Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › roopablrao ರವರ ಬ್ಲಾಗ್

ಹೃದಯದ ಭಾವನೆಗಳ ಕನ್ನಡಿ

ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ನನ್ನ ತೆರೆದ ಮನದಲ್ಲಿ ಪ್ರತ್ಯಕ್ಷವಾಗುತ್ತವೆ

ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

April 29, 2008 - 4:06pm — roopablrao

ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?
ಬಸ್ ಸ್ಟಾಪ್‌ನಲ್ಲಿ ನೆಪ ಮಾತ್ರಕ್ಕೆ ಕುಳಿತಿದ್ದರು ಆ ಇಬ್ಬರು ಸ್ನೇಹಿತೆಯರು ಬರೀ ಸ್ನೇಹಿತೆಯರೆಂದರೆ ಸಾಲದು ದೇಹ ಪ್ರಾಣ ಎಂಬತಿದ್ದರು. ಕಾಲೇಜ್ ಬಿಟ್ಟೊಡನೆ ಸೀದ ಮನೆಗೆ ಹೋಗುವ ಮಾತೆ ಅವರಲ್ಲಿರಲಿಲ್ಲ. ಬಸ್ ಸ್ಟಾಪ್‍ನಲ್ಲಿ ಕೂರುವುದು ಪಾರ್ಕ್ಗೆ ಹೋಗುವುದು . ದುಡ್ಡಿದ್ದರೆ ಬೇಕರಿಗೆ ಹೋಗಿ ತಿಂದುಕೊಂಡು ಮಾತಾಡುವುದು. ಮಾತಿಗೆ ಬರವೇ ಇರಲಿಲ್ಲ
ಮೂರು ಜನ್ಮಕ್ಕೆ ಸಾಲುವಷ್ಟು ಮಾತಿತ್ತೇನೊ ಅವರಲ್ಲಿ. ಇಂದೂ ಹಾಗೆ ಮಾತು ನಡೆಯುತ್ತಿತ್ತು
"ಏ ಪ್ರಿಯ ಯಾಕೆ ಸ್ವಲ್ಪ ದಿನದಿಂದ ಏನೊ ಒಂಥರ ಇದೀಯ ಏನೊ ಕಳ್ಕೊಂಡವಳ ಹಾಗೆ . ಸುಮ್ಮ್ನೆ ಕೂತ್ಕೊಂಡೀರ್ತೀಯ . ಏನು ವಿಷಯ ? ಲವ್ವಾ?"
ಪ್ರಿಯ ನಾಚಿಕೆಯಿಂದ ತಲೆಯಾಡಿಸಿದಳು
" ಏ ಕಳ್ಳಿ ಯಾರೆ ಅದು .ದಿನದಲ್ಲಿ ಮುಕ್ಕಾಲು ಪಾಲು ನಂಜತೆನೇ ಇರ್ತೀಯ . ಇದು ಹ್ಯಾಗೆ ಸಾಧ್ಯ.
ಹೋಗಲಿ ಯಾರೆ ಅವನು ನನ್ನ ಗೆಳತೀ ಮನಸನ್ನ ಹಾರಿಸಿಕೊಂಡವನು?" ಸ್ನೇಹಾಳ ಪ್ರಶ್ನೆಗೆ ಉತ್ತರಿಸಲಾರೆ ಎಂಬಂತೆ ತಲೆ ಆಡಿಸಿದಳು ಪ್ರಿಯ.
"ನನ್ನ ಹತ್ತಿರ ಮುಚ್ಚಿಡಬೇಡ . ನಂಗೆ ಹೇಳೆ ಪ್ಲೀಸ್"
ಪ್ರಿಯ ತನ್ನಲ್ಲಿದ್ದ ರೆಕಾರ್ಡ್ ಬುಕ್ ತೆಗೆದು ಅದರಲ್ಲಿದ್ದ ಲೇಬಲ್‍ನ ಮೇಲಿದ್ದ ಹೆಸರನ್ನು ತೋರಿದಳು.
ಹೆಸರು ನೋಡುತಿದ್ದಂತೆ ನಂಬಲಾಗದವಳಂತೆ ಅಚ್ಚರಿಯಿಂದ ಪ್ರಿಯಳನ್ನು ನೋಡಿದಳು.
ಅದು ಅವರಿಬ್ಬರ ಕ್ಲೋಸ್ ಫ್ರೆಂಡ್ ರವಿಯ ಬುಕ್ .
ಈ ಮೂವರು ಭೂಮಿಯ ಮೇಲೆ ಹುಟ್ಟಿದ್ದೇ ಈ ಸ್ನೇಹಕ್ಕಾಗಿ ಎಂಬಂತಿದ್ದರು.
ಕಾಲೇಜಿನ ಯಾವ ಮೂಲೆಯಲ್ಲಾದರೂ ಒಬ್ಬರಿದ್ದರೆ ಇನ್ನಿಬ್ಬರು ಇರುತ್ತಾರೆ ಎನ್ನುವಂತಿತ್ತು.
ಯಾರಾದರೂ ಒಬ್ಬರಿಗೆ ಯಾರಿಂದಲೋ ನೋವಾಗಿದೆ ಎಂದರೆ ಮೂರು ಜನ ಜಗಳಕ್ಕೆ ರೆಡಿ.
ಯಾರೋ ಒಬ್ಬರು ರಜಾ ಹಾಕಿದರೆ ಇನ್ನಿಬ್ಬರಿಗೆ ಕ್ಲಾಸ್ ಬೋರು ಕೂಡಲೆ ಕ್ಲಾಸ್‌ನಿಂದ ಮಾಯವಾಗುತ್ತಿದ್ದರು.
ಎಲ್ಲರೂ ರವಿಗೆ ರೇಗಿಸುತ್ತಿದ್ದರು. ಇಬ್ಬರು ಹುಡುಗಿಯರನ್ನು ಪಟಾಯಿಸಿಬಿಟ್ಟಿದ್ದೀಯಾ ಅಂತ.
ಆದರೆ ರವಿ ಇವರಿಬ್ಬರ ಬಗ್ಗೆ ಎಂದೂ ಅಂತಹ ಭಾವನೆಯನ್ನ ವ್ಯಕ್ತ ಪಡಿಸಿರಲಿಲ್ಲ.
" ಹೆಯ್ ಪ್ರಿಯ ಆರ್ ಯು ಶ್ಯೂರ್ ? ಇದು ರವಿಗೆ ಗೊತ್ತಾ?"
"ಇಲ್ಲಾ ಕಣೆ ಅವನಿಗೆ ಹೇಗೆ ಹೇಳಲಿ ಅಂತ ತಿಳೀತಿಲ್ಲ. ಅವನು ಯಾವತ್ತು ನನ್ನ ಜೊತೆ ಆ ಥರ ಬಿಹೇವ್ ಮಾಡಿಲ್ಲ . ಅವನಿಗೆ ಈ ವಿಷಯ ಹೇಳೊ ಕೆಲಸಾನ್ ನೀನೆ ಮಾಡಬೇಕು. ಪ್ಲೀಸ್ ಕಣೇ"
"ಸರಿ ಕಣೆ ಲೆಟ್ ಮಿ ಟ್ರೈ."
" ಪ್ಲೀಸ ಸ್ನೇಹ ನಂಗೆ ಅವನಲ್ಲದೆ ಬೇರೆ ಯಾರು ಹಿಡಿಸ್ತಾ ಇಲ್ಲ. ಊಟ ತಿಂಡಿ ಸಹಾ ಬೇಡ ಅನ್ನಿಸ್ತಿದೆ. ನೀನವನ್ನ ಒಪ್ಪಿಸಲೇ ಬೇಕು"
"ಆಯ್ತು " ಜೋರಾಗಿಯೆ ಕಿರುಚಿದಳು
ಅಷ್ಟ್ರಲ್ಲಿ ಗಾಡಿ ಬಂದು ನಿಂತ ಶಬ್ಧವಾಯಿತು . ರವಿ ಬಂದು ನಿಂತಿದ್ದ.
"ಏನ್ರೇ ಇನ್ನೂ ಮೀಟಿಂಗ್ ಮುಗ್ದಿಲ್ಲವಾ, ನಡೀರಿ ಟಿಕೆಟ್ ತಂದಿದೀನಿ ಹೋಗೋಣಾ"
"ರವಿ ಇವತ್ತು ರಾಗಿಗುಡ್ಡ ದೇವಸ್ಥಾನಕ್ಕೆ ಹೋಗೋಣ. ಫಿಲ್ಮ್ ಬೇಡ " ಸ್ನೇಹ ನುಡಿದಳು.
" ಯಾಕೆ ನೆನ್ನೆ ತಾನೆ ಹೇಳ್ತಿದ್ರಿ . ಹೋಗೋಣ ಅಂತ ಇದೇನು ಹೊಸಾ ಆಟ?"
"ಪ್ಲೀಸ್ ಕಣೋ . ಟಿಕೆಟ್ನ ಮಹೇಶಗೆ ಕೊಟ್ಬಿಡು ಅವನು ಅವನ ಫ್ರೆಂಡ್ ನೋಡ್ಕೋತಾರೆ."
"ಆಯ್ತು ಅದಿರ್ಲಿ ಯಾಕೆ ಪ್ರಿಯಂಗೆ ಏನಾಯಿತು ಒಂಚೂರು ಬಾಯೆ ಬಿಡ್ತಿಲ್ಲ"
"ಅದನ್ನೆ ಮಾತಾಡ್ಬೇಕು . ನೀನು ಹಿಂದೆ ಬಾ ನಾವು ಆಟೋನಲ್ಲಿ ಹೋಗ್ತೀವಿ"
"ಸರಿ"
ದೇವಸ್ಥಾನದ ಹತ್ತಿರ
ಪ್ರಿಯ ಒಂದೆಡೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿ ಸ್ನೇಹ ಹಾಗು ರವಿಯ ಮಾತು ಕತೆ ನಡೆಯುತ್ತಿತು
ರವಿ " ಸ್ನೇಹ ಇದೇನಿದು ಹೊಸ ನಾಟಕ ನಿಮ್ಮಿಬ್ಬರದು. ನಾನು ಯಾವತ್ತು ಪ್ರಿಯನ್ನಾಗಲಿ ನಿನ್ನಾಗಲಿ ಆ ದೃಷ್ಟಿನಲ್ಲಿ ನೋಡಿಲ್ಲ. ತಮಾಷೆ ಮಾಡಬೇಡ"
"ಇಲ್ಲ ನಾನು ತಮಾಷೆ ಮಾಡ್ತಿಲ್ಲ . ನೋಡು ಈ ಮಾತನ್ನು ಅವಳ ಮುಂದೆ ಆಡಬೇಡ. ಏನಾಗಿದೆಯೋ ಪ್ರಿಯಾಗೆ ಒಳ್ಳೆ ಗೊಂಬೆ ಥರಾ ಇದ್ದಾಳೆ . ಬೇರೆ ಹುಡುಗರೆಲ್ಲಾ ಅವಳ ಹಿಂದೆ ಬೀಳ್ತಾರೆ . ಅಂತಹದ್ರಲ್ಲಿ ನೀನು. ಹ್ಯಾಗೂ ನಾವೆಲ್ಲಾ ಒಂದೆ ಕ್ಯಾಸ್ಟ್. ಇನ್ನೇನಪ್ಪ ಯೋಚನೆ."
" ಸ್ನೇಹಾ ಅದು................"
"ಅದೂ ಇಲ್ಲ ಇದೂ ಇಲ್ಲಾ. ನೀನೀಗ ಪ್ರಿಯ ಹತ್ರ ಹೋಗಿ ಐ.ಲೌ. ಯು ಅಂತ ಹೇಳ್ತೀಯ ಸರೀನಾ . ಹೋಗೊ"
ಸ್ನೇಹ ಅಲ್ಲಿಯೇ ನಿಂತಳು. ರವಿ ಪ್ರಿಯಾಳ ಬಳಿ ಹೋಗಿ ಹೇಳಿದ . ಪ್ರಿಯಾಳ ಮುಖ ಅರಳಿತು.

ಸ್ನೇಹಾಳ ಮನಸಲ್ಲಿ ಏನೂ ಒಂಥರ ಹೇಳಲಾರದ ನೋವು. ಯಾಕೆ ಅಂತ ತಿಳಿಯಲಿಲ್ಲ.
----------------------------------------------------
ಮಾರನೆಯ ದಿನ

" ಅಯ್ಯೊ ಪಾಪ ಜೀವ ಹೊರಟು ಹೋಗಿದೆ ನೋಡಪ್ಪ ಪಾಪ ಬರಿ ದೇಹ ಮಾತ್ರ ಕ್ಲಾಸ್‌ನ್ನಲ್ಲಿ ಕೂತಿದೆ." ಕವಿತಾ ರೇಗಿಸುತ್ತಿದ್ದಳು .

ಅವತ್ತು ಕಾಲೇಜಿಗೆ ಬಂದಾಗಿನಿಂದ ಮೊದಲಬಾರಿಗೆ ಸ್ನೇಹ ಒಂಟಿಯಾಗಿ ಕುಳಿತಿದ್ದಳು. ರವಿ ಪ್ರಿಯ ಅಂದು ಕ್ಲಾಸ್‌ಗೆ ಚಕ್ಕರ್ ಹಾಕಿ ಎಲ್ಲೊ ಹೋಗಿದ್ದರು.

"ಏನೆ ಸ್ನೇಹ ನೀನೇನೊ ಬ್ರೋಕರ್ ಕೆಲಸ ಬೇರೆ ಮಾಡಿದಿಯಂತೆ. ಇವಾಗ ಎಲ್ಲಿ ನಿನ್ನ ಪ್ರಾಣ ಸ್ನೇಹಿತರುಗಳು ಪ್ರಾಣ ತೆಕ್ಕೊಂಡು ಹೋಗಿಬಿಟ್ಟರಾ."ಕವಿತಾಳ ವ್ಯಂಗ್ಯ ಮುಂದುವರಿಯುತಿತ್ತು
" ಕವಿತಾ ಪ್ಲೀಸ್ ಶಟ್ ಅಪ್ "

ಕ್ಲಾಸ್ ನಲ್ಲಿ ಕೂರಲಾರದೆ ಹೊರಗೆ ಬಂದಳು ಜೀವನದಲ್ಲಿ ಮೊದಲಬಾರಿಗೆ ಒಂಟಿ ಎಂಬ ಭಾವನೆ ಬಂದಿತು.

ಅಂದಿನಿಂದ ರವಿ ಹಾಗು ಪ್ರಿಯ ಹೊರಗಡೆ ಹೋಗುವುದು . ಸ್ನೇಹಳನ್ನು ಅವಾಯ್ಡ್ ಮಾಡುವುದು ನಡೆಯಿತು.

ಸ್ನೇಹಾ ಈಗ ಇದಕ್ಕೆ ಹೊಂದಿಕೊಂಡುಬಿಟ್ಟಳು
ಆದರೆ ಅವಳ ಮನಸಲ್ಲಿ ಮೂಡಿದ ಪ್ರಶ್ನೆಯೊಂದಕ್ಕೆ ಉತ್ತರ ಸಿಗಲ್ಲಿಲ್ಲ.

ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

Ornamental seperator
  • roopablrao ರವರ ಬ್ಲಾಗ್
  • Login or register to post comments
  • 621 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 29, 2008 - 4:18pm — gururajkodkani

ಉ: ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

gururajkodkani's picture

ಗುಱುಱಾಜ
www.kannadaguru.blogspot.com

ನಿಮಗೊ೦ದು ಗುಟ್ಟು ಹೇಳಲಾ ರೂಪಾ,

ನೀವ್ಯಾಕೋ ನನ್ನ ಜೀವನದ ಸುತ್ತ ಮುತ್ತಲಿನ ಕತೆಗಳನ್ನೇ ಬರೆಯುತ್ತಿರೇನೋ ಅನಿಸುತ್ತದೆ.ಅಥವಾ ನೀವು ಬರೆಯುವ ಕತೆಗಳು ನಮ್ಮ surroundingsನ ಸಾಕಷ್ಟು ಜನರ ಜೀವನಕ್ಕೆ ಹೋಲುತ್ತದೆ.ಪದವಿಯಲ್ಲಿ ನನ್ನ ಸ್ನೇಹಿತ ಮತ್ತು ಸ್ನೇಹಿತೆ ನನಗೆ ಇದೇ ರೀತಿ ಮಾಡಿದರು.ಇದೇ ಕತೆ ಸ್ವಲ್ಪ ವ್ಯತ್ಯಾಸವೆ೦ದರೇ ನಾವಿಬ್ಬರೂ ಹುಡುಗರು ,ಒಬ್ಬಳು ಹುಡುಗಿ.ಎಷ್ಟು ಸ೦ತೋಷವಾಗಿ ಮೂವರು ಓಡಾಡುತ್ತಿದ್ದೆವು.ಅದೇನೋ ಈ ಪ್ರೇಮವೆ೦ಬುದು ಮಧ್ಯೆ ಬ೦ದು ಬಿಟ್ಟಿತು,ನಾನೇ ಮಿಡಿಯೇಟರ್ ಆದೆ.ಕತೆಯ ಅ೦ತ್ಯವೂ ಹೀಗೆ ಆಯಿತು.ಆದರೆ ಆಗ ನನಗೆ ಅಷ್ಟೊ೦ದು ಬೇಸರವೆನಿಸಲಿಲ್ಲ.ಇವತ್ತು ನಿಮ್ಮ ಕತೆ ಓದಿ ಅದ್ಯಾಕೋ ಕಣ್ಣು ನೀರಾಡಿತು.

ಧನ್ಯವಾದಗಳು

ಕೋನೆಗೊ೦ದು ಪ್ರಶ್ನೆ ನಿಮಗೆ.........................

ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 4:25pm — roopablrao

ಉ: ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

roopablrao's picture

ಧನ್ಯವಾದಗಳು ಗುರುರಾಜ್‌ರವರೆ

ನಾನು ಒಮ್ಮೊಮ್ಮೆ ಯೋಚಿಸುತ್ತೇನೆ

ಪ್ರೀತಿಗೆ ಸ್ನೇಹಾನ ಆಷೇಕೆ ಸಂಬಂಧಗಳನ್ನು ಕೂಡ ಮರೆಸೋ ಶಕ್ತಿ ಖಂಡಿತಾ ಇದೆ
ಅಂತಾ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 5:20pm — Sunil Jayaprakash

ಉ: ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

Sunil Jayaprakash's picture

ಸ್ನೇಹಾನಾ, ಪ್ರೀತೀನಾ ?

ರೂಪಾಬಿಎಲರಾವ್, ಒಳ್ಳೆಯ ಕತೆ. ಒಬ್ಬಳ ಹೆಸರು ಪ್ರಿಯಾ ಮತ್ತೊಬ್ಬಳದ್ದು ಸ್ನೇಹ ಅಂತ ಇಟ್ಟಿದ್ದು, ಕಾಕತಾಳೀಯವೇ ?

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 5:23pm — roopablrao

ಉ: ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

roopablrao's picture

ಸುಮ್ಮನ್ದೆ ಎರೆಡು ಹೆಸರು ಬೇಕಿತ್ತು.
ನನಗೆ ಸ್ನೇಹ ತುಂಬ ಇಷ್ಟವಾದ ಹೆಸರು.

actuallly ನಾನಿಡಬೇಕಾದ ಟೈಟಲ್ " ಸ್ನೇಹಾನಾ ಪ್ರೀತೀನಾ " ಅಗ್ಬೇಕಿತ್ತು ಆದ್ರೆ ನಂಗೆ ಆ ಸಿನಿಮಾ ಇಷ್ಟ ಇಲ್ಲ ಅದಕ್ಕೆ ಇಡಲಿಲ್ಲ

http://thereda-mana.blogspot.com/

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 5:27pm — roopablrao

ಉ: ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

roopablrao's picture

" ರೂಪಾಬಿಎಲರಾವ್, " ಅನ್ನೋದು ಯೂಸರ್ ನೇಮ್ . ದಯವಿಟ್ಟು ನನ್ನ ನಿಜ ನಾಮಾಧೇಯ ರೂಪಾವನ್ನೆ ಉಪಯೋಗಿಸಿ. ಯಾಕೆಂದರೆ ಅದನ್ನು ನೋಡಿದಾಗಲೆಲ್ಲಾ ಇಷ್ಟು ದೊಡ್ಡಹೆಸರು ನನ್ನದಾ ಅಂತ ಬೇಜಾರಾಗುತ್ತೆ

http://thereda-mana.blogspot.com/

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 7:30pm — Sunil Jayaprakash

ಉ: ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

Sunil Jayaprakash's picture

ಆಯ್ತು ರೂಪ ಅವರೇ. ರೂಪ ಅಂತಲೇ ಬಳಸೋಣವಾಗಲಿ. ಮಜಾ ಗೊತ್ತಾ, "ಸ್ನೇಹಾನಾ ಪ್ರೀತೀನಾ" ನೋಡಕ್ಕೆ ಹೋಗಿ ಇಂಟರ್ವೆಲ್ ಮುಂಚೇನೇ ಎದ್ದು ಬಂದಿದ್ದೆ ನಾನು Smiling

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 9:26pm — uniquesupri

ಉ: ಪ್ರೀತಿಗೆ ಸ್ನೇಹಾನ ಮರೆಸೋ ಶಕ್ತಿ ಇರುತ್ತಾ?

uniquesupri's picture

‘ಅವರಿಬ್ಬರ ಸ್ನೇಹ ಪ್ರೀತಿಯಲ್ಲಿ ಅಂತ್ಯವಾಯಿತು...’, ‘ಅವರಿಬ್ಬರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು...’ ಎಂದೆಲ್ಲಾ ಲೋಕರೂಢಿಯಲ್ಲಿ ಬಳಸುವ ಮಾತುಗಳು ನಮ್ಮನ್ನು ಇಂಥ ಅನವಶ್ಯಕ ಗೊಂದಲಗಳಿಗೆ ತಳ್ಳುತ್ತವೆ. ಸ್ನೇಹದ ಜಾಗವನ್ನು ಪ್ರೀತಿ ಆಕ್ರಮಿಸಿಕೊಳ್ಳಲು ಅದು ಭೌತಿಕ ಸಂಗತಿಯಲ್ಲ. ಪ್ರೇಮಿಗಳಿಬ್ಬರು ಒಳ್ಳೆಯ ಸ್ನೇಹಿತರಾಗಿರಬಹುದು, ಸಂಬಂಧಗಳಲ್ಲಿ, ಭಾವನೆಗಳಲ್ಲಿ ಇದು ಸ್ನೇಹ, ಇದು ಮೋಹ, ಇದು ಆಕರ್ಷಣೆ, ಇದೇ ಸಾಕ್ಷಾತ್ ಪವಿತ್ರ ಪ್ರೀತಿ ಅಂತೆಲ್ಲಾ ವ್ಯಾಖ್ಯಾನಿಸುವುದು ಸುಲಭವಲ್ಲ. ಅಸಲಿಗೆ ಪ್ರೀತಿಯೆಂಬುದು ಅಷ್ಟು ಶಕ್ತಿಶಾಲಿ, ತರ್ಕಕ್ಕೆ ನಿಲುಕದ್ದೇ ಆಗಿದ್ದರೆ ಒಬ್ಬ ಹುಡುಗ ಹಾಗೂ ಒಬ್ಬ ಹುಡುಗಿಯನ್ನೇ ಏಕೆ ಪ್ರೀತಿಸಬೇಕು ಎಂದು ಬಯಸುತ್ತೇವೆ?

ಕೆಲವು ಸಂಗತಿಗಳನ್ನು ಅನುಭವಿಸಿದರೆ ಚೆಂದವಂತಾರೆ....
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚರ್ಚೆ-ಸಂಧಾನ
  • ಸ್ನೇಹ ನಿನಾದ
  • ಸಣ್ಣ ಟ್ರಿಪ್
  • ನನ್ನ ಹಂಬಲ
  • ಸ್ನೇಹ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator