ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಪ್ರೀತಿ ಕೈ ಜಾರಿದಾ ಕ್ಶಣ

May 20, 2008 - 4:11pm — roopablrao

"ಹೆ ಡಿಡ್ ಯು ಗೆಟ್ ದ ಡಿಸಪ್ಲೇ? " ಎಕ್ಸಾಮಿನರ್ ಬಂದು ಕೇಳಿದಾಗ ಭೂಮಿ ಬಾಯ್ಬಿಡಬಾರದೆ ಅನ್ನಿಸಿತು. ಪಿ. ಸಿ ಸರ್ವೀಸಿಂಗ್ ಲ್ಯಾಬ್ ಅದು . ಏನು ಮಾಡಿದರೂ ಡಿಸ್ಪ್ಲೇ ಬರುತ್ತಿರಲಿಲ್ಲ
"ನೊ ಸರ್"
"ಸಾರಿ ಯುವರ್ ಟೈಮ್ ಈಸ್ ಓವರ್ . ಯು ಕ್ಯಾನ್ ಸಿಟ್ ಫಾರ್ ವೈವಾ " ಅಂದು ಮುಂದೆ ಹೋದರು.
ಹೃದಯ ಡವಡವಗುಟ್ಟುತ್ತಿತ್ತು . ಹಣೆ ಬೆವರುತ್ತಿತು. ಜೀವನದಲ್ಲಿ ಮೊದಲ ಬಾರಿ ಅವಳು ಎಡವಿದ್ದಳು ವಿದ್ಯಾರ್ಥಿ ವೃಂದದಲ್ಲೆಲ್ಲಾ ಬಹಳ ಬುದ್ದಿವಂತೆ ಎಂದು ಹಣೆ ಪಟ್ಟಿ ಕಟ್ಟುಕೊಂಡಿದ್ದಳು. ಲೆಕ್ಚರ್‌ರ್ಸಿಗಂತೂ ಅವಳೆಂಡರೆ ಅಚ್ಚುಮೆಚ್ಚಾಗಿದ್ದಳು.
ಪ್ರಿನ್ಚಿಪಾಲ್‌ ಎಲ್ಲರಿಗೂ ಅವಳಂತೆ ಇರಲು ಹೇಳುತ್ತಿದ್ದರು ಆದರೆ ಅದು ಎಲ್ಲೀವರೆಗೆ ಅವನು ಅವಳ ಜೀವನದಲ್ಲಿ ಬರುವ ವರೆಗೆ. ಇತ್ತೀಚಿಗೆ ಅವಳ ಕಾಲೇಜ್‍ನ ಎಲ್ಲರ ಬಾಯಲ್ಲೂ ಆಡಿಕೆಯ ವಸ್ತುವಾಗಿದ್ದಳು. ಪ್ರೀತಿ ಎನ್ನುವ ಬಲೆಯಲ್ಲಿ ಬಿದ್ದ ನಂತರ ಅವಳ ವರ್ತನೆಯೇ ಬದಲಾಗಿತ್ತು. ಅವಳದೇ ಕ್ಲಾಸ್‌ನ ಅವನು ಅವಳನ್ನು ಪ್ರೀತಿ ಎನ್ನುವ ಚಕ್ರವ್ಯೂಹಕ್ಕೆ ಸಿಕ್ಕಿಸಿದ್ದ. ಪಾರ್ಕ್ , ಸಿನಿಮಾ ಎಲ್ಲೆಲ್ಲೂ ಅವರೆ ಕ್ಲಾಸ್ ಬಿಟ್ಟು . ಸ್ವಲ್ಪ ಅತೀ ಎನ್ನುವಷ್ಟು.
ಅದರ ಪರಿಣಾಮವನ್ನು ಅವಳು ಈಗ ಅನುಭವಿಸುತ್ತಿದ್ದಳು. ಪಿಸಿ ಲ್ಯಾಬ್ ಎಂದರೆ ಕೇವಲ್ ಕಂಪ್ಯೂಟರ್ ಜೋಡಿಸುವುದು ಎಂದುಕೊಂಡು ಲ್ಯಾಬ್ಸ್‌ಗೆ ಹಾಜಾರಾಗುತ್ತಿರಲಿಲ್ಲ. ಇಂದು ಪರೀಕ್ಷೆಯಲ್ಲಿ ಮೊದಲಬಾರಿಗೆ ವಿಫಲತೆ ಅನುಭವಿಸಿದ್ದಳು.
ವೈವಾನಲ್ಲಿ ಕೇಳಿದ ಪ್ರಶ್ನೆ ಎಲ್ಲವೂ ಬಹಳ ಸರಳವಾಗಿದ್ದರೂ ಉತ್ತರಿಸಲಾಗಲಿಲ್ಲ . ಕಣ್ಣಿನಲ್ಲಿ ಧಾರಾಕಾರ ನೀರು.
"ಏನಮ್ಮ ಇಷ್ಟು ಸುಲಭವಾದುದ್ದನ್ನೇ ಹೇಳಕಾಗ್ಲಿಲ್ಲ ಅಂದರೆ ನಿಮ್ಮನ್ನ ಇಂಜಿನಿಯರ್ಸ್ ಮಾಡೋರು , ನೀವು , ನಮ್ಮ ದೇಶ ಉದ್ದಾರ ಆದ ಹಾಗೆ " ಅಂತ ಆ external examiner ಹೇಳಿದಾಗ ತಾನೇಕೆ ಬದುಕಿದ್ದೇನೆ ಅನ್ನಿಸಿತು.
ಹೊರಗೆ ಬರುವಾಗ ಲ್ಯಾಬ್ ಫ್ಯಾಕಲ್ಟಿ " ಸುಮ್ಮಸುಮ್ಮನೆ ಕ್ಲಾಸ್‌ಗೆ ಬಂಕ್ ಹಾಕಿ ರೋಮ್ಯಾನ್ಸ್ ಮಾಡಿದ ಹಾಗಲ್ಲ ಎಕ್ಸಾಮ್ ಪಾಸ್ ಆಗೋದು . ಅದರ ಮೇಲೆ ಕಣ್ಣಲ್ಲಿ ನೀರು ಬೇರೆ ನಾಟಕ ಸಾಕು ಮೊದಲು ಕಾಲೇಜಲ್ಲಿ ಓದೋದು ಮಾತ್ರ ಕಲಿ" ಎಂದು ಗದರಿದಾಗ ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎಂಬುದು ನೆನಪಾಯಿತು

ಹೊರಗೆ ಬರುವಾಗ ನಿರ್ಧರಿಸಿದಳು. ಇನ್ನು ಓದು ಮುಗಿಯುವವರೆಗೆ ಆತನ ಸಹವಾಸ ಬೇಡ .
ಆತ ಬಂದ" ಚಿನ್ನೂ ಹ್ಯಾಗೆ ಮಾಡಿದೆ ಎಕ್ಸಾಮ್?"
"ಗ್ಯಾರೆಂಟಿ ಪ್ಝೇಲ್ ಕಣೋ ಭಯ ಆಗ್ತಿದೆ"
"ಪರ್ವಾಗಿಲ್ಲ ಬಿಡು ಹ್ಯಾಗೂ ಸಪ್ಲ್ಲಿ ನಲ್ಲಿಬರೀಬಹುದು"
ಕೋಪ ಕೆರಳಿತು "ಅದು ನಿನ್ನಂಥವರಿಗೆ ನನಗಲ್ಲ. ಯಾವಾಗಲೂ 90 ಮೇಲೆ ಮಾರ್ಕ್ಸ್ ತೊಗಳೋಳೊಳು ನಾನು ನಿನ್ನಿಂದ ಹಾಳಾಗ್ಬಿಟ್ಟೆ"
ಕೆಲ ಕಾಲ ಅತ್ತಳು
" ನಾನು ಒಂದು ಡಿಸೈಡ ಮಾಡಿದ್ದೇನೆ. ಸುಮ್ಮನೆ ಫಿಲ್ಮ ವ್ಯಾಲೆಂಟೈನ್ಸ್ ಡೆ ಪಾರ್ಕ್ ಅದೂ ಇದೂ ಅಂತ ಅಲೆಯೋದು ಬಿಟ್ಟು ಬಿಡೋಣ ಅಂತ "

" ಅಂದ್ರೆ "
" ಇನ್ನು ಮೇಲೆ ನಾವಿಬ್ಬರೂ ಪ್ರೀತಿಸ್ತೀವಿ ಅನ್ನೋದು ಮರೆತುಬಿಡೋಣ. ನಮ್ಮ ಮನೇಲಿ ಒಳ್ಳೆ ಹೋಪ್ಸ್ ಇಟ್ಟುಕೊಂಡಿದಾರೆ ನನ್ನ ಮೇಲೆ. ಅವರ ಆಸೆ ನಿರಾಸೆ ಆಗೋಕೆ ನಾನು ಬಿಡಲ್ಲಾ."
"ಹಾಗಾದ್ರೆ ನನ್ನ ಮರೆತು ಬಿಡ್ತೀಯಾ ನೀನು?"
" ಇಲ್ಲ ಕಣೋ ಹ್ಯಾಗೆ ಮರೆಯೋಕೆ ಸಾಧ್ಯ ? ಆದರೆ ನಮ್ಮ ಈ ಪ್ರೀತೀನ ನಾವಿಬ್ಬರೂ ಒಂದು ಸ್ಟಾಂಡ್‌ಗೆ ಬಂದ ಮೇಲೆ ಮುಂದುವರೆಸೋಣ ."
" ಇಲ್ಲ ಚಿನ್ನೂ ನನ್ನ ಕೈನಲ್ಲಿ ಆಗಲ್ಲ"
"ನಿಂಗಾಗುತ್ತೋ ಬಿಡುತ್ತೋ ನನಗೆ ಗೊತ್ತಿಲ್ಲ ಆದ್ರೆ ನಾನಂತೂ ಇವತ್ತಿನಿಂದ ನಿಂಗೆ ಬರೀ ಫ್ರೆಂಡ್ . ನೀನು ಅಷ್ಟೆ ನಂಗೆ "
"ಇಲ್ಲ ಚಿನ್ನೂ ಹಾಗೆ ಮಾಡ್ಬೇಡಾ. ನಂಗೆ ನಿನ್ನ ಬಿಟ್ತಿರೋಕೆ ಆಗಲ್ಲ"
" ಬೇಡ ನನ್ನ ಹಾಗಂತ ಕರೆದು ಮತ್ತೆ ನಿನ್ನ ಕಡೆಗೆ ಎಳ್ಕೋಬೇಡ. ನಾನು ನನ್ನ ಮನಸನ್ನ ಗಟ್ಟ್ ಮಾಡ್ಕೊಂಡಿದೀನಿ. ಪ್ರೀತಿ ದಾರಿಗೆ ಹೂವ ಆಗಬೇಕು. ಆದರೆ ಈ ಪ್ರೀತಿ ಇಂದ ನನ್ನ ಕರಿಯರ್ ಹಾಳಾಗ್ತಿದೆ,. ಥಿಯರಿ ಎಕ್ಸಾಮ್ ಹಾಗೂ ಲೀವ್ ಕಳೆದು ಬರೋ ಅಷ್ಟಲ್ಲಿ ನೀನು ನನ್ನ ಹಾಗೆ ಆಗ್ರ್ತೀಯಾ ಆಂತ ಅಂದುಕೊಂಡಿದೀನಿ, ಬ್ಯೆ ಮೈ ಫ್ರೆಂಡ್"

ಬೈ ಅಂತ ಬಸ್ ಹತ್ತಿದವಳಿಗೆ ಕಳವಳದಿಂದ ತನ್ನನ್ನೇ ದಿಟ್ತಿಸುತ್ತಿದ್ದವನ ಮುಖ ಮರೆಯಾದ ಮೇಲೆ ನಿರಾಳವಾಯಿತು.
ತಾನು ಮಾಡಿದ್ದು ಸರಿಯಾ?
ಹೌದು ತಾನು ಮಾಡಿದ್ದು ಸರಿ

  • ಸಣ್ಣಕತೆ
~.~
  • roopablrao ರವರ ಬ್ಲಾಗ್
  • Login or register to post comments
  • 653 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 20, 2008 - 5:32pm — gururajkodkani

ಉ: ಪ್ರೀತಿ ಕೈ ಜಾರಿದಾ ಕ್ಶಣ

gururajkodkani's picture

ಗುಱುಱಾಜ
www.kannadaguru.blogspot.com

ರೂಪಾ,ಈ ತರಹದ ಘಟನೆಗಳು ಅನೇಕ ಹುಡುಗಿಯ ಜೀವನದಲ್ಲಿ ನಡೆಯುತ್ತವೆ ಮತ್ತು ಅನೇಕ ಹುಡುಗಿಯರು ಈ ರೀತಿಯ ನಿರ್ಧಾರಕ್ಕೆ ಬರುತ್ತಾರೆ.ಏಕೆ೦ದರೆ ಹುಡುಗಿಯರು ಭಾವನಾತ್ಮಕವಾಗಿ ಬಲಿಷ್ಟರು ಎನ್ನುವುದು ನನ್ನ ಭಾವನೆ(ಎಲ್ಲರೂ ಅಲ್ಲ,ಹೆಚ್ಚಿನವರು).ಹುಡುಗರು ಸ್ವಲ್ಪ ಮಟ್ಟಿನ ಪಲಾಯನವಾದಿಗಳು,ಹುಡುಗಿ ಕೈಕೊಟ್ಟಳು ಎನ್ನುತ್ತಾ, ಎಣ್ಣೆ ಹೊಡೆಯುತ್ತ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.ಹುಡುಗಿಯರಿಗಿರುವಷ್ಟು ಭವಿಷ್ಯದ ಬಗೆಗಿನ ಕಾಳಜಿ ಹುಡುಗರಿಗಿರುವುದಿಲ್ಲ.(once again ಎಲ್ಲರೂ ಅಲ್ಲ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಿಯತಮೆಗೊಂದು ಪತ್ರ
  • ಪ್ರೀತಿ ನೀನಿಲ್ಲದೆ ನಾ ಹೇಗಿರಲಿ
  • "ನಾನು-ನೀನು
  • ಮುಂದೇನು ...?
  • ಮೊದಲ ಪ್ರೇಮಿಗೆ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator