20
June
2013

ಮುಂಗಾರು ಮಳೆ v/s ಚಿಗುರಿದ ಕನಸು

March 21, 2008 - 11:55am
roopablrao

ನನ್ನನ್ನು ಬಹಳ ದಿನದಿಂದ ಕಾಡುತಿರುವ ಪ್ರಶ್ನೆ ಇದು

ಒಂದು ಕನ್ನಡ ಚಿತ್ರ ಸೊಗಸಾದ ಚಿತ್ರ  

ಚಿಗುರಿದ ಕನಸು

ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರ ಅದು

ಶಿವರಾಜ್ ಕುಮಾರ್ ರವರ್ ಅಭಿನಯದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ನಾನು ಆಗ ಆ ಚಿತ್ರವನ್ನು ಎರೆಡು ಸಲ ನೋಡಿದ್ದೆ.

ನಂತರ ಆ ಚಿತ್ರ ಟಿ.ವಿಯಲ್ಲಿ ಸುಮಾರು ಬಾರಿ ಪ್ರಸಾರವಾಗಿದೆ.

ಹೊರರಾಜ್ಯದ ಯುವಕನೊಬ್ಬನ ಮೂಲ ನಮ್ಮ ಕರ್ನಾಟಕದ ಬಂಗಾಡಿ ಎಂಬ ಊರಿನದಾಗಿದ್ದು , ಅದನ್ನು ಹುಡುಕಿಕೊಂಡು ಬರುವ ಆತ ತನ್ನ ಊರನ್ನು ಅಭಿವೃದ್ದಿಗೊಳಿಸಲು ಪಡುವ ಕಷ್ಟ . ಅದನ್ನು ವಿಫಲ ವಾಗಿಸಲು ಅದೇ ಊರಿನ ಮುಖಂಡನೊಬ್ಬ  ಮಾಡುವ ಸಂಚು ಅದನ್ನು ಮೆಟ್ಟಿ ನಿಲ್ಲುವ ನಾಯಕ

ಇವುಗಳ ಮಧ್ಯೆ ಕಣ್ ತಣಿಸುವ ನಿಸರ್ಗ ಚೆಲುವು. ಹಳ್ಳಿಯವರ ಮುಗ್ಧತೆ ನಾಯಕನ ಅಜ್ಜಿಯ ಅಚ್ಚರಿ. ಇವುಗಳನ್ನೆಲ್ಲ ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. (ನಿರ್ದೇಶಕರು ಗೊತ್ತಿಲ್ಲ)

ಅದಕ್ಕೆ ಪ್ರಶಸ್ತಿ ಒಂದು ಬಿಟ್ಟರೆ ಬೇರೆ ಯಾವದೇ ಪ್ರಚಾರ ಸಿಗಲಿಲ್ಲ.

ನನ್ನ ಪ್ರಶ್ನೆ ಏನೆಂದರೆ ಮುಂಗಾರು ಮಳೆ ಯಂತಹ  ಚಿತ್ರವನ್ನು ಪೋಷಿಸಿದ ಪ್ರೇಕ್ಷಕರು ಚಿಗುರಿದ ಕನಸನ್ನು ಏಕೆ ಒಪ್ಪಲಿಲ್ಲ?

ಕತೆಯಲ್ಲಾಗಲಿ, ನಿರೂಪಣೆ ಯಲ್ಲಾಗಲಿ ಚಿಗುರಿದ ಕನಸು ಮುಂಗಾರು ಮಳೆಗೆ ಕಡಿಮೆ ಇಲ್ಲ. ಆದರೂ ನಮ್ಮ ಜನರಿಂದ ಅದಕ್ಕೆ ಮಣೆ ಸಿಗಲಿಲ್ಲ

ಅಥವ ಪ್ರೇಮ ಕತೆಗಳು , ಮಚ್ಹು ಲಾಂಗ್ ಚಿತ್ರಗಳೆ ನಮ್ಮವರಿಗೆ ಬೇಕೇನೋ  ಗೊತ್ತಿಲ್ಲ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hpn on
"ಚಿಗುರಿದ ಕನಸು" ಚಿತ್ರದ ನಿರ್ದೇಶನ ಟಿ ಎಸ್ ನಾಗಾಭರಣರದ್ದು. ಹಿಂದಿಯ 'ಸ್ವದೇಸ್' ಕೂಡ ಹೆಚ್ಚು ಕಡಿಮೆ ಇದೇ ಕಥೆಯನ್ನು ಆಧರಿಸಿ ಬಂದದ್ದು. ಸಿನಿಮಾ ಓಡಲಿಲ್ಲ ಅಂದರೆ ಪ್ರೇಕ್ಷಕರು ಒಪ್ಪಲಿಲ್ಲ ಎಂದಲ್ಲ. ಹಲವು ಕಾರಣಗಳಿರಬಹುದು. ಸಿನಿಮಾ ಡಿಸ್ಟ್ರಿಬ್ಯೂಶನ್, ಪಬ್ಲಿಸಿಟಿ, ರಿಲೀಸ್ ಆದ ಸಮಯ (ಅದಕ್ಕೆ ಹೊಂದಿದ ಪ್ರೇಕ್ಷಕರಿಗೆ ಹೊಂದುವ ಸಮಯಕ್ಕೆ ಬಂತೋ ಇಲ್ಲವೋ ಎಂಬುದು). ಇತ್ತೀಚೆಗೆ ಮಲ್ಟಿಪ್ಲೆಕ್ಸುಗಳಿರುವುದರಿಂದ ಇಂತಹ ಸಿನಿಮಾಗಳನ್ನು ಮತ್ತೆ ರಿಲೀಸ್ ಮಾಡಬಹುದು ಅನ್ಸತ್ತೆ ("ಆ ದಿನಗಳು" ಚಿತ್ರದ ನಿರ್ದೇಶಕರ ಯೂ ಟ್ಯೂಬ್ ಪುಟಕ್ಕೆ ಒಂದು ಸಂದೇಶ ಕಳುಹಿಸಿದಾಗ ಅವರೂ ಇತ್ತೀಚೆಗೆ "ಮತ್ತೊಮ್ಮೆ ಸ್ಕ್ರೀನ್ ಮಾಡಬೇಕು" ಎಂದೇ ಬರೆದಿದ್ದರು. "ಆ ದಿನಗಳು" ಚಿತ್ರ ಈಗ ದೆಹಲಿಯಲ್ಲಿ ಕೂಡ ಸ್ಕ್ರೀನ್ ಆಗುತ್ತಿದೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಇತ್ತೀಚೆಗೆ ತಾನೆ ವರದಿಗಳು ಬಂದಿದ್ದವು. ಒಳ್ಳೆಯ ಚಿತ್ರ ಯಾವ ಭಾಷೆಯಲ್ಲಾದರೂ ಇರಲಿ, ಅದನ್ನು ಜನ ನೋಡುತ್ತಾರೆ). -- ನನ್ನ ಬ್ಲಾಗ್: [:http://www.sampada.n...|ಪರಿವೇಶಣ] | [:http://www.hpnadig.n...|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
ನಮ್ಮಲ್ಲಿ ಕಮರ್ಷಿಯಲ್, ಕಲಾತ್ಮಕ ಚತ್ರಗಳೆಂಬ ಎಡು ವರ್ಗವನ್ನು ನಿರ್ದೇಶಕ, ನಿರ್ಮಾಪಕರುಗಳೇ ಸೃಷ್ಠಿಸಿಕೊಂಡಿರುವುದರಿಂದ ಒಳ್ಳೆಯ ಅಭಿರುಚಿಯ ಜನರನ್ನು ಒಳ್ಳೆಯ ಅಭಿರುಚಿಯ ಚಿತ್ರಗಳು ತಲುಪುತ್ತಿಲ್ಲ. _______________________ ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು. http://uniquesupri.w... http://kalaravapatri... http://ekshanadasaty...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.