ಅಕಶೇರುಕ ಚಂಪಾ ಮತ್ತು ಸರೀಸೃಪ ಅನಂತಮೂರ್ತಿ
ಸುದ್ದಿಯಲ್ಲಿ ಕೇಳಿದ್ದು, ವೃತ್ತ ಪತ್ರಿಕೆಯಲ್ಲಿ ಓದಿದ್ದು.
ಸಂದರ್ಭ: ಅನಂತಮೂರ್ತಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು.
ಸ್ವಾರಸ್ಯ: ಸ್ವಾರಸ್ಯವೇ ಸ್ವಾರಸ್ಯ.
ಅನಂತಮೂರ್ತಿಯವರು ಪಾಪ ಕುಮಾರಸ್ವಾಮಿಗೆ ಹೇಳದೆ ಕೇಳದೆ ಕಣಕ್ಕಿಳಿದರಂತೆ. ಮಣ್ಣಿನ ಮೊಮ್ಮಗನಿಗೆ ಸಿಟ್ಟು ಬಂದಿರಲಿಕ್ಕೆ ಸಾಕು.
ಕುಮಾರಸ್ವಾಮಿ: "ಯಾರ್ರೀ ಅವರು ಅನಂತಮೂರ್ತಿ?"
ಆ ಮನುಷ್ಯ ಅಜ್ಞ. ಕ್ಷಮಿಸಿಬಿಡೋಣ.
ಇದಾದ ಮೇಲೆ ಕೆಲವರು ಅನಂತಮೂರ್ತಿಯವರ ಪರವಾಗಿಯೂ ಕೆಲವರು ವಿರೋಧಿಸಿಯೂ ಮಾತಾಡಿದರು. ಎಂದಿನಂತೆ ಚಂಪಾ ವಿರೋಧಿಸಿದ್ದರು.
ಅನಂತಮೂರ್ತಿಯವರು ವ್ಯಂಗ್ಯದ ಚತುರೋಕ್ತಿಗಳನ್ನುದುರಿಸಿದರು.
ಅನಂತಮೂರ್ತಿ: "ಚಂಪಾ ಅವರಿಗೆ ಸದಾ ಕುಟುಕುತ್ತಿದ್ದರಷ್ಟೇ ತಾವು ವೃಶ್ಚಿಕ ರಾಶಿಗೆ ಸೇರಿದ ಧೀಮಂತರು ಎಂಬ ಭಾವನೆ ಇರಬೇಕು."
ಚಂಪಾ ಪ್ರತಿಕ್ರಿಯಿಸಿದರು. (ಸುದ್ದಿಯಲ್ಲಿ ಕೇಳಿದ್ದು; ಅಕ್ಷರಶಃ ನೆನಪಿಲ್ಲ.)
ಚಂಪಾ: "ಅನಂತಮೂರ್ತಿಯವರು ನನಗ ಚೇಳು ಅಂತ ಕರದಾರ. ಕುಟುಕಿಸಿಕೊಂಡದ್ದರ ನೆನಪು ಅನುಭವ ಇರಬೇಕು ಅವರಿಗೆ. ಇರಲಿ. ಅವರದ ಆದ ಆ ಪ್ರತೀಕ ಏನು ಇದೆ, metaphor ಅಂತಾರಲ್ಲ.. ಅದನ್ನ ಮುಂದುವರಿಸಿದರ, ನಾನು ಚೇಳಾದರ ಅವರು ಘಟಸರ್ಪ. ಕನ್ನಡದ ಮಟ್ಟಿಗೆ ಕಳೆದ 25 ವರ್ಷಗಳಿಂದ ಅವರು ಹಾವಿನ ಗತೆ ವಿಷ ಕಾರುವ ಕೆಲಸ ಮಾಡ್ಯಾರ. ಹಿಂಗಾಗಿ ಅವರು ಘಟಸರ್ಪ."
