋದು ಸರಿಯಲ್ಲ. ಇಂತಹ ಸ್ಥಿತಿ ಬೆಂಗಳೂರಿನಂತ ಕಡೆ ಜಾಸ್ತಿ.
ನಾನು ಕನ್ನಡದಲ್ಲಿ ಚೆನ್ನಾಗಿ ಮಾತಾಡ್ತೀನಿ, ಬರೀತೀನಿ ಅಂತ ನಮ್ಮ ಶಾಲೆಯಿಂದ ಚರ್ಚೆ, ಕ್ವಿಜ್, ಪ್ರಬಂಧ ಎಲ್ಲಾ ಕಡೆ ನನ್ನನ್ನೇ ಕಳಿಸುತ್ತಿದ್ದರು.
ಯಾಕಂದ್ರೆ ನಮ್ಮ ಸಹಜವಾದ ಭಾಷೆ ಕನ್ನಡ ಆಗಿತ್ತು. ಇಂಗ್ಲೀಷ್ ಮೀಡಿಯಂ ಸ್ಕೂಲುಗಳಲ್ಲೂ ಕೂಡ ಇವೆಲ್ಲಾ ಕನ್ನಡದಲ್ಲೇ ನೆಡೆಯುತ್ತಿತ್ತು.

ಆದ್ದರಿಂದ ನನಗನಿಸುವುದು ಕನ್ನಡ ಮಾಧ್ಯಮದಲ್ಲೇ ಓದಿದರೂ ಕೂಡ ಇಂಗ್ಲೀಷ್ ಮಾತಾಡುವುದೊಂದನ್ನು ಸರಿಯಾಗಿ ಕಲಿಸಿದರೆ ಆಯಿತು ಎಂದು.
ಕನ್ನಡ ಮಾಧ್ಯಮದವರು ಅನವಶ್ಯಕ ಕೀಳರಿಮೆಯಿಂದ ನಲುಗುವಂತೆ ಮಾಡಿರುವುದು ಈ ಸಮಾಜ, ವ್ಯವಸ್ಥೆಯೇ ಹೊರತು ಇನ್ನೇನಲ್ಲ.
ಒಳ್ಳೆಯ ಇಂಗ್ಲೀಷ್ ಮಾತಾಡಿದರೆ ಬುದ್ಧಿವಂತ ಎಂಬ ತಪ್ಪು ತಿಳುವಳಿಕೆಯೂ ಕಾರಣ ಇದಕ್ಕೆ.

ಈಗ ನೋಡಿ, ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಜೊತೆ ಪುಸ್ಸಿ ಕ್ಯಾಟ್ ಕಲಿಸುವ ಬದಲು ಪುಸ್ಸಿ ಕ್ಯಾಟ್ ಜೊತೆಗೆ ಬೆಕ್ಕೆ ಬೆಕ್ಕೆ ಕಲಿಸುವಂತಾಗಿದೆ.
ಮಕ್ಕಳಿಗೆ ಬೆಕ್ಕು ಅಂದರೆ ಕ್ಯಾಟ್ ಅಂದರೇ ಅರ್ಥಾಗೋದು, ಅಂದರೆ ಮೊದಲು ಕ್ಯಾಟ್ ಕಲಿತಾರೆ ನಂತರೆ ಬೇಕೆಂದರೆ ಬೆಕ್ಕು ಕಲಿಸಬೇಕು.

ಎಲ್ಲ ತಂದೆ ತಾಯಂದಿರೂ ರೂಪಕ್ಕನ ತರ ಮಕ್ಕಳನ್ನು ಕನ್ನಡಿಗರಾಗಿ ಬೆಳೆಸೋರು ಇರೋಲ್ಲ. ಆದ್ದರಿಂದ ಕ್ರಮೇಣ ಎಲ್ಲರ ಮನೆಗಳಲ್ಲಿ ಕನ್ನಡ ಬರೀ ಮಾತಾಡುವ(ಅದರಲ್ಲೂFM ಕನ್ನಡ) ಮಕ್ಕಳನ್ನು ಮುಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಓದೋದು ಬರೆಯೋದು ಕೇಳುವಂತಿಲ್ಲ. ಅವರಿಗೆ ಕನ್ನಡವೂ ಸರಿಯಾಗಿ ಗೊತ್ತಿರೋಲ್ಲ, ತನ್ನದು ಕನ್ನಡ ’ಎತ್ತಿನಿಕ್ಕು’ ಅಂತನೂ ಗೊತ್ತಿರಲ್ಲ. Smiling

*************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 6:05pm — varunbhatbm

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

varunbhatbm's picture

ಮುಂದಿನ ಪೀಳಿಗೆ ಏಕೆ, ಬೆಂಗಳೂರಲ್ಲಿ ಹುಟ್ಟಿ ಬೆಳೆದವರಲ್ಲಿ ಹೆಚ್ಚಿನ ಮಂದಿಗೆ ಕನ್ನಡ ಸ್ಪಷ್ಟವಾಗಿ ಓದೋಕೆ ಬರೆಯೋಕೆ ಬರಲ್ಲ... ನಾಚಿಕೆಗೇಡು ಅಂದ್ರೆ ಇವರಿಗೆಲ್ಲ ೨೫ ದಾಟಿದೆ ಆಗಲೆ.. Sad
ನನ್ನ ಜಿಮೈಲ್ ಪೂರ ಕನ್ನಡಮಯವಾಗಿದ್ದನ್ನು ಕಂಡ ನನ್ನ ಇಬ್ಬರು ಗೆಳೆಯರು ಕೇಳ್ತಾ ಇದ್ರು, ಕನ್ನಡ ಅಷ್ಟು ಬೇಗ ಓದೋಕೆ ಹೇಗೆ ಸಾಧ್ಯ ಅಂತ.. ಆಗ ನನ್ನ ಕೈನಲ್ಲಿ ಚಾಕು ಇದ್ದಿದ್ದ್ರೆ ಇಬ್ಬರನ್ನು ಕೊಂದು ಜೈಲು ಸೇರ್ತಾ ಇದ್ದೆ...

-ವರುಣ್ ಭಟ್
http://varunbhat.name

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 6:08pm — ಸಂಗನಗೌಡ

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

ಸಂಗನಗೌಡ's picture

ಒಪ್ಪತಕ್ಕ ಮಾತು.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 6:30pm — ಸಂಗನಗೌಡ

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

ಸಂಗನಗೌಡ's picture

ಒಂದು ನಗೆಚಟಾಕಿ, ಇಬ್ಬರು ಗೆಳೆಯರು ಕಾಡಿಗೆ ಹೋಗಿದ್ದರು, ಹುಲಿ ಒಂದು ಕಂಡಿತು, ಒಬ್ಬ ಕೂಡಲೆ ತನ್ನ ’ನೈಕಿ’ ಶೂಜ್ ಹೊರತೆಗೆದ,.. ಮತ್ತೊಬ್ಬ ಕೇಳಿದನಂತೆ,.. ಅವನ್ನು ಹಾಕಿಕೊಂಡು ನೀನೇನು ಹುಲಿಗಿಂತ ಜೋರಾಗಿ ಓಡೋಕಾಗುತ್ತಾ?.. ಇನ್ನೊಬ್ಬ ಹೇಳಿದ, ’ನಾನು ಹುಲಿಗಿಂತ ಜೋರಾಗಿ ಓಡಬೇಕಾದ್ದಿಲ್ಲ,.. ನಿನಗಿಂತ ಜೋರಾಗಿ ಓಡಿದರೆ ಸಾಕು’ ಅಂದನಂತೆ.. ಕಾಂಪಿಟೇಶನ್...
ಹತ್ತನೆಯ ತರಗತಿಯಿಂದ ಹನ್ನೊಂದಕ್ಕೆ ಇಂಗ್ಲೀಶ್ ಮೀಡಿಯಮ್-ಗೆ ಬಂದಾಗ ವಸಿ ತ್ರಾಸಾಯಿತು,.. ಆರನೆಯ ತರಗತಿಯಿಂದಲೂ ಇಂಗಳೀಸನ್ನು ಹೆಚ್ಚಿನ ಒತ್ತು ಕೊಟ್ಟು ಓದಿದ್ದರಿಂದ ಒಳ್ಳೇದಾಯಿತು. ನನಗೆ ಕನ್ನಡ ಮೀಡಿಯಮ್‍ನಲ್ಲಿ ಓದಿದ್ದು ತುಂಬ ಒಳ್ಳೇದಾಯಿತು ಅಂತ ಯಾವಗಲೂ ಅನಿಸಿದೆ,.. ಅಯ್ಯೋ ನಾನು ಇಂಗಳೀಸ್ ಮೀಡಿಯಮ್ ಆಗಿದ್ರೆ ಚೆನ್ನಾಗಿತ್ತು ಅಂತ ಎಲ್ಲಿಯೂ ಅನಿಸಿಲ್ಲ... ಒಳ್ಳೇದಾಯಿತು ಅಂತ ಅನಿಸಿದ್ದು ಯಾಕಂದ್ರೆ.. ಸಂಗತಿಗಳನ್ನು ನಾನು ಚೆನ್ನಾಗಿ ತಿಳಿಯಲು ತುಂಬ ಅನುಕೂಲ ಆಯ್ತು.. ಏಸೋ ಮಂದಿ ನನ್ನ ಗೆಳೆಯರಲ್ಲಿ ಇಂಗಳೀಸ್ ಮೀಡಿಯಮ್‍ನವರಿಗೆ ಒಂದು ಸಂಗತಿಯನ್ನು ಹೇಳಲು, ಕನ್ನಡದಲ್ಲೂ ಸರಿಯಾಗಿ ಹೇಳೋಕೆ ಬರಲ್ಲ.. ಇತ್ತ ಇಂಗಳೇಸಲ್ಲೂ ಹೇಳೋಕೆ ಬರಲ್ಲ... ಇಂಜನೀಯರಿಂಗ್, ಮತ್ತು ಮೆಡಿಕಲ್ ಬರುವ ಹೊತ್ತಿಗೆ ಮಕ್ಕಳ ಮೆದುಳು ಅವುಗಳ ವಿಶಯಗಳನ್ನು ಚೆನ್ನಾಗಿ ಅರಗಿಸಿಕೊಳ್ಳುವನಿತು ಬಲಿತಿರುತ್ತದೆ,.. ಒಬ್ಬ ಕನ್ನಡಿಗನಾಗಿ ಕನ್ನಡದ ಬಗ್ಗೆ ದಿಟವಾದ ಒಳ ತುಡಿತ ಬರುವದು ನಮಗೆ ಏನನ್ನಾದರೂ ಸರಳವಾಗಿ ಕನ್ನಡದಲ್ಲಿ ಹೇಳಲು ಬಂದಾಗ... ಇಲ್ಲವಾದರೆ ಅದು ಬರೀ ಒಣ ಹೆಮ್ಮೆ ಆಗುತ್ತದೆ...

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2008 - 9:21pm — kalpana

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

kalpana's picture

*** ದಯವಿಟ್ಟು ತಪ್ಪು ತಿಳಿಯಬೇಡಿ, ನಿಮ್ಮನ್ಯಾರ್ನೂ ನಾನು ದೂರುತ್ತಿಲ್ಲ. ***

ಇದೆಲ್ಲ ಓದ್ತಾ ಹೋದ್ರೆ ಬೆಂಗಳೂರಿನಲ್ಲಿರುವ ನಿಮಗೆಲ್ಲರಿಗೂ, ಅಮೇರಿಕದಲ್ಲಿರುವ ನಮಗೆಲ್ಲರಿಗೂ ವ್ಯತ್ಯಾಸವೇ ಕಾಣುತ್ತಿಲ್ಲ. ಅಯ್ಯೊ, ತಾಯ್ನಾಡಿನಲ್ಲೂ ಇನ್ನು ಕನ್ನಡ ಉಳಿಯದೆ ಹೋಗಬಹುದು ಎಂದು ವ್ಯಥೆ ಪಡಬೇಕೋ ಅಥವ ಇನ್ಮೇಲೆ ಎಲ್ಲಿದ್ರೂ ಒಂದೆ, ನಮ್ಮ ಮಕ್ಕಳಿಗೆ ಕನ್ನಡ ಬರೋದಿಲ್ಲಾಂತ ಪಾಪಪ್ರಜ್ಞೆಯಲ್ಲಿ ಬದುಕಬೇಕಾಗಿಲ್ಲಾಂತ ಸಂತೋಷಪಡಬೇಕೋ ತಿಳಿತಾಯಿಲ್ಲ.

ವರುಣ್ ಹೇಳಿದಂತೆ ನನಗೆ ತಿಳಿದಿರುವ ಸುಮಾರು ತರುಣ/ತರುಣಿಯರಿಗೆ ಕನ್ನಡ ಸರಿಯಾಗಿ ಓದಲು ಬರುವುದಿಲ್ಲ(ಶಾಲೆಯಲ್ಲಿ ಕನ್ನಡ ಓದಿದ್ದರೂ!). ಇಂಗ್ಲೀಶ್ ಬ್ಲಾಗ್ ಹೊಂದಿರುವವರಿಗೆ ಇಲ್ಲಿ ಬ್ಲಾಗಿಸಲು ಕರೆದರೆ, ಅಯ್ಯೊ, ಕನ್ನಡದಲ್ಲಿ ಬೇಗ ಓದುವುದೇ ಕಷ್ಟ, ಇನ್ನು ಬರೆಯೋದಂತೂ ದೂರದ ಮಾತು ಅಂತ ತಳ್ಳಿಹಾಕುತ್ತಾರೆ. ಇವರು ಮಾತನಾಡುವುದಂತು ಕಂಗಳೀಶೆ. ಇದು ಈಗಿನ ೧೮-೨೦ ವಯಸ್ಸಿನ ಯುವ ಜನಾಂಗ. ಇವರು ಮುಂದೆ ತಮಗೇನೆ ಸರಿಯಾಗಿ ಬರದ ಕನ್ನಡವನ್ನು ತಮ್ಮ ಮಕ್ಕಳಿಗೆ ನಿಜಕ್ಕೂ ಮನೆಯಲ್ಲಿ ಹೇಳಿಕೊಡುತ್ತಾರ? ಇವರ ಮಕ್ಕಳು ಕನ್ನಡವನ್ನು ಅಜ್ಜಿ, ತಾತ, ಕೆಲಸದವರು, ದಾದಿಯರು ಅಥವ ಶಾಲೆಯಿಂದ ಕಲಿತರೆ ಉಂಟು, ಇಲ್ಲದಿದ್ದರೆ ಇಲ್ಲ.

ಕನ್ನಡ ಮೀಡಿಯಂ ಕಡ್ಡಾಯ ಮಾಡಬೇಕಾಗಿಲ್ಲ, ಆದರೆ, ಕನ್ನಡ (ಎರಡನೆಯ ಅಥವ) ಮೂರನೆಯ ಭಾಷೆಯನ್ನಾಗಿ ಕಲಿಯುವುದನ್ನು ಕಡ್ಡಾಯ ಮಾಡಿದರೆ ಕನ್ನಡ ಚೂರುಪಾರು ಉಳಿದೀತು. ಇಲ್ಲದಿದ್ದರೆ, ವಿದೇಶಕ್ಕೂ ಕರ್ನಾಟಕಕ್ಕೂ ವ್ಯತ್ಯಾಸವೇ ಇರುವುದಿಲ್ಲ. ಇದನ್ನು ನಾನಿಲ್ಲಿ ಕೂತು ಹೇಳುವುದಕ್ಕಿಂತ ಅಲ್ಲಿನ ಜನರೇ ನಿರ್ಧರಿಸಬೇಕು.

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 5:24am — varunbhatbm

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

varunbhatbm's picture

ಹೌದು, ಕನ್ನಡ ಓದಲು ಬರೆಯಲು ಬರದೆ ಇರುವವರು ಹೇಗೆ ತಾನೆ ಮಕ್ಕಳಿಗೆ ಹೇಳಿಕೊಟ್ಟಾರು?
ಈ ಪರಿಸ್ಥಿತಿ ಬೆಂಗಳೂರಲ್ಲಿ ಮಾತ್ರ ಅನ್ಸುತ್ತೆ. ಕರ್ನಾಟಕದ ಬೇರೆ ಎಲ್ಲಾ ಭಾಗಗಳಲ್ಲೂ ಇಂಗ್ಲೀಶು ಹಿಂದಿ ಏನೇ ಕಲಿತರೂ, ಹೆಚ್ಚು ಕನ್ನಡವನ್ನೇ ಉಪಯೋಗಿಸ್ತಾರೆ. ಈ ಭಾಗಗಳಲ್ಲಿ, ನಾಮಫಲಕಗಳು ಹಾಗು ದಿನಪತ್ರಿಕೆಗಳು ಹೆಚ್ಚಾಗಿ ಕನ್ನಡದಲ್ಲೇ ಓದುವುದನ್ನು ಮರೆಯಲು ಸಾಧ್ಯವಿಲ್ಲ.

-ವರುಣ್ ಭಟ್
http://varunbhat.name

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 4:01pm — sreekrishna

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

sreekrishna's picture

ಬೆಂಗಳೂರಿನ ಕನ್ನಡವೇ ಒಂ ಥರ ಕಿಚಡಿ ಭಾಷೆಯಾಗಿದೆ, ಇವರಿಗೆ ಅತ್ತ ಪೂರಾ ಇಂಗ್ಲೀಷ್ ಇಲ್ಲ ಇತ್ತ ಸರಿಯಾಗಿ ಕನ್ನಡವೂ ಬಾರದ ಸ್ಠಿತಿ! ಇದಕ್ಕೆ ಒಂದು ರೀತಿಯಲ್ಲಿ ಇವರ ಪೋಷಕರೆ ಕಾರಣ ಎನ್ನಬಹುದೆನೋ! ಮಕ್ಕಳಿಗೆ ಸ್ಕೂಲ್ ನಲ್ಲಿ ಅರ್ಧಬರ್ದ ಇಂಗ್ಲೀಷ್ ಹೇಳಿಕೊಡುವ ಮೇಡಮ್ ಗಳು .ಇತ್ತ ಕನ್ನಡ ಮಾತನಾಡಿದರೆ ನಮ್ಮ ಪ್ರತಿಷ್ಟೆ ಎಲ್ಲಿ ಮಣ್ಣು ಪಾಲಾಗಿಬಿಡುತ್ತದೆನ್ನುವ ತಂದೆ ತಾಯಿಗಳು. ಇಂತಹವರ ಮಧ್ಯೆದಲ್ಲಿ ಬೆಳದ ಕಂದಮ್ಮಗಳು ಯಾವ ರೀತಿ ಭಾಷೆ ಕಲಿಯುತ್ತವೆ ನೀವೆ ಹೇಳಿ?.
ಆದರೆ ರೂಪಕ್ಕ ಹೇಳಿದ ಹಾಗೆ ಇವತ್ತಿನ ಪ್ರಪಂಚಕ್ಕೆ ವ್ಯಾವಹಾರಿಕವಾಗಿ ಇಂಗ್ಲೀಷ್ ಬೇಕೆ ಬೇಕು. ನನಗೆ ನನ್ನ ಮಾತೃಭಾಷೆಯಲ್ಲಿ ಗೊತ್ತಿರುವಷ್ಟು ಇಂಗ್ಲೀಷಿನಲ್ಲಿ ಗೊತ್ತಿದ್ದರೆ ಈ ಟಸ್ ಪುಸ್ ಗಳನ್ನೆಲ್ಲಾ ಅಳ್ಳಾಡಿಸಿ ಅವರಿಗಿಂತ ಚೆನ್ನಾಗಿರುತ್ತಿದ್ದೆ ಅಂತ ಅದೆಷ್ಟೋ ಬಾರಿ ನನ್ನ ಮನಸ್ಸಿನಲ್ಲಿ ಅಂದು ಕೊಂಡಿದ್ದೆನೆ. ನಾವು ಕೈಲಾದಷ್ಟು ಕನ್ನಡವನ್ನು ಮೊದಲಿಗೆ ನಮ್ಮ ಅಕ್ಕ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಹದ್ಯೋಗಿಗಳಿಗೆ ಕಲಿಸುವ ಕೆಲಸ ಮೊದಲಿಟ್ಟುಕೊಂಡರೆ ಅದೇ ನಾವು ನಮ್ಮ ಭಾಷೆಯು ಬೆಳೆಯಲು ಮಾಡುವ ಕಾಯಕವಾಗುತ್ತದೆನ್ನುವ ಭಾವನೆ ನನ್ನದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2008 - 4:49pm — rasheedgm

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

rasheedgm's picture

ರೂಪ ಅವರ ಅನಿಸಿಕೆಗೆ ನಾನು ಕೈ ಜೋದಿಸುತ್ತೇನೆ.... ನಾನೂ ಕಾಲೇಜು ಓದುವಾಗ.. ಇಂಗ್ಲಿಷ್ ತಿಳಿಯದೆ ಬೇಸರ ಪಟ್ಟಿದ್ದಿದೆ..... ಆಗಲೆಲ್ಲ ನನ್ನನ್ನು ನನ್ನ ತಂದೆ ತಾಯಿ ಯಾಕೆ English ಮೀಡಿಯಂ ಶಾಲೆಗೆ ಸೇರಿಸಿಲ್ಲ.. ಅಂತ ಯೋಚಿಸುತ್ತಿದ್ದೆ. ನಾನು ಚೆನ್ನೈಗೆ ಬರುವಾಗ ನನಗೆ English ನ ಗಂದ-ಗಾಳಿ ಇರಲಿಲ್ಲ. English ನಲ್ಲಿ ಸೆಮಿನಾರ್ ಮಾಡುವುದನ್ನು ಯೋಚಿಸಿ ನಿದ್ರೆ ಮಾಡದ ದಿನಗಳೂ ಇವೆ. ಆಗಲೆಲ್ಲ ನನ್ನ English ಅಧ್ಯಾಪಕರಿಗೆ ಶಾಪ ಹಾಕುವ ಮನಸ್ಸಾಗುತಿತ್ತು.
ಆದರೆ ಈಗ ಖಂಡಿತ ಕನ್ನಡ ಮೀಡಿಯಂ ಬಗ್ಗೆ ಬೇಸರವಿಲ್ಲ. ತೊಂದರೆ ಇಲ್ಲದ English ಈಗ ಗೊತ್ತಿದೆ. ಕನ್ನಡ ಅಂದರೆ ತುಂಬಾನೆ ಇಷ್ಟ.
ಇ ನ್ನು ಮಕ್ಕಳನ್ನು ಶಾಲೆಗೆ ಸೇರಿಸುವ ವಿಚಾರ. ಇವತ್ತು ನನ್ನ ತಂಗಿ ನನಗಿಂತ ಚೆನ್ನಾಗಿ English ಮಾತಾಡುತ್ತಾಳೆ ಅವಳೂ ಕನ್ನಡ ಮೀಡಿಯಂ! ಆದರೆ 3 ನೇ ತರಗತಿ ಓದುವ ಅಕ್ಕನ ಮಗಳು ತಂಗಿಗಿಂತ ಚೆನ್ನಾಗಿ ಮಾತನಾಡುತ್ತಾಳೆ ಇವಳು English ಮೀಡಿಯಂ. ನನಗಿಂತ ನನ್ನ ತಂಗಿಗಿಂತ , ಅಕ್ಕನ ಮಗಳೇ ಮೇಲು , ಆದರೆ ಆ ವಯಸ್ಸಿನಲ್ಲಿ English ಮಾತಾಡುವ - ಚೆನ್ನಾಗಿ ತಿಳಿಯುವ ಅಗತ್ಯವಾದರೂ ಏನು? ನಾನು ಹೇಳುವುದೇನೆಂದರೆ ಮಕ್ಕಳನ್ನು ಕನ್ನಡ ಮೀಡಿಯಂ ನಲ್ಲಿ ಸೇರಿಸಿ English ಮನೆಯಲ್ಲೆ ಹೇಳಿಕೊಡುವುದು, ರೂಪರವರು ಮಾಡುತ್ತಿರುವುದಕ್ಕಿಂತ Better!! ನನ್ನ ಸ್ನೇಹಿತನೊಬ್ಬ ಹೇಳುತ್ತಿದ್ದ ಅವನ ತರಗತಿಯಲ್ಲಿ Englishನಲ್ಲಿ top ಕನ್ನಡ ಮೀಡಿಯಂ ನಲ್ಲಿ ಕಲಿತವನಿಗಂತೆ, ಅವನ ತಾಯಿ ಉಪನ್ಯಾಸಕಿಯಾಗಿದ್ದರು English ಮನೆಯಲ್ಲೇ ಹೇಳಿಕೊಟ್ಟಿರಬೇಕು...

ಆದರೆ ವಿಪರ್ಯಾಸ ಎಂದರೆ ಇಂದು ಮಕ್ಕಳಿಗೆ ಉತ್ತಮ ವಿಧ್ಯಾಬ್ಯಾಸ ಕೊಡೋದು English ಮೀಡಿಯಂ ಶಾಲೆಗಳಲ್ಲಿ ಮಾತ್ರ ವಾಗಿದೆ.... ಅಧ್ಯಾಪಕರೇ ಇಲ್ಲದ ಸರಕಾರಿ ಶಾಲೆಗಳು ಮಾತ್ರ ಕನ್ನಡ ಮೀಡಿಯಂ ಆಗಿ ಉಳಿದಿದೆ

````````
ನಾನು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2008 - 8:40pm — sathishcv

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

sathishcv's picture

ಬಾಲ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿಷಯಗಳ ತತ್ತ್ವಗಳು ಬಹಳ ಸರಿಯಾಗಿ ಅರ್ಥವಾಗಿರುತ್ತದೆ.
ಒಂದು ಭಾಷೆ ಕಲಿಯುವುದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ.
ಆದರೆ ಮುಂದಿನ ವರ್ಷಗಳ ವಿವಿಧ ವಿಷಯಗಳ ತಲಸ್ಪ್ರರ್ಶಿ ಅಧ್ಯಯನ ಮಾಡಲು ಪ್ರಾಥಮಿಕ ಹಂತದಲ್ಲಿ ಕನ್ನಡದಲ್ಲಿ ಅಭ್ಯಸಿಸಿದ್ದರೆ ಬಹಳ ಸಹಾಯಕವಾಗುತ್ತದೆ.
ಪ್ರಾಥಮಿಕ ಹಂತದಲ್ಲಿ ಅಂಗ್ಲ ಮಾಧ್ಯಮದಲ್ಲಿ ಓದಿದರೆ ವಿಷಯಗಳ ಗಿಳಿಪಾಠವಾಗುವ ಸಾಧ್ಯತೆ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 2:19pm — ಸಂಗನಗೌಡ

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

ಸಂಗನಗೌಡ's picture

ಒಳ್ಳೆಯ ಕಾಸಗಿ ಕನ್ನಡ ಸಾಲಿಗಳೂ ಇವೆ,.. ಅವನ್ನು ಕಂಡುಕೊಂಡು,.. ಅವುಗಳನ್ನು ಇನ್ನೂ ಉತ್ತಮಪಡಿಸಲು ಪಾಲಕರು ಹುರುದುಂಬಿಸಬೇಕು,..
ಕನ್ನಡ ಮಾದ್ದೆಮವೇ ಒಳ್ಳೆಯದು...

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 11:02am — tarlesubba

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

tarlesubba's picture

ರೊಪಕ್ಕ ನಿಮ್ಮ ಪರ್ಸನಲ್ಲ್ ಬ್ಲೋಗಿಗ್ಗೆ ಮುತ್ತಿಗೆ ಹಾಕಿ ಬಿಟ್ಟಿ ಉಪದೇಶ ಬಿಗೀತಿದಿನಿ ಶಂಸಿ.

ನನ್ನ ಸಣ್ಣ ಕನಸು.

ಮೂಲ ವಿಷಯ
ಮೀಡಿಯಂ ಮಾಧ್ಯಾಮ ಎಲ್ಲ ಮಾಯೆ.
ವಿಷಯ ಅರಿವಿನದು. ಉಳಕೀದೆಲ್ಲ ಸುಮ್ನೆ.

english science maths ಆಂಗ್ಲದಲ್ಲಿ.
ಕನ್ನಡ ಸಮಾಜ ಸಿವಿಕ್ಸು ಕನ್ನಡದಲ್ಲಿ.

ಲೋಕಕ್ಕೆ ಬೇಕ್ಕಾದ್ದು englishನಲ್ಲಿ.
ದೇಶಕ್ಕೆ ಬೇಕ್ಕಾದ್ದು ಕನ್ನಡದಲ್ಲಿ.

ನಾನು ಕೇಳೋದು ಇಷ್ಟೆ.
ಇದು ಸಾಮಾನ್ಯ syllabus ಆಗಬೇಕು. ಖಾಸಗಿ, government - ಹಳ್ಳಿ/ದಿಲ್ಲಿ ಎಲ್ಲ ಕಡೆ ಒಂದೆ ಸಿಲಬಸ್ಸು.

ಕನ್ನಡದ ೮ನೆ gnyaana peeTha prashasti vijeta bishop cottons alumni - ಸಿ. ಪಿ ರಿತೇಶ್.
ದೇಶದ ಮೊದಲನೆ ಫೀಲ್ಡ್ಸ್ ಮೆಡಲ್ ವಿನ್ನರ್ ಬಸವನ ಬಾಗೇವಾಡಿ ಸರ್ಕಾರಿ ಸಾಲಿ ಹುಡುಗಿ - cheluvi basappanavar.

ಕಲಿಯುವ ವಿಷಯದಲ್ಲಿ, ಅದರ ವಿಸ್ತಾರ ದಲ್ಲಿ, ಆಳದಲ್ಲಿ, state syllabus ICSE giMta hecchu minchabEku.
ಐರೋಪಿನ ಜಿಂನೇಶಿಯಂಗಳ ಮಟ್ಟಕ್ಕೆ ಕರ್ನಾಟಕ ಶಾಲೆಗಳು ಬರಬೇಕು.

ಕಲೆ, ಕಾಯಕ ವಿದ್ಯೆನು ಹೇಳ್ಕೊಡ್ಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 11:52am — tarlesubba

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

tarlesubba's picture

----------------------------
ಈ ತಲೆ ಬುಡ ಇಲ್ಲದ ಮೀಡಿಯಂ ಮಾಧ್ಯಾಮದ ಗೋಂದಲ ಬಿಟ್ಟರೆ ಮೂಲ ವಿಷಯ -ಮಕ್ಕಳ ಕಲಿಕೆ- ಅತ್ತ ಗಮನ ಕೋಡಬಹುದು.
ಓದು ಬರಹ, ಪರೀಕ್ಷೆ ಪಾಸುಮಾಡೋದು ಎಲ್ಲ ಒಕೆ.

akka mahadevi 12th century kannada feminist lived in karnataka. she wrote vachanas.
ಇಷ್ಟ್ ಗೊತ್ತಿದ್ರೆ ೫/೫ ಮಾರ್ಕ್ಸು ಸಿಗುತ್ತೆ. ಆದ್ರೆ 21st century vaidehi ತರ ಅಕ್ಕನ ಜೋತೆ ಮಾತಾಡೊಕೆ ಹೇಳ್ಕೊಡೊ ಸಿಲಬಸ್ ಯಾವುದು?

ನಂಗೆ ICSE-ಲಿ ಬೇಜಾರ್ ಆಗೋದು ಅಂದ್ರೆ ಇದೆ: ಅಲ್ಲಿ ಅಕ್ಕ ತಂಗಿ ಇಬ್ಬಾರಿಗೂ ಲೆಕ್ಕ ಇಲ್ಲ.
ಟ್ರಾಯ್ ಹೆಲೆನ್ನು, ಆರ್ಕಿನ ಜೊನು ಕಲೀಲಿ. ಎಲ್ಲ ಓಕೆ. ನಮ್ಮೂರ ಚೆನ್ನಮ್ಮ, ಓಬವ್ವ, ಅಬ್ಬಕ್ಕ ನೆಗ್ಲೆಕ್ಟ್ ಯಾಕೆ?

ನಾವು ಕನ್ನಡ ಓದಿ ಕನ್ನಡ ಉದ್ಧಾರ ಆಗೊದ್ಕಿಂತ, ಕನ್ನಡ ಓದಿ ನಮ್ಮ ಉದ್ಧಾರ ಆಗೋದು ಮುಖ್ಯ. ಅಲ್ಲ ಶಕ್ಯ. more of a possibility.

englishಅಲ್ಲಿ ವಿಷಯ ಇದೆ ಆದ್ರೆ context ಇಲ್ಲ. ವಿರ್ಜಿನ್ಯಾ ವೂಲ್ಫ್ ಓದಿನು ಸ್ತ್ರೀವಾದ ತಿಳಿಬಹುದು ಆದರೆ ವೈದೇಹಿ ಹೇಳಿದಾಗ ಅರ್ಥಾ ಅಗೋದೆ ಬೇರೆ.
science maths are mostly context free. they are sciences.

ಯಾವಾನೋ ಪುಡಂಗಿ ಐರೊಪಿನೋನು ಕಾಡ್ ಸುಟ್ಟು ನೆಲಮಾಡಿ urbanist ಅನಸ್ಕೊತಾನೆ. satellite-u, map-u ಎನು ಇಲ್ಲದೆ topography ಗೆ ತಕ್ಕಹಾಗೆ ಕೆರೆ ಕೊಟೆ ಕಟ್ಟಿದ ಕೆಂಪೆಗೌಡನ್ನ ನಾವು ಯಾವತ್ತು urbanist ಅಂತ ಕಾಣಲೆ ಇಲ್ಲ. ನಾವು ಕೆಂಪೆಗೌಡನ ಕಡೆ ಗಮನ ಕೊಟ್ಟಿದ್ದ್ರೆ ನಮಗು ಎನಾದ್ರು ವಿಷಯ ತಿಳಿತಿತ್ತೆನೋ. topography, planningu, rainwaterharwestingu. english ಅಲ್ಲೆ ವಿಷಯ ಇಲ್ಲ ಅಂದ್ರಮೆಲೆ, ಯಾರೋ ಗೌಡ ಯೆನ್ ಹೇಳ್ಕೊಡ್ತಾನೆ ಬಿಡಿ ಅನ್ನೊ attitude ನಮ್ದು.

ಕೆಂಪೆಗೌಡ founder of bangalore ಇಷ್ಟ್ ಗೊತ್ತು. ನಾಕ್ ಮೂಲೆಲು ಒಂದಷ್ಟು ಗೋಪುರಕಟ್ಟಿ. ಔನ್ ಹೆಸರಲ್ಲು ಓಂದು ಲೆಔಟ್ ಮಾಡಿ, ಎಲ್ಲಾರು ಒನೋಂದು 30-40, 40-60 ಸೈಟ್ ಮಾಡಿ, what ya so much traffic jam only no ya. in london they have so nice traffic ya. ಅಂತ ಠಸ್ಸ ಪುಸ್ಸ ಅಂತ ಯಂ. ಜಿ. ರೋಡು, ಬ್ರಿಗೇಡ್ ರೋಡಲ್ಲಿ ತಿರ್ಗಾಡ್ಕೊಂದು ತಿರ್ಗಿದ್ರೆ ಸರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 2:17pm — ಸಂಗನಗೌಡ

ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

ಸಂಗನಗೌಡ's picture

ಸುಬ್ಬಣ್ಣ,. ಕಣ್ಣಿನ ಮೇಲೆ ಇಂಗಳೀಸ್ ಪೊರೆ ಮೂಡಿದವರಿಗೆ ಚೆನ್ನಾಗಿ ಹೇಳಿದಿರ,.. ವಿಶಯ ಮೊದಲು, ನಮ್ಮ ಮನೆಯ ನುಡಿಯಲ್ಲದ ಇಂಗಳೀಸಲ್ಲಿ ಕಲಿಯುವದಕಿಂತ ಮತ್ತು ಇಂಗಳೀಸಲ್ಲಿ ಅರೆಬರೆ ಕಲಿಯೋದಕಿಂತ, ಸುಲಲಿತ ಸುಲಿದ ಬಾಳೆಹಣ್ಣಿನಂತ ಕನ್ನಡದಲ್ಲಿ ಮಕ್ಕಳು ಕಲಿತರೆ ಚೆನ್ನ..,. ಕನ್ನಡ ಮೀಡಿಯಮ್ ಕನ್ನಡಿಗರಲ್ಲಿ ಮೂಡುವಸ್ಟು ಕನ್ನಡತನ, ಅದರ ಬಗ್ಗೆ ಹೆಮ್ಮೆ ಇಂಗಳೀಸ್ ಮೀಡಿಯಮ್ ನವರಿಗೆ ಬರುವದಿಲ್ಲ,..
ಇಂಗಳೀಸನ್ನು ಒಂದು language ಆಗಿ, ಮಜಬೂತಾಗಿ ಕಲಿಸಲಿ,.. ಆಗ ಕನ್ನಡ ಮೀಡಿಯಮ್ಮಲ್ಲೇ ಕಲಿತದ್ದು ಒಳ್ಳೇದಾಯ್ತು ಅಂತ ಮಕ್ಕಳಿಗೆ ಮುಂದೆ ಅರಿವಾಗುತ್ತೆ..
ಕನ್ನಡಿಗನಾಗಿ, ಕನ್ನಡವನ್ನೇ ತಡವರಿಸುತ್ತಾ ಓದುವವರು ದಿಟ ಕನ್ನಡಿಗ ಹೇಗಾದಾರು?
ಅಂತವರ ಕನ್ನಡದ ಬಗೆಗೆ ಹೆಮ್ಮೆ,ಕಾಳಜಿ,ಒಲುಮೆ ಎಲ್ಲ, ಸಿನಿಮಾಗಳ ಬಗ್ಗೆ ಅಸ್ಟೇ ಉಳಿದು ಬಿಡುತ್ತೆ.,, ಕನ್ನಡದಲ್ಲಿ ಬ್ಲಾಗು, ಹೊತ್ತಗೆಗಳ ಮೂಲಕ ವಿಶಯಗಳನ್ನು ಚೆನ್ನಾಗಿ ತಿಳಿಯಬಲ್ಲವರು ತುಸು ವಿಚಾರ ಮಾಡಿ,.. ನಿಮ್ಮ ಮಕ್ಕಳು ಕನ್ನಡದಲ್ಲಿ ತಿಳಿಯಬೇಕಾದ್ದು ಏನೂ ಇಲ್ಲವೇ?.. ಗ್ಲೋಬಲ್ ಸಂಗತಿಗಳೇನೋ ಇಂಗಳೀಸೇ ಸಾಕು,,. ಆದರೆ ಅವುಗಳಿಗಿಂತ ಅವರಿಗೆ ಹೆಚ್ಚಾಗಿ ಬಳಕೆಗೆ ಬರುವದು ಲೋಕಲ್ ಸಂಗತಿಗಳೇ ಆಗಿವೆ,.. ಅವನ್ನು ತಿಳಿಯೋಕೆ ಕನ್ನಡಾನೇ ಬೇಕು, .. ಇಂಗಳೀಸ್‍ನ್ನು ಒಂದು ನುಡಿಯಾಗಿ ಕಲಿಸುವದೇ ಅಗದಿ ಒಳ್ಳೆಯ ದಾರಿ,..

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
  • ಆಳು ಕನ್ನಡ ತಾಯ್ ಬಾಳು ಕನ್ನಡ ತಾಯ್..ಆದರೆ ಕನ್ನಡಿಗರೊಡತಿ ಯಾರು
  • ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ?
  • ಸಂವಾದ-----------(?) ತಾಯಿಯೊಂದಿಗೆ
  • ಸಿಂ ಗನ್ನಡಂ ಗೆಲ್ಗೆ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator