ಜವಾಬ್ದಾರಿಗಳಿಗೂ (ಯಶಸು) ಸಾಧನೆಗೂ ವಿಲೋಮಾನುಪಾತವಿದೆಯೆ? (ತಿದ್ದು ಪಡಿ ಸುಪ್ರೀತರಿಂದ)
ಹೀಗೊಂದು ಪ್ರಶ್ನೆ ಕಾಡಿದ್ದು ನೆನ್ನೆ. ಮದುವೆ ಮಕ್ಕಳು ಗಂಡ ,ಹೆಂಡತಿ ಸಂಸಾರ ನೆಂಟರು ಇಷ್ಟರು ಸ್ನೇಹಿತರು ಇವರುಗಳ ಸಂಖ್ಯೆ ಬೆಳೆಯುತ್ತಿದ್ದಂತೆ ವ್ಯಕ್ತಿಯ ಕಾರ್ಯ ಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆಯೇ? ಇವುಗಳ ಬಗ್ಗೆ ಅಕ್ಕರೆ ವ್ಯಾಮೋಹ ಹೆಚ್ಚಾದಂತೆ ನಮಗೂ ನಮ್ಮ ಜೀವನದ ಗುರಿ(ಆದ್ಯಾತ್ಮಿಕತೆ, ಸಾಹಿತ್ಯಾಭಿರುಚಿ ,ಉದ್ಯೋಗ, ಬಿಸಿನೆಸ್)ಯ ಅಂತರ ಹೆಚ್ಚಾಗುತ್ತದೆಯಲ್ಲವೇ?
ಎಷ್ಟೋ ಯಶಸ್ಸು ಪಡೇದವರ ಸಂಖ್ಯೆಗಳನ್ನು ಗಮನಿಸಿ ಜಯಲಲಿತ, ಕಿರಣ್ ಮುಜುಂದಾರ್ ಶಾ ಮಾಯಾವತಿ, ಅಬ್ದುಲ್ ಕಲಾಮ್, ವಾಜಪೇಯಿ. ಇವರುಗಳೆಲ್ಲಾ ಜೀವನದಲ್ಲಿ ಗುರಿಯೆಡೆಗೆ ತದೇಕ ಚಿತ್ತವನ್ನು ಇಟ್ಟು ಬೆಳೆದವರಲ್ಲವೇ?
ಹಾಗಿದ್ದಲ್ಲಿ ಗುರಿ ತಲುಪುವ ಪ್ರಕ್ರಿಯೆಯೂ ಒಂದು ರೀತಿಯ ನಿರ್ಲಿಪ್ತತೆ . ಅತೀ ಭಾವುಕತನ , ಸಂಸಾರದ ಬಗ್ಗೆ ಅತಿಯಾದ ವ್ಯಾಮೋಹ, ಎಡಬಿಡದ ಜವಾಬ್ದಾರಿಯ ಭಾರ ನಮ್ಮನ್ನು ನಿರ್ಲಿಪ್ತತೆಯಿಂದ ಇರಲು ಬಿಡುವುದಿಲ್ಲ ಅನ್ನಿಸುತ್ತದೆ.
ನಿಮ್ಮಗಳ ಅಭಿಪ್ರಾಯವೇನು









ಪ್ರತಿಕ್ರಿಯೆಗಳು
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಸಂಸಾರಿಯಾಗಿದ್ದರೆ ತಪ್ಪಿಲ್ಲ
ಆದರೆ ಸಾಧಕನಾದವನು ತನ್ನ ಸುತ್ತ ಹುತ್ತ ಕಟ್ಟಿಕೊಳ್ಳಬೇಕಾಗುತ್ತದೆ.
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಸಂಸಾರಿ ಸಾಧಕನಾಗಲಾರೆನೇ?
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಸಂಸಾರಿ ಪ್ರಸಿದ್ಧರ ದೊಡ್ಡ ಪಟ್ಟಿಯೇ ಇದೆಯಲ್ಲ...ಅದನ್ನೇಕೆ ಮರೆತಿರಿ???
ಸಚಿನ್^ನಿಂದ ಒಬಾಮವರೆಗೆ....ಯಾರಿಲ್ಲ, ಎಲ್ಲಿಲ್ಲ???
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಸಂಸಾರಿಯಾಗಿದ್ದರೆ ತಪ್ಪಿಲ್ಲ.
ಆದರೆ ಸಾಧಕನಾಗುವವನು ತನ್ನ ಸಾಧನೆಯ ಸಮಯದಲ್ಲಿ, ಸುತ್ತ ಹುತ್ತ ಕಟ್ಟಿಕೊಳ್ಳಬೇಕಾಗುತ್ತದೆ.
ಸಂಸಾರಸ್ಥ ಸಾಧಕರ ಪಟ್ಟಿ ಅವಿವಾಹಿತ ಸಾಧಕರ ಪಟ್ಟಿಗಿಂತ ದೊಡ್ಡದೇ ಇದೆಯೆಂದು ನನ್ನೆಣಿಕೆ.
:)
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
"ಸಂಸಾರಿ ಸಾಧಕನಾಗಲಾರನೇ?" ........ "ಆದರೆ ಸಾಧಕನಾಗುವವನು ತನ್ನ ಸಾಧನೆಯ ಸಮಯದಲ್ಲಿ, ಸುತ್ತ ಹುತ್ತ ಕಟ್ಟಿಕೊಳ್ಳಬೇಕಾಗುತ್ತದೆ."
ಸಂಸಾರಿ ಸಾಧಕರಾದ ರಾಮಕೃಷ್ಣ ಪರಮಹಂಸ, ಮಹಮ್ಮದ್ ಪೈಗಂಬರರು ಯಾವ 'ಹುತ್ತಗಳನ್ನು' ಕಟ್ಟಿಕೊಂಡಿದ್ದರು?
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಸಾಧಕನಿಗೆ ತನ್ನ ಸಾಧನೆಯ ಹಾದಿಯಲ್ಲಿರುವಾಗ (ಅದು ಯಾವುದೇ ರೀತಿಯ ಸಾಧನೆಯೂ ಆಗಿರಲಿ) ಏಕಾಗ್ರತೆ ಇರಬೇಕು, ಧ್ಯಾನ ಇರಬೇಕು ಅನ್ನುವುದಷ್ಟೇ ನನ್ನ ಮಾತಿನ ಅರ್ಥ. ಎರೆಹುಳಗಳ ಸಹಾಯದಿಂದ ಹುತ್ತ ಕಟ್ಟಿಸಿಕೊಳ್ಳಬೇಕೆಂದು ಅಕ್ಷರಶ: ಅರ್ಥ ಬರುವಂತೆ ನಾ ಬರೆದಿರಲಿಲ್ಲ.
ಅಪಾರ್ಥವಾಗಿದ್ದರೆ ಕ್ಷಮಿಸಿ.
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
@ಆ.ಸು. ಹೆಗ್ಡೆ ಯವರಲ್ಲಿ
ಹುತ್ತದ ಬಗೆಗಿನ ನಾನ್ನ ಗೊಂದಲವನ್ನು ನಿವಾರಿಸಿದ್ದಕ್ಕಾಗಿ ಧನ್ಯವಾದಗಳು.
ನಾನು ಪ್ರಶ್ನೆ ಮಾಡಿದ ರೀತಿ ತಪ್ಪಾಗಿತ್ತು, ಕ್ಷಮಿಸಿ.
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಸಾಧನೆ ಎಂದರೆ ಏನು? ನಡೆಯಲು ಕಲಿಸಿ, ಮಾತು ಕಲಿಸಿ, ಬದುಕಲು ಕಲಿಸಿ ಸಮಾಜಕ್ಕೆ ಉತ್ತಮ ಮಕ್ಕಳನ್ನು ಕೊಡುವುದು ಸಾಧನೆಯಾಗುವುದಿಲ್ಲವೇ?
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಅವರವರ ಸ್ಥಾನದಲ್ಲಿದ್ದು, ಅವರವರ ಕರ್ತವ್ಯಗಳಲ್ಲಿ ಪರಿಪೂರ್ಣರಾಗುವುದೇ ಸಾಧನೆ.
