ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಲಹರಿ ಬಂದಂತೆ ಬರಹ. ಸ್ವಲ್ಪ ಮೂಡಿ, ಮಾತು ಬೇಕಿದ್ದಲ್ಲಿ ಮಾತ್ರ . ಗೆಳೆತನ ಇಷ್ಟ ಆದರೆ ಆಯ್ಕೆಯೇ ಕಷ್ಟ.

ಆಗಾಗ ತೆರೆದ ಮನದಲ್ಲಿ (http://www.thereda-m...) ಖುಶಿಗಾಗಿ ಏನಾದರೂ ಗೀಚುತ್ತಿರುತ್ತೇನಿ
ಕತೆಯೋ ಕವನವೋ ಇಲ್ಲ ವೈಯುಕ್ತಿಕ ವಿಷಯವೋ ಯಾವುದೋ ಒಂದು ಅದಲ್ಲದೆ http://yashuputagalu... ನನ್ನ ಮುದ್ದುಮಗಳ ಬಾಲ ಲೀಲೆಗಳನ್ನೂ ಪೇರಿಸುತ್ತೇನೆ

ಹೀಗೊಂದಷ್ಟು ತಮಾಷೆಗಾಗಿ

ಈಗ ಮೇಲ್ ಒಂದು ಬಂದಿತ್ತು
ಅದನ್ನ ಕನ್ನಡದಲ್ಲಿ ಹಾಕಿದ್ದೇನೆ ಓದಿ ನಕ್ಕುಬಿಡಿ

ಹೆಂ: ಯಾಕ್ರಿ ನಮ್ಮ ಮದುವೆ ಸರ್ಟಿಫಿಕೇಟ್ ಓದುತ್ತಿದ್ದೀರಾ.
ಗಂ: ಅದರಲ್ಲಿ ಎಕ್ಸ್‌ಪೈರಿ ಡೇಟ್ ಯಾವಾಗ ಇದೆ ಅಂತ ಹುಡುಕುತ್ತಾ ಇದೀನಿ
-------------------------------------------------------------------------------
ಹೆಂ: ರೀ ರಾತ್ರಿ ಅಡಿಗೆ ಏನ್ಮಾಡಲಿ
ಗಂ: ನಾನೇನ್ ಹೇಳಿ ಅಂತ ಬಯಸ್ತಿದೀಯಾ?
ಹೆಂ: ಹೌದು ಅಥವ ಇಲ್ಲ ಅಷ್ಟೇ
--------------------------------------------------------------------------------------------
ಹೆಂ: ರೀ ಯಾಕ್ರಿ ಯಾವಾಗ್ಲೂ ನನ್ನ ಫೋಟೋ ಇಟ್ಕೊಂಡಿರ್ತೀರಾ?
ಗಂ: ಎಂಥಾ ದೊಡ್ಡ ತೊಂದರೆ ಬಂದ್ರೂ ನಿನ್ನ ಫೋಟೋ ನೋಡಿದ ತಕ್ಷನ ಮಾಯವಾಗುತ್ತೆ ಕಣೆ
ಹೆಂ: ಹೌದಾ . ನೋಡಿದ್ರಾ ನಂಗೆ ಎಂಥಾ ಶಕ್ತಿ ಇದೆ
ಗಂ: ಹೌದು ಕಣೆ ನಿನ್ನ ಚಿತ್ರ ನೋಡಿದ ಮೇಲೆ ಎಂಥಾ ದೊಡ್ಡಾ ಪ್ರಾಬ್ಲಮ್ ಇದರ ಮುಂದೆ ಏನೂ ಇಲ್ಲ ಅಂತನ್ನಿಸಿಬಿಡುತ್ತೆ ಕಣೆ
-------------------------------------------------------------------------------------
ಮಗ: ಅಮ್ಮ ನಾನು ಬಸ್‌ನಲ್ಲಿ ಕೂತಿದ್ದಾಗ ಅಪ್ಪ ಒಬ್ಬ ಆಂಟಿಗೆ ಜಾಗ ಬಿಡಕ್ಕೆ ಹೇಳಿದ್ರು
ಹೆಂ: ಒಳ್ಲೇ ಕೆಲಸ ಮಾಡಿದೆ .
ಮಗ : ಅಮ್ಮ ನಾನು ಅಪ್ಪನ ತೊಡೆ ಮೇಲೆ ಕೂತಿದ್ದೆ
-----------------------------------------------------------------------------------

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹೀಗೊಂದಷ್ಟು ತಮಾಷೆಗಾಗಿ

msudan86's picture

ರೂಪಕ್ಕ ,

ಹಿಂದೆ ಒಮ್ಮೆ ಕೇಳಿದ್ದೆ ಈಗ ಮತ್ತೆ ಓದಿ ನಗು ಬಂತು...

ಹ್ಹಹ್ಹಹ್ಹಹ :) ಸೂಪರ್

--ಗೌಡ್ರು

ಉ: ಹೀಗೊಂದಷ್ಟು ತಮಾಷೆಗಾಗಿ

thesalimath's picture

ನನ್ನ ಸ್ನೇಹಿತನೊಬ್ಬನಿಗೆ ಅನ್ವಾಯವಾಗುತ್ತದೆ ಮೂರನೆಯ ಹನಿ. ಅವನು ಹೇಳುತ್ತಿದ್ದ ಹನಿಗಳು.

" ಮದುವೆಯಾಗಿ ಒಂದು ವರ್ಷದ ವರೆಗೆ ಅಷ್ಟೇ ಕಣೋ ಕಷ್ಟ "
"ಹೌದ? ಆಮೇಲೆ ?"
"ಅಭ್ಯಾಸವಾಗಿಬಿಡುತ್ತೆ!!!"

ಇನ್ನೊಂದು
"ಎಲ್ಲರ ಹಾಗೆ ನನ್ನ ಹೆಂಡತಿ ನನ್ನನ್ನ ಕಂಟ್ರೋಲ್ ಮಾಡಲ್ಲಪ್ಪ! ನೋಡು ಬದುಕಿದರು ಕೇಳಲ್ಲ ಸತ್ರು ಕೇಳಲ್ಲ. ಹಾಳಾಗಿ ಹೋದ್ರು ಕೇಳಲ್ಲ. ಅವಾಗಾವಾಗ ಕೈಗೆ ಸಿಕ್ಕಿದ್ದನ್ನ ತಗೊಂಡು ಹೊಡೆಯೋದು ಬಿಟ್ರೆ ಮತ್ತೆ ಯಾವಾಗಲೂ ಶಾಂತ."

ಹೆಂಡತಿಯ ಮಾನಸಿಕ ಅಸ್ವಸ್ಥತೆಯಿಂದ ಇವನು ನರಳುತ್ತಿದ್ದಾನೆ. ಆದರೂ ನಗು ಮಾಸುವುದಿಲ್ಲ. ಕ್ಷಮಿಸಿ, ನಗುವಿಗೆ ಬ್ರೇಕ್ ಹಾಕಿದ್ದಕ್ಕೆ!

ಉ: ಹೀಗೊಂದಷ್ಟು ತಮಾಷೆಗಾಗಿ

anil.ramesh's picture

ರೂಪ,
ಕೆಲಸದ ಒತ್ತಡದಲ್ಲಿ ಇಂಥಾ ಹಾಸ್ಯವನ್ನು ಓದಿದಾಗ ಮನಸ್ಸಿಗೆ ಸ್ವಲ್ಪ ಸಮಾಧಾನವಾಗುತ್ತೆ.

ಹಂಚಿಕೊಂಡಿದ್ದಕ್ಕೆ ನನ್ನಿ.

-ಅನಿಲ್.

ಉ: ಹೀಗೊಂದಷ್ಟು ತಮಾಷೆಗಾಗಿ

asuhegde's picture

>>ಈಗ ಮೇಲ್ ಒಂದು ಬಂದಿತ್ತು.

ಆ ಮೇಲ್ (male) ಆಮೇಲೆ ಎಲ್ಲಿಗೆ ಹೋಯ್ತು ರೂಪಾಜೀ?

:-)