ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಆತ

March 19, 2008 - 2:07pm — roopablrao

ಆಟೊನಲ್ಲಿ ಬಸ್ ಸ್ಟಾಂಡ್‌ಗೆ ಬಂದಿಳಿದ ಕವಿತಾ ಮಣಭಾರದ ಲಗೇಜ್‌ ಹೊತ್ತುಕೊಂಡು ನಡೆಯುತಿದ್ದಳು. " ಬೆಂಗಳೂರಿಗೆ ಯಾವಾಗ ಹೋಗುತ್ತೇನೋ ಎಂಬಂತೆ ಆಗಿತ್ತು.
ಈ ಹಾಳಾದ ಎಕ್ಸಾಮ್ ಇದ್ದಾಗಲೇ ಅಕ್ಕನ ಮದುವೆ ಆದಾಗ ಬಹಳ ಬೇಸರವಾಗಿತ್ತು.ಮದುವೆಗೂ ಹೋಗಲಾಗಿರಲಿಲ್ಲ . ಅಕ್ಕನದು ಲೌ ಮ್ಯಾರೇಜ್ .
ಕಳ್ಳಿ ನನಗೆ ಒಂದಿಷ್ಟೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಮನದಲ್ಲೇ ಬೈದುಕೊಂಡಳು.
ಅಲ್ಲಿದ್ದ ಸಾವಿರಾರು ಕಂಗಳು ಇವಳನ್ನೇ ದಿಟ್ಟಿಸುತ್ತಿದ್ದವು . ಒಬ್ಬನಂತೂ ಇನ್ನೇನು ನುಂಗಿಯೇ ಬಿಡುವೆನು ಎಂಬಂತೆ ಬಾಯಿ ತೆಗೆದಿದ್ದ. ಅದೆಲ್ಲಾ ಸಾಮಾನ್ಯ ವಾಗಿದ್ದರಿಂದ ಗಮನ ಕೊಡದೇ ಬಸ್‌ಗೆಂದು ಇತ್ತ ತಿರುಗಿದವಳಿಗೆ ಶಾಕ್‌ ಆದಂತೆ ಒಬ್ಬ ನಕ್ಕ . ಅಥವ ನಕ್ಕನೇನೊ. ಎಂಥ ಆಕರ್ಷಕ ವ್ಯಕ್ತಿತ್ವ . ಕಣ್ಣನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದಳು ಆಗಲಿಲ್ಲ . ಹೃದಯದ ಬಡಿತ ಅವಳಿಗರಿವಿಲ್ಲದಂತೆ ಜೋರಾಗಿತ್ತು.
ಆಷ್ಟರಲ್ಲಿ ಬೆಂಗಳೂರಿನ ಬಸ್ ಅಡ್ಡ ಬಂದು ಅವನನ್ನು ಮರೆ ಮಾಡಿತು.

ಯಾವದೋ ಮಾಯೆಗೆ ಒಳಗಾದಂತೆ ಬಸ್ ಹತ್ತಿದವಳಿಗೆ ಮತ್ತೆ ಕಾಣಿಸಿದ್ದು ಅದೇ ಚೆಲುವ. ಸೀಟ್‌ಗಾಗಿ ಹುಡುಕುತಿದ್ದ ಇವಳನ್ನು ಕರೆದು ತನ್ನ ಪಕ್ಕದ ಸೀಟ್ ಕೊಟ್ಟ. ಮಾತಾಡದೇ ಕುಳಿತಳು . ಅವನೇ ಇವಳ ಲಗೇಜ್ ತಂದು ಬಸ್‌ನಲ್ಲಿ ಇಟ್ಟ.
" ಹೆಲ್ಲೊ ನೀವು ತಪ್ಪು ತಿಳಿಯದೇ ಇದ್ರೆ ನಾನು ನಿಮ್ಮ ಜೊತೆ ಮಾತಾಡ್ತಿರಬಹುದಲ್ಲವಾ? ಯಾಕೆಂದರೆ ಈ ಪ್ರಯಾಣದ ಸಮಯದಲ್ಲಿ ಪಕ್ಕದಲ್ಲಿ ಕುಳಿತೋರೇ ಸ್ನೇಹಿತರು. ಈ 4 ಅವರ್ಸ್ ಬೋರಿಲ್ಲದೇ ಕಳಿಬಹುದು"
ಕವಿತ ತಲೆಯಾಡಿಸಿದಳು.
ಹೀಗೆ ಪ್ರಾರಂಭವಾದ ಮಾತು ಇಬ್ಬರ ಬಗ್ಗೆ ಇಬ್ಬರ ಇಷ್ಟದ ಬಗ್ಗೆ , ಇಬ್ಬರ ಕನಸಿನ ಬಗ್ಗೆ , ಗುರಿ ಗಳನ್ನೆಲ್ಲಾ ಸುತ್ತಾಡಿ ಬಂತು. ಆ ಸಮಯದಲ್ಲಿ ಅವನ ಹೆಸರು ಹೇಮಂತ್ ಹಾಗು ಎಂ‌ಬಿಎ ಮಾಡಿ ಒಂದು ದೊಡ್ಡ ಕಂಪೆನಿಯಲ್ಲಿ ಇದ್ದಾನೆಂಬುದು ತಿಳಿಯಿತು.
ಹೀಗೆ ಮಾತುಕತೆಯಾಗುವ ಸಂದರ್ಭ್ಹದಲ್ಲಿ ಕವಿತ ಒಂದು ಅಂಶವನ್ನು ಗಮನಿಸಿದಳು. ಬೇರೆ ಯಾರಾದರೂ ಆಗಿದ್ದರೆ ಕೈ ತಾಕಿಸುವುದು, ಕಾಲು ತಾಕಿಸುವುದನ್ನಾದರೂ ಮಾಡುತಿದ್ದರು . ಆದರೆ ಹೇಮಂತ್‌ ಹಾಗೆ ಒಮ್ಮೆಯೂ ಮಾಡಲಿಲ್ಲ . ಒಬ್ಬ ಪರ್ಫೆಕ್ಟ್ ಜೆಂಟಲ್ ಮ್ಯಾನ್ ಇರಬೇಕು.
ಆತ ಎನೇನೋ ಮಾತನಾಡುತಿದ್ದ. ಕಿವಿ ಕೇಳುತಿದ್ದರೂ ಮನಸ್ಸು ಆಗಲೇ ಒಂದು ಸಣ್ಣ ಕನಸನ್ನು ಸೃಷ್ಟಿಸಿತ್ತು. ಹೇಮಂತ್ ತನ್ನನ್ನು "ಐ ಲೌ ಯು " ಎಂದು ಹೇಳಿದಂತೆ ತಾನು ಒಪ್ಪಿದಂತೆ ಇಬ್ಬರ ಮನೆಯಲ್ಲೂ ಇದಕ್ಕೆ ಒಪ್ಪಿಗೆ ಸಿಕ್ಕಿ ಮದುವೆಯೂ ಆದ ಹಾಗೆ ಏನೆನೋ ಕನಸು .
ಹೀಗೆ ಕನಸು ಕಾಣುವುದು ಇದೇ ಮೊದಲ ಸಲವಲ್ಲ ಹಿಂದೆಯೂ ಕಾಲೇಜಿನಲ್ಲಿ ರಿಶಿಯನ್ನು ಕಂಡಾಗ ಹೀಗೆ ಆಗಿತ್ತು ಆದರೆ ರಿಶಿ ರಶ್ಮಿಯ ಹಿಂದೆ ಬಿದ್ದಾಗ ಆ ಕನಸು ಮಾಯವಾಗಿತ್ತು. ಅಷ್ಟೇಕೆ ಮ್ಯಾತೆಮೆಟಿಕ್ ಲೆಕ್ಚ್‌ರ್ರ್ ಸಂದೀಪ್‌ರನ್ನು ಕಂಡಾಗಲೂ ಹೀಗೆ. ಆದರೆ ಅವರ ಮದುವೆ ಆಗಲೇ ಆಗಿತ್ತು .
ಹಾಗೆಂದು ಅವಳನ್ನು ಯಾರೂ ಇಷ್ಟ ಪಡಲಿಲ್ಲವೆಂದಲ್ಲ .ಆದರೆ ಅವಳಿಗಿಷ್ಟವಾದವರಿಗೆ ಅವಳು ಇಷ್ಟಾ ವಾಗಿರಲಿಲ್ಲ. ಅವಳನ್ನು ಬಯಸಿದವರು ಅವಳಿಗೆ ಹಿಡಿಯಲಿಲ್ಲ
ಮಧ್ಯದಲ್ಲಿ ಬಸ್ ನಿಂತಾಗ ಹೇಮಂತ್ ಊಟ ಕೊಡಿಸಿದ .

ಹೀಗೆ ಮಾತನಾಡುತ್ತಲೇ ಬೆಂಗಳೂರು ಬಂದೇ ಬಿಟ್ಟಿತು. ಒಂದೇ ಕ್ಷಣದಲ್ಲಿ ಹೇಮಂತ್ ಇವಳ ಬ್ಯಾಗ್ , ಲಗೇಜ್ ಎಲ್ಲಾ ಹೊತ್ತುಕೊಂಡು ಇಳಿದೇ ಬಿಟ್ಟ, "ಹೆಲ್ಲೊ ನಿಲ್ಲಿ ನಿಲ್ಲಿ" ಎಂದು ಎಷ್ಟು ಹೇಳಿದರೂ ಕೇಳದೇ ಕೆಲ ಕ್ಶಣದಲ್ಲಿ ಜನರಲ್ಲಿ ಮರೆಯಾಗಿ ಹೋದ . ನಯ ವಂಚಕ. ಬರೀ ಮಾತಿನಲ್ಲಿ ಮರುಳು ಮಾಡಿ ಎಲ್ಲವನ್ನು ಹಾರಿಸಿಕೊಂಡು ಹೋದ.
ಕವಿತಾಗೆ ಸಂದರ್ಭದ ಅರಿವಾಗುತ್ತಲ್ಲೇ ಅಳು ಬಂದು ಬಿಟ್ಟಿತು . ತನ್ನ ಪುಸ್ತಕ, ದುಡ್ಡು , ಮೊಬೈಲ್ , ಬಟ್ಟೆ , ಎಲ್ಲವನ್ನೂ ಕಳೆದುಕೊಂಡಿದ್ದಳು.
ಮನೆಯಲ್ಲಿ ಏನು ಹೇಳುವುದು . ಯಾವನೋ ತನ್ನ ಲಗೇಜ್ ಹೊಡೆದುಕೊಂಡು ಹೋದ ಎಂದರೆ ಹೇಗೆ ಅಂತ ಕೇಳುತ್ತಾರೆ. ಈ ವಿಷಯವನ್ನು ಹೇಗೆ ಹೇಳುವುದು . ದಿಕ್ಕೆಟ್ಟ್ವಳಂತೆ ನಿಂತಿದ್ದಳು. ಅಷ್ಟರಲ್ಲೆ ಕಾಣಿಸಿದಳು ಅಕ್ಕ
ಅರೇ ಅಕ್ಕನ ಬಳಿಯಲ್ಲೇ ತನ್ನೆಲ್ಲ ಲಗೇಜ್ ಇದೆ. ಹಾಗಿದ್ದರೇ ಆ ಈಡಿಯಟ್ ....................ಆತ ಅಕ್ಕನ ಬಳಿಯಲ್ಲೇ ನಿಂತಿದ್ದ . ಇಬ್ಬರೂ ಮುಸಿ ಮುಸಿ ನಗುತ್ತಿದ್ದರು.
"ಹೋದೆಯಾ ಮೋಸ ಕವಿತಾ . ಹೇಗಿತ್ತು ನಿಮ್ಮ ಭಾವನ ನಾಟಕ . ಯಾವಾಗಲೂ ನನ್ನ ಗೋಳು ಹಾಕ್ಕೊಳಿತಿದ್ದೆಯಲ್ಲಾ. ಇವತ್ತು ಹೇಗಿತ್ತು, ನಿಮ್ಮ ಭಾವ ನಿನ್ನ ಕರ್ಕೊಂಡು ಬರ್ತೀನಿ ಅಂತ ಹೇಳಿದ್ದರು. ಹಾಗೆ ಅವಳಿಗೆ ನೀವು ಯಾರು ಅಂತ ಹೇಳ್ಬೇಡಿ ಅಂತ ನಾನೆ ಹೇಳಿದ್ದೆ "
ಕೆಲ ಕ್ಶಣ ದಲ್ಲಿ ಎಲ್ಲಾ ಅರಿವಾಗಿತ್ತು. ಕವಿತ ಅವಳ ಭಾವನನ್ನು ನೋಡಿರಲಿಲ್ಲವಾದ್ದರಿಂದ ಹೇಮಂತ್ ಯಾರು ಎಂದು ಅವಳಿಗೆ ತಿಳಿಯಲಿಲ್ಲ .
" ಸಾರಿ ಕವಿತ . ನಿಮ್ಮಕ್ಕನ ಆಜ್ನೆ ಮೀರಬಾರದು ಅಂತ ನಾನು ನಿಂಗೆ ವಿಷಯ ಹೇಳಲಿಲ್ಲ" ಹೇಮಂತ್ ಮತ್ತೊಮ್ಮೆ ನಕ್ಕ.
ಕೆಲ ನಿಮಿಷ ಮನಸ್ಸು ಮುದುಡಿತು. ಆದರೂ ಇಂತಹ ಗಂಡು ಅಕ್ಕನಿಗೆ ಸಿಕ್ಕಿದ್ದಕ್ಕಾಗಿ ಮನಸ್ಸು ಖುಷಿ ಪಟ್ಟಿತು . ರಿಶಿ, ಸಂದೀಪ್ ರಂತೆ ಇದೂ ಒಂದು ಘಟನೆ ಎಂದುಕೊಂಡು ಸುಮ್ಮನಾದರೆ ಆಯಿತು ಎಂದುಕೊಂಡು ಕಾರನ್ನೇರಿದಳು.

  • ಸಣ್ಣಕತೆ
~.~
  • roopablrao ರವರ ಬ್ಲಾಗ್
  • Login or register to post comments
  • 341 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 19, 2008 - 4:17pm — gururajkodkani

ಉ: ಆತ

gururajkodkani's picture

ಗುರುರಾಜ ಕೊಡ್ಕಣಿ

ಚೆನ್ನಾಗಿದೆ ರೂಪಾ ಅವರೇ,ಈ ರೀತಿಯ ಘಟನೆಗಳು ಅನೇಕರ ಜೀವನದಲ್ಲೂ ನಡೆಯುತ್ತಲ್ಲವೇ...? ಇಲ್ಲಿ ಪಕ್ಕ ಇರೋದು ತಮ್ಮ ಫೊಟೊನಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 20, 2008 - 9:53am — roopablrao

ಉ: ಆತ

roopablrao's picture

ಖಂಡಿತಾ ಅದು ನನ್ನದೇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 19, 2008 - 10:00pm — bachi

ಉ: ಆತ

bachi's picture

ರೂಪ ರವರೆ, ಕಥೆ ತುಂಬ ಸೊಗಸಾಗಿದೆ. ಅದರಲ್ಲೂ, "ಆತ, ತನ್ನ ಅಕ್ಕನ ಗಂಡ" ಎಂದು ತಿಳಿದಾಗ, ಕವಿತಾಳ ಮನಸ್ಸಿನಲ್ಲಿ ಮೂಡಿರಬೊಹುದಾದ ಭಾವನೆಗಳ್ಳನ್ನು ಕಲ್ಪಿಸಿಕೊಂಡರೆ, ಮೈ ಜುಮ್ ಎನ್ನುತ್ತದೆ! ನಿಜ ಹೇಳಿ, ಈ ಕಥೆ ನಿಮ್ಮದೇ ತಾನೆ?

ಬಾchi - www.sumneblog.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 20, 2008 - 9:48am — roopablrao

ಉ: ಆತ

roopablrao's picture

ಖಂಡಿತಾ ಅಲ್ಲ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 20, 2008 - 5:01pm — madhava_hs

ಉ: ಆತ

madhava_hs's picture

ಪೋಲಿ ಕವಿತ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಂದುಬಿಡಿ , ನಿಮ್ಮ ಅವಶ್ಯಕತೆ ಇದೆ.
  • ನಿಮ್ಮ ಸ್ವಭಾವ ಅರಿಯಬೇಕೆ?
  • (ಅವಳು )ಕಲ್ಪನೆಯಯೋ ಅಥವ ನಿಜವೇ?
  • ಇದೇಕೆ ಹೀಗೆ?
  • ಯೋಚನೆಗಳು
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator