ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಕನಸು ಭವಿಷ್ಯದ ಸೂಚಕ ಖಂಡಿತಾ ಹೌದು

June 20, 2008 - 12:30pm — roopablrao

ನನ್ನ ಹಿಂದಿನ ಬರಹ ಇಲ್ಲಿದೆ
http://www.sampada.net/blog/roopablrao/18/06/2008/9343#comment-21111

ನಮ್ಮ ಸಿಸಿಲಿ ಮೇಡಮ್ ನನ್ನ ಕನಸಿಗೆ ಹೀಗೆ ಅರ್ಥ ಹೇಳಿದ್ದರು

"ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ "

ಪೋಲಿಸ್ ಸ್ಟೇಶನ್ ಸಾವಿನ ಸೂಚಕವಂತೆ ನಾನು ಅದರ ಎದುರಿರುವ ಮಸೀದಿಯೊಂದಕ್ಕೆ ಹೋದದ್ದು ಸಾವನ್ನು ಎದುರಿಸಿ ಮುನ್ನುಗ್ಗುತ್ತೇನೆ ಎಂದು ಅರ್ಥ

"ಆದರೆ ಮಸೀದಿಯ ಒಳಗಡೆ ಚರ್ಚಿನ ವಾತಾವರಣವಿದೆ . "
ನನಗೆ ಜಾತಿ ಧರ್ಮ ಬೇಧವಿಲ್ಲದೆ ಜನ ಸಹಾಯ ಮಾಡುತ್ತಾರೆ
ಅಲ್ಲಿ ಶ್ವೇತ ನಿಲುವಂಗಿ ಧರಿಸಿದ ಜನ ಓಡಾಡುತ್ತಿದ್ದಾರೆ."

ಶ್ವೇತ ನಿಲುವಂಗಿ ಧರಿಸಿದವರು ಎಂದರೆ ಫಾದ್ರ್ಗಿಗಳು (ಫಾದ್ರಿಗಳು, ಅರ್ಚಕರು, ದೇವರನ್ನು ಪೂಜಿಸುವವರಾಗಬಹುದು) ಇವರಲ್ಲಿ ಯಾರು ಕನಸಲ್ಲಿ ಬಿದ್ದರೂ ಜೀವನ ಹೋರಾಟಮಯವಾಗಿರುತ್ತದೆ ಎಂದರ್ಥ

"ಯಾರೊ ನನಗೆ ಪವಿತ್ರ ಸ್ನಾನ ಮಾಡಲು ಹೇಳುತ್ತಾರೆ. "

ಪವಿತ್ರ ಸ್ನಾನ ಎಂದರೆ ಹೊಸ ಜನ್ಮ್ದದ ಸೂಚಕ. ಅಂದರೆ ಮುಂದೆ ಕಾಣುವುದೆಲ್ಲಾ ನನಗೆ ಹೊಸಬದುಕಿನ ಸೂಚಕವಾಗಿರುತ್ತದೆ

ಅಲ್ಲೊಂದೆಡೆ ನನಗೆ ತಲೆಯ ಮೇಲೆ ನೀರನ್ನು ಎರೆಚಿ ನಂತರ ಒಳಗೆ ಬಿಡುತ್ತಾರೆ.
"ಅದೊಂದು ರೀತಿಯ ಹಜಾರ . ಹಜಾರದ ಮೂಲಕ ಕಾರಿಡಾರ್ ಪ್ರವೇಶಿಸುತ್ತಿದ್ದಂತೆ ಯಾರೋ ನನಗೆ ತೀರ್ಥ ಕೊಡುತ್ತಾರೆ."
ತೀರ್ಥದ ಅರ್ಥ ನನಗೆ ಚೈತನ್ಯ ಕೊಡುತ್ತಾರೆ ಎಂದು

"ಸ್ವಲ್ಪ ಮುಂದೆ ನಡೆದಂತೆ ಸುಮಾರು ಕೊಠಡಿಗಳು ಕಾಣುತ್ತವೆ . ಸುತ್ತಲೂ ಗಾಡಾಂಧಕಾರ . ಅಷ್ಟರಲ್ಲಿ ಯಾರೊ ನನ್ನ ಕೈಗೆ ಕ್ಯಾಂಡೆಲ್ ಕೊಡುತ್ತಾರೆ.
ಕ್ಯಾಂಡೆಲ್‌ನ ಸಹಾಯದಿಂದ ನಾನು ಮುನ್ನಡೆಯುತ್ತೇನೆ. "

ಕತ್ತಲಾದ ಬಾಳಿಗೆ ಯಾರೋ ಒಬ್ಬರು ಬೆಳಕಿನಂತೆ ಬಂದು ಸಹಾಯ ಮಾಡುತ್ತಾರೆ

"ಸುತ್ತಲೂ ಕ್ಯಾಂಡೆಲ್‍ನ ಪ್ರಕಾಶ. ನಾನು ಪ್ರತಿಯೊಂದು ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆ ಕತ್ತಲಾಗಿದ್ದ ಕೋಣೆಯಲಿ ಒಂದು ಕ್ಯಾಂಡೆಲ್‍ ಇಟ್ಟು ಬರುತ್ತಿರುತ್ತೇನೆ. ಅದು ಒಂದೇ ಸಮನೆ "

ಹೀಗೆ ಪಡೆದ ಸಹಾಯವನ್ನು ನಾನು ಎಲ್ಲರಿಗೂ ಹಂಚುತ್ತಾ ಹೋಗುತ್ತೇನೆ . ಅದರ ಅರ್ಥ ಅಜ್ನಾನದ ಅಂಧಕಾರವನ್ನು ಹೋಗಲಾಡಿಸುತ್ತಾ ಜ್ನಾನದ ಬೆಳಕನ್ನು ಹಂಚುತ್ತಾ ಹೋಗುತ್ತೇನೆ

ಈಗ ನನ್ನ ಬದುಕಿಗೆ ಇದು ಹೇಗೆ ಪೂರಕವಾಗುತ್ತದೆ ಎಂದರೆ

ನಾನೀಗ ಒಂದು ವಿದ್ಯೆ ನೀಡುವ ಕೇಂದ್ರವನ್ನು ಆರಂಭಿಸಿದ್ದೇನೆ .
ಕೆಲಸವಿಲ್ಲ ಎನ್ನುವವರಿಗೆ ನಿಮ್ಮಂತಹ ಗೆಳೆಯ/ಗೆಳತಿಯರಿಂದ ಕೆಲಸ ಕೊಡಿಸಿದ್ದೇನೆ
ಈ ಹಾದಿಯಲ್ಲಿ ನನಗೆ ನೆರವಾದವರು ಬಹಳ ಮಂದಿ ಅವರು ಮುಸ್ಲಿಮ್ ಆಗಿರಬಹುದು, ಕ್ರಿಸಿಯನ್ ಆಗಿರಬಹುದು, ಅಥವ ನನ್ನಂತೆ ಹಿಂದೂ ವಾಗಿರಬಹುದು.

ಆದರೆ ಒಬ್ಬ ವ್ಯಕ್ತಿ ನನ್ನ ಈ ವೃತ್ತಿ ಬದುಕಿನಲ್ಲಿ ಬಹಳ ನೆರವನ್ನು ನೀಡಿದರು. ಆ ವ್ಯಕ್ತಿ ಎಲ್ಲರಿಗೂ ಗೊತ್ತಿರುವಂತಹವರು

ಅವರಿಗೆ ಕೊಟ್ಟ ಮಾತಿನಂತೆ ನಾನು ನಡೆಯುತ್ತಿದ್ದೇನೆ ಬಡವರಿಗೆ , ಕಷ್ಟದಲ್ಲಿ ಸಿಲುಕಿದ ಹೆಂಗಸರಿಗೆ ನನ್ನ ಕೈಲಾದಷ್ಟು ಸಹಾಯ ,ಮಾಡುತ್ತಿದ್ದೇನೆ.

ಬದುಕು ಹೋರಾಟವೇ ಹೌದು
ಇದು ಒಂದು ಹೊಸ ಜನ್ಮವೇ ಹೌದು . ಬೇರೆಯವರ ಮುಂದೆ ಕೆಲಸಕ್ಕಾಗಿ ಅಲೆಯುತ್ತಿದ್ದ ಆ ರೂಪ ಎಲ್ಲಿ . ಒಂದು ಇಪ್ಪತ್ತು ಜನಕ್ಕೆ ಕೆಲಸ ಕೊಟ್ಟು ಜನ್ಮ ಪಾವನವೆನಿಸಿಕೊಳ್ಳುತ್ತಿರುವ ಈ ರೂಪ ಎಲ್ಲಿ (ದಯವಿಟ್ಟು ಗಮನಿಸಿ ಈ ಮಾತಿನಲ್ಲಿ ಅಹಂಕಾರವಿಲ್ಲ)

ಇದು ನನ್ನ ಈಗಿನ ಬದುಕು.

--------------------------------------------********************************************

ಈಗಿನ ನನ್ನ ಬದುಕು ಐದಾರು ವರ್ಷದ ಹಿಂದೆಯೇ ನನಗೆ ಗೋಚರಿಸಿತ್ತು .

ಅದು ಹೇಗೆ ಎಂಬ ಪ್ರಶ್ನೆಗೆ ನಾನೆ ಕಂಡುಕೊಂಡಿರುವ ಸತ್ಯ

ಕನಸು ನಮ್ಮ ಮನಸಿನ ಒಂದು ಪ್ರತಿರೂಪ

ಸುಪ್ತಾವಸ್ತೆಯೇ ಕನಸು

ಆ ಸುಪ್ತ್ರಾವಸ್ತೆಯಲ್ಲಿ ಕೆಲವುಸಲ ಮುಂದಾಗಬಹುದ್ದಾದ್ದದ್ದೂ ಗೋಚರಿಸುತ್ತದೆ . ಅದು ಟೆಲಿಪತಿಯೋ ಅಥವ ಸುಪ್ತ ಶಕ್ತಿಯೋ ತಿಳಿಯದು.

ಎಷ್ಟೊ ಸಲ ಈಗ ನಮ್ಮ ಮುಂದೆ ನಡೆಯುತ್ತಿರುವುದು ನಾವು ಈಗಾಗಲೆ ನೋಡಿದಂತೆ ಅನಿಸುವುದು ಈ ಕಾರಣದಿಂದಲೇ ಅಲ್ಲವಾ ?

ಹಾಗಾಗಿ ಕನಸು ನಮ್ಮ ಆಲೋಚನೆಯ ಪ್ರತಿಬಿಂಬವಷ್ಟೆ ಅಲ್ಲ . ಮುಂದಾಗುವುದರ ಸೂಚಕವೂ ಹೌದು

ಕನಸನ್ನು ಅಸಂಭದ್ದ , ಜೋಕು, ಮಾನಸಿಕ ತೊಳಲಾಟ ಎನ್ನುವವರು ಏನನ್ನುತ್ತಾರೆ ನೋಡೋಣ

ಈಗ ಹೇಳಿ ಕನಸು ಭವಿಷ್ಯ್ದ ಸೂಚಕವಲ್ಲ ಅನ್ನುತ್ತೀರಾ?

  • ಅನುಭವ
~.~
  • roopablrao ರವರ ಬ್ಲಾಗ್
  • Login or register to post comments
  • 326 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 21, 2008 - 7:51pm — csomsekraiah

ಉ: ಕನಸು ಭವಿಷ್ಯದ ಸೂಚಕ ಖಂಡಿತಾ ಹೌದು

csomsekraiah's picture

ನಿಮ್ಮ ಅನುಭವದ ಬೆಳಕಿನಲ್ಲಿ ನೀವು ಬರೆದಿದ್ದೀರಿ , ಒಂದು ನಿಜ ,ಅನೇಕರ ಕನಸುಗಳು ನಿಜವಾದುದುಂಟು . ಅದು ಏಕೆ ? ಹೇಗೆ ? ಎಂದು ಕೇಳಿದರೆ ಮಾತ್ರ ಹೇಳಲು ಬಾರದು .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2008 - 10:08pm — kalpana

ಉ: ಕನಸು ಭವಿಷ್ಯದ ಸೂಚಕ ಖಂಡಿತಾ ಹೌದು

kalpana's picture

ರೂಪ,
ನಿಮ್ಮ ಸಿಸಿಲಿ ಮೇಡಂ ಕನಸನ್ನು ಸೊಗಸಾಗಿ ವಿವರಿಸಿದ್ದಾರೆ. ಬದುಕಿನಲ್ಲಿ ಒಳ್ಳೆಯ ಗುರಿ ಕಂಡುಕೊಂಡು, ನೀವು ಪರರಿಗೂ ನೆಲೆ ಸಿಗುವಂತೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ನಿಮಗೆ ನನ್ನ ಶುಭಹಾರೈಕೆಗಳು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2008 - 11:10pm — Sunil Jayaprakash

ಉ: ಕನಸು ಭವಿಷ್ಯದ ಸೂಚಕ ಖಂಡಿತಾ ಹೌದು

Sunil Jayaprakash's picture

ಭಲಾ. ಚಾಂಗು ಭಳಾ ಜೀವುರೇ, ಭಾಪು ಭಳಿರೇ. ನಮ್ಮ ನಾಡಿನ ಎಲ್ಲ ಹೆಣ್ಣು ಮಕ್ಕಳೂ ನಿಮ್ಮ ಹಾಗೆ ಧೈರ್ಯವಂತೆಯರಾಗಲಿ. ನಿಮ್ಮನ್ನು ನೋಡಿ, ನಾವೂ(ಗಂಡಸರೂ) ಕೂಡ ಸ್ಫೂರ್ತಿಯನ್ನು ಪಡೆಯುವಂತಾಗಲಿ.

ರೂಪಾ ಅವರೇ, ಸ್ಪಷ್ಟತೆಗಾಗಿ ಹೇಳುವೆ. ನೀವು ಮೊದಲು ನಿದ್ದೆಯಲ್ಲಿ ಕಂಡದ್ದು ಕನಸಾಗಿರಬಹುದು, ಆದರೆ ಮುಂದೆ ನೀವು ರೂಪಿಸಿಕೊಂಡದ್ದು ಕಣಸು. ಕನಸು - dream, ಕಣಸು - vision, ಧ್ಯೇಯ. ಹಾಗಾಗಿ, ಭವಿಷ್ಯದ ಸೂಚಕ ಯಾವುದು ಅಂತ ಕೇಳಿದರೆ, ನಾನು ಕನಸಿಗಿಂತ ಹೆಚ್ಚಾಗಿ ಕಣಸು ಎಂದು ಹೇಳುವೆ. ನೀವೇನಂತೀರಾ ? ಕನಸೋ, ಕಣಸೋ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನಸು ಭವಿಷ್ಯ ಸೂಚಕವೇ?
  • ಕನಸು
  • ಗೆಳೆಯನ ಫ್ರೆಂಡ್ಸ್
  • ನನ್ನ ಬದುಕು
  • ನನ್ನದೊಂದು ಕನಸು
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
  • ನಾನು ಯಾವ ಕಾಲದಲ್ಲಿ ಇದ್ದೇನೆ...!?
  • ಓದಿದ್ದು ಕೇಳಿದ್ದು ನೋಡಿದ್ದು-50 ವಿಮರ್ಶೆಯ ಬಗ್ಗೆ ವಿಮರ್ಶೆ:"ಪ್ರಕರಣ"ಕ್ಕೆ ತೆರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 520 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator