Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಸಂವಾದ-----------(?) ತಾಯಿಯೊಂದಿಗೆ

March 28, 2008 - 4:48pm — roopablrao

ನಾನು ಅಲ್ಲಿಂದ ಹೊದಡುವುದಕ್ಕೂ ಆ ಹೆಂಗಸು ಹೆಲ್ಪ್ ಮಿ ಅಂತ ಬರುವುದಕ್ಕೂ ಒಂದೇ ಸಮಯವಯಿತು
ವಿಚಿತ್ರವಾದ ಹೆಂಗಸು
ಪ್ಯಾಂಟ್ ಮೆಲೆ ಹರಿದಿರುವ ಸೀರೆ ಬಾಬ್ ಮಾಡಿ ಕೆದರಿರುವ ಕೂದಲು ಸ್ಟಲ್‌ಗೆಂದು ಧರಿಸಿದ್ದ ಕನ್ನಡಕದಲ್ಲಿ ಗಾಜೇ ಇಲ್ಲ ಕೈನಲ್ಲೊಂದು ಮೊಬೈಲ್. ಒಂದು ಕೈನಲ್ಲಿ ತುಕ್ಕು ಹಿಡಿದಿರುವ ತ್ರಿಶೂಲ. ಹಣೆಯಲ್ಲಿ ಅಳಿಸುತ್ತಿರುವ ಕುಂಕುಮ .
"ಯಾರಮ್ಮ ನೀನು ಯಾಕೆ ಹೀಗೆ ಓಡಿಬರ್ತೀದೀಯ."
"ಅಯ್ಯೊ ಅವರು ನಾನು ಸಿಕ್ಕರೆ ಸಾಕು ನನ್ನ ತಲೆ ಅವರದು ಕಾಲು ಇವರದು ಕಿತ್ತುಕೊಂಡು ತಿಂತಾರೆ "
"ಯಾರಮ್ಮ ಅದು......... ರಾಕ್ಷಸರಾ?"

"ಅಲ್ಲ ಅವರು ನನ್ನ ಅಕ್ಕ ತಂಗಿಯರ ಮಕ್ಕಳು."

"ಅಕ್ಕ ತಂಗಿಯರ ಮಕ್ಕಳ್ಯಾಕೆ ಹೀಗೆ ಮಾಡ್ತಾರೆ?"

ಆಕೆ ಬೆಂಚಿನ ಮೇಲೆ ಕುಳಿತುಕೊಂಡಳು
"ಒಂದು ಕಾಲಕ್ಕೆ ನಾವೆಲ್ಲಾ ಅಕ್ಕ ತಂಗಿಯರು ಸುಖವಾಗಿದ್ದೆವು. ಒಬ್ಬರನೊಬ್ಬರನ್ನ ಹೊಂದಿಕೊಂಡು ಕಷ್ಟಾಕ್ಕೆ ಆಗಿ. ನಮ್ಮ ಮಕ್ಕಳು ಈಗಿನಷ್ಟು ಇರಲಿಲ್ಲ . ಈಗಿನಂತೇನೂ ಇರಲಿಲ್ಲ
ಯಾವಾಗ ನಮ್ಮನ್ನೆಲ್ಲಾ ಬೇರೆ ಮಾಡಿ ಇವಳಿಗಷ್ಟು ಅವಳಿಗಷ್ಟು ಅಂತ ಆಸ್ತಿ ಮಾಡಿದರೋ ಅವಾಗ ಎಲ್ಲರಿಗೂ ಹೊಟ್ಟೆ ಉರಿ ಬಂತು."

"ಅಮೇಲೆ ನಿನ್ನ ಥರಾನೆ ಉಳಿದವರೂ ಅಗಿದ್ದಾರಾ?"

"ನಾನು ಸ್ವಭಾವದಿಂದಾನೆ ಒಳ್ಳೆಯವಳು ಸೌಮ್ಯ ಮನೋಭಾವದವಳು. ಹಾಗಾಗಿ ನನಗೆ ಏನು ಕೊಟ್ಟಿದಾರೋ ಅದನ್ನೆ ಇಟ್ಟುಕೊಂಡ್ ಸುಮ್ಮನಿದ್ದೆ. ನನ್ನ ಮಕ್ಕಳೂ ನನ್ನ ಹಾಗೆ ಯಾರ ತಂಟೆಗೂ ಹೋಗದವರು . ಅದನ್ನೆ ಈಗ ದೌರ್ಬಲ್ಯ ಅಂದುಕೊಂಡು ಆ ಜನ ನನ್ನ ಇಷೀಷ್ಟೇ ತಿಂತಿದಾರೆ . ನನ್ನ ಅಕ್ಕ ತಂಗಿಯರು ಘಟಾಣಿಗಳು ಅವರ ಮಕ್ಕಳು ಹಾಗೆ" .

"ನನ್ನ ಹೊಟ್ಟೇಲಿ ಹುಟ್ಟಿದ ಮಗಳೆ ನನ್ನ ತಂಗಿಯ ಮಗಳು ಅನ್ನಿಸಿಕೊಂಡು ನನ್ನ ಜೀವಜಲಾನೆ ಕೀಳ್ತಿದಾಳೆ. ಅವಳ ಅಣ್ಣಾ ತಮ್ಮಂದಿರಿಗೆ ಅಂದರೆ ನನ್ನಬೇರೆ ಮಕ್ಕಳಿಗೂ ಅವಳು ಅನ್ಯಾಯ ಮಾಡ್ತಾ ಇದಾಳೆ."

ಸರಿ ಇದೇನು ನಿನ್ನ ವೇಷ
"ನನ್ನ ಮಕ್ಕಳು ಅಂದನಲ್ಲ ಅವರೆಲ್ಲ ಈಗ ಊರಿಂದೂರಿಗೆ ಹೋಗಿ ಅಲ್ಲೇ ಹ್ಯಾಗೆ ಹ್ಯಾಗೆ ಇರ್ತಾರೊ ಹಾಗೆ ಇರ್ಬೇಕು ಇಲ್ಲ ಅಂದರೆ ನಾನು ಉದ್ದಾರ ಆಗಲ್ಲ . ಈ ವೇಷ ಹಾಕಿದಾರೆ"
"ಊರಿಂದೂರಿಗಾ?"

" ಹೌದು ಅವರೆಲ್ಲಾ ವಿದೇಶಕ್ಕೆ ಹೋಗಿ ಅವಾಗಿವಾಗ ಅಷ್ಟೊ ಇಷ್ಟು ದುಡ್ಡು ಕೊಡ್ಥಾರೆ ಸುಮ್ಮನೆ ಅವಾಗವಾಗ್ ಅಮ್ಮ ಹ್ಯಾಗಿದ್ದೀಯ ನಮ್ಮ ಅಮ್ಮನೇ ದೇವರು ಅಂತ ಕೂಗ್ತಿರಾರೆ . ಅಷ್ಟೆ.
ನನಗೂ ನನ್ನ ಮಕ್ಕಳು ಇಲ್ಲೇ ಇದ್ದು ಉದ್ದ್ದಾರವಾಗಲಿ ಅಂತ ಆಸೆ. ಆದರೆ ಆಗಲ್ಲ ಅಂತ ಅವರು ಹೇಳ್ತಾರೆ"

" ಸರಿ ಇಲ್ಲೇ ಇರುವ ಮಕ್ಕಳು ಏನ್ಮಾಡುತ್ತಾರೆ?"
"ಅವರಾ ವರುಷಕ್ಕೆ ಒಂದು ಸಲ ನನ್ನ ಎತ್ತಿ ಕೊಂಡಾಡುತ್ತಾರೆ . ಆಮೆಲೆ ಯಾರು ಕೇರೇ ಮಾಡಲ್ಲ"

" ಹೋಗಲಿ ಬಿಡು ಇಷ್ಟೂ ಚನ್ನಾಗಿ ಕನ್ನಡ ಮಾತಾಡ್ತೀಯ ಮತ್ತೆ ಯಾಕೆ ಹೆಲ್ಪ್ ಮಿ ಅಂತ ಇಂಗ್ಲೀಷ ನಲ್ಲಿ ಕಿರುಚಿಕೊಂಡು ಬಂದೆ"?
" ಅದಾ. ಇಲ್ಲ ಅಂದರೆ ನನ್ನ ಅಕ್ಕ ತಂಗಿಯರ ಮಕ್ಕಳು ಇರಲಿ ನನ್ನ ಮಕ್ಕಳೇ ತಮಾಷೆ ಮಾಡ್ತಾರೆ."

"ಅಯ್ಯೊ ಪಾಪ ಅನ್ನಿಸುತ್ತ್ಜೆ ನಿನ್ನ ನೋಡಿ ಅಂದ ಹಾಗೆ ನೀನು ಯಾಕೆ ಈ ಗಾಜಿಲ್ಲದ ಕನ್ನಡಕ ಹಾಕಿಕೊಂಡಿದ್ದೀಯ?"
"ಕನ್ನಡಕ ದಲ್ಲಿ ಕನ್ನಡ ಇಲ್ಲ ಅಂತ ತೋರಿಸೋಕೆ"
" ಓ ಚೆನ್ನಾಗಿ ಮಾತಾಡ್ತೀಯ ನಿನ್ನ ಹೆಸರೇನಮ್ಮ?"

ನನ್ನ ಹೆಸರ್ರು ಕರ್ನಾಟಕ ಅಂತ .

"ಆಂ"

ಬೆಚ್ಹಿ ಮೆಲ್ಲನೆ ಕಣ್ಣು ಬಿಟ್ಟೆ ಇಲ್ಲಿಈವರೆಗೂ ನೋಡಿದ್ದು ಕನಸು ಅಂತ ತಿಳಿಯಿತು.

ಅ

  • ಕನ್ನಡ
Ornamental seperator
  • roopablrao ರವರ ಬ್ಲಾಗ್
  • Login or register to post comments
  • 548 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 28, 2008 - 4:57pm — Sunil Jayaprakash

ಉ: ಸಂವಾದ-----------(?) ತಾಯಿಯೊಂದಿಗೆ

Sunil Jayaprakash's picture

ರೀ ಈ ತರಹ ಎಲ್ಲ ಕನಸು ಕಾಣಬೇಡಿ. ಮಲಗುವಾಗ, "ರಾಮಸ್-ಕಂದಂ" ಹೇಳಿಕೊಂಡು ಮಲಗಿ, ಇಲ್ಲವೇ ನರಸಿಂಹಸ್ತೋತ್ರ ಯಾವುದಾದರು ಗೊತ್ತಿದ್ದರೆ ಹೇಳಿಕೊಂಡು ಮಲಗಿ Eye-wink :ಸುಮ್ಮನೆ ತಮಾಶೆಗೆ:

ನಾನು ಒಮ್ಮೆ ಒಂದು ಕಡೆ ಓದಿದ್ದೆ. ನಾವು ಕನ್ನಡವನ್ನು "ತಾಯಿ, ಗೀಯಿ, ಮಾತೆ" ಅಂತೆಲ್ಲ ಭಾವುಕವಾಗಿ ಯೋಚಿಸಬಾರದಂತೆ. ನಾವು ಸಿಕ್ಕಾಪಟ್ಟೆ ಪವರಫುಲ್ಲಾಗಿ(ಶಕ್ತಿಯುತವಾಗಿ) ಬಾಳಬೇಕಿದ್ರೆ, "ನಾನೇ ಕನ್ನಡ" ಎಂದು ಯೋಚಿಸಬೇಕಂತೆ.

  • Login or register to post comments
  • link
  • Email this ಪ್ರತಿಕ್ರಿಯೆ
March 28, 2008 - 5:03pm — roopablrao

ಉ: ಸಂವಾದ-----------(?) ತಾಯಿಯೊಂದಿಗೆ

roopablrao's picture

ನೀವೇ ಕನ್ನಡ ಅಂತ ನೀವು ಅಂದುಕೊಳ್ಳಿ
ಕನ್ನಡವೇ ನಮ್ಮಮ್ಮ ಅಂತ ನಾನು ಅಂದ್ಕೊತೇನೆ Smiling

ಅವರವರ ಭಾವಕ್ಕೆ ಅವರವರ ಭಕುತಿಗೆ
ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
March 28, 2008 - 6:23pm — Sunil Jayaprakash

ಉ: ಸಂವಾದ-----------(?) ತಾಯಿಯೊಂದಿಗೆ

Sunil Jayaprakash's picture

ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ.
ಮಾತಾಡೋ ದೇವರಿವಳು. Smiling

"ಅವರವರ ಭಾವಕ್ಕೆ ಅವರವರ ಭಕುತಿಗೆ", ಚಿನ್ನದಂತಹ ಮಾತು. ಆಯ್ತು ರೂಪಾ ಅವರೆ, "ಕನ್ನಡವೇ ನಮ್ಮಮ್ಮ" ಅಂತ ನೀವು ಅಂದ್ಕೊಳಿ. ಅದರಲ್ಲಿ ತಪ್ಪೇನು ಇಲ್ಲ. ನಾವೆಲ್ಲರೂ ಹೀಗೆಯೇ ಒಗ್ಗಟ್ಟಿನಿಂದಿದ್ದು, ನಮ್ಮ ಕನ್ನಡದ ಕೊಂಡಿಗಳನ್ನು ಎಲ್ಲೆಡೆಯೂ ಪಸರಿಸುತ್ತಾ ಇರೋಣ.

  • Login or register to post comments
  • link
  • Email this ಪ್ರತಿಕ್ರಿಯೆ
March 29, 2008 - 2:58pm — mahesha

ಉ: ಸಂವಾದ-----------(?) ತಾಯಿಯೊಂದಿಗೆ

mahesha's picture

ರೂಪ ಅವರೇ ಮನ್ನಿಸಿರಿ... ನಿಮ್ ಬರಹಕ್ಕೆ ನಂಟಿಲ್ಲ..

ಲೇ ಚನ್ನೀಲ
ಮಲಗುವಾಗ, "ರಾಮಸ್-ಕಂದಂ" ಹೇಳಿಕೊಂಡು

ಅಣ್ಣ ಪಂಡಿತ..

ಅದು ರಾಮಸ್-ಕಂದಂ ಅಲ್ಲ.. Smiling

ರಾಮ-ಸ್ಕಂದಂ ಹನೂಮಂತಂ ವೈನತೇಯ-ವೃಕೋದರಂ
ಶಯನೇ ಯಃ ಸ್ಮರೇನ್ ನಿತ್ಯಂ ದುಃಸ್ವಪ್ನನ್ ತಸ್ಯ ನಶ್ಯತಿ||

ಇಲ್ಲಿರುವ ಐದು ಮಂದಿ ಗೊತ್ತಲ್ಲ..!! ನನಗೆ ಈ ಶ್ಲೋಕದಲ್ಲಿ ನರಿಹೊಟ್ಟೆ ಸ್ಮರಿಸು ಅಂತ ಯಾಕೆ ಅಂತಾರೆ ಅಂತ ತಿಳಿಲಿಲ್ಲ.. Smiling

"ರೀ ಈ ತರಹ ಎಲ್ಲ ಕನಸು ಕಾಣಬೇಡಿ. ಮಲಗುವಾಗ, "ರಾಮಸ್-ಕಂದಂ" ಹೇಳಿಕೊಂಡು ಮಲಗಿ, ಇಲ್ಲವೇ ನರಸಿಂಹಸ್ತೋತ್ರ ಯಾವುದಾದರು ಗೊತ್ತಿದ್ದರೆ ಹೇಳಿಕೊಂಡು ಮಲಗಿ Eye-wink :ಸುಮ್ಮನೆ ತಮಾಶೆಗೆ:"

ಏನು ನರಸಿಂಹಸ್ತೋತ್ರ ಸುಮ್ನೆ ತಮಾಶೆಗೆ ಹೇಳಬೇಕಾ? ಕಣ್ಣುಹೊಡೆದುಕೊಂಡು!

  • Login or register to post comments
  • link
  • Email this ಪ್ರತಿಕ್ರಿಯೆ
March 30, 2008 - 8:03am — Sunil Jayaprakash

ಉ: ಸಂವಾದ-----------(?) ತಾಯಿಯೊಂದಿಗೆ

Sunil Jayaprakash's picture

ನಾನು ರಾಮನ ಕಂದ ಹನುಮಂತ ಅಂದ್ಕೊಂಡಿದ್ದೆ Laughing out loud. ನನ್ನಿ ಎ ಲಾಟ್.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಕ್ಕ ತಮ್ಮರ ಅನುಬಂದದ ಗೀತೆ
  • ಬಯಕೆ
  • ಚರ್ಚೆ-ಸಂಧಾನ
  • ವ್ಯಾಲೆಂಟೈನ್ ಡೇ ಸ್ಪೆಷಲ್...
  • ಅನಾಮಿಕನಿಗೆ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
  • Vinod Pattanshetti
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 1:56pm
  • rameshbalaganchi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:51pm
  • Shivakumar.Revadi
    ಉ: ಕಟಪಯಾದಿ ಸೂತ್ರ
    May 14, 2008 - 1:32pm
  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:31pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 14, 2008 - 12:42pm
  • ಶ್ರೀನಿಧಿ
    ಉ: ಅಡುಗೆಯ ಸಂಭ್ರಮ
    May 14, 2008 - 11:32am
  • ಶ್ರೀನಿಧಿ
    ಉ: ಕಟಪಯಾದಿ ಸೂತ್ರ
    May 14, 2008 - 11:18am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator