ಹೃದಯದ ಭಾವನೆಗಳ ಕನ್ನಡಿ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ
ಒಂದು ಚಿಕ್ಕ ಪ್ರಶ್ನೆ
ಒಬ್ಬ ಬುದ್ದ್ದಿವಂತೆ ಇದ್ದಳು. ಅವಳಿಗೋ ಎಲ್ಲವನ್ನು ಒಗಟಾಗಿ ಹೇಳುವ ಹವ್ಯಾಸ. ಅವಳನ್ನು ಒಬ್ಬ ದಡ್ದ ಮದುವೆಯಾದ . ಒಂದು ರಾತ್ರಿ ಗಂಡ ಎದ್ದು ನೋಡುತ್ತಾನೆ. ಪಕ್ಕದಲ್ಲಿ ಹೆಂಡತಿ ಇಲ್ಲ . ಎಲ್ಲ ಕಡೆ ಹುಡುಕಿ ಸುಸ್ತಾದ. ಸ್ವಲ್ಪ ಹೊತ್ತಾದ ಮೇಲೆ ಹೆಂಡತಿ ಬಂದಳು . ಗಂಡ್ ಏನೂ ಕೇಳಲಿಲ್ಲ . ಹೀಗೆ ತುಂಬ ದಿನ ನಡೆದಾಗ ತಡೆಯಲಾಗದೆ ಗಂಡ ಒಮ್ಮೆ ಕೇಳಿಯೇ ಬಿಟ್ಟ . " ನೀನು ದಿನ ರಾತ್ರಿ ಎಲ್ಲಿಗೆ ಹೋಗ್ತೀಯ" ಹೆಂಡತಿ ಕೂಲ್ ಆಗಿ ಹೇಳಿದಳು " ಕಳೆದುಕೊಂಡವನ ಹೆಂಡತಿಯನ್ನ ಹುಡುಕೋಕೆ ಹೋದವನ ಅಪ್ಪನ ಹತ್ತಿರ ಹೋಗ್ತೀನಿ"
ಗಂಡನಿಗೆ ಕೋಪ ಬಂತು. " ನಾನು ಇಲ್ಲಿರುವಾಗ ಯಾರ ಹತ್ರಾನೋ ಹೊಗ್ತೀಯ . ಎಷ್ಟೇ ಕೊಬ್ಬು ನಿನಗೆ" ಅಂದ . " "ನೀನೂ ಬೇಕಾದರೆ ಹೋಗು . ನಂಗೆನು ಪ್ರಾಬ್ಲಮ್ ಇಲ್ಲ" ಎಂದಳು ಗಂಡ ಅತ್ತೆ ಮಾವನ್ನ ಕರೆಸಿದ " ಆಗಲೂ ಅದೆ ಉತ್ತರ " ಕಳೆದುಕೊಂಡವನ ಹೆಂಡತಿಯನ್ನ ಹುಡುಕೋಕೆ ಹೋದವನ ಅಪ್ಪನ ಹತ್ತಿರ ಹೋಗ್ತೀನಿ" ಹೊಡೆದರೂ ಇಲ್ಲ ಬೈದರೂ ಇಲ್ಲ. ಪಾಪದ ಬಡಪಾಯಿ ಗಂದನಿಗೆ ಉತ್ಥರವನ್ನು ನೀವಾದರೂ ಹೇಳುತ್ತೀರಾ?

- roopablrao ರವರ ಬ್ಲಾಗ್
- Login or register to post comments
- 371 hits
- Email this blog





RSS:
ಪ್ರತಿಕ್ರಿಯೆಗಳು
ಉ: ಒಂದು ಚಿಕ್ಕ ಪ್ರಶ್ನೆ
ವಾಯು ವಿಹಾರ - ವಾಕಿಂಗ್ - ಹವಾ ತಿನ್ನಲಿಕ್ಕೆ ಹೊಗಿದ್ದಳೇ ಅವಳು ?
ರಾಮನ ಹೆಂಡತಿ ಸೀತೆ ಕಳೆದುಹೋಗಿದ್ದು , ಅವಳನ್ನು ಹುಡುಕಲು ಹೋದವ ಹನುಮಂತ , ಅವನು ವಾಯುಸುತ ....
ನನ್ನ ಉತ್ರ ಸರೀನಾ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಒಂದು ಚಿಕ್ಕ ಪ್ರಶ್ನೆ
ಸರಿಯಾದ ಉತ್ತರ