----
ಇಂತಿರ್ಪ ಅಜ್ಞಾನಿ ಕುಮಾರಸ್ವಾಮಿಯೂ, ಅಕಶೇರುಕ ಚಂಪಾನೂ ಹಾಗೂ ಸರೀಸೃಪ ಅನಂತಮೂರ್ತಿಯೂ ಎಂಬ ಪ್ರಹಸನ ದಿನನಿತ್ಯವೂ ನವನವೀನ ವರಸೆ ಮಟ್ಟುಗಳೊಂದಿಗೆ ಹಾಸ್ಯರಸಾಸ್ವಾದಕ್ಕಾಗಿ ಚಾತಕ ಪಕ್ಷಿಗಳಂತೆ ಬಾಯ್ದೆರೆದು ಕುಳಿತಿರುವ ವಿಶಾಲ ಕರ್ನಾಟಕದ ಫಾಲ್ತೂ ಮಂದಿಯೆದುರಿಗೆ ಪ್ರಕಾಶಿತವಾಗಲಿ ಎಂದು ಆ ದೊಡ್ಡ ಗಣಪತಿಯಲ್ಲೂ ಮತ್ತು ಅವನ ಬಲಬದಿಗೆ ವಿಶ್ರಮಿಸುತ್ತಿರುವ ದೊಡ್ಡ ಬಸವಣ್ಣನಲ್ಲೂ ಸಲುಗೆಯಿಂದ ಬಿನ್ನಪ ಸಲ್ಲಿಸುತ್ತೇನೆ.
----
(ಯಾರೂ ಉದ್ವಿಗ್ನರಾಗಬೇಡಿ. ಇದು ಕೇವಲ ಹಾಸ್ಯ.
)

- sanket ರವರ ಬ್ಲಾಗ್
- Login or register to post comments
- 1015 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಹಾವು ಚೇಳು
ಸಖತ್ತಾಗಿತ್ತು!!!
ಅಕಶೇರುಕ ಅಂದರೆ ಚೇಳು ತಾನೆ?
ಒಳ್ಳೆಯ ಪ್ರಸಂಗ
Re: ಹಾವು ಚೇಳು
ಅಕಶೇರುಕ ಎಂದರೆ ಬೆನ್ನೆಲುಬಿಲ್ಲದ ಪ್ರಾಣಿ ಎಂದು ಅರ್ಥ.
ಸಿಗೋಣ,
ಪವನಜ
ಮಜಾನೋ ಮಜಾ
ಇಂತಹದ್ರಲ್ಲೂ ಹಾಸ್ಯವನ್ನು ಹುಡುಕುವ ಸಂಕೇತರಿಗೆ ಧನ್ಯವಾದಗಳು...
ಇಷ್ಟೇ ಅಲ್ಲಾ...ಕನ್ನಡಕ್ಕೆ ಒಂದು ಪದದ ಹೊಸ ಅರ್ಥವನ್ನು ಮಾನ್ಯ ಘಟಸರ್ಪ(ಹಲ್ಲಿಲ್ಲದ) ರವರು ಧಾನ ಮಾಡಿದ್ದಾರೆ... ಅದೇ ಶಾಸ್ತ್ರೀಯ=ಸತ್ತ...ದಯವಿಟ್ಟು ನಿಮ್ಮ ಪುಟ್ಟ ಕನ್ನಡ ರತ್ನಕೋಶದಲ್ಲಿ ಪೆನ್ನಿನಲ್ಲಿ ಬರೆದು ಸೇರಿಸಿ...
ಇವರಿಗೆ ಕನ್ನಡಾಂಬೆಯು ಆಟಾಡಿ ಬೆಳೆದಿದ್ದು ಸಂಸ್ಕೃತ ಅಜ್ಜಿಯ ತೊಡೆಯಮೇಲೆ ಎಂಬುದು ಮರೆಯುವುದು ಸಾಧ್ಯವಾಗಿದ್ದಾದರೂ ಹೇಗೆ?
ಏನೇ ಅನ್ನಿ ಇವರಿಗೆ ಒಂದು ಸಾರ್ವಜನಿಕ ಪಾತ್ರತೆಯ ಬಗ್ಗೆ ಒಂದಿಷ್ಟೂ ಅರಿವಿಲ್ಲ...
ಇರಲಿ ನಮ್ಮ tension ಗಳ ಮಧ್ಯೆ ಹೀಗೆ ಬಿಟ್ಟಿ ಮಜಾ ಕೊಡುತ್ತಾರಲ್ಲ ಅದಕ್ಕಾದರೂ ಧನ್ಯ ವಾದಗಳನ್ನ ಅರ್ಪಿಸಲೇಬೇಕು....
ಕಶೇರುಕ ಅಕಶೇರುಕ--- ೪ ನೇ ತರಗತಿಯ ವಿಜ್ನಾನ(ಜೀವ ಶಾಸ್ತ್ರ) ಪಾಠ...vertibrates invertibrates ಕೇಳಿಲ್ಲವೇ....ಅವೇ .....ಘಟಸರ್ಪವೂ ಅಕಶೇರುಕವೇ..ಹಹಹಹಹಹಾಹಹ್...
Re: ಮಜಾನೋ ಮಜಾ
ಏನೇ ಅನ್ನಿ ಇವರಿಗೆ ಒಂದು ಸಾರ್ವಜನಿಕ ಪಾತ್ರತೆಯ ಬಗ್ಗೆ ಒಂದಿಷ್ಟೂ ಅರಿವಿಲ್ಲ...
ಪಾತ್ರತೆ? ಇನ್ನೊಂದು 'ತೆ'ಗಳಿಕೆ?
(ಅಂದಹಾಗೆ, ನಿಜವಾಗಿಯೂ 'ಗಳಿಸುವ' ತೆ ಯಾವುದು ಗೊತ್ತೇ? 'ಹಣತೆ'!)
- ಶ್ರೀವತ್ಸ ಜೋಶಿ
'ಗಳಿಸುವ' ತೆ
(ಅಂದಹಾಗೆ, ನಿಜವಾಗಿಯೂ 'ಗಳಿಸುವ' ತೆ ಯಾವುದು ಗೊತ್ತೇ? 'ಹಣತೆ'!)
'ಜನತೆ' ಎಂತಹ ತೆ? ಎಮ್ ಎಲ್ ಏ ಗಳಿಗೆ ಪ್ರಿಯವಾದ ತೆ ಯೋ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: 'ಗಳಿಸುವ' ತೆ
'ಜನತೆ' ಎಂತಹ ತೆ? ಎಮ್ ಎಲ್ ಏ ಗಳಿಗೆ ಪ್ರಿಯವಾದ ತೆ ಯೋ?
ಹೌದು, ನಮ್ಮ ದೇಶದಲ್ಲಿ ಅದಕ್ಕಿಲ್ಲ 'ಕೊರತೆ'!
- ಶ್ರೀವತ್ಸ ಜೋಶಿ
ಪಾತ್ರತೆ
ಪಾತ್ರತೆಯೂ ಕೂಡ ಸಂಸ್ಕೃತದ "ಆ"-ಕಾರಾಂತದಿಂದ ಕನ್ನಡದ "ಎ"-ಕಾರಾಂತಕ್ಕೆ ರೂಪಾಂತರಗೊಂಡ ಪದ.
ಪಾತ್ರತಾ (ಸಂಸ್ಕೃತ) - ಪಾತ್ರತೆ (ಕನ್ನಡ)
ಹಾಗಾಗಿ, ಇದು ಗಳಿಸುವ "ತೆ"ಯಲ್ಲ! ಗಳಿಸುವ "ತೆ", 'ಹಣತೆ"ಯೇ ಸರಿ
Re: ಪಾತ್ರತೆ
ಪಾತ್ರತಾ (ಸಂಸ್ಕೃತ) - ಪಾತ್ರತೆ (ಕನ್ನಡ)
ಧನ್ಯವಾದಗಳು.
ಈಗಷ್ಟೇ kannadakasturi.com ದಲ್ಲೂ ನೋಡಿದೆ, 'ಪಾತ್ರತೆ' ಪದಕ್ಕೆ Qualification ಎಂದು ಅರ್ಥ ಕೊಟ್ಟಿದ್ದಾರೆ. ಶ್ರೀಶ ಅವರ ವಾಕ್ಯದಲ್ಲಿ ಆ ಪದಕ್ಕೆ 'Responsibility' ಎಂಬ ಅರ್ಥ ಹೆಚ್ಚು ಸಮಂಜಸವಾಗುತ್ತದೇನೊ, ಅಲ್ಲವೇ?
- ಶ್ರೀವತ್ಸ ಜೋಶಿ
Re: ಮಜಾನೋ ಮಜಾ
ಈಗಾಗಲೇ ಮಸಾಲ ಭರಿತ ನಾಟಕವಾಗಿರುವ ಈ ಸಂಗತಿಗೆ ಮತ್ತಷ್ಟು controversial ವಿಷಯಗಳನ್ನು ಸೇರಿಸಿದ್ದೀರಲ್ಲ
೧. "ಶಾಸ್ತ್ರೀಯ=ಸತ್ತ..." !!??
೨. "ಇವರಿಗೆ ಕನ್ನಡಾಂಬೆಯು ಆಟಾಡಿ ಬೆಳೆದಿದ್ದು ಸಂಸ್ಕೃತ ಅಜ್ಜಿಯ ತೊಡೆಯಮೇಲೆ ಎಂಬುದು ಮರೆಯುವುದು ಸಾಧ್ಯವಾಗಿದ್ದಾದರೂ ಹೇಗೆ?"
೩. 'ಪಾತ್ರತೆ'ಯ ಚರ್ಚೆ ಆಗಲೇ ಆರಂಭಗೊಂಡಿದೆ.
ನಿಮ್ಮ ಮೊದಲೆರೆಡು generalizationsಗಳು ವಿವಾದಕ್ಕೋಸ್ಕರವಾಗಿಯೇ ಬರೆದಿದ್ದರೆ ಪರವಾಗಿಲ್ಲ.. ಆದರೆ ಎರಡೂ ಸತ್ಯವಲ್ಲ!
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ದೊಡ್ಡವರ ಸಣ್ಣತನ
ಗಣಪತಿ ಮತ್ತು ಬಸವಣ್ಣನಿಗೆ ನಿಮ್ಮ ಬಿನ್ನಪ ತಲುಪಿದ ಹಾಗೆ ಕಾಣುತ್ತದೆ. ಪ್ರಹಸನ ಮುಂದುವರಿದಿದೆ.ಇನ್ನು ಕೆಲವು ಪಾತ್ರಧಾರಿಗಳ ರಂಗಪ್ರವೇಶ ಆಗಿದೆ.
ನಿನ್ನೆಯ ದಿನಪತ್ರಿಕೆಯಲ್ಲಿ ಓದಿದ್ದು:
ಅನಂತಮೂರ್ತಿ:ದೇಜಗೌಗೆ ವ್ಯಾಧಿ!
ಚಿದಾನಂದಮೂರ್ತಿಗೆ, ಕಲ್ಲಿನಲ್ಲಿ ಬರೆದುದನ್ನು ಓದುವ ಹಾಗೆ ಹೃದಯದ ಬರಹವನ್ನು ಓದಲಿಕ್ಕೆ ಬರುವುದಿಲ್ಲ.
ಇವತ್ತಿನ ದಿನಪತ್ರಿಕೆಯಲ್ಲಿ ಓದಿದ್ದು:
ಅನಂತಮೂರ್ತಿಯವರ ವಿರುದ್ದ ವಾಕ್ಸಮರ ಹೂಡಲು ಪತ್ರಿಕಾ ವರದಿಗಾರರನ್ನು ಕರೆಸಿ, ಈ ನಾಲ್ವರು ಹೇಳಿದ್ದು(ವದರಿದ್ದು?) ಹೀಗಿದೆ,
ದೇಜಗೌ : ಅನಂತಮೂರ್ತಿ ನನ್ನ ಕಾಲು ಹಿಡಿದಿದಕ್ಕೆ, ನಾನು ಅವನಿಗೆ ಯೂನಿವರ್ಸಿಟಿಯಲ್ಲಿ ರೀಡರ್ ಹುದ್ದೆ ಕೊಟ್ಟೆ.ಹೀಗೆ ಕಾಲು ಹಿಡಿದೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರಬೇಕು..ಮೂರ್ತಿ ಸಾಹಿತ್ಯವನ್ನೇ ಬರೆದಿಲ್ಲ.ಅನಂತನ ಸಾಹಿತ್ಯವೆಲ್ಲಾ ಬೇರೆಡೆಯಿಂದ ಲೂಟಿ ಹೊಡೆದಿರುವುದಾಗಿದೆ.ಸಂಸ್ಕಾರ ಇಂಗ್ಲೀಷ್‌ನ ಭಾಷಾಂತರವಾಗಿದ್ದು,ಇವರ ಭಾಷಾಶೈಲಿ ಯಾರಿಗೂ ಮೆಚ್ಚಿಗೆಯಾಗಿಲ್ಲ. (ಇನ್ನೂ ಪತ್ರಿಕೆಯಲ್ಲಿ ಬರೆಯಲಾಗದ ಶಬ್ಧಗಳನ್ನು ಬಳಸಿದ್ದಾರಂತೆ! )
ಹೆಚೆಸ್ಕೆ ಅಯ್ಯಾಂಗಾರ್: ಜ್ಞಾನಪೀಠ ಪ್ರಸಸ್ತಿ ಬಂದ ಮೇಲೆ ಅನಂತಮೂರ್ತಿಗೆ ಜ್ಞಾನದ ಪಿತ್ತ ನೆತ್ತಿಗೇರಿದೆ.ಆತನೊಬ್ಬ ಅವಕಾಶವಾದಿ.ಕುಲ ಮತ್ತು ಐಶ್ವರ್ಯದ ಮದ ತುಂಬಿ ತುಳುಕುತ್ತಿದೆ.
ಸಿಪಿಕೆ:: ಅನಂತಮೂರ್ತಿ ದ್ವಂದ್ವ ಮೂರ್ತಿ!
ಇವು ಎಲ್ಲದಕ್ಕಿಂತ ಹೆಚ್ಚು ಇಷ್ಟವಾಗಿದ್ದು,ಕೊನೆಗೆ ಮಾತನಾಡಿದ ಲಕ್ಕಪ್ಪ ಗ್‌ಡರ ಈ ಹೇಳಿಕೆ:"ನಾಲಗೆಯ ತೀಟೆ ತೀರಿಸಿಕೊಳ್ಳಲು ಮತ್ತೊಬ್ಬರನ್ನು ಟೀಕಿಸುವುದು ಅಸಂಸ್ಕೃತರ ಲಕ್ಷಣ!"
ಹಹ್ಹಹ್ಹಾ..
ಹಹ್ಹಹ್ಹಾ.. ಹೌದು. ಪ್ರಹಸನ ಮುಂದುವರಿದಿದೆ. ಅವರೆಲ್ಲರೂ "ವಿಶ್ರಾಂತ"ರಲ್ಲವೆ, ಮಾಡೋದಕ್ಕೆ ಕೆಲಸವಂತೂ ಇಲ್ಲ. ಅವರು ಫಾಲ್ತೂ ಮಂದಿಯೋ ನಾವೋ ಗೊತ್ತಿಲ್ಲ.
ಲಕ್ಕಪ್ಪಗೌಡರಿಗೆ ತಮ್ಮ ಮಾತಿನಲ್ಲಿರುವ ವಿಪರ್ಯಾಸದ ಅರಿವಾದರೂ ಇದೆ ಎಂದಷ್ಟೇ ನಾವು ಆಶಿಸಬಹುದು!
ಜಾಣಪೆದ್ದರ ಜಗಳ
ಈ ಎಲ್ಲ ಅತಿರೇಕ ಪಜೀತಿಗಳನ್ನು ನೋಡಿದರೆ....
ಇವರು ಕವಿಗಳೊ, ಕಪಿಗಳೊ, ದೇವರೆ ಬಲ್ಲ.
ಇನ್ನು ಮಿಕ್ಕಿರುವುದೊಂದೆ, ಬೀದಿಗಿಳಿದು ಕುತ್ತಿಗೆ ಪಟ್ಟಿಹಿಡಿದು ಒಬ್ಬರನೊಬ್ಬರು ಜಗ್ಗಾಡುವುದು. ಈಗಾಗಲೆ ಒಬ್ಬರನೊಬ್ಬರು ಮಾತಿನಿಂದ ಜಾಲಾಡುತ್ತಿದ್ದಾರೆ.
ಸಾಮಾನ್ಯರ ಜಗಳ ಬಿಡಿಸಬಹುದು. ಆದರೆ ಜಾಣಪೆದ್ದರ ಜಗಳಬಿಡಿಸಲು ಹೋದರೆ, ನಾವೆ ಸಿಕ್ಕಿಹಾಕಿಕೊಳ್ಳುತ್ತೇವೆ. ಹೀಗಂದುಕೊಂಡೆ ಮಿಕ್ಕ ಮಹನೀಯರು ತೆಪ್ಪಗಿರುವುದು.
ಅಮ್ಮ ಕನ್ನಡಾಂಬೆ ನೀನೆ ಧನ್ಯ!!!