Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಮೊದಲ ಪ್ರೇಮಿಗೆ

March 24, 2008 - 5:20pm — roopablrao

ನನ್ನ ಮೊದಲ ಪ್ರೇಮಿಗೆ
ಆ ಅಂಗಡಿಗೆ ನಾನು ಬರುವುದಕ್ಕೂ ನೀನು ನನ್ನ ನೋಡುವುದಕ್ಕೂ ಸರಿ ಹೋಯಿತು/
ನಾನು ನಿನ್ನನ್ನು ಗುರುತಿಸಿದೆ . ಆದರೆ ನೀನು ಇಲ್ಲ ಬಿಡು ನೀನೀಗ ನನ್ನನ್ನ ಗುರುತಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೇನೆ .
ಯಾಕೊ ಒಮ್ಮೆ ಎಲ್ಲ ನೆನೆಪಾಗಿದೆ. ಹಾಗಾಗಿ ಈ ಪತ್ರ ಬರೆಯುತಿದ್ದೇನೆ

ಅವತ್ತು ನಾನಿನ್ನೂ ಆಗ ತಾನೆ ಅರಳಿದ ಹೂವಿನಂತೆ ಇದ್ದೆ. ಅಂದು ಆ ಅಂಗಡಿಯಲ್ಲಿ ನೀನು ನನ್ನನ್ನು ನಿನ್ನ ಹಸ್ತದಿಂದ ಬಂಧಿಸಿ ಮುತ್ತಿಟ್ಟು " ಇನ್ನು ಮೇಲೆ ನೀನೆ ನನ್ನ ಜೀವ ನನಗಿದು ಮೊದಲ ಅನುಭವ "ಎಂದುಸಿರಿದ್ದೆ. ನಾನು ಆಕಾಶವೇ ಕೈಗೆಟುಕಿದಷ್ಟು ಹಗುರಾಗಿದ್ದೆ.

ಅಬ್ಬ ಅಲ್ಲಿಂದ ಶುರುವಾಯಿತು ನಮ್ಮಿಬ್ಬರ ಪ್ರೀತಿ . ನೀನೆಲ್ಲೋ ನಾನಲ್ಲೆ. ನಾನಿಲ್ಲದೇ ನೀನಿಲ್ಲ ಎಂಬಂತೆ ಇದ್ದೆವಲ್ಲ. ದಿನವಿಡೀ ನೀ ನನ್ನ ನಾ ನಿನ್ನ ನೋಡುತ್ತ ಕಾಲ ಕಳೆಯುತ್ತಿದ್ದೆವಲ್ಲ. ನಾನಂತು ನಿನ್ನ ಎದೆಯ ಮೇಲೆ ಮಲಗಿರುತ್ತಿದ್ದೆ.

ನನ್ನನ್ನು ವಿಧವಿದ್ಜ ವಾಗಿ ಹಾಡಲು ಹೇಳುತಿದ್ದೆ . ವಿಧ ವಿಧ ಬಟ್ಟೆ ಗಳನ್ನು ಹಾಕುತ್ತಿದ್ದೆ . ಖುಶಿ ಪಡುತ್ತಿದ್ದೆ
ನಮ್ಮಿಬ್ಬರ ಪ್ರೀತಿ ಬ್ರಹ್ಮನಿಗೆ ಹಿಡಿಸಲಿಲ್ಲವೇನೊ
ಅದೇನೊ ನನ್ನನ್ನು ಬಳಸಿ ನಿನಗೆ ಬೇಸರ ವಾಯಿತೇನೊ. ಬೇರೆ ಮಾಯಾಂಗನೆಯರು ನಿನ್ನನು ಸೆಳೆಯತೊಡಗಿದರು. ಹಾಗಾಗಿ ನಿನ್ನ ಗಮನ ಅಲ್ಲಿ ಹರಿಯತೊಡಗಿತು .

ಕೊನೆಗೆ ನಿನ್ನ ಪ್ರೀತಿಯನ್ನು ನೀನೆ ಮಾರಿಕೊಂಡೆ.

ನೀನೇನೊ ನನ್ನನ್ನು ಇತರರಿಗೆ ಬಿಟ್ಟು ಹಾಯಾಗಿದ್ದೆ. ಆದರೆ ನಾನು ಎಲ್ಲರಿಂದಲೂ ಮುಟ್ಟಿಸಿಕೊಂಡು. ಮುದ್ದಿಸಿಕೊಂಡೂ ಅವರಿಗೆ ಬೇಸರವಾದರೆ ಇನ್ನೊಬ್ಬರ ಹತ್ತಿರ ಹೋಗಿ ಕಾಲ ಕಳೆಯುತ್ತಿದ್ದೆ. ಇತ್ತೀಚಿಗೆ ಒಬ್ಬ ಬೀದಿ ಬದಿಯ ಹುಡುಗನಿಗೂ ನಾನು ಬೇಡವಾಗಿ ಇಲ್ಲಿ ಬಂದಿದ್ದೇನೆ ನಿಮ್ಮ ಮನೆಯ ಮುಂದೆ ಇರುವ

ಗುಜರಿ ಅಂಗಡಿಗೆ
ಆದರೆ ಒಮ್ಮೆ ಬಂದು ನನ್ನನ್ನು ನೋಡು
ನಿನ್ನ ಮೊದಲ

ಮೊಬೈಲ್
ನೋಕಿಯ 1010

Ornamental seperator
  • roopablrao ರವರ ಬ್ಲಾಗ್
  • Login or register to post comments
  • 296 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 25, 2008 - 9:56am — bachi

ಉ: ಮೊದಲ ಪ್ರೇಮಿಗೆ

bachi's picture

ರೂಪ, ಸೂಪರ್ ಆಗಿದೆ!

ಕಥೆ ಓದ್ತಾ ಎಲ್ಲೋ ಕಳೆದುಹೋಗಿದ್ದೆ. "ನಿನ್ನ ಪ್ರೀತಿಯನ್ನು ನೀನೆ ಮಾರಿಕೊಂಡೆ" ಅಂದಾಗಲೂ ನನಗೆ ಹೊಳಿಲ್ಲಿಲ್ಲ. "ನಾಗರ ಹಾವು" ಚಿತ್ರದಲ್ಲಿ ಆರತಿನಾ ಅವಳ ಗಂಡ ಮಾರ್ಕೊತಾನಲ್ಲ, ಆತರ ಇರಬಹುದು ಅಂಕೊನ್ಡೆ. "ಏಪ್ರಿಲ್"ಗೆ ಮೊದಲೇ "ಏಪ್ರಿಲ್ ಫೂಲ್"ಆದೆ...Sad

ಬಾchi - www.sumneblog.com

  • Login or register to post comments
  • link
  • Email this ಪ್ರತಿಕ್ರಿಯೆ
March 25, 2008 - 10:12am — mahesha

ಉ: ಮೊದಲ ಪ್ರೇಮಿಗೆ

mahesha's picture

ರೂಪ ಮೇಡಂ,

ತುಂಬಾ ಚನ್ನಾಗಿದೆ.. ಸಾಲುಗಳ ಸರಣಿ ಚೊಕ್ಕಟವೆಂದು ಹಿಡಿಸಿದೆ..

"ಹಸ್ತದಿಂದ ಬಂಧಿಸಿ ಮುತ್ತಿಟ್ಟು" ಎಂದಾಗ ನನಗೆ ತುಸು ನಗು ಬಂತು, ಸಾಮಾನ್ಯ ಬಾಹು-ಬಂಧನ ಅಲ್ವ!.. ಆದರೆ ಕೊನೆಗೆ ನೋಕಿಯ ೧೦೧೦ ನೋಡಿದಾಗ ತಿಳಿಯಾಯ್ತು... ಹಸ್ತ-ಬಂಧನ ಹೊಸ ಬಳಕೆ ಅನಿಸ್ತು.

ಎಲ್ಲ ಸೂಪರ್‍...

ಆದರೆ ಮೊಬಯಿಲ್ ಸಂಗತಿ ಅಲ್ವ... ಯಾವಾಗಲೂ ಪಡ್ಡೆ ಹುಡುಗರು ಸಕ್ಕತ್ತಾಗಿರೋ ಮೊಬಯಿಲುಗಳನ್ನೇ ಆಯ್ಕೆ ಮಾಡೋದು.. ಹೊಸಹೊಸ ಮೊಬಯಿಲುಗಳಿಗೆ ಮುಕ್ಯ ಗಿರಾಕಿಗಳೆಂದ್ರೆ ಪಡ್ಡೆ-ಪಡತಿಯರೇ.. ಮೂಮೂಲಿ ಹಳೇ-ಬ್ರಾಂಡ್ ಬಳಸೋರು ಮದುವೆಯಾದ ಮುದುಕರು ಆದುದರಿಂದ

"ಇತ್ತೀಚಿಗೆ ಒಬ್ಬ ಪಡ್ಡೆ ಹುಡುಗನಿಗೂ ನಾನು ಬೇಡವಾಗಿ ಇಲ್ಲಿ ಬಂದಿದ್ದೇನೆ " ಎಂಬ ಸಾಲಿನ ಹೊರತು "ಈಗ ಯಾವ ಮುದಿ-ಮುದಿ ಮುದುಕನಿಗೂ ಇಶ್ಟವಾಗದೇ ಇಲ್ಲಿ ಬಿದ್ದಿದ್ದೀನಿ" ಎಂದಿದ್ದರೆ ಚಂದವಿತ್ತು. ಅಯ್ಯೊ ಇರಲಿ ಬಿಡ್ರೀ..

ಹೀಗೆ ಬರೀರಿ,

ನಲುಮೆ ನನ್ನಿ

  • Login or register to post comments
  • link
  • Email this ಪ್ರತಿಕ್ರಿಯೆ
March 25, 2008 - 10:47am — roopablrao

ಉ: ಮೊದಲ ಪ್ರೇಮಿಗೆ

roopablrao's picture

ಹೌದು ನೀವು ಹೇಳಿದ್ದು ಸರಿ
ಆದರೆ ಬದಿಯ ಹುಡುಗ ಎಂದು ಮಾಡಬೇಕಿತ್ತು
ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
March 25, 2008 - 11:12am — mahesha

ಉ: ಮೊದಲ ಪ್ರೇಮಿಗೆ

mahesha's picture

"ಸುಪ್ತ ಮನಸಿನ ಕನವರಿಕೆಗಳೊಂದಿಗೆ"
Smiling

ಈ ಓಲೆ ನೀವು ನಿದ್ದೆ ಮಂಪರಿನಲ್ಲಿ ಬರೆದಿರಾ?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಿಯತಮೆಗೊಂದು ಪತ್ರ
  • "ನಾನು-ನೀನು
  • ಕುರುಡು ಪ್ರೀತಿ
  • ನೀನು ನಿನ್ನ.....
  • ನೀ ನನ್ನವನಲ್ಲ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
  • ತೆರೆದ ಕಣ್ಣು
  • ಅನುಭವ
  • ಮುಕ್ತಿ
  • ಏಂತಹ ಹೊಸತು ಈ ದಿವಸ....
  • ಅತ್ಯಾಚಾರ ಮತ್ತು ಕಾರಣಗಳು
  • ಚುನಾವಣಾ ಭವಿಷ್ಯ
  • ಅನಿಸಿಕೆ
  • ಡ್ರೈವರ್‌ ಎಂಬ ಆಪತ್ಬಾಂಧವ
  • ಕೊರತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 11:28pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:10pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:06pm
  • uniquesupri
    ಉ: ಚುನಾವಣಾ ಭವಿಷ್ಯ
    May 9, 2008 - 10:59pm
  • prasannasp
    ಉ: ಸಣ್ಣ ಟ್ರಿಪ್
    May 9, 2008 - 10:47pm
  • hamsanandi
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 9:30pm
  • hamsanandi
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 9:25pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 8:41pm
  • smurthygr
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 9, 2008 - 8:23pm
  • smurthygr
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 8:00pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 7 ಅತಿಥಿಗಳು ಆನ್ಲೈನ್ ಇರುವರು.

ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator