ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಈ ಹುಡುಗರೇಕೆ ಹೀಗೆ
ಇದು ಎಲ್ಲಾ ಕಡೆಗೂ ಸರ್ವ ಕಾಲಕ್ಕೂ ಸಲ್ಲಬೇಕಾದ ಪ್ರಶ್ನೆ
ನಮ್ಮ ಸಂಸ್ಥೆಯಲ್ಲಿ ಕಲಿಯುವದಕ್ಕೆಂದು ಸುಮಾರು ಹುಡುಗರು ಹುಡುಗಿಯರು ಬರುತ್ತಾರೆ. ಅವರಲ್ಲಿ ಒಬ್ಬ ಹುಡುಗ ಮಾತ್ರ ಸುಮಾರು 23 ವರ್ಷದವನಿರಬಹುದು . ಮಾತಿನಲ್ಲಿ ಬಹಳ ಚುರುಕು . ಮಂಡ್ಯನವನಿರಬೇಕು. ಬಹಳ ಜೋರು ಮಾತಿನವನು. ಓದಿನಲ್ಲಿ ಮಾತ್ರ ಬಹಳ ಹಿಂದೆ . ಯಾವುದೋ ಕಂಪನಿಯಲ್ಲಿ ದಿನಗೂಲಿ ನೌಕರ ಆದರೂ ಅವನ ಅಕ್ಕರೆಯ ಮಾತಿಗೆ ನಾವೆಲ್ಲ ಸ್ಪಂದಿಸುತಿದ್ದೆವು . ನಮ್ಮೆಲ್ಲರನ್ನೂ ಮಾತಿನಲ್ಲೇ ನಗಿಸುತಿದ್ದನು
ಅಂತಹವನು 3 ತಿಂಗಳಿಂದ ಯಾಕೊ ಸರಿ ಇರಲಿಲ್ಲ ಮಾತು ಕಡಿಮೆಯಾಗಿತ್ತು . ಕ್ಲಾಸ್‍ಗೂ ಸರಿಯಾಗಿ ಬರುತ್ತಿರಲಿಲ್ಲ. ನಾನು ನನ್ನ ಕೆಲಸಗಳ ಮಧ್ಯ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ .
ಒಮ್ಮೆ ಆತ ಸೀದ ನನ್ನ ಮನೆಗೆ ಬಂದ.
"ಮೇಡಮ್ ನಾನೊಂದು ವಿಷಯ ಹೇಳಬೇಕು . "
"ಏನಪ್ಪ ಪರ್ಸನಲ್ ಅಥವ ಅಫ್ಫಿಶಿಯಲ್"
" ಪರ್ಸನಲ್ ಮೇಡಮ್ " ಎಂದ ಎಲ್ಲೊ ಏನೊ ಎಡವಟ್ಟಾಗಿದೆ ಅನಿಸಿತು.
"ಏನು ಏನಾದ್ರೂ ಲವ್ ಗಿವ್ " ಎಂದು ಕೇಳಿದೆ.
" ಹೌದು ಮೇಡಮ್ , ನಂದೇನು ತಪ್ಪಿಲ್ಲ . ಅವಳೆ ಫಸ್ಟ್ ನಂಜೊತೆ ಚೆನ್ನಾಗಿದ್ದು ಈಗ ನೀನು ನನ್ನ ಬ್ರದರ್ ಥರ್ ಅಂತಾ ಇದಾಳೆ. ನಂಗೆ ಸಾಯೊ ಅಷ್ಟು ಬೇಸರವಾಗಿದೆ"
ಅಷ್ಟರಲ್ಲಿ ಇವರೂ ಬಂದರು.
ಯಾರಪ್ಪ ಅದು ಎಂದಿದ್ದಕ್ಕೆ ಆತ ಹೆಸರು ಹೇಳಿದ
ನಂಗೆ ಶಾಕ್
ಆ ಹುಡುಗಿ ನಮ್ಮ ಸಂಸ್ಥೆಯಲ್ಲಿ ಬಹಳ ಒಳ್ಳೆಯ ನಡುವಳಿಕೆಗೆ ಹೆಸರಾದವಳು. ಮೇಲಾಗಿ ಒಳ್ಳೆಯ ಕಂಪನಿಯೊಂದರಲ್ಲಿ ದೊಡ್ಡಾ ಹುದ್ದೆಯಲ್ಲಿ ಇದ್ದವಳು ಹಾಗೆ ಅಷ್ಟೆ ಒಳ್ಳೆಯ ಸಂಬಳ ಪಡೆಯುತಿದ್ದವಳು.
ಅವಳನ್ನು ಅನುಮಾನಿಸಲು ಕಾರಣವೇ ಇರಲಿಲ್ಲ
ಅವನನ್ನು ಸಮಾಧಾನಗೊಳಿಸಿ ಹಾಗು ಹೀಗು ಸಾಗ ಹಾಕಿದೆವು.
ನಂತರ ಅವಳನ್ನು ಕರೆದು ಕೇಳಿದಾಗ ತಿಳಿದಿದ್ದು
ಆ ಹುಡುಗ ಇಂಗ್ಲೀಶ್ ನಲ್ಲಿ ವೀಕ್ . ಹಾಗಾಗಿ ಇವಳು ಅವನಿಗೆ ಸಹಾಯ ಮಾಡುತಿದ್ದಳಂತೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಅವನು ಹೀಗೆ ಆಡುತಿದ್ದಾನೆ.
ಅವನ ಕಾಟ ಅಧಿಕವಾಗತೊಡಗಿತು . ಆಕೆ ಎಲ್ಲಿ ಹೋದರೂ ಹಿಂಬಾಲಿಸುವುದು. ಕ್ಲಾಸ್ನಲ್ಲಿ ತೊಂದರೆ ಕೊಡುವುದು ಅತಿಯಾಗತೊಡಗಿತು.
ಹುಚ್ಚನಂತೆ ಆಡತೊಡಗಿದ.
ನಂತರ ಅವನನ್ನು ಕೆಲಸದಿಂದ ತೆಗೆದು ಹಾಕಿದರು. ನಾವು ನಮ್ಮ ಸಂಸ್ಥೆಯಿಂದ ಅವನ್ನನ್ನು ಬಿಡಿಸಿದೆವು.
ಒಮ್ಮೆ ಆ ಹುಡುಗನ ಅಮ್ಮ ನಮ್ಗೆ ಫೋನ್ ಮಾಡಿದ್ದರು. ಆ ಹುಡುಗನಿಗೆ ತಂದೆ ಇಲ್ಲ ಹಾಗು ಅವನೇ ಮನೆ ಪೂರ್ತಿ ನೋಡಿಕೊಳ್ಳಬೇಕು.
ಇಷ್ಟೊಂದು ಜವಾಬ್ದಾರಿಯಿದ್ದ ಹುಡುಗ ಯಾಕೆ ಹೀಗೆ ಮಾಡಿದ ಅನ್ನುವುದು ನಮ್ಗೆ ಅರಿವಾಗಲಿಲ್ಲ.
ಅವನು ಊರಿಗೂ ಹೋಗಲಿಲ್ಲವಂತೆ. ನಮ್ಮ ಸುತ್ತ ಮುತ್ತ ಎಲ್ಲ್ಲೂ ಕಾಣಲಿಲ್ಲ
ಒಮ್ಮೆ ಅವನನ್ನ ನಮ್ಮೆಜಮಾನರು ಎಲ್ಲೋ ಮಲ್ಲೇಶ್ವರಂ ನಲ್ಲಿ ನೋಡಿದರಂತೆ ತಿನ್ನಲೂ ಏನೂ ಇರದಂತಹ ಸ್ತಿತಿಯಲ್ಲಿ ಇದ್ದನಂತೆ ಅವನಿಗೆ ಊಟಕ್ಕೆ ಹಾಗು ಊರಿಗೆ ಹೋಗಲು ಹಣ ಕೊಟ್ಟು ಬುದ್ದಿ ಮಾತು ಹೇಳಿ ಬಂದರಂತೆ. ನಂತರ ಏನಾಯಿತೋ ತಿಳಿಯಲ್ಲಿಲ
ಇದು ಆ ಹುಡುಗನೊಬ್ಬನದೆ ವಿಷಯವಲ್ಲ. ಸಾಮಾನ್ಯ ವಾಗಿ ಇಂತಹ ರಿಯಲ್ ಕತೆಗಳು ಎಲ್ಲೆಡೆ ಇರುತ್ತವೆ. ಎಲ್ಲಾ ಕಾಲಕ್ಕೂ ಸಲ್ಲುತ್ತವೆ
ಆದರೆ ನನಗೆ ಒಂದು ವಿಷಯ ಅರಿವಾಗಲಿಲ್ಲ. ಈ ಹುಡುಗರೇಕೆ ಹುಡುಗಿಯರು ಸಹಾಯ ಮಾಡಿದರೆ ತಮ್ಮನ್ನ ಲವ್ ಮಾಡುತಿದ್ದಾರೆ ಎಂದು ತಿಳಿಯುತ್ತಾರೆ.?
ಅವರೂ ಅವರಂತೆ ಮತ್ತೊಬ ಮನುಷ್ಯ ಜೀವಿ ಎಂದೇಕೆ ತಿಳಿಯುವುದಿಲ್ಲ. ಮನುಷ್ಯ ಮನುಶ್ಯನಿಗೆ ಸಹಾಯ ಮಾಡುವುದು ಸಾಮಾನ್ಯ ಅಲ್ಲವೇ ?

- roopablrao ರವರ ಬ್ಲಾಗ್
- Login or register to post comments
- 348 hits
- Email this blog





RSS:
ಪ್ರತಿಕ್ರಿಯೆಗಳು
ಉ: ಈ ಹುಡುಗರೇಕೆ ಹೀಗೆ
ಗುರುರಾಜ ಕೊಡ್ಕಣಿ
ಈ ರೀತಿಯ ಅವನ ವರ್ತನೆಗೆ ಅವನ ಅಪಕ್ವ ಮನಸ್ಸು ಕಾರಣವಿರಬಹುದು.ಪ್ರಭುದ್ದತೆಯ ಕೊರತೆ,ಭವಿಷ್ಯದ ಬಗ್ಗೆ ಕಾಳಜಿ ಇಲ್ಲದಿರುವಿಕೆ,ಕೆಲವೊಮ್ಮೆ ಗುರಿತಿಸಿಕೊಳ್ಳುವ ಋಣಾತ್ಮಕ ಬಯಕೆ (identity crisis) ಕೂಡಾ ಕಾರಣವಾಗಿರಬಹುದು.ಕೇವಲ ಹುಡುಗರಲ್ಲಿ ಅಷ್ಟೇ ಅಲ್ಲ, ಈ ರೀತಿಯ ವರ್ತನೆ ಹುಡುಗಿಯರಿ೦ದಲೂ ಕ೦ಡು ಬರುತ್ತದೆ.ನನ್ನ ಸ್ನೇಹಿತನೊಬ್ಬನಿಗೆ ಮದುವೆಯಾದ ಸುಮಾರು ೩೫ ವರ್ಷದ ಮಹಿಳೆ ಇದೇ ರೀತಿ ಮಾಡಿದಳು.ಒಪ್ಪಿಕೊಳ್ಳದಿದ್ದರೇ ತನ್ನ ಮೇಲೆ ಕೆಟ್ಟ ದೃಷ್ಟಿ ಹಾಕಿದನೆ೦ದು ತನ್ನ ಗ೦ಡನಿಗೆ ಹೇಳುತ್ತೇನೆ ಎ೦ದು ಹೆದರಿಸಿದಳು ಕೂಡಾ. ಪಾಪ,ಆ ಹುಡುಗ ತು೦ಬಾ ಸ೦ಭಾವಿತ ಊರು ಬಿಟ್ತು ಬೇರೆ ಊರಿಗೇ ಹೋಗಿಬಿಟ್ಟ.ಇದೆಲ್ಲವೂ ಮಾನಸಿಕ ಸಮಸ್ಯೆಗಳಿಗೆ ಸ೦ಭ೦ದ ಪಟ್ಟವುಗಳು.(ಮಾನಸಿಕ ಸಮಸ್ಯೆ ಎ೦ದರೆ ಮಾನಸಿಕ ರೋಗವಲ್ಲ)
ಉ: ಈ ಹುಡುಗರೇಕೆ ಹೀಗೆ
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ, "ಪ್ರೀತಿ ಕೊಂದ ಕೊಲೆಗಾತಿ, ನಾ ಹೇಳೋ ಕಥೆಗೆ ಸ್ಫೂರ್ತಿ -- ಮಂಡ್ಯದ ಗಂಡು" ಅಂತ ಒಂದು ಆಟೋ ನಿಂತರುವುದನ್ನು ನೋಡಿದ್ದೆ, ಹಿಂದೆ
ಉ: ಈ ಹುಡುಗರೇಕೆ ಹೀಗೆ
’ಯುಗ ಪುರುಷ’ ರವಿ ಚಂದ್ರನ್ ನಂತೆ ಹಳೆಯ ಜನ್ಮದಲ್ಲಿ ತನ್ನ ಪ್ರೇಯಸಿಯಿಂದ ಕೊಲ್ಲಿಸಿಕೊಂಡು, ಈ ಜನ್ಮದಲ್ಲಿ ಅವಳಿಗಾಗಿ ಹುಡುಕುತ್ತಿರಬಹುದು. ಪಾಪ
ಉ: ಈ ಹುಡುಗರೇಕೆ ಹೀಗೆ
ಸಿನಿಮಾ ಪ್ರಭಾವದಿಂದನೂ ಈ ರೀತಿ ಆಡುತ್ತಾರೆ ಅದು ಹುಡುಗಿ ಅರಬಹುದು ಅಥವಾ ಹುಡುಗ ಇರಬಹುದು.
ಹುಡುಗ ಲವ್ ಮಾಡುವುದಿಲ್ಲ ಎಂಬ ಕಾರಣಕ್ಕೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಮ್ಮ ಸಣ್ಣ ಊರಿನಲ್ಲಿ ನಡೆದಿರಬೇಕಾದರೆ ಈ ಸಿಟಿಯಲ್ಲಿ ಇದು ಸಾಮಾನ್ಯ ಅನ್ನಿಸುತ್ತೆ..ಎಲ್ಲಾ ಟಿವಿ ಸಿನಿಮಾ ಪ್ರಭಾವ..
ಇತಿ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: ಈ ಹುಡುಗರೇಕೆ ಹೀಗೆ
ಹಲೋ ..ನಮಸ್ತೆ ವಂದನೆಗಳೊಂದಿಗೆ ಒಬ್ಬ ಸ್ನೇಹಿತ ಅಷ್ಟೇ.
ರೂಪ ನೀವು ಹೇಳಿದ್ದು ...
ನಿಜವಾಗಿಯು ಸತ್ಯವಾದ ಮಾತು ..ಹುಡುಗ ಯಾಕೆ ಇ ರೀತಿ ಮನಸು ಬದಲಾಗುತ್ತೋ
ಏನೋ ನಮ್ಮೆಲ್ಲರ ಬಾಯಿ ಇಂದ ಬಂದ್ರೆ ತುಂಬಾ ಚೆನ್ನ ಅಂತಿರಾ ..
ನಿಜವಾಗ್ಲು ನನಗೆ ಮಾತ್ರ ...ಯಾಕೆ ಅಂದ್ರೆ .
ನಾನು ಇದುವರೆಗೂ ಯಾರನ್ನು ಪ್ರೀತಿ ಮಾಡಿಲ್ಲ .
ಒಳ್ಳೆಯ ಸ್ನೇಹಿತೆ ಕೂಡ ಇನ್ನು ಸಿಕ್ಕಿಲ್ಲ ಅದು ಯಾವಾಗ
ನಾನೂ ಒಬ್ಬರನ್ನು ಪ್ರೀತಿ ಮಾಡೋಕ್ಕೆ ,ಹೋಗಿಲ್ಲ ..
ಅದು ಬಿಡಿ ಮತ್ತೆ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.
inti santhosh kumar.