Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › sankul ರವರ ಬ್ಲಾಗ್

ರಾಮ ಸೇತು

October 1, 2007 - 4:28pm — sankul

ರಾಮ ಮತ್ತು ಹನುಮಂತನ ನಡುವೆ ಇತ್ತೀಚೆಗೆ ನಡೆದ ಒಂದು ಸಂಭಾಷಣೆ.

ಬಹಳಷ್ಟು ಹೊತ್ತು 'ರಾಮ ಸೇತು'ವನ್ನು ಅವಲೋಕಿಸಿದ ನಂತರ ರಾಮನೆಂದ "ಹನುಮಂತ, ಬಹಳಷ್ಟು ಶತಮಾನಗಳ ಹಿಂದೆ ನೀನು ಮತ್ತು ನಿನ್ನ ವಾನರ ಸೈನ್ಯ ಸೇರಿ ಎಷ್ಟು ಪರಿಶ್ರಮದಿಂದ ಮತ್ತು ಶ್ರದ್ಢೆಯಿಂದ ಈ ಸೇತುವೆಯನ್ನು ನಿರ್ಮಿಸಿದ್ದಿರಿ. ಹವಾಮಾನ ವೈಪರಿತ್ಯ ಮತ್ತು ಭೂ ಬದಲಾವಣೆಯನ್ನು ಈ ಸೇತುವೆ ಇಷ್ಟೊಂದು ಶತಮಾನಗಳಿಂದ ತಡೆದುಕೊಂಡಿದ್ದೆ ಒಂದು ಅಸಾಮಾನ್ಯ ಸಂಗತಿಯಾಗಿದೆ. ಇತ್ತೀಚೀನ ಮತ್ತು ಅತ್ಯಂತ ಮುಂದುವರೆದ ತಂತ್ರಜ್ಞ್ನಾನದಿಂದ ಹೈದರಾಬಾದ ನಗರದಲ್ಲಿ ಗ್ಯಾಮೊನ ಸಂಸ್ಥೆ ನಿರ್ಮಿಸುತ್ತಿದ್ದ ಸೇತುವೆಯ ಕಂಬಗಳ ಮೇಲೆ ಯಾವುದೇ ಪೋಸ್ಟರಗಳನ್ನು ಅಂಟಿಸುವ ಮುಂಚೆಯೆ ಅದು ಬಿದ್ದಿತೆಂದರೆ ಈ 'ರಾಮ ಸೇತು' ಉಳಿದಿರಿವದು ಆಶ್ಚರ್ಯಕರ ಸಂಗತಿಯೇ ಸರಿ".

ಹನುಮ ನಮ್ರತೆಯಿಂದ ನುಡಿದ "ಜೈ ಶ್ರೀ ರಾಮ್, ಅದಕ್ಕೆಲ್ಲ ತಮ್ಮ ಅನುಗ್ರಹವೇ ಕಾರಣ. ನಿಮ್ಮ ಹೆಸರನ್ನು ಕಲ್ಲು/ಇಟ್ಟಿಗೆಗಳ ಮೇಲೆ ಬರೆದು ಸಮುದ್ರದಲ್ಲಿ ಎಸೆದದ್ದಷ್ಟೆ ನಾವು ಮಾಡಿದ್ದು ಅವು ಒಂದಕ್ಕೊಂದು ಹಿಡಿದುಕೊಂಡು ನಿಂತವು. ನಾವೇನು ಯಾವುದೇ ಕಂಪನಿಯ ಸ್ಟೀಲನ್ನಾಗಲೀ ಅಥವಾ ಸಿಮೆಂಟನ್ನಾಗಲಿ ಉಪಯೋಗಿಸಲಿಲ್ಲಾ. ಅದೆಲ್ಲಾ ಹಳೆ ಕಥೆ, ಈಗ್ಯಾಕೆ ಅದರ ಮಾತು, ಪ್ರಭು".

ರಾಮನೆಂದ "ಹಂ, ಕೆಳಗೆ ಭೂಮಿಯ ಮೇಲೆ ಕೆಲ ಜನರು ಈ ಸೇತುವೆಯನ್ನು ಧ್ವಂಸ ಮಾಡಿ ಹೊಸ ಕಾಲುವೆಯನ್ನು ಕಟ್ಟಲು ಹೊರಟಿದ್ದಾರೆ. ಈ ಕೆಲಸಕ್ಕೆ ಸಾಕಷ್ಟು ಹಣದ ವ್ಯಯವಾಗಲಿದೆ ಮತ್ತು ಇದರಿಂದ ಸಾಕಷ್ಟು ಜನರು ಸಾಕಷ್ಟು ದುಡ್ಡನ್ನು ಮಾಡುತ್ತಾರೆ. ಈ ಸೇತುವೆಯನ್ನು ಕೆಡವಿಯೂ ದುಡ್ಡು ಮಾಡುತ್ತಾರೆ ಮತ್ತು ಹೊಸದನ್ನು ಕಟ್ಟಿಯೂ ಕೂಡ".

