ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಹೆಣ್ಣು
ಇದನ್ನು ನಾನು 8ನೇ ತರಗತಿಯಲ್ಲಿ ಇದ್ದಾಗ ಬರೆದದ್ದು. ಹಾಗೆ ಯಥಾವತ್ತಾಗಿ ಟೈಪಿಸಿದ್ದೇನೆ.
ಬಾಲಿಶ ಮನಸು. ಏನು ತೋಚಿತ್ತೋ ಅದನ್ನೆ ಬರೆದಿದ್ದೆ. ಯಾವುದೇ ವ್ಯಾಕರಣವಾಗಲಿ ಅಥವ ರೂಢಿಯನ್ನಾಗಲಿ ಬಳಸಿಕೊಂಡಿರಲಿಲ್ಲ
ಇದನ್ನು ಸಿದ್ದಲಿಂಗ ಪಟ್ಟಣಾ ಶೆಟ್ಟಿಯವರಿಗೆ ಒಮ್ಮೆ ತೋರಿಸಿದ್ದೆ.
ಒಬ್ಬಳನ್ನ ನಿಭಾಯಿಸೋದೇ ಕಷ್ಟ . ಇನ್ನೂ ನೂರು ಜನ್ರನ್ನು ಗಂಡು ಹೇಗೆ ನಿಭಾಯಿಸುತ್ತಾನೆ ಎಂದು ನಕ್ಕಿದ್ದರು.
ಆದರೆ ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ನಾವು (ಹೆಂಗಳೆಯರು) ಬಹು ಮುಂದುವರೆದಿದ್ದೇವೆ . ಆದರೂ ಒರೆ ಕೊರೆಗಳು ಇದ್ದೆ ಇವೆ
ಹೆಣ್ಣು
ಹೆಣ್ಣಲ್ಲ ಅಬಲೆ
ಆಕೆ ಈಗ ಸಬಲೆ
ನೋಡಲ್ಲ ಗುಡುಗು ಮಿಂಚು ಮಳೆ
ದುಡಿಯುವಳು ಒಂದೆ ಸಮನೆ
ಆದರೂ ಹಲವರದು ಈ ಪ್ರಶ್ನೆ
ಹೆಣ್ಣು ಗಂಡಿಗೆ ಸಮಳೆ?
ಹೆಣ್ಣಾದರೆ ವಿಧವೆ
ಮತ್ತಿಲ್ಲ ಆಕೆಗೆ ಮದುವೆ
ಗಂಡಾದರೆ ವಿಧುರ
ಆಗುವನು ನೂರೆಂಟು ಮದುವೆಗೆ ವರ
ಹೆಂಗಸಿಗೆಲ್ಲಿದೆ ಸ್ವತಂತ್ರ
ಜೀವನವಿಡೀ ಅತಂತ್ರ
ಬಾಲ್ಯದಲ್ಲಿ ತಂದೆಯಾಸರೆ
ಯವ್ವನದಲ್ಲಿ ಗಂಡನಾದರೆ
ಮುಪ್ಪಿನಲ್ಲಿ ಮಗನಾಸರೆ
ಎಂದು ಎಲ್ಲರೂ ಹಳಿಯುವವರೇ
ಪ್ರಕೃತಿಗಿಲ್ಲ ಗಂಡು ಹೆಣ್ಣೆಂಬ ಬೇಧ
ಬೇರೆಂದು ಹೇಳಿಲ್ಲ ವೇದ
ಆದರೂ ಹೆಣ್ಣೆಂದರೆ ಹಲವರಿಗೆ ವಿನೋದ
ಬಾಲ್ಯದಲ್ಲಿ ಸಲಹುವ ತಾಯಿ ಹೆಣ್ಣು
ಯವ್ವನದಲ್ಲಿ ಪ್ರೀತಿಸುವ ಹೆಂಡತಿ ಹೆಣ್ಣು
ಮುಪ್ಪಿನಲ್ಲಿ ಸಾಕುವ ಮಗಳೂ ಹೆಣ್ಣು
ಎಂಬ ಅರಿವನ್ನು
ಇನ್ನಾದರೂ ಮೂಡಿಸಿಕೊಳ್ಳುವಿರೇನು?

- roopablrao ರವರ ಬ್ಲಾಗ್
- Login or register to post comments
- 657 hits
- Email this blog





RSS:
ಪ್ರತಿಕ್ರಿಯೆಗಳು
ಉ: ಹೆಣ್ಣು
ಯವನದಲ್ಲಿ ಪ್ರೀತಿಸುವ ಹೆಂಡತಿ ಹೆಣ್ಣು
ಒಲವಿಗೆ ಯವನಕ್ಕೆ ಹೋಗಬೇಕಾ? ( ಯವನ ಅಂದ್ರೆ ಗ್ರೀಸ್ದ ದೇಶ ಇರಬೇಕು)
ಉ: ಹೆಣ್ಣು
ಈಗ ನೋಡಿ
ರೂಪ
ಉ: ಹೆಣ್ಣು
ಸೂಪರ್!!
’ಮುಪ್ಪಿನಲ್ಲಿ ಸಾಕುವ ಮಗಳೂ ಹೆಣ್ಣು’
ಒಳ್ಳೆ ಮಗಳು...!
ಉ: ಹೆಣ್ಣು
ದೇವತೆಯಾಗಿ ಪೂಜಿಸಲ್ಪಡುವವಳೂ ಹೆಣ್ಣೇ
ಗಂಡಿಗೆ ಗುರಿ ತೋರುವವಳೂ ಹೆಣ್ಣೇ
ಮನೆಯ,ಮನದ ಚುಕ್ಕಾಣಿ ಹಿಡಿದವಳೂ ಹೆಣ್ಣೇ
ವಾಸ್ಥವತೆ ಹೀಗಿದ್ದರೂ,ಹೆಣ್ಣು ಸ್ವತಂತ್ರಳಲ್ಲವೆಂಬ ಭ್ರಮೆಯೇಕೆ?
"ಸಂಪದ"ದ ಹಾದಿ ತಪ್ಪಿಸುವ ಈ ಕುತಂತ್ರವೇಕೆ?
ಬಾchi - www.sumneblog.com
ಉ: ಹೆಣ್ಣು
ಬಾಚಿಯವರೆ
ಅರೇ ಸಂಪದದ ಹಾದಿ ನಾನೆಲ್ಲಿ ತಪ್ಪಿಸುತ್ತಿರುವೆ.
ಮೊದಲೇ ಹೇಳಿದಂತೆ ನಾನು ಚಿಕ್ಕವಳಿದ್ದಾಗ ಇದನ್ನು ಬರೆದ್ದದ್ದು.
ನಾನು ಓದಿದ್ದು ಬಾಲಕಿಯರ ಪ್ರೌಢ ಶಾಲೆಯಲ್ಲಿ .
ಆಗಿನ ನಮ್ಮ ಮನಸ್ತ್ಜಿತಿಯಂತೆ ನಾನು ಬರೆದಿರುವೆ.
ಆದರೂ ಒಂದು ಹೆಣ್ಣು ಮಧ್ಯರಾತ್ರಿ ಬಿಡಿ , ಅದೂ ಬೇಡ ರಾತ್ರಿ 10.30 ಆದ ಮೇಲೆ ಹೊರ ಬರುವುದು ಈಗಲೂ ಕಷ್ಟವಿದೆ. ಅದನ್ನೇ ಸ್ವಾತಂತ್ರ್ಯ ಇಲ್ಲ ಎನ್ನುವುದು .
ಈಗಲೂ ಎರೆಡನೇ ಮದುವೆಯಾದ ಹೆಂಗಸರೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ನನ್ನ ಕಣ್ಣ ಮುಂದೆಯೇ ಎರೆಡನೇ ಮದುವೆಯಾದ ಹೆಣ್ಣೊಬ್ಬಳು ಪಡುತ್ತಿರುವ ಕಷ್ಟ ಇದೆ.
ಅದನ್ನೇ ಸ್ವಾತಂತ್ರ್ಯ ಇಲ್ಲ ಎನ್ನುವುದು .
ಹೆಂಡತಿ ಕೆಲಸಕ್ಕೆ ಹೋದರೆ ಸಮಯಕ್ಕೆ ಸರಿಯಾಗಿ ಬರಬೇಕು ಎಂಬುದು ಗಂಡಸರೆಲ್ಲರ ನಿಯಮಾವಳಿಗಳು. ಅದೇ ಮಾತು ಅವರಿಗೆ ಅನ್ವಯಿಸುವುದಿಲ್ಲ . ಅದನ್ನೇ ಸ್ವಾತಂತ್ರ್ಯ ಇಲ್ಲ ಎನ್ನುವುದು .
ಎಲ್ಲರೂ ಹೀಗೆ ಇರುವುದಿಲ್ಲ ಎಂಬ ವಾದದಲ್ಲಿ ಹುರಳಿಲ್ಲ ಏಕೆಂದರೆ ಹಾಗಿಲ್ಲದಿರುವ ಜನರ ಸಂಖ್ಯೆ ಕೇವಲ ಬೆರಳೆಣಿಕೆ ಯಷ್ಟು.
ಹೀಗೆ ಪಟ್ಟಿ ಮಾಡುತಾ ಹೋದರೆ ಬಹಳ ವಿಷಯಗಳು ಹೊರಬರುತ್ತವೆ. ವಾಸ್ತವತೆ ನಾವು ನೀವು ಬರೆದಷ್ಟು ಸುಲಭವಾಗಿಲ್ಲ
ರೂಪ
ಉ: ಹೆಣ್ಣು
ನಮ್ಮ ಕಂಪೆನಿಯ ಕಾಬ್ ಡ್ರೈವರ್ ಒಮ್ಮೆ ನನಗೆ ಹೇಳಿದ್ದ.
ಇಲ್ಲಿ ಪ್ರಶ್ನೆ ? ಮಲಯಾಳೀ ಹುಡುಗಿಯರಿಗೆ ಸಿಕ್ಕ ಸ್ವಾತಂತ್ರ್ಯ ಕನ್ನಡ ಹುಡುಗಿಯರಿಗೆ ಏಕೆ ಸಿಕ್ಕಿಲ್ಲ.
ಉ: ಹೆಣ್ಣು
ಆದರೂ ಒಂದು ಹೆಣ್ಣು ಮಧ್ಯರಾತ್ರಿ ಬಿಡಿ , ಅದೂ ಬೇಡ ರಾತ್ರಿ 10.30 ಆದ ಮೇಲೆ ಒಬ್ಬಳೇ ಹೊರ ಬರುವುದು ಈಗಲೂ ಕಷ್ಟವಿದೆ. ಅದನ್ನೇ ಸ್ವಾತಂತ್ರ್ಯ ಇಲ್ಲ ಎನ್ನುವುದು
ಗುಂಪಾಗಿ ಹೋಗುವುದು ಬೇರೆ
ರೂಪ
ಉ: ಹೆಣ್ಣು
ಚಿಕ್ಕವನಿದ್ದಾಗ ಮಧ್ಯರಾತ್ರಿ ಬಿಡಿ, ೯ ಗಂಟೆಗೇ ಹೊರಹೋಗಲು ತಾಯಿ ಬಿಡುತ್ತಿರಲಿಲ್ಲ.
ಈವಾಗ ಅವರ ಸೊಸೆ ಬಿಡುತ್ತಿಲ್ಲ.
ನಿಮ್ಮೊಡನೆ ನಾನೂ ಇದ್ದೇನೆ.
ನಮಗೆ ಬೇಕು ಸ್ವಾತಂತ್ರ್ಯ
ಬೇಕೇ ಬೇಕು.. ಸ್ವಾತಂತ್ರ್ಯ ಬೇಕು
ಲಿನಕ್ಸ್ ಮೀಟಿಂಗ್ ಆದ ಮೇಲೆ ನಮ್ಮ ಹೋರಾಟ ಸುರುಮಾಡೋಣ. ಏನಂತೀರಿ?
ಗಣೇಶ.
(ನಿಮ್ಮ ಕವಿತೆ ಚೆನ್ನಾಗಿದೆ.)
ಉ: ಹೆಣ್ಣು
ನಿಜ. ಆದರೆ, ಈಗ
ಮಗುವಿಗೆ ಇಂಗ್ಲೀಷ್ ಕಲಿಸುವ ತಾಯಿ ಹೆಣ್ಣು,
ಕನ್ನಡದ ಒನಪಿಲ್ಲದ ಒಣ ಒಲವ ಪತ್ರ ಗೀಚುವ ಹೃದಯ ಹೆಣ್ಣು,
ಮೊಮ್ಮಗುವಾಡುವ ಮಮ್ಮಿ, ಡ್ಯಾಡಿ ತೊದಲ ಕೇಳಿ ಪುಳಕಗೊಳ್ಳುವುದು ಹೆಣ್ಣು
ಉ: ಹೆಣ್ಣು
ಮಗುವಿಗೆ ಇಂಗ್ಲೀಷ್ ಕಲಿಸುವ ತಾಯಿ ಹೆಣ್ಣು,
ಯಾಕೆ ತಂದೆ ಕಲಿಸುವುದಿಲ್ಲವೋ?
ಕನ್ನಡದ ಒನಪಿಲ್ಲದ ಒಣ ಒಲವ ಪತ್ರ ಗೀಚುವ ಹೃದಯ ಹೆಣ್ಣು,
ಈ ವಿಷಯವೆ ಬೇಕಾಗಿಲ್ಲ ಇಲ್ಲಿ
ಮೊಮ್ಮಗುವಾಡುವ ಮಮ್ಮಿ, ಡ್ಯಾಡಿ ತೊದಲ ಕೇಳಿ ಪುಳಕಗೊಳ್ಳುವುದು ಹೆಣ್ಣು
ಅಜ್ಜಂದಿರೂ ಈ ವಿಷಯದಲ್ಲಿ ಕಡಿಮೆ ಏನಿಲ್ಲ
ಸುಮ್ಮನೇ ಬರೀ ಹೆಂಗಸರ ಮೇಲೇಕೆ ಹೊರಿಸುವಿರೀ ಆರೋಪ?
ರೂಪ
ಉ: ಹೆಣ್ಣು
ಗುರುರಾಜ
ಹೋಗ್ಲಿ ಬಿಡಿ ರೂಪಾ,
ಅದ್ಯಕ್ಯಾಕ್ ಇಷ್ಟೋ೦ದ್ ಕೋಪ
ಉ: ಹೆಣ್ಣು
ಮೇಲೆ ಚುಡಾಯಿಸುತ್ತಿರುವ ಗಂಡಸರಿಗೆ ನನ್ನದು ಒಂದೇ ಮಾತು. ಒಂದು ದಿನದ ಮಟ್ಟಿಗಾದರೂ ಹೆಣ್ಣಾಗಿ ವೇಷ ಬದಲಾಯಿಸಿ ನೋಡಿ, ನಿಮಗೇ ಗೊತ್ತಾಗುತ್ತೆ ಅವರಿಗೆಷ್ಟು ಸ್ವಾತಂತ್ರ್ಯ ಇದೆ ಅಂತ
ಹಾಗೇನೇ ನಿಮ್ಮ ಮನೆ ಹೆಣ್ಣು ಮಗಳನ್ನು ರಾತ್ರಿ ೧೦:೩೦ಯಲ್ಲಿ ನಿರ್ಯೋಚನೆಯಿಂದ ಆಚೆ ಕಳುಹಿಸುವಿರಾ? ಗಂಡಸರಾಗಿ, ಬೇರೆ ಗಂಡಸರ ನಡತೆಯ ಬಗ್ಗೆ ನಿಮಗೆಷ್ಟು ನಂಬುಗೆ ಇದೆ? 
ಉ: ಹೆಣ್ಣು
ಕತ್ತಲ ಕೋಣೆ ಒಳಹೋಗಲು ಹೆದರುವ,
ಜಿರಲೆ ನೋಡಿದರೆ ಕಿರುಚಿ ಹಾರುವ ಹೆಣ್ಣನ್ನು,
ಮಧ್ಯರಾತ್ರಿ ಹೊರ ಹಾಕುವ ಧೈರ್ಯ ಯಾವ ಅಪ್ಪನಿಗಿದೆ?
ಉಳಿದಂತೆ ರಾತ್ರಿ ಪಾಳಿಯ ಹೆಣ್ಣುಗಳು,ನರ್ಸ್,ವೈದ್ಯೆಯರು,
ತರಕಾರಿ ಇತ್ಯಾದಿ ಹಳ್ಳಿಯಿಂದ ಹೊತ್ತು ತರುವ ಹೆಂಗಸರು..
ಅನೇಕ ಜನ ರಾತ್ರಿಯ ಯೋಚನೆಯಿಲ್ಲದೆ ದಿನಾ ಓಡಾಡುತ್ತಾರೆ.
ಕೇಳಿ ನೋಡಿ "ಹೊಟ್ಟೆಪಾಡು ಕಣಪ್ಪ. ದೇವರ ಮೇಲೆ ಭಾರ ಹಾಕಿ.." ಅಂತಾರೆ.
ರಾತ್ರಿ ದುಷ್ಟ ಜಂತು(ಗಂಡು?)ಗಳ ಓಡಾಟ ಜಾಸ್ತಿ. ಒಳ್ಳೆಯವರು ಅದಕ್ಕಿಂತ ಜಾಸ್ತಿ ಇದ್ದಾರೆ.
ಒಂದು ಮಧ್ಯರಾತ್ರಿ ನಿಮ್ಮ ಅಣ್ಣ, ತಮ್ಮ ಅಥವಾ ತಂದೆ ಜತೆ ಓಡಾಡಿ ನೋಡಿ. ನಿಮ್ಮ ಅಭಿಪ್ರಾಯ ಬದಲಾಯಿಸುವಿರಿ. ನಂತರ ಒಬ್ಬರೇ ಓಡಾಡುವ ಧೈರ್ಯ ಬರುವುದು.ಹಗಲಿನಲ್ಲಿರುವುದಕ್ಕಿಂತ ಸ್ವಲ್ಪ ಜಾಸ್ತಿ ಜಾಗ್ರತೆ ಇರಬೇಕು ಅಷ್ಟೆ.
-ಗಣೇಶ.
ಉ: ಹೆಣ್ಣು
ಹೇಯ್, ಎಲ್ರೂ ದಯವಿಟ್ಟು ಒಂದು ಕ್ಷಣ ತಡೀರಪ್ಪಾ. ಇಲ್ಲಿ ನಾವು "೧೦:೩೦" ಬಗ್ಗೆ ಚರ್ಚಿಸುತ್ತಾ ಇದ್ದೀವಲ್ಲ "ಅದು" ಸ್ವಾತಂತ್ರ್ಯದ ಕಲ್ಪನೆ ಅಲ್ಲ. ಹೆಂಗಸರಿಗಾಗಲೀ, ಗಂಡಸರಿಗಾಗಲೀ ೧೦:೩೦ರ ನಂತರ ಆರಾಮಾಗಿ ಓಡಾಡಿಕೊಂಡಿರುವ ಸ್ವಾತಂತ್ರ್ಯ ಇದ್ದೇ ಇದೆ. ಆದರೆ ಇಲ್ಲಿ ಧೈರ್ಯದ ಮತ್ತು ನಂಬುಗೆಯ ಪ್ರಶ್ನೆ ಮಾತ್ರವೇ ಇರೋದು.
ಕಲ್ಪನ ಅವರು ಒಂದು ಎತ್ತಿದ ಪಾಯಿಂಟು ಗಂಡಸರ ತಲೆ ಮೇಲೆ ಹೊಡೆದಹಾಗಿದೆ. ಸೂಪರ್ ಪಾಯಿಂಟ್
ಅಂದರೆ, ಇಲ್ಲಿ
೧. ಗಂಡಸರಿಗೆ ಬೇರೆ ಗಂಡಸರ ಬಗ್ಗೆ ನಂಬಿಕೆಯಿಲ್ಲ.
೨. ಅಫ್ಕೋರ್ಸ್, ಹೆಂಗಸರಿಗೂ ಗಂಡಸರ ಮೇಲೆ ನಂಬಿಕೆಯಿಲ್ಲ
೩. ಹೆಂಗಸರಿಗೆ ಧೈರ್ಯ ಇಲ್ಲ (ಪಾಸಿಟೀವ್ ಆಗಿ ತೊಗೊಳ್ರಪ್ಪಾ ನನ್ನ ಮಾತನ್ನ, ಆಮೇಲೆ ನನ್ನನ್ನು ಬಯ್ಯಬೇಡಿ, ಹೀಗಂದೆ ಅಂತ). "ಧೈರ್ಯ ಯಾಕೆ ಇಲ್ಲ", ಎನ್ನುವುದು ಆಮೇಲಿನ ಪ್ರಶ್ನೆ.
೪. ಗಂಡಸರಿಗೆ ಹೆಂಗಸರ ಮೇಲೆ ನಂಬಿಕೆಯಿಲ್ಲ. ಅದೇ ಪೊಸೆಸೀವನೆಸ್ ಅಂತಾರಲ್ಲ ಅದು.
(ಹಾಂ. ನೆನಪಿಡಿ. ಇವೆಲ್ಲ ಪಾಯಿಂಟುಗಳಿಗೂ ಅಪವಾದಗಳು ಇದ್ದೇ ಇವೆ).
ಹಾಗಾಗಿ, ಇಲ್ಲಿ ೧೦:೩೦ರ ನಂತರ ಓಡಾಡುವುದಕ್ಕೆ "ಮುಕ್ತ ಸಮಾಜ - Open Minded Society" ಎನ್ನಬೇಕೇ ಹೊರತು "ಸ್ವಾತಂತ್ರ್ಯ ಸಿಗುವುದು" ಎಂದುಕೊಳ್ಳುವುದು ಸರಿಕಾಣುವುದಿಲ್ಲ. ಗಂಡು ಮತ್ತು ಹೆಣ್ಣಿನ ನಡುವೆ "ಮುಕ್ತ ವಾತಾವರಣ" ಇಲ್ಲದ ಕಾರಣ ರಾತ್ರಿ ೧೦:೩೦ರ ನಂತರ ಓಡಾಡಲು ಹೆಂಗಸರಿಗೆ ಆಗುತ್ತಿಲ್ಲ. ಆದರೆ ಇದನ್ನು ಸ್ವಾತಂತ್ರ್ಯದ ಜೊತೆ ತಳುಕು ಹಾಕಬೇಡಿ. ಸ್ವಾತಂತ್ರ್ಯ ಎಲ್ಲರಿಗೂ ಇದ್ದೇ ಇದೆ.
ಉ: ಹೆಣ್ಣು
ಎಂಬುದನ್ನು
ಎಂಬುದಾಗಿ ಓದಿಕೊಳ್ಳಿ.
ಉ: ಹೆಣ್ಣು
ಸಮಾಜಕ್ಕೆ ಒಂದು ನೀತಿ, ನಿಯಮ, ಕಟ್ಟಳೆ, ಆಚಾರ, ವಿಚಾರ ಎಂಬುದಿರುತ್ತದೆ. ಅದನ್ನೆಲ್ಲವನ್ನೂ ಮೀರಿ ಹೋದರೆ ಎಂಥಹ ಪರಿಣಾಮಗಳಾಗ್ತವೆ ನೋಡಿ !!
ಉ: ಹೆಣ್ಣು
ಒಯ್ ಮಾರಾಯ್ರೆ, ಮೇಲಿನ್ ನನ್ನ ಪ್ರತಿಕ್ರಿಯೆ ನಿರ್ಲಕ್ಷಿಸಿ..ಇನ್ನೊಂದು ಬ್ಲಾಗಿಗೆ ಬರ್ಯೋಣ ಅಂತ ಹೋಗಿ ಇಲ್ಲಿ ಬರ್ದ್ಬಿಟ್ಟೆ
ಉ: ಹೆಣ್ಣು
ಸುನೀಲರು ಹೇಳುವುದರಲ್ಲಿ ತುಂಬಾ ತಿಳಿಯುವುದಕ್ಕೆ ಇದೆ. ಸ್ತ್ರೀ ಸ್ವಾತಂತ್ರ್ಯವನ್ನು ತಪ್ಪಾಗಿಯೇ ಅರ್ಥೈಸಲಾಗುತ್ತಿದೆ ಹಾಗೂ ಅರ್ಥ ಮಾಡಿಕೊಳ್ಳಲಾಗುತ್ತಿದೆ.ಇದಕ್ಕೆ ಹೆಣ್ಣು ಗಂಡಿನ ವ್ಯತ್ಯಾಸವಿಲ್ಲ.
ಈಗಿನ ಬಹುತೇಕ ಮಹಿಳಾ ಮಣಿಗಳ ಪ್ರಕಾರ ಸ್ತ್ರೀ ಸ್ವಾತಂತ್ರ್ಯ ಸಮಾನತೆಯೆಂದರೆ, ಖಾಲಿಯಿರುವ ‘ಲೇಡೀಸ್ ಸ್ಪೆಶಲ್’ ಬಿಟಿಎಸ್ ಬಸ್ಸಿನಲ್ಲಿ ಧಡಕ್ಕು-ಧಡಕ್ಕೆನ್ನುವ ಹಿಂದಿನ ಸೀಟಿನಲ್ಲಿ ಹೋಗಿ ಕುಳಿತು ಹೆಮ್ಮೆ ಪಡುವುದು!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com