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಹೌದು. ಇಲ್ಲಿ ರೂಪಾರವರು ಸಾಧನೆಯನ್ನು ‘ಯಶಸ್ಸಿ’(ಜನಪ್ರಿಯತೆ)ನೊಂದಿಗೆ ಗೊಂದಲಗೊಳಿಸಿಕೊಂಡಿದ್ದಾರೆ ಎನ್ನಿಸಿತು.
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ನಾನಿರುವ ಸ್ಥಾನದಿಂದ ಹೊರಗಡೆ ಏನಾದರೂ ಮಾಡಿ ತೋರಿಸುವುದನ್ನು ಸಾಧನೆ ಅಂದುಕೊಂಡಿರುವವರು ಬಹಳ
ಇರುವುದೆಲ್ಲವ ಬಿಟ್ಟು ಇಲ್ಲದುದರ ಕಡೆಗೆ... ಅಂತಾರಲ್ಲಾ ಹಾಗೆ...
:)
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
ಹೌದು ನೀವು ಹೇಳಿದ್ದು ಸರಿ
ಅದು ಯಶಸ್ಸೇ
ಈಗಲೇ ಬದಲಾಯಿಸುತ್ತೇನೆ
ತಿದ್ದು ಪಡಿಗಾಗಿ ವಂದನೆಗಳು
ಉ: ಜವಾಬ್ದಾರಿಗಳಿಗೂ ಸಾಧನೆಗೂ ವಿಲೋಮಾನುಪಾತವಿದೆಯೆ?
<<"ಸಾಧನೆ ಎಂದರೆ ಏನು? ನಡೆಯಲು ಕಲಿಸಿ, ಮಾತು ಕಲಿಸಿ, ಬದುಕಲು ಕಲಿಸಿ ಸಮಾಜಕ್ಕೆ ಉತ್ತಮ ಮಕ್ಕಳನ್ನು ಕೊಡುವುದು ಸಾಧನೆಯಾಗುವುದಿಲ್ಲವೇ?">>
ಖಂಡಿತವಾಗಿ!!!
ಇದಕ್ಕಿಂತ ದೊಡ್ಡ ಸಾಧನೆ ಯಾವುದಿರಲು ಸಾಧ್ಯ?
ನನ್ನನ್ನು ಯಾವಾಗಲೂ ಕಾಡುವ ಪ್ರಶ್ನೆ: ಮಹಾತ್ಮರುಗಳು ದೊಡ್ಡವರೋ, ಅಥವಾ ಅವರನ್ನು ಹೆತ್ತ, ಬೆಳಸಿದ ಹಿರಿಯರು ದೊಡ್ಡವರೋ? :-)
"ಪಂಡಿತಪುತ್ರ"ರನ್ನು ಹುಟ್ಟಿಸಿದವರ 'ಪಾಂಡಿತ್ಯ' ಒಳ್ಳೆಯದಕ್ಕಿಂತ ಕೆಟ್ಟದನ್ನೇ ಮಾಡಿತು, ಅಲ್ಲವೇ?
ಉ: ಜವಾಬ್ದಾರಿಗಳಿಗೂ ಯಶಸಿಗೂ (ಸಾಧನೆ)ಗೂ ವಿಲೋಮಾನುಪಾತವಿದೆಯೆ?
ಸಂಸಾರವೆಂಬುದು ಯಶಸ್ಸಿಗೆ ಪ್ರತಿಕೂಲವೇನಲ್ಲ.ಸೋಪಾನವಾಗಲೂ ಬಹುದು.
ಉ: ಜವಾಬ್ದಾರಿಗಳಿಗೂ ಯಶಸಿಗೂ (ಸಾಧನೆ)ಗೂ ವಿಲೋಮಾನುಪಾತವಿದೆಯೆ?
@ರೂಪಾ ರಾವ್
<< "ಮದುವೆ ಮಕ್ಕಳು ಗಂಡ ,ಹೆಂಡತಿ ಸಂಸಾರ ನೆಂಟರು ಇಷ್ಟರು ಸ್ನೇಹಿತರು ಇವರುಗಳ ಸಂಖ್ಯೆ ಬೆಳೆಯುತ್ತಿದ್ದಂತೆ ವ್ಯಕ್ತಿಯ ಕಾರ್ಯ ಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆಯೇ? ಇವುಗಳ ಬಗ್ಗೆ ಅಕ್ಕರೆ ವ್ಯಾಮೋಹ ಹೆಚ್ಚಾದಂತೆ ನಮಗೂ ನಮ್ಮ ಜೀವನದ ಗುರಿ(ಆದ್ಯಾತ್ಮಿಕತೆ, ಸಾಹಿತ್ಯಾಭಿರುಚಿ ,ಉದ್ಯೋಗ, ಬಿಸಿನೆಸ್)ಯ ಅಂತರ ಹೆಚ್ಚಾಗುತ್ತದೆಯಲ್ಲವೇ?" >>
ಕುತೂಹಲಕಾರಿ ಪ್ರಶ್ನೆ!!
ಮದುವೆ ಮಕ್ಕಳು ಗಂಡ ,ಹೆಂಡತಿ ಸಂಸಾರ ನೆಂಟರು ಇಷ್ಟರು ಸ್ನೇಹಿತರು ಇವರುಗಳ ಸಂಖ್ಯೆ ಬೆಳೆದರೂ, ಆ ಜವಾಬ್ದಾರಿಗಳನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿದಂತೆ, ವ್ಯಕ್ತಿಯ ಕಾರ್ಯಕ್ಷಮತೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು.
ಜಯಲಲಿತಾ, ಅಬ್ದುಲ್ ಕಲಾಮ್, ವಾಜಪೇಯಿ, ಹಾಗೆಯೇ ಎನ್ನಾರ್ ನಾರಾಯಣ ಮೂರ್ತಿ, ನಂದನ್ ನಿಲೇಕಣಿ ಕೂಡಾ, ಇವರ್ಯಾರಿಗೂ ತಾವೇರಿದ ಉಚ್ಚತಮ ಸ್ಥಾನಗಳಿಗೇರುವ ಗುರಿ ನಿಜವಾಗಿಯೂ ಮೊದಲಿಂದಲೂ ಇತ್ತೇ?
ನನಗನ್ನಿಸುತ್ತದೆ: ಅವಕಾಶಗಳು ಅವರೆಲ್ಲರ ಮುಂದೆ ಬಂದಾಗ ಅವರು ಹಿಂಜರಿಯಲಿಲ್ಲ. ಅವಕಾಶಗಳ ಜೊತೆಗಿರುವ ಜವಾಬ್ದಾರಿಗಳನ್ನು ನಿರ್ಭಯವಾಗಿ ಸ್ವೀಕರಿಸಿ, ಅವುಗಳನ್ನು ಧೈರ್ಯವಾಗಿ ಯಶಸ್ವಿಯಾಗಿ ನಿಭಾಯಿಸಿದರು.
ಉ: ಜವಾಬ್ದಾರಿಗಳಿಗೂ ಯಶಸಿಗೂ (ಸಾಧನೆ)ಗೂ ವಿಲೋಮಾನುಪಾತವಿದೆಯೆ?
ಖಂಡಿತಾ ಹೌದು...ಸ್ವಲ್ಪ ಯಶಸ್ಸು ಸಿಕ್ಕಿದ ತಕ್ಷಣ ಮನೆಯ ಯಾರಾದರೊಬ್ಬರು(spouse) ಒಬ್ಬರನ್ನೊಬ್ಬರು ಹೇಗೋ ಅರ್ಥಮಾಡ್ಕೊಳ್ಳಕ್ಕೆ ಶುರು ಮಾಡ್ಕೊಂಡ್ ಬಿಡ್ತಾರೆ!!! ಆದ್ರೆ ಆ ಯಶಸ್ಸು(ಜನಪ್ರಿಯತೆ) ಸಿಗದೆ ಬರಿಯ ಸಾಧನೆಗಳಿಗೆ ಖಂಡಿತಾ ಯಾರೂ ಸೊಪ್ಪು ಹಾಕಲ್ಲ...ಅಂತ ನನ್ನ ಅಭಿಪ್ರಾಯ.
ಉ: ಜವಾಬ್ದಾರಿಗಳಿಗೂ ಯಶಸಿಗೂ (ಸಾಧನೆ)ಗೂ ವಿಲೋಮಾನುಪಾತವಿದೆಯೆ?
>>ಹಾಗಿದ್ದಲ್ಲಿ ಗುರಿ ತಲುಪುವ ಪ್ರಕ್ರಿಯೆಯೂ ಒಂದು ರೀತಿಯ ನಿರ್ಲಿಪ್ತತೆ . ಅತೀ ಭಾವುಕತನ , ಸಂಸಾರದ ಬಗ್ಗೆ ಅತಿಯಾದ ವ್ಯಾಮೋಹ, ಎಡಬಿಡದ ಜವಾಬ್ದಾರಿಯ ಭಾರ ನಮ್ಮನ್ನು ನಿರ್ಲಿಪ್ತತೆಯಿಂದ ಇರಲು ಬಿಡುವುದಿಲ್ಲ ಅನ್ನಿಸುತ್ತದೆ.<< ಈ ಸಾಲು ತಪ್ಪು ಎಂದು ನನ್ನ ಭಾವನೆ. ಗುರಿ ತಲುಪುವ ಪ್ರಕ್ರಿಯೆಯೂ ಒಂದು ಜವಾಬ್ಧಾರಿಯೇ, ಏಕೆಂದರೆ ಗುರಿ ತಲುಪಲೇಬೇಕೆಂಬ ಛಲವಿದ್ದವನು ಮಾತ್ರ ಗುರಿ ತಲುಪಬಲ್ಲ! ಹಾಗೆ ಗುರಿ ತಲುಪಲೇಬೇಕೆಂದು ನಡೆಯುವಾಗ ಸಾಕಷ್ಟು ಉದ್ವೇಗ, ಆತಂಕ, ಅನುಮಾನ, ಅಭಿಮಾನ ಹೀಗೆ ನೂರೆಂಟು ಭಾವನೆಗಳು ಮನದಲ್ಲಿ ಸುಳಿದಾಡುತ್ತಿರುತ್ತವೆ. ನಾನು ಗುರಿ ಮುಟ್ಟಬಲ್ಲೆನೇ, ನಾನಿದನ್ನು ಸಾಧಿಸಬಲ್ಲೆನೇ, ನನ್ನ ಕೈಲಿದು ಸಾಧ್ಯವೇ! ಓಹೋ, ನೂರೆಂಟು ತಾಕಲಾಟಗಳು, ಇವೆಲ್ಲವನ್ನು ಜಯಿಸಿದವನು ಗುರಿ ಮುಟ್ಟಿ ಗೆಲ್ಲುತ್ತಾನೆ. ನನ್ನ ಅಭಿಪ್ರಾಯದಲ್ಲಿ ಒಬ್ಬ ವ್ಯಕ್ತಿಯ ಜವಾಬ್ಧಾರಿಗಳು ಹೆಚ್ಚಾದಷ್ಟೂ ಅವನ ಮನೋಸ್ಥೈರ್ಯ ಹೆಚ್ಚಾಗುತ್ತದೆ, ಜೀವನದ ಹಾದಿಯಲ್ಲಿ ಅವನು ಯಶಸ್ಸನ್ನು ಕಾಣುವ ಅವಕಾಶಗಳೂ ಹೆಚ್ಚಾಗುತ್ತವೆ. ಹೆಚ್ಚು ಜವಾಬ್ಧಾರಿ = ಹೆಚ್ಚು (ಯಶಸ್ಸು) ಸಾಧನೆ. ರಾಮಾಯಣದಲ್ಲಿ ಬರುವ ಹನುಮಂತನ
’ಸೀಮೋಲ್ಲಂಘನ ಪ್ರಸಂಗ’ ಇದಕ್ಕೊಂದು ಪ್ರಶಸ್ತ ಉದಾಹರಣೆ.