ವಿನಮ್ರತೆಯಿಂದ ನಮಸ್ಕರಿಸುತ್ತಾ ಹನುಮನೆಂದ "ನಾವೇಕೆ ಭೂಮಿಯ ಮೇಲೆ ಹೋಗಿ ಈ ಸೇತುವೆಯ ಬಗ್ಗೆ ತಿಳಿಸಬಾರದು".

ರಾಮನೆಂದ "ನಾವಿದ್ದ ಸಮಯಕ್ಕೆ ಹೊಲಿಸಿದರೆ ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಅವರು ನಮಗೆ ವಯಸ್ಸಿನ ಪುರಾವೆ ಕೇಳಿದರೆ ನಮ್ಮ ಹತ್ತಿರ ಜನನ ಪ್ರಮಾಣ ಪತ್ರವು ಇಲ್ಲ ಅಥವಾ ಯಾವುದೇ ಶಾಲೆಯ ಪ್ರಮಾಣ ಪತ್ರವೂ ಇಲ್ಲ. ನಾವು ಕಾಲ್ನಡಿಗೆಯ ಮೂಲಕ ಮತ್ತು ರಥಗಳ ಮೂಲಕ ಚಲಿಸುತ್ತೆವಾದ್ದರಿಂದ ನಮ್ಮ ಹತ್ತಿರ ವಾಹನ ಚಾಲನ ಪತ್ರ ಕೂಡಾ ಇಲ್ಲ. ನನ್ನ ಜನ್ಮ ಸ್ಥಳವೇ ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲ್ಲಿ ಮೊಕದ್ದಮೆಯಲ್ಲಿರುವಾಗ ಇನ್ನು ವಿಳಾಸ ಪ್ರಮಾಣವೆಲ್ಲಿ? ಇನ್ನು ಬಿಲ್ಲ ಬಾಣಗಳ ಸಮೇತ ನನ್ನ ಮೂಲ ವೇಷದಲ್ಲಿ ಭೂಮಿಗೆ ಹೋದರೆ ಸಾಮಾನ್ಯ ಜನರೆನೋ ನನ್ನನ್ನು ಗುರುತು ಹಿಡಿಯಬಹುದು, ಆದರೆ ಅರ್ಜುನ್ ಸಿಂಘ ನನ್ನನ್ನು ಯವುದೋ ಆದಿವಾಸಿಯೆಂದು ತಿಳಿದು, ಹೆಚ್ಚೆಂದರೆ, ಯಾವುದೋ ಐ.ಐ.ಟಿಯಲ್ಲಿ ಯವುದೋ ಒಂದು ಕಾಯ್ದಿರಿಸಿದ ಶ್ರೇಣಿಯಲ್ಲಿ ಒಂದು ಸೀಟನ್ನು ಕೊಟ್ಟಾನು. ಇನ್ನು ಥ್ರೀ ಪೀಸ್ ಸೂಟ್ನಲ್ಲಿ ಹೋಗಿ ನಾನು ರಾಮನೆಂದರೆ ನನ್ನ ಭಕ್ತರು ಕೂಡ ನನ್ನ ಸಂಶಯದ ದೃಷ್ಟಿಯಿಂದ ನೋಡುತ್ತಾರೆ. ಹೀಗಾಗಿ ನನಗೆ ಉಭಯ ಸಂಕಟವಾಗಿದೆ."

ಹನುಮ: "ನಡೆಯಿರಿ ನಾನೇ ನನ್ನ ಹಸ್ತದಿಂದ ಆ ಸೇತುವೆಯನ್ನು ಕಟ್ಟಿದ್ದೇನೆಂದು ಪ್ರಮಾಣ ಮಾಡುತ್ತೇನೆ."

"ಪ್ರಿಯ ಅಂಜನಿ ಪುತ್ರನೇ ಅದೆಲ್ಲ ನಡೆಯುವ ಮಾತಲ್ಲ. ಅವರು ನಮಗೆ ಆ ಯೋಜನೆಯ ನೀಲಿ ನಕ್ಷೆ, ಸಮೀಕ್ಷೆ, ಯೋಜನಾ ಗಾತ್ರ ಮತ್ತು ಹಣಕಾಸಿನ ವಿವರಗಳನ್ನು ಕೇಳುವರು. ಹಣದ ಮೂಲದ ಬಗ್ಗೆ ಕೇಳುವರು. ಸಾಕ್ಶ್ಯ ಪುರಾವೆಗಳಿಲ್ಲದೇ ಭಾರತದಲ್ಲಿ ಏನೂ ಅಂಗೀಕರಿಸಲ್ಪಡುವದಿಲ್ಲಾ. ನೀನು ಕೆಮ್ಮಬಹುದು, ಆದರೆ ವೈದ್ಯರು ಅದನ್ನು ಧೃಡೀಕರಿಸದಿದ್ದರೆ ಅದು ಕೆಮ್ಮೇ ಅಲ್ಲ. ನಿವೃತ್ತ ವ್ಯಕ್ತಿ ತಾನು ಜೀವಂತನಿರುವೆನೆಂದು ತಾನಾಗಿ ಹೋಗಿ ನಿಂತರೆ ಸಾಲದು, ಜೋತೆಗೆ ತನ್ನ ಜೀವಂತಿಕೆಯ ಬಗ್ಗೆ ಒಂದು ಧೃಡೀಕರಣ ಪತ್ರ ಒಯ್ದರೆ ಮಾತ್ರ ಅವನು ಜೀವಂತನೆನ್ನುವರು. ಇಷ್ಟು ಕ್ಲಿಷ್ಟ್ವವಾದ ವಿಷಯವಿದು."

"ಪ್ರಭು ಇತಿಹಾಸಕಾರರ ಮಾತೊಂದೂ ನನಗೆ ತಿಳಿಯುತ್ತಿಲ್ಲ. ಶತ ಶತಮಾನಗಳಿಂದ ತಾವು ಸೂರದಾಸ, ತುಳಸೀದಾಸ, ಸಂತ ತ್ಯಾಗರಾಜ, ಜಯದೇವ, ಭದ್ರಾಚಲ ರಾಮದಾಸ ಮತ್ತು ಸಂತ ತುಕಾರಾಮರಿಗೂ ದರ್ಶನ ಕೊಟ್ಟಿದ್ದೀರಿ, ಇಷ್ಟಾದರೂ ಇವರು ನಿಮ್ಮ ಇರುವಿಕೆಯನ್ನೇ ಪ್ರಶ್ನಿಸುತ್ತಾರೆ ಮತ್ತು ರಾಮಾಯಣವೆಲ್ಲ ಕಾಲ್ಪನಿಕವೆನ್ನುತ್ತಾರೆ. ಈಗ ಉಳಿದಿರುವದು ಒಂದೇ ಹಾದಿ, ರಾಮಯಣವನ್ನೇ ಸಂಪೂರ್ಣವಾಗಿ ಭೂಮಿಯ ಮೇಲೆ ಇನ್ನೊಮ್ಮೆ ಪ್ರದರ್ಶಿಸಿದರೆ(re-enact) ಹೇಗೆ, ಸರ್ಕಾರ ತನ್ನೆಲ್ಲಾ ಕಾಗದ ಪತ್ರಗಳನ್ನು ಖಾಯಂ ಆಗಿ ಬದಲಾಯಿಸಿಕೊಳ್ಳಬಹುದು."

ಮುಗುಳ್ನಗುತ್ತ ರಾಮನೆಂದ "ಇದೀಗ ಅದಷ್ಟು ಸುಲಭವಲ್ಲಾ. ರಾವಣನಿಗೆ ತಾನು ಕರುಣಾನಿಧಿಗೆ ಸಂತನ ಹಾಗೆ ಕಾಣುತ್ತೇನೆಂಬ ಹೆದರಿಕೆ. ಸೀತೆಯ ಎದುರಿಗೆ ಸ್ವರ್ಣ ಜಿಂಕೆಯಾಗಿ ಕಾಣಿಸಿಕೊಂಡ ಅವನ ಸೋದರಮಾವನಾದ ಮಾರೀಚನ ಜೊತೆ ಮಾತನಾಡಿದಾಗ, ಸಲ್ಮಾನ್ ಖಾನ್ ಇರುವವರೆಗೂ ನಾನು ಭೂಮಿಯ ಮೇಲೆ ಹೋಗುವದಿಲ್ಲನೆಂದ".

  • ಪ್ರಚಲಿತ
  • ಹಾಸ್ಯ
Ornamental seperator
  • sankul ರವರ ಬ್ಲಾಗ್
  • Login or register to post comments
  • 276 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೂಗಲ್ ಮೈಲಿನಲ್ಲಿ (ಜಿ-ಮೈಲ್) ನೀವಿದನ್ನು ಗಮನಿಸಿದ್ದೀರಾ?
  • ಬೈಟೊ ಕಾಫಿ !!! - ೧
  • ಮುಕ್ತಾಯ
  • ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
Syndicate content

ಲೇಖಕರು

sankul's picture

ಪೂರ್ಣ ಹೆಸರು
ಸಂಜೀವ ಕೃಷ್ಣಾಜಿ ಕುಲಕರ್ಣಿ

ಪರಿಚಯ

ಹುಟ್ಟಿದ್ದು ಸರ್ವಜ್ಞ್ನನ ಊರಾದ ಮದಗ ಮಾಸೂರಿನಲ್ಲಿ. (ಮಾಸೂರು ತಾ: ಹಿರೇಕೆರೂರು)
ವಿದ್ಯಾಭ್ಯಾಸ: ಹುಬ್ಬಳ್ಳಿ ಮತ್ತು ಹಾವೇರಿಯಲ್ಲಿ.
ಮೂರು ವರ್ಷದಿಂದ ಪುಣೆ ನಿವಾಸಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 4 ಅತಿಥಿಗಳು ಆನ್ಲೈನ್ ಇರುವರು.

ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator