ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
ಮತ್ತೆ ಬಂತು ಆ ದಿನ ನೋಡು ಮತ್ತೆ ನೀನು ಹಾಜರ್. ನೀನೇನು ಸುಮ್ನೆ ಬರ್ತೀಯೋ ಇಲ್ಲ ಹೃದಯಾನ ಮಿಡಿಯೋಕೆ ಬರ್ತೀಯೊ ಅಂತ ಗೊತ್ತಾಗ್ತಿಲ್ಲ .
ಅದೇನು ಕಣ್ಣಲ್ಲಿ ನಕ್ಷತ್ರ ಇಟ್ಕೊಂಡಿದೀಯಾ ನೀನು ಹೇಗೆ . ನನ್ನ ನೋಡಿದ ತಕ್ಷಣ್ ಚಟಕ್ ಅಂತ ಮಿನುಗಿ ಮರೆಯಾಗಿ ಹೋಗುತ್ತಲ್ಲ ನಿನ್ನ ಕಣ್ಣಲ್ಲಿರೋ ಫೀಲಿಂಗ್. ನನಗೆ ರಕ್ತ ಎಲ್ಲ ಮುಖದ ಮೇಲೆ ಚಿಮ್ಮುವಂತೆ ಮಾಡುವ ನಿನ್ನ ನಗೆ ನೋಟ, ಮಾತು , ಹುಚ್ಚಿಯಾಗಿಬಿಡ್ತೀನಿ ನಾನು
ಅ ಸ್ಮೈಲ್ ಬೇರೆ ಎದೆ ದಸಕ್ ಅನ್ನೋಹಾಗೆ ಇದೆ . ಮಾತು ಮಾತಿಗೆ ನನ್ನ ಏರಿಸೋದು ಬೇರೆ. ನೀವು ಬಿಡಿ ಎಲ್ಲಾವುದರಲ್ಲೂ ಸೈ
ಎನ್ನುವ ನುಡಿ ಗಳು, ನಾನು ಡ್ರೆಸ್ ಮಾಡಿಕೊಂಡರೆ ಮೆಚ್ಚುಗೆಯ ನುಡಿ ಸ್ವಲ್ಪ ಅತೀ ಎನ್ನಿಸುವಷ್ಟು
ನಂಗೆ ಗೊತ್ತು ನೀನು ಯಾಕೆ ಹಿಂಗೆಲ್ಲಾ ಮಾಡ್ತಾ ಇದ್ದೀಯಾ ಅಂತ.
ಆದ್ರೆ ನಾನು ಈಗಾಗಲೆ ಈ ಹೃದಯ ಬೇರೆಯವರಿಗೆ ಕೊಟ್ಟುಬಿಟ್ಟಿದೀನಿ ಅದು ನಿನಗೂ ಗೊತ್ತು . ಆದರೂ ಅದನ್ನ ಕದಿಯೋಕೆ ಯಾಕೊ ಪ್ರಯತ್ನಿಸುತ್ತಿದೀಯಾ?. ಆಮೇಲೆ ನನ್ನ ಪ್ರೀತಿಯಲ್ಲಿ ಲೋಪ ಆಗಿಬಿಟ್ರೆ ಅಂತ ಹೆದರಿಕೆ ಆಗ್ತಿದೆ
ದಯವಿಟ್ಟು ನೀನು ನನ್ನ ಮುಂದೆ ಬರ್ಬೇಡ ಪ್ಲೀಸ್ ಕಣೋ
ನಾನು ಹೇಳಿ ಕೇಳಿ ಭಾರತೀಯ ನಾರಿ, ನನ್ನ ನಿಷ್ಚಿತಾರ್ಥ ಕೂಡ ಆಗಿ ಹೋಗಿದೆ ಇನ್ನು ೧೫ ದಿನದಲ್ಲಿ ಮದುವೆ. ನಾನೇನಾದರೂ ಮುಂಗಾರು ಮಳೆಯ ಪೂಜಾ ಗಾಂಧಿಯ ಥರ ನಿನ್ನ ಮಾತಿಗೆ ಪ್ರೀತಿಗೆ ಮರುಳಾಗಿ ಬಿಟ್ಟರೆ ಅಂತ ಭಯ ಕಣೋ .
ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
ಆಮೇಲೆ ..................
ಊಹೂ
ಆಮೇಲೂ ಬರ್ಬೇಡ ನೀನು. ಮತ್ತೆ ನಿನ್ನ ಕಡೆ ಆಕರ್ಷಿತಳಾದ್ರೆ ತೊಂದರೆ.
ಮತ್ತೆ ಇನ್ಯಾವತ್ತೂ ನಿನ್ನ ಮುಖಾನೂ ತೋರಿಸ್ಬೇಡ ನಾನು ಕರಗಿ ಹೋಗ್ತೀನೋ
ನಿನ್ನವಳಾಗಲೊಲ್ಲದ
ನಿನ್ನ ಸ್ನೇಹಿತನ ಹೆಂದತಿಯಾಗಲಿರುವವಳು
- roopablrao's blog
- Login or register to post comments
- 993 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
Hi Roopa,
Nanna obba geleyanige nanu heege pathra bareyabenkendukoddidde. Ee mathugalu nane helida hagide. Nivu madhyamavagiddakke dhanyavadagalu.
ಉ: ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
ದಯವಿಟ್ಟು ಕನ್ನಡದಲ್ಲೇ ಬರೀರಿ. ಈ ರೀತಿ ಇಂಗ್ಲಿಷನಲ್ಲಿರುವ ಕಮೆಂಟುಗಳನ್ನು ಅಳಿಸಲಾಗುವುದು.
ಉ: ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
ಪಾರಿಯವರಿಗೆ(ಪರಿಯೂ ಅಗಬಹುದು)
ಗೆಳೆಯನಿಗೆ ಪತ್ರ ಬರೆಯುವ ಮೊದಲು ಭವಿಷ್ಯ್ದದ ಯೋಚನೆ ಇಟ್ಟುಕೊಂಡು ಬರೆಯಿರಿ
ಇದು ತಮಾಷೆಗಾಗಿ ಬರೆದ ಪತ್ರ
ಇದರಂತಹದೇ ಪತ್ರವನ್ನು ಯಾರಿಗಾದರೂ ಬರೆದು ಆ ಪತ್ರ ಗಂಡನಿಗೆ ಸಿಕ್ಕಿದರೆ ಆಗುವ ಪಜೀತಿ ಊಹಿಸಲೂ ಸಾಧ್ಯವಿಲ್ಲ
http://thereda-mana....
ರೂಪ
ಉ: ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
ರೊಪ ಮೇಡಮ್,
ನಿಮ್ಮ ಲೇಖನ ಬಹಳ ಸುಂದರವಾಗಿಯೊ, ಈಗಿನ ಎಂಗೆಳೆಯರ ಸ್ತಿತಿ ಗತಿಗೆ ಕನ್ನಡಿ ಹಿಡಿದಂತಿದೆ,
ಮೊನ್ನೆ ನನ್ನ ಸ್ನೇಹಿತನ ಪ್ರೇಯಸಿ ನನ್ನ ಸ್ನೇಹಿತನೊಡನೆ ಮುನಿಸಿಕೊಂಡು ತಮ್ಮ ತಾಯಿ ತೋರಿದ ಹುಡುಗನೊಡನೆ ಮದುವೆ ನಿರ್ಶಯ ಮಾಡಲು ಮುಂದಾದಳು. :(
ಆದರೆ, ಆ ವರ ಮಾಹಾಶಯನ ಅತಿರೇಕ ವ್ಯಕ್ತಿತ್ವವನ್ನ ೧೦ ನಿಮಿಷಗಳ ಮಾತಿನಲ್ಲಿ ತಾಳಲಾರದ ಆ ಹುಡುಗಿ ಇಂದು ನನ್ನ ಸ್ನೇಹಿತನಲ್ಲಿ ಮತ್ತೆ ಓಡೋಡಿ ಬಂದುಬಿಟ್ಟಳು....!! :)
ಇದು ಎಂತಹ ಲೋಕ ನೋಡಿ..! :o
-ಯುವಪ್ರೇಮಿ
ಉ: ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
ಅಯ್ಯೋ!! ಆ ಸ್ನೇಹಿತನ ಗತಿ!! ;)
ಉ: ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
ಯಾವ ಸ್ನೇಹಿತ ಪ್ರಸಾದ್?
http://thereda-mana....
ರೂಪ
ಉ: ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
ಈ ಹುಡುಗಿಯನ್ನು ಮದುವೆಯಾಗಲಿರುವವನು ಅಂದರೆ ದುರಂತ ನಾಯಕನ ನತದೃಷ್ಟ ಸ್ನೇಹಿತ!!! ;)