ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
(ಅವಳು )ಕಲ್ಪನೆಯಯೋ ಅಥವ ನಿಜವೇ?
ಆ ಹುಡುಗ 21ರ ಆಸುಪಾಸಿನವನಿರಬೇಕು . ಪ್ರತಿಷ್ಟಿತ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿ ಎನಿಸಿಕೊಂಡಿದ್ದ. ಓದಿನಲ್ಲಿ ನಡತೆಯಲ್ಲಿ ನಂಬರ್ 1 . ಯಾವ ಹುಡುಗಿಯರ ಹಿಂದೆ ಬಿದ್ದ ಉದಾಹರಣೆ ಇರಲಿಲ್ಲ
ಹೀಗಿದ್ದ ಹುಡುಗ ಒಮ್ಮೆ ಚಾಟ್ ಮಾಡುವಾಗ ಕಾಣಿಸಿತು ಆ ಹೆಸರು "ಐಶ್ವರ್ಯ" ಹೆಸರಿನ ಮಹಾತ್ಮೆ ಯಿಂದಲೋ ಅಥವ ಕುತೂಹಲದಿಂದಲೋ ಆ ಹೆಸರಿನ ಜೊತೆ ಚಾಟ್ ಮಾಡಿದ. ಆ ಕಡೆಯವಳು ಮಂಗಳೂರಿನವಳು ಎಂದು ತಿಳಿಯಿತು. ಅವಳ ಹೆಸರೇ ಐಶ್ವರ್ಯ ಎಂದೂ ಅರಿವಾಯಿತು
ಚಾಟ್ ಮಾಡುತ್ತಾ ಮಾಡುತ್ತಾ ಅವರಿಬ್ಬರ ಆಸಕ್ತಿ, ಗುರಿ , ಓದು ಎಲ್ಲಾ ಒಂದೇ ಅಗಿದ್ದು ಕೂಡ ತಿಳಿಯಿತು.
ಮತ್ತೆ ಇನ್ನೇನು ಬೇಕು ಸ್ನೇಹಕ್ಕೆ . ನೆಟ್‌ನಲ್ಲಿ ಸ್ನೇಹ ಬೆಳೆಯಿತು. ನಂತರ ಕೆಲದಿನಗಳಲ್ಲಿ ಸ್ನೇಹ ಪ್ರೀತಿಯಾಗಿ ಬದಲಾಗುವಾಗ ಆತನ ಸ್ನೇಹಿತರು ಎಚ್ಚರಿಸಿದರು" ಆ ಕಡೆ ಇರುವವರು ಹುಡುಗಿ ಎಂದು ಹೇಗೆ ಹೇಳುವೆ? ಮೊದಲು ಫೋನ್ ನಂಬರ್ ಕೇಳು" ಎಂದರು.
ಈತ ಕೇಳಿದ ಆಕೆ ತಾನು ಚಾಟ್ ಮಾಡುವ ಸೆಂಟರ್‌ನ ನಂಬರ್ ಕೊಟ್ಟಳು . ಈ ಹುಡುಗ ಅಲ್ಲಿಗೆ ಫೋನ್ ಮಾಡಿದ . ಅಲ್ಲಿ ಫೋನ್ ಎತ್ತಿದ್ದು ಆಕೆಯೆ . ಆಕೆಯ ಮಧುರ ವಾಣಿ ಕೇಳುತ್ತಲೇ ಈ ಹುಡುಗ ಕುಣಿದಾಡಿದ .
ಫೋನ್‌ನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡರು.
ಕೆಲದಿನಗಳಾದ ಮೇಲೆ ಅವಳ ಫೋಟೊ ಕೇಳಿದ ಆಕೆ ಕಳಿಸಿದಳು(ತನ್ನ ಫೋಟೊವನ್ನು ಕೂಡ ಕಳಿಸಿದ) . ಫೋಟೊ ನೋಡಿ ದಂಗಾದ. ಅಷ್ಟು ಸುಂದರಿಯಾಗಿದ್ದಳು. ಸಾಕ್ಷಾತ್ ಐಶ್ ಸಹ ಅವಳ ಮುಂದೆ ಏನೂ ಇಲ್ಲ ಅನಿಸಿತು. ಅಂತಹ ಸುಂದರಿ ತನಗೆ ಸಿಕ್ಕಿದ್ದು ತನ್ನ ಲಕ್ ಎಂದೆ ಭಾವಿಸಿದ.
ನಂತರ ಪ್ರೇಮವನ್ನು ನಿವೇದಿಸಿದ . ಅವಳಿಂದ ಒಪ್ಪಿಗೆ ಸಿಕ್ಕಿದ ಮೇಲೆ ಶುರುವಾಯಿತು ಇವರ ಮೈಲ್ ಲವ್. ಅವನಿಗೆ ಓದು ಬೇಕಿರಲಿಲ್ಲ .ಅವಳ ಮೇಲ್ ಒಂದು ದಿನ ಬರಲಿಲ್ಲವೆಂದರೂ ಚಡಪಡಿಸುತಿದ್ದ.
ಹೀಗಿದ್ದಾಗ ಬಂತು ವ್ಯಾಲೆಂಟಿನೆ ಡೇ . ಏನು ಉಡುಗೊರೆ ಕೊಡುವೆ ಎಂದು ಕೇಳಿದಳು. ಕಾದು ನೋಡು ಎಂದು ಮೇಲ್ ಕಳಿಸಿದ .
ಕೆಲ ದಿನಗಳಲ್ಲಿ ಅವನ ಎದೆಯ ಮೇಲೆ ತೋಳಿನ ಮೇಲೆ ಐಶ್ವರ್ಯ ಎಂಬ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ .
ನಿನಗಾಗಿ ಏನು ಮಾಡಲೂ ಸಿದ್ದ ಎಂದು ರಕ್ತದಲ್ಲಿ ಬರೆದ ಹಾಳೆ ಹಾಗು ತನ್ನ ಎದೆ ತೋಳಿನ ಮೇಲೆ ಬರೆದು ಕೊಂಡಿದ್ದ ಹಚ್ಚೆಯನ್ನು ಫೋಟೊ ತೆಗೆದು ಸ್ಕಾನ್ ಮಾಡಿ ಕಳಿಸಿದ
ಅಷ್ಟೇ ನಂತರದ ದಿನಗಳಲ್ಲಿ ಅವಳಿಂದ ಒಂದು ಮೈಲ್ ಅಥವ ಒಂದು ಫೋನ್ ಸಹ ಬರಲಿಲ್ಲ .
ಕೆಲ ದಿನಗಳು ಕಾದು ಆ ಸೆಂಟರ್‌ಗೆ ಫೋನ್ ಮಾಡಿದ . ಅಲ್ಲಿ ಆ ಹೆಸರಿನವರು ಯಾರು ಇಲ್ಲವೆಂದರು.
ನಂತರ ಅವಳು ಹೇಳಿದ್ದ ಕಾಲೇಜಿಗೆ ಫೋನ್ ಮಾಡಿ ವಿಚಾರಿಸಿದರೆ ಅಲ್ಲೂ ಅದೇ ಉತ್ತರ. ಈ ಹುಡುಗ ಗೊಂದಲದಿಂದ ಹಣ್ಣಾಗಿದ್ದ .
ಯಾರೋ ತನ್ನ ಐಶ್ ಅನ್ನು ಎಗರಿಸಿದ್ದಾರೆ. ಅವಳು ಆಪತ್ತಿನಲ್ಲಿದ್ದಾಳೆ ಎಂದುಕೊಂಡು ಅವಳನ್ನು ನೋಡಲು ಅವಳಿರುವ ಮಂಗಳೂರಿಗೆ ಹೋಗಬೇಕೆನ್ನುವಾಗ ಅವನ ಮೇಲ್‌ಗೆ ಬಂತೊಂದು ಪತ್ರ
ಅನಾಮಿಕ ಎಂದಿದ್ದ್ ಆ ಪತ್ರ ಹೀಗಿತ್ತು
ಹಾಯ್ ನಿಮಗೆ ವಿಷಯ ತಿಳಿಸುವ ಮೊದಲು ನಿಮ್ಮ ಕ್ಷಮೆಯನ್ನು ಕೇಳುವೆ.
ನಾನು ಮಂಗಳೂರಿನ ಒಬ್ಬ ಹುಡುಗ. ಹುಡುಗಿಯರ ಹಿಂದೆ ಬೀಳುವ ಹುಡುಗರನ್ನು ಗೋಳು ಹೊಯ್ದುಕೊಳ್ಳುವುದೇ ನನ್ನ ಕೆಲಸ. ನಾನು ಮಿಮಿಕ್ರಿಯಲ್ಲಿ ಪರಿಣಿತ.ನೀವು ಐಶ್ ಎಂದು ಭಾವಿಸಿ ಮಾತನಾಡಿದ್ದು ಚಾಟ್ ಮಾಡಿದ್ದು ನನ್ನೊಡನೆಯೇ.
ನಾನು ಕಳಿಸಿದ ಫೋಟೊ ನಮ್ಮ ಅಜ್ಜಿಯ ಚಿಕ್ಕ ವಯಸ್ಸಿನದು . ಅವರು ಈಗ ಭೂಮಿಯ ಮೇಲೆ ಇಲ್ಲ ಹಾಗಾಗಿ ಅವರ ಫೋಟೊವನ್ನು ಬಣ್ಣ ಹಚ್ಚಿ ಅದಕ್ಕೆ ಮಾಡ್ ಉಡುಪು ಆಂಟಿಸಿ ಕಳಿಸಿದೆ. ನಾನು ಈ ರೀತಿ ಎಲ್ಲರಿಗೂ ಮಾಡುತ್ತಿದ್ದೆ.
ಆದರೆ ನಿಮ್ಮ ಪ್ರೇಮದ ತೀವ್ರತೆ ಅದಕ್ಕೆ ನೀವು ಕೊಡುತಿದ್ದ ಗೌರವ ನನ್ನನ್ನು ಮೂಕನನ್ನಾಗಿ ಮಾಡಿದೆ. ಇನ್ನೂ ನಿಮ್ಮನ್ನ ಆ ಪ್ರೇಮದ ಹುಚ್ಚಿನಲ್ಲಿ ಇಡುವುದು ಸರಿಯಲ್ಲ ಅನಿಸಿತು .
ಆ ಐಶ್ವರ್ಯ ಎನ್ನುವುದು ಒಂದು ಕಲ್ಪನೆ . ಅದನ್ನು ಮರೆತು ಬಿಡಿ ಯಾರೋ ಗೊತ್ತಿಲ್ಲದವಳಿಗಾಗಿ ನಿಮ್ಮ ರಕ್ತ , ದೇಹವನ್ನು ಹಾನಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ
ಮತ್ತೊಮ್ಮೆ----------
ನಿಮ್ಮ ಭಾವನೆಗಳೊಂದಿಗೆ ಚೆಲ್ಲಾಟ ವಾಡಿದ್ದಾಕ್ಕಾಗಿ ಕ್ಷಮಿಸಿ
--- ಅನಾಮಿಕ
ಮೇಲ್ ನೋಡಿ ಏನು ಮಾಡಬೇಕೊ ಎಂದು ತಿಳಿಯಲಿಲ್ಲ .
ಅವಳು ಕಲ್ಪನೆ ಎಂದು ಮನಸ್ಸು ಒಪ್ಪಲು ಸಾಧ್ಯವಿರಲಿಲ್ಲ . ರೂಮಿಗೆ ಹೋಗಿ ಬಿಕ್ಕಳಿಸಿ ಅಳಲಾರಂಭಿಸಿದ.
8 ವರ್ಷಗಳ ನಂತರ
ಆ ಹುಡುಗ ಈಗ ಗೃಹಸ್ತನಾಗಿ ಬದಲಾಗಿದ್ದ. ಹೆಂಡತಿಯ ಬಲವಂತ ತಾಳಲಾರದೆ ಅವಳನ್ನು ಮಲ್ಪೆ ಬೀಚ್‌ಗೆ ಕರೆದು ತಂದಿದ್ದ . ಹೆಂಡತಿ ಮಗನೊಡನೆ ಆಟವಾಡುತ್ತಿದ್ದಾಗ .......
, ಆ ಜೋಡಿ ಕಣ್ಣಿಗೆ ಬಿತ್ತು
ಆಕೆಯ ಮುಖ ಬಹಳ ಪರಿಚಿತ ಅನ್ನಿಸಿತು. ಮಿಂಚು ಹೊಡೆದಂತಾಯಿತು.
ಹೌದು ಅವಳೇ ತನ್ನ ಐಶ್ವರ್ಯ . ಫೋಟೋದಲ್ಲಿ ನೋಡಿದ್ದ ಮುಖ ಅವಳದೇ... ಹಾಗಿದ್ದರೇ ಅವಳು ಕಲ್ಪನೆಯಲ್ಲವಾ?
ಆಕೆ ಇವನನ್ನು ಒಮ್ಮೆ ನೋಡಿ ತನ್ನ ಸಂಗಾತಿಯ ಕೈ ಹಿಡಿದುಕೊಂಡು ದೂರ ಕರೆದುಕೊಂಡು ಹೋದಳು.
ಹೋಗುವಾಗ ಇವನನ್ನು ಮತ್ತೊಮ್ಮೆ ನೋಡಿದಳು . ಕಣ್ಣಲ್ಲಿ ನೀರಿತ್ತಾ ? ಅವನಿಗೆ ತಿಳಿಯಲಿಲ್ಲ .
ಆದರೆ ಅವಳೆ ಐಶ್ ಎಂದು ಖಾತರಿಯಾಯಿತು. ಹಾಗೆ ನೋಡುತ್ತಲೇ ಇದ್ದ . ಅವಳು ಮರೆಯಾಗುವ ವರೆಗೆ.......
[ಓದುಗರಿಗೆ. ಇಲ್ಲಿ ಐಶ್ ಯಾಕೆ ಹಾಗೆ ಮಾಡಿದಳು ಅಥವ ಅವಳು ಅವಳೇನಾ ಅಥವ ಅಲ್ಲವ ಎಂಬುದನ್ನು ನೀವೆ ಊಹಿಸಿ . ಹಾಗು ನಮ್ಮೊಡನೆ ಹಂಚಿಕೊಳ್ಳಿ]

- roopablrao ರವರ ಬ್ಲಾಗ್
- Login or register to post comments
- 356 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: (ಅವಳು )ಕಲ್ಪನೆಯಯೋ ಅಥವ ನಿಜವೇ?
ಐಶ್ ಅವಳೇ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ, "ಆ ಹುಡುಗ"ನನ್ನು ನೋಡಿದ ತಕ್ಷಣ ತನ್ನ ಸಂಗಾತಿಯನ್ನು "ಎಳೆದುಕೊಂಡು" ಬೇರೆಯ ಕಡೆ ಹೊರಟುಹೋದಳಲ್ಲ! ಬೇರೆ ಹುಡುಗಿಯಾಗಿದ್ದರೆ ಇವನ ನೋಟಕ್ಕೆ ಅಷ್ಟು ಗಮನ ಕೋಡುತ್ತಿರಲ್ಲಿಲ್ಲ. ಏನು, ನನ್ನ ಉತ್ತರ ಸರಿ ತಾನೆ?
ಅದರೆ, ಐಶ್ ಳ ಪ್ರತಿ"ರೂಪ"ದಂತಿರೋ ನೀವು, ನಿಮ್ಮ ಕಥೆಗಳನ್ನು ಆಸಕ್ತಿಯಿಂದ ಓದುವ ನನ್ನಂಥ ಹುಡುಗರ ಮೇಲೆ ಪ್ರಯೋಗ ಮಾಡಬೇಡಿ ಪ್ಲೀಜ್...
ಬಾchi - www.sumneblog.com
ಉ: (ಅವಳು )ಕಲ್ಪನೆಯಯೋ ಅಥವ ನಿಜವೇ?
ಗುರುರಾಜ ಕೊಡ್ಕಣಿ
ಮತ್ತೊ೦ದು ಸು೦ದರ ಕತೆ ರೂಪಾ ಅವರಿ೦ದ. ಇಲ್ಲಿ ಅವಳೇ ಐಶ್ವರ್ಯ ಎನ್ನುವುದು, ಕತೆಯ ಕೊನೆಯಲ್ಲಿಯೇ ಖಾತ್ರಿಯಾಗಿದೆ.ಅವಳು ಆ ರೀತಿ ಮಾಡಲು ಅವಳಿಗೆ ಸಾವಿರ ಕಾರಣಗಳಿರಬಹುದು.ಕೌಟು೦ಬಿಕ ಒತ್ತಡ,ಜಾತಿ ಕಾರಣಗಳು,ಪ್ರೇಮ ವಿವಾಹಗಳ ಮೇಲಿನ ಅಪನ೦ಬಿಕೆ,ಇತ್ಯಾದಿ ಇತ್ಯಾದಿ.ಓದಿನಲ್ಲಿ ನ೦ ೧ ಆಗಿದ್ದವನು ಈ ಪ್ರೇಮ ವಿಫಲತೆಯ ನ೦ತರವೂ ನ೦ ೧ ಆಗಿಯೇ ಉಳಿದ್ದಿದ್ದನಾ..? ಅಥವಾ ಜೀವನದಲ್ಲಿ ಯಶಸ್ಸು ಸಾಧಿಸಬೇಕಾಗಿದ್ದವನು,ಈ ಪ್ರೇಮ ವಿಫಲತೆಯ ನ೦ತರ ಜೀವನದಲ್ಲಿ ಸೋತ ಜನರ ತ೦ಡ ಸೇರಿಕೊ೦ಡುಬಿಟ್ಟನಾ ? ಇದು ನನ್ನಲ್ಲಿ ಉಳಿದ ಪ್ರಶ್ನೆ
ಉ: (ಅವಳು )ಕಲ್ಪನೆಯಯೋ ಅಥವ ನಿಜವೇ?
ಗುರುರಾಜ್ರ್‌ರವರೇ,
ಆ ಅನಾಮಿಕನ ಪತ್ರ ಅವನನ್ನು ಕೆಲ ದಿನಗಳವರೆಗೆ ಕಾಡಿತ್ತಾದರೂ , ಅದು ವರ್ಚುಯಲ್ ಪ್ರೇಮ ಎಂಬುದು ಗೊತ್ತಾದ ನಂತರ ಹುಡುಗ ಮತ್ತೆ ಮೊದಲಿನಂತಾಗದಿದ್ದರೂ ಭಗ್ನ ಪ್ರೇಮಿಯಾಗುವುದಿಲ್ಲ . ಅವಳ (?) ನೆನಪು ಹಸಿರಾಗಿದ್ದರೂ ಅದನ್ನು ನೆನೆಸಿಕೊಂಡು ಜೀವನದಿಂದ ಹಿಮ್ಮುಖನಾಗಿ ಓಡುವುದಿಲ್ಲ.
ಅವನು ಒಂದರ್ಥದಲ್ಲಿ ಸೋತಿರಬಹುದು ಆದರೆ ಆ ಅನಾಮಿಕನ ಪತ್ರ ಅವನನ್ನು ಜೀವನದಲ್ಲಿ ನಡೆಯುವಂತೆ ಮಾಡಿದೆ.
ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ
ಉ: (ಅವಳು )ಕಲ್ಪನೆಯಯೋ ಅಥವ ನಿಜವೇ?
ಅವಳು("ಐಶ್") ಅವನನ್ನು ಪ್ರೀತಿಸಲೆ ಇಲ್ಲ .
ನೀವು ಕತೆಯನ್ನ ಹುಡುಗನ ಸುತ್ತ ಬರೆದಿದೀರಿ.ಹುಡುಗಿಯ ಮನಸಲ್ಲಿ ಪ್ರೀತಿ ಇಲ್ಲದೆ ಇರಬಹುದು.
ಆದರೂ ಕತೆ ಚೆನ್ನಾಗಿದೆ.